Tag: Shubhanshu Shukla

  • ಅಹಮದಾಬಾದ್‌ನಲ್ಲಿ ಮುಖಾಮುಖಿ; ಗಗನಯಾನಿ ಶುಭಾಂಶು ಶುಕ್ಲಾ ಅಭಿನಂದಿಸಿದ ಸಚಿವ ಜೋಶಿ

    ಅಹಮದಾಬಾದ್‌ನಲ್ಲಿ ಮುಖಾಮುಖಿ; ಗಗನಯಾನಿ ಶುಭಾಂಶು ಶುಕ್ಲಾ ಅಭಿನಂದಿಸಿದ ಸಚಿವ ಜೋಶಿ

    ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಂದು ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಮುಖಾಮುಖಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದ್ರು.

    ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ಭೇಟಿಯಾದ ಇಬ್ಬರೂ ಕೆಲ ಕಾಲ ಪರಸ್ಪದ ಚರ್ಚೆ ನಡೆಸಿದರು. ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನದ ಅನುಭವಗಳನ್ನ ಆಲಿಸಿದ ಸಚಿವ ಜೋಶಿ (Pralhad Joshi) ಹರ್ಷ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    Shubanshu Shukla 1

    ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ನಡೆಸಿದ ಮೊಳಕೆ ಕಾಳುಗಳ ಪ್ರಯೋಗವನ್ನು ಐಐಟಿ ಧಾರವಾಡ ಮತ್ತು ಯುಎಎಸ್ ಧಾರವಾಡ ಸಂಯೋಜಿಸಿ ರೂಪಿಸಿದ್ದರ ಬಗ್ಗೆ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡ್ತಿರುವ ವೀಡಿಯೋ ರಿಲೀಸ್ ಮಾಡಿದ ಬಿಗ್‌ಬಾಸ್ ಟೀಂ

    ಶುಕ್ಲಾ ಅವರ ‎ಈ ಸ್ಫೂರ್ತಿದಾಯಕ ಪ್ರಯಾಣವು ಬಾಹ್ಯಾಕಾಶ ಯಾನದಲ್ಲಿ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಅವರ ಸಾಧನೆಗೆ ಇಡೀ ಭಾರತವೇ ಹೆಮ್ಮೆಪಡುತ್ತದೆ ಎಂದು ಸಚಿವ ಜೋಶಿ ಇದೇ ವೇಳೆ ಸಂತಸ ವ್ಯಕ್ತಪಡಿಸುತ್ತಾ ಶುಕ್ಲಾರನ್ನ ಅಭಿನಂದಿಸಿದರು. ಇದನ್ನೂ ಓದಿ: ಕಾರವಾರ| ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಶವ ಪತ್ತೆ

  • ಇಂದು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಗಗನಯಾತ್ರಿ ಶುಭಾಂಶು ಶುಕ್ಲಾ

    ಇಂದು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಗಗನಯಾತ್ರಿ ಶುಭಾಂಶು ಶುಕ್ಲಾ

    ನವದೆಹಲಿ: ಆಕ್ಸಿಯಂ-4 ಮಿಷನ್ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರು ಸೋಮವಾರ (ಇಂದು) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ.

    ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ಭೇಟಿ ಕೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶುಕ್ಲಾ ಅವರು, ಭೂಮಿಗೆ ಮರಳಿದ ಬಳಿಕ ಮೊದಲ ಬಾರಿಗೆ ತಾಯ್ನಾಡು ಭಾರತಕ್ಕೆ (India) ಮರಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

    ಇಂದು ಪ್ರಧಾನಿ ಮೋದಿ ಅವರನ್ನು ಶುಭಾಂಶು ಶುಕ್ಲಾ ಅವರು ಭೇಟಿಯಾಗಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಈ ಬಗ್ಗೆ ಬಿಜೆಪಿಯು ಲೋಕಸಭೆಯಲ್ಲಿ ಚರ್ಚೆಗೆ ಪ್ರಸ್ತಾವನೆ ಇಟ್ಟಿದ್ದಾರೆ. ಮೋದಿ ಭೇಟಿ ಬಳಿಕ ಶುಕ್ಲಾ ಅವರು ತಮ್ಮ ತವರು ಲಕ್ನೋಗೆ ಪ್ರಯಾಣಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ಭಾನುವಾರ ಮಧ್ಯರಾತ್ರಿ 1:30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಏರ್‌ಪೋರ್ಟ್ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತ್ತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಸಿಎಂ ರೇಖಾ ಗುಪ್ತಾ, ಶುಭಾಂಶು ಶುಕ್ಲಾರನ್ನ ಬರಮಾಡಿಕೊಂಡಿದ್ದರು.

    ಆಕ್ಸಿಯಂ-4 ಮಿಷನ್‌ಗಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ, 2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಎದುರು ನೋಡುತ್ತಿರುವುದರಿಂದ ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

    ಆಗಸ್ಟ್ 22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ಅವರು ದೆಹಲಿಗೆ ಹಿಂದಿಗಲಿದ್ದಾರೆ ಎಂದು ಹೇಳಲಾಗಿದೆ.

  • ತಾಯ್ನಾಡಿಗೆ ಬಂದಿಳಿದ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಅದ್ದೂರಿ ಸ್ವಾಗತ

    ತಾಯ್ನಾಡಿಗೆ ಬಂದಿಳಿದ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಅದ್ದೂರಿ ಸ್ವಾಗತ

    ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಭಾರತಕ್ಕೆ (India) ವಾಪಸ್ ಆಗಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಮೊದಲ ಬಾರಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ತಾಯ್ನಾಡಿಗೆ ಮರಳಿದ್ದಾರೆ.

