Tag: Siddaganga Shri

  • ತಾಮ್ರದ ತಗಡಿನಲ್ಲಿ ಬರೆಯುವ ಅಂತ್ರ ಭಕ್ತರಿಗೆ ನೆಮ್ಮದಿ ಕೊಡುವ ಜೀವಾಮೃತ!

    ತಾಮ್ರದ ತಗಡಿನಲ್ಲಿ ಬರೆಯುವ ಅಂತ್ರ ಭಕ್ತರಿಗೆ ನೆಮ್ಮದಿ ಕೊಡುವ ಜೀವಾಮೃತ!

    ಸಿದ್ದಗಂಗಾ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಸಹಜ ಸಾತ್ವಿಕ ರೂಪದವು. ಸಿದ್ದಗಂಗಾ ಕ್ಷೇತ್ರಕ್ಕೆ ಬರುವುದೇ ಜನ ನೆಮ್ಮದಿಯನ್ನು ಅರಸಿಕೊಂಡು. ಇಲ್ಲಿ ಪಡೆಯುವ ನೆಮ್ಮದಿ ಅದೆಲ್ಲಿಯೂ ಸಿಗಲಾರದು ಎನ್ನುವ ನಂಬಿಕೆ ಕ್ಷೇತ್ರದ ಭಕ್ತರದ್ದು. ಅದೊಂದು ಅಸದೃಶ್ಯ, ಅನಿರ್ವಚನೀಯ ಭಾವನಾತ್ಮಕ ನೆಮ್ಮದಿ.

    ಇಲ್ಲಿ ಪ್ರತಿ ಶುಕ್ರವಾರ ಶ್ರೀಮಠದ ಜಗಲಿಯಲ್ಲಿ ಸಿದ್ದಗಂಗಾ ಶ್ರೀಗಳು ಹಳೆಯ ಕಾಲದ ಮಂಚವೊಂದಲ್ಲಿ ಕೂತು ಅರಸಿ ಬರುವ ದುಃಖಿ ಭಕ್ತರಿಗೆ ತಾಮ್ರದ ತಗಡಿನಲ್ಲಿ ಒಂದು `ಅಂತ್ರ’ ಬರೆದುಕೊಡುತ್ತಾರೆ. ಈ ಬಗ್ಗೆ ವೈಚಾರಿಕರು ಕೇಳಿದ ಪ್ರಶ್ನೆಗೂ ಸ್ವಾಮೀಜಿ ಒಂದು ಬಾರಿ ಉತ್ತರ ಕೊಟ್ರಂತೆ. ಇದು ಭಕ್ತರ ನಂಬಿಕೆ. ನೊಂದವರಿಗೆ ಇದ್ರಿಂದ ಒಂದಿಷ್ಟು ನೆಮ್ಮದಿ ಸಿಗುತ್ತೆ. ಶ್ರದ್ಧೆ ಧಾರ್ಮಿಕ ನಂಬಿಕೆಯನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲು ಬರುವುದಿಲ್ಲ. ಅದು ಭೌತವಸ್ತ್ರವಲ್ಲ ಭಾವ ಸಂಪತ್ತು ಅಂದ್ರಂತೆ.

    ದುಃಖಗೊಂಡ ವ್ಯಕ್ತಿಗೆ ಸಿದ್ದಗಂಗಾ ಶ್ರೀಗಳು ಕೈಯಾರೆ ಕೊಡುವ ಈ `ಅಂತ್ರ’ ಮನಸ್ಸಿನ ಸಂಕಟವನ್ನು ಹಗುರಗೊಳಿಸುತ್ತದೆ. ಜನಮಾನಸದಲ್ಲಿ ಭಕ್ತಿ ಭಾವವನ್ನು ನೆಲೆಗೊಳಿಸಿರುವ ಈ ಕ್ಷೇತ್ರದಲ್ಲಿ ಭಕ್ತರಿಗೆ ಶ್ರೀಗಳ ದರ್ಶನದ ಜೊತೆಗೆ ಸಿದ್ದಗಂಗಾ ಬೆಟ್ಟದ ಮೇಲಿರುವ ಸಿದ್ಧಲಿಂಗೇಶ್ವರ ಮತ್ತು ಕ್ಷೇತ್ರಮಾತೆ ಸಿದ್ದಗಂಗಾ ಜಲಕುಂಡಕ್ಕೆ ಪೂಜೆ ಸಲ್ಲಿಸುವುದು ಕೂಡ ಪುಣ್ಯದ ಭಾವನೆ ನೀಡುತ್ತದೆ.

    ಸಿದ್ದಗಂಗಾ ಕ್ಷೇತ್ರದಲ್ಲಿ ಹಿರಿಯ ಗುರುಗಳ ಗದ್ದುಗೆಗೆ ನಡೆಯುವ ನಿತ್ಯಪೂಜೆಗಳಲ್ಲದೇ ನಿಯತಕಾಲಿಕವಾಗಿ ವಿಶೇಷ ಪುಣ್ಯರಾಧನೆ ಮೊದಲಾದ ಧಾರ್ಮಿಕ ಸೇವೆ ನಡೆಯುತ್ತದೆ. ಶ್ರೀ ಕ್ಷೇತ್ರದ ದೇವರು, ಗುಡಿ, ಗದ್ದುಗೆ, ಜಲಕುಂಡ, ಎಲ್ಲವೂ ಶ್ರೀಗಳಷ್ಟೇ ಭಕ್ತರ ಪಾಲಿಗೆ ಪವಿತ್ರ. ಶ್ರೀಗಳ ಮೇಲೆ, ಕ್ಷೇತ್ರದ ಮೇಲೆ ಭಕ್ತಸಮೂಹ ಇಟ್ಟಿರುವ ಪ್ರೀತಿ ನಂಬಿಕೆಯನ್ನು ಅಳೆಯಲು ಸಾಧ್ಯವೇ ಇಲ್ಲ ಬಿಡಿ.

    https://www.youtube.com/watch?v=jtctwPaRF7o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಟ್ಟೂರಿಗೆ 25 ವರ್ಷ ಕಾಲಿಡದ ನಡೆದಾಡುವ ದೇವರು!

    ಹುಟ್ಟೂರಿಗೆ 25 ವರ್ಷ ಕಾಲಿಡದ ನಡೆದಾಡುವ ದೇವರು!

    ತುಮಕೂರು: ನಡೆದಾಡುವ ದೇವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಮ್ಮ ಹುಟ್ಟೂರಿಗೆ 25 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ.

    ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದ ಪಟೇಲ್ ಹೊನ್ನಪ್ಪ ಅವರಿಗೆ ಮಗ ಶಿವಣ್ಣ (ಶಿವಕುಮಾರ ಸ್ವಾಮೀಜಿ) ಉನ್ನತ ಅಧಿಕಾರಿ ಆಗಬೇಕು ಎನ್ನುವ ಆಸೆಯಿತ್ತು. ಇತ್ತ ಉದ್ಧಾನ ಶಿವಯೋಗಿಗಳು, ಬಿ.ಎ. ವ್ಯಾಸಂಗ ಪೂರ್ಣಗೊಳಿಸಿದ್ದ ಶಿವಣ್ಣ ಸನ್ಯಾಸತ್ವ ಸ್ವೀಕರಿಸಬೇಕು. ಜಗತ್ತಿಗೆ ಬೆಳಕಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಶಿವಣ್ಣ ಸನ್ಯಾಸತ್ವ ಸ್ವೀಕರಿಸಿದ್ದಾನೆ ಎನ್ನುವುದನ್ನು ದು:ಖದಲ್ಲಿರುವ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗೆ ಸಾಂತ್ವಾನ ಹೇಳಲು ಶಿವಯೋಗಿಗಳು ಖುದ್ದಾಗಿ ವೀರಾಪುರಕ್ಕೆ ಹೋಗಿದ್ದರು. ಆದರೆ ಹೊನ್ನಪ್ಪ ಶಿವಯೋಗಿಗಳಿಗೆ ಭೇಟಿಯಾಗಬಾರದು ಅಂತ ಮನೆಯಿಂದ ಆಚೆ ಹೋಗಿದ್ದರು. ಇದರಿಂದಾಗಿ ಮನನೊಂದ ಶಿವಯೋಗಿಗಳು ಅಲ್ಲಿಂದ ನಡೆದುಕೊಂಡೇ ಮಠಕ್ಕೆ ಮರಳಿದ್ದರು.

    ಶ್ರೀಗಳು ಮಠಕ್ಕೆ ಮರಳಿದಾಗ ನಡೆದ ಘಟನೆಯನ್ನು ಶಿಷ್ಯ ಶಿವಕುಮಾರ ಸ್ವಾಮೀಜಿಗಳಿಗೆ ವಿವರಿಸಿದರಂತೆ. ಗುರುಗಳ ಮೇಲೆ ಅಪಾರ ಭಕ್ತಿ ಹೊಂದಿದ್ದ ಶಿವಕುಮಾರ ಶ್ರೀಗಳಿಗೆ ತಂದೆ ನಡೆದುಕೊಂಡಿದ್ದು ಸರಿಯಲ್ಲ ಅನಿಸಿತ್ತು. ಇದರಿಂದಾಗಿ ಹುಟ್ಟೂರು ವೀರಾಪುರ ಗ್ರಾಮಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಗ್ರಾಮಕ್ಕೆ ಕಾಲಿಟ್ಟಿದ್ದು ಹೇಗೆ?:
    ಸಿದ್ದಗಂಗಾ ಮಠದ ಜವಾಬ್ದಾರಿ ಹೊತ್ತ ಶ್ರೀಗಳು, ಮಕ್ಕಳು ಶಿಕ್ಷಣ, ದಾಸೋಹ, ಸಮಾಜಿಕ ಸೇವೆ, ಇಷ್ಟಲಿಂಗ ಪೂಜೆ, ಓದು, ಭಕ್ತರ ಭೇಟಿ, ಪ್ರವಚನದಲ್ಲಿ ನಿರತರಾಗಿದ್ದರು. ಈ ನಡುವೆ ತಮ್ಮ ಗ್ರಾಮಕ್ಕೆ ಬರುವಂತೆ ವೀರಾಪುರ ಜನರು 1930ರಿಂದ 1955ರ ವರೆಗೂ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಶ್ರೀಗಳು ಮಾತ್ರ ಭಕ್ತರಿಗೆ ನಗುಮುಗದಿಂದಲೇ ಬರಲು ಆಗುವುದಿಲ್ಲ ಅಂತ ಹೇಳುತ್ತಿದ್ದರು.

    ಶಿವಕುಮಾರ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ಸಿದ್ದಗಂಗಾ ಮಠಕ್ಕೆ ಬಂದು, ನೂತನ ಗೃಹ ಪ್ರವೇಶಕ್ಕೆ ನೀವು ಬರಬೇಕು ಅಂತ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಶಿವಯೋಗಿಗಳ ಕೃಪೆಯಿಂದ ದೂರವಾಗಿರುವ ಆ ಮನೆಗೆ ನಾನು ಬರುವುದಿಲ್ಲ ಅಂತ ತಿಳಿಸಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ನಿಮ್ಮ ಅಪ್ಪಣೆಯಂತೆ ಆಗಲಿ. ನೀವು ಬಂದು ಗೃಹ ಪ್ರವೇಶ ಮಾಡಬೇಕು ಎನ್ನುವುದು ನಮ್ಮ ಸಂಕಲ್ಪ. ಒಂದು ವೇಳೆ ನೀವು ಬರದೇ ಹೋದರೆ ಮನೆ ಹಾಳುಬಿದ್ದರೂ ನಾವು ಗೃಹಪ್ರವೇಶ ಮಾಡುವುದಿಲ್ಲ ಎಂದು ಶ್ರೀಗಳಿಗೆ ನಮ್ಮ ಮನವಿ ಒಪ್ಪಿಸಿ ಗ್ರಾಮಕ್ಕೆ ತೆರಳಿದರು.

    ಭಕ್ತನ ಭಕ್ತಿ ದೊಡ್ಡದು, ಅದಕ್ಕೂ ಶಕ್ತಿಯಿದೆ ಅಂತ ಅರಿತಿದ್ದ ಶ್ರೀಗಳು ಭಕ್ತರ ಸಂಕಲ್ಪಕ್ಕೆ ಕರಗಿ ಗೃಹಪ್ರವೇಶಕ್ಕೆ ಬರುವುದಾಗಿ ತಿಳಿಸಿದ್ದರು. ಈ ಮೂಲಕ 25 ವರ್ಷದ ಬಳಿಕ 1955ರಲ್ಲಿ ಶ್ರೀಗಳು ಹುಟ್ಟೂರಿಗೆ ಕಾಲಿಟ್ಟಿದ್ದರು.

    https://www.youtube.com/watch?v=ZE7ZGlEjjjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

    2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

    ತುಮಕೂರು: ಏಳು ಶತಮಾನಗಳ ಐತಿಹ್ಯ ಹೊಂದಿರುವ ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ 2011ರ ಆಗಸ್ಟ್ 4 ರಂದು ಹಸ್ತ ನಕ್ಷತ್ರ ನಾಗರ ಪಂಚಮಿಯಂದು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಶ್ರೀ ಕ್ಷೇತ್ರದ ಉತ್ತರಾಧಿಕಾರಿಗಳೂ ಹಾಗೂ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಸಿದ್ದಗಂಗಾ ಮಠದ ಅಧಿಕಾರವನ್ನು ಅಧಿಕೃತ ಛಾಪಾ ಕಾಗದದ ಮೂಲಕ ಹಸ್ತಾಂತರಿಸಿದರು.

    ಅಧಿಕಾರ ಹಸ್ತಾಂತರಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಕಿರಿಯ ಸ್ವಾಮೀಜಿಯವರ ಹೆಸರಿಗೆ ಬರೆಸಿದ ಉಯಿಲನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರಿಂದ ಓದಿಸಲಾಯಿತು. ಜೊತೆಗೆ ಶ್ರೀ ಶಿವಕುಮಾರ ಸ್ವಾಮೀಜಿಯವರೂ ಸಹ ಒಮ್ಮೆ ಓದಿ ಸಹಿ ಹಾಕಿದರು. ಅಪಾರ ಭಕ್ತರು ಭಾವುಕರಾಗಿ ಕಾರ್ಯಕ್ರಮದಲ್ಲಿ ಸಾಕ್ಷಿಯಾದರು. ಅಧಿಕಾರ ಹಸ್ತಾಂತರ ಮಾಡಿದ ಶ್ರೀಗಳು ಆಶೀರ್ವಚನ ನೀಡಿದರು.

    ಆಶೀರ್ವಚನದಲ್ಲಿ ಹೇಳಿದ್ದು ಏನು?
    ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠವಾದ ಸ್ಥಾನವಿದೆ. ಅದನ್ನು ಅರಿತು ನಡೆದುಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮಪೀಠಗಳು ನೆರವಾಗಬೇಕು. ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ ದೇಶದ ಬಗ್ಗೆ ನಿಷ್ಠೆ ಹಾಗೂ ಉದಾತ್ತ ಭಾವನೆ ಬೆಳೆಸಬೇಕು. ಶಿಕ್ಷಣದಿಂದ ಈ ಬದಲಾವಣೆ ಸಾಧ್ಯ. ಯಾರೂ ಯಾವುದೇ ಒಂದು ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಹಲವು ಟೀಕೆ ಟಿಪ್ಪಣಿಗಳು ಬರುತ್ತವೆ. ಅವುಗಳನ್ನು ಲೆಕ್ಕಿಸದೇ ಸಮಾಜದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಅಂತಹ ದಕ್ಷತೆಯನ್ನು ಬೆಳೆಸಿಕೊಳ್ಳಲು ಕೆಲವು ತತ್ವಗಳನ್ನು ಅರಿಯಬೇಕಾಗಿದೆ. ಮನುಷ್ಯ, ಮನುಷ್ಯನಿಗಾಗಿ ಬಾಳಬೇಕು. ಮಾನವ ಧರ್ಮಕ್ಕೆ ಬದ್ಧರಾದರೆ ಬಡತನ, ದಾರಿದ್ರ್ಯ, ಭ್ರಷ್ಟತೆಗಳು ತಾನಾಗಿಯೇ ಕಣ್ಮರೆಯಾಗುತ್ತದೆ. ಈ ನಿಟ್ಟಿನಲ್ಲಿ ಕಿರಿಯ ಶ್ರೀಗಳು ತಮ್ಮ ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸಲಿದ್ದಾರೆ ಎಂಬ ನಂಬಿಕೆ ನನ್ನಲ್ಲಿದೆ.

    ಶ್ರೀ ಮಠದ ಕಾರ್ಯವ್ಯಾಪ್ತಿಗಳು ದಿನೇ ದಿನೇ ವಿಸ್ತಾರವಾಗುತ್ತಾ ನಡೆದಿವೆ. ವಿದ್ಯಾಸಂಸ್ಥೆಗಳು ಅಧಿಕಗೊಂಡಿವೆ. ಭಕ್ತರು ಸಂಪತ್ತು ಅಪಾರವಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಸಭೆ-ಸಮಾರಂಭಗಳು, ಭಕ್ತರ ಮನೆಯ ಆಹ್ವಾನಗಳು ದಿನೇ ದಿನೇ ಅಧಿಕವಾಗುತ್ತಿವೆ. ನಮಗೆ ಈ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ವಯೋಧರ್ಮದಿಂದ ಸಾಧ್ಯವಾಗುತ್ತಿಲ್ಲ. ಈ ಇಳಿ ವಯಸ್ಸಿನಲ್ಲಿ ದೇಹಧರ್ಮ ಸಹಜವಾಗಿ ಕಾರ್ಯ ನಿರ್ವಹಿಸುವಲ್ಲಿ ಆಶಕ್ತವಾಗಿದೆ. ಈ ಎಲ್ಲಾ ಅಂಶಗಳನ್ನು ಮನಗಂಡು ನಮ್ಮ ಉತ್ತಾರಾಧಿಕಾರಿಗಳಾಗಿರುವ ಶ್ರೀ ಸಿದ್ದಲಿಂಗಸ್ವಾಮಿ ಅವರಿಗೆ ಶ್ರೀ ಮಠದ ಮಠಾಧ್ಯಕ್ಷತೆಯನ್ನು ವಹಿಸಿಕೊಟ್ಟು, ನಡೆಸಿಕೊಂಡು ಹೋಗಲು ಬಿಟ್ಟುಕೊಟ್ಟಲ್ಲಿ ಮಠದ ಎಲ್ಲಾ ಕೆಲಸ ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತದೆಂಬ ಸದ್ಭಾವನೆ ನಮ್ಮಲ್ಲಿ ಇದೆ. ಈ ಲೌಕಿಕ ವ್ಯವಹಾರಗಳಿಂದ ನಿವೃತ್ತಿ ಹೊಂದಿ ಆಧ್ಯಾತ್ಮಿಕ ಸಂಪತ್ತನ್ನು ಭಕ್ತಾದಿಗಳಿಗೆ ನೀಡಿ ಅವರಲ್ಲಿ ಪೂಜಾ ನಿಷ್ಠೆಯನ್ನು ಬೆಳೆಸಿ, ಸಮಾಜಕ್ಕೆ ಯೋಗ್ಯ ಮಾರ್ಗದರ್ಶನ ಮಾಡಬೇಕೆಂಬ ಆಸಕ್ತಿಯುಳ್ಳವರಾಗಿರುತ್ತೇವೆ.

