Tag: Shubman Gill ಟೀಂ ಇಂಡಿಯಾ

  • World Cup 2023: ವಿಶ್ವದ ನಂ.1 T20 ಬ್ಯಾಟರ್‌ಗೆ ಬೆಸ್ಟ್‌ ಫೀಲ್ಡರ್‌ ಪ್ರಶಸ್ತಿ

    World Cup 2023: ವಿಶ್ವದ ನಂ.1 T20 ಬ್ಯಾಟರ್‌ಗೆ ಬೆಸ್ಟ್‌ ಫೀಲ್ಡರ್‌ ಪ್ರಶಸ್ತಿ

    ಬೆಂಗಳೂರು: 2023ರ ಏಕದಿನ ವಿಶ್ವಕಪ್‌ (World Cup 2023) ಕ್ರಿಕೆಟ್‌ ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಂತೆ ಅಜೇಯ ಓಟದಲ್ಲೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ (Team India) ಪ್ರಸಕ್ತ ವರ್ಷದಲ್ಲಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.

     

    View this post on Instagram

     

    A post shared by Team India (@indiancricketteam)

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್‌ ಸಂಡೇ ನಡೆದ ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್‌ಗಳು ಅಬ್ಬರಿಸಿ ಬೊಬ್ಬಿರಿದರು. ನೆದರ್ಲೆಂಡ್ಸ್‌ (Netherlands) ವಿರುದ್ಧ ಪಂದ್ಯದಲ್ಲಿ 410 ರನ್‌ ಬಾರಿಸಿದ ಭಾರತ ಎದುರಾಳಿ ತಂಡವನ್ನು 250 ರನ್‌ಗಳಿಗೆ ಕಟ್ಟಿಹಾಕಿ 160 ರನ್‌ಗಳ ಜಯ ಸಾಧಿಸಿತು. ಡಚ್ಚರ ವಿರುದ್ಧ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ ಬಳಿಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ʻಫೀಲ್ಡರ್‌ ಆಫ್‌ ದಿ ಮ್ಯಾಚ್‌ʼ (Fielder of the Match) ಪದಕ ಗಿಟ್ಟಿಸಿಕೊಂಡರು. ಇದೇ ವೇಳೆ ಕೆ.ಎಲ್‌ ರಾಹುಲ್‌ ಮತ್ತು ರವೀಂದ್ರ ಜಡೇಜಾ ಅವರ ಫೀಲ್ಡಿಂಗ್‌ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಉತ್ತೇಜನ ನೀಡಲು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಹೊಸ ಕಾನ್ಸೆಪ್ಟ್‌ ಮಾಡಿರುವ ತಂಡ ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಆಟಗಾರರಿಗೆ ಪದಕಗಳನ್ನು ನೀಡಿ ಹುರಿದುಂಬಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರಿಗೆ ಉತ್ತಮ ಫೀಲ್ಡಿಂಗ್‌ ಪ್ರದರ್ಶನಕ್ಕಾಗಿ ಡ್ರೆಸ್ಸಿಂಗ್‌ ರೂಮ್‌ ಚುಟುಕು ಸಮಾರಂಭದಲ್ಲಿ ಚಿನ್ನದ ಪದಕ ನೀಡಲಾಗಿತ್ತು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಅವರಿಗೆ ಉತ್ತಮ ಫೀಲ್ಡಿಂಗ್‌ಗಾಗಿ ಚಿನ್ನದ ಪದಕ ನೀಡಲಾಗಿತ್ತು. ಆದ್ರೆ ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಪದಕ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

    ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಡೆಯುತ್ತಿದ್ದ ಚುಟುಕು ಸಮಾರಂಭದಲ್ಲಿ ಪದಕಗಳನ್ನು ನೀಡಲಾಗುತ್ತಿತ್ತು. ಆದ್ರೆ ಕೊನೆಯ ಲೀಗ್‌ ಪಂದ್ಯದ ಬಳಿಕ ದೊಡ್ಡ ಸ್ಕ್ರೀನ್‌ನಲ್ಲಿ ಪ್ರಶಸ್ತಿಯನ್ನ ಘೋಷಿಸಲಾಯಿತು. ಕೆ.ಎಲ್‌ ರಾಹುಲ್‌ ಜಡೇಜಾ ಹಾಗೂ ಸೂರ್ಯ ‘ಫೀಲ್ಡರ್ ಆಫ್ ದಿ ಮ್ಯಾಚ್’ ಪ್ರಶಸ್ತಿ‌ ರೇಸ್‌ನಲ್ಲಿದ್ದರು. ಆದ್ರೆ ಪ್ರಶಸ್ತಿ ಸೂರ್ಯನ ಪಾಲಾಯಿತು. ಡಚ್ಚರ ವಿರುದ್ಧ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸೂರ್ಯಕುಮಾರ್‌ಗೆ ಬ್ಯಾಟಿಂಗ್‌ನಲ್ಲಿ ಅವಕಾಶ ಸಿಗಲಿಲ್ಲ. ಕೊನೆಯ ಒಂದೇ ಒಂದು ಎಸೆತವನ್ನು ಎದುರಿಸಿದ ಸ್ಕೈ (SKY) 2 ರನ್‌ ಗಳಿಸುವಲ್ಲಿ ಯಶಸ್ವಿಯಾದರು. ಆದ್ರೆ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಪದಕ ತಮ್ಮದಾಗಿಸಿಕೊಂಡರು.

    ಟೀಂ ಇಂಡಿಯಾ ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. 2019ರ ವಿಶ್ವಕಪ್‌ ಟೂರ್ನಿಯಲ್ಲೂ ಭಾರತ ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ ವಿರೋಚಿತ ಸೋಲಿಗೆ ತುತ್ತಾಗಿತ್ತು.

  • ಶ್ರೇಯಸ್‌, ರಾಹುಲ್‌ ಶತಕಗಳ ಬೊಂಬಾಟ್‌ ಬ್ಯಾಟಿಂಗ್‌ – ಡಚ್ಚರಿಗೆ 411 ರನ್‌ಗಳ ಕಠಿಣ ಗುರಿ

    ಶ್ರೇಯಸ್‌, ರಾಹುಲ್‌ ಶತಕಗಳ ಬೊಂಬಾಟ್‌ ಬ್ಯಾಟಿಂಗ್‌ – ಡಚ್ಚರಿಗೆ 411 ರನ್‌ಗಳ ಕಠಿಣ ಗುರಿ

    ಬೆಂಗಳೂರು: ಶ್ರೇಯಸ್‌ ಅಯ್ಯರ್‌ (Shreyas Iyer), ಕೆ.ಎಲ್‌ ರಾಹುಲ್‌ (KL Rahul) ದ್ವಿಶತಕ ಜೊತೆಯಾಟ ಹಾಗೂ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 410 ರನ್‌ ಗಳಿಸಿ ಎದುರಾಳಿ ನೆದರ್ಲೆಂಡ್ಸ್‌ (Netherlands) ತಂಡಕ್ಕೆ 410 ರನ್‌ಗಳ ಗುರಿ ನೀಡಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಡಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 410 ರನ್‌ ಕಲೆಹಾಕಿತು. ಇದನ್ನೂ ಓದಿ: World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ರೋಹಿತ್‌ ಶರ್ಮಾ (Rohit Sharma) ಮತ್ತು ಶುಭಮನ್‌ ಗಿಲ್‌ (Shubman Gill) ಜೋಡಿ ಮೊದಲ ವಿಕೆಟ್‌ಗೆ 71 ಎಸೆತಗಳಲ್ಲಿ 100 ರನ್‌ ಬಾರಿಸಿತ್ತು. ಈ ಜೋಡಿ ವಿಕೆಟ್‌ ಬೀಳುತ್ತಿದ್ದಂತೆ 3ನೇ ವಿಕೆಟ್‌ಗೆ ಶ್ರೇಯಸ್‌ ಅಯ್ಯರ್‌ ಮತ್ತು ಕೊಹ್ಲಿ (Virat Kohli) 66 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದ್ರು. ಬಳಿಕ ದ್ವಿಶತಕ ಜೊತೆಯಾಟ ನೀಡಿದ ಕೆ.ಎಲ್‌ ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಜೋಡಿ 128 ಎಸೆತಗಳಲ್ಲಿ ಬರೋಬ್ಬರಿ 208 ರನ್‌ ಬಾರಿಸಿತ್ತು. ಇದರಿಂದ ತಂಡದ ಮೊತ್ತ 400 ರನ್‌ಗಳ ಗಡಿ ದಾಟಲು ನೆರವಾಯಿತು. ಅಂತಿಮವಾಗಿ ಭಾರತ 4 ವಿಕೆಟ್‌ ನಷ್ಟಕ್ಕೆ 410 ರನ್‌ ಬಾರಿಸಿತು.

    ಭಾರತದ ಪರ ಶ್ರೇಯಸ್‌ ಅಯ್ಯರ್‌ 128 ರನ್‌ (94 ಎಸೆತ, 10 ಬೌಂಡರಿ, 5 ಸಿಕ್ಸರ್)‌, ಕೆ.ಎಲ್‌ ರಾಹುಲ್‌ 102 ರನ್‌ (64 ಎಸೆತ, 11 ಬೌಂಡರಿ, 4 ಸಿಕ್ಸರ್)‌, ರೋಹಿತ್‌ ಶರ್ಮಾ 61 ರನ್‌ (54 ಎಸೆತ, 8 ಬೌಂಡರಿ, 2 ಸಿಕ್ಸರ್‌), ಶುಭಮನ್‌ ಗಿಲ್‌ 51 ರನ್‌ (32 ಎಸೆತ, 4 ಸಿಕ್ಸರ್‌, 3 ಬೌಂಡರಿ), ವಿರಾಟ್‌ ಕೊಹ್ಲಿ 51 ರನ್‌ (5 ಬೌಂಡರಿ, 1 ಸಿಕ್ಸರ್‌) ಚಚ್ಚಿದರೆ, ಸೂರ್ಯಕುಮಾರ್‌ ಯಾದವ್‌ 2 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಇದನ್ನೂ ಓದಿ: World Cup 2023: ಹಿಟ್‌ಮ್ಯಾನ್‌ ಸಿಕ್ಸರ್‌ ಹೊಡೆತಕ್ಕೆ ಲೆಜೆಂಡ್‌ ABD ದಾಖಲೆ ಪುಡಿಪುಡಿ

    ವಿಶೇಷ ಸಾಧನೆ: ಡಚ್ಚರ ವಿರುದ್ಧ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಟೀಂ ಇಂಡಿಯಾ ಪರ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಆರಂಭಿಕನಾಗಿಯೇ 14 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಅಲ್ಲದೇ ಒಟ್ಟು 60 ಸಿಕ್ಸರ್‌ ಸಿಡಿಸುವ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ ನಂ.1 ಆಟಗಾರ ಎನಿಸಿಕೊಂಡರು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನ ಪೂರೈಸಿದರೆ, ವಿರಾಟ್‌ ಕೊಹ್ಲಿ 70 ಅರ್ಧಶತಕ ದಾಖಲಿಸಿದರು.

    ನೆದರ್ಲೆಂಡ್ಸ್‌ ಪರ ಬಾಸ್ ಡಿ ಲೀಡೆ 10 ಓವರ್‌ಗಳಲ್ಲಿ 82 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರೆ, ಪಾಲ್ ವ್ಯಾನ್ ಮೀಕೆರೆನ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ವಿಜಯದ ನಾಗಾಲೋಟದತ್ತ ಟೀಂ ಇಂಡಿಯಾ- ಕೊನೆಯ ಲೀಗ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