ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹನಿಮೂನ್ ಮುಗಿಸಿ ಇದೀಗ ಮತ್ತೆ ಕೆಲಸದಲ್ಲಿ ಆಕ್ಟೀವ್ ಆಗಿರುವ ಕಿಯಾರಾ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

`ಶೇರ್ಷಾ’ ಚಿತ್ರದ ಮೂಲಕ ಜನಪ್ರಿಯ ಜೋಡಿಯಾಗಿ ಸಿದ್-ಕಿಯಾರಾ ಹೈಲೆಟ್ ಆದರು. ಈ ಸಿನಿಮಾದ ಚಿತ್ರೀಕರಣದಲ್ಲಿಯೇ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಇದನ್ನೂ ಓದಿ: ದೇಶ ಗೆದ್ದ ಗೃಹಿಣಿಯ ಕಥೆ ಹೇಳಲು ಬರುತ್ತಿದ್ದಾರೆ ಅನುಪಮ
ಬಿಟೌನ್ ಬೆಡಗಿ ಕಿಯಾರಾ -ಸಿದ್ ಹನಿಮೂನ್ ಮುಗಿಸಿ ಮುಂಬೈ ಮನೆಗೆ ಬಂದಿದ್ದಾರೆ. ಇಬ್ಬರೂ ತಮ್ಮ ಕೆಲಸದತ್ತ ಬ್ಯುಸಿಯಾಗಿದ್ದಾರೆ. ಸದ್ಯ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಫೋಟೋ ಬ್ಯಾಕ್‌ಗ್ರೌಂಡ್ ಕೂಡ ಮ್ಯಾಂಗೋ ಬಣ್ಣದಲ್ಲಿ ಇದೆ. ಜ್ಯೂಸ್ ಕಂಪನಿಯ ಜಾಹಿರಾತಿಗಾಗಿ ಕಿಯಾರಾ ಈ ರೀತಿಯ ಡ್ರೆಸ್ ಧರಿಸಿದ್ದಾರೆ.

ಇನ್ನೂ ರಾಮ್ ಚರಣ್ ನಟನೆಯ 15ನೇ ಸಿನಿಮಾಗೆ ಕಿಯಾರಾ (Kiara Advani) ನಾಯಕಿಯಾಗಿದ್ದಾರೆ. ಕರಣ್ ಜೋಹರ್ (Karan Johar) ನಿರ್ಮಾಣ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಸಿದ್ಧಾರ್ಥ್ ಮಲ್ಹೋತ್ರಾಗೆ ಕಿಯಾರಾ ನಾಯಕಿ ಎಂದು ಹೇಳಲಾಗುತ್ತಿದೆ.



ಮದುವೆ ಹಾಗೂ ಆರತಕ್ಷತೆ ಸಂದರ್ಭದಲ್ಲಿ ಕರಣ್ ಜೋಹರ್ ಹಾಜರಿದ್ದರು. ಅವರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ನವದಂಪತಿ ಸಿದ್-ಕಿಯಾರಾ ಜೊತೆ ಅವರು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದಾರ್ಥ್- ಕಿಯಾರಾ ಜೋಡಿ ಜೊತೆಯಾಗಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದಾರೆ. ಇದಕ್ಕೆ ಧರ್ಮ ಪ್ರೊಡಕ್ಷನ್ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಇನ್ನೂ ರಾಖಿ ಕೂಡ ಇತ್ತೀಚಿಗೆ ಮೈಸೂರು ಮೂಲದ ಆದಿಲ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ರಾಖಿ ನೀಡಿರುವ ದೂರಿನ ಮೇರೆಗೆ ಕಂಬಿ ಹಿಂದೆ ಆದಿಲ್ ದಿನ ಕಳೆಯುತ್ತಿದ್ದಾರೆ.

ಎಲ್ಲರಿಗೂ ಒಬ್ಬರು ಕ್ರಶ್ ಇದ್ದೇ ಇರುತ್ತಾರೆ. ಇದೇ ನಟ, ಇದೇ ನಟಿ ಅಂದ್ರೆ ಭಾರೀ ಇಷ್ಟ ಅನ್ನೋ ಕ್ರೇಜ್ ಎಲ್ಲರಲ್ಲೂ ಇರುತ್ತದೆ. ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಅವರ ಮಗಳಿಗೂ ಈ ಥರ ಒಬ್ಬ ಕ್ರಶ್ ಇದ್ದರು. ಬಾಲಿವುಡ್ ನಟ ಸಿದ್ಧಾರ್ಥ್ ಮೇಲೆ ಸಾನ್ವಿ ಕ್ರಶ್ ಆಗಿದ್ದು, ಅವರು ಕಿಯಾರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದ್ದಕ್ಕೆ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಿದ್-ಕಿಯಾರಾ ಮದುವೆ ಫೋಟೋ ಶೇರ್ ಮಾಡಿ ಅಳುವ ಇಮೋಜಿಯನ್ನ ಸಾನ್ವಿ ಹಾಕಿದ್ದರು. ಈ ಮೂಲಕ ಸುದೀಪ್ ಪುತ್ರಿ ಸಾನ್ವಿ ತಮ್ಮ ಕ್ರಶ್ ಯಾರು ಎಂಬುದನ್ನ ರಿವೀಲ್ ಆಗಿದೆ.
ಸಿದ್- ಕಿಯಾರಾ ಮದುವೆ ಸಂಭ್ರಮದಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ದಂಪತಿ (Prithviraj Sukumaran) ಬಾಲಿವುಡ್ ನಟಿ ಜೂಹಿ ಚಾವ್ಲಾ, ನಿರ್ಮಾಪಕ ಕರಣ್ ಜೋಹರ್ ಭಾಗಿಯಾಗಿದ್ದರು. ಅಂದ್ಹಾಗೆ ಸಿದ್ಧಾರ್ಥ್ ಮೊದಲ ಸಿನಿಮಾಗೆ ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು.








