Tag: shwath narayan

  • ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಬೆಂಗಳೂರು: ನೈಜ ಸುದ್ದಿಗಾಗಿ ಸಾಕಷ್ಟು ಕಾಯುತ್ತೇವೆ. ಹಲವು ವಿಚಾರಗಳನ್ನ ಅದ್ಭುತವಾಗಿ ವಿವರ ನೀಡುವವರು ರಂಗನಾಥ್ (H.R Ranganath) ಸರ್ ಅವರು. ಶಿಕ್ಷಣದ ಬಗ್ಗೆ ಅವರಿಗೆ ಬಹಳ ಅರಿವು, ಕಾಳಜಿ ಇದೆ. ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರು ಹೇಳಿದರು.

    ಪಬ್ಲಿಕ್ ಟಿವಿ (Public TV) ಪ್ರಸ್ತುತ ಪಡಿಸುತ್ತಿರುವ 2 ದಿನಗಳ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ (VidyaMandira Education Expo)ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಡಿಗ್ರಿ ಬಳಿಕ ಡಾಕ್ಟರೇಟ್ (Doctorate) ಕೋರ್ಸ್ ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು. ನನಗೂ ಬೆಂಗಳೂರಿನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಐಟಿಬಿಟಿ ಸಚಿವನಾದ ಮೇಲೆ ಬೆಂಗಳೂರಿನ ಶಕ್ತಿ ತಿಳಿದಿದೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಪಿಜಿ ಎಜುಕೇಶನ್ ಎಕ್ಸ್‌ಪೋಗೆ ಚಾಲನೆ

    ನಮ್ಮಲ್ಲಿ ಐಐಟಿ (IIT) ಇಲ್ಲ, ಆದರೆ ಇಡೀ ದೇಶದ ಐಐಟಿ ಪಾಸ್ ಆದವರು ಬೆಂಗಳೂರಿನಲ್ಲಿದ್ದಾರೆ. ಕಾರಣ ಅವರಿಗೆ ಬೇಕಾದ ಎಲ್ಲಾ ಸಂಸ್ಥೆಗಳು ಇಲ್ಲಿವೆ. ಅಮೇರಿಕಾದಲ್ಲೂ ಸಿಗದ ಸ್ಯಾಲರಿ ಬೆಂಗಳೂರಿನಲ್ಲಿ ಸಿಗುತ್ತಿದೆ. ಡಾಕ್ಟರೇಟ್ ಪ್ರೋಗ್ರಾಂಗಳಲ್ಲಿ ಭಾಗವಹಿಸುವವರಿಗೆ ಸರ್ಕಾರ ಕೂಡ ಸಹಕಾರ ನೀಡುತ್ತಿದೆ ಎಂದರು.

    2000 ಮಕ್ಕಳಿಗೆ ಡಾಕ್ಟರೇಟ್ ಗೆ ಹಣ ನೀಡುತ್ತೀದ್ದೇವೆ. ಆಮೆರಿಕಾದ ಮಟ್ಟದ ವಿದ್ಯಾಸಂಸ್ಥೆಗಳಿಗೆ ಸರಿಸಮಾನಾಗಿ ನಮ್ಮಲ್ಲೂ ಸಂಸ್ಥೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]