    ಶ್ರೀ ಸಿದ್ದಲಿಂಗಸ್ವಾಮೀಜಿಯವರು ಅಂದಿನಿಂದ ಇಂದಿನವರೆಗೆ ನಮ್ಮ ಆಜ್ಞಾನುಸಾರ ನಡೆದುಕೊಳ್ಳುತ್ತಿದ್ದಾರೆ. ಮಠದ ಕಾರ್ಯಗಳನ್ನು ಸದಾಚಾರ, ಗುರುನಿಷ್ಠೆ ಮತ್ತು ಪೂಜಾ ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಮಠದ ಪವಿತ್ರ ಪರಂಪರೆಯನ್ನು ಮುಂದುವರಿಸಿಕೊಂಡು, ಚಾರಿತ್ರ್ಯ ಸಂಪನ್ನರಾಗಿ ರೂಪುಗೊಂಡಿದ್ದಾರೆ. ಸಿದ್ದಲಿಂಗ ಸ್ವಾಮೀಜಿಗೆ ಅಧಿಕಾರ ವಹಿಸಿಕೊಟ್ಟರೆ ಮಠದ ಶ್ರೇಯೋಭಿವೃದ್ಧಿಯಾಗುತ್ತದೆ ಎಂಬ ಬಗ್ಗೆ ದೃಢ ನಂಬಿಕೆ ಇದೆ.

    ಈ ಎಲ್ಲಾ ಅಂಶಗಳನ್ನು ಮನಗಂಡು, ನಮಗೆ ಈಗಾಗಲೇ 103 ಸಂವತ್ಸರಗಳು ತುಂಬಿದ್ದು, 104ನೇ ಸಂವತ್ಸರಗಳಲ್ಲಿ ಇರುವುದರಿಂದ ಹಾಗೂ ಕಳೆದು 2-3 ಮಾಸಗಳಿಂದ ಪದೇ ಪದೇ ದೇಹಾಲಸ್ಯ ಉಂಟಾಗುತ್ತಿರುವುದರಿಂದ, ಹೊರಗಡೆ ದೂರ ಪ್ರಯಾಣ ಮಾಡಲು ಹಾಗೂ ಭಕ್ತರ ಕೋರಿಕೆಯನ್ನು ನೆರವೇರಿಸಲು ಕಷ್ಟಕರವಾಗುತ್ತಿರುವುದರಿಂದ, ಶ್ರೀ ಮಠದ ದೈನಂದಿನ ಕಾರ್ಯಕ್ರಮಗಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಕುಂದು ಬಾರದಿರಲೆಂಬ ಸದುದ್ದೇಶದಿಂದ ಹರಗುರು ಚರಮೂರ್ತಿಗಳು, ಮಠಾಧ್ಯಕ್ಷರುಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಈ ದಿನ ಅಂದರೆ 2011ರ ಆಗಸ್ಟ್ 4 ರಂದು ನಮ್ಮ ಉತ್ತರಾಧಿಕಾರಿಯಾಗಿ ಮುಂದುವರಿದಿರುವ ಶ್ರೀ ಸಿದ್ದಲಿಂಗಸ್ವಾಮಿ ಅವರನ್ನ, ಶ್ರೀ ಮಠದ ಘನತೆ, ಗೌರವ, ಪ್ರತಿಷ್ಠೆಗಳಿಗೆ ಕುಂದುಬಾರದಂತೆ ನಡೆಸಿಕೊಂಡು ಹೋಗಲು ಹಾಗೂ ಶ್ರೀ ಸಿದ್ದಗಂಗಾ ಮಠದ ಮಠಾಧ್ಯಕ್ಷತೆಯನ್ನು ವಹಿಸಿಕೊಟ್ಟು ಅವರನ್ನು ಮಠಾಧ್ಯಕ್ಷರನ್ನಾಗಿ ನೇಮಿಸಿ ಆಶೀರ್ವದಿಸಿರುವೆ.

    https://www.youtube.com/watch?v=SQorcppSI_8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನಾರೋಗ್ಯದಲ್ಲಿದ್ರೂ ಇಷ್ಟಲಿಂಗ ಪೂಜೆ ತಪ್ಪಿಸಿದವರಲ್ಲ!

    ಅನಾರೋಗ್ಯದಲ್ಲಿದ್ರೂ ಇಷ್ಟಲಿಂಗ ಪೂಜೆ ತಪ್ಪಿಸಿದವರಲ್ಲ!

    ಹಾಸಿಗೆಯ ಮೇಲೂ ಅನಾರೋಗ್ಯದಿಂದ ಮಲಗಿರುವಾಗಲೂ ಸಿದ್ದಗಂಗಾ ಶ್ರೀ ಇಷ್ಟಲಿಂಗ ಪೂಜೆ ತಪ್ಪಿಸುತ್ತಿರಲಿಲ್ಲ. ಸಿದ್ಧ ಶಿವಯೋಗ ಸಾಧನೆ, ಶುದ್ಧ ಸಂಕಲ್ಪ ಎಲ್ಲರಿಗೂ ಒಲಿದು ಬರುವಂತದ್ದಲ್ಲ. ಶಿವಯೋಗ ಸಾಧನೆಯಿಂದ ವ್ಯಕ್ತಿತ್ವ ಪರಿಪೂರ್ಣಗೊಳ್ಳುತ್ತದೆ. ಶಿವಯೋಗದಿಂದ ವ್ಯಕ್ತಿತ್ವ ಪ್ರಭಾವಶಾಲಿಯಾಗುತ್ತದೆ.ಸುತ್ತಲಿನ ಪರಿಸರವೆಲ್ಲವೂ ಬೆಳಕಿನ ವರ್ತುಲವಾಗುತ್ತದೆ. ಶಿವಯೋಗದ ಸಾಧಕರು ಇದರ ಪರಮಾನುಭವವನ್ನು ಪಡೆದಿರುವ ಪ್ರಶಾಂತ ಯೋಗಿಗಳು ಸಿದ್ದಗಂಗಾ ಶ್ರೀಗಳು.

    ಬಾಲ್ಯದಿಂದಲೂ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿದ್ದ ಯೋಗಿ ಶ್ರೀಗಳು. ಬೆಳಗಿನ ಜಾವ ಮೂರು ಗಂಟಗೆ ಎದ್ದು ಸ್ನಾನ ಮಾಡಿ ಪೂಜೆಗೆ ಕುಳಿತರೆಂದರೆ ಅವರಿಗೆ ಇಹದ ಪರಿವು ಇರುತ್ತಿರಲಿಲ್ಲ. ಅವರ ಪೂಜೆ ಮನಮಂತ್ರಯೋಗದ ಮಂಗಳ ಪೂಜೆ. ಸುಮಾರು ಮೂರು ಗಂಟೆಯ ಕಾಲ ನಡೆಯುವ ಪೂಜ್ಯರ ಇಷ್ಟಲಿಂಗ ಪೂಜೆಯ ಸಂದರ್ಭದಲ್ಲಿ ಪ್ರಾಚೀನ ಮಂತ್ರಗಳು ಪ್ರಾರ್ಥಿಸುತ್ತವೆ. ಶರಣರ ವಚನಗಳು ಪುಷ್ಪ ಮುಡಿಸುತ್ತದೆ. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ಶರಣರ ಪರಿಕಲ್ಪನೆಯಲ್ಲಿ ಇಷ್ಟಲಿಂಗ ಪೂಜೆ ಆತ್ಮನಿರೀಕ್ಷಣೆಯ ಒಂದು ಸಾಧನ. ದೃಷ್ಟಿಯೋಗದ ಮಾಧ್ಯಮ, ಅಂತರಂಗದ ಅನುಸಂಧಾನ. ಸ್ವಾಮೀಜಿ ಇಷ್ಟಲಿಂಗ ಪೂಜೆಗೆ ಕುಳಿತಾಗ ಬಸವಣ್ಣ ವಚನಗಳನ್ನು ಭಾವಪರವಶರಾಗಿ ಹಾಡುತ್ತಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಪೂಜ್ಯ ಸ್ವಾಮೀಜಿ ಅವರ ದಿನಚರಿ ಆರಂಭವಾಗುವುದು ಮೊದಲೇ ಹೇಳಿದಂತೆ ನಸುಕಿನ ಜಾವದಿಂದಲೇ. ಶ್ರೀಗಳ ಇಷ್ಟಲಿಂಗ ಪೂಜೆ ದರ್ಶನಕ್ಕಾಗಿ ಪೂಜಾ ತೀರ್ಥಕ್ಕಾಗಿ ನಿತ್ಯ ನೂರಾರು ಯಾತ್ರಿಕರು ಮುಂಜಾನೆ ಮುಡಿಯಿಟ್ಟು ಪೂಜೆ ನಡೆಯುವ ಹಳೆಯ ಮಠಕ್ಕೆ ಬರುತ್ತಾರೆ. ಈ ದಿವ್ಯದೃಶ್ಯವನ್ನು ಕಂಡ್ರೆ ಭಕ್ತರು ಅವ್ರ ಪುಣ್ಯ ಅಂತಾನೆ ಭಾವಿಸುತ್ತಾರೆ.

    ಶ್ರೀಗಳ ಪ್ರಕಾರ ದೇವರನ್ನು ನಂಬಬೇಕು, ನಂಬಿಕೆಗಿಂತ ಮಿಗಿಲಾದ ತಪಸ್ಸಿಲ್ಲ. ದೇವಪೂಜೆ ಜೀವನದ ಒಂದು ಭಾವನಾತ್ಮಕ ನೆಮ್ಮದಿ ನಂಬಿ ಕರದೆಡೆ ಓ ಎನ್ನನೆ ಶಿವನು ಎನ್ನುವಂತೆ ಸಿದ್ದಗಂಗಾ ಶ್ರೀಗಳು ಭಕ್ತಿ ಭಂಡಾರವೇ ಆಗಿದ್ದರು. ಕಾಯಕ ದಾಸೋಹಗಳನ್ನು ಕೂಡ ದೇವ ಪೂಜೆಯಂತೆಯೇ ಮಾಡಿದವರು. ದೀನ ದಲಿತರ ಸೇವೆಯೂ ದೈವರಾಧನೆಯಂತೆ ಮಾಡುತ್ತಿದ್ರು.

    ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿದ್ದರು. ಶ್ರೀಗಳ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

    https://www.youtube.com/watch?v=7NRpWmWu3fA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಜ್ರ ಕಾಠಿಣ್ಯ ಕುಸುಮ ಕೋಮಲ ಶ್ರೀಗಳಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚುಮೆಚ್ಚು!

    ವಜ್ರ ಕಾಠಿಣ್ಯ ಕುಸುಮ ಕೋಮಲ ಶ್ರೀಗಳಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚುಮೆಚ್ಚು!

    ಕಲ ಜೀವಗಳಿಗೂ ಪ್ರೀತಿಯ ಧಾರೆ ಎರೆದ ವಾತ್ಸಲ್ಯ ಮೂರ್ತಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚು ಮೆಚ್ಚು. ಶ್ರೀಗಳ ಶರಣ ವಿಚಾರಧಾರೆಯಲ್ಲಿ ಜಾತಿ ಮತಗಳ ಜಂಜಡವಿಲ್ಲ, ಪಂಥ ಪಂಗಡಗಳ ಪ್ರವರವಿಲ್ಲ, ಮೇಲು ಕೀಳುಗಳ ಮಾಲಿನ್ಯವಿಲ್ಲ, ಮಡಿ ಮೈಲಿಗೆಗಳ ಮೀಸಲಿಲ್ಲ, ಅಂತಸ್ತು ಅಧಿಕಾರಗಳ ಅವಿವೇಕವಿಲ್ಲ.

    ಶ್ರೀಗಳ ವಿಚಾರಧಾರೆಯಲ್ಲಿ ನಿಸರ್ಗಕ್ಕೆ ಬೆಲೆ ಇದೆ, ಬದುಕಿಗೆ ಬೆಲೆ ಇದೆ, ಕಾಯಕಕ್ಕೆ ಗೌರವಿದೆ. ದಾಸೋಹಕ್ಕೆ ದಿವ್ಯತೆಯಿದೆ ಅನ್ನುವ ತತ್ವ ಸಾರಿ ಅದರಂತೆಯೆ ಬದುಕಿದವರು. ಸ್ವಾಮೀಜಿ ಕಂಡ್ರೆ ಜಗತ್ತಿಗೆ ಮಾತ್ರವಲ್ಲ ಮಠದ ಅವರಣದ ಸಾಕು ಪ್ರಾಣಿಗಳಿಗೂ ಹಿಗ್ಗು. ಮಠದ ಅವರಣದಲ್ಲಿ ಖಾವಿ ಧರಿಸಿದ ಚೇತನ ನಡೆಯುತ್ತಿದ್ರೆ ದನಕರುಗಳು, ನಾಯಿಮರಿಗಳು, ಓಡೋಡಿ ಬರುತ್ತಿದ್ದವು.  ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಶ್ರೀಮಠದಲ್ಲಿರುವ ಗೋಶಾಲೆಗೆ ದಿನಕೊಮ್ಮೆಯಾದ್ರೂ ಹೋಗಿ ಬರದಿದ್ರೆ ಸ್ವಾಮೀಜಿಗಳಿಗೆ ಸಮಾಧಾನವೇ ಇರುತ್ತಿರಲಿಲ್ಲ. ದನಕರುಗಳ ಮೈ ನೇವರಿಸಿ ಹಸಿ ಹುಲ್ಲು, ಬಾಳೆಹಣ್ಣು ಕೊಟ್ಟು ಪ್ರೀತಿ ತೋರುತ್ತಿದ್ದ ಗುರುಗಳು, ಮಠದ ಅವರಣದಲ್ಲಿ ಅಡ್ಡಾಡುವ ಬೀದಿನಾಯಿಗಳಿಗೆ ಬಿಸ್ಕೇಟು, ಊಟ ಹಾಕುತ್ತಿದ್ದರು.

    ಅಷ್ಟೇ ಅಲ್ಲ ಬೆಟ್ಟ ಗುಡ್ಡಗಳ ಸುಂದರ ಪರಿಸರದಲ್ಲಿದ್ದ ಸಿದ್ದಗಂಗೆಯ ಬೆಟ್ಟದಲ್ಲಿದ್ದ ಒಂದು ಸುಂದರ ಜಿಂಕೆಗೆ ಶ್ರೀಗಳನ್ನು ಕಂಡ್ರೆ ಭಾರೀ ಪ್ರೀತಿಯಂತೆ. ಕೈಗೆ ಸಿಗುತ್ತಿದ್ದ ಈ ಜಿಂಕೆಗೂ ಪ್ರೀತಿಯಿಂದ ಆಹಾರ ಕೊಡುತ್ತಿದ್ರು ಶ್ರೀಗಳು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಇನ್ನು ನವಿಲಿಗೂ ಆಹಾರ ನೀಡುತ್ತಿದ್ದ ಗುರುಗಳ ಭಾವಚಿತ್ರ ಎಂತವರಿಗೂ ಅಚ್ಚರಿ ಮೂಡಿಸುವಂತಿದೆ. ಇನ್ನು ವಾರ್ಷಿಕವಾಗಿ ಮಠದ ಅವರಣದಲ್ಲಿ ದನಗಳ ಪರಿಷೆಯನ್ನು ಮಾಡಿಸುತ್ತಿದ್ದರು. ರೈತರು ತಮಗೆ ಬೇಕಾದ ರಾಸುಗಳನ್ನು ಆರಿಸಿಕೊಳ್ಳಲು ಈ ಪರಿಷೆಯಿಂದ ಸಾಧ್ಯವಾಗುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಸ್ತಕ ಪ್ರೇಮಿ.. ಇಂಗ್ಲೀಷ್ ಪುಸ್ತಕ ಅಂದ್ರೆ ಶ್ರೀಗಳಿಗೆ ಅಚ್ಚುಮೆಚ್ಚು!

    ಪುಸ್ತಕ ಪ್ರೇಮಿ.. ಇಂಗ್ಲೀಷ್ ಪುಸ್ತಕ ಅಂದ್ರೆ ಶ್ರೀಗಳಿಗೆ ಅಚ್ಚುಮೆಚ್ಚು!

    ಸಾಹಿತ್ಯ ಪ್ರೇಮಿಗಳಾದ ಶ್ರೀಗಳು ಗ್ರಂಥಾವವಲೋಕನ ಮಾಡದ ದಿನಗಳಿಲ್ಲ. ಗ್ರಂಥ ಪ್ರಕಟಣೆಯಲ್ಲಿ ಅವರಿಗಿರುವ ಆಸಕ್ತಿ ಅಷ್ಟಿಷ್ಟಲ್ಲ. ಶ್ರೀಮಠದ ಮುಖಾಂತರವೂ ಶ್ರೀಗಳು ಅನೇಕ ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ.

    ಅಧ್ಯಯನ ಶೀಲರಾಗಿರುವ ಸಿದ್ದಗಂಗಾ ಶ್ರೀಗಳಿಗೆ ಪುಸ್ತಕ ಅಂದ್ರೆ ಅಚ್ಚುಮೆಚ್ಚು, ನಿತ್ಯ ಪುಸ್ತಕ ಓದುವ ಅಭ್ಯಾಸವನ್ನು ಹೊಂದಿದ್ದ ಶ್ರೀಗಳಿಗೆ ಮುಖ್ಯವಾಗಿ ಇಂಗ್ಲೀಷ್ ಪುಸ್ತಕ ಅಂದ್ರೆ ಇನ್ನಷ್ಟು ಅಚ್ಚುಮೆಚ್ಚು. ನಾನಾ ಭಾಷೆಯಲ್ಲಿ ಅಪಾರ ಪಾಂಡಿತ್ಯ ವಹಿಸಿದ್ದ ಶ್ರೀಗಳು ಪ್ರತಿನಿತ್ಯ ದಿನಚರಿ ಬರೆಯುವ ಹವ್ಯಾಸವನ್ನು ಬೆಳೆಸಿದ್ದರೆ, ಅಪರೂಪಕ್ಕೊಮ್ಮೆ ಬರೆಯುವ ಅಭ್ಯಾಸವೂ ಸಿದ್ದಗಂಗಾ ಶ್ರೀಗಳಿಗೆ ಇತ್ತು. ಶರಣ ಬಸವಣ್ಣನವರ ಪುಸ್ತಕವನ್ನು ಕೂಡ ಪ್ರೀತಿಯಿಂದ ಓದುತ್ತಿದ್ದ ಶ್ರೀಗಳ ಬಳಿ ಗ್ರಂಥಗಳ ಭಂಡಾರವೇ ಇತ್ತು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸರಳ ಬದುಕು: ಆಡಂಬರದ ಬದುಕನ್ನು ಕಂಡ್ರೆ ಕಿಡಿಕಿಡಿಯಾಗುವ ಶ್ರೀಗಳು ಸರಳ ಜೀವಿ. ವಿಪರೀತ ಖರ್ಚನ್ನು ಕಂಡ್ರೆ ಸಿಕ್ಕಾಪಟ್ಟೆ ಸಿಟ್ಟಾಗುತ್ತಿದ್ದರು. ಸದಾ ಖಾದಿಯ ಖಾವಿ ಬಟ್ಟೆ, ಹೊದೆಯುವ ಖಾದಿ ಸೆಲ್ಲೆ, ತಲೆಗೆ ಸುತ್ತುವ ಒಂದು ಪಾವುಡ ಅಷ್ಟೇ ಇವರ ಐಸಿರಿ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಒಂದು ಬಾರಿ ಮೈಸೂರಿನ ಅರಮನೆ ಪಂಚಗವಿ ಮಠಾಧ್ಯಕ್ಷರಾದ ಗೌರಿಶಂಕರ ಸ್ವಾಮೀಗಳು ಸ್ವಾಮೀಜಿ ವಿರಕ್ತ ಜೀವನ, ದಾಸೋಹ ಭಾವಕ್ಕೆ ಮಾರುಹೋಗಿ ಪಾದಪೂಜೆ ಮಾಡಿ 15 ತೊಲೆ ಬಂಗಾರದ ಕರಡಿಗೆ ಅರ್ಪಿಸಿದ್ರು. ಆದ್ರೇ ನಾನಿದನ್ನು ಧರಿಸಲ್ಲ ನನಗೆ ಬೇಡ ಬುದ್ದಿ ಅಂತ ಹೇಳಿದ್ರಂತೆ. ಆದ್ರೆ ಒತ್ತಾಯ ಮಾಡಿದ ಮೇಲೂ ತೆಗೆದುಕೊಂಡ ಶ್ರೀಗಳನ್ನು ಇದನ್ನೆಂದೂ ಬಳಸಿಲ್ಲ.

    ಅಡ್ಡಪಲ್ಲಕ್ಕಿಯ ಉತ್ಸವ ನಡೆಸಬೇಕೆಂದೂ ಭಕ್ತರು ಕೇಳಿದಾಗ ಇದ್ಯಾವುದೂ ಬೇಡವೇ ಬೇಡ ಅಂತಾ ನಿರಾಕರಿಸಿ ತಮ್ಮ ನಿರಹಂಭಾವವನ್ನು ತೋರ್ಪಡಿಸಿದ್ದರು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಮಠವನ್ನು ಪವಿತ್ರ ಸ್ಥಳ ಎಂದು ಬಣ್ಣಿಸಿದ್ದರು ಮಾಜಿ ಪ್ರಧಾನಿ ವಾಜಪೇಯಿ!

    ಸಿದ್ದಗಂಗಾ ಮಠವನ್ನು ಪವಿತ್ರ ಸ್ಥಳ ಎಂದು ಬಣ್ಣಿಸಿದ್ದರು ಮಾಜಿ ಪ್ರಧಾನಿ ವಾಜಪೇಯಿ!

    ತುಮಕೂರು: ಸಿದ್ದಗಂಗಾ ಹಲವು ‘ಗಂಗಾ’ಗಳ ಸಂಗಮ ಪ್ರವಾಹ. ಇಲ್ಲಿ ಕರ್ಮ ಗಂಗಾ, ಜ್ಞಾನ ಗಂಗಾ, ಗೌರವ ಗಂಗಾ ಹಾಗೂ ಕಾರುಣ್ಯಗಂಗಾಗಳು ಸಮರಸಗೊಂಡು ಹರಿಯುತ್ತಿವೆ. ಜ್ಞಾನ ಯಜ್ಞ ನಡೆದಿದ್ದು ಶತಮಾನಗಳ ಪರ್ಯಂತ ಮುಂದುವರೆದಿದೆ. ಪೂಜ್ಯ ಶ್ರೀ ಸ್ವಾಮೀಜಿಯವರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿ ಶ್ರೀಮಠದ ಪರಿಸರವನ್ನೆಲ್ಲಾ ಕ್ರಿಯಾಶೀಲಗೊಳಿಸಿದೆ. ಕೇವಲ ಭೌತಿಕವಾಗಿಯಲ್ಲ. ನೈತಿಕ ಶಕ್ತಿಯ ಸ್ಫೂರ್ತಿ ಇಲ್ಲಿನ ತಾಯಿ ಬೇರಾಗಿದೆ.

    ಮನುಷ್ಯ ಒಳ್ಳೆಯವನಾಗುವುದು ಮುಖ್ಯ. ಒಳ್ಳೆಯವನಾಗುವುದು ಹೇಗೆ? ಒಂದು ಶಿಕ್ಷಣದಿಂದ ಅಥವಾ ತರಬೇತಿಯಿಂದ, ಇನ್ನೊಂದು ಸಂಸ್ಕಾರದಿಂದ. ಸರ್ಕಾರಿ ಶಾಲೆಗಳು ಶಿಕ್ಷಣವನ್ನು ನೀಡುತ್ತವೆ. ಆದರೆ ಸಂಸ್ಕಾರವನ್ನು ಕೊಡಲಾರವು. ಈ ಎರಡೂ ಅಂದರೆ ಶಿಕ್ಷಣ ಮತ್ತು ಸಂಸ್ಕಾರ ಬೇರೆ ಬೇರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಕಾಲೇಜು ನೀಡುವ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದು. ಆದರೆ ಕಾಲೇಜನ್ನು ಬಿಟ್ಟ ನಂತರ ಎಂಥ ಜೀವನವನ್ನು ನಡೆಸಬೇಕೆಂಬುದನ್ನು ಅವರಿಂದ ಪಡೆಯಲಾಗುವುದಿಲ್ಲ. ಆದರೆ ಶ್ರೀ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದಾತ ಸಂಸ್ಕಾರಜೀವಿಯಾಗಿ ಹೊರಬರುತ್ತಾನೆ. ಅವನು ಉನ್ನತ ಯಶಸ್ಸು ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊರಬರುವುದಲ್ಲದೆ ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಾನೆ. ಸಿದ್ದಗಂಗಾದಂತಹ ಕ್ಷೇತ್ರಗಳು ನಮಗೆ ಪವಿತ್ರ ಸ್ಥಳಗಳು. ಶ್ರೀಮಠ ತನ್ನ ಸೇವಾ ಚಟುವಟಿಕೆಗಳ ಮೂಲಕ ನೈತಿಕ ಜೀವನದ ಪ್ರಾಮುಖ್ಯತೆಯನ್ನು ಆಚರಿಸಿ ತೋರಿಸುತ್ತಿರುವುದು ಇತಿಹಾಸಕ್ಕೆ ಸುಯೋಗ್ಯವಾದ ನಿದರ್ಶನವಾಗಿದೆ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ತುಮಕೂರು: ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ.

    ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ ಕಳೆದಿದ್ದರು. ಹೀಗಾಗಿ ತಾವು ಮೃತಪಟ್ಟ ಸುದ್ದಿಯನ್ನು ಮಕ್ಕಳು ಮಧ್ಯಾಹ್ನದ ಭೋಜನ ಸ್ವೀಕರಿಸಿದ ನಂತರ ಪ್ರಕಟಿಸಬೇಕು ಎಂದು ಶ್ರೀಗಳು ಮೊದಲೇ ಮಠದ ಸಿಬ್ಬಂದಿಗೆ ತಿಳಿಸಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಶ್ರೀಗಳ ಆಶಯದಂತೆ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದರೂ ಅಧಿಕೃತವಾಗಿ ಮೃತಪಟ್ಟ ಸುದ್ದಿಯನ್ನು ಪ್ರಕಟಿಸಲಿಲ್ಲ. ಮಧ್ಯಾಹ್ನ ವಿದ್ಯಾರ್ಥಿಗಳ ಭೋಜನವನ್ನು ಸ್ವೀಕರಿಸಿದ ಬಳಿಕ ಮಧ್ಯಾಹ್ನ 1.50ಕ್ಕೆ ಅಧಿಕೃತವಾಗಿ ಶ್ರೀಗಳು ಲಿಂಗೈಕ್ಯರಾದ ಸುದ್ದಿಯನ್ನು ಪ್ರಕಟಿಸಲಾಯಿತು.