    ಅಮೆರಿಕದಿಂದ ಮಧ್ಯರಾತ್ರಿ 1:30ರ ವೇಳೆಗೆ ದೆಹಲಿಗೆ (Delhi) ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಸಿಎಂ ರೇಖಾ ಗುಪ್ತಾ, ಶುಭಾಂಶು ಶುಕ್ಲಾರನ್ನ ಬರಮಾಡಿಕೊಂಡರು. ಶುಕ್ಲಾ ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ಬಳಿಕ, ತಮ್ಮ ತವರು ಲಕ್ನೋಗೆ ಪ್ರಯಾಣಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾನುವಾರ ಭಾರತಕ್ಕೆ ಶುಭಾಂಶು ಶುಕ್ಲಾ: ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ತವರಿಗೆ ಮೊದಲ ಭೇಟಿ

    ಆಕ್ಸಿಯಂ-4 ಮಿಷನ್‍ಗಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ, 2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಎದುರು ನೋಡುತ್ತಿರುವುದರಿಂದ ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಆಗಸ್ಟ್ 22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ಅವರು ದೆಹಲಿಗೆ ಹಿಂದಿರುಗುತ್ತಾರೆ ಎಂದು ಹೇಳಲಾಗಿದೆ.

    ಐಎಸ್‍ಎಸ್‍ನಲ್ಲಿ 18 ದಿನಗಳನ್ನು ಕಳೆದ ನಂತರ ಗಗನಯಾತ್ರಿ ಕಳೆದ ತಿಂಗಳು ಭೂಮಿಗೆ ಮರಳಿದ್ದರು. ಈ ಅವಧಿಯಲ್ಲಿ ಅವರು ಭಾರತಕ್ಕೆ ಸಂಬಂಧಿಸಿದ ಏಳು ನಿರ್ದಿಷ್ಟ ಪ್ರಯೋಗಗಳನ್ನು ನಡೆಸಿದ್ದಾರೆ. ಅವುಗಳನ್ನು ಈಗ ಭಾರತೀಯ ವಿಜ್ಞಾನಿಗಳು ಪರಿಶೀಲನೆಗಾಗಿ ಮರಳಿ ತರಲಾಗಿದ್ದು, ಫಲಿತಾಂಶಗಳು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

  • ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

    ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

    ನವದೆಹಲಿ: ಬಾಹ್ಯಾಕಾಶದಲ್ಲಿ 18 ದಿನ ಕಳೆದು ವಾಪಸ್‌ ಆದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ (Shubhanshu Shukla) ಭೂಮಿಗೆ ಹೊಂದಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

    ಕಳೆದ ವಾರ ಯಶಸ್ವಿ ಬಾಹ್ಯಾಕಾಶ ಯಾನದಿಂದ ಹಿಂದಿರುಗಿದ ಭಾರತೀಯ ಗಗನಯಾತ್ರಿ ಶುಕ್ಲಾ, ಭೂಮಿಯ ಮೇಲೆ ನಡೆಯಲು ಕಲಿಯುತ್ತಿದ್ದಾರೆ. ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಜೂನ್ 25 ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದ ನಾಲ್ವರು ಗಗನಯಾತ್ರಿಗಳು ಶುಕ್ಲಾ ಕೂಡ ಒಬ್ಬರು. ಐಎಸ್‌ಎಸ್‌ನಲ್ಲಿ ಸುಮಾರು 18 ದಿನಗಳನ್ನು ಕಳೆದ ನಂತರ ಅವರು ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದರು. ಇದನ್ನೂ ಓದಿ: ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

     

    View this post on Instagram

     

    A post shared by Shubhanshu Shukla (@gagan.shux)

    ಶುಕ್ಲಾ ಅವರು ಮತ್ತೆ ನಡೆಯಲು ಪ್ರಯತ್ನಿಸುತ್ತಿರುವ ಮತ್ತು ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಮಕ್ಕಳು ಆಗ ತಾನೆ ನಡೆಯುವುದನ್ನು ಕಲಿಯುತ್ತಿರುವಂತೆ ಇರುವ ದೃಶ್ಯ ವೀಡಿಯೋದಲ್ಲಿದೆ. ಶುಕ್ಲಾ ಅವರು ನಡೆಯಲು ಇಬ್ಬರು ಸಹಾಯ ಮಾಡುತ್ತಿದ್ದಾರೆ.

    ಬೇಗ ಚೇತರಿಸಿಕೊಳ್ಳಿ ಎಂದು ನನಗೆ ಅನೇಕರು ಸಂದೇಶ ಕಳುಹಿಸುತ್ತಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ನಿಮಗೆಲ್ಲರಿಗೂ ಧನ್ಯವಾದ. ಗುರುತ್ವಾಕರ್ಷಣೆ ಇಲ್ಲದ ವಾತಾವರಣಕ್ಕೆ ನನ್ನ ದೇಹ ಒಗ್ಗಿಕೊಂಡಿತ್ತು. ಈಗ ಗುರುತ್ವಾಕರ್ಷಣೆಗೆ ಮರಳಿದಾಗ, ಇಲ್ಲಿಗೆ ಮತ್ತೆ ಹೊಂದಿಕೊಳ್ಳಬೇಕು. ನನ್ನ ದೇಹ ಬಹುಬೇಗ ಭೂಮಿ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದನ್ನು ಕಂಡು ನನಗೆ ಅಚ್ಚರಿಯಾಯಿತು ಎಂದು ಶುಕ್ಲಾ ತಿಳಿಸಿದ್ದಾರೆ.

    ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು ವೈದ್ಯಕೀಯ ಮತ್ತು ಮರು-ಹೊಂದಾಣಿಕೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಜುಲೈ 23 ರವರೆಗೆ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಉಲ್ಲೇಖಿಸಿ ಅಧಿಕೃತ ಹೇಳಿಕೆ ತಿಳಿಸಿದೆ. ಇದನ್ನೂ ಓದಿ: ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

    ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುಕ್ಲಾ ಅವರ ಮೂರು ವಾರಗಳ ವಾಸ್ತವ್ಯವು ಭಾರತವು ತನ್ನದೇ ಆದ ಗಗನಯಾನ ಯೋಜನೆಗೆ ತಯಾರಿ ನಡೆಸುತ್ತಿರುವಾಗ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಿರ್ವಹಿಸಲು ಕೊಡುಗೆ ನೀಡಿದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

  • ಈ ಬಾರಿ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳಿಸಬೇಕಿತ್ತು : ಕಾಂಗ್ರೆಸ್ ನಾಯಕ ಉದಿತ್ ರಾಜ್

    ಈ ಬಾರಿ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳಿಸಬೇಕಿತ್ತು : ಕಾಂಗ್ರೆಸ್ ನಾಯಕ ಉದಿತ್ ರಾಜ್

    ನವದೆಹಲಿ: ಆಕ್ಸಿಯಮ್-4 (Axiom-4) ಬಾಹ್ಯಾಕಾಶ ಯಾತ್ರೆಗೆ ದಲಿತ ವ್ಯಕ್ತಿಯನ್ನು ಏಕೆ ಆಯ್ಕೆ ಮಾಡಿಲ್ಲ? ಈ ಬಾರಿ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಿತ್ತು ಎಂದು ಕಾಂಗ್ರೆಸ್ (Congress) ನಾಯಕ ಉದಿತ್ ರಾಜ್ (Udit Raj) ಹೇಳಿದ್ದಾರೆ.

    ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅವರು ವೈಜ್ಞಾನಿಕ ಸಾಧನೆಯನ್ನೂ ಸಹ ರಾಜಕೀಯಗೊಳಿಸುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

    ಆಕ್ಸಿಯಮ್-4 ಬಾಹ್ಯಾಕಾಶ ಯಾತ್ರೆಗೆ ಹೋಗಿ ಶುಭಾಂಶು ಶುಕ್ಲಾ (Shubhanshu Shukla) ವಾಪಸ್‌ ಆಗಿದ್ದಾರೆ. ಈ ಹೊತ್ತಲ್ಲಿ ಕ್ಯಾಪ್ಟನ್ ಶುಕ್ಲಾ ಬದಲಿಗೆ ದಲಿತ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂದು ಅವರು ಪ್ರಶ್ನೆ ಎತ್ತಿದ್ದಾರೆ. ಇದರಿಂದ ‘ಅರ್ಹತೆ ಮತ್ತು ಮೀಸಲಾತಿ’ ಬಗೆಗಿನ ಚರ್ಚೆ ಆರಂಭಗೊಂಡಿದೆ.

    ರಾಕೇಶ್ ಶರ್ಮಾ ಅವರನ್ನು ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಿದಾಗ, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಲ್ಲಿ ಹೆಚ್ಚು ವಿದ್ಯಾವಂತ ಜನರು ಇರಲಿಲ್ಲ ಎನ್ನೋಣ ಬಿಡಿ. ಆದರೆ ಈ ಬಾರಿ, ಈ ಸಮುದಾಯಗಳಿಂದ ಯಾರನ್ನಾದರೂ ಕಳುಹಿಸಬಹುದಿತ್ತು. ಈ ಬಾರಿ, ದಲಿತರನ್ನು ಕಳುಹಿಸುವ ಸರದಿ ಬಂದಿತ್ತು, ನಾಸಾ ಪರೀಕ್ಷೆ ನಡೆಸಿ, ಆಯ್ಕೆ ಮಾಡಿಲ್ಲ. ಶುಕ್ಲಾ ಅವರ ಬದಲಿಗೆ ಯಾವುದೇ ದಲಿತ ಅಥವಾ ಒಬಿಸಿ ವ್ಯಕ್ತಿಯನ್ನು ಕಳುಹಿಸಬಹುದಿತ್ತು ಎಂದಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

    ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಐಎಸ್‌ಎಸ್‌ನಲ್ಲಿ 18 ದಿನಗಳ ವಾಸ್ತವ್ಯದ ಬಳಿಕ ಶುಭಾಂಶು ಶುಕ್ಲಾ ವಾಪಸ್‌ ಆಗಿದ್ದಾರೆ. ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್‌ ಆಗಿದ್ದಾರೆ.

    2019 ರಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟ ನಂತರ ಬಿಜೆಪಿಯನ್ನು ತೊರೆದು ಉದಿತ್‌ ರಾಜ್ ಕಾಂಗ್ರೆಸ್ ಸೇರಿದ್ದರು. ಇದನ್ನೂ ಓದಿ: ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

  • ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

    ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

    ನವದೆಹಲಿ: ಐಎಎಫ್‌ ಗ್ರೂಪ್‌ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಸೇರಿದಂತೆ ಆಕ್ಸಿಯಮ್ -4 (Axiom-4) ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮಂಗಳವಾರ ಯಶಸ್ವಿಯಾಗಿ ಭೂಮಿಗೆ ವಾಪಸ್‌ ಆಯಿತು. ತಮ್ಮ ಪುತ್ರ ಸುರಕ್ಷಿತವಾಗಿ ವಾಪಸ್‌ ಆಗಿದ್ದನ್ನು ಕಂಡು ಪೋಷಕರು ಭಾವುಕರಾದರು.

    ನನ್ನ ಮಗ ಸುರಕ್ಷಿತವಾಗಿ ಮರಳಿದ್ದಾನೆ. ನಾನು ಭಾವುಕಳಾಗಿದ್ದೇನೆ. ನನ್ನ ಮಗ ಹಲವು ದಿನಗಳ ನಂತರ ಮರಳಿದ್ದಾನೆ. ಈ ಕಾರ್ಯಕ್ರಮವನ್ನು ವರದಿ ಮಾಡಿದ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಶುಕ್ಲಾ ಅವರ ತಾಯಿ ಆಶಾ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

    ನಾವು ಹನುಮಂತನ ದರ್ಶನ ಪಡೆದೆವು. ಸುಂದರಕಾಂಡ ಪಠಣವನ್ನೂ ಮಾಡಿದೆವು. ನಾವು ಅವನಿಗೆ ಭವ್ಯ ಸ್ವಾಗತ ಕೋರಿದ್ದೇವೆ ಎಂದು ತಿಳಿಸಿದ್ದಾರೆ.

    ಪುತ್ರ ನಮಗೆ ಕೀರ್ತಿ ತಂದಿದ್ದಾನೆ. ಶುಕ್ಲಾ ಇಡೀ ರಾಷ್ಟ್ರಕ್ಕೆ ಸೇರಿದವನು. ಇತಿಹಾಸ ಪುಟದಲ್ಲಿ ಅವನ ಹೆಸರು ದಾಖಲಾಗಿದೆ ಎಂದು ಶುಕ್ಲಾ ಅವರ ತಂದೆ ಶಂಭು ದಯಾಳ್ ಶುಕ್ಲಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

    2025 ರ ಜೂ.26 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆಕ್ಸ್-4 ಕಾರ್ಯಾಚರಣೆಯು, ಆರು ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದೆ. ಭೂಮಿಯ ಸುತ್ತ 250 ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ.

    ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್‌ ಆಗಿದ್ದಾರೆ.

  • ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

    ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

    – ಶುಕ್ಲಾ ಬಾಹ್ಯಾಕಾಶ ಯಾನವು ಶತಕೋಟಿ ಕನಸುಗಳಿಗೆ ಸ್ಫೂರ್ತಿ ಎಂದ ಪ್ರಧಾನಿ

    ನವದೆಹಲಿ: ಐತಿಹಾಸಿಕ ಬಾಹ್ಯಾಕಾಶ ಯಾನ ಪೂರೈಸಿ ಭೂಮಿಗೆ ವಾಪಸ್‌ ಆದ ಗಗನಯಾತ್ರಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ (Shubhanshu Shukla) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರಿದ್ದಾರೆ.

    ಶುಕ್ಲಾ ಅವರ ಪ್ರಯಾಣವು ಶತಕೋಟಿ ಕನಸುಗಳಿಗೆ ಸ್ಫೂರ್ತಿ. ಇದು ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ ಗಗನಯಾನಕ್ಕೆ ಒಂದು ಮೈಲಿಗಲ್ಲು ಎಂದು ಮೋದಿ ಬಣ್ಣಿಸಿದ್ದಾರೆ. ಇದನ್ನೂ ಓದಿ: ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

    ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಐತಿಹಾಸಿಕ ಬಾಹ್ಯಾಕಾಶ ಕಾರ್ಯಾಚರಣೆಯಿಂದ ಭೂಮಿಗೆ ಮರಳುತ್ತಿರುವುದನ್ನು ಸ್ವಾಗತಿಸಲು ನಾನು ರಾಷ್ಟ್ರದೊಂದಿಗೆ ಸೇರುತ್ತೇನೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿಯಾಗಿ, ಅವರು ತಮ್ಮ ಸಮರ್ಪಣೆ, ಧೈರ್ಯ ಮತ್ತು ಪ್ರವರ್ತಕ ಮನೋಭಾವದ ಮೂಲಕ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇದು ನಮ್ಮದೇ ಆದ ಮಾನವ ಬಾಹ್ಯಾಕಾಶ ಹಾರಾಟ ಮಿಷನ್- ಗಗನಯಾನಕ್ಕೆ ಮತ್ತೊಂದು ಮೈಲಿಗಲ್ಲು ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    2025 ರ ಜೂ.26 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆಕ್ಸ್-4 (Axiom-4 mission) ಕಾರ್ಯಾಚರಣೆಯು, ಆರು ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದೆ. ಭೂಮಿಯ ಸುತ್ತ 250 ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ. ಇದನ್ನೂ ಓದಿ: ಭುವಿಗೆ ಶುಭಾಂಶು ಶುಕ್ಲಾ – ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಸ್ಪ್ಲ್ಯಾಷ್‌ ಡೌನ್

    ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್‌ ಆಗಿದ್ದಾರೆ.

  • ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

    ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

    ಅಂತರಿಕ್ಷದಲ್ಲಿ ಮಾನವನ ಜೀವನ ಹೇಗೆ ಇರುತ್ತದೆ ಎನ್ನುವ ಕುರಿತು ಯೋಚಿಸಿದಾಗ ಹಲವು ಪ್ರಶ್ನೆಗಳು ಮುಂದೆ ಬರುತ್ತವೆ. ಮಾನವನಿಗೆ ಉಸಿರಾಟ, ಆಹಾರ ಹಾಗೂ ನೀರು ಹೇಗೆ ಮೂಲಭೂತ ಅವಶ್ಯಕತೆಗಳೋ ಹಾಗೆಯೇ ಮಲ, ಮೂತ್ರ ವಿಸರ್ಜನೆಯು ಮಾನವನ ಜೀವನ ಶೈಲಿ ಆರೋಗ್ಯಕರವಾಗಿರಿಸಲು ಸಹಾಯಮಾಡುತ್ತದೆ.

    ಹೌದು, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಜೀವನ ಶೈಲಿ ಹಾಗೂ ದೈನಂದಿನ ಕ್ರಿಯೆಗಳು ಇರುತ್ತವೆ. ಆ ಕ್ರಿಯೆಗಳಲ್ಲಿ ಯಾವುದಾದರೂ ಒಂದು ಏರುಪೇರು ಆದರೂ ಕೂಡ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಮಲ, ಮೂತ್ರ ವಿಸರ್ಜನೆಯ ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಬಾಹ್ಯಾಕಾಶದಲ್ಲಿ ಮಾನವನ ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸವಾಲು. ಗುರುತ್ವಾಕರ್ಷಣೆ ಇಲ್ಲದ ಈ ಪರಿಸರದಲ್ಲಿ ಮಾನವನ ತ್ಯಾಜ್ಯ ಹೇಗೆ ನಿರ್ವಹಿಸಲಾಗುತ್ತದೆ. ಅದಲ್ಲದೆ ಭೂಮಿಯಿಂದ ಬಾಹ್ಯಾಕಾಶಕ್ಕೆ ವಸ್ತುಗಳ ಮರುಪೂರೈಕೆ ತುಂಬಾ ಕಷ್ಟಕರವಾದದ್ದು. ಆದರೆ ಯಾವುದೇ ಪೂರೈಕೆ ಇದ್ದರೂ ಕೂಡ ಅದರ ವೆಚ್ಚ ಕೂಡ ಜಾಸ್ತಿ.

    ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವ ಕಾರಣ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಭೂಮಿಯ ಮೇಲಿರುವ ಪ್ರತಿಯೊಬ್ಬ ಮಾನವ ಹಾಗೂ ಪ್ರಾಣಿಗಳು ನಡೆದುಕೊಂಡು ಜೀವನ ನಡೆಸುತ್ತವೆ. ಇನ್ನೂ ಕೆಲವು ನಡೆದುಕೊಂಡು ಹಾಗೂ ಹಾರಾಟ ನಡೆಸಿ ಜೀವನ ನಡೆಸುತ್ತವೆ. ಹೀಗಿರುವಾಗ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳು ತೇಲಾಡಿಕೊಂಡು ಜೀವನ ನಡೆಸುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ನಡೆಯುತ್ತಿರುವ ಮನುಷ್ಯ ದಿಡೀರನೆ ತೇಲಾಡಿಕೊಂಡು ಬದುಕುವ ಅಭ್ಯಾಸ ಮಾಡಿದಾಗ ದೇಹದ ಮೇಲೆ ಅಥವಾ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂತರಿಕ್ಷಕ್ಕೆ ತೆರಳಿದ ಪ್ರಾರಂಭದ ದಿನಗಳಲ್ಲಿ ಮನುಷ್ಯನಿಗೆ ವಾಂತಿ, ಮಲ, ಮೂತ್ರ ವಿಸರ್ಜನೆಯಲ್ಲಿ ಪರಿಣಾಮ ಬೀರಬಹುದು. ಹೀಗಾಗಿ ಕೆಲವು ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.

    ವಿಮಾನದಲ್ಲಿ ಪ್ರಯಾಣಿಸುವಾಗ ಅಥವಾ ಇನ್ನಿತರೆ ದೇಶಗಳಲ್ಲಿ ವಾಂತಿ ಮಾಡುವಾಗ ಕೆಲವು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಅದೇ ರೀತಿ ಬಾಹ್ಯಾಕಾಶದಲ್ಲಿಯೂ ಕೂಡ ವಾಂತಿಗಾಗಿ `ಸ್ಪೇಸ್ ಸಿಕ್ನೆಸ್ ಬ್ಯಾಗ್’ ಗಳನ್ನು ಬಳಸುತ್ತಾರೆ. ಇವುಗಳಿಗೆ ಸೋರಿಕೆಯಾಗದಂತೆ ಬಿಗಿಯಾದ ಮುಚ್ಚುವಿಕೆಯನ್ನು ನೀಡಲಾಗಿರುತ್ತದೆ. ಬಳಿಕ ಇವುಗಳನ್ನು ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಇಡಲಾಗುತ್ತದೆ.

    ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ವಿಶೇಷ ಶೌಚಾಲಯಗಳ ಬಳಕೆ ಮಾಡಲಾಗುತ್ತಿದೆ. ಮಲ, ಮೂತ್ರ ವಿಸರ್ಜನೆಗಾಗಿ ಪ್ರತ್ಯೇಕ ಕೊಠಡಿಯ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ಇದರಲ್ಲಿ ಚಿಕ್ಕದಾದ ಕಮೋಡ್ ರೀತಿಯಲ್ಲಿರುತ್ತದೆ. ಅದರಲ್ಲಿ ಒಂದು ಚಿಕ್ಕದಾದ ಕೊಳವೆಯನ್ನು ನಿರ್ಮಿಸಿರುತ್ತಾರೆ. ಇನ್ನು ಅದರ ಮೇಲೆ ಕುಳಿತಾಗ ಕಾಲುಗಳಿಡಲು ಎರಡು ಹೋಲ್ಡರ್ ಗಳ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ತ್ಯಾಜ್ಯವನ್ನು ತೇಲದಂತೆ ಮಾಡಲು ಹಾಗೂ ವಾಸನೆಯನ್ನು ನಿಯಂತ್ರಿಸಲು ಶೌಚಾಲಯದ ಕೊಳವೆಯ ಮೇಲೆ ಬಿಗಿಯಾದ ಮುಚ್ಚಳವನ್ನು ನಿರ್ಮಿಸಲಾಗಿರುತ್ತದೆ. ಇದರ ಪಕ್ಕದಲ್ಲಿ ಎರಡು ಗಾಳಿ ನಿಯಂತ್ರಿತ ಪೈಪ್‌ಗಳನ್ನು ನಿರ್ಮಿಸಲಾಗಿರುತ್ತದೆ. ಇವುಗಳನ್ನು ಬಳಸಿ ಮಲ ಹಾಗೂ ಮೂತ್ರದ ವಾಸನೆ ಬರದಂತೆ ಉಪಯೋಗಿಸಲಾಗುತ್ತದೆ.

    ಪ್ರತಿ ಬಾರಿ ಮಲ,ಮೂತ್ರ ವಿಸರ್ಜನೆಗೆ ಹೋದಾಗ ಈ ಗಾಳಿಯ ಪೈಪನ್ನು ತೆರೆದು ಬಿಡುತ್ತಾರೆ. ಆಗ ಅದು ಗಾಳಿ ಸೂಸಲು ಪ್ರಾರಂಭಿಸುತ್ತದೆ. ಬಳಿಕ ಮಲ ವಿಸರ್ಜನೆಗೆ ಹೋಗುವ ಮುನ್ನ ಸಂಗ್ರಹಿಸಿಟ್ಟಿರುವ ಪ್ಲಾಸ್ಟಿಕ್ ಕವರ್ ನ್ನು ಚಿಕ್ಕ ಕೊಳವೆಯೊಳಗೆ ತೆರದು ಹಾಕುತ್ತಾರೆ. ಬಳಿಕ ತಮ್ಮ ಕೆಲಸ ಮುಗಿದ ನಂತರ ಆ ಪ್ಲಾಸ್ಟಿಕ್ ಅನ್ನು ಚೆನ್ನಾಗಿ ಬಿಗಿಗೊಳಿಸಿ, ಅದೇ ಕೊಳವೆಯೊಳಗೆ ಹಾಕಿ ಪ್ರೆಸ್ ಮಾಡಲಾಗುತ್ತದೆ. ಬಳಿಕ ಅದು ಮಲ ಸಂಗ್ರಹ ಜಾಗಕ್ಕೆ ಹೋಗುತ್ತದೆ. ಇನ್ನು ಮೂತ್ರ ವಿಸರ್ಜನೆಗೆ ಗಾಳಿಯ ಪೈಪ್ ಇರುತ್ತದೆ. ಆ ಪೈಪ್ ಅನ್ನು ತೆರೆದು ಆ ಪೈಪ್ ಮೂಲಕ ಮೂತ್ರ ವಿಸರ್ಜನೆ ಮಾಡಲಾಗುತ್ತದೆ.

    ಮಲ ಹಾಗೂ ಇನ್ಯಾವುದೇ ತ್ಯಾಜ್ಯಗಳನ್ನು ಪ್ರತಿ 30 ರಿಂದ 90  ದಿನಗಳಲ್ಲಿ ಭೂಮಿಗೆ ಕಳುಹಿಸಲಾಗುತ್ತದೆ. ಇನ್ನು ಮೂತ್ರವನ್ನು ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತದೆ. ಜೊತೆಗೆ ಬೆವರನ್ನು ಕೂಡ ಶುದ್ಧೀಕರಣ ಮಾಡಲಾಗುತ್ತದೆ. ಮೂತ್ರದ ಹಾಗೂ ಮಲದ ವಿಸರ್ಜನೆಯ ನಂತರ ಪ್ರತ್ಯೇಕ ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಮೂಲಕ ಮಲವನ್ನು ಭೂಮಿಗೆ ಕಳುಹಿಸಿದರೆ, ಮೂತ್ರವು ಇನ್ನೊಂದು ಭಾಗದಲ್ಲಿ ಶುದ್ಧೀಕರಣಗೊಂಡು ಮರು ಬಳಕೆಗೆ ಸಹಾಯಕವಾಗುತ್ತದೆ.

    ನಾಸಾ ಮಾಹಿತಿಯ ಪ್ರಕಾರ, ಮೂತ್ರ ಶುದ್ಧೀಕರಣದ ಬಳಿಕ ಭೂಮಿಯ ಮೇಲೆ ಸಿಗುವ ನೀರಿಗಿಂತ ಹೆಚ್ಚು ಶುದ್ಧವಾಗಿರುತ್ತದೆ ಎಂದು ತಿಳಿಸಿದೆ. ಇದೇ ರೀತಿ ಮಲ, ವಾಂತಿ ಹಾಗೂ ಇನ್ಯಾವುದೇ ತ್ಯಾಜ್ಯವನ್ನು ಬಿಗಿಯಾಗಿ ಸಂಗ್ರಹಿಸಿದಲಾಗುವ ಪ್ಲಾಸ್ಟಿಕ್ ಗಳಲ್ಲಿ ಸಂಗ್ರಹಿಸಿ, ಬಳಿಕ ಅದನ್ನು ಭೂಮಿಗೆ ತಂದು ಸುಟ್ಟು ಹಾಕಲಾಗುತ್ತದೆ. ಈ ರೀತಿ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಸದ್ಯ ಮಲವನ್ನು ಸುಟ್ಟು ಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮರುಬಳಕೆ ಮಾಡಬೇಕು ಎನ್ನುವ ಉದ್ದೇಶದಿಂದ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ.

