Tag: siddalinga shree

  • ಮಠದ ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಸಿದ್ದಗಂಗಾ ಶ್ರೀ

    ಮಠದ ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಸಿದ್ದಗಂಗಾ ಶ್ರೀ

    ತುಮಕೂರು: ಸಿದ್ದಗಂಗಾ ಮಠದ ಅಂಗಳದಲ್ಲಿ ಕ್ರಿಕೆಟ್ ಕಲರವ ಕೇಳಿಬಂದಿದ್ದು ಶ್ರೀಗಳು ಮಕ್ಕಳ ಜೊತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.

    ಹೌದು. ಸಿದ್ದಲಿಂಗ ಸ್ವಾಮೀಜಿಗಳು ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಇಷ್ಟು ದಿನ ಶ್ರೀಗಳಾಗಿ ಮಾತ್ರ ವಿದ್ಯಾರ್ಥಿಗಳು ಸಿದ್ದಲಿಂಗ ಸ್ವಾಮೀಜಿ ಅವರನ್ನು ನೋಡಿದ್ದರು. ಆದರೆ ಸ್ವಾಮೀಜಿ ಕೂಡ ಇಷ್ಟೊಂದು ಚೆನ್ನಾಗಿ ಕ್ರಿಕೆಟ್ ಆಡುತ್ತಾರೆ ಎಂಬ ಸಂಗತಿ ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಹೀಗಾಗಿ ಸ್ವಾಮೀಜಿ ಬ್ಯಾಟ್ ಬೀಸಿದ ಪರಿಗೆ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ.

    ಬುಧವಾರ ಸಂಜೆ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಶ್ರೀಗಳು ಮಕ್ಕಳೊಟ್ಟಿಗೆ ತಾವೂ ಕೂಡ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ. ಸಿಕ್ಸರ್ ಮೇಲೆ ಸಿಕ್ಸರ್ ಭಾರಿಸಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಶ್ರೀಗಳು ಬ್ಯಾಟ್ ಹಿಡಿದು ಸಿಕ್ಸರ್ ಬಾರಿಸುತ್ತಿದ್ದಂತೆ ಮಕ್ಕಳು ಸಿಕ್ಕಾಪಟ್ಟೆ ಖುಷಿಪಟ್ಟರು.

  • ಸಂಪ್ರದಾಯದಂತೆ ನಗರದಲ್ಲಿ ಭಿಕ್ಷಾಟನೆ ಮಾಡಿದ ಸಿದ್ದಲಿಂಗ ಶ್ರೀಗಳು!

    ಸಂಪ್ರದಾಯದಂತೆ ನಗರದಲ್ಲಿ ಭಿಕ್ಷಾಟನೆ ಮಾಡಿದ ಸಿದ್ದಲಿಂಗ ಶ್ರೀಗಳು!

    ತುಮಕೂರು: ಸಿದ್ದಗಂಗಾ ಮಠದ ಸಂಪ್ರದಾಯದಂತೆ ಸಿದ್ದಲಿಂಗೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಸಿದ್ದಲಿಂಗ ಸ್ವಾಮೀಜಿಗಳು ನಗರದಲ್ಲಿ ಭಿಕ್ಷಾಟನೆ ಮಾಡಿದ್ದಾರೆ.

    ನಗರದ ವಿವಿಧ ವಾಣಿಜ್ಯ ಸಂಕೀರ್ಣ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಶ್ರೀಗಳು ಭಿಕ್ಷಾಟನೆ ಮಾಡಿದ್ದಾರೆ. ಈ ವೇಳೆ ಧನ, ದವಸ-ಧಾನ್ಯಗಳನ್ನು ಭಕ್ತಾಧಿಗಳು ದಾನವಾಗಿ ನೀಡಿದ್ದಾರೆ. ಇದೇ ತಿಂಗಳ 26ರಿಂದ ನಡೆಯಲಿರುವ ಸಿದ್ದಲಿಂಗೇಶ್ವರ ಜಾತ್ರೆಗಾಗಿ ಸಿದ್ದಲಿಂಗ ಶ್ರೀಗಳು ಮಠದ ಪರಂಪರೆಯಂತೆ ಕಾಲ್ನಡಿಗೆಯಲ್ಲಿ ನಗರದ ಹಲವು ಭಕ್ತಾಧಿಗಳಿಂದ ದಾನವನ್ನು ಪಡೆದಿದ್ದಾರೆ.

    ಶಿವೈಕ್ಯರಾಗಿರುವ ಶಿವಕುಮಾರ ಶ್ರೀಗಳು ಕೂಡಾ ಸಿದ್ದಲಿಂಗೇಶ್ವರ ಜಾತ್ರೆ ಪ್ರಯುಕ್ತ ಜೋಳಿಗೆ ಹಿಡಿದು ಈ ಹಿಂದೆ ಭಿಕ್ಷಾಟನೆ ಮಾಡುತ್ತಿದ್ದರು. ಹಾಗೆಯೇ ಈ ಪರಂಪರೆಯನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದಲಿಂಗ ಶ್ರೀಗಳು, ಶಿವರಾತ್ರಿ ವೇಳೆಯಲ್ಲಿ ಪ್ರತಿ ವರ್ಷ ಸಿದ್ದಲಿಂಗೇಶ್ವರ ಜಾತ್ರೆಯನ್ನು ನಡೆಸಲಾಗುತ್ತದೆ. ಅದರಂತೆ ಈ ಬಾರಿ ಕೂಡ ಜಾತ್ರಾಮಹೋತ್ಸವವನ್ನು ಆಚರಿಸಲಿದ್ದೇವೆ. ಜಾತ್ರೆಗಾಗಿ ಭಕ್ತಾಧಿಗಳ ಬಳಿ ಭಿಕ್ಷಾಟನೆ ಮಾಡಿ ದಾನ ಪಡೆಯುವುದು ಹಲವು ವರ್ಷಗಳಿಂದ ನಡೆದುಬಂದ ಪದ್ಧತಿ. ಇದನ್ನು ನಾನು ಕೂಡ ಮುಂದುವರಿಸಿಕೊಂಡು ಬಂದಿದ್ದೇನೆ. ಇಷ್ಟು ವರ್ಷ ಹೇಗೆ ಜಾತ್ರಾಮಹೋತ್ಸವ ನಡೆಯುತ್ತಿತ್ತೋ ಅದೇ ರೀತಿ ಈ ಬಾರಿ ಕೂಡ ನಡೆಯುತ್ತದೆ. ಇನ್ನೂ 4 ದಿನಗಳ ಕಾಲ ಭಿಕ್ಷಾಟನೆಯನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv