Tag: Shukrayaan

  • PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    – ಒಡಲಲ್ಲಿ ಜ್ವಾಲಾಮುಖಿ, ಹೊಳೆಯುವ ಗ್ರಹದ ಅಧ್ಯಯನ ಹೇಗೆ?
    – ಶುಕ್ರನ ಒಂದು ಹಗಲು, ಒಂದು ರಾತ್ರಿಗೆ ಬೇಕು 243 ದಿನ
    – ಭೂಮಿಯ ಸಹೋದರ ಗ್ರಹ ಶುಕ್ರನ ವೈಶಿಷ್ಟ್ಯತೆ ಏನು?

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗೈಲ್ಲು ಸೃಷ್ಟಿಸುತ್ತಿದೆ. ಚಂದ್ರಯಾನ-3 (Chandrayaan-3), ಸೂರ್ಯಯಾನದಂಥ (Aditya L1) ಐತಿಹಾಸಿಕ ಕಾರ್ಯಾಚರಣೆ ಕೈಗೊಂಡು ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಇಸ್ರೋದ ಬಾಹ್ಯಾಕಾಶ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಹೊತ್ತಿನಲ್ಲಿ ಇಸ್ರೋ ಮತ್ತೊಂದು ಕಾರ್ಯಾಚರಣೆಗೆ ಸಿದ್ಧವಾಗಿದೆ. ಅದೇ ಶುಕ್ರಯಾನ. ಚಂದ್ರಯಾನ-3, ಆದಿತ್ಯ ಎಲ್1 (ಸೂರ್ಯಯಾನ) ಯಶಸ್ಸಿನ ಬಳಿಕ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ (S.Somanath), ಶುಕ್ರ ಅಧ್ಯಯನ ಮಿಷನ್ ಕೈಗೊಳ್ಳಲು ತಯಾರಾಗಿದ್ದೇವೆ ಎಂದು ಹೇಳಿದ್ದಾರೆ. ಅಂತರಗ್ರಹ ಯೋಜನೆಗಳನ್ನು ನಡೆಸಲು ನಾವು ಸಮರ್ಥರಿದ್ದೇವೆ ಎಂದೂ ಸಹ ತಿಳಿಸಿದ್ದಾರೆ.

    ಶುಕ್ರ ಗ್ರಹ ವೈಶಿಷ್ಟ್ಯ ಏನು?
    ಸೂರ್ಯನಿಗೆ ಅತಿ ಸಮೀಪದ ಎರಡನೇ ಗ್ರಹ ಶುಕ್ರ (Shukrayaan). ಸೂರ್ಯನನ್ನು ಒಂದು ಬಾರಿ ಪ್ರದಕ್ಷಿಣೆ ಹಾಕಲು 224.7 ದಿನಗಳನ್ನು ತೆಗೆದುಕೊಳ್ಳುತ್ತದೆ. ಅತ್ಯಂತ ಪ್ರಕಾಶಮಾನವಾದ ಗ್ರಹ ಇದು. ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಚೆನ್ನಾಗಿ ಕಾಣುವ ಶುಕ್ರ ಗ್ರಹವನ್ನು ‘ಹಗಲು ನಕ್ಷತ್ರ’ ಮತ್ತು ‘ಸಂಜೆ ನಕ್ಷತ್ರ’ ಎಂದೂ ಕರೆಯಲಾಗುತ್ತದೆ. ಗಾತ್ರದಲ್ಲಿ ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಈ ಗ್ರಹದ ಒಂದು ದಿನ, ಭೂಮಿಯ 243 ದಿನಕ್ಕೆ ಸಮ. ಶುಕ್ರ ಗ್ರಹ ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿದೆ. ಹೀಗಾಗಿ ಈ ಗ್ರಹದಲ್ಲಿ ಜೀವಿಗಳು ಇಲ್ಲ. ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಇದರ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು ಎಂದು ಅಧ್ಯಯನಯಗಳು ಹೇಳುತ್ತವೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3

    ಭುವಿಯ ಸಹೋದರ ಗ್ರಹ
    ಭೂಮಿಯ ಅವಳಿ ಗ್ರಹ ಎಂದೇ ಗುರುತಿಸಿಕೊಂಡಿರುವುದು ಶುಕ್ರ ಗ್ರಹ. ಬರಿಗಣ್ಣಿಗೆ ಕಾಣುವ ಶುಕ್ರ ಹೆಚ್ಚು ಚಂದವಾದ ಗ್ರಹ. ಗಾತ್ರ ಮತ್ತು ಸಾಂಧ್ರತೆಯಲ್ಲಿ ಭೂಮಿಯನ್ನು ಹೋಲುತ್ತದೆ. ಆದ್ದರಿಂದಲೇ ಇದನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರ ಗ್ರಹ 95% ಇಂಗಾಲದ ಆಕ್ಸೈಡ್ ಹಾಗೂ ಸ್ವಲ್ಪ ರಂಜಕದ ಡೈಆಕ್ಸೈಡ್ ಹೊಂದಿದೆ. ಅತಿ ಹೆಚ್ಚಿನ ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಶುಕ್ರ ಹೆಚ್ಚು ಪ್ರಕಾಶಮಾನ ಗ್ರಹ ಎಂದು ಬಿಂಬಿತವಾಗಿದೆ. ಸೂರ್ಯನಿಂದ ಶುಕ್ರ 11 ಕೋಟಿ ಕಿ.ಮೀ ದೂರದಲ್ಲಿದೆ.

    ಶುಕ್ರ ಅಧ್ಯಯನಕ್ಕೆ ಇಲ್ಲಿವರೆಗೆ ಕೈಗೊಂಡ ಮಿಷನ್‌ಗಳೆಷ್ಟು?
    ಮಾನವ ಶುಕ್ರ ಗ್ರಹವನ್ನು ಕುತೂಹಲ ಕಣ್ಣಿನಿಂದ ನೋಡುತ್ತಿದ್ದಾನೆ. ಹೀಗಾಗಿ ಶುಕ್ರ ಗ್ರಹಕ್ಕೆ 40 ಕ್ಕೂ ಹೆಚ್ಚು ಬಾಹ್ಯಾಕಾಶ ಕಾರ್ಯಾಚರಣೆಗಳು ನಡೆದಿವೆ. ಪಕ್ಕಾ ಮಾಹಿತಿ ಅಂದ್ರೆ, ಇಲ್ಲಿವರೆಗೆ 46 ಬಾಹ್ಯಾಕಾಶ ನೌಕೆಗಳು ಶುಕ್ರನ ಅಧ್ಯಯನಕ್ಕಾಗಿ ಉಡಾವಣೆಗೊಂಡಿವೆ. ಜಪಾನ್‌ನ ಅಕಾಟ್ಸುಕಿ ಬಾಹ್ಯಾಕಾಶ ನೌಕೆ ಪ್ರಸ್ತುತ ಶುಕ್ರನ ಕಕ್ಷೆಯಲ್ಲಿ ಸುತ್ತುತ್ತಿದೆ. ಮುಂದಿನ ದಶಕದಲ್ಲಿ ಮೂರು ಹೊಸ ಮಿಷನ್‌ಗಳು ಪ್ರಾರಂಭವಾಗಲಿವೆ ಎಂದು ನಾಸಾ ತಿಳಿಸಿದೆ. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು

    ಶುಕ್ರಯಾನದ ಇತಿಹಾಸ ಏನು?
    ಶುಕ್ರ ಗ್ರಹದ ಅಧ್ಯಯನಕ್ಕೆ ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಸೋವಿಯತ್ ಒಕ್ಕೂಟ 1961 ರಲ್ಲಿ ಟ್ಯಾಝೆಲಿ ಸ್ಪುಟ್ನಿಕ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತು. ಆದರೆ ಮಿಷನ್ ವಿಫಲವಾಯಿತು. ಬಳಿಕವು ಶುಕ್ರ ಗ್ರಹಕ್ಕೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಲು ಮುಂದಾಗಿ ಸೋವಿಯತ್ ಒಕ್ಕೂಟ ಕೈಸುಟ್ಟುಕೊಂಡಿತು. ಈ ನಡುವೆ 1962 ರ ಜುಲೈ 22 ರಂದು ಮ್ಯಾರಿನರ್ 1 ನೌಕೆ ಉಡಾವಣೆ ಮಾಡಿ ವಿಫಲವಾಗಿದ್ದ ಅಮೆರಿಕದ ನಾಸಾ (NASA), ತನ್ನ ಎರಡನೇ ಪ್ರಯತ್ನದಲ್ಲೇ ಯಶಸ್ಸು ಕಂಡಿತು. ನಾಸಾ ಅದೇ ವರ್ಷದ ಆಗಸ್ಟ್ 27 ರಂದು ಹಾರಿಸಿದ್ದ ಮ್ಯಾರಿನರ್ 2 ನೌಕೆಯು 109 ದಿನಗಳ ನಂತರ ಶುಕ್ರನನ್ನು ಸಮೀಪಿಸಿತು. ಶುಕ್ರನ ಮೇಲ್ಮೈನಿಂದ 34,833 ಕಿ.ಮೀ ದೂರದಲ್ಲಿ ಹಾದುಹೋದ ವಿಶ್ವದ ಮೊಟ್ಟಮೊದಲ ಅಂತರಗ್ರಹ ಯಾತ್ರೆ ಇದಾಯಿತು.

    ನಾಸಾದ ಮ್ಯಾರಿನರ್ 2 ನೌಕೆಯು 1962ರ ಡಿಸೆಂಬರ್ 14 ರಂದು ಶುಕ್ರನ ಹತ್ತಿರ ಹಾರಾಡಿದ ಮೊದಲ ಬಾಹ್ಯಾಕಾಶ ನೌಕೆಯಾಯಿತು. 42 ನಿಮಿಷಗಳ ಸ್ಕ್ಯಾನರ್‌ನಲ್ಲಿ ಸಂಗ್ರಹಿಸಿದ ಡೇಟಾವು, ಭೂಮಿಯ ನೆರೆಯ ಗ್ರಹವನ್ನು ನಾವು ಸಾಮಾನ್ಯವಾಗಿ ನೋಡುವ ದೃಷ್ಟಿಕೋನವನ್ನೇ ಬದಲಾಯಿತು. ಶುಕ್ರದ ಮೋಡ ಪದರಗಳು ತಣ್ಣಗಿದ್ದರೂ, ಅದರ ಮೇಲ್ಮೈ 425 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಅತಿ ಬಿಸಿಯಾಗಿದೆ ಎಂದು ಮ್ಯಾರಿನರ್ 2 ನೌಕೆಯ ಮೈಕ್ರೋತರಂಗ ಮತ್ತು ರೇಡಿಯೋಮಾಪಕಗಳು ಕಂಡುಹಿಡಿದವು. ಈ ವಿಚಾರ ಬೆಳೆಕಿಗೆ ಬಂದ ನಂತರ ಶುಕ್ರ ಗ್ರಹದ ಮೇಲ್ಮೈನಲ್ಲಿ ಜೀವಿಗಳಿರಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಯಿತು.

