Tag: Siddaramaiha

  • ಸಿಎಂ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸಲ್ಲ – ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ

    ಸಿಎಂ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸಲ್ಲ – ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ

    – ಸಿದ್ದರಾಮಯ್ಯ ಹುಲಿಯಾ ಅಲ್ಲ ಕರಿಯಾ ಎಂದ ಎಂಎಲ್‌ಸಿ

    ಬೆಂಗಳೂರು: ದಲಿತರ ವಿರುದ್ಧ ಕಾಂಗ್ರೆಸ್ (Congress) ಪಕ್ಷದ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್‌ನ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಒತ್ತಾಯಿಸಿದರು.

    ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಇಂದು ನಡೆದ ಬಿಜೆಪಿಯ (BJP) ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ದಲಿತ ಮುಖಂಡರಿಗೂ ಧಿಕ್ಕಾರವಿರಲಿ. ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ಇದನ್ನೂ ಓದಿ :ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ತೊಲಗಲಿ: ಅಶ್ವತ್ಥನಾರಾಯಣ್ 

    ನಾನು ಹಿಂದುಳಿದ ವರ್ಗದ ನಾಯಕ. ಆದ್ದರಿಂದಲೇ ನನಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಈ ದೇಶದ ಪ್ರಧಾನಮಂತ್ರಿ ಯಾರು? ಅವರು ಕೂಡ ಹಿಂದುಳಿದವರು. ಅವರು ನಿಮ್ಮ ಥರ ಕರಿ ಕಾಗೆ ಅಲ್ಲ. ಸಿದ್ದರಾಮಯ್ಯ(CM Siddaramaiah) ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ಪ್ರಕಟಿಸಿದ ಅವರು, ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಾವು ವಿರಮಿಸುವುದಿಲ್ಲ. ನಾವು ಹೋರಾಟದಿಂದ ವಿರಮಿಸುವುದಿಲ್ಲ ಎಂದರು.  ಇದನ್ನೂ ಓದಿ : ಡಿ.ಕೆ ಶಿವಕುಮಾರ್‌ಗೆ ನಾಡಿನ ಜನ ಪಾಠ ಕಲಿಸೋ ದಿನ ದೂರವಿಲ್ಲ: ಜೆಡಿಎಸ್

    ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ?
    ಸರ್ಕಾರಿ ಜಮೀನನ್ನು ನೀವು ಖರೀದಿಸಿದ್ದೀರಲ್ಲವೇ? ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿದರು. ಇದನ್ನೂ ಓದಿ : ಸಿದ್ದರಾಮಯ್ಯ ಅಲ್ಲ, ಮೊದಲು ನನ್ನನ್ನ ಫೇಸ್ ಮಾಡಿ – ಹೆಚ್‌ಡಿಕೆಗೆ ಜಮೀರ್‌ ಸವಾಲ್

    ನಿಮ್ಮ ಮಂಡೆಯಲ್ಲಿ ಬುದ್ಧಿ ಇಲ್ಲ. ಹುಲಿಯಾ ಎಂದಾಗ ಖುಷಿ ಪಡುತ್ತಿದ್ದ ನೀವೀಗ ಕರಿಯಾ ಆಗಿ ಕೂತಿದ್ದೀರಲ್ಲಾ ಎಂದು ಕೇಳಿದರು. ಎಷ್ಟು ವೈಟ್ನರ್ ಹಾಕಿದ್ರೂ ಬಿಳಿ ಆಗೋದಿಲ್ಲ ಮಾರಾಯರೇ. ದಯವಿಟ್ಟು ರಾಜೀನಾಮೆ ಕೊಟ್ಟು ಹೋಗಿಬಿಡಿ ಎಂದರು. ಇದನ್ನೂ ಓದಿ : ದಲಿತರ ಬಗ್ಗೆ ಮಾತಾಡೋ ನೈತಿಕತೆ ಬಿಜೆಪಿಯವರಿಗೆ ಇಲ್ಲ – ಸಿದ್ದರಾಮಯ್ಯ

  • ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ

    ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ

    – ಸಿಎಂ ಪತ್ನಿ ಗೌರಮ್ಮ ರೀತಿ ಇದ್ದವರು; ಅವರ ಮೇಲೆ ಆಪಾದನೆ ಬಾರದಿರಲಿ
    – ಸಿದ್ದರಾಮಯ್ಯ ಪರ ಈಶ್ವರಪ್ಪ ಬ್ಯಾಟಿಂಗ್

