Tag: siddalinga swamiji

  • ಶಿರಗುಪ್ಪದಲ್ಲಿ ಧರ್ಮಸಭೆ; ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ತಡೆ

    ಶಿರಗುಪ್ಪದಲ್ಲಿ ಧರ್ಮಸಭೆ; ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ತಡೆ

    ಕಲಬುರಗಿ: ಬಳ್ಳಾರಿಯ ಶಿರಗುಪ್ಪದಲ್ಲಿ ಆಯೋಜನೆಗೊಂಡಿದ್ದ ಹಿಂದೂ ಮಹಾಗಣಪತಿ ಧರ್ಮ ಸಭೆಯಲ್ಲಿ ಭಾಗಿಯಾಗಲು ಹೊರಟಿದ್ದ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ (Siddalinga Swamiji) ಬಳ್ಳಾರಿ (Ballary) ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

    ಬುಧವಾರ ಬೆಳಗ್ಗೆ ಶಿರಗುಪ್ಪದಲ್ಲಿ ಹಿಂದೂ ಮಹಾಗಣಪತಿಯ ಪೂಜೆಗೆ ಹೊರಟಿದ್ದ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಆದೇಶ ಪ್ರಕಾರ ಸೆಪ್ಟೆಂಬರ್ 3ರಿಂದ 10 ವರೆಗೆ 8 ದಿನಗಳವರೆಗೆ ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌ಗೆ ʻಕರ್ನಾಟಕ ರತ್ನʼ..?

    ಕಾಂಗ್ರೆಸ್ ಸರ್ಕಾರ ಮುಂದುವರೆದ ಹಿಂದೂ ಧಮನ ನೀತಿಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದುಗಳ ಧಾರ್ಮಿಕ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ಸರ್ಕಾರದ ಷಡ್ಯಂತ್ರ ಇದು. ಹಿಂದೂ ಸಮುದಾಯದ ಧರ್ಮಸಭೆಗೆ ನಿಷೇಧ ಹೇರುವುದರಿಂದ ಜನರ ಮನೋಭಾವನೆಗಳನ್ನು ದಮನಗೊಳಿಸುವ ಯತ್ನ ನಡೆಯುತ್ತಿದೆ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್

     ಇತ್ತೀಚಿಗಷ್ಟೇ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಿವಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದರು.

  • ಬಿಎಲ್‌ಡಿ ಸೌಹಾರ್ದ ಬ್ಯಾಂಕ್‌ನ ಬೆಂಗಳೂರು ನಗರದ ಪ್ರಥಮ ಶಾಖೆಗೆ ಚಾಲನೆ

    ಬಿಎಲ್‌ಡಿ ಸೌಹಾರ್ದ ಬ್ಯಾಂಕ್‌ನ ಬೆಂಗಳೂರು ನಗರದ ಪ್ರಥಮ ಶಾಖೆಗೆ ಚಾಲನೆ

    ಬೆಂಗಳೂರು: ವಿಜಯಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಎಲ್‌ಡಿ ಸೌಹಾರ್ದ ಸಹಕಾರಿ ಬ್ಯಾಂಕ್ (BLD Souharda Bank) ಬೆಂಗಳೂರಲ್ಲಿ (Bengaluru) ತೆರೆದಿರುವ ಪ್ರಥಮ ಶಾಖೆಗೆ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ( Siddalinga Swamiji) ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಭಾನುವಾರ ವಿಧ್ಯುಕ್ತ ಚಾಲನೆ ನೀಡಿದರು. ಒಟ್ಟಾರೆಯಾಗಿ ಇದು 11ನೇ ಶಾಖೆಯಾಗಿದ್ದು, ಶಿವಾನಂದ ವೃತ್ತದ ಎಸ್ ಎನ್ ಎಸ್ ಪ್ಲಾಜಾದಲ್ಲಿ ಕಚೇರಿಯನ್ನು ಹೊಂದಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು, ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ, ಕೃಷಿ ಹಾಗೂ ಕೈಗಾರಿಕೆ ಇವೆಲ್ಲವೂ ಸಮಾಜದಲ್ಲಿ ಒಂದಕ್ಕೊಂದು ಪೂರಕವಾಗಿವೆ. ಬೆಂಗಳೂರಿನಲ್ಲಿ ತನ್ನ‌ ಪ್ರಪ್ರಥಮ ಶಾಖೆ ತೆರೆದಿರುವ
    ಬಿ ಎಲ್ ಡಿ ಬ್ಯಾಂಕ್ ಜನರಿಗೆ ನೆರವಿನ ಹಸ್ತ ಚಾಚಲಿ ಎಂದಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಹೊರಬರುತ್ತೆ: ರಾಮಲಿಂಗಾ ರೆಡ್ಡಿ

    ಲಿಂಗಾಯತ ಸಮುದಾಯದವರು ಹೀಗೆ ಸಮಾಜದ ಬಲವರ್ಧನೆಗೆ ರಚನಾತ್ಮಕ ಉಪಕ್ರಮಗಳನ್ನು ಮಾಡುವುದು ಶ್ಲಾಘನೀಯ ಸಂಗತಿಯಾಗಿದೆ. ಇವೆಲ್ಲವೂ ನಂಬಿಕೆ, ವಿಶ್ವಾಸ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗಳ ಮೂಲಕ ನೂರು ಶಾಖೆಗಳ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಆಶಿಸಿದರು.

    ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರವು ಸರಿಯಾದ ಠೇವಣಿ, ಸಾಲ ನೀಡುವಿಕೆ ಮತ್ತು ಸಾಲ ವಸೂಲಾತಿಗಳ ಆಧಾರದ ಮೇಲೆ ನಡೆಯುತ್ತದೆ. ಬಿ ಎಲ್ ಡಿ ಸೌಹಾರ್ದ ಬ್ಯಾಂಕ್ ಕೇವಲ ಮೂರು ವರ್ಷಗಳಲ್ಲಿ ತನ್ನ ಹನ್ನೊಂದನೇ ಶಾಖೆಯನ್ನು ತೆರೆಯುವ ಮಟ್ಟಕ್ಕೆ ಬೆಳೆದಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.

    ಸಚಿವ ಎಂ ಬಿ ಪಾಟೀಲ ಮಾತನಾಡಿ, ಫ ಗು ಹಳಕಟ್ಟಿಯವರು ಸ್ಥಾಪಿಸಿದ ಬಿಎಲ್‌ಡಿಇ ಸಂಸ್ಥೆಗೆ ಮೂವತ್ತು ವರ್ಷಗಳ ಹಿಂದೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಲೂರಬೇಕೆಂಬ ಬಯಕೆ ಇತ್ತು. ನಂತರದ ದಿನಗಳಲ್ಲಿ ಸಹೋದರ ಸುನಿಲಗೌಡ ಪಾಟೀಲ ಅವರು ಆಸಕ್ತಿ ವಹಿಸಿದ್ದರಿಂದ ಅದು ಕಾರ್ಯರೂಪಕ್ಕೆ ಬಂದಿದೆ. ಹೆಚ್ಚು ಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸುನಿಲ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

    ಬೆಂಗಳೂರಿನ ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮುಂತಾದ ಭಾಗಗಳಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಇದ್ದಾರೆ. ಇವರ ಹಣಕಾಸು ಅಗತ್ಯಗಳಿಗೆ ಬಿಎಲ್ ಡಿ ಸೌಹಾರ್ದ ಬ್ಯಾಂಕ್ ಸ್ಪಂದಿಸಲಿ. ಮುಂದಿನ ದಿನಗಳಲ್ಲಿ ಆ ಭಾಗದಲ್ಲೂ ಶಾಖೆ ತೆರೆಯುವಂತಾಗಲಿ ಎಂದು ಅವರು ನುಡಿದಿದ್ದಾರೆ.

    ಈ ಸಂದರ್ಭದಲ್ಲಿ, ವಿಜಯಪುರ ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಅಪಾರ ಸಾಧನೆ ಮಾಡಿರುವ ವಿದ್ಯಾನಂದ ದೇಸಾಯಿ (ದೇಸಾಯಿ ಗ್ಲಾಸ್), ಡಾ.ರವಿಕುಮಾರ ಮುಕಾರ್ತಿಹಾಳ (ವೈದ್ಯಕೀಯ), ನಾನಾಸಾಹೇಬ ಹುಗ್ಗಿ (ಸಿವಿಲ್‌ ಕಂಟ್ರ್ಯಾಕ್ಟರ್), ಗುರುಪ್ರಸಾದ ನಡಗಡ್ಡಿ (ಸಾಫ್ಟ್ ವೇರ್ ಮತ್ತು ಅಥ್ಲೀಟ್ ತರಬೇತಿ) ಮತ್ತು ಮೌಲಾಲಿ ಅಲಗೂರು (ಮುಖ್ಯಪೇದೆ, ಶ್ವಾನದಳ) ಇವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಸುನೀಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಭಾಷಣ ಮಾಡಿ, ಮುಂದಿನ ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಇದೆ ಎಂದರು.

    ಉಪಾಧ್ಯಕ್ಷ ಶರಣು ಗುಡ್ಡೊಡಗಿ, ಮಾಜಿ ಉಪ ಮೇಯರ್ ಪುಟ್ಟರಾಜು, ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ಮಾಲೀಕ ಎಸ್ ಪಿ ದಯಾನಂದ, ಎಕ್ಸೆಲಿಯರ್ ಟ್ರಾವೆಲ್ಸ್ ಮಾಲೀಕ ನಾಗಭೂಷಣ ರೆಡ್ಡಿ, ಮೌರ್ಯ ಹೋಟೆಲ್ ಮಾಲೀಕ ಶ್ಯಾಮರಾಜ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಶಾಸಕ ಯತ್ನಾಳ್ ಆಕ್ಷೇಪ

  • ಜಮೀರ್ ಅಹ್ಮದ್ ಪಾಕಿಸ್ತಾನ ಸರ್ಕಾರದ ಸಚಿವ: ಸಿದ್ದಲಿಂಗ ಸ್ವಾಮೀಜಿ ಕಿಡಿ

    ಜಮೀರ್ ಅಹ್ಮದ್ ಪಾಕಿಸ್ತಾನ ಸರ್ಕಾರದ ಸಚಿವ: ಸಿದ್ದಲಿಂಗ ಸ್ವಾಮೀಜಿ ಕಿಡಿ

    ಕಲಬುರಗಿ: ಜಮೀರ್ ಅಹ್ಮದ್ (Zameer Ahmed) ನಮ್ಮ ರಾಜ್ಯ ಸರ್ಕಾರದ ಸಚಿವ ಅಲ್ಲ. ಪಾಕಿಸ್ತಾನ ಸರ್ಕಾರದ ಸಚಿವ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಕಿಡಿಕಾರಿದರು.

    ಕಲಬುರಗಿಯಲ್ಲಿ (Kalaburagi) ವಕ್ಫ್ ಹಠಾವೋ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಓರ್ವ ಅವಿವೇಕಿ ಸಚಿವ ಮಾಡಿದ್ದ ಹುನ್ನಾರ ಎಂದು ಸಚಿವ ಜಮೀರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಬುದ್ಧಿಗೇಡಿ ಸರ್ಕಾರ: ರವಿಕುಮಾರ್

    ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕು 100 ವರ್ಷಕ್ಕೆ ಇಸ್ಲಾಂ ರಾಷ್ಟ್ರ ಮಾಡೋ ಹುನ್ನಾರ ನಡೆದಿದೆ. ರೈತರ ಜಮೀನು ನುಂಗಿ ನೀರು ಕುಡಿಯುತ್ತಿದ್ದಾರೆ. ಮಠ ಮಂದಿರಗಳ ರಕ್ಷಣೆಗಾಗಿ ಬೀದಿಗಿಳಿದಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ದೇಶವನ್ನೇ ಪುಕ್ಕಟೆಯಾಗಿ ನೀಡುತ್ತೆ. ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ. ದಲಿತ ಕುಟುಂಬಗಳ ಆಸ್ತಿಗಳಿಗೆ ವಕ್ಫ್ ಕಣ್ಣು ಹಾಕಿದ್ರು. ಕಲಬುರಗಿ ಜಿಲ್ಲಾ ಉಸ್ತುವಾರಿ ಕಣ್ಣಿಗೆ ಕಾಣ್ತಿಲ್ಲ. ನಾನು ಕಲಬುರಗಿ ಬಿಟ್ಟು ಹೋಗದಂತೆ ಚಾರ್ಜ್‌ಶೀಟ್‌ ಹಾಕಿಲ್ಲ. ಕೋರ್ಟ್‌ನ ಒಂದು ಸಣ್ಣ ಆದೇಶ ಇಟ್ಟು, ಇಲ್ಲಿನ ಇನ್‌ಸ್ಪೆಕ್ಟರ್ ಚಾರ್ಜ್‌ಶೀಟ್‌ ಹಾಕ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

    ಹಿಂದೆ ಮಾಡಿದ ಭಾಷಣಕ್ಕಾಗಿ ನ್ಯಾಯಲಯ ಚಾರ್ಜ್ಶೀಟ್ ಹಾಕಿದ್ದು, ಜಿಲ್ಲೆ ಬಿಟ್ಟು ಹೋಗದಂತೆ ಹೇಳಿದೆ. ಅದನ್ನ ಇಟ್ಟುಕೊಂಡು ಆರು ತಿಂಗಳು ಕಳೆದ್ರು ಚಾರ್ಜ್‌ಶೀಟ್‌ ಹಾಕ್ತಿಲ್ಲ ಎಂದರು.

  • ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ

    ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ

    ತುಮಕೂರು: ಎಲ್ಲರ ಬಳಿಯೂ ಹೋಗಿ ಸಮೀಕ್ಷೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ ಎಂದು ಸಿದ್ದಂಗಾ ಮಠದ ಸಿದ್ದಲಿಂಗ ಶ್ರೀಗಳು (Siddalinga Swamiji) ಹೇಳಿದ್ದಾರೆ.

    ರಾಜ್ಯ ಸರ್ಕಾರ ಗುರುವಾರ ಜಾತಿ ಸಮೀಕ್ಷಾ ವರದಿ ಸ್ವೀಕಾರ ಮಾಡಿದ ವಿಚಾರಕ್ಕೆ ಸಿದ್ಧಗಂಗಾ ಮಠದಲ್ಲಿ (Siddaganga Matha) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ (Caste Survey) ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ವೈಜ್ಞಾನಿಕವಾಗಿ ಆಗಿಲ್ಲ, ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?

    ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ. ನನ್ನನ್ನಂತೂ ಯಾರೂ ಬಂದು ಸಂದರ್ಶನ ಮಾಡಿಲ್ಲ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ. ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಇದನ್ನೂ ಓದಿ: ಟಿಬೆಟ್ ವ್ಯಕ್ತಿಯಿಂದ ಹತ್ತಕ್ಕೂ ಹೆಚ್ಚು ಎತ್ತುಗಳಿಗೆ ಮಚ್ಚೇಟು – ಆರೋಪಿ ವಿರುದ್ಧ ರೈತರ ಆಕ್ರೋಶ

    ಪ್ರತಿಯೊಬ್ಬರನ್ನು ಕೇಳುತ್ತಾರಾ? ಅಥವಾ ಸಮಾಜದ ಮುಖಂಡರನ್ನ ಮಾತ್ರ ಕೇಳ್ತಾರಾ? ಏನು ಅಂತಾ ಗೊತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಂತಹ ವರದಿ ಸ್ವೀಕಾರ ಆಗಲಿ. ಆಯಾ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯಗಳು ವಿತರಣೆ ಆಗಲಿ ಎಂದು ಹೇಳಿದರು.

  • ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ನಾನು ಅಯೋಧ್ಯೆಗೆ ಹೋಗಲ್ಲ: ಸಿದ್ಧಲಿಂಗ ಶ್ರೀ

    ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ನಾನು ಅಯೋಧ್ಯೆಗೆ ಹೋಗಲ್ಲ: ಸಿದ್ಧಲಿಂಗ ಶ್ರೀ

    ತುಮಕೂರು: ಅಯ್ಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ನನಗೂ ಕೂಡ ಆಹ್ವಾನ ಬಂದಿದೆ. ಆದರೆ ನಾನು ಹೋಗಲು ಆಗುವುದಿಲ್ಲ.‌ ಕಾರಣ ಅದೇ ದಿನದಂದು ಲಿಂಗೈಕ್ಯ, ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ (Dr. Shivakumara Swamiji) 5ನೇ ವರ್ಷದ ಪುಣ್ಯ ಸ್ಮರಣೆ ಇರುವ ಕಾರಣ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಾನು ಹೋಗಲು ಆಗುವುದಿಲ್ಲ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಅವರು ಸ್ಪಷ್ಟಪಡಿಸಿದರು.

    ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಉದ್ಘಾಟನೆಯ ಮುನ್ನ ದಿನವೇ ಅಂದರೆ ಜನವರಿ 20ರಂದು ಬಂದು ಅಯೋಧ್ಯೆಯಲ್ಲಿ ತಂಗುವಂತೆ ಮನವಿ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಜನವರಿ 23 ರಂದೇ ಹಿಂದಿರುಗಲು ಹೇಳಿದ್ದಾರೆ. ಆದರೆ ನಾನು ಹೋಗಲು ಆಗುತ್ತಿಲ್ಲ. ಕಾರಣ, ಜನವರಿ 21ರಂದು ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆ ಇದೆ. ಈ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ಆದರೆ ಶ್ರೀ ಸಿದ್ದಗಂಗಾ ಮಠದಿಂದ ರಾಮ ಮಂದಿರ ಉದ್ಘಾಟನೆ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿ ಪತ್ರವನ್ನು ಕಳುಹಿಸಿಕೊಡಲಾಗಿದೆ ಎಂದು ಸ್ವಾಮೀಜಿ ಅವರು ಸ್ಪಷ್ಟನೆ ನೀಡಿದರು.

    ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಶ್ರೀ ರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನಿಂದ ಆಹ್ವಾನ ಬಂದಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಧಿಕೃತವಾಗಿ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಅಪಾರ ಸಂತಸ ತಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಗಮನಾರ್ಹ ಸಾಧನೆಯಾಗಿದೆ. ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಪ್ರದರ್ಶಿಸದೆ ಏಕತೆಯ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

    ರಾಮ ಮಂದಿರ ದೇವಾಲಯ ಪೂರ್ಣಗೊಂಡಿರುವುದು ಒಂದು ಐತಿಹಾಸಿಕ ಮೈಲುಗಲ್ಲು ಆಗಿದೆ. ರಾಮ ಮಂದಿರದ ವಾಸ್ತುಶಿಲ್ಪದ ವಿನ್ಯಾಸವು ಸಾಂಪ್ರದಾಯಕ ಹಾಗೂ ಆಧುನಿಕತೆಯ ಮಿಶ್ರಣಗೊಂಡಿರುವುದು ಖುಷಿ ತಂದಿದೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.

  • ಸಚಿವ ಜಮೀರ್ ಅಹ್ಮದ್ ಸಿದ್ದಗಂಗಾ ಮಠಕ್ಕೆ ಭೇಟಿ

    ಸಚಿವ ಜಮೀರ್ ಅಹ್ಮದ್ ಸಿದ್ದಗಂಗಾ ಮಠಕ್ಕೆ ಭೇಟಿ

    ತುಮಕೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan)  ಅವರು ಇಂದು (ಮಂಗಳವಾರ) ಸಿದ್ದಗಂಗಾ ಮಠ (Siddaganga Mutt Tumakuru) ಕ್ಕೆ ಭೇಟಿ ನೀಡಿದ್ದಾರೆ.

    ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಗಳ ಆಶೀರ್ವಾದ ಪಡೆದರು. ಬಳಿಕ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಚಿವರು ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ನೋಟ್ ಬುಕ್, ಪಠ್ಯಪುಸ್ತಕ ದರದಲ್ಲಿ ಏರಿಕೆ- ಪೋಷಕರಿಗೆ ಆತಂಕ

    ಇದೇ ವೇಳೆ ಸಿದ್ದಲಿಂಗ ಸ್ವಾಮೀಜಿಯವರು ಮಠದ ಅನುದಾನ ತಡೆಹಿಡಿದ ಬಗ್ಗೆ ವಸತಿ ಸಚಿವರ ಬಳಿ ಪ್ರಸ್ತಾಪ ಮಾಡಿದರು. ಶ್ರೀ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಹಿಡಿದು ಬರುತ್ತಿದ್ದಾರೆ. ಆದರೆ ಕಟ್ಟಡ ಕೊರತೆಯಿಂದ ಅಡ್ಮಿಷನ್ ನಿಲ್ಲಿಸಲಾಗಿದೆ. ಹಿಂದಿನ ಸರ್ಕಾರ ಮಂಜೂರು ಮಾಡಿದ ಬಿಲ್ಡಿಂಗ್ ರೆಡಿಯಾದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಸಚಿವರ ಬಳಿ ಶ್ರೀಗಳು ಹೇಳಿಕೊಂಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಂತ್ರಿ ಆದಾಗೆಲ್ಲ ಸಿದ್ದಗಂಗಾ ಮಠಕ್ಕೆ ಬಂದು ನಾನು ಆಶೀರ್ವಾದ ಪಡೆಯುತ್ತೇನೆ. ಇಂದು ಕೂಡ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಓದಿಗೆ ಕಟ್ಟಡದ ಕೊರತೆಯಿದೆ. ಕೊರತೆ ಬಗ್ಗೆ ಶ್ರೀಗಳು ನನ್ನ ಗಮನಕ್ಕೆ ತಂದಿದ್ದಾರೆ. ಸರ್ಕಾರ ಸಿದ್ದಗಂಗಾ ಮಠದ ಅನುದಾನ ತಡೆ ಹಿಡಿದಿರುವ ಬಗ್ಗೆ ನಾನು ಸಿಎಂ ಗಮನಕ್ಕೆ ತರುತ್ತೇನೆ ಎಂದರು.

    ಅನುದಾನ ಮಂಜೂರು ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಐದು ಗ್ಯಾರಂಟಿಗಳು ಅನುಷ್ಠಾನ ಆಗೇ ಆಗುತ್ತದೆ. ಆದರೆ ಮಾಧ್ಯಮದವರು ತುಂಬಾ ಆತುರ ಪಡುತ್ತಿದ್ದಾರೆ. ಸಮಯಾವಕಾಶ ಪಡೆದು ನಾವು ಜಾರಿ ಮಾಡುತ್ತೇವೆ ಎಂದು ಜಮೀರ್ ಹೇಳಿದರು.

