Tag: SHWETHA SRIVASTAV

  • ಬೋಲ್ಡ್ ಅವತಾರ ತಾಳಿದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಬೋಲ್ಡ್ ಅವತಾರ ತಾಳಿದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಸ್ಯಾಂಡಲ್‌ವುಡ್‌ನ (Sandalwood) ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivastav) ಅವರು ‘ರಾಘವೇಂದ್ರ ಸ್ಟೋರ್ಸ್’ (Ragavendra Stores) ಚಿತ್ರದ ಮೂಲಕ ಇತ್ತೀಚಿಗೆ ಸದ್ದು ಮಾಡಿದ್ದರು. ಈಗ ಹೊಸ ಫೋಟೋಶೂಟ್‌ನಲ್ಲಿ ನಟಿ ಹಾಟ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಕಡಲ ಕಿನಾರೆಯಲ್ಲಿ ‘ಬಿಗ್ ಬಾಸ್’ ದೀಪಿಕಾ ದಾಸ್

    ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ, ಫೇರ್ & ಲವ್ಲಿ, ಹೋಪ್ (Hope) ಸೇರಿದಂತೆ ಹಲವು ಸಿನಿಮಾಗಳ ಮೂಲಕ ಶ್ವೇತಾ ಶ್ರೀವಾತ್ಸವ್ ಅವರು ಗಮನ ಸೆಳೆದಿದ್ದರು. ಮದುವೆ ಬಳಿಕ ಮಗಳ ಆಗಮನ ನಂತರ ನಟನೆಯಿಂದ ದೂರ ಸರಿದಿದ್ದರು.

    ಇತ್ತೀಚಿಗೆ ತೆರೆಕಂಡ ‘ರಾಘವೇಂದ್ರ ಸ್ಟೋರ್ಸ್ ನವರಸ ನಾಯಕ ಜಗ್ಗೇಶ್‌ಗೆ ಜೋಡಿಯಾಗುವ ಶ್ವೇತಾ ಶ್ರೀವಾತ್ಸವ್ ಮೋಡಿ ಮಾಡಿದ್ದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ನಟಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.

     

    View this post on Instagram

     

    A post shared by Shwetha Srivatsav (@shwethasrivatsav)

    ಪಿಂಕ್ ಬಣ್ಣದ ಡ್ರೆಸ್ ಧರಿಸಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಮದುವೆಯಾಗಿ ಒಂದು ಮಗು ಇದ್ದರೂ ಶ್ವೇತಾ ಫಿಟ್‌ನೆಸ್‌ಗೆ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಚಂದನವನದಲ್ಲಿ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರ ಖ್ಯಾತಿಯ ಶ್ವೇತಾ ಶ್ರೀವಾಸ್ತವ್ ಇದೀಗ ಮಹತ್ತರದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಸಿನಿಮಾ ಜೊತೆ ಲೇಖಕಿಯಾಗಿ ಗುರುತಿಸಿಕೊಳ್ಳುವತ್ತ ನಟಿ ಹೆಜ್ಜೆ ಇಟ್ಟಿದ್ದಾರೆ.

    `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, `ಕಿರಗೂರಿನ ಗಯ್ಯಾಳಿಗಳು’, `ಫೇರ್ & ಲವ್ಲಿ’ ಚಿತ್ರದ ಮೂಲಕ ಗಮನ ಸೆಳೆದಿರುವ ನಟಿ ಮತ್ತೆ ಹೋಪ್ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಈ ಸಿನಿಮಾದ ರಿಲೀಸ್ ಬಳಿಕ, ಶ್ವೇತಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದುಂಟು. ಈಗ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ಅಸಾಧ್ಯವಾದ ಪ್ರಯತ್ನದ ಕುರಿತು ನಟಿ ಶ್ವೇತಾ ಪುಸ್ತಕ ಬರೆಯಲು ಮನಸ್ಸು ಮಾಡಿದ್ದಾರೆ. ಈ ಜರ್ನಿಯಲ್ಲಿ ನೀವು ಕೂಡ ಸಾಥ್ ನೀಡಬಹುದು ಅಂತಾ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ

     

    View this post on Instagram

     

    A post shared by Shwetha Srivatsav (@shwethasrivatsav)

    ನಮಸ್ಕಾರ, ಒಂದು ಮುಖ್ಯವಾದ ವಿಷಯ ತಿಳಿಸುವುದಿತ್ತು. ಮದುವೆಯಾದ ನಂತರ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಈ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ನನ್ನ ಅಸಾಧ್ಯವಾದ ಪ್ರಯತ್ನದ ಕುರಿತು, ಒಂದು ಪುಸ್ತಕ ಬರೆಯುತಿದ್ದೇನೆ. ಇದರ ಮುಖ್ಯ ಉದ್ದೇಶವಿಷ್ಟೇ ಇಂದರಿಂದ ಯಾರಿಗಾದರೂ ಸ್ಫೂರ್ತಿ ಸಿಗಬಹುದೇನೋ ಎಂದು. ನಿಮ್ಮಲ್ಲಿ ನನ್ನನ್ನ ಕುರಿತು ಯಾವುದೇ ಪ್ರಶ್ನೆಗಳಿದ್ದರು, ನನ್ನ ಮೈಲ್ ಐಡಿಗೆ ಕಳುಹಿಸಿ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ ಎಂದು ನಟಿ ತಿಳಿಸಿದ್ದಾರೆ. ಈ ಮೂಲಕ ನಟಿ ಶ್ವೇತಾ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅತೀ ಶೀಘ್ರದಲ್ಲಿ `ರಾಘವೆಂದ್ರ ಸ್ಟೋರ‍್ಸ್’ ಟೀಸರ್ ರಿಲೀಸ್

    ಅತೀ ಶೀಘ್ರದಲ್ಲಿ `ರಾಘವೆಂದ್ರ ಸ್ಟೋರ‍್ಸ್’ ಟೀಸರ್ ರಿಲೀಸ್

    ಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ `ರಾಘವೇಂದ್ರ ಸ್ಟೊರ‍್ಸ್’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ತಮ್ಮ ಪಾಲಿನ ಡಬ್ಬಿಂಗ್ ಕೂಡ ಜಗ್ಗೇಶ್ ಮುಗಿಸಿದ್ದಾರೆ. ಕಳೆದ ತಿಂಗಳು ಜಗ್ಗೇಶ್ ಹುಟ್ಟು ಹಬ್ಬದಂದು ಸಿನಿಮಾ ಟೀಮ್ ವಿಶೇಷವಾದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಟೀಸರ್ ಅನ್ನು ರಿಲೀಸ್ ಮಾಡುವ ಪ್ಲ್ಯಾನ್‌ ಮಾಡಿದ್ದಾರಂತೆ ನಿರ್ಮಾಪಕ ವಿಜಯ್ ಕಿರಗಂದೂರು.

    ಹೊಂಬಾಳೆ ಫಿಲ್ಮ್ಸ್‌ಂ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಿದು. ಹೊಂಬಾಳೆ ಅವರ 12ನೇ ಸಿನಿಮಾ. ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನ ಮೊದಲ ಚಿತ್ರ. ಹೀಗಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಜಗ್ಗೇಶ್ ನಟಿಸಿದ ಸಿನಿಮಾಗಳ ಜಾನರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಈವರೆಗಿನ ಸಿನಿಮಾಗಳು ಒಂದಕ್ಕೊಂದು ತದ್ವಿರುದ್ಧ. ಹಾಗಾಗಿ ʻರಾಘವೇಂದ್ರ ಸ್ಟೋರ್ʼ ಸಿನಿಮಾ ಹೇಗೆ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳದ್ದು.

    ವಿಜಯ್ ಕಿರಗಂದೂರು ನಿರ್ಮಾಣದ `ರಾಘವೆಂದ್ರ ಸ್ಟೊರ‍್ಸ್’ 12ನೇ ಸಿನಿಮಾವಾಗಿದ್ದು, ಭಿನ್ನ ಕಥೆಯ ಮೂಲಕ ನಟ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಒಂದು ಹೋಟೆಲ್ ಸುತ್ತ ಹೆಣದಿರುವ ಈ ಕಥೆಯಲ್ಲಿ ಜಗ್ಗೇಶ್ ಅಡುಗೆ ಮಾಡುವ ಬಾಣಸಿಗನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ಜಗ್ಗೇಶ್‌ರವರ ಬಾಣಸಿಗನ ಪಾತ್ರದ ಲುಕ್ ರಿವೀಲ್ ಆಗಿ, ಸೋಷಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗಿತ್ತು.

    ʻರಾಜಕುಮಾರʼ, ʻಯುವರತ್ನʼ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್‌ರಾಮ್ `ರಾಘವೆಂದ್ರ ಸ್ಟೋರ‍್ಸ್ʼ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್‌ಗೆ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ್ ಕಾಣಿಸಿಕೊಂಡಿದ್ದಾರೆ.ಇದನ್ನು ಓದಿ:ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

    `ರಾಘವೇಂದ್ರ ಸ್ಟೋರ‍್ಸ್’ ಚಿತ್ರದಲ್ಲಿ ನಾಯಕಿ ಶ್ವೇತಾ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಜಗ್ಗೇಶ್ ನಟನೆಯ ಬಹುನಿರೀಕ್ಷಿತ `ರಾಘವೆಂದ್ರ ಸ್ಟೋರ‍್ಸ್’ ಚಿತ್ರ ರಿಲೀಸ್ ಡೇಟ್‌ನ್ನ ಚಿತ್ರತಂಡ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ. ಸದ್ಯ ಚಿತ್ರದ ಜಗ್ಗೇಶ್ ಅವರ ನ್ಯೂ ಲುಕ್ ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.