Tag: Sichuan

  • ಚೀನಾದಲ್ಲಿ ಭಾರೀ ಮಳೆಗೆ 15 ಮಂದಿ ಸಾವು, ನಾಲ್ವರು ನಾಪತ್ತೆ

    ಚೀನಾದಲ್ಲಿ ಭಾರೀ ಮಳೆಗೆ 15 ಮಂದಿ ಸಾವು, ನಾಲ್ವರು ನಾಪತ್ತೆ

    ಬೀಜಿಂಗ್: ಚೀನಾದಲ್ಲಿ (China) ಭಾರೀ ಮಳೆ (Rain) ಸುರಿಯುತ್ತಿದ್ದು, ಧಾರಾಕಾರ ಮಳೆಯ ಪರಿಣಾಮ 15 ಜನ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸೋಮವಾರ ಬೆಳಗ್ಗೆ 7 ಗಂಟೆಯಿಂದ ನೈರುತ್ಯ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ 15 ಜನ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಈ ಕುರಿತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping), ಎಲ್ಲಾ ಹಂತಗಳ ಅಧಿಕಾರಿಗಳು ಜನರ ಸುರಕ್ಷತೆ ಮತ್ತು ಆಸ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೇ ಪ್ರಮುಖ ಅಧಿಕಾರಿಗಳು ಪ್ರವಾಹದ ವಿರುದ್ಧ ಹೋರಾಡುವಲ್ಲಿ ಮುಂದಾಳತ್ವ ವಹಿಸಬೇಕು. ನಷ್ಟಗಳನ್ನು ಕಡಿಮೆಗೊಳಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತೀಯ-ಅಮೆರಿಕನ್‌ ಸಂಸದೆ ಚುಡಾಯಿಸಿದ ವ್ಯಕ್ತಿಗೆ 364 ದಿನಗಳ ಜೈಲು ಶಿಕ್ಷೆ

    ನೆರೆಯ ಸಿಚುವಾನ್‌ನಲ್ಲಿ (Sichuan) ಈ ತಿಂಗಳು ಭಾರೀ ಮಳೆಯಿಂದ 4,60,000ಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ. ಭೀಕರ ಮಳೆಯ ಪರಿಣಾಮ ಸುಮಾರು 85,000 ಜನರನ್ನು ತಮ್ಮ ಮನೆಗಳಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಈ ವಾರ ಮಳೆಯಿಂದಾಗಿ ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ವೇತಭವನದಲ್ಲಿ ಕೊಕೇನ್ ಪತ್ತೆ – ತೀವ್ರ ತನಿಖೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು

    ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು

    ಬೀಜಿಂಗ್: ಸೋಮವಾರ ಚೀನಾದಲ್ಲಿ ಸಂಭವಿಸಿದ 6.8 ತೀವ್ರತೆಯ ಭೂಕಂಪ ಅಲ್ಲಿನ ಜನರನ್ನು ಭಯಭೀತರನ್ನಾಗಿಸಿದೆ. ನಿನ್ನೆ ಅಪ್ಪಳಿಸಿರುವ ಭೂಕಂಪ ಇತ್ತೀಚಿನ ವರ್ಷಗಳಲ್ಲಿ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿದೆ. ನಿನ್ನೆ ಭೂಕಂಪದ ವೇಳೆ ಅಲ್ಲಿನ ಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವೀಡಿಯೋಗಳು ನೋಡುಗರ ಮೈಯನ್ನೇ ಝುಂ ಎನಿಸುವಂತೆ ಮಾಡುತ್ತದೆ. ಹಾಗಿದ್ದರೆ ಅಂತಹ ಭೂಕಂಪವನ್ನು ಅನುಭವಿಸಿದವರ ಪರಿಸ್ಥಿತಿ ಹೇಗಿದ್ದಿರಬಹುದು ಎಂಬುದು ಕೂಡಾ ಬೆಚ್ಚಿ ಬೀಳಿಸುವಂತೆ ಮಾಡುತ್ತದೆ.

    ವೈರಲ್ ಆಗಿರುವ ವೀಡಿಯೋಗಳಲ್ಲಿ ಭೂಕಂಪದ ರೌದ್ರತೆ ಕಂಡುಬಂದಿದೆ. ಭೂಕಂಪದ ವೇಳೆ ಕಟ್ಟಡಗಳು ಕುಸಿಯುವುದು, ಗೋಪುರಗಳು ಅಲುಗಾಡುವುದು ಕಾಣಿಸಿಕೊಂಡಿದೆ.

    ವರದಿಗಳ ಪ್ರಕಾರ ಚೀನಾದಲ್ಲಿ ನಿನ್ನೆ ಸಂಭವಿಸಿದ ಭೂಕಂಪದಿಂದಾಗಿ 65 ಜನರು ಸಾವನ್ನಪ್ಪಿದ್ದಾರೆ. 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 50,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಭೂಕಂಪ ವಲಯದಲ್ಲಿ 200ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ದೂರಸಂಪರ್ಕ, ವಿದ್ಯುತ್ ಸೇವೆಗಳು ಕಡಿತಗೊಂಡಿದ್ದು ಅದನ್ನು ಮರುಸ್ಥಾಪಿಸಲು ಹರಸಾಹಸಪಡಲಾಗುತ್ತಿದೆ. ಇದನ್ನೂ ಓದಿ: ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ಚೀನಾದ ಸಿಚುವಾನ್ ಪ್ರದೇಶದಲ್ಲಿ ಭೂಕಂಪಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ ಎನ್ನಲಾಗುತ್ತದೆ. ಸೋಮವಾರ ಘಟಿಸಿದ ಭೂಕಂಪ 2017ರ ಬಳಿಕ ಸಂಭವಿಸಿದ ಅತಿ ದೊಡ್ಡ ಭೂಕಂಪ ಎಂದು ವರದಿಯಾಗಿದೆ. 2008ರಲ್ಲಿ ಚೀನಾದಲ್ಲೇ ಅತ್ಯಂತ ವಿನಾಶಕಾರಿ ಭೂಕಂಪ ಸಂಭವಿಸಿತ್ತು. 14 ವರ್ಷಗಳ ಹಿಂದೆ 8.0 ತೀವ್ರತೆಯ ಭೂಕಂಪ ಅಪ್ಪಳಿಸಿ, ಸುಮಾರು 70,000 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಿಮ್ಸ್ ಸಿಬ್ಬಂದಿ ಎಡವಟ್ಟು- ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಪತ್ನಿ ಕೈಗಿಟ್ಟ ಸಿಬ್ಬಂದಿ

    Live Tv
    [brid partner=56869869 player=32851 video=960834 autoplay=true]

  • ಚೀನಾಗೆ ಅಪ್ಪಳಿಸಿದ 6.6 ತೀವ್ರತೆಯ ಭೂಕಂಪ – 30 ಮಂದಿ ಸಾವು

    ಚೀನಾಗೆ ಅಪ್ಪಳಿಸಿದ 6.6 ತೀವ್ರತೆಯ ಭೂಕಂಪ – 30 ಮಂದಿ ಸಾವು

    ಬೀಜಿಂಗ್: ನೈಋತ್ಯ ಚೀನಾದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸಿಚುವಾನ್ ಪ್ರಾಂತ್ಯದ ಕಾಂಗ್ಡಿಂಗ್ ನಗರದ ಆಗ್ನೇಯಕ್ಕೆ ಸುಮಾರು 43 ಕಿ.ಮೀ(26 ಮೈಲುಗಳು) ದೂರದಲ್ಲಿ, 10 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಅಪ್ಪಳಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

    ಸಾಂದರ್ಭಿಕ ಚಿತ್ರ

    ಇಂದು ಚೀನಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹಲವು ಮನೆಗಳು ಹಾನಿಯಾಗಿವೆ. ಕೆಲವು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಟ್ಟುನಿಟ್ಟಿನ ಕೋವಿಡ್ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರು ತಮ್ಮ ಮನೆಗಳಿಂದ ಹೊರ ಬರಲಾಗದೇ ಕಷ್ಟ ಎದುರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಸಮೀಪದ ಪ್ರದೇಶಗಳಲ್ಲೂ ಹಲವೆಡೆ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಚೀನಾದಲ್ಲಿ ಭೂಕಂಪ ಸಂಭವಿಸಿದ 1 ಗಂಟೆಯ ಬಳಿಕ ಪೂರ್ವ ಟಿಬೆಟ್‌ನಲ್ಲಿಯೂ 4.6 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.

    ಭೂಕಂಪ ಉಂಟಾದ ಪ್ರದೇಶಗಳಿಗೆ ನೂರಾರು ರಕ್ಷಣಾ ಕಾರ್ಯಕರ್ತರನ್ನು ಕಳುಹಿಸಲಾಗಿದೆ. ರಕ್ಷಣಾ ಕಾರ್ಯಕರ್ತರಿಗೆ ಸಹಯ ಮಾಡಲು 1,000 ಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಲಾಗಿದೆ. ಅಧಿಕಾರಿಗಳು ಸಾವಿರಾರು ಟೆಂಟ್‌ಗಳು, ಹೊದಿಕೆಗಳು ಹಾಗೂ ಹಾಸಿಗೆಗಳನ್ನು ಘಟನಾ ಸ್ಥಳಗಳಿಗೆ ಕಳುಹಿಸಿದ್ದಾರೆ ಎಂದು ಸಿಂಚುವಾನ್ ಭೂಕಂಪ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ನಿರ್ಧಾರ

    Live Tv
    [brid partner=56869869 player=32851 video=960834 autoplay=true]