Tag: Shyam Sundar

  • ನಿಜವಾಗಿಯೂ ಸಂತ್ರಸ್ತ ನನ್ನ ಕಕ್ಷಿದಾರ: ರಮೇಶ್ ಜಾರಕಿಹೊಳಿ ಪರ ವಕೀಲ

    ನಿಜವಾಗಿಯೂ ಸಂತ್ರಸ್ತ ನನ್ನ ಕಕ್ಷಿದಾರ: ರಮೇಶ್ ಜಾರಕಿಹೊಳಿ ಪರ ವಕೀಲ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಕಕ್ಷಿದಾರ ನಿಜವಾಗಿಯೂ ಸಂತ್ರಸ್ತ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅತ್ಯಾಚಾರ ಕೇಸ್‍ನ ತನಿಖೆ ಸರಿಯಾಗಿ ತನಿಖೆ ಆಗ್ತಿಲ್ಲ. ಪೊಲೀಸ್ ಆಯುಕ್ತರಿಗೆ ಯುವತಿ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯಿಸಿ, ಶ್ಯಾಮ್ ಸುಂದರ್ ಆಕ್ಷೇಪ ವ್ಯಕ್ತಪಡಿಸಿದರು. ಯುವತಿ ಸುಳ್ಳು ಆರೋಪ ಮತ್ತು ಸುಳ್ಳು ದೂರು ಕೊಡ್ತಿದ್ದಾರೆ. ನಿಜವಾಗಿಯೂ ಸಂತ್ರಸ್ತ ನನ್ನ ಕಕ್ಷಿದಾರ ಎಂದು ತಿಳಿಸಿದ್ದಾರೆ.

    ಇದೊಂದು ಪೂರ್ವಯೋಜಿತ ಕೃತ್ಯ. ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ಸುಳ್ಳು ದೂರುಗಳ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಕರಣದಲ್ಲಿ ನಾನು ಆರೋಪಿಯೋ? ಸಂತ್ರಸ್ತೆಯೋ? – ಆಯುಕ್ತರಿಗೆ ಸಿಡಿ ಲೇಡಿ ಪತ್ರ

    ಕಳೆದ ಬಾರಿ ವಿಚಾರಣೆಗೆ ಕರೆಯುವಾಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಗೋಕಾಕ್ ಆಸ್ಪತ್ರೆಗೆ ಹೋಗಿದ್ದು, ವಿಚಾರಣೆಯಿಂದ ತಪ್ಪಿಸಿಕೊಂಡಿಲ್ಲ. ಆ ಬಳಿಕ ತನಿಖಾಧಿಕಾರಿಗಳು ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿಲ್ಲ. ನೋಟಿಸ್ ಕೊಟ್ಟು ಕರೆದರೆ ಅವರು ಖಂಡಿತವಾಗಿಯೂ ಬರುತ್ತಾರೆ. ಆಸ್ಪತ್ರೆಗೆ ಯಾರಾದರೂ ಸುಮ್ ಸುಮ್ನೆ ಹೋಗ್ತಾರಾ. ಅದೂ ಸರ್ಕಾರಿ ಆಸ್ಪತ್ರೆಗೆ ಹೋಗಿರೋದು ಎಂದು ತಿಳಿಸಿದ್ದಾರೆ.

  • ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ? ನ್ಯಾಯಾಧೀಶರು ಕೊಟ್ಟ ಕಾರಣಗಳು ಇಲ್ಲಿದೆ

    ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ? ನ್ಯಾಯಾಧೀಶರು ಕೊಟ್ಟ ಕಾರಣಗಳು ಇಲ್ಲಿದೆ

    ಬೆಂಗಳೂರು: ಯುವಕ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿದೆ.

    ಯಾವೆಲ್ಲ ಅಂಶಗಳನ್ನು ಪರಿಗಣಿಸಿ ನ್ಯಾ. ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು ಎನ್ನುವುದನ್ನು ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಅವರು ಸುದ್ದಿಗಾರರಿಗೆ ತಿಳಿಸಿದರು.