    ಶುಕ್ರನ ವಾಯುಮಂಡಲ ಹೇಗಿದೆ?
    ವಿಫಲ ಯತ್ನಗಳಿಂದ ಕಂಗೆಟ್ಟಿದ್ದ ಸೋವಿಯತ್ ಒಕ್ಕೂಟ 1966ರಲ್ಲಿ ಉಡಾಯಿಸಿದ್ದ ವೆನೆರಾ 3 ನೌಕೆಯು ದೇಶದ ವಿಜ್ಞಾನಿಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿತು. ಈ ನೌಕೆಯು ಶುಕ್ರ ಗ್ರಹದ ಮೇಲ್ಮೈನಲ್ಲಿ ಅಪ್ಪಳಿಸಿತು. ಆದರೆ ಭೂಮಿಯಲ್ಲದೇ ಇನ್ನೊಂದು ಗ್ರಹದ ಮೇಲ್ಮೈಯನ್ನು ತಲುಪಿದ ಮೊಟ್ಟಮೊದಲ ನೌಕೆ ಎಂದು ಹೆಸರು ಮಾಡಿತು. ಇದಾದ ನಂತರ ಮತ್ತೆ 1967 ರಲ್ಲಿ ರಷ್ಯಾ ಉಡಾಯಿಸಿದ ವೆನೆರಾ 4 ನೌಕೆ ಯಶಸ್ವಿಯಾಗಿ ಶುಕ್ರದ ವಾಯುಮಂಡಲವನ್ನು ಪ್ರವೇಶಿಸಿ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿತು. ಶುಕ್ರದ ವಾಯುಮಂಡಲವು 90 ರಿಂದ 95% ಇಂಗಾಲದ ಡೈಆಕ್ಸೈಡ್‌ನಿಂದ ಕೂಡಿದ್ದು, ಸುಮಾರು 500 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೇಲ್ಮೈ ತಾಪಮಾನ ಇದೆ ಎಂದು ಮಾಪನ ಮಾಡಿತು. ಇದು ನಾಸಾದ ಮ್ಯಾರಿನರ್ 2 ಮಾಪಿಸಿದ್ದಕ್ಕಿಂತ ಹೆಚ್ಚು ಎಂದು ತಿಳಿಸಿತು. ಇದಾದ ನಂತರ ರಷ್ಯಾ ಹಾಗೂ ಅಮೆರಿಕ ದೇಶಗಳು ಹಲವಾರು ಮಿಷನ್ ಕೈಗೊಂಡು ಶುಕ್ರ ಗ್ರಹದ ಅಧ್ಯಯನ ನಡೆಸಿವೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್‌, ರೋವರ್‌ನಿಂದ ಸಿಗ್ನಲ್‌ ಸಿಗ್ತಿಲ್ಲ: ಇಸ್ರೋ

    ಶುಕ್ರನ ಮೇಲೆ ರಷ್ಯಾ ಮೊದಲ ಲ್ಯಾಂಡಿಂಗ್
    ಡಿಸೆಂಬರ್ 15, 1970 ರಂದು ಮಾನವರಹಿತ ಸೋವಿಯತ್ ಬಾಹ್ಯಾಕಾಶ ನೌಕೆ ವೆನೆರಾ 7 ಮತ್ತೊಂದು ಗ್ರಹದಲ್ಲಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಯಿತು. ಇದು ಶುಕ್ರದ ಮೇಲಿನ ವಾತಾವರಣದ ತಾಪಮಾನವನ್ನು ಅಳೆಯಿತು. ನೌಕೆಯು 23 ನಿಮಿಷಗಳವರೆಗೆ ಶುಕ್ರದ ತಾಪಮಾನದ ಮಾಹಿತಿಯನ್ನು ಕಳುಹಿಸಿತು. ಬೇರೊಂದು ಗ್ರಹದ ಮೇಲ್ಮೈನಿಂದ ಬಂದ ಮೊದಲ ದೂರಮಾಪಿತ ಮಾಹಿತಿ ಇದಾಗಿದೆ.

    ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ, ಜಪಾನ್ ದೇಶಗಳು ಶುಕ್ರ ಗ್ರಹಕ್ಕೆ ಕಾರ್ಯಾಚರಣೆ ಕೈಗೊಂಡು ಗ್ರಹದ ವಾಯುಮಂಡಲ, ಮೇಲ್ಮೈ ಭೂವಿಜ್ಞಾನದ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿವೆ. ಶುಕ್ರ ಗ್ರಹಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳನ್ನು ಈ ದೇಶಗಳು ವಿಶ್ಲೇಷಿಸಿವೆ. ಈ ದೇಶಗಳ ಸಾಲಿಗೆ ಸೇರಲು ಭಾರತ ಕೂಡ ಸಜ್ಜಾಗಿದೆ. ಶುಕ್ರಯಾನ ಕೈಗೊಳ್ಳಲು ಭಾರತದ ಇಸ್ರೋ ಸಿದ್ಧತೆ ನಡೆಸುತ್ತಿದೆ.

    ಆದಾಗ್ಯೂ, ಶುಕ್ರನನ್ನು ಅಧ್ಯಯನ ಮಾಡುವುದು ಸುಲಭದ ಸಾಧನೆಯಲ್ಲ. ತೀವ್ರವಾದ ಶಾಖ ಮತ್ತು ಗಾಳಿಯ ಒತ್ತಡದಿಂದಾಗಿ ಶುಕ್ರದ ಮೇಲ್ಮೈಯನ್ನು ಅನ್ವೇಷಿಸುವುದು ಕಷ್ಟಕರವಾಗಿದೆ. 1981 ರಲ್ಲಿ ಸೋವಿಯತ್ ಒಕ್ಕೂಟದ ವೆನೆರಾ 13 ಮಾಡಿದ ದಾಖಲೆಯನ್ನು ಯಾವುದೇ ಬಾಹ್ಯಾಕಾಶ ನೌಕೆಯು ಮಾಡಿಲ್ಲ. ಶುಕ್ರನ ಮೇಲ್ಮೈನಲ್ಲಿ ಉಳಿದಿದ್ದ ದೀರ್ಘಾವಧಿಯ ನೌಕೆ ಇದಾಗಿದೆ ನಾಸಾ ವೆಬ್‌ಸೈಟ್ ವಿವರಿಸುತ್ತದೆ. ನಾಸಾ 2031 ರಲ್ಲಿ ಶುಕ್ರನ ಅಧ್ಯಯನಕ್ಕೆ DAVINCI ಮಿಷನ್ ಕೈಗೊಳ್ಳುವ ಯೋಜನೆ ಹೊಂದಿದೆ. ಇದನ್ನೂ ಓದಿ: ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್‌1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ

    ಏನಿದು ಭಾರತದ ಶುಕ್ರಯಾನ-1?
    ಶುಕ್ರಯಾನ-1 ಯೋಜನೆಯು ಶುಕ್ರನ ಅಧ್ಯಯನಕ್ಕೆ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆಗಿದೆ. ಇದು ಸೌರವ್ಯೂಹದ ಅತ್ಯಂತ ಬಿಸಿಯಾದ ಗ್ರಹದ ಮೇಲ್ಮೈನಲ್ಲಿ ಏನಿದೆ ಎಂಬುದನ್ನು ಅಧ್ಯಯನ ಮಾಡಲಿದೆ. ಬಾಹ್ಯಾಕಾಶ ನೌಕೆಯು ಗ್ರಹವನ್ನು ಸುತ್ತುವ ಮೂಲಕ ಮೇಲ್ಮೈನಲ್ಲಿ ಆವರಿಸಿರುವ ಸಲ್ಫ್ಯೂರಿಕ್ ಆಸಿಡ್ ಮೋಡಗಳ ಅಡಿಯಲ್ಲಿನ ರಹಸ್ಯಗಳನ್ನು ಬಿಚ್ಚಿಡುವ ಕೆಲಸ ಮಾಡಲಿದೆ. ಮುಂದಿನ ವರ್ಷದ ಕೊನೆಯಲ್ಲಿ ಇಸ್ರೋ ಶುಕ್ರಯಾನ ನೌಕೆ ಉಡಾವಣೆ ಮಾಡುವ ನಿರೀಕ್ಷೆಯಿದೆ.

    ನಾವು ಪರಿಕಲ್ಪನಾ ಹಂತದಲ್ಲಿ ಸಾಕಷ್ಟು ಕಾರ್ಯಾಚರಣೆಗಳನ್ನು ಹೊಂದಿದ್ದೇವೆ. ಶುಕ್ರಕ್ಕೆ ಮಿಷನ್ ಅನ್ನು ಈಗಾಗಲೇ ಕಾನ್ಫಿಗರ್ ಮಾಡಲಾಗಿದೆ. ಅದಕ್ಕಾಗಿ ಪೇಲೋಡ್‌ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಶುಕ್ರ ಗ್ರಹದ ಮೇಲ್ಮೈ, ಭೂಮಿಯ 100 ಪಟ್ಟು ವಾತಾವರಣದ ಒತ್ತಡದೊಂದಿಗೆ ವಾತಾವರಣವನ್ನು ಹೊಂದಿದೆ. ಶುಕ್ರ ಮೇಲ್ಮೈ ಬಳಿ ಹೆಚ್ಚಿನ ವಾತಾವರಣದ ಒತ್ತಡಕ್ಕೆ ಕಾರಣಗಳು ಏನು ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ಶುಕ್ರವನ್ನು ಆವರಿಸಿರುವ ದಟ್ಟವಾದ ಮೋಡಗಳು ಆಮ್ಲಗಳಿಂದ ತುಂಬಿವೆ. ಮೇಲ್ಮೈಯನ್ನು ಭೇದಿಸಲು ಸಹ ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

    ಗ್ರಹಗಳ ವಿಕಸನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಶುಕ್ರ, ಮಂಗಳವನ್ನು ನೋಡಿದರೆ ಮಾತ್ರ ಭೂಮಿಯ ಮೇಲಿನ ನಿಮ್ಮ ಚಟುವಟಿಕೆಗಳಲ್ಲಿ ವಾಸ್ತವಿಕವಾಗಿ ವಾಸಯೋಗ್ಯ ಅಥವಾ ವಾಸಯೋಗ್ಯವಲ್ಲದ ಯಾವ ಪರಿಣಾಮಗಳಿವೆ ಎಂಬುದನ್ನು ಅಧ್ಯಯನ ಮಾಡಬಹುದು ಎಂದು ಸೋಮನಾಥ್ ಹೇಳಿದ್ದಾರೆ. ಇದನ್ನೂ ಓದಿ: Aditya-L1: ಆದಿತ್ಯ ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ – ಮುಂದಿನ ಹಂತ ‘ಭೂಮಿಯಿಂದ ಬೀಳ್ಕೊಡುಗೆ’

    ಶುಕ್ರ ಮಿಷನ್‌.. ಪಾಸ್‌ ಆಗಿದ್ದೆಷ್ಟು, ಫೇಲ್‌ ಆಗಿದ್ದೆಷ್ಟು?
    1961 ರಿಂದ ಇದುವರೆಗೆ ಶುಕ್ರನ ಅಧ್ಯಯನಕ್ಕೆ ಕೈಗೊಂಡ ಮಿಷನ್‌ಗಳ ಪೈಕಿ ರಷ್ಯಾದ್ದೇ ಬಹುಪಾಲಿದೆ. ರಷ್ಯಾ ದೇಶ ಎನರ್ಜಿಯ ಸಂಸ್ಥೆ ನೇತೃತ್ವದಲ್ಲಿ ಶುಕ್ರನ ವೈಜ್ಞಾನಿಕ ಅಧ್ಯಯನಕ್ಕೆ 11 ಕಾರ್ಯಾಚರಣೆಗಳನ್ನು ಕೈಗೊಂಡಿತ್ತು. ದುರಾದೃಷ್ಟವಶಾತ್‌ ಎಲ್ಲ ಕಾರ್ಯಾಚರಣೆಗಳೂ ವಿಫಲವಾದವು. ಇದರ ಜೊತೆಗೆ ಲಾವೊಚ್ಕಿನ್ ಬಾಹ್ಯಾಕಾಶ ಸಂಸ್ಥೆಯಿಂದ 18 ಶುಕ್ರಯಾನ ಮಿಷನ್‌ ಕೈಗೊಳ್ಳಲಾಗಿತ್ತು. ಅದರಲ್ಲಿ 14 ಮಿಷನ್‌ಗಳ ಯಶಸ್ಸು ಕಂಡವು. 1 ಭಾಗಶಃ ಸಕ್ಸಸ್‌ ಆಯಿತು. ಉಳಿದಂತೆ 3 ಕಾರ್ಯಾಚರಣೆಗಳು ಫೇಲ್‌ ಆದವು.

    ಇತ್ತ ಅಮೆರಿಕದ ನಾಸಾ ಶುಕ್ರನ ಅಧ್ಯಯನಕ್ಕೆ ಒಟ್ಟು 11 ಕಾರ್ಯಾಚರಣೆಗಳನ್ನ ಕೈಗೊಂಡಿತು. ಅದರಲ್ಲಿ 6 ಮಿಷನ್‌ಗಳು ಸಕ್ಸಸ್‌ ಆದವು. 1 ಕಾರ್ಯಾಚರಣೆ ವಿಫಲವಾಯಿತು. ಇನ್ನು 4 ಮಿಷನ್‌ಗಳು ಶುಕ್ರನ ಕಕ್ಷೆ ತಲುಪಿದ್ದು, ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಯುರೋಪಿಯನ್‌ ಬಾಹ್ಯಾಕಾಶ ಒಕ್ಕೂಟ ಕೂಡ ಇದುವರೆಗೆ 3 ಕಾರ್ಯಾಚರಣೆಗಳನ್ನು ನಡೆಸಿದೆ. ಅದರಲ್ಲಿ 1 ಯಶಸ್ಸು ಕಂಡಿದೆ. ಇನ್ನೆರಡು ಮಿಷನ್‌ಗಳು ಶುಕ್ರನ ಕಕ್ಷೆ ತಲುಪಿದ್ದು, ಈಗಲೂ ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

    ಜಪಾನ್‌ ದೇಶ ಜಾಕ್ಸಾ ಬಾಹ್ಯಾಕಾಶ ಸಂಸ್ಥೆಯಿಂದ 2 ಕಾರ್ಯಾಚರಣೆ ನಡೆಸಿತು. ಅದರಲ್ಲಿ ಒಂದು ಯಶಸ್ಸು ಕಂಡರೆ ಮತ್ತೊಂದು ಶುಕ್ರನ ಕಾರ್ಯ ನಿರ್ವಹಿಸುತ್ತಿದೆ. ಮತ್ತೆ ಯುನಿಸೆಕ್‌ ಸಂಸ್ಥೆಯಿಂದ ಕೈಗೊಂಡಿದ್ದ ಒಂದು ಕಾರ್ಯಾಚರಣೆ ವಿಫಲವಾಯಿತು.

    – ಚಂದ್ರಶೇಖರ.ಬಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ನವದೆಹಲಿ: ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರಯಾನಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2024ರ ವೇಳೆಗೆ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದು ಹಾರಲಿದೆ. ತಪ್ಪಿದರೆ, 2031ಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.

    ISRO ROCKET
    ಸಾಂದರ್ಭಿಕ ಚಿತ್ರ

    ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ. ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರಗ್ರಹವಿದೆ. ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೊ? ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿ ಅಧ್ಯಯನ ಕೈಗೊಂಡಿದೆ. ಅಲ್ಲೂ ಮನುಷ್ಯರು ವಾಸಿಸಲು ಯೋಗ್ಯವೇ ಇಲ್ಲವೇ ಎಂಬ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು? 

    Chandrayana 02
    ಸಾಂದರ್ಭಿಕ ಚಿತ್ರ

    ಹೇಗಿದೆ ಶುಕ್ರಗ್ರಹದ ವಾತಾವರಣ?: ಈಗ ಶುಕ್ರಗ್ರಹಕ್ಕೆ ತನ್ನ ನೌಕೆ ಕಳುಹಿಸಿ ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಲು ಮುಂದಾಗಿದೆ. ಶುಕ್ರಗ್ರಹದಲ್ಲಿ ಸಲ್ಫರಿಕ್ ಆ್ಯಸಿಡ್‌ನ ಮೋಡಗಳು ಕವಿದಿರುತ್ತವೆ. ಅಲ್ಲಿನ ವಾತಾವರಣ ವಿಷಯುಕ್ತವಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ವಾತಾವರಣವನ್ನು ಇನ್ನಷ್ಟು ನಿಖರವಾಗಿ ತಿಳಿಯಲು ಹಾಗೂ ಇಲ್ಲಿ ಜ್ವಾಲಾಮುಖಿಗಳು, ಲಾವಾರಸ, ಮಣ್ಣು ಇತ್ಯಾದಿಗಳನ್ನು ಅಧ್ಯಯನ ಮಾಡಲು ಇಸ್ರೋ ಶುಕ್ರಯಾನ ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ

    PSLV ISRO
    ಸಾಂದರ್ಭಿಕ ಚಿತ್ರ

    ಹಲವು ವರ್ಷಗಳ ಸಿದ್ಧತೆ: ಹಲವು ವರ್ಷಗಳಿಂದ ಸಿದ್ಧತೆ ಪ್ರಾರಂಭಿಸಿದ್ದ ಇಸ್ರೋ ಶುಕ್ರಯಾನದ ಮಹತ್ವದ ಯೋಜನೆ ಈಗ ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಧ್ಯಕ್ಷತೆಯಲ್ಲಿ ಶುಕ್ರಗ್ರಹ ಅಧ್ಯಯನ ತಂಡದ ವಿಜ್ಞಾನಿಗಳ ಜೊತೆ ಇತ್ತೀಚೆಗೆ ಸಭೆ ನಡೆದಿತ್ತು. ಸಭೆಯ ನಂತರ ಸೋಮನಾಥ್, ಈ ನಿರ್ಧಾರ ಪ್ರಕಟಿಸಿದ್ದರು. ಶುಕ್ರಯಾನಕ್ಕೆ ಹಣ ನಿಗದಿಪಡಿಸಿದ್ದು, ಸಾಕಷ್ಟು ಕಡಿಮೆ ಸಮಯದಲ್ಲಿ ಶುಕ್ರಯಾನ ನೌಕೆಯನ್ನು ಸಿದ್ಧಪಡಿಸುವ ಶಕ್ತಿ ನಮಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?‌

    ನೌಕೆ ಉಡಾವಣೆ ಯಾವಾಗ? 2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹವು ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆಯನ್ನು ಶುಕ್ರಗ್ರಹದ ಕಕ್ಷೆಗೆ ತಳ್ಳುವುದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೆ? ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು. 2024ನ್ನು ಬಿಟ್ಟರೆ ಮುಂದೆ 2031ರಲ್ಲಿ ಅಂತಹ ಅವಕಾಶ ಸಿಗುತ್ತದೆ ಎಂದು ಹೇಳಿರುವ ಇಸ್ರೋ 2024ರಲ್ಲೇ ಶುಕ್ರಯಾನ ಕೈಗೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

    isro center main
    ಸಾಂದರ್ಭಿಕ ಚಿತ್ರ

    ಅಮೆರಿಕ, ಯುರೋಪ್‌ನಿಂದ ಯೋಜನೆ: ಅಮೆರಿಕದ ನಾಸಾ ಮತ್ತು ಯುರೋಪಿಯನ್ ಯೂನಿಯನ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿವೆ. ಅವುಗಳ ಬೆನ್ನಲ್ಲೇ ಶುಕ್ರನ ಸುತ್ತ ಸುತ್ತುವ 3ನೇ ನೌಕೆ ಭಾರತದ್ದಾಗಿರಲಿದೆ. ಅಮೆರಿಕವು ಶುಕ್ರಯಾನಕ್ಕೆ 1 ಬಿಲಿಯನ್ ಡಾಲರ್ (ಸುಮಾರು 7500 ಕೋಟಿ ರೂ.) ಹಣ ಮೀಸಲಿಟ್ಟಿದೆ.