Tag: Siddaramayya

  • ಮಾಟ ಮಂತ್ರ ಮಾಡಿದ್ರೆ ನಮಗೆ ತಟ್ಟಲ್ಲ, ಮಾಡಿದವರಿಗೆ ಅದು ರಿವರ್ಸ್ ಆಗುತ್ತೆ- ರೇವಣ್ಣ

    ಮಾಟ ಮಂತ್ರ ಮಾಡಿದ್ರೆ ನಮಗೆ ತಟ್ಟಲ್ಲ, ಮಾಡಿದವರಿಗೆ ಅದು ರಿವರ್ಸ್ ಆಗುತ್ತೆ- ರೇವಣ್ಣ

    ಹಾಸನ: ನಮ್ಮ ಸರ್ಕಾರಕ್ಕೆ ಯಾರೇ ಮಾಟ ಮಂತ್ರ ಮಾಡಿದರೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

    ಯಡಿಯೂರಪ್ಪ ಅವರು ಕೇರಳಕ್ಕೆ ಮಾಟ ಮಂತ್ರ ಮಾಡಿಸಿಕೊಂಡು ಬರಲು ಹೋಗಿದ್ದಾರೆ ಎನ್ನುವ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾರೇ ಮಾಟ ಮಂತ್ರ ಮಾಡಿದರೂ ನಮಗೇನೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಹೇಳಿದರು.

    ಹಾಸನ ಕ್ಷೇತ್ರಕ್ಕೆ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಆದೇಶದ ಪ್ರತಿ ತೋರಿಸಲಿ. ನಾವು ಕೇಂದ್ರದ ಜೊತೆ ಸತತ ಪ್ರಯತ್ನ ಮಾಡಿ ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳನ್ನು ತಂದಿದ್ದೇವೆ. ರಾಜ್ಯ ಸರ್ಕಾರ 10 ರೂಪಾಯಿ ಕೂಡ ಕೊಟ್ಟಿಲ್ಲ. ವಿಷಯ ಗೊತ್ತಿದ್ದರೆ ಮಾತಾಡಲಿ ಇಲ್ಲವಾದರೆ ಸುಮ್ಮನಿರಲಿ ಎಂದು ಮಾಜಿ ಸಚಿವ ಶಿವರಾಂ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಹಾಸನಕ್ಕೆ ಏನು ಕಡಿದು ಕಟ್ಟೆ ಹಾಕಿದ್ದಾರೆ. ಬಿಜೆಪಿ-ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಏನು ಮಾಡಿದೆ ಎನ್ನುವುದನ್ನು ಹೇಳಲಿ ಎಂದು ಅವರು ಸವಾಲ್ ಹಾಕಿದ್ದಾರೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಚಾಲನೆ ನೀಡಿದ ಯೋಜನೆಗಳು ನಮ್ಮ ಅವಧಿಯಲ್ಲಿ ಮಾಡಿದ್ದು ಎಂದು ಶಿವರಾಂ ಹೇಳಿಕೊಂಡಿದ್ದಾರೆ. ನನ್ನ ಕಡೆಯಿಂದ ಕಾಂಗ್ರೆಸ್ ಸದಸ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ನನ್ನನ್ನು ಪ್ರಶ್ನಿಸಿದರೇ ಉತ್ತರ ಕೊಡಲು ಸಿದ್ಧ. ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬೇಕಾದರೆ ಸಮನ್ವಯ ಸಮಿತಿ ಸಭೆಯಲ್ಲೇ ವಿವರಿಸಿ ಹೇಳುವೆ ಎಂದು ಹೇಳಿದ್ದಾರೆ.

    ಬದುಕಿರುವವರೆಗೂ ನಾನು, ಕುಮಾರಸ್ವಾಮಿ ಹೊಡೆದಾಡಲ್ಲ. ಸಹೋದರರು ಕಚ್ಚಾಡುತ್ತಾರೆ ಎಂದುಕೊಂಡಿದ್ದರೆ ಅದು ಭ್ರಮೆ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆಯೆ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ವಿಶ್ವಾಸವಿದೆ.

    ಕುಲದೇವರು ಈಶ್ವರ, ಶೃಂಗೇರಿ ಶಾರದೆ ಆಶೀರ್ವಾದ ಇರೋವರೆಗೂ ಸರಕಾರಕ್ಕೆ ಏನೂ ಆಗಲ್ಲ. ಸಿದ್ದರಾಮಯ್ಯ ಹಾಗೂ ನನ್ನ ನಡುವೆ ರಾಜಕೀಯಕ್ಕೂ ಮೀರಿದ ಸಂಬಂಧವಿದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಆನೆ ಕಾರಿಡಾರ್ ನಿರ್ಮಾಣ ಮಾಡಲು ಅಧಿವೇಶನದ ನಂತರ ಸಿಎಂ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿ ಹಾಸನ ಸೇರಿ ರಾಜ್ಯದಲ್ಲಿರುವ ಆನೆ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ರೇವಣ್ಣ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಶ್ವರಪ್ಪ ಮಹಾನ್ ಪೆದ್ದ, ಆತ ಮೆದುಳಿಲ್ಲದ ಮನುಷ್ಯ: ಸಿದ್ದರಾಮಯ್ಯ

    ಈಶ್ವರಪ್ಪ ಮಹಾನ್ ಪೆದ್ದ, ಆತ ಮೆದುಳಿಲ್ಲದ ಮನುಷ್ಯ: ಸಿದ್ದರಾಮಯ್ಯ

    ಗದಗ: ಸಿದ್ದರಾಮಯ್ಯ ಭಂಡ ರಾಜಕಾರಣಿ ಎಂದು ಕೆ.ಎಸ್ ಈಶ್ವರಪ್ಪ ಶನಿವಾರ ಟೀಕಿಸಿರುವ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ತೀರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಭಂಡ ರಾಜಕಾರಣಿ, ಸ್ವಯಂ ಘೋಷಿತ ಅಹಿಂದ ನಾಯಕ ಎಂದು ಹೇಳ್ಕೊಂಡು ಓಡಾಡ್ತಾರೆ. ಇಂತವರನ್ನು ನಾನು ಕರ್ನಾಟಕದಲ್ಲಿ ಮೊದಲೆಲ್ಲೂ ನೋಡಿಲ್ಲ ಎಂದು ಈಶ್ವರಪ್ಪ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪ ಒಬ್ಬ ಮಹಾನ್ ಪೆದ್ದ, ಆತ ಮೆದುಳಿಲ್ಲದ ಮನುಷ್ಯ. ಅಹಿಂದ ಎನ್ನುವುದಕ್ಕೆ ಯಾವುದಾದರು ಯುನಿವರ್ಸಿಟಿ ಸರ್ಟಿಫಿಕೇಟ್ ಕೊಟ್ಟಿದಿಯಾ? ಎಂದು ತಿರುಗೇಟು ನೀಡಿದ್ದಾರೆ.

    ಆ ಬಳಿಕ ಬಿಜೆಪಿ ವರ್ಚಸ್ ಕಡಿಮೆ ಮಾಡಲು ಕಾಂಗ್ರೆಸ್ ತಂತ್ರ ಮಾಡುತ್ತಿದೆ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯರವರು, ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇಲ್ಲ, ಯಾಕೆಂದ್ರೆ ಅವರು ಜನಾರ್ದನ ರೆಡ್ಡಿಗೂ ಬಿಜೆಪಿಗೆ ಸಂಬಂಧವಿಲ್ಲ ಅಂತಾ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಯಲ್ಲೇ ಇಲ್ಲ ಅಂದ್ಮೇಲೆ ಬಿಜೆಪಿ ಮಾತು ರೆಡ್ಡಿಗ್ಯಾಕೆ? ಎಂದು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇವೆ. ನಂತರ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಉಪಚುನಾವಣೆಯಲ್ಲಿ ಸೋತಿದ್ದು ಯಾಕೆ? ಈಶ್ವರಪ್ಪ ಹೇಳಿದ್ದು ಹೀಗೆ

    ಉಪಚುನಾವಣೆಯಲ್ಲಿ ಸೋತಿದ್ದು ಯಾಕೆ? ಈಶ್ವರಪ್ಪ ಹೇಳಿದ್ದು ಹೀಗೆ

    ಕಲಬುರಗಿ: ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮ್ಮಿಶ್ರ ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬುದನ್ನು ತೋರಿಸಲಿ ಎಂದು ದೋಸ್ತಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಹಿಂದುಳಿದವರು, ದಲಿತರನ್ನು ಅಭಿವೃದ್ಧಿ ಮಾಡುತ್ತಿರುವುದು ಬಿಜೆಪಿಯವರು. ಆದ್ರೆ ಎಲ್ಲೋ ಒಂದು ಕಡೆ ನಾವು ಸಂಘಟನೆಯನ್ನ ಮರೆತ್ವಿ, ಸ್ವಲ್ಪ ಅತಿಯಾದ ಆತ್ಮವಿಶ್ವಾಸ ಇದ್ದಿದ್ದಕ್ಕೆ ಈ ಬಾರಿ ನಮಗೆ ಉಪಚುನಾವಣೆಯಲ್ಲಿ ಹಿನ್ನೆಡೆ ಆಗಿದೆ. ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆದಿದ್ದು ಕೇವಲ 1 ಸೀಟು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ 104 ಗೆದ್ದ ಸೀಟಿನಿಂದ 78ಕ್ಕೆ ಇಳಿದಿದೆ. ಅಧಿಕಾರ ಕಳೆದುಕೊಂಡ್ರು ನಂದೆ ಸರ್ಕಾರ ಮುಂದೆ ನಾನೇ ಮುಖ್ಯಮಂತ್ರಿ ಎಂಬ ರೀತಿ ಸಿದ್ದರಾಮಯ್ಯ ಇದ್ದಾರೆ. ಚಾಮುಂಡಿಯಲ್ಲಿ ಸೋತು ಅಧಿಕಾರ ಕಳಕೊಂಡ್ರು ಕಾಂಗ್ರೆಸ್‍ಗೆ ಬುದ್ಧಿ ಬಂದಿಲ್ಲ. ಟಿಪ್ಪು ಜಯಂತಿ ಜಾರಿ ತಂದ ಮೂಲಪುರುಷ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡ್ರು, ಹೀಗಾಗಿ ಇಂದು ಹೆಚ್.ಡಿ.ಕುಮಾರಸ್ವಾಮಿ, ಕೆ.ಜೆ.ಜಾರ್ಜ್, ಸಾ.ರಾ.ಮಹೇಶ್ ಸೇರಿದಂತೆ ಹಲವರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಗೆದ್ದಿದೆ ಅವರಿಗೆ ಅಭಿನಂದನೆ ಸಲ್ಲಿಸ್ತಿನಿ, ಗೆದ್ದೆ ಎಂದು ಮೈಮರೆತು ಜನರನ್ನ ಮರಿಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.

    ದೋಸ್ತಿ ಸರ್ಕಾರ ಬರಗಾಲ ಕಾಮಗಾರಿಗೆ ಎಷ್ಟು ಹಣ ಬಿಡುಗಡೆ ಮಾಡಿದೆ? ಕಳಸಾ ಬಂಡೂರಿ ವಿವಾದ ವಿಚಾರವಾಗಿ ಸಮ್ಮಿಶ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಏನು ಅಂತ ಮೂರು ತಿಂಗಳು ಕಾದು ನೋಡಿ ನಿಮಗೆ ತಿಳಿಯುತ್ತೆ. ಬಿಜೆಪಿ ಸೋಲು ಗೆಲುವು ಯಾವ ವ್ಯಕ್ತಿ ಮೇಲೆಯೂ ನಿಂತಿಲ್ಲ, ಕಾರ್ಯಕರ್ತರ ಪರಿಶ್ರಮ ಹಾಗೂ ನಾಯಕರ ಸಲಹೆ ಮೇಲೆ ನಿರ್ಧಾರವಾಗುತ್ತೆ. ಮುಂದಿನ ಲೋಕಸಭಾ ಚುನಾವಣೆಗೆ ಅಮಿತ್ ಷಾ ಅವರ ಮಾರ್ಗದರ್ಶನ ಇದೆ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡ್ತೀವಿ. ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಆದ್ರೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 24 ಸೀಟನ್ನಾದ್ರು ಗೆಲ್ತೀವಿ ಎಂದು ತಿಳಿಸಿದ್ದಾರೆ.

    ಜನಾರ್ದನ ರೆಡ್ಡಿ ಅವರ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ, ಅವರ ಬಗ್ಗೆ ನನಗೆ ಗೊತ್ತಿಲ್ಲ. ಯಾವ ವ್ಯಕ್ತಿಗಳ ಮೇಲೆಯೂ ಬಿಜೆಪಿ ನಿಂತಿಲ್ಲ. ಈಗ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದಲ್ಲಿ ಇಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯೆಸಿದ್ದಾರೆ.

    ನಾನು ಹಿಂದೂ ವಿಚಾರಕರ್ತನೇ ಹೊರತು ಹಿಂದೂ ನಾಯಕ ಅಲ್ಲ. ಜಾತಿ, ಕೋಮು ಗಲಭೆಗಳಿಗೆ ಬೆಂಬಲ ಕೊಡ್ತಿರೋದು ಕಾಂಗ್ರೆಸ್ ನಾಯಕರು ಬಿಜೆಪಿ ಅಲ್ಲ. ಮಣ್ಣಿನ ಮಗ ನಾನು ಎಂದು ದೇವೇಗೌಡ್ರು ಹೇಳ್ತಾರೆ, ಅಹಿಂದ ನಾಯಕ ನಾನು ಅಂತಾ ಸಿದ್ದರಾಮಯ್ಯ ಸ್ವಯಂಘೋಷಣೆ ಮಾಡಕೊಂಡು ಓಡಾಡುತ್ತಾರೆ. ಹಾಗಾದ್ರೆ ನಾವೇನು ಕಲ್ಲಿನ ಮಕ್ಕಳಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಒಂದು ಕಾಲದಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಗುರು ಶಿಷ್ಯರು. ಆಮೇಲೆ ವೈರಿಗಳಾದರು ಈಗ ಮತ್ತೆ ಇಬ್ಬರು ಒಟ್ಟಾಗಿದ್ದಾರೆ ಎಂದು ಈಶ್ವರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಧಿಕಾರದ ಕುರ್ಚಿ ಕಳೆದುಕೊಂಡ್ರು ಸಿದ್ದರಾಮಯ್ಯರಿಗೆ ಬುದ್ಧಿ ಬಂದಿಲ್ಲ: ಕೆ.ಎಸ್.ಈಶ್ವರಪ್ಪ

    ಅಧಿಕಾರದ ಕುರ್ಚಿ ಕಳೆದುಕೊಂಡ್ರು ಸಿದ್ದರಾಮಯ್ಯರಿಗೆ ಬುದ್ಧಿ ಬಂದಿಲ್ಲ: ಕೆ.ಎಸ್.ಈಶ್ವರಪ್ಪ

    ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಟಿಪ್ಪು ಸುಲ್ತಾನ್‍ಗೆ ಹೋಲಿಸಿ ಟ್ವೀಟ್ ಮಾಡಿರುವ ಹಿನ್ನೆಲೆ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿಚನ್ನಮ್ಮನನ್ನ ಟಿಪ್ಪು ಸುಲ್ತಾನ್‍ಗೆ ಹೋಲಿಸುವ ದುಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಧಿಕಾರದ ಕುರ್ಚಿ ಕಳೆದುಕೊಂಡ್ರು ಇವರಿಗೆ ಬುದ್ಧಿ ಬಂದಿಲ್ಲ. ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ ರಾಷ್ಟ್ರ ಭಕ್ತರನ್ನ ಕೊಲೆ ಮಾಡಲಿಲ್ಲ. ಸ್ವಾತಂತ್ರ್ಯಕ್ಕೊಸ್ಕರ ಬ್ರಿಟಿಷರ ವಿರುದ್ಧ ಹೋರಾಡಿ ರಾಷ್ಟ್ರ ದ್ರೋಹಿಗಳನ್ನ ಕೊಂದ್ರು. ಇಂತಹ ಮಹಾನ್ ವ್ಯಕ್ತಿಗಳಿಗೆ ಟಿಪ್ಪುವನ್ನು ಹೋಲಿಸ್ತಾರೆ ಅಂದ್ರೆ ಕಾಂಗ್ರೆಸ್ ದುಸ್ಥಿತಿ ಎಲ್ಲಿಗೆ ಬಂತು? ಎಂದು ಈಶ್ವರಪ್ಪ ಗರಂ ಆದರು.

    ಸಿದ್ದರಾಮಯ್ಯ ಭಂಡ ರಾಜಕಾರಣಿ, ಇಂತವರನ್ನು ಕರ್ನಾಟಕದಲ್ಲಿ ನೋಡಿಯೇ ಇಲ್ಲ. ಸುಮಾರು 39 ಮಠಗಳಿಗೆ 95 ಕೋಟಿ ರೂ ಅನುಧಾನ ನೀಡಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕಿದೆ. ಆದ್ರೆ ಯಾವ ಮಠಕ್ಕೆ ಕಾಂಗ್ರೆಸ್ ಸರ್ಕಾರ ಎಷ್ಟು ಕೊಟ್ಟಿದೆ ಎಂದು ಸಿದ್ದರಾಮಯ್ಯರಿಗೆ ಕೇಳಿ? ಸ್ವಯಂ ಘೋಷಿತ ಹಿಂದುಳಿದ ನಾಯಕ, ದಲಿತ ನಾಯಕ, ಅಹಿಂದ ನಾಯಕ ಅಂತಾ ಅವರೇ ಹೇಳ್ಕೊಂಡು ತಿರುಗುತ್ತಾರೆ. ಈಗಾಗಲೇ ಚಾಮುಂಡಿಯಲ್ಲಿ ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ರು. ಇನ್ನೂ ಬಾದಾಮಿ ಜನರಿಗೆ ಸಿದ್ದರಾಮಯ್ಯ ಹಣೆಬರಹ ಗೊತ್ತಿಲ್ಲ, ಮುಂದೆ ಗೊತ್ತಾಗುತ್ತೆ ಆಗ ಅಲ್ಲಿಂದನೂ ಓಡಿಸ್ತಾರೆ ಎಂದು ಟೀಕಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews