Tag: siddaganga matt

  • ಸಿದ್ದಗಂಗಾ ಶ್ರೀಗಳ ಮುಂದೆ ಚುನಾವಣಾ ಸೋಲಿನ ನೋವು ತೋಡಿಕೊಂಡ ವಿ.ಸೋಮಣ್ಣ

    ಸಿದ್ದಗಂಗಾ ಶ್ರೀಗಳ ಮುಂದೆ ಚುನಾವಣಾ ಸೋಲಿನ ನೋವು ತೋಡಿಕೊಂಡ ವಿ.ಸೋಮಣ್ಣ

    ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹತಾಶೆ, ಬಿಜೆಪಿ ರಾಜ್ಯಾಧ್ಯಕ್ಷ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಇಂದು (ಶನಿವಾರ) ಸಿದ್ದಗಂಗಾ ಮಠಕ್ಕೆ (Siddaganga Matt) ತೆರಳಿ ಶ್ರೀಗಳನ್ನು ಭೇಟಿಯಾದರು. ಶ್ರೀಗಳ ಮುಂದೆ ಸೋಮಣ್ಣ (V.Somanna) ಚುನಾವಣಾ ಸೋಲಿನ ನೋವು ತೋಡಿಕೊಂಡರು.

    ಶ್ರೀ ಶಿವಕುಮಾರ ಶ್ರೀಗಳ ಗದ್ದಿಗೆಗೆ ಸೋಮಣ್ಣ ಭೇಟಿ ನೀಡಿ, ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸೋಮಣ್ಣ ಅವರಿಗೆ ಪತ್ನಿ ಶೈಲಜಾ, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಬೆಂಗಳೂರಿಗೆ ಮೋದಿ ಆಗಮನ

    ಬಳಿಕ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ವಿ.ಸೋಮಣ್ಣ, ಶ್ರೀಗಳ ಮುಂದೆ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂಡರು. ಸ್ಥಳೀಯ ಮುಖಂಡರೊಬ್ಬರು ಗೋವಿಂದರಾಜು ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದು ಮಾತು ಆರಂಭಿಸಿದಾಗ ಶ್ರೀಗಳ ಎದುರು ಅಳಲು ತೋಡಿಕೊಂಡರು. ಹೌದು, ನಾನು ಮಾಡಿದ ಮಹಾ ಅಪರಾಧ ಅದು. ಅಮಿತ್ ಶಾ ಅವರು ಬಂದು ಎರಡೂವರೆ ಗಂಟೆ ಮನೆಯಲ್ಲಿ ಕುತ್ಕೊಂಡ್ ಬಿಟ್ರು. ಅವರೇ ನಿಂತುಕೊ ಅಂದ್ಮೇಲೆ ನಾನು ಏನ್ ಮಾಡಬೇಕು. ಏನ್ ಮಾಡಲಿ ಹೇಳಿ ಸ್ವಾಮೀಜಿ. ಆಗ ನಾನು ಇಲ್ಲಾ ಅಂತಾ ಹೇಳಿದೆ. ಪಿಎಂ ಮೋದಿ ದೆಹಲಿಗೆ ಕರೆಸಿದ್ರು. ನಾಲ್ಕು ದಿನ ಅಲ್ಲೇ ಇಟ್ಕೊಂಡ್ರು. ನೀನು ನಿಂತುಕೊ ಅಂತಾ ಹೇಳಿದಾಗ ಏನ್ ಮಾಡಬೇಕು ಎಂದು ಹತಾಷೆ ನುಡಿಗಳನ್ನಾಡಿದರು.

    ಮಠಕ್ಕೆ ಭೇಟಿ ಕುರಿತು ಮಾತನಾಡಿದ ಸೋಮಣ್ಣ, ನಾನು ಮಠದ ಭಕ್ತ. 44 ದಶಕಗಳ ಸಂಬAಧ ನನ್ನದು. ಡಿಸೆಂಬರ್ 6 ರಂದು ಗುರುಭವನ ಲೋಕಾರ್ಪಣೆ ಮಾಡುತ್ತೇವೆ. ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ. 6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಇಬ್ಬರು ಸಚಿವರು ಇರುತ್ತಾರೆ. ರಾಜಣ್ಣ, ಪರಮೇಶ್ವರ್ ಇರುತ್ತಾರೆ. ಅದಕ್ಕೆ ರಾಜಕೀಯ ಮಾಡೋವಷ್ಟು ಕೀಳುಮಟ್ಟ ನಾನು ಮಾಡಲ್ಲ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ

    ನಾನು ಡಿ.6 ನೇ ತಾರೀಖಿನ ನಂತರ 7, 8, 9, 10 ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಸೇರಿ ಹೈಕಮಾಂಡ್‌ಗೆ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು, ನಮ್ಮದೇ ಅನುಭವ, ಸೇವೆ ಇದೆ, ಆಲೋಚನೆ ಇದೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು. ಹಾಗಾಗಿ ನಮ್ಮ ನೋವನ್ನು ಹೈಕಮಾಂಡ್‌ಗೆ ಹೇಳುತ್ತೇವೆ ಎಂದು ಪರೋಕ್ಷವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರೋದಕ್ಕೆ ಅಸಮಾಧಾನ ಹೊರಹಾಕಿದರು.

  • ‘ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ’ – ಎಸ್‍ಪಿ ವಿರುದ್ಧ ಸೋಮಣ್ಣ ಗರಂ

    ‘ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ’ – ಎಸ್‍ಪಿ ವಿರುದ್ಧ ಸೋಮಣ್ಣ ಗರಂ

    ತುಮಕೂರು: ಸಿದ್ದಗಂಗಾ ಮಠದ ಒಳಗೆ ಸಚಿವ ಸೋಮಣ್ಣ ಕಾರನ್ನು ಬಿಟ್ಟಿದ್ದಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ತಿಳಿದು ಸೋಮಣ್ಣ ಅವರು ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ ಎಂದು ಎಸ್‍ಪಿ ವಿರುದ್ಧ ಗರಂ ಆಗಿದ್ದಾರೆ.

    ಮಠದಿಂದ ಹೊರಬರುವ ವೇಳೆ ಎಸ್‍ಪಿ ಅನೂಪ್ ಶೆಟ್ಟಿ ತಮ್ಮ ಕಾರನ್ನು ಒಳ ಬಿಟ್ಟಿದ್ದಕ್ಕೆ ಸಿಬ್ಬಂದಿಗೆ ಬೈದಿರುವ ಬಗ್ಗೆ ಸೋಮಣ್ಣ ಅವರು ಪ್ರತಿಕ್ರಿಯಿಸಿದರು. ನಿಮ್ಮ ಕಾರು ಬಿಟ್ಟಿದ್ದಕ್ಕೆ ಎಸ್‍ಪಿ ಅವರು ಬೈಯ್ಯುತ್ತಿದ್ದಾರೆ ಎಂದು ಹೇಳಿದಾಗ, “ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ” ಎಂದು ಕಿಡಿಕಾರಿದರು. ಇದನ್ನೂ ಓದಿ: ‘ ಬಿಡ್ಬಾರ್ದು ಅಂದ್ರೆ ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

    “ನಮ್ಮವರದ್ದೇ ಸ್ವಲ್ಪ ಜಾಸ್ತಿ, ಎಸ್‍ಪಿ ಅವರಿಗೆ ಮನವರಿಕೆ ಮಾಡ್ತೀನಿ. ಎಲ್ಲಿ ಹೋದರು ಅವರು? ಅವರೊಂದಿಗೆ ಮಾತನಾಡುತ್ತೇನೆ. ನೀವು ಬೇಜಾರಾಗಬೇಡಿ” ಎಂದು ಹೇಳಿ ಸೋಮಣ್ಣ ಅವರು ಕಾರಿನಲ್ಲಿ ಮಠದಿಂದ ತೆರಳಿದರು.

    ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್‍ಪಿ ಅನೂಪ್ ಶೆಟ್ಟಿ ರೇಗಾಡಿದ್ದಾರೆ. ಮಠದ ಎರಡನೇ ಗೇಟ್‍ನಲ್ಲಿ ಎಸ್‍ಪಿ ಅವರು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ. “ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಡೋಕೆ ಬರುತ್ತೀರಾ” ಇಲ್ಲಿ ಎಂದು ಬೈದಿದ್ದಾರೆ.

    “ಮೂರು ದಿನದಿಂದ ಏನು ಕಸ ಗುಡಿಸುತ್ತೀದ್ದೇವಾ ನಾವು ಇಲ್ಲಿ. ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? ಅರ್ಥ ಮಾಡಿಕೊಳ್ಳಿ ನಿಮ್ಮ ಯೊಗ್ಯತೆ ಇದ್ದರೆ. ನಮ್ಮನ್ಯಾಕೆ ಕರೆಸುತ್ತೀರಾ. ನಮಗೆ ಮಾಡೋಕೆ ಕೆಲಸವಿಲ್ವಾ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಯಾವ ಗಾಡಿ ಬರುತ್ತೆ ಒಳಗೆ” ಎಂದು ಪ್ರಶ್ನಿಸಿ ಸಚಿವ ಸೋಮಣ್ಣ ಅವರ ಕಾರು ಮಠದ ಒಳಗೆ ಬಿಟ್ಟ ಸಿಬ್ಬಂದಿಗೆ ಎಸ್‍ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.  ಇದನ್ನೂ ಓದಿ: ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

    ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಳೆದ ಮೂರು ದಿನಗಳಿಂದ ವಿಶೇಷ ಭದ್ರತಾ ಪಡೆ(ಎಸ್‍ಪಿಜಿ) ಟೀಂ ಮೊಕ್ಕಾಂ ಹೂಡಿದೆ. ಸಮಾವೇಶ ನಡೆಯುವ ಕಾಲೇಜು ಆವರಣದ ಸಂಪೂರ್ಣ ಉಸ್ತುವಾರಿ ಎಸ್‍ಪಿಜಿ ನೋಡಿಕೊಳ್ಳುತ್ತಿದೆ. ವೇದಿಕೆ, ಸಮಾವೇಶದ ಗಣ್ಯರು, ಆಸನದ ವ್ಯವಸ್ಥೆ, ಮೋದಿ ಅವರ ಜೊತೆ ಯಾರು ವೇದಿಕೆ ಮೇಲೆ ಕುಳಿತುಕೊಳ್ಳಬೇಕು ಅಂತ ಎಸ್‍ಪಿಜಿ ನಿರ್ಧಾರ ಮಾಡುತ್ತದೆ.

    ಸಮಾವೇಶಕ್ಕೆ ಸಂಪೂರ್ಣವಾಗಿ ಕಪ್ಪು ವಸ್ತ್ರ ನಿಷೇಧ ಮಾಡಲಾಗಿದೆ. ಪೊಲೀಸರನ್ನು ಕೂಡಾ ಎಸ್‍ಪಿಜಿ ತಪಾಸಣೆ ಮಾಡಿ ಸಮಾವೇಶದ ಜಾಗಕ್ಕೆ ಬಿಡಲಾಗುತ್ತಿದೆ. ಸ್ಥಳೀಯ ಪೊಲೀಸರು ಕೇವಲ ಹೊರಗಿನ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಉಳಿದ ಸಂಪೂರ್ಣ ಭದ್ರತೆ ಎಸ್‍ಪಿಜಿ ನೋಡಿಕೊಳ್ಳುತ್ತಿದೆ.

  • ‘ ಬಿಡ್ಬಾರ್ದು ಅಂದ್ರೆ  ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

    ‘ ಬಿಡ್ಬಾರ್ದು ಅಂದ್ರೆ ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

    ತುಮಕೂರು: ಸಿದ್ದಗಂಗಾ ಮಠದೊಳಗೆ ವಸತಿ ಸಚಿವ ಸೋಮಣ್ಣ ಅವರ ಕಾರನ್ನು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಅನೂಪ್ ಶೆಟ್ಟಿ ಗರಂ ಆಗಿದ್ದಾರೆ.

    ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್‍ಪಿ ರೇಗಾಡಿದ್ದಾರೆ. ಮಠದ ಎರಡನೇ ಗೇಟ್‍ನಲ್ಲಿ ಎಸ್‍ಪಿ ಅವರು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.”ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಡೋಕೆ ಬರುತ್ತೀರಾ ಇಲ್ಲಿ” ಎಂದು ಬೈದಿದ್ದಾರೆ. ಇದನ್ನೂ ಓದಿ: ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

    “ಮೂರು ದಿನದಿಂದ ಏನು ಕಸ ಗುಡಿಸುತ್ತೀದ್ದೇವಾ ನಾವು ಇಲ್ಲಿ. ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? ಅರ್ಥ ಮಾಡಿಕೊಳ್ಳಿ ನಿಮ್ಮ ಯೊಗ್ಯತೆ ಇದ್ದರೆ. ನಮ್ಮನ್ಯಾಕೆ ಕರೆಸುತ್ತೀರಾ. ನಮಗೆ ಮಾಡೋಕೆ ಕೆಲಸವಿಲ್ವಾ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಯಾವ ಗಾಡಿ ಬರುತ್ತೆ ಒಳಗೆ” ಎಂದು ಪ್ರಶ್ನಿಸಿ ಸಚಿವ ಸೋಮಣ್ಣ ಅವರ ಕಾರು ಮಠದ ಒಳಗೆ ಬಿಟ್ಟ ಸಿಬ್ಬಂದಿಗೆ ಎಸ್‍ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಜೊತೆಗೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ನಗರದ ಜೂನಿಯರ್ ಕಾಲೇಜು ಮೈದಾನ ಹಾಗೂ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಸ್ವಾಗತಕ್ಕೆ ಅಣಿಯಾಗಿದೆ. ಭದ್ರತೆಯ ಹಿನ್ನೆಲೆಯಲ್ಲಿ ಮಠದ ಒಳಗೆ ಯಾವುದೇ ವಾಹನಗಳನ್ನು ಬಿಡಬೇಡಿ ಎಂದು ಸಿಬ್ಬಂದಿಗೆ ಎಸ್‍ಪಿ ಸೂಚಿಸಿದ್ದರು. ಆದರೆ ಅವರ ಸೂಚನೆ ಮೀರಿ ಸಿಬ್ಬಂದಿ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದ್ದಕ್ಕೆ ಎಸ್‍ಪಿ ಅನೂಪ್ ಶೆಟ್ಟಿ ಗರಂ ಆಗಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹಾದಿ ಹಿಡಿದ ಎಚ್‍ಡಿಕೆ!

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹಾದಿ ಹಿಡಿದ ಎಚ್‍ಡಿಕೆ!

    ತುಮಕೂರು: ಬುಧವಾರ ಎಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಬೆಳಗ್ಗೆ ಸುಮಾರು 8.35ಕ್ಕೆ ತುಮಕೂರು ವಿಶ್ವವಿದ್ಯಾಲಯದ ಹ್ಯಾಲಿಪ್ಯಾಡ್‍ಗೆ ಬಂದಿಳಿದು, ಅಲ್ಲಿಂದ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಶ್ರೀ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.

    ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಠದಲ್ಲೇ ಸಿಎಂ ಕುಮಾರಸ್ವಾಮಿ ಉಪಾಹಾರ ಸ್ವೀಕರಿಸಲಿದ್ದಾರೆ. ಬಳಿಕ 11 ಗಂಟೆ ಸುಮಾರಿಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

    ಕುಮಾರಸ್ವಾಮಿ ನಾಳೆ ವಿಶ್ವಾಸಮತವನ್ನೂ ಸಾಬೀತು ಪಡಿಸಲಿದ್ದಾರೆ. ಇದಾದ ಕೂಡಲೇ ದೆಹಲಿಗೆ ಬರುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಪ್ರಮಾಣ ವಚನಕ್ಕೆ ಬಂದಿದ್ದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ವಿಶ್ವಾಸಮತಯಾಚನೆ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.

    ಸಚಿವ ಸಂಪುಟದ ಆಯ್ಕೆ, 2ನೇ ಡಿಸಿಎಂ ನೇಮಕ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧಕ್ಕೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ನಾಳೆ ರಾತ್ರಿ ದೆಹಲಿಗೆ ತೆರಳಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಇಂದು ಸಿದ್ದಗಂಗಾ ಶ್ರೀಗಳಿಗೆ `ಭಗವಾನ್ ಮಹಾವೀರ ಶಾಂತಿ’ ಪ್ರಶಸ್ತಿ ಪ್ರದಾನ

    ಇಂದು ಸಿದ್ದಗಂಗಾ ಶ್ರೀಗಳಿಗೆ `ಭಗವಾನ್ ಮಹಾವೀರ ಶಾಂತಿ’ ಪ್ರಶಸ್ತಿ ಪ್ರದಾನ

    ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಸಿದ್ದಗಂಗಾ ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ಸಂಜೆ ಮಠದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಅವರಿಗೆ ಮುಖ್ಯಮಂತ್ರಿಯವರು `ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುತ್ತಿರುವ ಪ್ರಶಸ್ತಿ ಇದಾಗಿದ್ದು, ಈ ವೇಳೆ ಸಚಿವೆ ಉಮಾಶ್ರೀ ಸಿಎಂ ಜೊತೆಗಿರಲಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್, ಜಯಚಂದ್ರ ಸೇರಿದಂತೆ ಹಲವು ಶಾಸಕರು ಭಾಗಿಯಾಗಲಿದ್ದಾರೆ.