  • ಆಸ್ತಿ ವಿಷಯಕ್ಕೆ ರೈತನ ಮೇಲೆ ಮಾರಣಾಂತಿಕ ಹಲ್ಲೆ – ಸ್ವಾಮೀಜಿ, ಬೆಂಬಲಿಗರ ಮೇಲೆ ಎಫ್‌ಐಆರ್

    ಆಸ್ತಿ ವಿಷಯಕ್ಕೆ ರೈತನ ಮೇಲೆ ಮಾರಣಾಂತಿಕ ಹಲ್ಲೆ – ಸ್ವಾಮೀಜಿ, ಬೆಂಬಲಿಗರ ಮೇಲೆ ಎಫ್‌ಐಆರ್

    ಬೀದರ್: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ರೈತನ (Farmer) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಸವತೀರ್ಥ ಮಠದ ಸ್ವಾಮೀಜಿ ಹಾಗೂ ಬೆಂಬಲಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

    ಜಮೀನು ಆಸ್ತಿ ವಿಷಯಕ್ಕೆ ಬಸವತೀರ್ಥ ಮಠದ ಸ್ವಾಮೀಜಿ ಬೆಂಬಲಿಗರು ಹಾಗೂ ತಾಂಡ ಜನರ ನಡುವೆ ಗಲಾಟೆಯಾಗಿತ್ತು. ಸ್ವಾಮೀಜಿ ಬೆಂಬಲಿಗರು ತಾಂಡ ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದೀಗ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಹಾಗೂ ಇಬ್ಬರು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಸ್ ನಿಲ್ದಾಣ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ – ಚಾಕು ಇರಿತದಿಂದ ಯುವಕ ಗಂಭೀರ

    ಬೀದರ್ (Bidar) ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಕಲ್ಲೂರು ತಾಂಡದ ಸೋಮಲು ಎಂಬ ರೈತನ 4 ಎಕರೆ ಜಮೀನು ಮಠಕ್ಕೆ ಸೇರಬೇಕು ಎಂದು ಸ್ವಾಮೀಜಿ ಬೆಂಬಲಿಗರು ರೈತ ಸೋಮಲು, ಪತ್ನಿ ಹಾಗೂ ತಾಂಡದ ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ರೈತ ಸೋಮಲು ಚಿಟಗುಪ್ಪಾ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆ ಸ್ವಾಮೀಜಿ ಬೆಂಬಲಿಗರ ವಿರುದ್ಧ ಮಾರಣಾಂತಿಕ ಹಲ್ಲೆ ಹಾಗೂ ಜೀವ ಬೆದರಿಕೆ ಕೇಸ್ ದಾಖಲಾಗಿದೆ.

    ಬಸವತೀರ್ಥ ಮಠದ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡುವ ವೇಳೆ ಬಸವತೀರ್ಥ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಗಾಳಿಯಲ್ಲಿ ಗುಂಡು ಕೂಡಾ ಹಾರಿಸಿದ್ದಾರೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸಿದ್ದಲಿಂಗ ಸ್ವಾಮೀಜಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿದ್ದು ಸತ್ಯ: ಸಿದ್ದಗಂಗಾ ಶ್ರೀ

    ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿದ್ದು ಸತ್ಯ: ಸಿದ್ದಗಂಗಾ ಶ್ರೀ

    ದಾವಣಗೆರೆ: ಇತ್ತೀಚಿಗೆ ಪಠ್ಯಪುಸ್ತಕ ವಿವಾದ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಉಂಟಾಗಬಾರದು ಎಂದು ದಾವಣಗೆರೆಯಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.

