Tag: siddalinga swamiji

  • ಪೇಜಾವರಶ್ರೀ ಭೇಟಿಗೆ ಆಗಮಿಸಿದ ಸಿದ್ದಗಂಗಾ ಸಿದ್ದಲಿಂಗ ಸ್ವಾಮೀಜಿ

    ಪೇಜಾವರಶ್ರೀ ಭೇಟಿಗೆ ಆಗಮಿಸಿದ ಸಿದ್ದಗಂಗಾ ಸಿದ್ದಲಿಂಗ ಸ್ವಾಮೀಜಿ

    ಉಡುಪಿ: ಪೇಜಾವರಶ್ರೀ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ತುಮಕೂರು ಸಿದ್ದಗಂಗಾ ಮಠಾಧೀಶ ಸಿದ್ದಲಿಂಗಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೇಜಾವರಶ್ರೀ ಕನ್ನಡ ನಾಡಿನ ಹೆಮ್ಮೆಯ ಸಂತ. ಶ್ರೀಗಳ ಆರೋಗ್ಯ ಶೀಘ್ರ ಸುಧಾರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಪೇಜಾವರಶ್ರೀಗಳು ಸಮಾಜದ ಎಲ್ಲರ ಪ್ರೀತಿಗೆ ಪಾತ್ರರು. ಸಂಘಟನಾತ್ಮಕವಾಗಿ ದೇಶಕ್ಕೆ ಶಕ್ತಿ ಕೊಟ್ಟವರು. ಶ್ರೀಗಳ ನಿರಂತರ ಚಟುವಟಿಕೆ ನಮ್ಮ ಊಹೆಗೂ ಮೀರಿದ್ದು ಎಂದು ಪೇಜಾವರಶ್ರೀಗಳನ್ನು ಶ್ಲಾಘಿಸಿದರು.

    ವಿಶ್ವೇಶತೀರ್ಥ ಸ್ವಾಮೀಜಿಗಳು ವೈಯಕ್ತಿಕ ಆರೋಗ್ಯಕ್ಕೆ ಗಮನವೇ ಕೊಟ್ಟಿಲ್ಲ. ದೇಶಕ್ಕಾಗಿ ಸಮಾಜಕ್ಕಾಗಿ ಜೀವನ ಮುಡುಪಾಗಿಟ್ಟವರು. ಕೆಎಂಸಿ ವೈದ್ಯರು ವಿಶೇಷ ಕಾಳಜಿ ವಹಿಸಿದ್ದಾರೆ. ಪೇಜಾವರ ಕಿರಿಯ ಶ್ರೀಗಳು ಆಸ್ಪತ್ರೆಯಲ್ಲಿ ಹಿರಿಯ ಶ್ರೀಗಳ ಜೊತೆಗೆ ಇದ್ದು ಕಾಳಜಿ ವಹಿಸಿದ್ದಾರೆ. ಶ್ರೀಗಳು ಬೇಗ ಗುಣಮುಖರಾಗಿ ಮಠಕ್ಕೆ ವಾಪಸಾಗುವಂತೆ ಆಗಲಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾರೈಸಿದ್ದಾರೆ.

  • ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿರ ಪೂರ್ವಾಶ್ರಮದ ಸಹೋದರ ಶಿವೈಕ್ಯ

    ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿರ ಪೂರ್ವಾಶ್ರಮದ ಸಹೋದರ ಶಿವೈಕ್ಯ

    ರಾಮನಗರ: ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪೂರ್ವಾಶ್ರಮದ ಸೋದರ ಬಿ.ಎಸ್.ಚಂದ್ರಶೇಖರಯ್ಯ (72) ಶಿವೈಕ್ಯರಾಗಿದ್ದಾರೆ.

    ಮಾಗಡಿ ತಾಲೂಕಿನ ಬಂಡೇಮಠ ಗ್ರಾಮದ ನಿವಾಸಿಯಾಗಿದ್ದ ಬಿ.ಎಸ್.ಚಂದ್ರಶೇಖರಯ್ಯ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನೌಕರರಾಗಿ, ಬಂಡೇಮಠದ ಮ್ಯಾನೇಜರ್ ಆಗಿ ಸೇವೆಸಲ್ಲಿಸಿದ್ದರು. 10 ವರ್ಷದ ಹಿಂದೆ ನಿವೃತ್ತಿಗೊಂಡು ವ್ಯವಸಾಯ ಮಾಡಿಕೊಂಡಿದ್ದರು.

    ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನನ್ನು ಅಗಲಿದ್ದಾರೆ. ಮೃತ ಬಿ.ಎಸ್.ಚಂದ್ರಶೇಖರಯ್ಯರ ಅಂತ್ಯಕ್ರಿಯೆ ಬಂಡೇಮಠದ ತೋಟದಲ್ಲಿ ಶನಿವಾರ 12.30 ಕ್ಕೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಮೃತರ ಅಂತ್ಯಕ್ರಿಯೆಯಲ್ಲಿ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಬಂಡೇಮಠದ ಬಸವಲಿಂಗಸ್ವಾಮೀಜಿ, ಗುಮ್ಮಸಂದ್ರ ಚಂದ್ರಶೇಖರ ಸ್ವಾಮೀಜಿ, ಜಡೇದೇವರ ಮಠದ ಹಿಮ್ಮಡಿ ಬಸವರಾಜ ಸ್ವಾಮೀಜಿ, ಬೆಟ್ಟಹಳ್ಳಿ ಚಂದ್ರಶೇಖರಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

  • ಕ್ರಿಕೆಟ್ ನಂತ್ರ ಮಕ್ಕಳ ಜೊತೆ ವಾಲಿಬಾಲ್ ಆಡಿದ ಸಿದ್ದಲಿಂಗ ಶ್ರೀ

    ಕ್ರಿಕೆಟ್ ನಂತ್ರ ಮಕ್ಕಳ ಜೊತೆ ವಾಲಿಬಾಲ್ ಆಡಿದ ಸಿದ್ದಲಿಂಗ ಶ್ರೀ

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮತ್ತೊಮ್ಮೆ ಮಕ್ಕಳ ಜೊತೆ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಸಿದ್ದಲಿಂಗ ಶ್ರೀಗಳು ಮಕ್ಕಳ ಜೊತೆ ವಾಲಿಬಾಲ್ ಆಡುವ ಮೂಲಕ ಅವರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಪ್ರತಿ ದಿನ ಮಕ್ಕಳು ಶಾಲೆ ಮುಗಿಸಿ ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿಗೆ ವಾಕ್‍ಗೆ ಹೋಗಿದ್ದ ಸಿದ್ದಲಿಂಗ ಶ್ರೀಗಳು, ಮಕ್ಕಳ ಜೊತೆ ಆಟದಲ್ಲಿ ಸೇರಿಕೊಂಡಿದ್ದಾರೆ. ಸಿದ್ದಲಿಂಗ ಶ್ರೀಗಳು ಅರ್ಧ ಗಂಟೆಗೂ ಹೆಚ್ಚು ಕಾಲ ವಾಲಿಬಾಲ್ ಆಡಿದ್ದಾರೆ. ಇದರಿಂದ ಮಕ್ಕಳು ಫುಲ್ ಖುಷಿಯಾಗಿದ್ದಾರೆ.

    ಬುಧವಾರ ಸಂಜೆ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಶ್ರೀಗಳು ಮಕ್ಕಳೊಟ್ಟಿಗೆ ತಾವೂ ಕೂಡ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದರು. ಸಿಕ್ಸರ್ ಮೇಲೆ ಸಿಕ್ಸರ್ ಭಾರಿಸಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಶ್ರೀಗಳು ಬ್ಯಾಟ್ ಹಿಡಿದು ಸಿಕ್ಸರ್ ಬಾರಿಸುತ್ತಿದ್ದಂತೆ ಮಕ್ಕಳು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು.

