Tag: siddaramaiah budget 2023

  • Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

    Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ದಾಖಲೆಯ 15ನೇ ಬಜೆಟ್‌ ಮಂಡಿಸುತ್ತಿದ್ದು, ರಾಜ್ಯದಲ್ಲಿರುವ ಪುರಾತನ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

    ಇಂದು (ಶುಕ್ರವಾರ) ಬೆಳಗ್ಗೆ 10:15 ರಿಂದ ಬಜೆಟ್‌ (Siddaramaiah Budget) ಮಂಡಿಸಲಿದ್ದಾರೆ. ಬಜೆಟ್‌ ಗಾತ್ರ 3.75 ಲಕ್ಷ ಕೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎನ್ನಲಾಗಿದೆ. ಬಜೆಟ್‌ ಮಂಡನೆಗೂ ಮುನ್ನ ಬೆಳಗ್ಗೆ 9:30ಕ್ಕೆ ಸಚಿವ ಸಂಪುಟ ಸಭೆಯನ್ನೂ ಸಿಎಂ ಕರೆದಿದ್ದಾರೆ.

    ಈ ಬಾರಿ ರಾಜ್ಯದಲ್ಲಿ ತೆರಿಗೆ ಬರೆ ಇಲ್ಲದೇ ಬಜೆಟ್‌ ಮಂಡನೆ ಮಾಡುತ್ತಾರಾ? ಜನಪ್ರಿಯ ಯೋಜನೆ ಘೋಷಣೆ ಮಾಡದೇ ಕೇಂದ್ರ ಸರ್ಕಾರದ ಹಾದಿ ತುಳಿಯುತ್ತಾರಾ? ಅನ್ನೋ ಪ್ರಶ್ನೆಗಳ ನಡುವೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಈ ಬಾರಿ ರಾಮ ನಾಮ ಜಪ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ಸಿಗುತ್ತಾ? – ಸಿಎಂ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?

    ರಾಜ್ಯದ ಪುರಾತನ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಆಗುತ್ತಾ? ಅಯೋಧ್ಯೆಯಲ್ಲಿ ರಾಜ್ಯದ ವಸತಿ ಸಮುಚ್ಚಯ ನಿರ್ಮಾಣ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗುತ್ತಾ? ಕರ್ನಾಟಕದಲ್ಲಿ ಪುರಾತನ ರಾಮ ಮಂದಿರ ಪುನರು ಜ್ಜೀವನಕ್ಕೆ 100 ಕೋಟಿ ಮೀಸಲಿಡ್ತಾರಾ? ಅನ್ನೋದರ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ

    ಅಯೋಧ್ಯೆಯಲ್ಲಿ ರಾಜ್ಯದ ವಸತಿ ಸಂಕೀರ್ಣ ಕಟ್ಟಲು 100 ಕೋಟಿ ರೂ. ಮೀಸಲಿಡುತ್ತಾರೆ. ರಾಮ ರಾಜಕಾರಣದ ನಡುವೆ ಬಜೆಟ್‌ನಲ್ಲೇ ಘೋಷಿಸಿ ರಾಮ ಭಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಬಹುದು. ಶ್ರೀರಾಮನ ವಿಚಾರದಲ್ಲಿ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಬಜೆಟ್‌ನಲ್ಲಿ ಸಿಎಂ ಉತ್ತರ ಕೊಡುವ ಸಾಧ್ಯತೆ ಇದೆ. ರಾಮ ಎಲ್ಲೆಲ್ಲೂ ಇದ್ದಾನೆ ಎಂದಿದ್ದ ಸಿಎಂ ರಾಜ್ಯದ ರಾಮ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಅಯೋಧ್ಯೆಯಲ್ಲಿ ಕರ್ನಾಟಕದ ವಸತಿ ಕಟ್ಟಡಕ್ಕೆ ಈ ಬಾರಿಯ ಬಜೆಟ್‌ನಲ್ಲೇ ಅನುದಾನ ಘೋಷಿಸಲು ಸಹ ಸಿದ್ಧತೆ ನಡೆದಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

  • ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ

    ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ದಾಖಲೆಯ 15ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಈ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ನಡುವೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇದನ್ನೂ ಓದಿ: ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಬ್ರೇಕ್‌; ಆದೇಶ ವಾಪಸ್‌  

    ಬೆಳಗ್ಗೆ 10:15 ರಿಂದ ಬಜೆಟ್‌ ಮಂಡಿಸಲಿದ್ದಾರೆ. ಬಜೆಟ್‌ ಗಾತ್ರ 3.75 ಲಕ್ಷ ಜೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎನ್ನಲಾಗಿದೆ. ಈ ಬಾರಿ ರಾಜದಲ್ಲಿ ತೆರಿಗೆ ಬರೆ ಇಲ್ಲದೇ ಬಜೆಟ್‌ ಮಂಡನೆ ಮಾಡುತ್ತಾರಾ? ಜನಪ್ರಿಯ ಯೋಜನೆ ಘೋಷಣೆ ಮಾಡದೇ ಕೇಂದ್ರ ಸರ್ಕಾರದ ಹಾದಿ ತುಳಿಯುತ್ತಾರಾ? ಇಲ್ಲ ಲೋಕಸಭೆ ಚುನಾವಣೆಗಾಗಿ ಭರ್ಜರಿ ಕೊಡುಗೆಗಳನ್ನ ಕೊಟ್ಟು ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಾರಾ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ವರ್ಗಕ್ಕೆ ದೊಡ್ಡ ಗಿಫ್ಟ್ ಸಿಗಲಿದೆಯಾ? ಅನ್ನೋ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ಇದನ್ನೂ ಓದಿ: ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ

    ಸಿದ್ದರಾಮಯ್ಯ ಬಜೆಟ್ ಮೇಲೆ ಜನರ ನಿರೀಕ್ಷೆ!?

    * ತೆರಿಗೆ ಹೆಚ್ಚಳ ಮಾಡದೇ ಜನಪ್ರಿಯ ಯೋಜನೆಗಳ ನಿರೀಕ್ಷೆ
    * ಸರ್ಕಾರಿ ನೌಕರರಿಗೆ 7ನೇ ವೇತನ ಜಾರಿ ಬಗ್ಗೆ ಸರ್ಕಾರಿ ನೌಕರರಲ್ಲಿ ನಿರೀಕ್ಷೆ.
    * ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪನೆಗೆ ವಿಶೇಷ ಅನುದಾನ ಯೋಜನೆ. ಬಡ್ಡಿರಹಿತ ಸಾಲ ನೀಡುವ ಮೊತ್ತ ಹೆಚ್ಚಳ.
    * ಸಾಮಾಜಿಕ ಭದ್ರತೆಗಳ ಮಾಶಾನಸ ಹೆಚ್ಚಳ ಮಾಡುವ ನಿರೀಕ್ಷೆ.( ವೃದ್ಧಾಪ್ಯ ವೇತನ, ವಿಧವಾ ವೇತನ)
    * ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಳ. ಆರೋಗ್ಯ ವಿಮೆ ಯೋಜನೆ ಜಾರಿ ನಿರೀಕ್ಷೆ.
    * ಸ್ತ್ರೀ ಶಕ್ತಿ ಸಂಘಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬಹುದು.
    * ಶಕ್ತಿ ಯೋಜನೆಯಿಂದ ನಷ್ಟವಾಗಿರೋ ಆಟೋ ವಲಯ,ಖಾಸಗಿ ಬಸ್ ಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ.
    * ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ನಿರೀಕ್ಷೆ.
    * ಯುವ ಉದ್ಯಮಿಗಳಿಗೆ ಉದ್ಯಮ ಸ್ಥಾಪನೆಗೆ ವಿಶೇಷ ಯೋಜನೆ/ ಬಡ್ಡಿರಹಿತ ಸಾಲ ಸೌಲಭ್ಯ ಯೋಜನೆ ಘೋಷಣೆ.
    * ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯ ವೇತನ ಹೆಚ್ಚಳ ಮತ್ತು ಉಚಿತ ಬಸ್ ಪಾಸ್ ನೀಡುವುದು.
    * ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಸೇರಿ ನೀರಾವರಿ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ರೂ.ಮೀಸಲಿಡುವ ನಿರೀಕ್ಷೆ.
    * ವಸತಿ ರಹಿತ ಕುಟುಂಬಗಳಿಗೆ ಸರ್ಕಾರದಿಂದ ಕೊಡುವ ಮನೆಗಳ ಸಬ್ಸಿಡಿ ದರ ಹೆಚ್ಚಳ ನಿರೀಕ್ಷೆ.

