Tag: Shweta Changappa

  • ಮಾಸ್ಕ್ ಧರಿಸೋದು ಹೇಗೆ- ಕ್ಯೂಟ್ ಆಗಿ ತೋರಿಸಿದ ಶ್ವೇತಾ ಚಂಗಪ್ಪ ಮುದ್ದು ಮಗ

    ಮಾಸ್ಕ್ ಧರಿಸೋದು ಹೇಗೆ- ಕ್ಯೂಟ್ ಆಗಿ ತೋರಿಸಿದ ಶ್ವೇತಾ ಚಂಗಪ್ಪ ಮುದ್ದು ಮಗ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿರುವುದು ತಿಳಿದೇ ಇದೆ. ಅವರ ಮುದ್ದು ಮಗನ ತುಂಟಾಟದ ವೀಡಿಯೋಗಳನ್ನು ಸಹ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಒಂದೊಳ್ಳೆ ವೀಡಿಯೋ ಹಂಚಿಕೊಳ್ಳುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ಶ್ವೇತಾ ಚಂಗಪ್ಪ ತಮ್ಮ ಮುದ್ದು ಮಗ ಜಿಯಾನ್ ಅಯ್ಯಪ್ಪ ಮಾಸ್ಕ್ ಧರಿಸುವ ವೀಡಿಯೋವನ್ನು ಹಂಚಿಕೊಂಡಿದ್ದು, ಈ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಜಿಯಾನ್ ಮಾಸ್ಕ್ ಹಾಕುವ ಬಗೆಯನ್ನು ಸಖತ್ ಕ್ಯೂಟ್ ಆಗಿ ತೋರಿಸಿದ್ದು, ಅವರ ಅಭಿಮಾನಿಗಳ ಗಮನ ಸೆಳೆದಿದೆ.

     

    View this post on Instagram

     

    A post shared by Swetha Changappa (@swethachangappa)

    ಮಾಸ್ಕ್ ಹೇಗೆ ಹಾಕ್ಕೋಬೇಕು ಜಿಯಾನ್ ಎಂದು ಶ್ವೇತಾ ಕೇಳುತ್ತಾರೆ, ಆಗ ಮೂಗು ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ತೋರಿಸಿದ್ದಾನೆ. ಆಗ ಶ್ವೇತ ವೇರಿ ಗುಡ್ ಜಿಯಾನ್ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಜಿಯಾನ್ ಕೆಕೆ ಹಾಕಲು ಶುರು ಮಾಡುತ್ತಾನೆ.

     

    View this post on Instagram

     

    A post shared by Swetha Changappa (@swethachangappa)

    ಈ ಪೋಸ್ಟ್ ಗೆ ಕನ್ನಡದಲ್ಲೇ ಸಾಲುಗಳನ್ನು ಬರೆದಿರುವ ಶ್ವೇತಾ ಚಂಗಪ್ಪ, ಮಕ್ಕಳು ನಾವು ಏನು ಹೇಳಿ ಕೊಡ್ತೀವಿ ಅದನ್ನು ಕಲಿಯೋದಿಲ್ಲ, ನಾವು ಏನು ಮಾಡ್ತೀವಿ ಅದನ್ನು ನೋಡಿ ಕಲಿಯುತ್ತಾರೆ, ಎಷ್ಟು ನಿಜ ಅಲ್ವಾ ಈ ಮಾತು ಎಂದು ಪ್ರಶ್ನಿಸಿದ್ದಾರೆ. ಶ್ವೇತಾ ಅವರ ಇನ್‍ಸ್ಟಾಗ್ರಾಂನಲ್ಲಿ ಬಹುತೇಕ ಜಿಯಾನ್ ವೀಡಿಯೋಗಳೇ ತುಂಬಿದ್ದು, ತುಂಟಾಟವಾಡುತ್ತಿರುವ ಕ್ಷಣಗಳನ್ನು ಪೋಸ್ಟ್ ಮಾಡಲಾಗಿದೆ.

     

    View this post on Instagram

     

    A post shared by Swetha Changappa (@swethachangappa)

    ಮಗು ಜನಸಿದ ಬಳಿಕ ಶ್ವೇತಾ ಚಂಗಪ್ಪ ಇತ್ತೀಚೆಗೆ ಮಜಾ ಟಾಕೀಸ್‍ಗೆ ಮರಳಿದ್ದು, ಸೆಟ್‍ಗೆ ರಾಣಿ ಎಂಟ್ರಿಯಿಂದಾಗಿ ಸಖತ್ ಕಳೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಶ್ವೇತಾ ಚಂಗಪ್ಪ, ಮಜಾ ಟಾಕೀಸ್‍ನ ಇತ್ತೀಚಿನ ಎಪಿಸೋಡ್ ನೋಡುತ್ತಿದ್ದಾಗ ನನ್ನ ಮಗ ಟಿವಿಯಲ್ಲಿ ಗುರುತಿಸಿ ಚೆಪ್ಪಾಳೆ ತಟ್ಟಿದ. ಇದು ನನಗೆ ತುಂಬಾ ವಿಶೇಷ, ಸಂತೋಷದ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ತೆರೆಯ ಮೇಲಿನ ಪಾತ್ರವನ್ನು ನನ್ನ ಮಗ ಗುರುತಿಸಬಲ್ಲ, ಅದ್ಭುತವೆನಿಸಿ, ತುಂಬಾ ಮೆಚ್ಚುಗೆಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ಅಮ್ಮನಾದ ಸಂತಸದಲ್ಲಿ ‘ಮಜಾ ಟಾಕೀಸ್’ರಾಣಿ

    ಅಮ್ಮನಾದ ಸಂತಸದಲ್ಲಿ ‘ಮಜಾ ಟಾಕೀಸ್’ರಾಣಿ

    ಬೆಂಗಳೂರು: ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

    ನಟಿ ಶ್ವೇತಾ ಚೆಂಗಪ್ಪ ಅವರು ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಮಗೆ ಮಗುವಾಗಿರುವ ಸಂತಸವನ್ನು ಶ್ವೇತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    “ನಾವು ಈಗ ಮೂವರಾಗಿದ್ದೇವೆ. ನಮ್ಮ ತಾಯಿ, ತಂದೆ, ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಯಿಂದ ನಾನು ಹಾಗೂ ಕಿರಣ್ ನಮ್ಮ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗುವಾಗಿದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಶ್ವೇತಾ ಮತ್ತು ಕಿರಣ್ ಇಬ್ಬರೂ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/B2Mrt-yDyLg/

    ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದರು. ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ `ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.