    ಇನ್ನು ಮುಂದಿನ ದಿನಗಳಲ್ಲಿ ಚಂದ್ರ ಅಥವಾ ಮಂಗಳ ಗ್ರಹಕ್ಕೆ ದೀರ್ಘಕಾಲದ ಕಾರ್ಯಾಚರಣೆಗಾಗಿ ನಾಸಾ ತೆರಳಿದರೆ, ಆ ಸಮಯದಲ್ಲಿ ತ್ಯಾಜ್ಯ ವಿಲೇವಾರಿಗೆ ಇನ್ನಿತರ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ತ್ಯಾಜ್ಯಗಳನ್ನ ಸಂಪೂರ್ಣವಾಗಿ ಮರುಬಳಕೆ ಮಾಡುವಂತಹ ಗುರಿಯನ್ನು ನಾಸಾ ಹೊಂದಿದ್ದು, ಹೊಸ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ತೊಡಗಿಕೊಂಡಿದೆ.

    ನಾಸಾ ಲೂನಾರ್ ಲೂ ಚಾಲೆಂಜ್ ಎಂಬ ಜಾಗತಿಕ ಸ್ಪರ್ಧೆಯ ಮೂಲಕ ಇಂಜಿನಿಯರ್ ಗಳು, ವಿಜ್ಞಾನಿಗಳು ಹಾಗೂ ನವ ಉದ್ಯಮಿಗಳನ್ನು ಬಾಹ್ಯಾಕಾಶದಲ್ಲಿ ಬಳಸಲಾಗುವ ಶೌಚಾಲಯಗಳು ವಿವಿಧ ವಿನ್ಯಾಸಗಳನ್ನು ತಯಾರಿಸಲು ತೊಡಗಿಸಿದೆ. ಈ ಮೂಲಕ ಮಲ, ಮೂತ್ರ ಹಾಗೂ ವಾಂತಿಯನ್ನು ನೀರು, ಶಕ್ತಿ ಹಾಗೂ ಗೊಬ್ಬರದಂತಹ ಉಪಯುಕ್ತ ವಸ್ತುವನ್ನಾಗಿ ಪರಿವರ್ತಿಸಬೇಕು ಎಂಬ ಸವಾಲನ್ನು ನೀಡಿದೆ. ಈ ರೀತಿ ತಯಾರಾದರೆ ಮೂರು ಮಿಲಿಯನ್ ಡಾಲರ್ ( ಸುಮಾರು 25 ರಿಂದ 26 ಕೋಟಿ ರೂ.ಷ್ಟು) ಬಹುಮಾನ ನೀಡಲಿದೆ.

  • ಭೂಮಿಗೆ ಮರಳುವ ಶುಭಾಂಶು ಶುಕ್ಲಾಗೆ ISSನಲ್ಲಿ ಅದ್ಧೂರಿ ಬೀಳ್ಕೊಡುಗೆ – ಸಾರೇ ಜಹಾನ್‌ ಸೇ ಅಚ್ಚಾ ಎಂದ ಶುಕ್ಲಾ

    ಭೂಮಿಗೆ ಮರಳುವ ಶುಭಾಂಶು ಶುಕ್ಲಾಗೆ ISSನಲ್ಲಿ ಅದ್ಧೂರಿ ಬೀಳ್ಕೊಡುಗೆ – ಸಾರೇ ಜಹಾನ್‌ ಸೇ ಅಚ್ಚಾ ಎಂದ ಶುಕ್ಲಾ

    ನವದೆಹಲಿ: ಭೂಮಿಗೆ ವಾಪಸ್‌ ಆಗಲಿರುವ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.

    ಇಂದು ಭಾರತವು (India) ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯ, ನಿರ್ಭೀತ, ಆತ್ಮವಿಶ್ವಾಸ ಮತ್ತು ಹೆಮ್ಮೆಯಂತೆ ಕಾಣುತ್ತದೆ. ಭಾರತವು ಇನ್ನೂ ಸಾರೇ ಜಹಾನ್ ಸೆ ಅಚ್ಚಾ ಎಂದು ಶುಕ್ಲಾ ತಿಳಿಸಿದ್ದಾರೆ. ಆಕ್ಸಿಯಮ್ -4 (Axiom-4) ಸಿಬ್ಬಂದಿಗೆ ಔಪಚಾರಿಕ ವಿದಾಯ ಭಾನುವಾರ (ಭಾರತೀಯ ಸಮಯ) ಸಂಜೆ 7:20 ರ ಸುಮಾರಿಗೆ ಪ್ರಾರಂಭವಾಯಿತು. ಆಕ್ಸಿಯಮ್ ಸ್ಪೇಸ್‌ನ ಎಕ್ಸ್ ಹ್ಯಾಂಡಲ್ ವಿದಾಯ ಸಮಾರಂಭದ ನೇರಪ್ರಸಾರವನ್ನು ಒದಗಿಸಿದೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ 43 ಮಂದಿ ಸಾವು

    ವಿಶೇಷ ವಿದಾಯ ಸಮಾರಂಭವು ಆಕ್ಸಿಯಮ್ ಮಿಷನ್ 4 (ಆಕ್ಸ್-4) ಭಾಗವಾಗಿ ಶುಕ್ಲಾ ಅವರ ಐತಿಹಾಸಿಕ ಕಾರ್ಯಾಚರಣೆಯ ಮುಕ್ತಾಯವನ್ನು ಗುರುತಿಸಿತು. ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ಶುಕ್ಲಾ, ತಮ್ಮ ಸಹವರ್ತಿ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಅವರೊಂದಿಗೆ ನಾಸಾದ ಎಕ್ಸ್‌ಪೆಡಿಶನ್ 73 ಸಿಬ್ಬಂದಿಯೊಂದಿಗೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

    2025 ರ ಜೂ.26 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆಕ್ಸ್-4 ಕಾರ್ಯಾಚರಣೆಯು, ಆರು ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದೆ. ಭೂಮಿಯ ಸುತ್ತ 250 ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಥಾಪನೆಯಾಗುತ್ತಿದೆ ತಾಯಿ ಎದೆಹಾಲಿನ ಬ್ಯಾಂಕ್

    ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ.

    ಆಕ್ಸ್-4 ಗಗನಯಾತ್ರಿಗಳು ಜುಲೈ 14, ಸೋಮವಾರ ಸಂಜೆ 4:34 ಕ್ಕೆ ಭಾರತೀಯ ಕಾಲಮಾನದ ಪ್ರಕಾರ ಅನ್‌ಡಾಕಿಂಗ್‌ಗೆ ಸಿದ್ಧತೆಗಳನ್ನು ಅಂತಿಮಗೊಳಿಸಲಿದ್ದಾರೆ. ಭೂಮಿಗೆ ಹಿಂತಿರುಗುವ ಮೊದಲು ಪೂರ್ವ ಹಾರಾಟ ತಪಾಸಣೆ ನಡೆಸಲು ಗಗನಯಾತ್ರಿಗಳು ಭಾರತೀಯ ಕಾಲಮಾನ ಮಧ್ಯಾಹ್ನ 2:25 ಕ್ಕೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹತ್ತಲಿದ್ದಾರೆ.

    ಜುಲೈ 15 ರಂದು ಭಾರತೀಯ ಕಾಲಮಾನ ಮಧ್ಯಾಹ್ನ ಸರಿಸುಮಾರು 3:00 ಗಂಟೆಗೆ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಚಂಡಮಾರುತ ಬೀಸುವ ನಿರೀಕ್ಷೆಯಿದೆ. ಹಿಂದಿರುಗಿದ ನಂತರ, ಶುಕ್ಲಾ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಏಳು ದಿನಗಳ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಲಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೃಢಪಡಿಸಿದೆ. ಪುತ್ರನನ್ನು ಹೆಮ್ಮೆಯಿಂದ ಸ್ವಾಗತಿಸಲು ಕುಟುಂಬದವರು ಕಾತರದಿಂದ ಕಾಯುತ್ತಿದ್ದಾರೆ. ತವರಲ್ಲಿ ಭವ್ಯ ಸ್ವಾಗತ ಕೋರಲು ಯೋಜಿಸಲಾಗಿದೆ.

  • ಶುಭಾಂಶು ಶುಕ್ಲಾ ಜು.14ಕ್ಕೆ ಭೂಮಿಗೆ ವಾಪಸ್‌?

    ಶುಭಾಂಶು ಶುಕ್ಲಾ ಜು.14ಕ್ಕೆ ಭೂಮಿಗೆ ವಾಪಸ್‌?

    – ಎರಡು ವಾರಗಳಲ್ಲಿ 250 ಸೂರ್ಯೋದಯ ಕಂಡ ‘ಆಕ್ಸಿಯಮ್ -4’ ಗಗನಯಾತ್ರಿಗಳು

    ನವದೆಹಲಿ: ಎರಡು ವಾರಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಮಯ ಕಳೆದ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂದಿನ ವಾರ ಭೂಮಿಗೆ ಮರಳಲಿದ್ದಾರೆ. ಆಕ್ಸಿಯಮ್ -4 (ಆಕ್ಸ್ -4) ಮಿಷನ್ ಗಗನಯಾತ್ರಿಗಳು ಜುಲೈ 14 ರಂದು ಐಎಸ್‌ಎಸ್‌ನಿಂದ ಹಿಂತಿರುಗಲಿದ್ದಾರೆ ಎಂದು ನಾಸಾ ಗುರುವಾರ ಪ್ರಕಟಿಸಿದೆ.

    ನಾವು ಸ್ಟೇಷನ್ ಪ್ರೋಗ್ರಾಂನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆಕ್ಸಿಯಮ್ -4 ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ನಾವು ಆ ಕಾರ್ಯಾಚರಣೆಯನ್ನು ಅನ್‌ಡಾಕ್ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಅನ್‌ಡಾಕ್ ಮಾಡುವ ಟಾರ್ಗೆಟ್ ಜುಲೈ 14 ಆಗಿದೆ ಎಂದು ನಾಸಾ ಕಮರ್ಷಿಯಲ್ ಕ್ರೂ ಪ್ರೋಗ್ರಾಂನ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಮಿಷನ್ ಉಡಾವಣೆಗೊಂಡಿತು. 28 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮರುದಿನ ಬಾಹ್ಯಾಕಾಶ ನಿಲ್ದಾಣ ತಲುಪಿತು.

    ಶುಭಾಂಶು ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಅವರನ್ನೊಳಗೊಂಡ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಕಕ್ಷೆಯ ಪ್ರಯೋಗಾಲಯದಲ್ಲಿ ಎರಡು ವಾರಗಳ ಕೊನೆಯಲ್ಲಿ ಬಾಹ್ಯಾಕಾಶದಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿದ್ದಾರೆ.

    ಭೂಮಿಯಿಂದ ಸುಮಾರು 250 ಮೈಲುಗಳಷ್ಟು ಎತ್ತರದಲ್ಲಿರುವ ಗಗನಯಾತ್ರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವುದು, ಭೂಮಿಯ ನೋಟವನ್ನು ವೀಕ್ಷಿಸುವುದು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸಿ ಸಮಯ ಕಳೆಯುವ ಕೆಲಸ ಮಾಡಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಹೇಳಿಕೆ ಗುರುವಾರ ತಿಳಿಸಿದೆ.