  • Karnataka Budget 2023: ವಕ್ಫ್ ಆಸ್ತಿ ರಕ್ಷಣೆ, ಅಭಿವೃದ್ಧಿಗೆ 50 ಕೋಟಿ

    Karnataka Budget 2023: ವಕ್ಫ್ ಆಸ್ತಿ ರಕ್ಷಣೆ, ಅಭಿವೃದ್ಧಿಗೆ 50 ಕೋಟಿ

    ಬೆಂಗಳೂರು: ರಾಜ್ಯದಲ್ಲಿರುವ 40 ಸಾವಿರಕ್ಕೂ ಅಧಿಕ ವಕ್ಫ್ (Waqf Property) ಆಸ್ತಿಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ 50 ಕೋಟಿ ರೂ. ಹಣವನ್ನು ಸಿದ್ದರಾಮಯ್ಯ ಬಜೆಟ್‍ನಲ್ಲಿ (Karnataka Budget 2023) ಮೀಸಲಿಟ್ಟಿದ್ದಾರೆ.

    ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು (1 ರಿಂದ 8ನೇ ತರಗತಿಯವರೆಗೆ) ಕೇಂದ್ರ ಸರ್ಕಾರವು ಸ್ಥಗಿತಗೊಳಿಸಿರುತ್ತದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದನ್ನು ಮನಗಂಡು ಈ ಯೋಜನೆಯನ್ನು ಮುಂದುವರಿಸಲು 60 ಕೋಟಿ ರೂ. ಅನುದಾನವನ್ನು ಒದಗಿಸಲಿದೆ ಎಂದು ಸಿಎಂ ಹೇಳಿದರು.

    ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ ನೀಟ್, ಜೆಇಇ, ಸಿಇಟಿ ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ 2 ವರ್ಷಗಳ ತರಬೇತಿಯನ್ನು ನೀಡಲು 8 ಕೋಟಿ ರೂ. ಗಳ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಇದನ್ನೂ ಓದಿ: ಮತ್ತಷ್ಟು ದುಬಾರಿಯಾಗಲಿದೆ ಎಣ್ಣೆ – ಈಗ ಎಷ್ಟು ಸುಂಕವಿದೆ? ಎಷ್ಟು ಏರಿಕೆಯಾಗುತ್ತೆ?

    ಬೆಂಗಳೂರು ನಗರದಲ್ಲಿರುವ ಹಜ್ ಭವನದಲ್ಲಿ (Haj Bhavan) ಐಎಎಸ್ (IAS) ಹಾಗೂ ಕೆಎಎಸ್ (KAS) ಮತ್ತು ಇತರೆ ಸ್ಪರ್ದಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪ್ರಾರಂಭ ಮಾಡಲಾಗುವುದು. ವಿದೇಶದಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿಯಲ್ಲಿ 20 ಲಕ್ಷ ಸಾಲ ನೀಡಲಾಗುವುದಾಗಿ ಇದೇ ವೇಳೆ ತಿಳಿಸಿದರು.

    126 ಶಾದಿ ಮಹಲ್ (Shaadi Mahal) ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 54 ಕೋಟಿ ಮೀಸಲಿಡಲಾಗುವುದು. ಅಲ್ಪಸಂಖ್ಯಾತ 10 ಸಾವಿರ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸಲುವಾಗಿ 20% ರಷ್ಟು ಅಥವಾ ಗರಿಷ್ಠ 1 ಲಕ್ಷದವರೆಗೆ ಸಹಾಯಧನ ನೀಡಲಾಗುವುದು ಎಂದು ಸಿಎಂ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]