    ನಿನ್ನೆಯವರೆಗೂ ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕಳೆದ ದಿನ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿತ್ತು.  ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳವಾರ ಶಾಲಾ, ಕಾಲೇಜುಗಳಿಗೆ ರಜೆ – 3 ದಿನ ಶೋಕಾಚರಣೆ

    ಮಂಗಳವಾರ ಶಾಲಾ, ಕಾಲೇಜುಗಳಿಗೆ ರಜೆ – 3 ದಿನ ಶೋಕಾಚರಣೆ

    ತುಮಕೂರು: ಜವರಾಯನ ಜೊತೆಗೆ ಹೋರಾಡುತ್ತಿದ್ದ ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ.

    ಸಿದ್ದಗಂಗಾ ಮಠದ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಪರಮ ಪೂಜ್ಯ ಶ್ರೀಗಳು ಶಿವಕ್ಯೆಯಾಗಿರುವುದನ್ನು ವೈದ್ಯರು ಈಗ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

    ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ಶೋಕಾಚರಣೆ ನಡೆಸಬೇಕು ಹಾಗೂ ನಾಳೆ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

    ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಹಾಗೂ ಸಿದ್ದಗಂಗಾ ಮಠದ ಕಿರಿಯ ಶ್ರೀಗಳ ಜೊತೆಗೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಶಾಸಕ ಸೋಮಣ್ಣ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದಾರೆ. ಅದರಂತೆ ವಿಧಿವಿಧಾನ ಅನುಸರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಭಕ್ತರಿಗೆ ಇಂದು ಹಾಗೂ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಪವಾಡ ಪುರುಷರಾಗಿರುವ ಶ್ರೀಗಳು ದೈವಿ ಶಕ್ತಿಯಾಗಿ ನಮಗೆ ಮಾರ್ಗದರ್ಶನ ನೀಡಿ, ಧಾರ್ಮಿಕ ಕ್ಷೇತಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಶ್ರೀಗಳನ್ನು ಕಳೆದುಕೊಂಡ ನಮಗೆ ನೋವು ತಂದಿದೆ. ಬಡಮಕ್ಕಳಿಗೆ ಶಿಕ್ಷಣ, ಆಶ್ರಯ ನೀಡಿ, ಸ್ವಾಮೀಜಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಎಚ್‍ಡಿಕೆ ಸ್ಮರಿಸಿದರು.

    ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶ್ರೀಗಳ ಅಗಲಿಕೆ ನೋವು ತಂದಿದೆ. ಅವರ ಆತ್ಮದ ಬೆಳಕು ಅನೇಕರ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಈ ಕಾಲದ ಬಸವಣ್ಣನನ್ನು ನಾವು ಕಳೆದುಕೊಂಡಿದ್ದೇವೆ. ಶ್ರೀಗಳು ಸಾಮಾಜಿಕ ಕಳಕಳಿ ಇಟ್ಟುಕೊಂಡಿದ್ದರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳುವ ಶಿಕ್ಷಣವನ್ನು ಸಿದ್ದಗಂಗಾ ಮಠದಿಂದ ಮೂಲಕ ನೀಡಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 60 ವಿದ್ಯಾರ್ಥಿಗಳಿಂದ 8 ಸಾವಿರ ವಿದ್ಯಾರ್ಥಿಗಳು – ಕೇವಲ ಬಡತನವೆಂಬ ಸರ್ಟಿಫಿಕೇಟ್ ಇದ್ರೆ ಆಶ್ರಯ!

    60 ವಿದ್ಯಾರ್ಥಿಗಳಿಂದ 8 ಸಾವಿರ ವಿದ್ಯಾರ್ಥಿಗಳು – ಕೇವಲ ಬಡತನವೆಂಬ ಸರ್ಟಿಫಿಕೇಟ್ ಇದ್ರೆ ಆಶ್ರಯ!

    ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಧಾರೆ ಎರೆಯುತ್ತಿರುವ ಶ್ರೀಮಠದಲ್ಲಿ ಸಿದ್ದಗಂಗಾ ಶ್ರೀಗಳು ಮಠಾಧೀಶಾರಾಗಿ ಧರ್ಮಸ್ವೀಕಾರ ಮಾಡಿದಾಗ ಇದ್ದಿದ್ದು ಕೇವಲ ಆರುವತ್ತು ವಿದ್ಯಾರ್ಥಿಗಳು ಮಾತ್ರ. ಕಾಯಕ ಕಷ್ಟದಿಂದ ಧೀರ ಸಂಕಲ್ಪದಿಂದ ವಿಶಾಲ ಚಿಂತನೆಯಿಂದ ಅದ್ಭುತ ಸಾಧನೆಗಳ ಮೇರು ಶಿಖರವೇರಿದ ಶ್ರೀಗಳು ಆರುವತ್ತು ವಿದ್ಯಾರ್ಥಿಗಳಿಂದ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಸರಸ್ವತಿ ದೇಗುಲದಲ್ಲಿ ಆಶ್ರಯ ನೀಡಿದರು.

    ಹಳ್ಳಿ ಹಳ್ಳಿಗಳಲ್ಲಿ ವಿದ್ಯಾಕೇಂದ್ರವನ್ನು ತೆರೆದ್ರು. ಬಡ ವಿದ್ಯಾರ್ಥಿಗಳಿಗೆ ವಿದ್ಯೆ ಮರಿಚೀಕೆ ಅಂದುಕೊಳ್ಳುತ್ತಿರುವಾಗಲೆಲ್ಲ ವಿದ್ಯಾಭಿಕ್ಷೆಯನ್ನಿತ್ತು ಆಸರೆ ಕೊಟ್ಟರು. ಜಗತ್ತಿನ ದೇವರು. ಶ್ರೀ ಮಠದಲ್ಲಿ ಆಶ್ರಯ ಪಡೆದು ಓದಿದವರು ಬಹುತೇಕ ಉನ್ನತ ಹುದ್ದೆಯಲ್ಲಿದ್ದಾರೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಮಠದಲ್ಲಿ ವಿದ್ಯೆಯ ಪಡೆಯಲು ಆಶ್ರಯ ಪಡೆಯಲು ಕೇವಲ ಬಡತನವೆಂಬ ಸರ್ಟಿಫಿಕೇಟ್ ಮಾತ್ರ ಸಾಕು. ಅಬ್ಬಾಬ್ಬ. ಶ್ರೀಗಳ ಅಮೋಘ ಶಕ್ತಿಗೆ ಇದಕ್ಕಿಂತ ಅದ್ವಿತೀಯ ಸಾಕ್ಷಿ ಬೇಕಿಲ್ಲ ಬಿಡಿ. ಮಠದ ಏಳ್ಗೆಗಾಗಿ ಮಠದಿಂದ ಕೋಟಿ ಕೋಟಿ ಜನರ ಬದುಕನ್ನು ಕಟ್ಟಿಕೊಟ್ಟ ಕೀರ್ತಿ ನಡೆದಾಡುವ ದೇವರಿಗೆ ಸಲ್ಲಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv