Tag: sialkot

  • ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಜಕೀಯ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹೊತ್ತಿನಲ್ಲೇ ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ನಗರದ ಸೇನಾನೆಲೆಯಲ್ಲಿ ಭಾರೀ ಸ್ಪೋಟ ಕಂಡುಬಂದಿದ್ದು, ಸಂಚಲನ ಸೃಷ್ಟಿಸಿದೆ.

    ಉತ್ತರ ಪಾಕಿಸ್ತಾನದ ಭಾಗದ ಸಿಯಾಲ್ಕೋಟ್ ನಗರದಲ್ಲಿ ಭಾನುವಾರ ಭಾರೀ ಸ್ಫೋಟ ಸಂಭವಿಸಿದ್ದು, ಸದ್ಯ ಸ್ಪೋಟಗೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ಪಂಜಾಬ್ ಪ್ರಾಂತ್ಯದ ನಿಷೇಧಿತ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಉತ್ತರ ಪಾಕಿಸ್ತಾನದ ಸಿಯಾಲ್‍ಕೋಟ್ ಸೇನಾ ನೆಲೆಯಲ್ಲಿ ಬಹು ಸ್ಫೋಟ ಉಂಟಾಗಿದ್ದು, ಪ್ರಾಥಮಿಕ ಮಾಹಿತಿಗಳು ಇದು ಮದ್ದುಗುಂಡುಗಳ ಸಂಗ್ರಹ ಪ್ರದೇಶವಾಗಿದೆ. ದೊಡ್ಡ ಬೆಂಕಿ ಹೊತ್ತಿ ಉರಿಯುತ್ತಿದೆ. ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

  • 72 ವರ್ಷಗಳ ನಂತ್ರ ಮತ್ತೆ ತೆರೆದಿದೆ ಪಾಕ್‍ನಲ್ಲಿರುವ ಹಿಂದೂ ದೇಗುಲ

    72 ವರ್ಷಗಳ ನಂತ್ರ ಮತ್ತೆ ತೆರೆದಿದೆ ಪಾಕ್‍ನಲ್ಲಿರುವ ಹಿಂದೂ ದೇಗುಲ

    ಇಸ್ಲಮಾಬಾದ್: ಪಾಕಿಸ್ತಾನದಲ್ಲಿದ್ದ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಹಿಂದೂ ದೇಗುಲವನ್ನು 72 ವರ್ಷಗಳ ಬಳಿಕ ಮತ್ತೆ ತೆರೆದು, ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸಲಾಗಿದೆ.

    ಪಾಕಿಸ್ತಾನದ ಸಿಯಾಲ್ ಕೋಟ್‍ನಲ್ಲಿ ‘ಶಾವಾಲಾ ತೇಜ ಸಿಂಗ್ ದೇವಾಲಯ’ ಇದೆ. ಈ ದೇವಾಲಯವನ್ನು 72 ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಆದರೆ ಈಗ ಮತ್ತೆ ದೇಗುಲದ ಬಾಗಿಲು ತೆರೆದಿದೆ. ಸಾವಿರ ವರ್ಷಗಳ ಹಿಂದೆ ಸರ್ದಾರ್ ತೇಜ್ ಸಿಂಗ್ ಅವರು ಶಾವಾಲಾ ತೇಜ ಸಿಂಗ್ ದೇವಾಲಯವನ್ನು ನಿರ್ಮಿಸಿದ್ದರು. ಈ ದೇವಾಲಯವು ಭಾರತ-ಪಾಕ್ ವಿಭಜನೆಯ ಸಮಯದಲ್ಲಿ ಮುಚ್ಚಲಾಗಿತ್ತು.

    1992ರಲ್ಲಿ ಭಾರತದಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಪಾಕ್‍ನಲ್ಲಿದ್ದ ಹಿಂದೂಗಳು ಶಾವಾಲಾ ತೇಜ ಸಿಂಗ್ ದೇಗುಲಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರು. ಅಂದಿನಿಂದ ದೇಗುಲದಲ್ಲಿ ಪೂಜೆ, ಪುನಸ್ಕಾರಗಳು ನಡೆಯದೆ ಪಾಳುಬಿದ್ದಿತ್ತು.

    ಸುದ್ದಿಸಂಸ್ಥೆಯೊಂದರ ವರದಿ ಪ್ರಕಾರ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗಿದೆ ಎನ್ನಲಾಗಿದೆ. ಅಲ್ಲದೆ ಜನರು ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಮುಕ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿಲಾಲ್ ಹೈದರ್ ಹೇಳಿದ್ದಾರೆ.

    ಹಾಗೆಯೇ ದೇವಾಲಯದ ಸಂರಕ್ಷಣೆ ಮತ್ತು ಪುನಃಸ್ಥಾಪಿಸುವ ಕಾರ್ಯವನ್ನು ಕೂಡ ಶೀಘ್ರದಲ್ಲೇ ಆರಂಭಿಸಲಾಗುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.