    ಶಿವಮೊಗ್ಗ: ಸಿದ್ದರಾಮಯ್ಯ (Siddaramaiha) ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ( K S Eshwarappa) ಹೇಳಿಕೆ ನೀಡಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು ಎಂದು ಹೇಳಿದರು.  ಇದನ್ನೂ ಓದಿ : ಧೈರ್ಯವಾಗಿರಿ, ನಿಮ್ಮ ಜೊತೆ ನಾವಿದ್ದೇವೆ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್

    ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ಅವರು ಕೂಡ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ. ಆದರೆ ಅವರ ಶ್ರೀಮತಿಯವರನ್ನು ಎಲ್ಲಿ ಇದರಲ್ಲಿ ಸೇರಿಸಿಬಿಡುತ್ತಾರೋ ಎಂಬ ಅನುಮಾನವಿದೆ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬಾರದೇ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ : ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?

  • ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ: ಯತ್ನಾಳ್

    ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ: ಯತ್ನಾಳ್

    ವಿಜಯಪುರ: ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ. ಇಬ್ಬರ ಮಧ್ಯೆ ಒಪ್ಪಂದದ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ. ಒಬ್ಬೊಬ್ಬರೇ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ನಾವೆಲ್ಲರು ನಿರ್ಧರಿಸಿದ್ದೇವೆ. ಏನೇ ಇದ್ದರು ಎಲ್ಲರೂ ಸೇರಿ ಮಾತುಕತೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ( Basanagouda Patil Yatnal ) ಹೇಳಿದ್ದಾರೆ.

    ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಡಿಕೆಶಿಯವರು ವಿಜಯೇಂದ್ರ ಶಾಸಕನಾಗಿ ಅಯ್ಕೆ ಆಗಲು ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಈ ಹೊಂದಾಣಿಕೆ ಬಗ್ಗೆ ನಾನು ಮುಂಚೆಯೇ ಹೇಳಿದ್ದೇನೆ. ಈಗ ಡಿಕೆಶಿ (DK Shivakumar) ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಹೊಂದಾಣಿಕೆಗಾರರ ಜೊತೆ ನನ್ನ ಹೊಂದಾಣಿಕೆ ಇಲ್ಲ. ಸಂಘದವರು, ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿದರೆ ಅವರ ಜೊತೆ ಮಾತುಕತೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಬ್ರೂಸ್ಲಿ ಅಭಿಮಾನಿಯ ಸಾಹಸ – ಹಲ್ಲಿನಿಂದ 1 ಟನ್ ತೂಕದ ಕಾರು ಎಳೆದ ಯುವಕ

    ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದಕ್ಕೆ ಪಾಟೀಲ ಅವರು ಬರುವವರಿದ್ದರು. ಅವರಿಗೆ ಡೆಂಗ್ಯೂ ಬಂದ ಕಾರಣ ಬರಲಿಲ್ಲ.  ಇನ್ನು ಹಲವರು ಬರುವವರಿದ್ದಾರೆ, ಮುಂದಿನ ದಿನಗಳಲ್ಲಿ ಯಾರೆಲ್ಲಾ ಬರುತ್ತಾರೆ ನೋಡಿ ಎಂದರು. ನಮ್ಮ ಬಿಜೆಪಿಯವರು ನಿಷ್ಠಾವಂತರು. ಇದು ಬಿಜೆಪಿ(BJP) ಬಂಡಾಯ ಎಂದು ಮಾಧ್ಯಮದವರು ಸುದ್ದಿ ಮಾಡಬೇಡಿ. ಕೈ ಮುಗಿದು ಹೇಳುತಿದ್ದೇನೆ ಎಂದರು. ಇದನ್ನೂ ಓದಿ:  12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ

    ಹೈಕಮಾಂಡ್ ಅನುಮತಿ ಪಡೆದು ನಾವು ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ(BJP) ಸಂವಿಧಾನ ವಿರೋಧಿ ಇದೆ, ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ. ಮೀಸಲಾತಿ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದಾರೆ. ಇದರಿಂದ ನಮಗೆ 240 ಸೀಟ್‌ಗಳು ಬಂದಿವೆ. ಜನರ ಮನಸ್ಸಲ್ಲಿ ಇರುವ ತಪ್ಪು ಭಾವನೆಯನ್ನು ಹೋಗಲಾಡಿಸಲು ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್‌

    ಸಿಎಂ ಸಿದ್ದರಾಮಯ್ಯ(CM Siddaramaiha) ಅವರು 187 ಕೋಟಿ ರೂ. ಅಲ್ಲ 82 ಕೋಟಿ ರೂ. ಮಾತ್ರ ಭ್ರಷ್ಟಾಚಾರ ಆಗಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. 82 ಕೋಟಿ ರೂ. ಅದು ದಲಿತರ ಹಣ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಆನೇಕಲ್‍ನಲ್ಲಿ ವಿದ್ಯುತ್ ಶಾಕ್‍ಗೆ ಯುವ ಇಂಜಿನಿಯರ್ ಬಲಿ

    ಸಿಎಂ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನ ದೋಚಿದ್ದಾರೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ದಲಿತರಿಗೆ, ಹಿಂದುಳಿದವರಿಗೆ ಸೇರಿದ ಹಣವನ್ನ ಸದುಪಯೋಗ ಮಾಡಿತ್ತೇ? ಇದರೆಲ್ಲದರ ಬಗ್ಗೆ ಪಾದಯಾತ್ರೆ ಮಾಡಿ ಜನರಿಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತೇವೆ. ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಇದಕ್ಕೆ ಯಾರು ಬೇಕಾದರೂ ಬರಬಹುದು ಎಂದರು. ಇದನ್ನೂ ಓದಿ:  ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ರೊಚ್ಚಿಗೆದ್ದ ಪ್ರತಿಭಟನಾಕಾರರು – ಆಸ್ಪತ್ರೆಗೆ ನುಗ್ಗಿ ದಾಂಧಲೆ

    ದೇವೇಗೌಡರ ಪತ್ನಿ ಹೆಸರಲ್ಲಿ ಕೆರೆ ಒತ್ತುವರಿ ವಿಚಾರ 1974 ರಲ್ಲಿ ನಡೆದಿದೆ. ಆದರೆ ಈಗ ಅದು ಹೊರಬಂದಿದೆ. ಇಷ್ಟು ದಿನ ಏನು ಮಾಡುತ್ತಿದ್ದರು? ಯಡ್ಡಿಯೂರಪ್ಪ (Yediyurappa) ಸರ್ಕಾರ ಇತ್ತು, ಕಾಂಗ್ರೆಸ್ ಸರ್ಕಾರ ಇತ್ತು ಆಗ ಯಾಕೆ ಇದನ್ನ ತನಿಖೆ ಮಾಡಿಸಲಿಲ್ಲ? ತನಿಖೆ ಮಾಡಿಸಿ ತಪ್ಪಿದ್ದರೆ ಶಿಕ್ಷೆ ಕೊಡಬೇಕಿತ್ತು. ಆಗ ಸುಮ್ಮನಿದ್ದು ಈಗ ಸಿಎಂ ವಿಚಾರ ಹೊರ ಬಂತು ಎಂದು ಇದನೆಲ್ಲ ಬಹಿರಂಗ ಮಾಡುತ್ತಿದ್ದಾರೆ. ಅವರ ತಪ್ಪುಗಳನ್ನು ಇವರು ಮುಚ್ಚುವುದು, ಇವರ ತಪ್ಪುಗಳನ್ನು ಅವರು ಮುಚ್ಚುವುದು. ಎಲ್ಲರೂ ಇದೆ ರೀತಿ ಹೊಂದಾಣಿಕೆ ಮಾಡುತ್ತಾ ಬಂದಿದ್ದಾರೆ. ಇದೇ ಹೊಂದಾಣಿಕೆ ಎಂದು ನಾನು ಹೇಳುತ್ತಿರುವುದು ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ

  • ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

    ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ. ಅದರ ನಡುವೆ ನಮ್ಮ ಹಿರಿಯರು ನಮ್ಮತನವನ್ನು ಉಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು.

    78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಮೊದಲು ಕಿಚ್ಚು ಹಚ್ಚಿದ್ದೆ ಕರ್ನಾಟಕ. ನೂರು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮ ಗಾಂಧಿ (Mahatma Gandhi) ಕರ್ನಾಟಕದಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ಈ ದಿನವನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಾತನಾಡಿದರು. ಇದನ್ನು ಓದಿ : ಸ್ವಾತಂತ್ರ್ಯ ದಿನದ ಸಂಭ್ರಮ – ದೇಶಭಕ್ತಿ ಮೆರೆದ ಟೀಂ ಇಂಡಿಯಾ ಸ್ಟಾರ್ಸ್‌!

    ಸ್ವಾತಂತ್ರ್ಯ ಎಂದರೆ ಇತಿಹಾಸ ನೆನಪಿಸುವ ದಿನ. ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಇದ್ದೆವು, ಈಗ ಹೇಗೆ ಇದ್ದೇವೆ ಎಂದು ಅವಲೋಕನ ಮಾಡುವ ದಿನ. ಸ್ವಾತಂತ್ರ್ಯ ಎಂದರೆ ಬೆಲೆಕಟ್ಟಿ ಪಡೆಯುವ ವಸ್ತುವಲ್ಲ. ಅದು ನಮ್ಮ ಉಸಿರು. ಇದನ್ನು ಮಹಾತ್ಮ ಗಾಂಧಿ ಹೇಳಿದ್ದಾರೆ ಎಂದರು. ಇದನ್ನು ಓದಿ : ರಾಜ್ಯಪಾಲರಿಂದ ಧ್ವಜಾರೋಹಣ – ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗ್ತಿದೆ: ಗೆಹ್ಲೋಟ್

    ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಇದು. ಈ ಪಕ್ಷದಲ್ಲಿ ಇದ್ದೇವೆ ಅನ್ನುವುದೇ ಹೆಮ್ಮೆಯ ವಿಚಾರ. ನೆಹರೂ (Jawaharlal Nehru), ವಲ್ಲಭಭಾಯಿ ಪಟೇಲ್ (Sardar Vallabhbhai Patel) ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂಬ ಸುಳ್ಳು ಸುದ್ದಿ ಗಮನಿಸಿದ್ದೇವೆ. 6.5 ಲಕ್ಷ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಇದನ್ನು ಓದಿ : ತುಂಗಭದ್ರಾ ಜಲಾಶಯದಲ್ಲಿ ಭರದಿಂದ ಸಾಗಿದ ಗೇಟ್ ಅಳವಡಿಕೆ ಕಾರ್ಯ

    ವರ್ಷಪೂರ್ತಿ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದೇವೆ. ಅದಕ್ಕಾಗಿ ಒಂದು ಕಮಿಟಿ ರಚಿಸಿದ್ದೇವೆ. ಸಾರ್ವಜನಿಕ ವಲಯ ಕಟ್ಟಿ ಬೆಳಸಿದ್ದು ಕಾಂಗ್ರೆಸ್ ಪಕ್ಷ. ಅಂದು ಬ್ರಿಟಿಷರ ಪರ ನಿಂತಿದ್ದವರನ್ನು ತಿರಸ್ಕಾರ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಲು ಶ್ಯಾಮ್ ಪ್ರಸಾದ್ ಮುಖರ್ಜಿ ಪತ್ರ ಬರೆದಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು. ಇದನ್ನು ಓದಿ : ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ತ್ವರಿತ ತನಿಖೆ, ಶಿಕ್ಷೆಯ ಅಗತ್ಯವಿದೆ: ಮೋದಿ

    ಗ್ಯಾರಂಟಿ ನಿಲ್ಲಿಸುವ ಮಾತೇ ಇಲ್ಲ: ಸಿಎಂ
    ಯಾವ ಕಾರಣಕ್ಕೂ ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಸಿಎಂ ಸಿದ್ದರಾಮಯ್ಯ(CM Siddaramaiha) ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು. ಐದು ಗ್ಯಾರಂಟಿಗಳನ್ನು ರಾಜ್ಯಕ್ಕೆ ಕೊಟ್ಟು ದೇಶಕ್ಕೆ ಮಾದರಿಯಾಗಿದ್ದೇವೆ. ಭಾವನೆಯ ಬದುಕು ಬಿಟ್ಟು ಹಸಿವು ಮುಕ್ತ ರಾಜ್ಯವಾಗಬೇಕು ಎಂಬುದು ನಮ್ಮ ಆಶಯ. ಎಲ್ಲ ವರ್ಗದ ಜನರು ಬದುಕಬೇಕು ಎಂದರು. ಇದನ್ನು ಓದಿ : ಹಾಸನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ – 2,500 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ

  • ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

    ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

    ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ನೇರ ಕಾಣರಾದ್ದರಿಂದ ಅವರನ್ನು ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಈಶ್ವರಪ್ಪ ಅವರೇ ಸಾವಿಗೆ ಕಾರಣ ಎಂದು ನೇರ ಆರೋಪ ಮಾಡಿರುವ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈಶ್ವರಪ್ಪ ಅವರ ವಿರುದ್ಧ ಸೆಕ್ಷನ್ 302 ರಡಿ ಕೇಸ್ ದಾಖಲಿಸಬೇಕು ಮತ್ತು ತಕ್ಷಣ ಈಶ್ವರಪ್ಪ ಅವರನ್ನು ಬಂಧಿಸಬೇಕು. ಈ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

    ಕೊಲೆ ಆರೋಪ ಎದುರಿಸುತ್ತಿರುವ ಈಶ್ವರಪ್ಪ ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಕಾಶ ನೀಡಬಾರದು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದು, ಆದ್ದರಿಂದ ಇದೊಂದು ಗಂಭೀರ ಪ್ರಕರಣವಾಗಿದೆ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    ಅಷ್ಟೇ ಅಲ್ಲದೇ ಇದೊಂದು ಭ್ರಷ್ಟಾಚಾರ ಪ್ರಕರಣವೂ ಆಗಿದೆ. ಸಂತೋಷ್ ಪಾಟೀಲ್ ಅವರು ಈಗಾಗಲೇ ಈಶ್ವರಪ್ಪ ಅವರಿಗೆ ಕಮಿಷನ್ ನೀಡಿದ್ದರು. ಗುತ್ತಿಗೆ ಕಾಮಗಾರಿಯ ಬಾಕಿ ಅನುದಾನ ಬಿಡುಗಡೆ ಮಾಡಲು ಸಚಿವರು ಹೆಚ್ಚಿನ ಕಮಿಷನ್‍ಗೆ ಬೇಡಿಕೆ ಇಟ್ಟಿದ್ದಾರೆ. ಆತನಿಗೆ ಈ ಹಣ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಿದರು.

    ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಆತ್ಮಹತ್ಯೆಗೆ ಶರಣಾಗುವ ಮುನ್ನ ಆತ ಈಶ್ವರಪ್ಪ ಅವರೇ ನನ್ನ ಸಾವಿಗೆ ನೇರ ಕಾರಣ ಎಂದು ಆರೋಪ ಮಾಡಿರುವುದರಿಂದ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವರ್ಕ್‌ ಆರ್ಡರ್‌ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್‌ – ಆತ್ಮಹತ್ಯೆಗೆ ಕಾರಣ ಏನು?

    ಈಗ ಈಶ್ವರಪ್ಪ ಅವರು ಏನು ಪ್ರತಿಕ್ರಿಯೆ ಕೊಡುತ್ತಾರೆ ಎನ್ನುವುದು ಮುಖ್ಯವಲ್ಲ, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮಾಡಿರುವ ಆರೋಪ ಮುಖ್ಯ. ಹಾಗಾಗಿ ಈಶ್ವರಪ್ಪ ಅವರ ಮೇಲೆ ಸೆಕ್ಷನ್ 302 ರಡಿ ಕೊಲೆ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು. ಸಂಪುಟದಿಂದ ವಜಾಗೊಳಿಸಿ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಇವ್ಯಾವುದನ್ನು ಅವರು ಮಾಡಿಲ್ಲ. ಈ ಬಗ್ಗೆ ನಾವು ಧ್ವನಿ ಎತ್ತುತ್ತೇವೆ. ಈಶ್ವರಪ್ಪ ಹೇಳಿಕೆಗೆ ನಾವು ಮಹತ್ವ ನೀಡಲ್ಲ, ಅವರೊಬ್ಬ ಕೊಲೆ ಆರೋಪ ಹೊತ್ತಿರುವ ವ್ಯಕ್ತಿ, ಅವರು ಎಷ್ಟು ದೊಡ್ಡ ಭ್ರಷ್ಟ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.