Tag: siddarth malhotra

  • ಸಿದ್ಧಾರ್ಥ್‌ ಮಲ್ಹೋತ್ರಾಗೆ ಜಾನ್ವಿ ಕಪೂರ್‌ ನಾಯಕಿ

    ಸಿದ್ಧಾರ್ಥ್‌ ಮಲ್ಹೋತ್ರಾಗೆ ಜಾನ್ವಿ ಕಪೂರ್‌ ನಾಯಕಿ

    ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಸಿನಿಮಾ ಕೆರಿಯರ್‌ನಲ್ಲಿ ಬಿಗ್ ಸಕ್ಸಸ್ ಸಿಗದೆ ಇದ್ರೂ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಸಿದ್ಧಾರ್ಥ್ ಮಲ್ಹೋತ್ರಾಗೆ (Siddarth Malhotra) ಜೋಡಿಯಾಗಿ ನಟಿಸಲು ಜಾನ್ವಿಗೆ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಪುಟ್ಟಕ್ಕನ ಮಕ್ಕಳು’ ಸ್ನೇಹಾ ಪಾತ್ರ ಅಂತ್ಯ- ಫ್ಯಾನ್ಸ್‌ಗೆ ಸಂದೇಶ ನೀಡಿದ ಸಂಜನಾ

    ಲವ್ ಕಮ್ ಕಾಮಿಡಿ ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಜಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ಪರಮ ಸುಂದರಿ’ (Param Sundari) ಎಂಬ ಕ್ಯಾಚಿ ಟೈಟಲ್ ಅನ್ನು ಇಡಲಾಗಿದೆ. ಚಿತ್ರದಲ್ಲಿ ದೆಹಲಿಯ ಉದ್ಯಮಿ ಸಿದ್ಧಾರ್ಥ್ ಜೊತೆ ಕೇರಳದ ಹುಡುಗಿ ಜಾನ್ವಿಗೆ ಹೇಗೆ ಲವ್ ಆಗುತ್ತೆ, ಮುಂದೆ ಎನೆಲ್ಲಾ ತಿರುವು ಸಿಗಲಿದೆ ಅನ್ನೋದೆ ಚಿತ್ರದ ತಿರುಳಾಗಿದೆ.

    ಈ ಚಿತ್ರವನ್ನು ತುಷಾರ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಡಿಸೆಂಬರ್‌ನಿಂದ ‘ಪರಮ ಸುಂದರಿ’ ಶೂಟಿಂಗ್ ಶುರುವಾಗಲಿದೆ. ಮೊದಲ ಬಾರಿಗೆ ಜಾನ್ವಿ ಮತ್ತು ಸಿದ್ಧಾರ್ಥ್ ಜೊತೆಯಾಗಿ ನಟಿಸುತ್ತಿರುವ ಕಾರಣ, ಚಿತ್ರದ ಕುರಿತು ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ (Kiara Advani) ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ನಟಿಸಲು ಸಜ್ಜಾಗಿದ್ದಾರೆ. ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ಒಪ್ಪಿದ್ದಾರೆ ಎನ್ನಲಾದ ಸುದ್ದಿಯೊಂದು ಬಿಟೌನ್‌ನಲ್ಲಿ ಹರಿದಾಡುತ್ತಿದ್ದಾರೆ. ಇದನ್ನೂ ಓದಿ:ಸೂಚನ್‌ ಶೆಟ್ಟಿ ನಟನೆಯ ‘ಒಂದು ತಾತ್ಕಾಲಿಕ ಪಯಣ’ ಚಿತ್ರದ ಟ್ರೈಲರ್‌ ಔಟ್

    ಸೂಪರ್ ಹಿಟ್ ‘ಶೇರ್ಷಾ’ (Shershaah) ಸಿನಿಮಾದಿಂದಲೇ ರಿಯಲ್ ಲೈಫ್‌ನಲ್ಲೂ ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಸಿ ಮದುವೆಯಾದರು. ಈ ಸಿನಿಮಾ ಬಳಿಕ ಮತ್ತೆ ಯಾವಾಗ ಜೊತೆಯಾಗಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

    ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ ಇದೀಗ ಸಿದ್ಧಾರ್ಥ್ ಮತ್ತು ಕಿಯಾರಾ ಜೊತೆ ಹೊಸ ಸಿನಿಮಾ ಮಾಡಲು ಚರ್ಚಿಸಿದ್ದಾರೆ ಎನ್ನಲಾಗಿದೆ. ಲವ್ ಸ್ಟೋರಿ ಸಿನಿಮಾ ಆಗಿದ್ರೂ ಸಾಕಷ್ಟು ಟ್ವಿಸ್ಟ್‌ಗಳಿರುವಂತಹ ವಿಭಿನ್ನ ಕಥೆಗೆ ಈ ಜೋಡಿಯೇ ಸರಿ ಎಂದು ನಿರ್ಮಾಣ ಸಂಸ್ಥೆ ಸಿದ್ಧಾರ್ಥ್ ದಂಪತಿಯನ್ನು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಹಾಗಾದ್ರೆ ಸದ್ಯ ಹರಿದಾಡುತ್ತಿರುವ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಕಾದುನೋಡಬೇಕಿದೆ.

    ಅಂದಹಾಗೆ, 2021ರಲ್ಲಿ ತೆರೆಕಂಡ ‘ಶೇರ್ಷಾ’ ಸಿನಿಮಾದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದರು. ಈ ಚಿತ್ರಕ್ಕೆ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿದ್ದರು.

  • ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಹೀರೋಯಿನ್

    ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಹೀರೋಯಿನ್

    ನ್ನಡದ ‘ಕಿಸ್’ ನಟಿ ಶ್ರೀಲೀಲಾಗೆ (Sreeleela) ಟಾಲಿವುಡ್‌ನಲ್ಲಿ ಭಾರೀ ಬೇಡಿಕೆಯಿದೆ. ಇದೀಗ ಬಾಲಿವುಡ್‌ನಲ್ಲೂ (Bollywood) ನಟಿಸುವ ಬಂಪರ್ ಚಾನ್ಸ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ಸ್ಟಾರ್ ನಟನಿಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ. ಚಿತ್ರತಂಡ ಈಗಾಗಲೇ ನಟಿಯನ್ನು ಭೇಟಿಯಾಗಿದ್ದು, ಸ್ಕ್ರಿಪ್ಟ್ ಬಗ್ಗೆ ಮಾತುಕತೆಯಾಗಿದೆ. ನಟಿ ಕೂಡ ಕಥೆ ಕೇಳಿ ಸಿದ್ಧಾರ್ಥ್ ಜೊತೆ ತೆರೆಹಂಚಿಕೊಳ್ಳಲು ಓಕೆ ಎಂದಿದ್ದಾರೆ.

    ಇದೊಂದು ಪಕ್ಕಾ ಆ್ಯಕ್ಷನ್ ಡ್ರಾಮಾ ಕಥೆಯಾಗಿದ್ದು, ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಬಲ್ವಿಂದರ್ ಸಿಂಗ್ ಜಾಂಜುವಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ.

    ಮೊದಲ ಬಾರಿಗೆ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ‘ಮಿಟ್ಟಿ’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಈ ಜೋಡಿಯ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ:‘ದಿ ಫ್ಯಾಮಿಲಿ ಮ್ಯಾನ್ 2’ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್

    ಇನ್ನೂ ತೆಲುಗಿನಲ್ಲಿ ನಿತಿನ್ ಜೊತೆ ‘ರಾಬಿನ್‌ಹುಡ್’, ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’, ‘ಧಮಾಕ’ ಹೀರೋ ರವಿತೇಜಾ ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra), ಕಿಯಾರಾ ಅಡ್ವಾಣಿ (Kiara Advani) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಬ್ಬರೂ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ತಮ್ಮ ಹೊಸ ಚಿತ್ರದ ಬಗ್ಗೆ ಸಿದ್ಧಾರ್ಥ್ ಮಾಹಿತಿ ನೀಡಿದ್ದಾರೆ.

    ‘ಶೇರ್ಷಾ’ ಸಿನಿಮಾ ನಂತರ ಮತ್ತೆ ಸಿದ್ಧಾರ್ಥ್, ಕಿಯಾರಾ ಒಂದಾಗಿದ್ದಾರೆ. ಒಂದೊಳ್ಳೆಯ ಕಥೆಯ ಮೂಲಕ ಹೊಸ ಪ್ರೇಮಕಥೆಯನ್ನು ಹೇಳಲು ಹೊರಟಿದ್ದಾರೆ. ಆ್ಯಕ್ಷನ್ ಕಮ್ ರೊಮ್ಯಾನ್ಸ್ ಜೊತೆಯಾಗಿ ನಟಿಸುವ ವಿಚಾರ ನಿಜ ಎಂದು ಸಿದ್ಧಾರ್ಥ್ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ಈ ಹಿಂದೆ ಈ ಜೋಡಿಯ ಹೊಸ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡೋದಾಗಿ ತಿಳಿಸಿತ್ತು. ಅದೇ ಸಿನಿಮಾ ಬಗ್ಗೆ ನಟ ಮಾತನಾಡುತ್ತಿದ್ದಾರಾ ಎಂಬ ಮಾಹಿತಿ ಬಿಟ್ಟು ಕೊಟ್ಟಿಲ್ಲ.

    ‘ಶೇರ್ಷಾ’ ಸಿನಿಮಾ ಸಿದ್ಧಾರ್ಥ್ ದಂಪತಿ ಪಾಲಿಗೆ ತುಂಬಾನೇ ಸ್ಪೆಷಲ್. ಕೆರಿಯರ್ ಮತ್ತು ವೈವಾಹಿಕ ಜೀವನದಲ್ಲಿ ಖುಷಿಯಾಗಿ ಜೀವಿಸೋದಕ್ಕೆ ‘ಶೇರ್ಷಾ’ (Shershaah) ಚಿತ್ರ ಕಾರಣವಾಗಿದೆ. ಈಗ ಮೂರು ವರ್ಷಗಳ ನಂತರ ಹೊಸ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗುತ್ತಿದ್ದಾರೆ.

  • ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಬಾಲಿವುಡ್ (Bollywood) ಬ್ಯೂಟಿ ಕಿಯಾರಾ ಅಡ್ವಾಣಿಗೆ (Kiara Advani) ಈ ವರ್ಷದ ಜನ್ಮದಿನ ಸಖತ್ ಸ್ಪೆಷಲ್ ಆಗಿತ್ತು. ಪತಿ ಸಿದ್ಧಾರ್ಥ್ (Siddarth Malhotra) ಜೊತೆ ಥೈಲ್ಯಾಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಿಯಾರಾ ಬರ್ತ್‌ಡೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಕಿಯಾರಾಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಎದುರಾಗಿದೆ. ಮದುವೆಯಾದ್ಮೇಲೆ ಸಿದ್ಧಾರ್ಥ್‌ಗಾಗಿ ತಯಾರಿಸಿದ ಮೊದಲ ಅಡುಗೆ ಯಾವುದು? ಎಂಬ ಪ್ರಶ್ನೆಗೆ ಅಚ್ಚರಿಯ ಹೇಳಿಕೆಯನ್ನ ನಟಿ ನೀಡಿದ್ದಾರೆ.

    ಮದುವೆ ಆದ ಬಳಿಕ ನೀವು ಮಾಡಿದ ಮೊದಲ ತಿನಿಸು ಯಾವುದು ಎಂದು ಕಿಯಾರಾಗೆ ಕೇಳಲಾಯಿತು. ಇದಕ್ಕೆ ಕಿಯಾರಾ ಅವರು ಉತ್ತರಿಸಿದ್ದಾರೆ. ಇಲ್ಲಿಯವರೆಗೆ ನಾನು ಏನನ್ನೂ ಮಾಡಿಲ್ಲ. ಬಹುಶಃ ನೀರನ್ನು ಬಿಸಿ ಮಾಡಿರಬಹುದು ಅಷ್ಟೇ. ನನ್ನ ಪತಿಗೆ ಅಡುಗೆ ಮಾಡುವುದು ಎಂದರೆ ಇಷ್ಟ. ಅವರು ಯಾವಾಗಲೂ ಏನಾದರೂ ಮಾಡುತ್ತಲೇ ಇರುತ್ತಾರೆ. ನಾನು ಕೂಡ ಅದನ್ನು ತಿಂದು ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

    ಸಿದ್ದಾರ್ಥ್ ಅವರು ವಿಶೇಷವಾಗಿ ತಯಾರಿಸುವ ಪದಾರ್ಥ ಯಾವುದು ಎಂದು ಕೇಳಲಾಯಿತು. ಇದಕ್ಕೆ ಕಿಯಾರಾ ಬ್ರೆಡ್ ಎನ್ನುವ ಉತ್ತರ ನೀಡಿದ್ದಾರೆ. ಸಿದ್ದಾರ್ಥ್ ಅವರು ಬ್ರೆಡ್‌ನ ಚೆನ್ನಾಗಿ ಮಾಡುತ್ತಾರೆ. ಅದನ್ನು ಮಾಡೋದು ನಿಜಕ್ಕೂ ಕಠಿಣ ಸವಾಲು. ಆದರೆ, ಸಿದ್ದಾರ್ಥ್ ಬ್ರೆಡ್‌ನ ಚೆನ್ನಾಗಿ ಸಿದ್ಧಪಡಿಸುತ್ತಾರೆ ಎಂದು ಕಿಯಾರಾ ಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಸಿದ್ಧಾರ್ಥ್- ಕಿಯಾರಾ ಅಡ್ವಾಣಿ ಈ ವರ್ಷ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದರು. ಇಬ್ಬರು ಜೊತೆಯಾಗಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಮದುವೆ ಬಳಿಕ ಕಿಯಾರಾ ಮತ್ತಷ್ಟು ಬೋಲ್ಡ್‌ ಆಗಿ ಕಾಣಿಸಿಕೊಳ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾರ್ಬಿ ಡಾಲ್‌ನಂತೆ ಕಂಗೊಳಿಸಿದ ಕಿಯಾರಾ

    ಬಾರ್ಬಿ ಡಾಲ್‌ನಂತೆ ಕಂಗೊಳಿಸಿದ ಕಿಯಾರಾ

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರು ‘ಸತ್ಯ ಪ್ರೇಮ್ ಕಿ ಕಥಾ’ (Sathya Prem Ki Katha) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಸಿನಿಮಾದ ಬಳಿಕ ಬಂಪರ್ ಆಫರ್ ಕೂಡ ಗಿಟ್ಟಿಸಿಕೊಳ್ತಿದ್ದಾರೆ. ಹೀಗಿರುವಾಗ ಈವೆಂಟ್‌ವೊಂದರಲ್ಲಿ ಕಿಯಾರಾ ಬಾರ್ಬಿ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋ- ವೀಡಿಯೋ ಸಖತ್ ಸದ್ದು ಮಾಡುತ್ತಿದೆ.

    ಎಮ್.ಎಸ್ ಧೋನಿ, ಕಬೀರ್ ಸಿಂಗ್, ಲಸ್ಟ್ ಸ್ಟೋರಿಸ್, ಕಳಂಕ್, ಗುಡ್ ನ್ಯೂಸ್, ಶೇರ್‌ಷಾ ಸೇರಿದಂತೆ ಬಾಲಿವುಡ್- ಸೌತ್ ಸಿನಿಮಾಗಳಲ್ಲಿ ಕಿಯಾರಾ (Kiara) ಹೀರೋಯಿನ್ ಆಗಿ ನಟಿಸಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾ(Siddarth Malhotra)  ಜೊತೆ ಈ ವರ್ಷ ಫೆ.7ಕ್ಕೆ ಹಸೆಮಣೆ ಏರಿದ್ದರು. ಮದುವೆಯಾಯಿತು ಎಂದು ಬ್ರೇಕ್ ತೆಗೆದುಕೊಳ್ಳದೇ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ:ಗರುಡ ಪಕ್ಷಿಗೆ ಮುತ್ತಿಟ್ಟ ನಟಿ- ಮರಳುಗಾಡಿನಲ್ಲಿ ದೀಪಿಕಾ ದಾಸ್

    ಹೀಗಿರುವಾಗ ಇತ್ತೀಚಿಗೆ ಫ್ಯಾಷನ್ ಈವೆಂಟ್‌ವೊಂದರಲ್ಲಿ ಕಿಯಾರಾ ರ‍್ಯಾಂಪ್ ವಾಕ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಕಿಯಾರಾ ಬಾರ್ಬಿ ಡಾಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ನಟಿಯ ಲುಕ್ ಮತ್ತು ಬ್ಯೂಟಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ರಾಮ್ ಚರಣ್ (Ram Charan) ನಟನೆಯ ಗೇಮ್ ಚೇಂಜರ್ (Game Changer) ಸಿನಿಮಾದಲ್ಲಿ ಕಿಯಾರಾ ನಾಯಕಿಯಾಗಿ ನಟಿಸಿದ್ದಾರೆ. ಮತ್ತೆ ಪತಿ ಸಿದ್ಧಾರ್ಥ್ ಜೊತೆ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಹೊಸ ಬಗೆಯ ಕಥೆಗಳನ್ನ ನಟಿ ಕೇಳ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯಾದ್ಮೇಲೆ ಹಾಟ್‌ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ಸಿದ್ಧಾರ್ಥ್‌, ಕಿಯಾರಾಗೆ ಹೇಳಿದ್ದೇನು?

    ಮದುವೆಯಾದ್ಮೇಲೆ ಹಾಟ್‌ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ಸಿದ್ಧಾರ್ಥ್‌, ಕಿಯಾರಾಗೆ ಹೇಳಿದ್ದೇನು?

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರು ‘ಸತ್ಯಪ್ರೇಮ್ ಕಿ ಕಥಾ’ (Sathyaprem Ki Katha) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಹೀಗಿರುವಾಗ ಸಿನಿಮಾದಲ್ಲಿನ ರೊಮ್ಯಾನ್ಸ್ ಸೀನ್‌ಗಳಿಗೆ ಟ್ರೋಲ್ ಆಗಿರೋದರ ಬಗ್ಗೆ ನಟಿ ಮೌನಮುರಿದಿದ್ದಾರೆ. ಮದುವೆಯಾದ್ಮೇಲೆ ನಟಿ ಹೀರೋ ಜೊತೆ ರೊಮ್ಯಾನ್ಸ್ ಮಾಡಿದ್ರೆ ಜನರ ದೃಷ್ಟಿಕೋನದ ಬಗ್ಗೆ ಕಿಯಾರಾ ಮಾತನಾಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ಏನಂದ್ರು? ಎಂದು ನಟಿ ಮುಕ್ತವಾಗಿ ಮಾತನಾಡಿದ್ದಾರೆ.

    ಕಾರ್ತಿಕ್ ಆರ್ಯನ್ (Karthik Aryan) ಜೊತೆ ‘ಭೂಲ್ ಭುಲೈಯಾ 2′ ಚಿತ್ರದಲ್ಲಿ ಕಿಯಾರಾ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಜೋಡಿ ತೆರೆಯ ಮೇಲೆ ಕಮಾಲ್ ಮಾಡಿತ್ತು. ಈ ಚಿತ್ರ 2022ರ ಹಿಟ್ ಲಿಸ್ಟ್ ಸೇರಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದಲ್ಲಿ ಕಾರ್ತಿಕ್-ಕಿಯಾರಾ ಜೋಡಿ ನೋಡಿ ಖುಷಿಪಟ್ಟಿದ್ದ ಫ್ಯಾನ್ಸ್‌ಗೆ ʼಸತ್ಯಪ್ರೇಮ್ ಕಿ ಕಥಾ’ ಸಿನಿಮಾ ಮೂಲಕ ಫುಲ್ ಟ್ರೀಟ್ ಸಿಕ್ಕಿದೆ. ಇದನ್ನೂ ಓದಿ:ಸುದೀಪ್ ಮೇಲಿನ ಆರೋಪ: ಬಹಿರಂಗವಾಗಿ ದಾಖಲೆ ಕೊಡಲ್ಲ ಎಂದ ಕುಮಾರ್

    ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಅವರನ್ನು ಮದುವೆಯಾದ ನಂತರ ಕಿಯಾರಾ ಅವರಿಗೆ ‘ಸತ್ಯಪ್ರೇಮ್ ಕಿ ಕಥಾ’ ಮೊದಲ ಚಿತ್ರ. ಆದರೆ ಮದುವೆಯಾದ (Wedding) ಮೇಲೂ ಬೇರೊಬ್ಬ ನಟನ ಜೊತೆ ರೊಮಾನ್ಸ್ ಮಾಡಿರುವುದಕ್ಕೆ ಕಿಯಾರಾ ಸಖತ್ ಟ್ರೋಲ್ ಆಗಿದ್ದರು. ಇದರಿಂದ ಕಿಯಾರಾ ನೊಂದುಕೊಂಡಿದ್ದರು. ನೆಗೆಟಿವ್ ಟ್ರೋಲ್‌ನಿಂದ ಹೊರಬರಲು ಪತಿ ಸಿದ್ಧಾರ್ಥ್ ಬೆಂಬಲ ಹೇಗಿತ್ತು ಎಂದು ನಟಿ ತಿಳಿಸಿದ್ದಾರೆ.

    ನಾನು ಈ ಟ್ರೋಲ್‌ನಿಂದ ತುಂಬಾ ನೊಂದಿದ್ದೆ. ಜೊತೆಗೆ ಕೆಟ್ಟ ಕೆಟ್ಟ ಕಾಮೆಂಟ್‌ಗಳಿಂದ ಸಿದ್ಧಾರ್ಥ್ ಹೇಗೆ ರಿಯಾಕ್ಟ್ ಮಾಡುತ್ತಾರೆ ಎನ್ನುವ ಬಗ್ಗೆ ಭಯವಿತ್ತು. ಇದು ನಿಜವಾಗಿಯೂ ನನ್ನ ಮೇಲೆ ಪರಿಣಾಮ ಬೀರಿತು. ಆದರೆ ನನ್ನ ಅದೃಷ್ಟ, ಈ ಟ್ರೋಲ್‌ಗಳಿಂದ ನಾನು ತಲೆಕೆಡಿಸಿಕೊಳ್ಳಬಾರದು ಎಂದು ಪತಿ ಸಿದ್ಧಾಥ್ ಮನವರಿಕೆ ಮಾಡಿದರು. ಇಂಥ ಟ್ರೋಲ್‌ಗಳು ಸದಾ ಇರುತ್ತದೆ. ಈ ರೀತಿಯ ನೆಗೆಟಿವ್ ಟ್ರೋಲ್‌ಗಳಿಗೆ ನೀನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಾದರೆ, ಮನೆಯಲ್ಲಿ ಕುಳಿತು ಅಳುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಆಗುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಪತಿಯ ಬೆಂಬಲದ ಬಗ್ಗೆ ಕಿಯಾರಾ ಹೇಳಿದ್ದಾರೆ. ನಾವು ಮದುವೆಯಾಗಿರೋದು ಕೆಲವರಿಗೆ ಇಷ್ಟವಾಗದೇ ಇರಬಹುದು. ಅಂತಹವರು ಈ ರೀತಿ ಮಾಡುತ್ತಾರೆ ಎಂದು ಅಂದು ಪತಿಯ ಬೆಂಬಲದ ಬಗ್ಗೆ ನಟಿ ಖುಷಿಯಿಂದ ಹಂಚಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಂಪು ಗುಲಾಬಿ ಅವತಾರ ತಾಳಿದ ನಟಿ ಕಿಯಾರಾ

    ಕೆಂಪು ಗುಲಾಬಿ ಅವತಾರ ತಾಳಿದ ನಟಿ ಕಿಯಾರಾ

    ಬಾಲಿವುಡ್ (Bollywood) ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಮದುವೆಯ ಬಳಿಕ ಮತ್ತಷ್ಟು ಹಾಟ್ ಆಗಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ಕೆಂಪು ಗುಲಾಬಿ ಅವತಾರ ತಾಳಿದ್ದಾರೆ. ಈ ನಟಿಯ ಹಾಟ್ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು

    ಹಾಟ್ ಬ್ಯೂಟಿ ಕಿಯಾರಾ ಅಡ್ವಾಣಿ ಇತ್ತೀಚಿಗಷ್ಟೇ ಬಹುಕಾಲದ ಗೆಳೆಯ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಜೊತೆ ಹಸೆಮಣೆ ಏರಿದ್ದರು. ಹನಿಮೂನ್ ಮುಗಿಸಿ ಬಂದಿರುವ ಕಿಯಾರಾ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಮದುವೆ (Wedding) ನಂತರ ಮತ್ತಷ್ಟು ಹಾಟ್ ಆಗಿದ್ದಾರೆ. ಸೌತ್- ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

     

    View this post on Instagram

     

    A post shared by KIARA (@kiaraaliaadvani)

    ಕಾರ್ತಿಕ್ ಆರ್ಯನ್ ‘ಸತ್ಯಪ್ರೇಮ್ ಕೀ ಕಥಾ’, ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’, ಸೇರಿದಂತೆ ಕರಣ್ ಜೋಹರ್ ನಿರ್ಮಾಣದ 3 ಚಿತ್ರಗಳಿಗೆ ಕಿಯಾರಾ ನಾಯಕಿಯಾಗಿ ಫೈನಲ್ ಆಗಿದ್ದಾರೆ.

    ಅಂದಹಾಗೆ ಕಿಯಾರಾ (Kiara) ಇತ್ತೀಚಿನ ಫೋಟೋಶೂಟ್ ಪಡ್ಡೆಹುಡುಗರ ಗಮನ ಸೆಳೆದಿದೆ. ಕೆಂಪು ಬಣ್ಣದ ಉಡುಗೆಯಲ್ಲಿ ನಟಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

  • ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಸಿದ್-ಕಿಯಾರಾ ದಂಪತಿ

    ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಸಿದ್-ಕಿಯಾರಾ ದಂಪತಿ

    ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳಾಗಿದ್ದ ಸಿದ್ಧಾರ್ಥ್-ಕಿಯಾರಾ (Kiara Advani) ಜೋಡಿ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಮತ್ತು ವೈವಾಹಿಕ ಜೀವನದಲ್ಲಿ ಬ್ಯುಸಿಯಿರುವ ಈ ಜೋಡಿ ಇದೀಗ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.

    ‘ಶೇರ್‌ಷಾ’ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 2 ತಿಂಗಳಾಗಿದೆ. 2 ವರ್ಷಗಳ ಡೇಟಿಂಗ್ ನಂತರ ಫೆ.7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ ಸಿದ್- ಕಿಯಾರಾ ಇದೀಗ ಖುಷಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪ್ರೀತಿ- ಮದುವೆ ಬಗ್ಗೆ ಎಲ್ಲೂ ಸುಳಿವು ನೀಡದೇ ಸಿಹಿಸುದ್ದಿ ನೀಡಿದ್ದರು. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

     

    View this post on Instagram

     

    A post shared by KIARA (@kiaraaliaadvani)

    ಇದೀಗ ನೀತಾ ಮುಖೇಶ್ ಅಂಬಾನಿ ಆಯೋಜಿಸಿದ ಸಮಾರಂಭದಲ್ಲಿ ಶೇರ್‌ಷಾ ಕಪಲ್ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಸಿದ್-ಕಿಯಾರಾ ಗೋಲ್ಡನ್ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇಬ್ಬರ ನಯಾ ಫೋಟೋಶೂಟ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    `ಶೇರ್‌ಷಾ’ ನಂತರ ಕರಣ್ ಜೋಹರ್ ನಿರ್ಮಾಣದ ಬ್ಯಾಕ್ ಟು ಬ್ಯಾಕ್ 3 ಚಿತ್ರಗಳಲ್ಲಿ ಸಿದ್-ಕಿಯಾರಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

  • ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ

    ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರು ಮದುವೆಯಾದ್ಮೇಲೆ (Wedding) ಮತ್ತಷ್ಟು ಹಾಟ್ ಮತ್ತು ಬೋಲ್ಡ್ ಆಗಿದ್ದಾರೆ. ಹನಿಮೂನ್ ಮುಗಿಸಿ ಬರುತ್ತಿದ್ದಂತೆ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳತ್ತ ನಟಿ ಗಮನ ಕೊಡುತ್ತಿದ್ದಾರೆ. ಸದ್ಯ ಹಾಟ್ ಹಾಟ್ ಫೋಟೋಶೂಟ್ ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದನ್ನೂ ಓದಿ: ಹೃದಯಘಾತದಿಂದ ಬದುಕುಳಿದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ನಟಿ ಸುಶ್ಮಿತಾ ಸೇನ್

     

    Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

     

    KIARA (@kiaraaliaadvani) ಅವರು ಹಂಚಿಕೊಂಡ ಪೋಸ್ಟ್

    ಇತ್ತೀಚಿಗೆ ಸಿದ್- ಕಿಯಾರಾ ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟರು. ಇಬ್ಬರ ಡೇಟಿಂಗ್ ಸುದ್ದಿ ಅದೆಷ್ಟೋ ಸೌಂಡ್ ಮಾಡಿದ್ದರು. ತಲೆ ಕೆಡಿಸಿಕೊಳ್ಳದೇ ಸೈಲೆಂಟ್ ಹಸೆಮಣೆ ಏರಿದ್ದರು. ಇದೀಗ `ಶೇರ್ಷಾ’ ಜೋಡಿ ಖುಷಿಯಿಂದ ಜೀವನ ಸಾಗಿಸುತ್ತಿದೆ.

    ಸದ್ಯ ಹನಿಮೂನ್ ಟ್ರಿಪ್ ಮುಗಿಸಿ ಬಂದಿರುವ ಸಿದ್- ಕಿಯಾರಾ ಜೋಡಿ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಕಿಯಾರಾ ಬಗೆ ಬಗೆಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದೆ. (ಫೆ.4)ರಂದು ನಡೆದ ಮಹಿಳಾ ಪ್ರಿಮಿಯರ್‌ ಶನಿವಾರ ಕಾರ್ಯಕ್ರಮದಲ್ಲಿ ಕಿಯಾರಾ ಪಿಂಕ್ ಕಲರ್ ಮಾಡರ್ನ್ ಡ್ರೆಸ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಡ್ರೆಸ್‌ನಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಚೆಂದದ ಫೋಟೋಶೂಟ್‌ನ್ನ ನಟಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಿದ್ದಾರ್ಥ್ ಮಲ್ಹೋತ್ರ (Siddarth Malhotra) ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

     

    Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

     

    KIARA (@kiaraaliaadvani) ಅವರು ಹಂಚಿಕೊಂಡ ಪೋಸ್ಟ್

    ಅಂದಹಾಗೆ ನಟಿ ಕಿಯಾರಾ ಅವರು, ರಾಮ್ ಚರಣ್ 15ನೇ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಹೊಸ ಚಿತ್ರಕ್ಕೆ ಸಿದ್ಧಾರ್ಥ್‌ಗೆ ಕಿಯಾರಾ ಜೋಡಿಯಾಗಲಿದ್ದಾರೆ. `ಶೇರ್ಷಾ’ ಚಿತ್ರದ ಬಳಿಕ ಮತ್ತೆ ಈ ಜೋಡಿ ತೆರೆಯ ಮೇಲೆ ಒಂದಾಗಲಿದೆ.