    ಇಷ್ಟು ದಿನ ಶ್ರೀಗಳಾಗಿ ಮಾತ್ರ ವಿದ್ಯಾರ್ಥಿಗಳು ಸಿದ್ದಲಿಂಗ ಸ್ವಾಮೀಜಿ ಅವರನ್ನು ನೋಡಿದ್ದರು. ಆದರೆ ಸ್ವಾಮೀಜಿ ಕೂಡ ಇಷ್ಟೊಂದು ಚೆನ್ನಾಗಿ ಕ್ರಿಕೆಟ್ ಹಾಗೂ ವಾಲಿಬಾಲ್ ಆಡುತ್ತಾರೆ ಎಂಬ ಸಂಗತಿ ಬಹುತೇಕ ಮಂದಿಗೆ ಗೊತ್ತಿರಲಿಲ್ಲ.

  • ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

    ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

    ತುಮಕೂರು: ಇಂದು ವಿಶ್ವಪರಿಸರ ದಿನಾಚರಣೆ, ಈ ವಿಶೇಷ ದಿನದಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ 1 ಸಾವಿರ ಸಸಿಗಳನ್ನು ನೆಡುವುದರ ಮೂಲಕ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಸ್ಮರಣೆ ಮಾಡಲಾಗುತ್ತಿದೆ.

    ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ರೀಚ್ ಫಾರ್ ಕಾಸ್ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    ಈ ಕಾರ್ಯಕ್ರಮಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಸಿ ನೆಟ್ಟು ಅದಕ್ಕೆ ನೀರೆರಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮಠದ ಸುತ್ತಲೂ ಸುಮಾರು 1 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಶಿವಕುಮಾರ ಶ್ರೀಗಳನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ.

    ಈಗಾಗಲೇ ಮಠದ ಸುತ್ತಮುತ್ತ ಸಸಿಗಳ ನೆಡುವ ಕಾರ್ಯ ಆರಂಭಗೊಂಡಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್‍ಪಿ ಕೋನ ವಂಶಿ ಕೃಷ್ಣ, ಜಿಲ್ಲಾ ಪಂಚಾಯ್ತಿ ಸಿಇಓ ಶುಭಕಲ್ಯಾಣ್ ಹಾಗೂ ಇತರರು ಭಾಗಿಯಾಗಿದ್ದಾರೆ. ಹಾಗೆಯೇ ಮಠದ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸಸಿ ನೆಡುವ ಕಾರ್ಯದಲ್ಲಿ ತೊಡಗಿದ್ದಾರೆ.

  • ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ

    ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ

    ತುಮಕೂರು: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ತೇಜಸ್ವಿ ಸೂರ್ಯಗೆ ಮಾಜಿ ಸಚಿವ ವಿ.ಸೋಮಣ್ಣ ಸಾಥ್ ನೀಡಿದ್ದು, ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಗೆ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕರು ಶಾಲು ಹೊದಿಸಿ ನಮಸ್ಕರಿಸಿದರು. ಆ ನಂತರ ಶ್ರೀಗಳು ತೇಜಸ್ವಿ ಸೂರ್ಯಗೆ ಶಾಲು ಹೊದಿಸಿ, ಆಶೀರ್ವಾದ ಮಾಡಿದರು.

    ಈ ವೇಳೆ ವಿ.ಸೋಮಣ್ಣ ಅವರು ಮಾತನಾಡಿ, ಮಠಕ್ಕೆ ಬಿಜೆಪಿಯವರು ಯಾರೆಲ್ಲಾ ಬಂದಿದ್ದಾರೆ, ಅವರೆಲ್ಲರಿಗೂ ಮಠದ ಜೊತೆ ಅವಿನಭಾವ ಸಂಬಂಧವಿದೆ ಎಂದು ತಿಳಿಸಿ ಶ್ರೀಗಳಿಗೆ ನಮಸ್ಕರಿಸಿದರು.

  • ಸಿದ್ದಗಂಗಾ ಶ್ರೀಗಳಿಂದ್ಲೇ ನಾಮಕರಣ ಮಾಡಿಸ್ಬೇಕೆಂದು 4 ವರ್ಷದಿಂದ ಕಾದ ದಂಪತಿ!

    ಸಿದ್ದಗಂಗಾ ಶ್ರೀಗಳಿಂದ್ಲೇ ನಾಮಕರಣ ಮಾಡಿಸ್ಬೇಕೆಂದು 4 ವರ್ಷದಿಂದ ಕಾದ ದಂಪತಿ!

    – ಇಂದು ಶ್ರೀಗಳನ್ನು ನೆನೆದು ಭಾವುಕರಾದ್ರು ಭಕ್ತರು

    ತುಮಕೂರು: ಬಳ್ಳಾರಿ ಜಿಲ್ಲೆಯ ಭಕ್ತರೊಬ್ಬರು ಮೂರು ಬಾರಿ ಸಿದ್ದಗಂಗಾ ಮಠಕ್ಕೆ ಬಂದು ಶ್ರೀ ಶಿವಕುಮಾರ ಸ್ವಾಮೀಜಿ ಬಳಿಯೇ ತಮ್ಮ ಮಗುವಿನ ನಾಮಕರಣ ಮಾಡಿಸಬೇಕು ಎಂದು ನಾಲ್ಕು ವರ್ಷದಿಂದ ಕಾದು ಕುಳಿತಿದ್ದರು ಅಲ್ಲದೆ ತನ್ನ ಮಗಳಿಗೆ ನಾಮಕರಣ ಮಾಡಿರಿಲಿಲ್ಲ.

    ಹೌದು, ಸಿದ್ದಗಂಗಾ ಶ್ರೀಗಳ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಬಳ್ಳಾರಿಯ ದಂಪತಿ, ಮೂರು ಬಾರಿ ಸಿದ್ದಗಂಗಾ ಮಠಕ್ಕೆ ಬಂದರೂ ಶ್ರೀಗಳಿಂದ ತಮ್ಮ ಮಗುವಿಗೆ ನಾಮಕರಣ ಮಾಡಿಸಲು ಸಾಧ್ಯವಾಗಿರಲಿಲ್ಲ. ಆಗ ಮಠದ ಕಿರಿಯ ಶ್ರೀಗಳು ಶಿವಕುಮಾರ ಸ್ವಾಮೀಜಿಗಳು ಗುಣಮುಖರಾದ ಮೇಲೆ ನಾವೇ ನಿಮ್ಮನ್ನು ಕರೆಸಿಕೊಂಡು ನಾಮಕರಣ ಕಾರ್ಯ ಮಾಡಿಸಿಕೊಡುತ್ತೇವೆ ಎಂದು ತಿಳಿಸಿದ್ದರು. ಆದ್ರೆ ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮನಸ್ಸಿಗೆ ತುಂಬಾ ನೋವಾಯ್ತು. ಬಳಿಕ ಮಗಳಿಗೆ `ಶಿವಾನಿ’ ಎಂದು ನಾವೇ ಹೆಸರಿಟ್ಟೆವು ಎಂದು ದಂಪತಿ ಸ್ವಾಮೀಜಿಯನ್ನ ನೆನೆದು ಭಾವುಕರಾದರು. ಇದನ್ನೂ ಓದಿ:ಶಿವಕುಮಾರ ಶ್ರೀಗಳ 112ನೇ ಜಯಂತಿ-ಸಂತನಿಲ್ಲದ ಸಿದ್ದಗಂಗೆಯಲ್ಲಿ ಶಿವಯೋಗಿ ಸ್ಮರಣೆ

    ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112 ನೇ ಜಯಂತಿ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠದಲ್ಲಿ 112 ಮಕ್ಕಳಿಗೆ ಶ್ರೀಗಳ ಹೆಸರಿಟ್ಟು ನಾಮಕರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಶ್ರೀಗಳ ಹೆಸರನ್ನು ನಾಮಕರಣ ಮಾಡಲು ಭಕ್ತಾಧಿಗಳು ತಮ್ಮ ಮಕ್ಕಳನ್ನು ಮಠಕ್ಕೆ ಕರೆತಂದಿದ್ದಾರೆ. ಹೈಕೋರ್ಟ್ ಲಾಯರ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

    ಕೇವಲ ನಾಮಕರಣ ಮಾತ್ರವಲ್ಲದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳಿಗೆ ನಾಮಕರಣಕ್ಕೆ ಬೇಕಾದ ತೊಟ್ಟಿಲು ಹಾಗೂ ಇತರೆ ವಸ್ತುಗಳು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

  • ಭಕ್ತರ ಪ್ರೀತಿಗೆ ಭಾವುಕರಾದ ಸಿದ್ದಲಿಂಗ ಶ್ರೀಗಳು

    ಭಕ್ತರ ಪ್ರೀತಿಗೆ ಭಾವುಕರಾದ ಸಿದ್ದಲಿಂಗ ಶ್ರೀಗಳು

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆ ಹಿನ್ನೆಲೆ ಸಿದ್ದಗಂಗಾ ಮಠಕ್ಕೆ ಭಕ್ತಾಧಿಗಳು ದಾಸೋಹಕ್ಕಾಗಿ ಸಾಮಾಗ್ರಿಗಳನ್ನು ಕಾಣಿಕೆ ನೀಡುತ್ತಿರುವುದನ್ನು ಕಂಡು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

    ಇದೇ ತಿಂಗಳ 31ರಂದು ಡಾ. ಶ್ರೀ ಶಿವಕುಮಾರ ಸ್ವಾಮಿಜಿ ಅವರ ಪುಣ್ಯಾರಾಧನೆಯನ್ನು ಮಾಡಲಾಗುತ್ತಿದೆ. ಆದರಿಂದ ಶ್ರೀಗಳ ಭಕ್ತಾಧಿಗಳು ವಿವಿಧೆಡೆಯಿಂದ ತಮ್ಮ ಕೈಲಾದ ಸಾಮಾಗ್ರಿಗಳನ್ನು ಕಾಣಿಕೆ ರೂಪದಲ್ಲಿ ನೀಡಿ ದಾಸೋಹಕ್ಕೆ ಸಹಾಯ ಮಾಡುತ್ತಿದ್ದಾರೆ. ನಡೆದಾಡುವ ದೇವರಿಗೆ ನಮನ ಸಲ್ಲಿಸಲು ರಾಜ್ಯದ ಹಲವೆಡೆಯಿಂದ ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಬೇಳೆ, ದವಸ ಧಾನ್ಯಗಳನ್ನು ತಂದು ಸಿದ್ದಗಂಗಾ ಮಠಕ್ಕೆ ನೀಡುತ್ತಿದ್ದಾರೆ.ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

    ಭಕ್ತರು ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಮೇಲೆ ಇಟ್ಟಿರುವ ಪ್ರೀತಿಯನ್ನು ಕಂಡು ಸಿದ್ದಲಿಂಗ ಶ್ರೀಗಳ ಕಣ್ತುಂಬಿ ಬಂತು. ಭಕ್ತರಿಂದ ಕಣ್ಣೀರು ಮರೆ ಮಾಚಲು ಸಿದ್ದಲಿಂಗ ಶ್ರೀಗಳು ತಿರುಗಿನಿಂತು ಕಣ್ಣೀರು ಒರೆಸಿಕೊಂಡರು. ಶ್ರೀಗಳ ಪುಣ್ಯಾರಾಧನೆಗೆ ಸಿದ್ದತೆಗಳು ನಡೆಯುತ್ತಿದ್ದು, ಸಾಲು ಸಾಲಾಗಿ ಲಾರಿಗಳ ಮೂಲಕ ಭಕ್ತಾಧಿಗಳು ದವಸ ಧಾನ್ಯಗಳು ತಂದು ಕಾಣಿಕೆಯಾಗಿ ಮಠಕ್ಕೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾತೆ ಮಹಾದೇವಿ ದೊಡ್ಡವರು, ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ: ಸಿದ್ದಲಿಂಗ ಶ್ರೀಗಳು

    ಮಾತೆ ಮಹಾದೇವಿ ದೊಡ್ಡವರು, ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ: ಸಿದ್ದಲಿಂಗ ಶ್ರೀಗಳು

    ತುಮಕೂರು: ನಮ್ಮ ಪರಮಪೂಜ್ಯರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಬಲವಂತವಾಗಿ ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಸಿದ್ದಗಂಗಾ ಮಠದಲ್ಲಿ 8 ಸಾವಿರ ಮಕ್ಕಳ ಸಾಮೂಹಿಕ ಕೇಶ ಮುಂಡನ ಮೂರ್ಖತನ ಎಂದ ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷದಂತೆ ಸವಿತಾ ಸಮಾಜದವರು ಮಕ್ಕಳಿಗೆ ಕಟಿಂಗ್ ಮಾಡ್ತಾರೆ. ಮಾತೆ ಮಹಾದೇವಿ ದೊಡ್ಡವರು. ತಿಳಿದವರು ಹೇರ್ ಕಟಿಂಗ್ ಮಾಡುವುದನ್ನು ಕೇಶಮುಂಡನ ಅಂತ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಹೇಳಿದರು.

    ನಮ್ಮ ಪರಮಪೂಜ್ಯರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಹಿಂದೂ ಮುಸಲ್ಮಾನ್, ಕ್ರಿಶ್ಚಿಯನ್ ಎಲ್ಲರು ಅವರನ್ನು ಪ್ರೀತಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸವಿತಾ ಸಮಾಜದ ಬಂಧುಗಳು ಶಿಬಿರವನ್ನು ಆಯೋಜಿಸಿ ನಮ್ಮ ಮಕ್ಕಳಿಗೆ ಕಟಿಂಗ್ ಮಾಡುತ್ತಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವರ್ಷ ಇದು ಹೊಸದೆನಲ್ಲ ಎಂದು ತಿಳಿಸಿದರು.

    ಕೇಶಮುಂಡನ ಅಲ್ಲ. ಪ್ರತಿ ವರ್ಷ ಸವಿತಾ ಸಮಾಜದವರು ಶಿಬಿರವನ್ನು ಆಯೋಜಿಸಿ ತಲೆ ಕೂದಲನ್ನು ಕತ್ತರಿಸುತ್ತಾರೆ. ಬಲವಂತವಾಗಿ ಯಾರ ತಲೆ ಕೂದಲನ್ನು ಕತ್ತರಿಸುವುದಿಲ್ಲ. ಸ್ವ ಇಚ್ಛೆಯಿಂದ ಮಕ್ಕಳೇ ತಲೆ ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ ಎಂದು ಹೇಳಿದರು.

    https://www.youtube.com/watch?v=thcpuuazfB8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು

    ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು

    ತುಮಕೂರು: ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದ್ದು, ಮಠದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ದರ್ಶನ ಸಿಗದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಕಿರಿಯ ಶ್ರೀಗಳು ಭಾವುಕರಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕಿರಿಯ ಶ್ರೀಗಳು, ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಮಠದಲ್ಲೇ ಐಸಿಯೂ ಮಾದರಿಯ ಕೊಠಡಿ ನಿರ್ಮಾಣವಾಗಿದೆ. ಅದೇ ಕೊಠಡಿಯಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಶ್ರೀಗಳು ಆರೋಗ್ಯವಾಗಿ ಇದ್ದಾರೆ. ಯಾರೋ ಇಲ್ಲಸಲ್ಲದ ಮಾಹಿತಿ ನೀಡುತ್ತಿದ್ದಾರೆ. ಆದರೆ ಶ್ರೀಗಳಿಗೆ ಸತತವಾಗಿ ಚಿಕಿತ್ಸೆ ನಡೆಯುತ್ತಿರುವುದರಿಂದ ಅವರಿಗೆ ತೊಂದರೆಯಾಗಬಾದರು. ಇಲ್ಲ ಸಲ್ಲದ ವದಂತಿಗೆ ಕಿವಿಗೊಡಬೇಡಿ ಎಂದು ಕಿರಿಯ ಶ್ರೀಗಳು ಜನರಲ್ಲಿ ಮನವಿ ಮಾಡಿಕೊಂಡರು.

    ನನಗೂ ಮಕ್ಕಳಿಗೆ ಶ್ರೀಗಳ ದರ್ಶನ ಮಾಡಿಸಬೇಕು ಅಂತ ಆಸೆ ಇದೆ ಎಂದು ತಕ್ಷಣ ಕಿರಿಯ ಶ್ರೀಗಳು ಮೌನವಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ನಮ್ಮ ಸಿಬ್ಬಂದಿಯೇ ಶ್ರೀಗಳನ್ನು ದರ್ಶನ ಮಾಡಲು ಬಿಡುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಜನರು ಕೂಡ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಆದರೆ ನಾವು ಶ್ರೀಗಳ ಆರೋಗ್ಯದ ಬಗ್ಗೆ ಯೋಚನೆ ಮಾಡಬೇಕು. ನಮಗೆ ಮಕ್ಕಳು, ಭಕ್ತರು ಮತ್ತು ಸಿಬ್ಬಂದಿಯೂ ಬೇಕು. ಚಿಕಿತ್ಸೆ ನೀಡುತ್ತಿರುವುದರಿಂದ ಎಲ್ಲರೂ ಸಹಕರಿಸಬೇಕು. ಎಲ್ಲರೂ ಸಹಕರಿಸುತ್ತಾರೆ ಎಂಬ ಭಾವನೆ ನನ್ನಲ್ಲಿದೆ ಎಂದು ಭಾವುಕರಾಗಿ ಹಳೆಯ ಮಠಕ್ಕೆ ಸಿದ್ದಲಿಂಗ ಸ್ವಾಮೀಜಿ ತೆರಳಿದರು.

    ಶ್ರೀಗಳು ಮಠಕ್ಕೆ ಹೋಗಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಇಂದು ನಸುಕಿನ ಜಾವ ಸುಮಾರು 3.30ಕ್ಕೆ ಸಿದ್ದಗಂಗಾ ಆಸ್ಪತ್ರೆಯಿಂದ ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ನಿರಾಕರಿಸಿದ್ದಾರೆ.

    ವಿವಿಯ 10 ನೇ ಘಟಿಕೋತ್ಸವದ ಅಂಗವಾಗಿ ಇಬ್ಬರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ವಿವಿ ಸಿಂಡಿಕೇಟ್ ನಿರ್ಧರಿಸಿತ್ತು. ಪವಾಡ ರಹಸ್ಯ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಮತ್ತು ಧಾರ್ಮಿಕ ಕ್ಷೇತ್ರದಿಂದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು.

    ಈ ಇಬ್ಬರಿಗೆ ಡಾಕ್ಟರೇಟ್ ನೀಡಲು ರಾಜ್ಯಪಾಲ ವಿಆರ್ ವಾಲಾ ಅನುಮೋದನೆ ಕೂಡಾ ಮಾಡಿದ್ದರು. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂಬ ಕಾರಣ ನೀಡಿ, ಸಿದ್ಧಲಿಂಗ ಸ್ವಾಮೀಜಿ ಡಾಕ್ಟರೇಟ್ ಪಡೆಯದಿರಲು ನಿರ್ಧರಿಸಿದ್ದಾರೆ.

    ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ದ್ರಾವಿಡ್, ಕ್ರಿಕೆಟ್ ಆಡಿದ್ದಕ್ಕೆ ಡಾಕ್ಟರೇಟ್ ಪದವಿ ನೀಡುವುದು ಬೇಡ. ಕ್ರಿಕೆಟ್‍ಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಬಂಧ ಮಂಡಿಸಿ ನಾನು ಡಾಕ್ಟರೇಟ್ ಪದವಿಯನ್ನು ಪಡೆಯುತ್ತೇನೆ ಎಂದು ವಿವಿಗೆ ತಿಳಿಸಿ ಗೌರವ ಡಾಕ್ಟರೇಟ್ ನಿರಾಕಸಿದ್ದರು.