Tag: Siddapur

  • ಸಿದ್ದಾಪುರದಲ್ಲಿ ಮನೆಯಂಗಳಕ್ಕೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ- ಸಿಸಿಟಿವಿಯಲ್ಲಿ ಸೆರೆ

    ಸಿದ್ದಾಪುರದಲ್ಲಿ ಮನೆಯಂಗಳಕ್ಕೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ- ಸಿಸಿಟಿವಿಯಲ್ಲಿ ಸೆರೆ

    ಕಾರವಾರ: ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನ (Dog) ಚಿರತೆ ಹೊತ್ತೊಯ್ದ ಘಟನೆ ಸಿದ್ದಾಪುರದ (Siddapur) ಅರಸಿನಗೂಡು ಎಂಬಲ್ಲಿ ನಡೆದಿದೆ. ನಾಯಿಯನ್ನು ಹೊತ್ತೊಯ್ಯುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

    ಗ್ರಾಮದ ಪ್ರಕಾಶ ಹೆಗಡೆ ಎಂಬವರು ಸಾಕಿದ್ದ ನಾಯಿಯನ್ನು ಚಿರತೆ (Leopard) ಹೊತ್ತೊಯ್ದಿದೆ. ಒಂದು ವಾರದಿಂದ ಚಿರತೆ ಅರಸಿನಗೂಡ ಗ್ರಾಮದ ಸುತ್ತಮುತ್ತ ಓಡಾಡುತ್ತಿದೆ. ಇದನ್ನೂ ಓದಿ: ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಉತ್ತರ ಕನ್ನಡದ (Uttara Kannada) ಹೊನ್ನಾವರದ (Honnavar) ಗ್ರಾಮಗಳಲ್ಲಿ ವಾರದ ಹಿಂದೆ ಚಿರತೆ ದಾಳಿ ನಡೆಸಿ ಆರು ದನಕರುಗಳನ್ನು ತಿಂದು ಹಾಕಿತ್ತು. ಈ ಹಿಂದೆ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ (Forest Department) ಬೋನ್ ಇರಿಸಿ ಒಂದು ತಿಂಗಳು ಕಾರ್ಯಾಚರಣೆ ನಡೆಸಿತ್ತು. ಆದರೆ ಚಿರತೆ ಬೋನ್‍ಗೆ ಸಿಗದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಚಿರತೆಯ ಉಪಟಳ ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದ್ದು ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಯಿಂದ ಉಗ್ರರ ಮೇಲೆ ಗುಂಡಿನ ದಾಳಿ

  • ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿದವನಿಗೆ ಗುಂಡೇಟು!

    ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿದವನಿಗೆ ಗುಂಡೇಟು!

    ಕಾರವಾರ: ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿ ಕುಳಿತಿದ್ದ ಯುವಕ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರ ತಾಲೂಕಿನ ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ನಡೆದಿದೆ.

    ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (19) ಗಾಯಗೊಂಡ ಯುವಕ. ನಾರಾಯಣ್ ಗೌಡ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಅರಸಿ ಗುಡ್ಡ ಏರಿ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಚಟವುಳ್ಳ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ. ಪ್ರದೀಪ್ ಅವರನ್ನು ಪ್ರಾಣಿ ಎಂದು ರಾಮಾ ಕನ್ನಾ ಗುಂಡು ಹಾರಿಸಿದ್ದಾನೆ. ಇದನ್ನೂ  ಓದಿ: ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು

    ಆರೋಪಿ

    ಯುವಕ ಪ್ರದೀಪ್ ಅವರ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ  ಓದಿ: ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ

  • ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿ ಬಲಿ

    ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿ ಬಲಿ

    ಕಾರವಾರ: ಮಂಗನಕಾಯಿಲೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ ತೆಗೆದುಕೊಂಡಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಗಿಳಸೆ ಗ್ರಾಮದಲ್ಲಿ ಘಟನೆ ನಡೆದಿದೆ.

    ಗಿಳಸೆ ಗ್ರಾಮದ ಭಾಸ್ಕರ್ ಗಣಪತಿ ಹೆಗಡೆ (64) ಮೃತ ದುರ್ದೈವಿ. ಕೆಲವು ದಿನಗಳಿಂದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸಿದ್ದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಭಾಸ್ಕರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಹೇಗೆ ಹರಡುತ್ತದೆ?
    ಕ್ಯಾಸನೂರ ಕಾಯಿಲೆ ಮೂಲತಃ ಪ್ರಾಣಿಗಳ ರೋಗವಾಗಿದ್ದು, ಮುಖ್ಯವಾಗಿ ಏಈಆಗಿ ವೈರಾಣು ಇರುವ ಉಣ್ಣಿ ಅಥವಾ ಉಣುಗು (Ticks) ಕಚ್ಚಿದಾಗ ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ. ಇದನ್ನೂ ಓದಿ: ಮಂಗನ ಕಾಯಿಲೆಗೆ ಹೆದರಿ ಊರು ತೊರೆಯುತ್ತಿದ್ದಾರೆ ಮಲೆನಾಡಿಗರು!

    ಆರಂಭಗೊಂಡಿದ್ದು ಹೇಗೆ?
    ಭಾರತಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳಾದ ಬಳಿಕ ಅಂದರೆ 1957ರಲ್ಲಿ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಗ್ರಾಮದಲ್ಲಿ ಮೊದಲ ಬಾರಿಗೆ ಮಂಗನ ಜ್ವರ ಕಾಣಿಸಿಕೊಂಡಿತ್ತು. ಈ ಕಾಯಿಲೆ ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರಿಂದ ಜನರಿಗೆ ಹರಡುತ್ತಿತ್ತು. ಆದ್ದರಿಂದ ಈ ಕಾಯಿಲೆಗೆ `ಮಂಗನ ಕಾಯಿಲೆ ಎಂದು ಜನ ಕರೆದಿದ್ದರು. ಆದರೆ ವೈದ್ಯ ವಿಜ್ಞಾನಿಗಳು ಪ್ರಪಂಚದಲ್ಲಿ ಎಲ್ಲೂ ಕಾಣದ ಈ ಕಾಯಿಲೆ ಕ್ಯಾಸನೂರು ಗ್ರಾಮದಲ್ಲಿ ಮಾತ್ರ ಕಂಡು ಬಂದಿರುವುದರಿಂದ ಈ ಕಾಯಿಲೆಗೆ `ಕ್ಯಾಸನೂರು ಕಾಡಿನ ಕಾಯಿಲೆ’ ಎಂದು ಕರೆದರು. ಇದನ್ನೂ ಓದಿ: ಕಾರಿನ ಮೇಲೆ ಮಂಗನಕಾಯಿಲೆ ಬೋರ್ಡ್ ಹಾಕಿ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳು