Tag: siddaruda mutt

  • ಒಂದೇ ತಿಂಗಳಲ್ಲಿ ಸಿದ್ಧಾರೂಢ ಮಠದಲ್ಲಿ 27.13 ಲಕ್ಷ ನಗದು, ಬೆಳ್ಳಿ ಬಂಗಾರ ಸಂಗ್ರಹ

    ಒಂದೇ ತಿಂಗಳಲ್ಲಿ ಸಿದ್ಧಾರೂಢ ಮಠದಲ್ಲಿ 27.13 ಲಕ್ಷ ನಗದು, ಬೆಳ್ಳಿ ಬಂಗಾರ ಸಂಗ್ರಹ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮತ್ತು ಹುಬ್ಬಳ್ಳಿ ಧಾರವಾಡ ಆರಾಧ್ಯದೈವ ಶ್ರೀಸಿದ್ಧಾರೂಢ ಮಠದಲ್ಲಿ ಒಂದೇ ತಿಂಗಳಲ್ಲಿ 27.13 ಲಕ್ಷರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

    ಏ.20 ರಿಂದ ಮೇ.25ರ ಅಂದರೆ 35 ದಿನಗಳಲ್ಲಿ ಎಲ್ಲಾ ಪೆಟ್ಟಿಗೆಯಲ್ಲಿ ಸಂಗ್ರಹವಾದ ಮೊತ್ತಯಿದಾಗಿದೆ. ಬ್ಯಾಂಕ್ ಆಫ್ ಇಂಡಿಯಾ, ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ, ನೂರಾರು ಭಕ್ತರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ತೆರೆಯಲಾಗಿದೆ. ಎಲ್ಲಾ ಪೆಟ್ಟಿಗೆಗಳಲ್ಲಿ 27.13 ಲಕ್ಷ ನಗದು ಹಣ 17,711 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳನ್ನು ಭಕ್ತರು ಮಠಕ್ಕೆ ಸಮರ್ಪಣೆ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿಯ ಚೇರಮನ್ ಧರಣೇಂದ್ರ ಭ.ಜವಳಿ , ವೈಸ್ ಚೇರಮನ್ ಡಾ.ಗೋವಿಂದ ಜಿ.ಮಣ್ಣೂರ ಸೇರಿದಂತೆ ವಿವಿಧ ಪದಾಧಿಕಾರಿಗಳಿದ್ದರು. ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಸಾಧನೆ ಮಾಡಿ ಬಂದ ಧಾರವಾಡದ ಆಟಗಾರ್ತಿ

  • ಸಿದ್ಧಾರೂಢ ಮಠದಲ್ಲಿ ಭ್ರಷ್ಟಾಚಾರ ಆರೋಪ

    ಸಿದ್ಧಾರೂಢ ಮಠದಲ್ಲಿ ಭ್ರಷ್ಟಾಚಾರ ಆರೋಪ

    ಹುಬ್ಬಳ್ಳಿ: ಇಷ್ಟು ದಿನ ಪವಾಡ, ಭಕ್ತಿ, ದಾಸೋಹ, ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಚಿರಪರಿಚಿತವಾಗಿದ್ದು, ಸಿದ್ಧಾರೂಢ ಮಠದಲ್ಲಿ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಠದ ಪಾಕಶಾಲೆ ಮೇಲೆ ಅಳವಡಿಸಿದ ಸೋಲಾರ್ ಪ್ಯಾನೆಲ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ.

    ಮಠದ ಪಾಕಶಾಲೆಯಲ್ಲಿ ಬಾಯ್ಲರ್‌ನಿಂದ ಅಡುಗೆ ಮಾಡಲಾಗುತ್ತಿತ್ತು. ಇದರಿಂದಾಗಿ ವಿದ್ಯುತ್ ಹೊರೆ ಸಹ ಮಠಕ್ಕೆ ಜಾಸ್ತಿಯಾಗುತ್ತಿತ್ತು. ಹೀಗಾಗಿ ಸೌರ ಶಕ್ತಿ ಬಳಸಿಕೊಂಡು ಅಡುಗೆ ತಯಾರಿಸಲು ನಿರ್ಧಾರ ಮಾಡಿದ ಆಡಳಿತ ಮಂಡಳಿ, ಸೋಲಾರ್ ಕಂಪನಿಗಳಿಗೆ ಟೆಂಡರ್ ಆಹ್ವಾನ ನೀಡಿತ್ತು. ಇದರಂತೆ ಬೆಳಗಾವಿ ಮೂಲದ ಯೂನಿಸನ್ ಎಂಬ ಕಂಪನಿ, ಒಟ್ಟು 57 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸುವುದಾಗಿ ಬಿಡ್ ಸಲ್ಲಿಸಿತ್ತು.

    ನಂತರ ಆಡಳಿತ ಮಂಡಳಿ ಈ ಕಂಪನಿಗೆ ಗುತ್ತಿಗೆ ನೀಡಿತ್ತು. ಈಗ ಕಾಮಗಾರಿ ಮುಗಿದು ಉದ್ಘಾಟನೆ ಸಹ ಆಗಿತ್ತು. ಆದರೆ ಈ ಕಾಮಗಾರಿಯೇ ಅವ್ಯವಹಾರ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಸದ್ಯ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಿ.ಡಿ.ಮಾಳಗಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.

    ಡಿ.ಡಿ.ಮಾಳಗಿ ಸ್ವಹಿತಾಸಕ್ತಿಯಿಂದ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದು, ಇದರಲ್ಲಿ ಅನಧಿಕೃತವಾಗಿ 52 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಧ್ವರಾಜ್ ಅವಕಾಶವಾದಿ ರಾಜಕಾರಣಿ, ಡಿಕೆಶಿ ನಿರೀಕ್ಷೆ ಹುಸಿಯಾಗಿದೆ: ಧ್ರುವನಾರಾಯಣ್

    ಇನ್ನೂ ಅವ್ಯವಹಾರದ ಆರೋಪ ಕೇಳಿ ಬರುತ್ತಲೇ, ಏಕಾಏಕಿ ಅಧ್ಯಕ್ಷ ಸ್ಥಾನಕ್ಕೆ ಡಿ.ಡಿ.ಮಾಳಗಿ ಅವರು ರಾಜೀನಾಮೆ ನೀಡಿ ಆಸ್ಪತ್ರೆ ಸೇರಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸೋಲಾರ್ ಪ್ಯಾನೆಲ್ ಜೋಡಣೆಗೆ ಮುಖ್ಯ ಆಡಳಿತಾಧಿಕಾರಿಗಳ ಪತ್ರ ಸಂಖ್ಯೆ 1885/2018ರ ಪ್ರಕಾರ 57,90,000 ರೂ.ಗೆ ಟೆಂಡರ್ ನೀಡಿದ್ದು, ಏಳು ಕಂತುಗಳಲ್ಲಿ ಸುಮಾರು 52,50,000 ಹಣವನ್ನು ನೀಡಲಾಗಿದೆ. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ ಮಾಡಿದ ಎನ್‍ಸಿಪಿ ಕಾರ್ಯಕರ್ತರು

    ಎಲ್ಲಾ ವ್ಯವಹಾರ ಚೆಕ್ ಮೂಲಕ ಮತ್ತು ಕಮಿಟಿ ಗಮನಕ್ಕೆ ತಂದು ನಡೆಸಲಾಗಿದೆ. ಇನ್ನೂ ಅನಾರೋಗ್ಯ ಕಾರಣಕ್ಕಾಗಿ ಡಿಡಿ ಮಾಳಗಿ ರಾಜಿನಾಮೆ ನೀಡಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮಸಿ ಬಳಿಯಲು ಹುನ್ನಾರ ನಡೆಸುತ್ತಿದೆ ಎಂದು ಮಠದ ಪದಾಧಿಕಾರಿಗಳ ಸಮರ್ಥಿಸಿಕೊಂಡಿದ್ದಾರೆ.

  • ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

    ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

    ಹುಬ್ಬಳ್ಳಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಬೆಳಗ್ಗಿನ ಜಾವದಲ್ಲಿ ಸೋಮವಾರದ ವಿಶೇಷ ಪೂಜೆಯ ಜೊತೆಗೆ ಓಂ ನಮಃ ಶಿವಾಯ ಮಂತ್ರಘೋಷ, ಭಜನೆ, ಘಂಟಾ ವಾದ್ಯ ಮೊಳಗಿದೆ.

    ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಸಿದ್ಧಾರೂಢರಿಗೆ ವಿಶೇಷ ಪೂಜೆ ನಡೆಯುವುದು ವಾಡಿಕೆ. ಇದರ ಜೊತೆಗೆ ಶ್ರೀರಾಮಸೇನೆ ಕರೆಕೊಟ್ಟಿರುವ ಸುಪ್ರಭಾತ ಅಭಿಯಾನಕ್ಕೆ ಸಿದ್ಧಾರೂಢ ಮಠದ ಆಡಳಿತ ಮಂಡಳಿ ಬೆಂಬಲ ನೀಡಿತ್ತು. ಹೀಗಾಗಿ ನೂರಾರು ಭಕ್ತರಿಂದ ವಿಶೇಷ ಪೂಜೆ ಜೊತೆಗೆ ಭಜನೆ ನಡೆಯಿತು.

    ಪ್ರತಿ ವಾರಕ್ಕಿಂತ ಈ ವಾರ ಶ್ರೀರಾಮಸೇನೆ ಸದಸ್ಯರ ಜೊತೆಗೆ ನೂರಾರು ಭಕ್ತರು ಸಿದ್ಧಾರೂಢರ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