Tag: Shubman Gill

  • ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಚೆನ್ನೈಗೆ ಗುನ್ನ ಕೊಟ್ಟ ಗುಜರಾತ್‌; ಹಾಲಿ ಚಾಂಪಿಯನ್ಸ್‌ಗೆ ರೋಚಕ ಜಯ

    ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಚೆನ್ನೈಗೆ ಗುನ್ನ ಕೊಟ್ಟ ಗುಜರಾತ್‌; ಹಾಲಿ ಚಾಂಪಿಯನ್ಸ್‌ಗೆ ರೋಚಕ ಜಯ

    ಅಹಮದಾಬಾದ್‌: ಶುಭಮನ್‌ ಗಿಲ್‌ (Shubman Gill) ಭರ್ಜರಿ ಅರ್ಧಶತಕ ಹಾಗೂ ಕೊನೆಯಲ್ಲಿ ರಶೀದ್‌ ಖಾನ್‌, ರಾಹುಲ್ ತೆವಾಟಿಯಾ ಸಿಕ್ಸರ್‌, ಬೌಂಡರಿ ಆಟದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ (Chennai Super Kings) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಎಂ.ಎಸ್‌ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತು. 179 ರನ್‌ಗಳ ಗುರಿ ಪಡೆದ ಟೈಟಾನ್ಸ್‌ 19.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ 5 ವಿಕೆಟ್‌ಗಳ ಜಯ ಸಾಧಿಸಿತು.

    ಕೊನೆಯ 2 ಓವರ್‌ಗಳಲ್ಲಿ 25 ರನ್‌ ಬೇಕಿತ್ತು. ಈ ವೇಳೆ ಮೊದಲ ಎಸೆತವನ್ನು ವಿಫಲವಾಗಿಸಿಕೊಂಡರು. 2ನೇ ಎಸೆತದಲ್ಲಿ ಬಾಲ್‌ ಎದುರಿಸಲಾಗದಿದ್ದರೂ ಬೈಸ್‌ನಿಂದ 4‌ ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಮೂರನೇ ಎಸೆತಲ್ಲಿ ಕೇವಲ 1 ರನ್‌ ಗಳಿಸಿ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕಣಕ್ಕಿಳಿದ ರಶೀದ್‌ ಖಾನ್‌ 4ನೇ ಎಸೆತವನ್ನ ಸಿಕ್ಸರ್‌ಗೆ, 5ನೇ ಎಸೆತವನ್ನು ಬೌಂಡರಿಗೆ ಚಚ್ಚಿ ತಂಡ ನಿರಾಯಾಸವಾಗಿ ಗೆಲ್ಲುವಂತೆ ಮಾಡಿದರು. ಕೊನೆಯ ಓವರ್‌ನಲ್ಲಿ ತೆವಾಟಿಯಾ ಮೊದಲ ಎರಡು ಎಸೆತದಲ್ಲೇ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆಲುವಿನ ನಗೆ ಬೀರಿದರು. ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

    ಚೇಸಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ, ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ ಪತನಕ್ಕೆ 3.5 ಓವರ್‌ಗಳಲ್ಲಿ 37 ರನ್‌ ಸಿಡಿಸಿತ್ತು. ಈ ವೇಳೆ ಸಹಾ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು. ನಂತರ ಬಂದ ಸಾಯಿ ಸುದರ್ಶನ್‌ 17 ಎಸೆತಗಳಲ್ಲಿ 22 ರನ್‌ ಗಳಿಸಿದರೆ, ನಾಯಕ ಹಾರ್ದಿಕ್‌ ಪಾಂಡ್ಯ 8 ರನ್‌ ಗಳಿಸಿ ಔಟಾದರು.

    ಗಿಲ್‌ ಭರ್ಜರಿ ಬ್ಯಾಟಿಂಗ್‌:
    ಇನ್ನೂ ಗುಜರಾತ್‌ ಟೈಟಾನ್ಸ್‌ ತಂಡದ ಪರ ಭರ್ಜರಿ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದರು. ಗಿಲ್ 36 ಎಸೆತಗಳಲ್ಲಿ 63 ರನ್‌ (3 ಸಿಕ್ಸರ್‌, 6 ಬೌಂಡರಿ) ಗಳಿಸಿದರು. ಈ ನಡುವೆ ವಿಜಯ್‌ ಶಂಕರ್‌ 21 ಎಸೆತಗಳಲ್ಲಿ 27 ರನ್‌ ಗಳಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಕ್ರೀಸ್‌ಗಿಳಿದ ರಶೀದ್‌ ಖಾನ್‌ 3 ಎಸೆತಗಳಲ್ಲಿ 10 ರನ್‌, ರಾಹುಲ್‌ ತೆವಾಟಿಯಾ 14 ಎಸೆತಗಳಲ್ಲಿ 15 ರನ್‌ ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ತಂದರು.

    ಸಿಎಸ್‌ಕೆ ಪರ ರಾಜವರ್ಧನ್ ಹಂಗರಗೇಕರ್ 3 ವಿಕೆಟ್‌ ಪಡೆದರೆ, ತುಷಾರ್‌ ದೇಶ್‌ಪಾಂಡೆ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್‌ ಪಡೆದರು.

    ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಋತುರಾಜ್ ಗಾಯಕ್ವಾಡ್ ಸ್ಪೋಟಕ ಪ್ರದರ್ಶನ ನೀಡಿ ಮಿಂಚಿದರು. ಸಿಎಸ್‌ಕೆ ಪರ ಏಕಾಂಗಿ ಹೋರಾಟ ನಡೆಸಿದರು. 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಋತುರಾಜ್‌ 50 ಎಸೆತಗಳಲ್ಲಿ 92 ರನ್‌ (4 ಬೌಂಡರಿ, 9 ಸಿಕ್ಸರ್‌) ಗಳಿಸಿ ಶತಕದ ಅಂಚಿನಲ್ಲಿ ಎಡವಿದರು. ಉಳಿದಂತೆ ಮೊಯೀನ್ ಅಲಿ ಅವರ 23 ರನ್ ಸಿಎಸ್‌ಕೆ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಎನಿಸಿತು. ಇನ್ನಿಂಗ್ಸ್‌ ಮಧ್ಯದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ಸಿಎಸ್‌ಕೆ ತನ್ನ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

    ಕೊನೆಯಲ್ಲಿ ಅಬ್ಬರಿಸಿದ ಮಹಿ: ಈ ಪಂದ್ಯದಲ್ಲಿ ಎಂ.ಎಸ್ ಧೋನಿ ಬ್ಯಾಟಿಂಗ್ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಮೈದಾನದಲ್ಲಿ ನೆರೆದಿದ್ದರು. ಈ ಅಭಿಮಾನಿಗಳಿಗೆ ಮಾಹಿ ನಿರಾಸೆಯನ್ನುಂಟು ಮಾಡಲಿಲ್ಲ. 8ನೇ ವಿಕೆಟ್‌ಗೆ ಕಣಕ್ಕಿಳಿದ ಮಹಿ ಕೊನೆಯ ಓವರ್‌ನಲ್ಲಿ ಅಬ್ಬರಿಸಿದರು. ಒಂದು ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ಧೋನಿ 7 ಎಸೆತಗಳಲ್ಲಿ 14 ರನ್‌ ಚಚ್ಚಿದರು. ಈ ಮೂಲಕ ತಂಡದ ಮೊತ್ತ 180ರ ಸನಿಹಕ್ಕೆ ತಲುಪಿಸಿದರು.

    ಬೆನ್‌ ಸ್ಟೋಕ್ಸ್‌ 7 ರನ್‌, ಅಂಬಟಿ ರಾಯುಡು 12 ರನ್‌, ಶಿವಂ ದುಬೆ 19 ರನ್‌, ರವೀಂದ್ರ ಜಡೇಜಾ 1 ರನ್‌ ಗಳಿಸಿ ಪೆವಿಲಿಯನ್‌ ಸೇರಿದರೆ, ಮಿಚೆಲ್‌ ಸ್ಯಾಂಟ್ನರ್‌ 1 ರನ್‌ ಗಳಿಸಿ ಅಜೇಯರಾಗುಳಿದರು.

    ಗುಜರಾತ್‌ ಟೈಟಾನ್ಸ್‌ ಪರ ಮೊಹಮ್ಮದ್‌ ಶಮಿ, ರಶೀದ್‌ ಖಾನ್‌, ಅಲ್ಝರಿ ಜೋಸೆಫ್‌ ತಲಾ 2 ವಿಕೆಟ್‌ ಪಡೆದರೆ, ಜೋಶ್‌ ಲಿಟಲ್‌ 1 ವಿಕೆಟ್‌ ಕಿತ್ತರು.

    ರನ್‌ ಏರಿದ್ದು ಹೇಗೆ?
    50 ರನ್‌ 35 ಎಸೆತ
    100 ರನ್‌ 67 ಎಸೆತ
    150 ರನ್‌ 101 ಎಸೆತ
    178 ರನ್‌ 120 ಎಸೆತ

    ಭವ್ಯ ಉದ್ಘಾಟನಾ ಸಮಾರಂಭ:
    3 ವರ್ಷಗಳ ಬಳಕ ಐಪಿಎಲ್‌ ಮತ್ತೆ ತನ್ನ ಎಂದಿನ ಹೋಂ ಅಂಡ್‌ ಅವೇ ಮಾದರಿಯಲ್ಲಿ ಆಯೋಜನೆ ಆಗುತ್ತಿದ್ದು, ಈ ಸಲುವಾಗಿ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭವ್ಯ ಉದ್ಘಾಟನಾ ಸಮಾರಂಭ ಆಯೋಜಿಸಲಾಯಿತು. ಬಾಲಿವುಡ್‌ ತಾರೆಯರಾದ ಅರ್ಜಿತ್‌ ಸಿಂಗ್‌, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಉದ್ಘಾಟನಾ ಸಮಾರಂಭದಲ್ಲಿ ಕಂಗೊಳಿಸಿದರು. ಭರ್ಜರಿ ನೃತ್ಯ ಮಾಡಿ ಅಭಿಮಾನಿಗಳನ್ನ ರಂಜಿಸಿದರು.

  • ಗಿಲ್‌ ಶತಕದ ಮಿಂಚು, ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ ಅರ್ಧ ಶತಕ – ಉತ್ತಮ ಸ್ಥಿತಿಯಲ್ಲಿ ಭಾರತ

    ಗಿಲ್‌ ಶತಕದ ಮಿಂಚು, ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ ಅರ್ಧ ಶತಕ – ಉತ್ತಮ ಸ್ಥಿತಿಯಲ್ಲಿ ಭಾರತ

    ಅಹಮದಾಬಾದ್‌: ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ 4ನೇ ಪಂದ್ಯದಲ್ಲಿ ಭಾರತ ತನ್ನ ಸರದಿಯ 2ನೇ ದಿನದಲ್ಲಿ ಉತ್ತಮ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಅಂತಿಮವಾಗಿ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದೆ.

    ನಾಯಕ ರೋಹಿತ್ ಶರ್ಮಾ (Rohit Sharma) ಔಟಾದ ಬಳಿಕ ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ (Shubman Gill) ಅತ್ಯುತ್ತಮ ಜೊತೆಯಾಟ ಆಡಿದರು. 2ನೇ ವಿಕೆಟ್‌ಗೆ ಈ ಜೋಡಿ 113 ರನ್‌ಗಳ ಜೊತೆಯಾಟ ಆಡಿತು. ಚೇತೇಶ್ವರ ಪೂಜಾರ 121 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. ಬಳಿಕವೂ ಉತ್ತಮ ಬ್ಯಾಟಿಂಗ್‌ ಮುಂದುವರಿಸಿದ ಗಿಲ್‌ ಟೀಂ ಇಂಡಿಯಾಗೆ ಆಸರೆಯಾದರು. 235 ಎಸೆತಗಳಲ್ಲಿ 12 ಬೌಂಡರಿ 1 ಸಿಕ್ಸರ್‌ನೊಂದಿಗೆ 128 ರನ್ ಗಳಿಸಿದ ಗಿಲ್ ನಥನ್‌ ಲಿಯಾನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

    ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ: ಕಳೆದ ಎರಡೂ ಇನ್ನಿಂಗ್ಸ್‌ಗಳಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಲಯ ಕಂಡುಕೊಂಡಿದ್ದಾರೆ. ಶನಿವಾರ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಅರ್ಧ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 128 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ ಸಹಿತ 59 ರನ್ ಗಳಿಸಿದ್ದು, 4ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

    ಕೊಹ್ಲಿ ಜೊತೆಗೆ ಜವಾಬ್ದಾರಿಯತ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ ಸಹ 54 ಎಸೆತಗಳಲ್ಲಿ 16 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದು, ಸೂಪರ್‌ ಸಂಡೇನಲ್ಲಿ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ಇದನ್ನೂ ಓದಿ: 4ನೇ ಪಂದ್ಯದಲ್ಲೂ RCBಗೆ ಹೀನಾಯ ಸೋಲು; ಹೀಲಿ ಸ್ಫೋಟಕ ಬ್ಯಾಟಿಂಗ್‌ – ವಾರಿಯರ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿರುವ ಭಾರತಕ್ಕೆ ಇನ್ನೂ 191 ರನ್‌ಗಳ ಅಗತ್ಯವಿದೆ. ಇದನ್ನೂ ಓದಿ: ಅಶ್ವಿನ್‌ಗೆ 6 ವಿಕೆಟ್ – ಆಸ್ಟ್ರೇಲಿಯಾ 480 ರನ್‌ಗಳಿಗೆ ಆಲೌಟ್

  • ರಶ್ಮಿಕಾ ನನ್ನ ಕ್ರಶ್ ಅಲ್ಲ: ಸಿಟ್ಟಿಗೆದ್ದ ಕ್ರಿಕೆಟಿಗ ಶುಭ್‍ಮನ್ ಗಿಲ್

    ರಶ್ಮಿಕಾ ನನ್ನ ಕ್ರಶ್ ಅಲ್ಲ: ಸಿಟ್ಟಿಗೆದ್ದ ಕ್ರಿಕೆಟಿಗ ಶುಭ್‍ಮನ್ ಗಿಲ್

    ಯುವ ಕ್ರಿಕೆಟಿಗ ಶುಭ್‍ಮನ್ ಗಿಲ್ (Shubman Gill) ಕೋಪಗೊಂಡಿದ್ದಾರೆ. ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ. ಹಲವು ದಿನಗಳಿಂದ ರಶ್ಮಿಕಾ ಮತ್ತು ಗಿಲ್ ವಿಚಾರ ಬಹಳ ಸುದ್ದಿಯಾಗಿತ್ತು. ಆಕೆ ನನ್ನ ಕ್ರಶ್ (Crush) ಎಂದು ಗಿಲ್ ಹೇಳಿದ್ದಾರೆ ಎನ್ನುವುದು ಭಾರಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ಹರಿದಾಡಿತ್ತು. ಅದನ್ನು ಕಂಡ ಗಿಲ್ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

    ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಇದೊಂದು ಕಪೋಕಲ್ಪತ ವರದಿ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ನನ್ನ ಕ್ರಶ್ ಅಲ್ಲ ಎಂದು ಅವರು ಉತ್ತರಿಸಿದ್ದಾರೆ. ಯಾವ ಮಾಧ್ಯಮದಲ್ಲೂ ನಾನು ಆ ರೀತಿಯಾಗಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಗಿಲ್ ಜೊತೆ ಈ ಹಿಂದೆ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರಿ ಸಾರಾ (Sara) ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಜೊತೆಗಿದ್ದ ಫೋಟೋಗಳು ಕೂಡ ಸಿಕ್ಕಿದ್ದವು. ಆ ಸಮಯದಲ್ಲಿ ಸಾರಾ ಮತ್ತು ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಅವರು ಏನೂ ಹೇಳಿಕೆ ನೀಡಿರಲಿಲ್ಲ. ಆದರೆ, ರಶ್ಮಿಕಾ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ.

    ಗಿಲ್ ತಮ್ಮನ್ನು ಇಷ್ಟಪಟ್ಟಿದ್ದರು ಎನ್ನುವುದು ರಶ್ಮಿಕಾಗೆ ಸಂಭ್ರಮದ ಸಂಗತಿಯಾಗಿತ್ತು. ರಶ್ಮಿಕಾ ಅಭಿಮಾನಿಗಳು ಕೂಡ ಖುಷಿಗೊಂಡಿದ್ದರು. ಆದರೆ, ಈ ಎಲ್ಲ ಖುಷಿಯನ್ನು ಒಟ್ಟಿಗೆ ಇಲ್ಲವಾಗಿಸಿದ್ದಾರೆ ಗಿಲ್. ಆದರೆ, ಸಾರಾ ವಿಷಯದಲ್ಲಿ ಮಾತ್ರ ಅವರು ದಿವ್ಯಮೌನ ತಾಳಿದ್ದಾರೆ. ಹಾಗಾಗಿ ಸಾರಾ ಮತ್ತು ಗಿಲ್ ಇನ್ನೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿದೆ.

  • 3rd T20I: ಗಿಲ್ ಘರ್ಜನೆಗೆ ಕಿವೀಸ್ ಗಪ್‍ ಚುಪ್ – ಟಿ20 ಸರಣಿ ಗೆದ್ದ ಭಾರತ

    3rd T20I: ಗಿಲ್ ಘರ್ಜನೆಗೆ ಕಿವೀಸ್ ಗಪ್‍ ಚುಪ್ – ಟಿ20 ಸರಣಿ ಗೆದ್ದ ಭಾರತ

    ಅಹಮದಾಬಾದ್: ಶುಭಮನ್ ಗಿಲ್ (Shubman Gil) ಬ್ಯಾಟಿಂಗ್ ವೈಭವ ಮತ್ತು ಟೀಂ ಇಂಡಿಯಾದ (Team India) ಬೌಲರ್‌ಗಳ ಮಾರಕ ದಾಳಿಗೆ ಕಂಗಾಲಾದ ಪ್ರವಾಸಿ ನ್ಯೂಜಿಲೆಂಡ್ (New Zealand) 3ನೇ ಟಿ20 ಪಂದ್ಯದಲ್ಲಿ ಕೇವಲ 66 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 168 ರನ್‍ಗಳ ಭರ್ಜರಿ ಜಯದೊಂದಿಗೆ ಟಿ20 ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

    235 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಕೇವಲ 12.1 ಓವರ್‌ಗಳಲ್ಲಿ 66 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ 168 ರನ್‌ಗಳ ದೊಡ್ಡ ಮೊತ್ತದ ಗೆಲುವನ್ನು ದಾಖಲಿಸಿತು. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ 35 ರನ್ (25 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಮಿಚೆಲ್ ಸ್ಯಾಂಟರ್ 13 ರನ್ (13 ಎಸೆತ, 1 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ 5 ಮಂದಿ ಅಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರೆ ಮೂವರು ಶೂನ್ಯ ಸುತ್ತಿದರು.

    ಈ ಮೊದಲು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇಶಾನ್ ಕಿಶನ್ ಕೇವಲ 1 ರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಒಂದಾದ ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ನ್ಯೂಜಿಲೆಂಡ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಇದನ್ನೂ ಓದಿ: Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ

    ಈ ಜೋಡಿ ಹೊಡಿಬಡಿ ಆಟದ ಮೂಲಕ ತಂಡದ ರನ್ ಹೆಚ್ಚಿಸಿತು. 2ನೇ ವಿಕೆಟ್‍ಗೆ ಈ ಜೋಡಿ 80 ರನ್ (42 ಎಸೆತ) ಜೊತೆಯಾಟವಾಡಿ ಬೇರ್ಪಟ್ಟಿತು. ತ್ರಿಪಾಠಿ 44 ರನ್ (22 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಸೂರ್ಯ ಕುಮಾರ್ ಯಾದವ್ ಬಿರುಸಿನ 24 ರನ್ (13 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.

    ಗಿಲ್ ಘರ್ಜನೆ:
    ಇತ್ತ ಶುಭಮನ್ ಗಿಲ್ ಅಬ್ಬರ ಮಾತ್ರ ಕಡಿಮೆಯಾಗಲಿಲ್ಲ. ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದ ಗಿಲ್ ಸ್ಫೋಟಕ ಆಟಕ್ಕೆ ಮುಂದಾದರು. ನಾಯಕ ಪಾಂಡ್ಯ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಗಿಲ್ ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಗಿಲ್ ಶತಕದ ಬೆನ್ನಲ್ಲೇ ಪಾಂಡ್ಯ 30 ರನ್ (17 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಈ ಮೊದಲು ಈ ಜೋಡಿ 4ನೇ ವಿಕೆಟ್‍ಗೆ 103 ರನ್ (40 ಎಸೆತ) ಜೊತೆಯಾಟವಾಡಿತು.

    ಅಂತಿಮವಾಗಿ ಗಿಲ್ ಅಜೇಯ 126 ರನ್ (63 ಎಸೆತ, 12 ಬೌಂಡರಿ, 7 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರನ್ ಏರಿದ್ದು ಹೇಗೆ?
    50 ರನ್ 33 ಎಸೆತ
    100 ರನ್ 58 ಎಸೆತ
    150 ರನ್ 87 ಎಸೆತ
    200 ರನ್ 104 ಎಸೆತ
    234 ರನ್ 120 ಎಸೆತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    ಅಹಮದಾಬಾದ್‌: ನ್ಯೂಜಿಲೆಂಡ್ (New Zealand) ವಿರುದ್ಧದ 3ನೇ ಟಿ20 (3rd T20) ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಯುವ ಬ್ಯಾಟ್ಸ್‌ಮ್ಯಾನ್‌ ಶುಭಮನ್ ಗಿಲ್ (Shubman Gill) ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಗಿಲ್ ನ್ಯೂಜಿಲೆಂಡ್ ವಿರುದ್ಧ ಅಜೇಯ 126 ರನ್ (63 ಎಸೆತ, 12 ಬೌಂಡರಿ, 7 ಸಿಕ್ಸ್) ಚಚ್ಚಿ ಟಿ20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ಪರ ವೈಯಕ್ತಿಕ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ (Record) ಬರೆದರು. ಈ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ (Virat Kohl) ಹೆಸರಲ್ಲಿತ್ತು. ಕೊಹ್ಲಿ ಸಿಡಿಸಿದ್ದ ಅಜೇಯ 122 ರನ್ ಭಾರತದ ಪರ ಬ್ಯಾಟ್ಸ್‌ಮ್ಯಾನ್‌ ಒಬ್ಬ ಸಿಡಿಸಿದ ವೈಯಕ್ತಿಕ ಹೆಚ್ಚು ರನ್ ಆಗಿತ್ತು. ಈ ದಾಖಲೆಯನ್ನು ಗಿಲ್ ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ

    ಇದಲ್ಲದೇ ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಗಿಲ್ ಅಬ್ಬರದ ಆಟದ ಪರಿಣಾಮ ಭಾರತ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 234 ರನ್ ಸಿಡಿಸಿತು. ನ್ಯೂಜಿಲೆಂಡ್‍ಗೆ 235 ರನ್‍ಗಳ ಬೃಹತ್ ಟಾರ್ಗೆಟ್ ನೀಡಿತು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶುಭಮನ್ ಗಿಲ್‌ಗೆ ಸಾರಾ ಎಂದು ಕಾಲೆಳೆದ ಫ್ಯಾನ್ಸ್ – ಕೊಹ್ಲಿ ರಿಯಾಕ್ಷನ್ ವೈರಲ್

    ಶುಭಮನ್ ಗಿಲ್‌ಗೆ ಸಾರಾ ಎಂದು ಕಾಲೆಳೆದ ಫ್ಯಾನ್ಸ್ – ಕೊಹ್ಲಿ ರಿಯಾಕ್ಷನ್ ವೈರಲ್

    ಇಂದೋರ್: ಭಾರತ- ನ್ಯೂಜಿಲೆಂಡ್‌ನ ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್‌ಗೆ (Shubman Gill) ಫ್ಯಾನ್ಸ್, “ಸಾರಾ, ಸಾರಾ” ಎಂದು ಕರೆಯುವ ಮೂಲಕ ಕಾಲೆಳೆದಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ (Virat Kohli) ನೀಡಿರುವ ರಿಯಾಕ್ಷನ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಇಂದೋರ್‌ನಲ್ಲಿ ನಡೆದ 3ನೇ ಪಂದ್ಯದ ವೇಳೆ ನೆರೆದಿದ್ದ ಫ್ಯಾನ್ಸ್ ಸಾರಾ ಸಾರಾ ಹೇಳುವ ಮೂಲಕ ಶುಭಮನ್ ಗಿಲ್‌ಗೆ ಕಿಟಲೆ ನೀಡಲು ಪ್ರಯತ್ನಿಸಿದರು. ನಮ್ಮ ಸಾರಾ ಅತ್ತಿಗೆ ಹೇಗೆ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಾರಾ ಹೆಸರನ್ನು ಜೋರಾಗಿ ಕೂಗುತ್ತಿರುವುದನ್ನು ಕೇಳಿದ ವಿರಾಟ್ ಕೊಹ್ಲಿ ನಗುತ್ತಾ ಪ್ರೇಕ್ಷಕರನ್ನು ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಟ್ವೀಟ್‌ನಲ್ಲಿ ಏನಿದೆ?: ವಿರಾಟ್ ಕೊಹ್ಲಿ 30 ಯಾರ್ಡ್ ವೃತ್ತದೊಳಗೆ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ನೆರೆದಿದ್ದ ಪ್ರೇಕ್ಷಕರು ಶುಭಮನ್ ಗಿಲ್‌ಗೆ ಸಾರಾ ಹೆಸರು ಹೇಳಿ ಕೀಟಲೆ ಮಾಡಿದ್ದಾರೆ. ಇದನ್ನು ಕೇಳಿದ ಕೊಹ್ಲಿಗೆ ನಗು ತಡೆಯಲಾರದೇ ಪ್ರೇಕ್ಷಕರ ಕಡೆ ತಿರುಗಿ ನಕ್ಕಿದ್ದಾರೆ. ನಂತರ ಮುಂದುವರಿಸುವಂತೆ ಪ್ರೇಕ್ಷಕರಿಗೆ ಕೈ ಸನ್ನೆ ಮಾಡಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಒಟ್ಟು 360 ರನ್ ಹೊಡೆದ ಶುಭ್‌ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಶುಭಮನ್ ಗಿಲ್‌ನೊಂದಿಗೆ ಬಾಲಿವುಡ್ (Bollywood) ನಟಿ ಸಾರಾ ಅಲಿ ಖಾನ್ (Sara Ali Khan) ಹೆಸರು ಕೇಳಿಬಂದಿತ್ತು. ಇದೀಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ರಾಂಚಿ ರ್‍ಯಾಂಬೋ ಜೊತೆ ಪಾಂಡ್ಯ ವಿಂಟೇಜ್ ಬೈಕ್ ರೈಡಿಂಗ್

     

    View this post on Instagram

     

    A post shared by Apn ka Indore (@apn_ka_indore)

    ಮಂಗಳವಾರ ನಡೆದ ಭಾರತ  (Team India)  ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಮೂರನೇ ಹಾಗೂ ಅಂತಿಮ ಪಂದ್ಯವು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ರೋಹಿತ್ ಶರ್ಮಾ (Rohith Sharma) ಹಾಗೂ ಶುಭಮನ್ ಗಿಲ್ ಅವರ ಶತಕದ ಆಟದಿಂದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ಗಳಿಸಿತ್ತು. ಭಾರೀ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 295 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲನುಭವಿಸಿತ್ತು. ಈ ಮೂಲಕದ ಭಾರತ, ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಮೂಲಕ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 90 ರನ್‌ಗಳ ಭರ್ಜರಿ ಜಯ: ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದ ಭಾರತ

    90 ರನ್‌ಗಳ ಭರ್ಜರಿ ಜಯ: ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದ ಭಾರತ

    ಇಂದೋರ್‌: ಮೂರನೇ ಏಕದಿನ ಪಂದ್ಯವನ್ನು 90 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ (Team India) ನ್ಯೂಜಿಲೆಂಡ್‌ (New Zealand) ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ. ಈ ಮೂಲಕ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಜಿಗಿದಿದೆ.

    ರೋಹಿತ್‌ ಶರ್ಮಾ (Rohith Sharma) ಮತ್ತು ಶುಭಮನ್‌ ಗಿಲ್‌ (Shubman Gill ) ಅವರ ಶತಕದ ಆಟದಿಂದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 385 ರನ್‌ ಗಳಿಸಿತ್ತು. ಭಾರೀ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 41.2 ಓವರ್‌ಗಳಲ್ಲಿ 295 ರನ್‌ಗಳಿಗೆ ಆಲೌಟ್‌ ಆಯಿತು.

    ನ್ಯೂಜಿಲೆಂಡ್‌ ಪರವಾಗಿ ಡೆವೊನ್ ಕಾನ್ವೇ 138 ರನ್‌(100 ಎಸೆತ, 12 ಬೌಂಡರಿ, 8 ಸಿಕ್ಸರ್‌), ಹೆನ್ರಿ ನಿಕೋಲ್ಸ್‌ 42 ರನ್‌(40 ಎಸೆತ, 3 ಬೌಂಡರಿ, 2 ಸಿಕ್ಸರ್‌) ಮೈಕೆಲ್ ಬ್ರೇಸ್ವೆಲ್ 26 ರನ್‌, ಮಿಚೆಲ್ ಸ್ಯಾಂಟ್ನರ್ 34 ರನ್‌ ಹೊಡೆದು ಸ್ವಲ್ಪ ಪ್ರತಿರೋಧ ತೋರಿಸಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಭರ್ಜರಿ ಆರಂಭ ಪಡೆಯಿತು. ನಾಯಕ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಮೊದಲ ವಿಕೆಟ್‌ಗೆ 157 ಎಸೆತಗಳಲ್ಲಿ 212 ರನ್‌ಗಳ ಜೊತೆಯಾಟವಾಡಿದರು.

    ರೋಹಿತ್‌ ಶರ್ಮಾ 101 ರನ್‌(85 ಎಸೆತ, 9 ಬೌಂಡರಿ, 6 ಸಿಕ್ಸರ್‌) ಗಿಲ್‌ 112 ರನ್‌ (78 ಎಸೆತ, 13 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರು. ವಿರಾಟ್‌ ಕೊಹ್ಲಿ 36 ರನ್‌(27 ಎಸೆತ, 3 ಬೌಂಡರಿ, 1 ಸಿಕ್ಸರ್‌), ಹಾರ್ದಿಕ್‌ ಪಾಂಡ್ಯ 54 ರನ್‌(38 ಎಸೆತ, 3 ಬೌಂಡರಿಮ 3 ಸಿಕ್ಸರ್‌), ಶಾರ್ದೂಲ್‌ ಠಾಕೂರ್‌ 25 ರನ್‌(17 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    34.3 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 268 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ನಂತರ 117 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತ್ತು.

    ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 114 ರೇಟಿಂಗ್‌ನೊಂದಿಗೆ ಮೊದಲ ಸ್ಥಾನ ಪಡೆದರೆ ಇಂಗ್ಲೆಂಡ್‌  113 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. 112 ರೇಟಿಂಗ್‌ ಪಡೆದಿರುವ ಆಸ್ಟ್ರೇಲಿಯಾ  ಮೂರನೇ ಸ್ಥಾನದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಭೋಪಾಲ್: ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) 1,101 ದಿನಗಳ ಬಳಿಕ ಅಂದರೆ 3 ವರ್ಷಗಳ ಬಳಿಕ ಶತಕದ ಬರ ನೀಗಿಸಿಕೊಂಡಿದ್ದಾರೆ.

    ಇಂದೋರ್‌ನ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 85 ಎಸೆತಗಳಲ್ಲಿ 101 ರನ್ ಬಾರಿಸಿದ್ದಾರೆ. 6 ಸಿಕ್ಸರ್, 9 ಬೌಂಡರಿಗಳು ಇದರಲ್ಲಿ ಸೇರಿವೆ. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    2020ರ ಜನವರಿ 19ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೊನೆಯ ಶತಕ ಸಿಡಿಸಿದ್ದರು. ಇಂದು 83 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಇದು ಅವರ 2ನೇ ವೇಗದ ಶತಕವಾಗಿದೆ. ಇದನ್ನೂ ಓದಿ: T20I TEAM OF THE YEAR 2022: ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ

    ಅಲ್ಲದೇ 1,101 ದಿನಗಳ ಬಳಿಕ 30ನೇ ಶತಕ ಸಿಡಿಸಿದ ಶರ್ಮಾ ಹೊಸ ದಾಖಲೆಯನ್ನೂ ಬರೆದಿದ್ದಾರೆ. ಆಸ್ಟ್ರೇಲಿಯಾ ಕೋಚ್ ಆಗಿರುವ ರಿಕ್ಕಿಪಾಟಿಂಗ್ ಏಕದಿನ ಕ್ರಿಕೆಟ್‌ನಲ್ಲಿ 30 ಶತಕ ಸಿಡಿಸಿ, ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ 3ನೇ ಆಟಗಾರನಾಗಿದ್ದರು. ಇದೀಗ ರೋಹಿತ್ ಶರ್ಮಾ, ರಿಕ್ಕಿ ಪಾಟಿಂಗ್ ಅವರ ಶತಕ ಸಾಧನೆಯನ್ನ ಸರಿಗಟ್ಟಿದ್ದಾರೆ. ಆದರೆ ರಿಕ್ಕಿ ಪಾಂಟಿಂಗ್ 365  ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ ಶರ್ಮಾ 234 ಇನ್ನಿಂಗ್ಸ್‌ಗಳಲ್ಲೇ ಸಾಧನೆ ಮಾಡಿರುವುದು ವಿಶೇಷ.

    ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ಪಡೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ (Shubman Gill) ಜೋಡಿ 212 ರನ್‌ಗಳ ಜೊತೆಯಾಟವಾಡಿತು.

    ಏಕದಿನ ಕ್ರಿಕೆಟ್‌ನ ಸೆಂಚುರಿ ಸ್ಟಾರ್ಸ್‌ 

    • ಸಚಿನ್ ತೆಂಡೂಲ್ಕರ್ – 79 ಶತಕ, 452 ಇನ್ನಿಂಗ್ಸ್
    • ವಿರಾಟ್ ಕೊಹ್ಲಿ – 46 ಶತಕ, 261 ಇನ್ನಿಂಗ್ಸ್
    • ರೋಹಿತ್ ಶರ್ಮಾ – 30 ಶತಕ, 234 ಇನ್ನಿಂಗ್ಸ್
    • ರಿಕ್ಕಿ ಪಾಂಟಿಂಗ್ – 30 ಶತಕ, 365 ಇನ್ನಿಂಗ್ಸ್
    • ಸನತ್ ಜಯಸೂರ್ಯ – 28 ಶತಕ, 433 ಇನ್ನಿಂಗ್ಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ನಟಿ ಸೋನಮ್ ಬಾಜ್ವಾ

    ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ನಟಿ ಸೋನಮ್ ಬಾಜ್ವಾ

    ಟೀಮ್ ಇಂಡಿಯಾ ಕ್ರಿಕೆಟಿಗ (Cricket) ಶುಭಮನ್ ಗಿಲ್ (Shubman Gill) ಹೊಡೆದ ದ್ವಿಶತಕಕ್ಕಿಂತ ಆತನ ಡೇಟಿಂಗ್ (Dating) ವಿಚಾರವೇ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಗಿಲ್ ಜೊತೆ ದಿನಕ್ಕೊಂದು ಹುಡುಗಿಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಶುಭಮನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾನೋ ಗೊತ್ತಿಲ್ಲ. ಆದರೆ, ಹೊಸ ಹೊಸ ಹುಡುಗಿಯರ ಹೆಸರು ಮಾತ್ರ ಕೇಳಿ ಬರುತ್ತಲೇ ಇದೆ.

    ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕ ಎನ್ನುವಂತೆ ಈ ಇಬ್ಬರೂ ಸುತ್ತಾಡುವ ಫೋಟೋಗಳು ಕಂಡು ಬಂದವು. ರೆಸ್ಟೋರೆಂಟ್ ಸೇರಿದಂತೆ ನಾನಾ ಕಡೆ ಸಾರಾ ಮತ್ತು ಗಿಲ್ ಒಟ್ಟಿಗೆ ಇದ್ದ ಫೋಟೋಗಳು ವೈರಲ್ ಆದವು. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಉದ್ಯಮಿ ವಿಶಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಇದೀಗ ಗಿಲ್ ಜೊತೆ ಮತ್ತೋರ್ವ ಹುಡುಗಿಯ ಹೆಸರು ಕೇಳಿ ಬಂದಿದೆ. ಪಂಜಾಬಿ ನಟಿ ಸೋನಮ್ ಬಾಜ್ವಾ (Sonam Bajwa) ಜೊತೆ ಕ್ರಿಕೆಟಿಗ ಗಿಲ್ ಲವ್ವಿಡವ್ವಿ ಶುರು ಮಾಡಿದ್ದಾರಂತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿವೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಆಚೆ ಬರುತ್ತಿದ್ದಂತೆಯೇ ಅದಕ್ಕೆ ಸೋನಮ್ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಗಿಲ್ ಜೊತೆ ನಾನು ಡೇಟಿಂಗ್ ಮಾಡುತ್ತಿಲ್ಲ. ಸುಖಾಸುಮ್ಮನೆ ರೂಮರ್ ಹಬ್ಬಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಖಲೆಯ ದ್ವಿಶತಕ ಸಿಡಿಸಿ ಗಿಲ್ ಘರ್ಜನೆ, ಕಿವೀಸ್ ಪರ ಬ್ರೇಸ್ವೆಲ್ ಏಕಾಂಗಿ ಹೋರಾಟ – ಭಾರತಕ್ಕೆ ಜಯ

    ದಾಖಲೆಯ ದ್ವಿಶತಕ ಸಿಡಿಸಿ ಗಿಲ್ ಘರ್ಜನೆ, ಕಿವೀಸ್ ಪರ ಬ್ರೇಸ್ವೆಲ್ ಏಕಾಂಗಿ ಹೋರಾಟ – ಭಾರತಕ್ಕೆ ಜಯ

    ಹೈದರಾಬಾದ್: ನ್ಯೂಜಿಲೆಂಡ್ (New Zealand) ಮತ್ತು ಭಾರತ (India) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ (ODI) ಕಿವೀಸ್ ಬ್ಯಾಟ್ಸ್‌ಮ್ಯಾನ್‌ ಮೈಕೆಲ್ ಬ್ರೇಸ್ವೆಲ್ ಅಬ್ಬರದ ಬ್ಯಾಟಿಂಗ್ ಹೋರಾಟದ ನಡುವೆಯೂ ಭಾರತ 12 ರನ್‍ಗಳ ಜಯ ಸಾಧಿಸಿದೆ.

    ಭಾರತ ನೀಡಿದ 350 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಪರ ಬ್ರೇಸ್ವೆಲ್ ಏಕಾಂಗಿ ಹೋರಾಟ ನಡೆಸಿದರು. ಭಾರತದ ಬೌಲರ್‌ಗಳ ದಾಳಿಯನ್ನು ಪುಡಿಗಟ್ಟಿದ ಬ್ರೇಸ್ವೆಲ್ 140 ರನ್ (78 ಎಸೆತ, 12 ಬೌಂಡರಿ, 10 ಸಿಕ್ಸ್) ಸಿಡಿಸಿ ಅಂತಿಮ ವಿಕೆಟ್ ರೂಪದಲ್ಲಿ ವಿಕೆಟ್ ಕೈಚೆಲ್ಲಿಕೊಂಡರು. ಇದರೊಂದಿಗೆ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್‍ಗಳಿಗೆ ಆಲೌಟ್ ಆಯಿತು. ಇತ್ತ ಭಾರತ 12 ರನ್‍ಗಳ ಜಯ ಸಾಧಿಸಿತು. ಈ ಜಯದೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.

    ಭಾರತ ನೀಡಿದ ಕಠಿಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‍ಗೆ ಆರಂಭಿಕ ಆಟಗಾರ ಫಿನ್ ಅಲೆನ್ 40 ರನ್ (39 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಉತ್ತಮ ಆರಂಭ ನೀಡಿದರು. ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ನ್ಯೂಜಿಲೆಂಡ್‍ಗೆ ನೆರವಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ಮೈಕೆಲ್ ಬ್ರೇಸ್ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಜೋಡಿ.

    ಮೈಕೆಲ್ ಬ್ರೇಸ್ವೆಲ್, ಸ್ಯಾಂಟ್ನರ್ ಹೋರಾಟ:
    7ನೇ ವಿಕೆಟ್‍ಗೆ ಒಂದಾದ ಬ್ರೇಸ್ವೆಲ್ ಮತ್ತು ಸ್ಯಾಂಟ್ನರ್ ಜೋಡಿ ಭಾರತದ ಬೌಲರ್‌ಗಳ ಬೆವರಿಳಿಸಿತು. ಬ್ರೇಸ್ವೆಲ್ ಅಂತೂ ಸಿಕ್ಸರ್‌ಗಳ ಮೇಲೆ ಸಿಕ್ಸರ್ ಸಿಡಿಸಿ ಶತಕ ಸಿಡಿಸಿ ಮೆರೆದಾಡಿದರು. ಜೊತೆಗೆ ನ್ಯೂಜಿಲೆಂಡ್‍ಗೆ ಗೆಲುವಿನ ಭರವಸೆ ಮೂಡಿಸಿದರು. ಈ ವೇಳೆ ದಾಳಿಗಿಳಿದ ಸಿರಾಜ್, 57 ರನ್ (45 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿದ್ದ ಸ್ಯಾಂಟ್ನರ್ ವಿಕೆಟ್ ಕಬಳಿಸಿದರು. ಇದರೊಂದಿಗೆ ಬ್ರೇಸ್ವೆಲ್, ಸ್ಯಾಂಟ್ನರ್ ಜೋಡಿ 7ನೇ ವಿಕೆಟ್‍ಗೆ 162 ರನ್ (102 ಎಸೆತ) ಜೊತೆಯಾಟವಾಡಿ ಬೇರ್ಪಟ್ಟಿತು.

    ಆ ಬಳಿಕ ಕೂಡ ಬ್ರೇಸ್ವೆಲ್ ಅಬ್ಬರ ನಿಲ್ಲಲಿಲ್ಲ. ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿ ಅಂತಿಮ ಓವರ್‌ನಲ್ಲಿ 140 ರನ್ (78 ಎಸೆತ, 12 ಬೌಂಡರಿ, 10 ಸಿಕ್ಸ್) ಸಿಡಿಸಿ ಎಲ್‍ಬಿಡಬ್ಲ್ಯೂ ಆಗಿ ಔಟ್ ಆದರು. ಈ ಮೂಲಕ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರು. ಕುಲ್‍ದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಶಮಿ, ಪಾಂಡ್ಯ ತಲಾ 1 ವಿಕೆಟ್ ಹಂಚಿಕೊಂಡರು.

    ಈ ಮೊದಲು ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಧಾರದಂತೆ ಶುಭಮನ್ ಗಿಲ್ ಕೂಡ ರೋಹಿತ್‍ಗೆ ಸಾಥ್ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 60 ರನ್ (73 ಎಸೆತ) ಸಿಡಿಸಿ ಉತ್ತಮ ಆರಂಭ ನೀಡಿತು. ರೋಹಿತ್ 34 ರನ್ (38 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಇದನ್ನೂ ಓದಿ: ದ್ವಿಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಿದ ಗಿಲ್ – ಭಾರತ ಪರ ಡಬಲ್ ಸೆಂಚುರಿ ಬಾರಿಸಿದ ಐವರು ಸಾಧಕರಿವರು

    ಬಳಿಕ ಬಂದ ವಿರಾಟ್ ಕೊಹ್ಲಿ 8 ರನ್ (10 ಎಸೆತ, ಬೌಂಡರಿ) ಮತ್ತು ಇಶಾನ್ ಕಿಶನ್ 5 ರನ್ (14 ಎಸೆತ) ಸಿಡಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

    ಗಿಲ್ ಘರ್ಜನೆ:
    ಆದರೆ ಇತ್ತ ಆರಂಭಿಕ ಆಟಗಾರ ಗಿಲ್ ಮಾತ್ರ ಕೀವಿಸ್ ಬೌಲರ್‌ಗಳ ಕಿವಿ ಹಿಂಡಲು ಪ್ರಾರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ಬ್ಯಾಟ್‍ಬೀಸಿದ ಗಿಲ್ ಆ ಬಳಿಕ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. ಈ ಮೂಲಕ ಶತಕ ಸಿಡಿಸಿ ಗಿಲ್ ಆ ಬಳಿಕ ಮತ್ತಷ್ಟು ಉಗ್ರ ರೂಪ ತಾಳಿದರು. ಇವರಿಗೆ ಕೆಲಕಾಲ ಸೂರ್ಯಕುಮಾರ್ ಯಾದವ್ 31 ರನ್ (26 ಎಸೆತ, 4 ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ 28 ರನ್ (38 ಎಸೆತ, 3 ಬೌಂಡರಿ) ಸಿಡಿಸಿ ಸಾಥ್ ನೀಡಿದರು. ಇದನ್ನೂ ಓದಿ: ರಾಷ್ಟ್ರೀಯ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ – ವಿನೇಶ್‌ ಫೋಗಟ್‌ ಗಂಭೀರ ಆರೋಪ

    ಇತ್ತ ವಿಕೆಟ್ ಉರುಳುತ್ತಿದ್ದರೆ, ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದ ಗಿಲ್ ನೋಡ ನೋಡುತ್ತಿದ್ದಂತೆ ಮೂರು ಬ್ಯಾಕ್ ಟು ಬ್ಯಾಕ್ ಸಿಕ್ಸ್ ಚಚ್ಚಿ ದ್ವಿಶತಕ ಪೂರೈಸಿದರು. ದ್ವಿಶತಕದ ಬಳಿಕ ಕೊನೆಯ ಓವರ್‌ನಲ್ಲಿ 208 ರನ್ (149 ಎಸೆತ, 19 ಬೌಂಡರಿ, 9 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೂಲಕ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿದ ಯುವ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಬಾರಿಸಿತು.

    ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ ಮತ್ತು ಹೆನ್ರಿ ಶಿಪ್ಲಿ ತಲಾ 2 ವಿಕೆಟ್ ಪಡೆದರು. ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

    ರನ್ ಏರಿದ್ದು ಹೇಗೆ:
    50 ರನ್ 52 ಎಸೆತ
    100 ರನ್ 113 ಎಸೆತ
    150 ರನ್ 147 ಎಸೆತ
    200 ರನ್ 196 ಎಸೆತ
    250 ರನ್ 239 ಎಸೆತ
    300 ರನ್ 277 ಎಸೆತ
    349 ಎಸೆತ 300 ಎಸೆತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k