    ಕೋರ್ಟ್ ಹೇಳಿದ್ದು ಏನು?
    ವಿದ್ವತ್ ಮೇಲೆ ಹಲ್ಲೆಯಾದಾಗ ನಲಪಾಡ್ ಅಲ್ಲಿ ಇರಲೇ ಇಲ್ಲ. ಅವರು ಹೊಡೆದಿಲ್ಲ. 10-15 ಜನ ಹೊಡೆದಿದ್ದಾರೆ ಅಂತ ಎಫ್‍ಐಆರ್ ನಲ್ಲಿದೆ ಬಿಟ್ಟರೇ ಅವರೇ ಹೊಡೆದಿದ್ದಾರೆ ಎಂದು ನೇರವಾದ ಹೇಳಿಕೆಯಿಲ್ಲ ಅಂತ ಆರೋಪಿ ನಲಪಾಡ್ ಪರ ವಕೀಲ ವಾದ ಮಾಡಿದ್ದಾರೆ. ಆದ್ರೆ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ವಿದ್ವತ್ ಮೇಲೆ ಘೋರ ಹಾಗೂ ಭಯಾನಕವಾಗಿ ಹಲ್ಲೆ ನಡೆದಿರುವುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದರೇ ವಿನಃ ಯಾರು ವಿದ್ವತ್ ಸಹಾಯಕ್ಕೆ ಬರಲಿಲ್ಲ. ನಲಪಾಡ್ ಅವರು ಅಲ್ಲಿ ತೋರಿದ ದರ್ಪದಿಂದಾಗಿ ಭಯಗೊಂಡು ಯಾರೊಬ್ಬರೂ ಸಹಾಯಕ್ಕೆ ಬರದಿರುವುದು ಕಾರಣವಾಗಿದೆ. ಹೀಗಾಗಿ ಇದೊಂದು ಘೋರವಾದ ಪ್ರಕರಣವಾಗಿದೆ.

     

    ಘಟನೆ ನಡೆದಂದೇ ರಾತ್ರಿ 11.45ರ ಸುಮಾರಿಗೆ ದೂರು ದಾಖಲಾದ್ರೂ ಕೂಡ ಬೆಳಗ್ಗಿನ ಜಾವ 3.30ರವರೆಗೂ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಮಾರಣಾಂತಿಕ ಹಲ್ಲೆ ನಡೆದರೂ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಪೊಲೀಸರು ಯಾವುದೇ ಕಾರಣವನ್ನೂ ಕೂಡ ಕೊಟ್ಟಿಲ್ಲ. ಹೀಗಾಗಿ ಇದು ಆರೋಪಿ ತನ್ನ ಪ್ರಭಾವ ಬಳಸಿ ಎಫ್‍ಐಆರ್ ದಾಖಲಿಸಿಕೊಳ್ಳಲು ತಡಮಾಡಿರಬಹುದೆಂದು ನ್ಯಾಯಾಲಯ ಗಮನಿಸಿದೆ.

    ಇಷ್ಟು ಮಾತ್ರವಲ್ಲದೇ ಅರುಣ್ ಬಾಬು ಎಂಬ ವ್ಯಕ್ತಿಯ ಕೈಯಿಂದ ಪ್ರತಿ ದೂರು ನೀಡಿ ಬೆಳಗ್ಗೆ 5.30 ಸುಮಾರಿಗೆ ಕೇಸ್ ದಾಖಲಿಸಿಕೊಂಡು, ನಂತರ 6 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿ ಮೆಡಿಕಲ್ ಸಮ್ಮರಿ ಮಾಡಿಸಿದ್ದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ.

    ಈ ಪ್ರಕರಣವನ್ನು ಏನಾದ್ರೂ ಮಾಡಿ ಮುಚ್ಚಿಹಾಕಲು ಮಾಡಿದಂತಹ ಪ್ರಯತ್ನವಾಗಿದೆ. ಮಲ್ಯ ಆಸ್ಪತ್ರೆಯ ವೈದ್ಯ ಡಾ. ಆನಂದ್ ಅವರು ಕೂಡ ವಿದ್ವತ್ ಡಿಸ್ಚಾರ್ಜ್ ಸಮ್ಮರಿಯನ್ನು ಅಪಾದಿತರಿಗೆ ಅನುಕೂಲವಾಗುವಂತೆ ಅಸಾಮಾನ್ಯವಾಗಿ ಸೃಷ್ಟಿಸಿದ್ದಾರೆ ಎಂಬ ನಿಲುವನ್ನು ನ್ಯಾಯಾಲಯ ತೆಗೆದುಕೊಂಡಿದೆ. ಈ ಎಲ್ಲಾ ವಿಚಾರಗಳ ಆಧಾರದ ಮೇಲೆ ಹಾಗೂ ಸುಪ್ರೀಂ ಕೋರ್ಟ್ 2, 3 ತೀರ್ಪುಗಳನ್ನು ಉಲ್ಲೇಖಿಸಿ, ಒಂದು ವೇಳೆ ಜಾಮೀನು ಮಂಜೂರು ಮಾಡಿದ್ದಲ್ಲಿ ಆರೋಪಿ ಸಾಕ್ಷ್ಯವನ್ನು ನಾಶ ಮಾಡುವ ಸಾಧ್ಯತೆಯಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ ಎಂದು ಶ್ಯಾಮ್‍ಸುಂದರ್ ತಿಳಿಸಿದರು.

    https://www.youtube.com/watch?v=1Lfn0Ovd27U

    https://www.youtube.com/watch?v=tGbMJgI45Dc

  • ನಲಪಾಡ್ ಗ್ಯಾಂಗಿನಿಂದ ಜೀವಬೆದರಿಕೆ – ವಕೀಲರಿಂದ ಪೊಲೀಸರಿಗೆ ದೂರು

    ನಲಪಾಡ್ ಗ್ಯಾಂಗಿನಿಂದ ಜೀವಬೆದರಿಕೆ – ವಕೀಲರಿಂದ ಪೊಲೀಸರಿಗೆ ದೂರು

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಅವರ ಗೂಂಡಾ ಮಗ ನಲಪಾಡ್ ವಿರುದ್ಧ ವಾದ ಮಾಡಿದ್ದಕ್ಕೆ ಆತನ ಬೆಂಬಲಿಗರಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ವಕೀಲ ಶ್ಯಾಮ್ ಸುಂದರ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

    ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ಯಾಮ್ ಸುಂದರ್, ಈ ಪ್ರಕರಣದಲ್ಲಿ ನಾನು ವಕೀಲನಾಗಿರುವ ಕಾರಣ ನಿನ್ನೆ ಕೋರ್ಟ್ ಕಲಾಪ ಮುಗಿಸಿದ ಬಳಿಕ ನನ್ನನ್ನು ದುರುಗುಟ್ಟಿ ನೋಡುತ್ತಿದ್ದರು. ಈ ವಿಚಾರ ತಿಳಿದು ಪೊಲೀಸರು ನನಗೆ ರಕ್ಷಣೆ ನೀಡಿದರು. ಸಂಜೆ ನಾನು ಆರ್ ಟಿ  ನಗರ ಪೊಲೀಸ್ ಠಾಣೆಗೆ ಬಂದು ಈ ವಿಚಾರ ತಿಳಿಸಿದ್ದು, ಇಂದು ನಾನು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇನೆ. ಆಯುಕ್ತರ ಈ ಪ್ರಕರಣ ಮುಗಿಯುವರೆಗೆ ಭದ್ರತೆ ನೀಡುತ್ತೇವೆ, ಕೋರ್ಟ್ ನಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುತ್ತೇವೆ ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ನೇರವಾಗಿ ನನಗೆ ಯಾರು ಬೆದರಿಕೆ ಹಾಕಿಲ್ಲ. ಆದರೆ ಬಲ್ಲ ಮೂಲಗಳು, ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿಯ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ. ದೆಹಲಿಯ ನಿರ್ಭಯಾ ಕೇಸ್ ನಂತೆ ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ನಾನು ನಿನ್ನೆ ಪ್ರಬಲವಾಗಿ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದೆ. ಹೀಗಾಗಿ ಆರೋಪಿಗಳಿಂದ ಯಾವುದೇ ತೊಂದರೆ ಆಗದೇ ಇದ್ದರೂ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಇರುವ ಕಾರಣ ದೂರು ನೀಡಿದ್ದೇನೆ ಎಂದು ಶ್ಯಾಮ್ ಸುಂದರ್ ಹೇಳಿದರು. ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

    ನಿನ್ನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾದ ಮಂಡಿಸುತ್ತಿದ್ದ ವಕೀಲ ಶ್ಯಾಮ್ ಸುಂದರ್ ಅವರನ್ನು ಆರೋಪಿ ನಲಪಾಡ್ ಹಾಗೂ ಅವರ ಬೆಂಬಲಿಗರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಷ್ಟೇ ಅಲ್ಲದೇ ಕೋರ್ಟ್ ನಿಂದ ಹೊರ ಬರುತ್ತಿದ್ದಾಗ ನಲಪಾಡ್ ಬೆಂಬಲಿಗರು, ನಮ್ಮ ಲಿಸ್ಟ್ ನಲ್ಲಿ ಇವನು ಇದ್ದು, ಇವನಿಗೂ ಗತಿ ಕಾಣಿಸುತ್ತೇವೆ ಎಂದು ಮಾತನಾಡುತ್ತಿದ್ದರು. ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

     

    https://youtu.be/-BMml-Cw79E