Tag: siddarth malhotra

  • ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

    ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

    ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra)- ಕಿಯಾರಾ ಹಸೆಮಣೆ ಏರುತ್ತಿದ್ದಾರೆ. ರಾಜಸ್ತಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆಗೆ (Wedding) ಸಿದ್ಧತೆ ನಡೆಯುತ್ತಿದ್ದರೂ ಕೂಡ ಈ ಬಗ್ಗೆ ಸಿದ್ ಮತ್ತು ಕಿಯಾರಾ (Kiara Advani) ಜೋಡಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಿರುವಾಗ ಇವರಿಬ್ಬರದ್ದು ನಿಜವಾದ ಪ್ರೀತಿ ಎಂದು ಹೇಳುವ ಮೂಲಕ ಕಂಗನಾ ʻಷೇರ್‌ಷಾʼ ಜೋಡಿ ಹಾರೈಸಿದ್ದಾರೆ.

    ಅಥಿಯಾ ಶೆಟ್ಟಿ (Athiya Shetty) ಮತ್ತು ರಾಹುಲ್ (Rahul) ಮದುವೆಯಾಗಿ ಕೆಲವೇ ದಿನಗಳಾಗಿದೆ. ಈ ಬೆನ್ನಲ್ಲೇ ಸಿದ್ಧಾರ್ಥ್ ಮತ್ತು ಕಿಯಾರಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ರಾಜಸ್ತಾನದ ಸೂರ್ಯಗಡನಲ್ಲಿ (Suryagada) ಅದ್ದೂರಿಯಾಗಿ ʻಷೇರ್‌ಷಾʼ ಜೋಡಿ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಸುಳಿವು ನೀಡದೇ ಇಬ್ಬರು ಮೌನವಾಗಿದ್ದಾರೆ. ಆದರೆ ಕಂಗನಾ ಈ ಜೋಡಿಗೆ ಶುಭ ಹಾರೈಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ನಟ ಸಿದ್ದಾರ್ಥ್ ಹಾಗೂ ಕಿಯಾರಾ ಅವರು ಜೊತೆಯಾಗಿ ಇರುವ ಅಪರೂಪದ ವಿಡಿಯೋವನ್ನು ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿ ಎಷ್ಟು ಚೆನ್ನಾಗಿ ಕಾಣುತ್ತಿದೆ. ಚಿತ್ರರಂಗದಲ್ಲಿ ನಾವು ನಿಜವಾದ ಪ್ರೀತಿಯನ್ನು ನೋಡುವುದು ತುಂಬ ವಿರಳ ಎಂದು ಕಂಗನಾ (Kangana Ranaut) ಅವರು ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರದ್ದು ನಿಜವಾದ ಪ್ರೀತಿ ಎಂದು ಹೊಗಳಿದ್ದಾರೆ. ಹಾಗೆಯೇ ಕಿಯಾರಾ- ಸಿದ್‌ಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ʻಷೇರ್‌ಷಾʼ ಕಪಲ್ ಮದುವೆಗೆ ಬಾಲಿವುಡ್‌ನಿಂದ ಅಂದಾಜು 100 ಜನರು ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರೂ ಕೂಡ ಮದುವೆ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಿರುವಾಗ ಕಂಗನಾ ಅವರು ವಿಡಿಯೋ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದು ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದ್ದೂರಿಯಾಗಿ ನಡೆಯಲಿದೆ ಸಿದ್ಧಾರ್ಥ್- ಕಿಯಾರಾ ಅಡ್ವಾನಿ ಮದುವೆ

    ಅದ್ದೂರಿಯಾಗಿ ನಡೆಯಲಿದೆ ಸಿದ್ಧಾರ್ಥ್- ಕಿಯಾರಾ ಅಡ್ವಾನಿ ಮದುವೆ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ದಾಂಪತ್ಯ ಜೀವನಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದೆ. ಸಿದ್- ಕಿಯಾರಾ ಜೋಡಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

    ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.l Rahul) ಹಸೆಮಣೆ ಏರಿದ ಬೆನ್ನಲ್ಲೇ ಇದೀಗ ಸಿದ್ ಮತ್ತು ಕಿಯಾರಾ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ದಿನಗಣನೆ ಶುರುವಾಗಿದೆ.

    ಸಿದ್ ಜೋಡಿಯ ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಇನ್ನೂ ಕಿಯಾರಾ-ಸಿದ್ಧಾರ್ಥ್ ಮದುವೆ 100 ಜನ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕರಣ್ ಜೋಹರ್, ಶಾಹಿದ್ ಕಪೂರ್ ದಂಪತಿ, ಮನೀಷ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ. ನೆಚ್ಚಿನ ಜೋಡಿಯ ಮದುವೆ ಸಂಭ್ರಮ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    `ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಈಗ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ರಶ್ಮಿಕಾ ನಟನೆಯ ಮೊದಲ ಚಿತ್ರ `ಗುಡ್ ಬೈ’ ಬಿಟೌನ್ ಮಕಾಡೆ ಮಲಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ `ಮಿಷನ್ ಮಜ್ನು’ ಮೊದಲು ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ತಡವಾಗಿ ರಿಲೀಸ್ ಆಯ್ತು. ಕಳೆದ ವಾರ ಸಿದ್ಧಾರ್ಥ್ ಮತ್ತು ರಶ್ಮಿಕಾ ನಟನೆಯ `ಮಿಷನ್ ಮಜ್ನು’ ಚಿತ್ರ ಒಟಿಟಿಯಲ್ಲಿ ತೆರೆಕಂಡಿತ್ತು. ಸಿನಿಮಾ ಪ್ರೇಕ್ಷಕರು ವಾವ್ ಎಂದಿದ್ದಾರೆ. ಚಿತ್ರ ಸಕ್ಸಸ್ ಕೂಡ ಕಂಡಿದೆ. ಇದೇ ಖುಷಿಯಲ್ಲಿ ಇಡೀ ಚಿತ್ರತಂಡ ಪಾರ್ಟಿ ಮಾಡಿದ್ದಾರೆ.

     

    View this post on Instagram

     

    A post shared by yogen shah (@yogenshah_s)

    ರಶ್ಮಿಕಾ (Rashmika) ಅವರು ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. `ಮಿಷನ್ ಮಜ್ನು’ (Mission Majnu) ಚಿತ್ರದಲ್ಲಿ ಕಣ್ಣಿಲ್ಲದ ಪಾಕ್ ಯುವತಿಯ ಪಾತ್ರವನ್ನು ರಶ್ಮಿಕಾ ಮಾಡಿದ್ದಾರೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಖುಷಿಯಲ್ಲಿ ಎಲ್ಲರೂ ಮುಂಬೈನಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಒಳಗೆ ತೆರಳುವುದಕ್ಕೂ ಮುನ್ನ ರಶ್ಮಿಕಾ ಹಾಗೂ ಸಿದ್ದಾರ್ಥ್ ಮಲ್ಹೋತ್ರ (Siddarth Malhotra) ಪಾಪರಾಜಿಗಳತ್ತ ಕೈ ಬೀಸಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ಹೀಗೆ ಬಾಲಿವುಡ್ ಮತ್ತು ಸೌತ್ ಸಿನಿಮಾ ಅಂತಾ ಕನ್ನಡತಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಸದ್ಯ ʻಪುಷ್ಪ 2ʼ ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ

    ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ

    ಬಾಲಿವುಡ್‌ನಲ್ಲಿ (Bollywood) ಗಟ್ಟಿಮೇಳ ಸೌಂಡ್ ಜೋರಾಗಿದೆ. ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani)) ಮದುವೆಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಆದರೂ ಮದುವೆ (Wedding) ಬಗ್ಗೆ ಯಾವುದೇ ಅಪ್‌ಡೇಟ್ ಬಿಟ್ಟು ಕೊಡದೇ ಸೈಲೆಂಟ್ ಆಗಿದ್ದಾರೆ. ಬಿಟೌನ್‌ನ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಮದುವೆಗೆ ಬರಲು ಆಹ್ವಾನ ನೀಡಿದ್ದಾರೆ.

    ಸಾಕಷ್ಟು ವರ್ಷಗಳಿಂದ ಸಿದ್ ಮತ್ತು ಕಿಯಾರಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದುವರೆಗೂ ಈ ಬಗ್ಗೆ ಮಾತನಾಡದೇ ಸೀಕ್ರೆಟ್ ಮೈನ್‌ಟೈನ್ ಮಾಡ್ತಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ತೆರೆಮರೆಯಲ್ಲಿ ವೇದಿಕೆ ರೆಡಿಯಾಗುತ್ತಿದೆ. 2023ರ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ.

    ಅಧಿಕೃತವಾಗಿ ತಮ್ಮ ಮದುವೆಯ ಬಗ್ಗೆ ಸಿದ್, ಕಿಯಾರಾ ಹೇಳದೇ ಇದ್ದರೂ ಸದ್ಯಕ್ಕೆ ನಿರ್ಮಾಪಕ ಕರಣ್ ಜೋಹರ್ ಮತ್ತು ನಿರ್ಮಾಪಕಿ ಅಶ್ವಿನಿ ವರ್ಧಿ ಅವರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಿದ್ದಾರಂತೆ. ಎರಡು ಕಡೆಯಿಂದ 100 ಜನರಿಗೆ ಮಾತ್ರ ಮದುವೆಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟಿಯ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಕು?

    ಜೈಸಲ್ಮೇರ್ ಪ್ಯಾಲೇಸ್‌ನಲ್ಲಿ ಮದುವೆ ನಡೆಯುತ್ತಿದೆ. ಫೆ.4 ಮತ್ತು 5ರಂದು ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಸಿದ್ಧಾರ್ಥ್, ಕಿಯಾರಾ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆರತಕ್ಷತೆ ಇರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.6ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್-ಕಿಯಾರಾ ಜೋಡಿ

    ಫೆ.6ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್-ಕಿಯಾರಾ ಜೋಡಿ

    ಬಾಲಿವುಡ್‌ನ (Bollywood) ಮತ್ತೊಂದು ಕ್ಯೂಟ್ ಕಪಲ್ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಸಿದ್ಧಾರ್ಥ್ (Siddarth) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೊಸ ವರ್ಷಕ್ಕೆ ಹೊಸ ಬಾಳಿಗೆ ಕಾಲಿಡಲು ನಿರ್ಧರಿಸಿದ್ದಾರೆ.

    ಸಾಕಷ್ಟು ವರ್ಷಗಳಿಂದ ಸಿದ್ ಮತ್ತು ಕಿಯಾರಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದುವರೆಗೂ ಈ ಬಗ್ಗೆ ಮಾತನಾಡದೇ ಸೀಕ್ರೆಟ್ ಮೈನ್‌ಟೈನ್ ಮಾಡ್ತಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ತೆರೆಮರೆಯಲ್ಲಿ ವೇದಿಕೆ ರೆಡಿಯಾಗುತ್ತಿದೆ. 2023ರ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಜೈಸಲ್ಮೇರ್ ಪ್ಯಾಲೇಸ್‌ನಲ್ಲಿ ನಡೆಯುತ್ತಿದೆ. ಫೆ.4 ಮತ್ತು 5ರಂದು ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆರತಕ್ಷತೆ ಇರಲಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಮದುವೆ ಡೇಟ್ ಅನೌನ್ಸ್ ಮಾಡಿದ್ರು ನಟಿ ಕಿಯಾರಾ ಅಡ್ವಾಣಿ

    ಕೊನೆಗೂ ಮದುವೆ ಡೇಟ್ ಅನೌನ್ಸ್ ಮಾಡಿದ್ರು ನಟಿ ಕಿಯಾರಾ ಅಡ್ವಾಣಿ

    ಬಾಲಿವುಡ್‌ನ ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ಮದುವೆಯ ಗುಡ್ ನ್ಯೂಸ್‌ಗಾಗಿ ಕಾಯ್ತಿದ್ದ ಫ್ಯಾನ್ಸ್‌ಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಮದುವೆಯ ಬಗ್ಗೆ ನಟಿ ಕಿಯಾರಾ ಸೋಷಿಯಲ್ ಮೀಡಿಯಾದಲ್ಲಿ ಸೂಚನೆ ಕೊಟ್ಟಿದ್ದಾರೆ.

    ಬಿಟೌನ್‌ನಲ್ಲಿ ಮತ್ತೊಂದು ಜೋಡಿ ಹಸೆಮಣೆ (Wedding Knot) ಏರಲು ರೆಡಿಯಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸಾಕಷ್ಟು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಆದರೆ ಎಲ್ಲೂ ಕೂಡ ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಅಧಿಕೃತ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ಸದ್ಯದಲ್ಲೇ ಸಿಹಿ ಸುದ್ದಿ ಘೋಷಿಸುವುದಾಗಿ ಸ್ವತಃ ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದ್ದಾರೆ.

     

    View this post on Instagram

     

    A post shared by KIARA (@kiaraaliaadvani)

    `ಶೇರ್‌ಷಾ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ಸದ್ಯದಲ್ಲೇ ಹೊಸ ಬಾಳಿಗೆ ಕಾಲಿಡೋದು ಪಕ್ಕಾ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಹ ಕಿಯಾರಾ ಪೋಸ್ಟ್ ಕೂಡ ಸದ್ದು ಮಾಡುತ್ತಿದೆ. ಏನನ್ನೂ ಹೆಚ್ಚು ಕಾಲ ಸೀಕ್ರೆಟ್ ಆಗಿಡಲು ಸಾಧ್ಯವಿಲ್ಲ. ಶೀಘ್ರದಲ್ಲೇ ಘೋಷಿಸುತ್ತೇನೆ. ಕಾಯ್ತಿರಿ, ಡಿಸೆಂಬರ್ 2ಕ್ಕೆ ಎಂದು ನಟಿ ಮದುವೆ ಬಗ್ಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

     

    View this post on Instagram

     

    A post shared by KIARA (@kiaraaliaadvani)

    ಸ್ಪೆಷಲ್ ವೀಡಿಯೋ ಹಂಚಿಕೊಂಡು ಡಿಸೆಂಬರ್ 2 ಎಂದು ಕಿಯಾರಾ ಸೂಚನೆ ನೀಡಿರುವುದು. ಇದು ನಿಜಕ್ಕೂ ಸಿದ್ಧಾರ್ಥ್ ಜೊತೆಗಿನ ಮದುವೆ ಸುದ್ದಿನೇ ಎಂದು ಫ್ಯಾನ್ಸ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲದಕ್ಕೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    `ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ನ್ನಡತಿ ರಶ್ಮಿಕಾ ಮಂದಣ್ಣಗೆ(Rashmika Mandanna) ಅದ್ಯಾಕೋ ಇತ್ತೀಚೆಗೆ ಲಕ್ ಕೈಕೊಟ್ಟಂತಿದೆ. `ಗುಡ್ ಬೈ’ (Good Bye) ಚಿತ್ರದ ಸೋಲಿನ ನಂತರ ಮತ್ತೆ ಬಾಲಿವುಡ್‌ನಲ್ಲಿ ಮತ್ತೊಂದು ಹಿನ್ನೆಡೆಯಾಗಿದೆ. `ಕಾಂತಾರ’ ಮುಂದೆ ನೆಲೆಕಚ್ಚಿದ ʻಗುಡ್ ಬೈʼ ಚಿತ್ರದ ಕಲೆಕ್ಷನ್ ನೋಡಿ, ರಶ್ಮಿಕಾ ನಟನೆಯ ಮುಂದಿನ `ಮಿಷನ್ ಮಜ್ನು'(Mission Majnu) ಚಿತ್ರವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

    ಬಾಲಿವುಡ್ (Bollywood) ಸಿನಿಮಾಗಳಿಗೆ ಅದ್ಯಾಕೋ ಅದೃಷ್ಟ ಕೈಕೊಟ್ಟಿದೆ. ಬಾಲಿವುಡ್ ನೆಲದಲ್ಲಿ ಹಿಂದಿ ಸಿನಿಮಾಗಳಿಗೆ ನೆಲೆ ಇಲ್ಲದಂತೆಯಾಗಿದೆ. ಇತ್ತೀಚೆಗೆ ಕೆಜಿಎಫ್‌ 2, ಕಾಂತಾರ ಕಮಾಲ್‌ ಮಾಡಿತ್ತು.  ಹಿಂದಿ ಸಿನಿಮಾಗಳ ಕಲೆಕ್ಷನ್ ಗಮನಿಸಿ `ಮಿಷನ್ ಮಜ್ನು’ ನಿರ್ಮಾಪಕ ಮಹತ್ತರ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೀಚೆಗೆ ರಶ್ಮಿಕಾ ನಟನೆಯ ʻಗುಡ್‌ಬೈʼ ಮತ್ತು ಸಿದ್ಧಾರ್ಥ್ ನಟನೆಯ ʻಥ್ಯಾಂಕ್ ಗಾಢ್ʼ ಎರಡು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದೆ. ಹೀಗಿರುವಾಗ ಈ ಜೋಡಿಯ ಬಹುನಿರೀಕ್ಷಿತ ಚಿತ್ರ ʻಮಿಷನ್ ಮಜ್ನುʼ ಸಿನಿಮಾವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲು ಯೋಚಿಸಿದ್ದಾರೆ. ʻಕಾಂತಾರʼ ರಿಲೀಸ್‌ ಆಗಿ 50ನೇ ದಿನದತ್ತ ಮುನ್ನುಗ್ಗುತ್ತಿದ್ದರು, ಚಿತ್ರದ ಕಲೆಕ್ಷನ್‌ನಲ್ಲಿ ತಗ್ಗುವ ಲಕ್ಷಣ ಕಾಣುತ್ತಿಲ್ಲ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಶ್ಮಿಕಾ ನಟನೆಯ ಮಿಷನ್ ಮಜ್ನು ಸಿನಿಮಾ ಜೂನ್ 2022ರಲ್ಲಿಯೇ ರಿಲೀಸ್ ಆಗಬೇಕಿತ್ತು. ಕೆಲ ಕಾರಣಗಳಿಂದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹಾಕಲಾಗಿತ್ತು. ಇತ್ತೀಚಿನ ಹಿಂದಿ ಸಿನಿಮಾಗಳ ಕಲೆಕ್ಷನ್ ನೋಡಿ, ʻಮಿಷನ್ ಮಜ್ನುʼ ಚಿತ್ರವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲಿದ್ದಾರೆ. ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್

    2023ರಂದು ಜನವರಿ 18ರಂದು ಓಟಿಟಿಯಲ್ಲಿ ಈ ಸಿನಿಮಾವನ್ನ ನೋಡಬಹುದಾಗಿದೆ. ಸಿದ್ಧಾರ್ಥ್ ಮತ್ತು ರಶ್ಮಿಕಾ ಜೋಡಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ

    ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ

    ಬಾಲಿವುಡ್‌ನ(Bollywood) `ಶೆರ್ಶಾಹ್’ ಸಿದ್ಧಾರ್ಥ್ ಮಲ್ಹೋತ್ರಾ(Siddarth Malhotra) ಮತ್ತು ಕಿಯಾರಾ (Kaira Advani) ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬೆಳ್ಳಿಪರದೆಯಲ್ಲಿ ರಂಜಿಸಿದ್ದ ಈ ಜೋಡಿ, ಇದೀಗ ನಿಜ ಜೀವನದಲ್ಲೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ʻಗಟ್ಟಿಮೇಳʼ ಮೊಳಗಿಸಲು ತೆರೆ ಹಿಂದೆ ಭರ್ಜರಿ ತಯಾರಿ ನಡೆಯುತ್ತಿದೆ.

    ಆನ್‌ಸ್ಕ್ರೀನ್‌ನ ರೊಮ್ಯಾಂಟಿಕ್ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಇದೀಗ ತಮ್ಮ ಮದುವೆಯ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಕಾಫಿ ವಿತ್ ಕರಣ್(Coffe With Karan) ಶೋನಲ್ಲಿ ತಾವು ಮದುವೆಗೆ ರೆಡಿಯಿದ್ದೇನೆ ಎಂದು ಕಿಯಾರಾ ರಿವೀಲ್ ಮಾಡಿದ್ದಾರೆ.

    ಬಿಟೌನ್‌ನಲ್ಲಿ ಸದ್ಯ ಹಾಟ್ ಟಾಪಿಕ್ ಆಗಿರುವ ವಿಚಾರ ಅಂದ್ರೆ ಸಿದ್ದಾಥ್, ಕಿಯಾರಾ ಮದುವೆಯ ವಿಚಾರ. ಇಷ್ಟು ದಿನ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಇತ್ತು. ಈ ಬೆನ್ನಲ್ಲೇ ಮದುವೆ ವಿಷ್ಯ ಸದ್ದು ಮಾಡುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಶೆರ್ಶಾಹ್ ಜೋಡಿ, ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರಂತೆ. ದೆಹಲಿಯಲ್ಲಿ ಸಿಂಪಲ್ ಮದುವೆಯ ಬಳಿಕ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಇಟ್ಟುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ʻಕಾಫಿ ವಿತ್ ಕರಣ್ʼ ಕಾರ್ಯಕ್ರಮದಲ್ಲಿ ಕಿಯಾರಾ ಮದುವೆಗೆ(Wedding) ರೆಡಿಯಿದ್ದೇನೆ ಎಂದು ಸುಳಿವು ನೀಡಿದ್ದರು. ಹಾಗಾಗಿ ಬಿಟೌನ್‌ನಲ್ಲಿ ಸಿದ್ಧಾರ್ಥ್, ಕಿಯಾರಾ ಶಾದಿ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ `ಭೂಲ್ ಭುಲಯ್ಯ’ ಸಕ್ಸಸ್ ಖುಷಿಯಲ್ಲಿದ್ದಾರೆ. ಸಿನಿಮಾ ವಿಚಾರದ ಜೊತೆ ವಯಕ್ತಿಕ ವಿಚಾರವಾಗಿಯೂ ಕಿಯಾರಾ ಸುದ್ದಿಯಲ್ಲಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಕುರಿತು ಹೊಸ ವಿಚಾರ ಇದೀಗ ಸೌಂಡ್ ಮಾಡುತ್ತಿದೆ.

    ಬಿಟೌನ್‌ನಲ್ಲಿ ಸಿದ್ಧಾಥ್ ಮತ್ತು ಕಿಯಾರಾ ಲವ್ವಿ ಡವ್ವಿ ಬಗ್ಗೆ ಸಾಕಷ್ಟು ವಿಚಾರಗಳು ಈಗಾಗಲೇ ಹರಿದಾಡುತ್ತಾ ಇದೆ. ಬ್ರೇಕಪ್ ಮಾಡಿಕೊಂಡಿದ್ದ ಈ ಜೋಡಿ ಮತ್ತೆ ಒಂದಾಗಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಈ ಬೆನ್ನಲ್ಲೇ ಕಿಯಾರಾಗೆ ಸಿದ್ಧಾರ್ಥ್ ಬೈತಾರಂತೆ ಅನ್ನೋ ವಿಚಾರವನ್ನ ನಿರ್ದೇಶಕ ಕಮಾಲ್ ಆರ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ

    ಈಗ ಕಿಯಾರಾ ಮತ್ತು ಸಿದ್ಧಾರ್ಥ್ ಬಗ್ಗೆ ಮಾತನಾಡಿರುವ ನಿರ್ದೇಶಕ ಕಮಾಲ್ ಖಾನ್ ಸದಾ ವಿವಾದಗಳಿಂದ ಸುದ್ದಿ ಆಗುತ್ತಾರೆ. ಬೇರೆ ನಟ, ನಟಿಯರ ಬಗ್ಗೆ ಮಾತನಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ. ಅಂತೆಯೇ ಈಗ ಕಮಾಲ್ ಆರ್ ಖಾನ್ ಈಗ ಕಿಯಾರಾ ತನ್ನ ಬಗ್ಗೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಲು ಕಾರಣ ಸಿದ್ಧಾರ್ಥ್ ಮಲ್ಹೋತ್ರ ಎಂದಿದ್ದಾರೆ. ಕಮಾಲ್ ಖಾನ್ ತಮ್ಮ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಕಮಾಲ್ ಖಾನ್‌ಗೆ ಶುಭಕೋರಿ ಕಿಯಾರಾ ಟ್ವೀಟ್ ಮಾಡಿದ್ದರು. ಆದರೆ 10 ನಿಮಿಷದಲ್ಲಿ ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕಿಯಾರಾ ಟ್ವೀಟ್ ಡಿಲೀಟ್ ಮಾಡಲು ಕಾರಣ ಏನು ಎಂದು ನಾನು ಕೇಳಿದೆ. ಆಗ ಕಿಯಾರಾ, ಸಿದ್‌ಗೆ ಕೋಪ ಬಂದಿದೆ. ಇದನ್ನು ಡಿಲೀಟ್ ಮಾಡಲು ಸಿದ್ಧಾರ್ಥ್ ಮಲ್ಹೋತ್ರಾ ಹೇಳಿದ್ದಾರೆ. ಈ ಮೂಲಕ ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಬೈಯುತ್ತಾರೆ ಎಂಬ ವಿಚಾರವನ್ನ ಕಮಲ್ ಖಾನ್ ತಿಳಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಸುದ್ದಿಯೇ ಜೋರಾಗಿದೆ.

  • ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಬಾಲಿವುಡ್ ಕ್ಯೂಟ್ ಕಪಲ್ ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆಯಾಗಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುನಿಸು ಮರೆತು ಮತ್ತೆ ಈ ಜೋಡಿ ಒಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಕಿಯಾರಾ ಸಿನಿಮಾ ರಿಲೀಸ್‌ಗೆ ಬಂದು ಚಿತ್ರ ನೋಡಿ ಚಿತ್ರತಂಡಕ್ಕೆ ಸಿದ್ಧಾರ್ಥ್ ಸಾಥ್ ನೀಡಿದ್ದಾರೆ.

    ಶೇರ್‌ಷಾ ಜೋಡಿ ಮತ್ತೆ ಒಂದಾಗಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಆರ್ಯನ್ ನಟನೆಯ `ಭೂಲ್ ಭುಲಯ್ಯ’ ಚಿತ್ರದ ಶೋಗೆ ಸಿದ್ಧಾರ್ಥ್ ಮಲ್ಹೋತ್ರಾ ಬಂದು ಚಿತ್ರ ನೋಡಿ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಚಿತ್ರ ನೋಡಿ ಇಷ್ಟಪಟ್ಟಿದ್ದಾರೆ.

    `ಭೂಲ್ ಭುಲಯ್ಯ’ ಚಿತ್ರದ ಶೋ ಬರುವಂತೆ ಕಿಯಾರಾ ಸಿದ್ಧಾರ್ಥ್ ಅವರನ್ನು ಕರೆಯಲಾಗಿತ್ತು. ಕಿಯಾರಾ ಮನವಿಯಂತೆ ಚಿತ್ರ ನೋಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಸಿದ್ಧಾರ್ಥ್ , ಕಿಯಾರಾ ಅವರನ್ನು ತಬ್ಬಿ ಚಿತ್ರದ ಕುರಿತು ಪ್ರಶಂಸಿದ್ದಾರೆ. ಈ ಮೂಲಕ ನಮ್ಮ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬುದನ್ನು ಈ ಜೋಡಿ ತೋರಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

    ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ಕೊಡ್ತಿರೋದು ಜೊತೆಗೆ ಕಿಯಾರಾ ಚಿತ್ರದ ಸಕ್ಸಸ್ ಖುಷಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಬಾಗಿಯಾಗಿರೋದನ್ನ ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.