Tag: Shweta Chengappa

  • ಒಟಿಟಿಯಲ್ಲೂ ಕಮಾಲ್ ಮಾಡಿದ ‘ವೇದ’ ಸಿನಿಮಾ

    ಒಟಿಟಿಯಲ್ಲೂ ಕಮಾಲ್ ಮಾಡಿದ ‘ವೇದ’ ಸಿನಿಮಾ

    ಶಿವರಾಜ್ ಕುಮಾರ್ (Shivraj Kumar) ಅಭಿನಯದ ಸೂಪರ್ ಹಿಟ್ ಸಿನಿಮಾ ‘ವೇದ’ (Veda) ಫೆಬ್ರವರಿ 10ರಂದು ZEE5 ಒಟಿಟಿಗೆ ಎಂಟ್ರಿ ಕೊಟ್ಟಿತ್ತು. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಶಿವಣ್ಣ ಸಿನಿ ಕೆರಿಯರ್ ನ 125ನೇ ಸಿನಿಮಾ ಹಾಗೂ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿರುವ ‘ವೇದ’ ಒಟಿಟಿಯಲ್ಲೂ ದಾಖಲೆ ಬರೆದಿದೆ.

    ‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ (A. Harsha) ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಈ ಚಿತ್ರ ಅಭೂತಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ದೊಡ್ಮನೆ ಅಭಿಮಾನಿ ಬಳಗ ಹಾಗೂ ಸಿನಿ ಪ್ರೇಕ್ಷಕರ ಮನಗೆದ್ದ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಫೆಬ್ರವರಿ 10ರಂದು ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್ ZEE5ನಲ್ಲಿ ವೇದ ಸಿನಿಮಾ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಒಂದು ವಾರದೊಳಗೆ ಸಿನಿಮಾ 100 ಮಿಲಿಯನ್ ಗೂ ಅಧಿಕ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    ಗಾನವಿ ಲಕ್ಷ್ಮಣ್ (Ganavi Lakshmana), ಶ್ವೇತ ಚೆಂಗಪ್ಪ (Shweta Chengappa), ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

    ZEE5 ಅತ್ಯಂತ ವಿಶ್ವಾಸಾರ್ಹ ಒಟಿಟಿ ಪ್ಲಾಟ್ ಫಾರ್ಮ್ ಆಗಿದ್ದು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ಸಿನಿಮಾಗಳನ್ನು ನೀಡುತ್ತಾ ಬರುತ್ತಿದೆ. ‘ವಿಕ್ರಾಂತ್ ರೋಣ’, ‘ಗಾಳಿಪಟ-2’, ‘ಗುರು ಶಿಷ್ಯರು’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ZEE 5ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆ ಕಂಡು ಹೊಸ ದಾಖಲೆ ಕೂಡ ಬರೆದಿದೆ. ಇದೀಗ ‘ವೇದ’ ಸಿನಿಮಾ ಕೂಡ ZEE5ನಲ್ಲಿ ಹೊಸ ದಾಖಲೆ ಬರೆದು ಎಲ್ಲರ ಗಮನ ಸೆಳೆದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾ ಫೆ.10ಕ್ಕೆ ಒಟಿಟಿಗೆ

    ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾ ಫೆ.10ಕ್ಕೆ ಒಟಿಟಿಗೆ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ. ಶಿವಣ್ಣ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾಗಿದೆ ಈ ಚಿತ್ರ. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ 125ನೇ ಸಿನಿಮಾ ಒಂದು ಕಡೆಯಾದ್ರೆ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಯೊಂದಿಗೆ ತೆರೆಕಂಡ ಈ ಚಿತ್ರ ದೊಡ್ಮನೆ ಅಭಿಮಾನಿಗಳ ಮನಗೆದ್ದಿತ್ತು.

    ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ವೇದ’ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ಎ. ಹರ್ಷ ಹಾಗೂ ಶಿವಣ್ಣ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದು ಹಿಟ್ ಲಿಸ್ಟ್ ಸೇರಿದೆ. ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲು ‘ವೇದ’ ಚಿತ್ರ ರೆಡಿಯಾಗಿದ್ದು ಫೆಬ್ರವರಿ 10ಕ್ಕೆ ಜೀ5ನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

    ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ‌ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ದೇಶದ ನಾನಾ ಭಾಗಗಳ ತಲ್ಲಣಕ್ಕೆ ಕಾರಣವಾಗಿದೆ. ಉಕ್ರೇನ್ ನಲ್ಲಿ ವಾಸವಿರುವ ಭಾರತೀಯರೂ ಸೇರಿದಂತೆ ಅನೇಕ ರಾಷ್ಟ್ರಗಳ ಜನರು ಜೀವ ಹಿಡಿದುಕೊಂಡು ತವರಿಗೆ ಮರಳಲು ಕಾಯುತ್ತಿದ್ದಾರೆ. ತಮ್ಮವರು ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇಂಥದ್ದೊಂದು ಪ್ರಾರ್ಥನೆಯನ್ನು ಬಿಗ್ ಬಾಸ್ ಖ್ಯಾತಿಯ, ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಕೂಡ ಮಾಡಿದ್ದಾರೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಕನ್ನಡ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಸ್ನೇಹಿತೆ ಸುಹಾನಿ ದಿವ್ಯ ಗಿರೀಶ್ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಉಕ್ರೇನ್ ಗೆ ಹೋದವರು ಯುದ್ಧದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರಂತೆ. ಉಕ್ರೇನ್ ನಲ್ಲಿ ತಮ್ಮ ಗೆಳತಿ ಹೇಗಿದ್ದಾರೋ ಏನೋ ಎನ್ನುವ ಆತಂಕವನ್ನು ಶ್ವೇತಾ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು

    ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶುರುವಾದಾಗ ನನಗೆ ತಕ್ಷಣವೇ ನೆನಪಾಗಿದ್ದು, ಗೆಳತಿ ಸುಹಾನಿ ಮತ್ತು ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು. ಅವರ ರಕ್ಷಣೆಗೆ ಕೂಡಲೇ ಭಾರತ ಸರ್ಕಾರ ಕ್ರಮ ತಗೆದುಕೊಳ್ಳಬೇಕು. ಎಲ್ಲ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ, ಅಲ್ಲಿರುವ ಭಾರತೀಯರಿಗೆ ಧೈರ್ಯ ಹೇಳುವ ಕೆಲಸ ಆಗಬೇಕು ಎಂದಿದ್ದಾರೆ ಶ್ವೇತಾ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಯುದ್ಧ ಶುರುವಾದಾಗಿನಿಂದ ತಮಗೆ ಯಾವ ಕೆಲಸದಲ್ಲೂ ಆಸಕ್ತಿ ಕಾಣುತ್ತಿಲ್ಲ ಎಂದಿರುವ ಅವರು, ಎಲ್ಲರೂ ನನ್ನ ಗೆಳತಿಯ ಸುರಕ್ಷತೆಗಾಗಿ ಪ್ರಾರ್ಥಿಸಿ ಅಂದಿದ್ದಾರೆ. ಅವರ ಕುಟುಂಬಕ್ಕೂ ಕೂಡ ಧೈರ್ಯ ತುಂಬುವ ಕೆಲಸ ಆಗಲಿ ಎಂದು ಶ್ವೇತಾ ಬರೆದುಕೊಂಡಿದ್ದಾರೆ.

  • ಗುಣಮುಖರಾಗಿ 3 ತಿಂಗಳು ಕಳೆಯೋ ಮುನ್ನವೇ ಕೋವಿಡ್ ಲಸಿಕೆ ಪಡೆದ ಶ್ವೇತಾ ಚೆಂಗಪ್ಪ

    ಗುಣಮುಖರಾಗಿ 3 ತಿಂಗಳು ಕಳೆಯೋ ಮುನ್ನವೇ ಕೋವಿಡ್ ಲಸಿಕೆ ಪಡೆದ ಶ್ವೇತಾ ಚೆಂಗಪ್ಪ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ವೇತಾ ಚೆಂಗಪ್ಪ ಅವರು 3 ತಿಂಗಳು ಮುಂಚಿತವಾಗಿಯೇ ಲಸಿಕೆಯ ಮೊದಲ ಡೋಸ್ ಪಡೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕೆಲ ದಿನಗಳ ಹಿಂದೆ ಲಸಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ ಸೋಂಕು  ಗುಣಮುಖರಾದ ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿತ್ತು. ಆದರೆ ವೈದ್ಯರ ಸಲಹೆಯಂತೆ ಮತ್ತು ನನ್ನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಲಸಿಜೆ ಪಡೆದಿದ್ದೇನೆ ಎಂದು ಶ್ವೇತಾ ಚಂಗಪ್ಪ ಹೇಳಿದ್ದಾರೆ.

    ಮೊದಲ ಡೋಸ್ ಸಿಕ್ಕಿದೆ. ಕೋವಿಡ್ ಆರೋಗ್ಯ ಸೇತು ಅಪ್ಲಿಕೇಶನ್‍ನಲ್ಲಿ ನಿಮ್ಮನ್ನು ನೋಂದಾಯಿಸಿ ಮತ್ತು ಲಸಿಕೆ ಪಡೆಯಿರಿ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಏಕೈಕ ಭರವಸೆ ವ್ಯಾಕ್ಸಿನೇಷನ್ ಆಗಿದೆ. ಸ್ಟ್ರಾಂಗ್ ಆಗಿ ಇರುವುದು ಬಹಳ ಮುಖ್ಯವಾಗಿದೆ. ಮನೆಯಲ್ಲೇ ಇರಿ ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ನಟಿ ಶ್ವೇತಾ ಚೆಂಗಪ್ಪ ತಮಗೆ ಕೊರೊನಾ ಸೋಂಕಾಗಿದ್ದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಜೊತೆಗೆ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಆ ದಿನಗಳ ಅನುಭವವನ್ನು ಇನ್‍ಸ್ಟಾಗ್ರಾಂನಲ್ಲಿ ಲೈವ್ ಬರುವ ಮೂಲಕ ಹಂಚಿಕೊಂಡಿದ್ದರು.

     

    View this post on Instagram

     

    A post shared by Swetha Changappa (@swethachangappa)

    21 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದ ಶ್ವೇತಾ ಚೆಂಗಪ್ಪ ಏ.29ರಂದು ತಮಗೆ ನೆಗೆಟಿವ್ ಬಂದಿದ್ದ ವಿಷಯ ಹಂಚಿಕೊಂಡಿದ್ದರು. ಏಪ್ರಿಲ್ 30ರಂದು ಲೈವ್ ಬಂದು ತಮ್ಮ 21 ದಿನಗಳ ಅನುಭವವನ್ನು ಹಂಚಿಕೊಂಡಿದ್ದರು. ಅದು ತುಂಬಾ ಕಠಿಣ ಸಮಯ ಎಂದಿದ್ದರು.

     

    View this post on Instagram

     

    A post shared by Swetha Changappa (@swethachangappa)

    ಕೋವಿಡ್‍ನಿಂದ ಗುಣಮುಖರಾದವರು ಮೂರು ತಿಂಗಳು ಲಸಿಕೆ ಹಾಕಿಸಿಕೊಳ್ಳುವಂತಿಲ್ಲ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ. ಹೀಗಿದ್ದರೂ ನಟಿ ಶ್ವೇತಾ ಚೆಂಗಪ್ಪ ಮಾತ್ರ 3 ತಿಂಗಳು ಆಗುವ ಮೊದಲೇ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದೇನೆ ಎಂದು ಬರೆದು ಕೊಂಡಿದ್ದಾರೆ ಇದು ಹೇಗೆ ಸಾಧ್ಯ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.