Tag: siddaramaia

  • ಪ್ರಿಯಾಂಕಾ ಗಾಂಧಿಗೆ ಗೃಹಬಂಧನ – ಸಿದ್ದರಾಮಯ್ಯ ಖಂಡನೆ

    ಪ್ರಿಯಾಂಕಾ ಗಾಂಧಿಗೆ ಗೃಹಬಂಧನ – ಸಿದ್ದರಾಮಯ್ಯ ಖಂಡನೆ

    – ಬಿಜೆಪಿ ವಿರುದ್ಧ ಮಾಜಿ ಸಿಎಂ ಕಿಡಿ

    ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರಪ್ರದೇಶದ ಪೊಲೀಸರು ಗೃಹಬಂಧನದಲ್ಲಿರಿಸಿದ್ದು, ಈ ವರ್ತನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶಧ ಹೊರಹಾಕಿರುವ ಸಿದ್ದರಾಮಯ್ಯ, ಇದು ಬಿಜೆಪಿಯ ತಾಲಿಬಾನಿ ಸಂಸ್ಕೃತಿ. ರೈತರ ಪರ ನಿಲ್ಲೋದನ್ನು ತಪ್ಪಿಸುವ ಪರಿ ಇದಾಗಿದ್ದು, ಪ್ರಜಾಪ್ರಭುತ್ವಕ್ಕೆ ಇದು ಕಪ್ಪುಚುಕ್ಕೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

    ಇದೇ ವೇಳೆ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣವನ್ನೂ ಖಂಡಿಸಿರುವ ಮಾಜಿ ಸಿಎಂ, ಮುಗ್ಧ ರೈತರ ಅವರ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಗ್ಧ ರೈತರ ಮೇಲೆ ಈ ರೀತಿ ಮಾಡಿದ್ದು ಸರಿಯಲ್ಲ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ಅಲ್ಲದೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಇಡೀ ದೇಶ ಗೂಂಡಾ ರಾಜ್ಯವಾಗಿ ಬದಲಾಗುತ್ತಿದೆ. ಬಿಜೆಪಿ ತಪ್ಪನ್ನು ಪ್ರಶ್ನೆ ಮಾಡುವಂತಾ ಹಕ್ಕೆ ಇಲ್ಲದಂತಾಗಿದೆ. ಇದು ಮೋದಿ ಆಡಳಿತದ ನಿರಂಕುಶ ಪ್ರಭುತ್ವವೇ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ

  • ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ? – ಸುಧಾಕರ್ ಗರಂ‌

    ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ? – ಸುಧಾಕರ್ ಗರಂ‌

    ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕೇವಲ ಸಿಡಿ ಬಗ್ಗೆ ಮಾತ್ರ ಚರ್ಚೆ ನಡೆಯಲಿಲ್ಲ. ಮಾನಹಾನಿ ಭಯದಲ್ಲಿ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದ ಆರು ಸಚಿವರ ವಿರುದ್ಧವೂ ಕಾಂಗ್ರೆಸ್ ಅಸ್ತ್ರ ಝಳಪಿಸಿತು.

    ಯಾವುದೇ ಆರೋಪಗಳು ಕೇಳಿಬರದೇ ಇದ್ದರೂ ಕೋರ್ಟ್‍ಗೆ ಹೋದ ಆರು ಸಚಿವರ ತಲೆದಂಡ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.

    ಆರು ಜನಕ್ಕೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳದವರು ಇನ್ನು ಜನರನ್ನು ಹೇಗೆ ರಕ್ಷಣೆ ಮಾಡಿಕೊಳ್ತಾರೆ? ಅವರು ಬೇಕಿದ್ರೆ ಸ್ಟೇ ತಂದುಕೊಳ್ಳಲಿ? ನನ್ನ ತಕರಾರಿಲ್ಲ. ಆದರೆ ಅವರು ತನಿಖೆ ಮುಗಿಯೋವರೆಗೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

    ಆರು ಜನ ಮಾತ್ರ ಏಕೆ ಕೋರ್ಟ್‍ಗೆ ಹೋಗಿದ್ದಾರೆ? ಗೋಪಾಲಯ್ಯ, ಬೊಮ್ಮಾಯಿ ಏಕೆ ಹೋಗಲಿಲ್ಲ. ಈಶ್ವರಪ್ಪ ಯಾಕೆ ಹೋಗಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಇದಕ್ಕೆ ಸಚಿವರಾದ ಶಿವರಾಂ ಹೆಬ್ಬಾರ್, ಸೋಮಶೇಖರ್, ನಾರಾಯಣಗೌಡ ಆಕ್ಷೇಪಿಸಿದರು. ನಾವು ಸರ್ಕಾರ ಉರುಳಿಸಿದ್ವಿ ಎಂಬ ಕಾರಣಕ್ಕೆ ನಮ್ಮ ವಿರುದ್ಧ ಷಡ್ಯಂತ್ರ್ಯ ನಡೆಯುತ್ತಿದೆ. ಹೀಗಾಗಿ ನಮ್ಮ ವಿರುದ್ಧ ಸುಳ್ಳು ಆಪಾದನೆಗಳು ಬರಬಾರದು ಎಂಬ ಕಾರಣಕ್ಕೆ ಕೋರ್ಟ್‍ಗೆ ಹೋಗಿದ್ದಾಗಿ ಸಮರ್ಥಿಸಿಕೊಂಡರು.

    ಪೊಲೀಸರ ಮೊರೆ ಏಕೆ ಹೋಗಲಿಲ್ಲ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ನಮ್ಮಿಷ್ಟ ಎಂದು ಹೆಬ್ಬಾರ್ ತಿರುಗೇಟು ನೀಡಿದರು. ಇದರಿಂದ ಗರಂ ಆದ ಸಿದ್ದರಾಮಯ್ಯ, ನೀವು ನಮ್ಮಿಷ್ಟ ಎಂದು ಹೇಳುವಂತಿಲ್ಲ. ನೀವು ಸಚಿವ ಸ್ಥಾನದಲ್ಲಿದ್ದೀರಿ. ಸ್ಪಷ್ಟನೆ ನೀಡಬೇಕು ಎಂದರು.

    ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಾತನಾಡಿ, ನಿಮಗೆ ಕೋರ್ಟ್‍ಗೆ ಹೋಗಲು ಸಲಹೆ ಕೊಟ್ಟಿದ್ಯಾರು? ಅವರು ಶುದ್ಧ ದಡ್ಡರು ಅಥವಾ ನಿಮ್ಮ ಏಳಿಗೆ ಸಹಿಸದವರು ಅಂತ ಕಿಚಾಯಿಸಿದರು. ಇದಕ್ಕೆ ಗರಂ ಆದ ಸೋಮಶೇಖರ್, ಇವ್ರೇನು ಸತ್ಯಹರಿಶ್ಚಂದ್ರರಾ ಎಂದು ವಾಗ್ದಾಳಿ ನಡೆಸಿದರು. ಸುಧಾಕರ್ ಸಿಟ್ಟಾಗಿ ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ ಎಂದು ಪ್ರಶ್ನಿಸಿ ಕಾಂಗ್ರೆಸ್‌ ಟೀಕೆಗೆ ತಿರುಗೇಟು ನೀಡಿದರು.

  • ಗಣ್ಯರ ಜಯಂತಿ ಹೆಸ್ರಲ್ಲಿ ಕೋಟ್ಯಂತರ ರೂ. ಗುಳುಂ- ಆರ್‌ಟಿಐ ಕಾರ್ಯಕರ್ತ ದೂರು

    ಗಣ್ಯರ ಜಯಂತಿ ಹೆಸ್ರಲ್ಲಿ ಕೋಟ್ಯಂತರ ರೂ. ಗುಳುಂ- ಆರ್‌ಟಿಐ ಕಾರ್ಯಕರ್ತ ದೂರು

    ಬೆಂಗಳೂರು: ಗಣ್ಯರ ಜಯಂತಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಬಗ್ಗೆ ಅರೋಪಿಸಿ, ಸೂಕ್ತ ತನಿಖೆ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

    ಆರ್‌ಟಿಐ ಕಾರ್ಯಕರ್ತ ಮರಿಲಿಂಗಗೌಡ ಪಾಟೀಲ್ ಅನ್ಮೋರಿ ಎಂಬವರು ಕೋಟ್ಯಂತರ ರೂ. ವೆಚ್ಚದಲ್ಲಿ ಆಚರಿಸಿದ ವಿವಿಧ ಜಯಂತಿಗಳ ಬಗ್ಗೆ ಮಾಹಿತಿ ಕೊಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಗಳ ವಿರುದ್ಧ ದೂರು ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಹಲವಾರು ಗಣ್ಯರ ಜಯಂತಿ ಹೆಸರಲ್ಲಿ ಬರೋಬ್ಬರಿ 17 ಕೋಟಿ 65 ಲಕ್ಷ ರೂನ್ನು ಖರ್ಚು ಮಾಡಲಾಗಿದೆ. ಅನೇಕರ ಹೆಸರೇ ಗೊತ್ತಿಲ್ಲದ ಜಯಂತಿ ಆಚರಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಆದರೆ ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿವೆಯಾ? ಯಾವಾಗ ಆಚರಣೆ ಮಾಡಿದ್ದಾರೆ? ಯಾರು ಅತಿಥಿಯಾಗಿದ್ರು? ಎಲ್ಲಿ ಆಚರಣೆ ಮಾಡಿದ್ದಾರೆ? ಎಂಬುವುದರ ಬಗ್ಗೆ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

    2013 ರಿಂದ 2018 ವರೆಗೆ ನಡೆದ ವಿವಿಧ ಗಣ್ಯರ ಜಯಂತಿಗಳ ದಾಖಲೆ ಸಂಗ್ರಹಿಸಿದ ಆರ್ ಟಿ ಐ ಕಾರ್ಯಕರ್ತ ಮರಿಲಿಂಗಗೌಡ ಪಾಟೀಲ್ ಅನ್ಮೋರಿ, ಬೆರಳೆಣಿಕೆಯಷ್ಟು ಜಯಂತಿಗಳ ಆಚರಣೆ ಮಾತ್ರ ನೋಡಿದ್ದೇವೆ. ಕೆಲ ಅಧಿಕಾರಿಗಳು ಜಯಂತಿ ಮಾಡದೆ ಸುಳ್ಳು ದಾಖಲೆ ನೀಡಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಯಾವ ಜಯಂತಿಗೆ ಎಷ್ಟು ಖರ್ಚು?:
    1. ದೇವರ ದಾಸಿಮಯ್ಯ ಜಯಂತಿ – 69 ಲಕ್ಷ
    2. ಭಗವಾನ್ ಮಹವೀರ್ ಜಯಂತಿ – 69 ಲಕ್ಷ
    3. ಅಕ್ಕಮಹಾದೇವಿ ಜಯಂತಿ – 10 ಲಕ್ಷ
    4. ಬಸವ ಜಯಂತಿ – 69 ಲಕ್ಷ
    5. ಶಂಕರ ಜಯಂತಿ – 10 ಲಕ್ಷ
    6. ಭಗೀರಥ ಜಯಂತಿ – 69 ಲಕ್ಷ

    7. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ – 15 ಲಕ್ಷ
    8. ಶ್ರೀ ಕೃಷ್ಣ ಜಯಂತಿ – 69 ಲಕ್ಷ
    9. ಬ್ರಹ್ಮಶ್ರೀ ನಾರಾಯಣಗುರು ಜಯಂತಿ – 69 ಲಕ್ಷ
    10. ವಿಶ್ವಕರ್ಮ ಜಯಂತಿ – 69 ಲಕ್ಷ
    11. ಟಿಪ್ಪು ಸುಲ್ತಾನ್ ಜಯಂತಿ – 69 ಲಕ್ಷ
    12. ಕನಕ ಜಯಂತಿ – 69 ಲಕ್ಷ

    13. ಸಿದ್ದರಾಮ ಜಯಂತಿ – 69 ಲಕ್ಷ
    14. ಅಂಬಿಗರ ಚೌಡಯ್ಯ ಜಯಂತಿ – 69 ಲಕ್ಷ
    15. ವಾಲ್ಮೀಕಿ ಜಯಂತಿ – 69 ಲಕ್ಷ
    16. ಶಿವಾಜಿ ಜಯಂತಿ – 69ಲಕ್ಷ
    17. ದಲಿತ ವಚನಕಾರರ ಜಯಂತಿ – 69 ಲಕ್ಷ
    18. ಸರ್ವಜ್ಞ ಜಯಂತಿ – 69 ಲಕ್ಷ
    19. ಭಗೀರಥ ಜಯಂತಿ – 69 ಲಕ್ಷ
    20. ವಿವೇಕಾನಂದ ಜಯಂತಿ – 40 ಲಕ್ಷ

  • ಗೃಹಸಚಿವ ಸ್ಥಾನದಿಂದ ಪರಮೇಶ್ವರ್ ಔಟ್- ರಾಜೀನಾಮೆ ಅಂಗೀಕಾರಕ್ಕೆ ರಾಜ್ಯಪಾಲರಿಗೆ ಸಿಎಂ ಶಿಫಾರಸು

    ಗೃಹಸಚಿವ ಸ್ಥಾನದಿಂದ ಪರಮೇಶ್ವರ್ ಔಟ್- ರಾಜೀನಾಮೆ ಅಂಗೀಕಾರಕ್ಕೆ ರಾಜ್ಯಪಾಲರಿಗೆ ಸಿಎಂ ಶಿಫಾರಸು

    ಬೆಂಗಳೂರು: ಗೃಹ ಸಚಿವ ಸ್ಥಾನಕ್ಕೆ ಡಾ.ಜಿ. ಪರಮೇಶ್ವರ್ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ.

    ಪರಮೇಶ್ವರ್ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ವಜೂಭಾಯ್ ವಾಲಾರಿಗೆ ಶಿಫಾರಸು ಮಾಡಿದ್ದಾರೆ. ಇದಕ್ಕೆ ಕೂಡ್ಲೇ ಸ್ಪಂದಿಸಿದ ರಾಜ್ಯಪಾಲರು, ಶುಕ್ರವಾರ ಸಂಜೆಯೇ ಪರಮೇಶ್ವರ್ ರಾಜೀನಾಮೆ ಅಂಗೀಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಅವರನ್ನು ಮುಂದುವರಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಸಚಿವ ಸ್ಥಾನ ತೊರೆಯುವಂತೆ ಸೂಚಿಸಿತ್ತು.

    ಹೀಗಾಗಿ ಇದೇ ತಿಂಗಳ 1 ರಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದ ಪರಮೇಶ್ವರ್, ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆದ್ರೆ, ವಿಧಾನಮಂಡಲ ಅಧಿವೇಶನ ಮುಗಿಯುವವರೆಗೆ ಗೃಹಮಂತ್ರಿ ಸ್ಥಾನದಲ್ಲಿ ಮಂದುವರಿಯುವಂತೆ ಸಿಎಂ ಸೂಚಿಸಿದ್ದರು. ಇದೀಗ ಪರಮೇಶ್ವರ್ ರಿಂದ ತೆರವಾಗುವ ಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.