    ಪಠ್ಯ ಪುಸ್ತಕ ವಿಚಾರವಾಗಿ ಈಗ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಇದರಲ್ಲಿ ಯಾವುದೇ ಶಿಕ್ಷಣ ಇದ್ದರು ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಇವತ್ತಿನ ಪಠ್ಯದಲ್ಲಿ ನೈತಿಕ ಶಿಕ್ಷಣದ ಕೊರತೆ ಜಾಸ್ತಿ ಕಾಣುತ್ತಿದೆ. ಅದರ ಜೊತೆ ಮೂಲ ವಿಚಾರಗಳನ್ನು ತಿದ್ದದೇ ವಾಸ್ತವ ವಿಚಾರಗಳನ್ನು ಪಠ್ಯದಲ್ಲಿ ನೀಡಬೇಕು. ಈಗಾಗಲೇ ಪಠ್ಯ ಪುಸ್ತಕ ರಚನಾ ಸಮಿತಿ, ತಜ್ಞರ ಸಮಿತಿ ಅದಕ್ಕೆ ಮಾರ್ಗದರ್ಶನ ನೀಡುತ್ತಿದೆ. ಈ ವಿವಾದ ಬಗೆಹರಿದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಜೊತೆಗೆ ನೈತಿಕ ಪ್ರಜ್ಞೆ ಜಾಗೃತಿಗೊಳಿಸುವ, ನೈತಿಕ ಮೌಲ್ಯಗಳನ್ನು ಪಠ್ಯ ಹೊಂದಿರಬೇಕು ಎಂದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದನ್ನು ಏನಾದರು ತಿದ್ದಿದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವಣ್ಣನವರು ಏನು ಹೇಳಿದ್ದಾರೋ ವಾಸ್ತವ ವಿಚಾರ ಪ್ರಕಟವಾಗಬೇಕು. ಈ ಸಮಾಜಕ್ಕೆ ಬಸವಣ್ಣನವರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕವಾಗಿ ಆರ್ಥಿಕವಾಗಿ ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ಒಬ್ಬರಿಗೆ ಇಬ್ಬರಿಗೆ ಅಲ್ಲ, ಬದಲಿಗೆ ಎಲ್ಲರಿಗೂ ಬೇಕಾದ ವಿಚಾರಗಳನ್ನು ಬಸವಣ್ಣ ನೀಡಿದ್ದಾರೆ. ಅವರ ವಚನಗಳೇ ನಮಗೆ ಆಧಾರ. ಅವುಗಳನ್ನು ತಿದ್ದದೇ ಹೇಗಿದೆಯೋ ಹಾಗೆ ಕೊಡಬೇಕು ಎಂದರು. ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಸುತ್ತಿದ ರೈತರು, ಕುರಿಗಾಹಿಗಳು

    ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ಆ ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಠಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು. ಮುಖ್ಯಮಂತ್ರಿಗಳು ಹೇಳಿದ್ದಾರೆ, ಶಿಕ್ಷಣ ಸಚಿವರು ವರದಿ ಕೊಟ್ಟ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವೀರಶೈವ ಪಂಥ ಸ್ಥಾಪನೆ ಬಸವ ಧರ್ಮ ವಿಚಾರವಾಗಿ ಗೊಂದಲ ಇದೆ. ಬಸವಣ್ಣ ಒಬ್ಬ ಮಾನವತವಾದಿ. ಮಾನವ ಬದುಕಿಗೆ ಕೊಟ್ಟಿರುವುದು ಬಹಳ ಮುಖ್ಯ ಎಂದರು.

  • ಸಿಎಂ ಕ್ರಮಕ್ಕೆ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ವಿರೋಧ

    ಸಿಎಂ ಕ್ರಮಕ್ಕೆ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ವಿರೋಧ

    ಗದಗ: ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯತಾ ದಿನ ಎಂದು ಘೋಷಿಸಿದ ಸಿಎಂ ಕ್ರಮವನ್ನು ದಿಂಗಾಲೇಶ್ವರ ಸ್ವಾಮೀಜಿ ತೀವ್ರವಾಗಿ ವಿರೋಧಿಸಿದ್ದಾರೆ.

    ಆರ್‍ಎಸ್‍ಎಸ್ ಬಗ್ಗೆ, ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂತೆ ತೋಂಟದಾರ್ಯ ಶ್ರೀಗಳು ಮಾತನಾಡುತ್ತಿದ್ರು. ಜಾತಿ ಜಾತಿ ನಡ್ವೆ ತಂದಿಡ್ತಾ ಇದ್ರು. ಅಂಥವರ ಹೆಸರಲ್ಲಿ ಭಾವೈಕ್ಯ ದಿನ ಎಂದು ಘೋಷಿಸಿದ್ದು ತಪ್ಪು. ಸಿಎಂ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಚಿವ ಸಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂತಹ ಆರೋಪ ಮಾಡೋದು ಸರಿಯಲ್ಲ. ದಿಂಗಾಲೇಶ್ವರರ ಮಠಕ್ಕೆ ಅನುದಾನ ಕೊಟ್ಟಿಲ್ಲ ಅಂತಾ ಹೀಗೆಲ್ಲಾ ಮಾತಾಡ್ತಾ ಇದ್ದಾರೆ. ನಿಮ್ಮ ಪೂರ್ವಾಶ್ರಮದ ಕತೆ ನಮಗೂ ಗೊತ್ತು. ಮೂರುಸಾವಿರ ಮಠದ ಗದ್ದುಗೆಯನ್ನು ತೋಳ್ಬಲದ ಮೂಲಕ ಏರಲು ನೋಡಿದ್ರಿ.. ನೀವು ಪೀಠದಲ್ಲಿದ್ದೀರಿ ಎಂಬ ಕಾರಣಕ್ಕೆ ಸ್ವಾಮೀಜಿ ಎಂದು ಒಪ್ಪಿದ್ದೀವಿ ಅಷ್ಟೇ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ತಿರುಗೇಟು ನೀಡಿದ್ದಾರೆ. ವ್ಯಕ್ತಿ ವಿಚಾರಗಳ ಚರ್ಚೆಗೆ ವೇದಿಕೆ ನಿರ್ಮಾಣವಾಗಲಿ ಎಂದು ಸವಾಲ್ ಹಾಕಿದ್ದಾರೆ.

    ಸ್ವಾಮೀಜಿ ಆರೋಪಕ್ಕೆ ಬಿಜೆಪಿ ಗರಂ: ಮಠಗಳ ಅನುದಾನಕ್ಕೂ 30 ಪರ್ಸೆಂಟ್ ಕಮೀಷನ್ ಕೊಡ್ಬೇಕಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಬಗ್ಗೆ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ. ಬೊಮ್ಮಾಯಿ ಸರ್ಕಾರದಲ್ಲಿ ಮಠಗಳಿಂದ 30% ಕಮೀಷನ್ ಪಡೆಯೋದು ಸರ್ವೇ ಸಾಮಾನ್ಯ ಆಗಿದೆ. ಕರ್ನಾಟಕ ಭ್ರಷ್ಟಾಚಾರದ ದುರ್ವಾಸನೆ ಎಲ್ಲೆಡೆಯೂ ಹಬ್ಬಿದೆ.. ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡದೇ ಪುರಾವೆ ಕೇಳುತ್ತಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

    ಆದರೆ ಸ್ವಾಮೀಜಿ ಹೇಳಿಕೆಗೆ ಬಿಎಸ್‍ವೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಿಸಿ ಪಾಟೀಲರಂತೂ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉಡುಪಿಯ ಪಲಿಮಾರು ಶ್ರೀಗಳು, ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಬೇರೇನೋ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

  • ಶಾಲೆಲಿ ಎಲ್ರೂ ಪ್ರೀತಿ ವಿಶ್ವಾಸದಿಂದ ಇರಿ, ಬೇರೆಯದಕ್ಕೆ ಅವಕಾಶ ನೀಡ್ಬೇಡಿ: ಸಿದ್ದಗಂಗಾ ಶ್ರೀ

    ಶಾಲೆಲಿ ಎಲ್ರೂ ಪ್ರೀತಿ ವಿಶ್ವಾಸದಿಂದ ಇರಿ, ಬೇರೆಯದಕ್ಕೆ ಅವಕಾಶ ನೀಡ್ಬೇಡಿ: ಸಿದ್ದಗಂಗಾ ಶ್ರೀ

    ತುಮಕೂರು: ಶಾಲೆ ಎಂದ ಮೇಲೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು. ಯಾವುದೇ ಕಾರಣಕ್ಕೂ ಬೇರೆಯದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣಪೀಠದ ಆದೇಶ ಬಂದಿದೆ. ಯಾವುದಕ್ಕೂ ಅವಕಾಶ ಮಾಡಿಕೊಡದೇ ಶಾಂತಿಯುತ ವಾತಾವರಣಕ್ಕೆ ಎಲ್ಲರೂ ಸಹಕರಿಸಬೇಕು. ಶಿಸ್ತು ನಿಯಮ ಪಾಲನೆ ಮಾಡಿ ಕರ್ನಾಟಕದ ಸಂಸ್ಕೃತಿ ಪರಂಪರೆ ಎತ್ತಿ ಹಿಡಿದು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿದರು.

    ಸುದೀರ್ಘ ಚರ್ಚೆ, ವಾದ, ಪ್ರತಿವಾದ ಆಲಿಸಿ ಕೋರ್ಟ್ ತೀರ್ಪು ಕೊಟ್ಟಿದೆ. 15 ದಿನಗಳ ಕಾಲ ಸಮಯಾವಕಾಶದ ನಂತರ ಇವತ್ತು ತೀರ್ಪು ಪ್ರಕಟವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರ ಸಂಹಿತೆ ಕಾನೂನು ಪಾಲನೆ ಮಾಡಬೇಕು ಎಂದು ತೀರ್ಪು ಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು