Tag: Shubha punja

  • ವಿಚಿತ್ರ ಕಥಾಹಂದರದ ಜೊತೆ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ : ನಿರ್ದೇಶಕ ಶ್ರೀನಿ

    ವಿಚಿತ್ರ ಕಥಾಹಂದರದ ಜೊತೆ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ : ನಿರ್ದೇಶಕ ಶ್ರೀನಿ

    ನೀವೆಂದೂ ಕಂಡು ಕೇಳರಿಯದ ವಿಚಿತ್ರ ಕಥಾಹಂದರದ ಜೊತೆ ನಿಮ್ಮನ್ನೆಲ್ಲಾ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ, ಶ್ರೀನಿ ಹನುಮಂತರಾಜು ಹೊಸ ಸಾಹಸ, ಚಿತ್ರ ಪ್ರೇಮಿಗಳನ್ನು ಬೆರಗುಗೊಳಿಸಲಿದೆ ಎತ್ತಿನ ಭುಜ!

    ಕನ್ನಡ ಚಿತ್ರರಂಗದಲ್ಲಿ ಕ್ರೈಮ್ ಸ್ಟೋರಿ ಕುರಿತಾದ ನೂರೆಂಟು ಸಿನಿಮಾಗಳು ಬಂದಿವೆ. ಇದೀಗ ಅನ್‍ಟೋಲ್ಡ್ ಕ್ರೈಮ್ ಸ್ಟೋರಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಅಂಬುಜ (Ambuja) ರೆಡಿಯಾಗಿದ್ದಾಳೆ. ನೈಜ ಘಟನೆಯನ್ನ ಆಧಾರವಾಗಿಟ್ಟುಕೊಂಡು ನಿರ್ದೇಶಕ ಶ್ರೀನಿ ಹನುಮಂತರಾಜು ಅಂಬುಜ ಸಿನಿಮಾವನ್ನ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ನೋಟದಲ್ಲೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ,  ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಹುಟ್ಟಿಸಿರುವ ಅಂಬುಜ, ಅಂಬಾರಿ ಮೇಲೆ ಕೂತು ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಡುವ ಸಮಯ ಸನ್ನಿಹಿತವಾಗಿದೆ. ಇದೇ ಹೊತ್ತಿಗೆ ಎತ್ತಿನ ಭುಜದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ನಿರ್ದೇಶಕ ಶ್ರೀನಿ (Srini Hanumantharaju) ಹಲವು ನಿಗೂಢಗಳನ್ನು ಹೊರಹಾಕಿ ಕುತೂಹಲ ಕೆರಳಿಸಿದ್ದಾರೆ.

    ಎತ್ತಿನ ಭುಜ ಚಿಕ್ಕಮಂಗಳೂರಿನ ಬಳಿಯಿರುವ ಅತೀ ಎತ್ತರದ ಬೆಟ್ಟ. ಈ ಬೆಟ್ಟದ ಸುತ್ತಮುತ್ತ ಕೆಲವು ಸಿನಿಮಾ ಮಂದಿ ಶೂಟಿಂಗ್ ಮಾಡಿದ್ದಾರೆ. ಆದರೆ, ಬರೋಬ್ಬರಿ ಮೂರು ಕಿಲೋಮೀಟರ್ ಗಳಷ್ಟು ಎತ್ತರವಿರುವ ಎತ್ತಿನ ಭುಜ ಬೆಟ್ಟವನ್ನೇರುವ ಸಾಹಸವನ್ನು ಯಾರೊಬ್ಬರು ಮಾಡಿರಲಿಲ್ಲ. ಇದೇ ಮೊದಲ ಭಾರಿಗೆ ಅಂಬುಜ ಸಿನಿಮಾ ತಂಡ ಎತ್ತಿನ ಭುಜದ ತುತ್ತ ತುದಿಯನ್ನೇರಿ ಹಾಡೊಂದನ್ನು ಚಿತ್ರೀಕರಿಸಿದೆ. ಸ್ಯಾಂಡಲ್‍ವುಡ್‍ನ ಸಪೌಷ್ಠಿಕ ಸುಂದರಿ ಶುಭಪುಂಜಾ ಹಾಗೂ ದೀಪಕ್ ಸುಬ್ರಮಣ್ಯ ಕಾಂಬಿನೇಷನ್‍ನಲ್ಲಿ ಈ ಹಾಡು ಸುಂದರವಾಗಿ ಮೂಡಿಬಂದಿದೆ.

    ಹೀಗೆ ಎತ್ತಿನ ಭುಜದ ಬೆಟ್ಟದಲ್ಲಿ ಶೂಟಿಂಗ್ ಮಾಡಿ ಹೊಸದೊಂದು ದಾಖಲೆ ಬರೆದ ಚಿತ್ರತಂಡ, `ಮಗು ತಾಯಿಗೆ ಲಾಲಿ ಹಾಡುವ’ ಹಾಡೊಂದನ್ನು ರಚನೆ ಮಾಡುವುದರ ಮೂಲಕ ಗಂಧದಗುಡಿಯಲ್ಲಿ ಇತಿಹಾಸ ನಿರ್ಮಿಸಿದೆ. ಚಿತ್ರದ ನಿರ್ಮಾಪಕರಾದ ಕಾಶಿನಾಥ್ ಅವ್ರು ಸಾಹಿತ್ಯ ಬರೆದಿರುವ, ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿರುವ ಈ ಹಾಡು, ಈಗಾಗಲೇ ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಕನ್ನಡ ಕಲಾಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ತಾಯಿ ಪಾತ್ರದಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ ಕಾಣಿಸಿಕೊಂಡಿದ್ದು, ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ಮಿಂಚಿದ್ದಾಳೆ. ಇಬ್ಬರು ಲಂಬಾಣಿ ವೇಷಭೂಷಣ ತೊಟ್ಟು ಲಾಲಿ ಹಾಡಿಗೆ ಮೆರಗು ತುಂಬಿದ್ದಾರೆ.

    ಅಂಬುಜ ಒಂದು ಮಹಿಳಾ ಪ್ರಧಾನ ಚಿತ್ರ. ಇಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ (Rajini)ಹಾಗೂ ಶುಭಾ ಪುಂಜಾ (Shubha Punja) ಇಬ್ಬರು ಮುಖ್ಯಭೂಮಿಕೆಯಲ್ಲಿದ್ದಾರೆ. ಕ್ರೈಮ್ ರಿಪೋರ್ಟರ್ ಪಾತ್ರದಲ್ಲಿ ಶುಭ ಪುಂಜಾ ಕಾಣಸಿಗ್ತಾರೆ. ಪದ್ಮಜ ರಾವ್, ದೀಪಕ್ ಸುಬ್ರಮಣ್ಯ, ಗೋವಿಂದೇಗೌಡ, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್,  ಬೇಬಿ ಆಕಾಂಕ್ಷ, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಹಿಂದೆ ನಿರ್ದೇಶಕ ಶ್ರೀನಿಯವರು ‘ಕೆಲವು ದಿನಗಳ ನಂತರ’ ಹೆಸ್ರಲ್ಲೊಂದು ಸಿನಿಮಾ ಮಾಡಿದ್ದರು. ಹಾರರ್ ಕಥೆ ಮೂಲಕ ಕಣಕ್ಕಿಳಿದಿದ್ದ ಇವ್ರು ಪ್ರೇಕ್ಷಕ ಮಹಾಷಯರನ್ನ ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅಂಬುಜ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಮರ್ಡರ್ ಮಿಸ್ಟ್ರಿ, ಹಾರರ್, ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರುವ ಅಂಬುಜ ಚಿತ್ರವನ್ನ ಪ್ರೇಕ್ಷಕರ ಮಡಿಲಿಗೆ ಹಾಕೋದಕ್ಕೆ ಹೊರಟಿದ್ದಾರೆ. ಈ ಕುರಿತು ಮಾತನಾಡಿದ ಡೈರೆಕ್ಟರ್ ಶ್ರೀನಿಯವರು, ಹಾರರ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಕ್ಯಾಮರಾ ಸಡನ್ನಾಗಿ ಆಫ್ ಆಗ್ತಿತ್ತು, ಸಿನಿಮಾ ಟೀಮ್‍ನ ಸದಸ್ಯರಿಗೆ ಆರೋಗ್ಯ ಹದಗೆಡುತ್ತಿತ್ತು ಅಂತೇಳಿ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣ ನೆಗಟೀವ್ ಎನರ್ಜಿನಾ ಅನ್ನೋದು ಪ್ರಶ್ನೆ.

    ಅಂದ್ಹಾಗೇ, ಬೆಂಗಳೂರು, ಚಿಕ್ಕಮಂಗಳೂರು, ಗದಗದಲ್ಲಿ ಅಂಬುಜ ಸಿನಿಮಾ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸುವುದರ ಜೊತೆಗೆ ನಿರ್ಮಾಣದ ಜವಬ್ದಾರಿ ಹೊತ್ತ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ಅವರು ಎಸ್.ಕೆ.ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಬುಜ ಚಿತ್ರವನ್ನ ತೆರೆಗೆ ತರುತ್ತಿದ್ದಾರೆ. ಲೋಕೇಶ್ ಭೈರವ, ಶಿವಪ್ರಕಾಶ್. ಎನ್ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ತ್ಯಾಗರಾಜ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಹೊಸತನ ತೋರಿಸಿದ್ದಾರೆ.  ಜುಲೈ 21ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಮಾರ್ಸ್  ಸುರೇಶ್ ವಿತರಣೆ ಜವವ್ದಾರಿ ಹೊತ್ತಿದ್ದಾರೆ. ಎನಿವೇ ನಿರ್ದೇಶಕರ ಡೆಬ್ಯೂ ಚಿತ್ರ ಕೆಲವು ದಿನಗಳ ನಂತರ ಕಮಾಯಿ ಮಾಡಿದಂತೆ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗೆ ಡಬ್ ಆದಂತೆ ಈ ಸಿನಿಮಾವೂ ಪರಭಾಷೆಗೆ ಹೋಗಲಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದು, ಬೆಂಗಳೂರಿಗೆ ಬಂದು ಮಂಜು ಪಾವಗಡ ಅವರನ್ನು  ಭೇಟಿಯಾಗಿದ್ದಾರೆ.

    nidhi

    ಬಿಗ್‍ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಧಿ ತಮ್ಮ ದಿನನಿತ್ಯದ ಅಪ್ಡೇಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇಂದು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಮತ್ತೆ ಬೆಂಗಳೂರಿಗೆ ಬಿಗ್‍ಬಾಸ್ ವಿನ್ನರ್ ಮಂಜು ಪಾವಗಡ ಜೊತೆ ಬಂದಿದ್ದು, ನಮ್ಮನ್ನು ಬಿಟ್ಟ ಶುಭಾಗೆ ಧನ್ಯವಾದ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಶುಭಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿ ಬಿಡುವುದು ಮಾತ್ರವಲ್ಲ, ಬೇಗ ಸಿಗೋಣ ನಾನು ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ:  ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

     

    View this post on Instagram

     

    A post shared by Nidhi Subbaiah (@nidhisubbaiah)

    ಬಿಗ್‍ಬಾಸ್ ನಂತರ ನಿಧಿ ಸುಮಾರು 22 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದು, ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

    nidhi

    ಮದುವೆಯ ನಂತರ ನಿಧಿ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಂಡಿದ್ದರು. ಬಿಗ್‍ಬಾಸ್ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಯಾವ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

  • ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ದೊಡ್ಮನೆಯಲ್ಲಿ ಮತ್ತೆ ಮಾತಿನ ಕಲಹ ಪ್ರಾರಂಭವಾಗಿದೆ. ಪರಸ್ಪರ ಎದುರಾಳಿಗಳಾಗಿ ಟಾಸ್ಕ್ ಗಳಲ್ಲಿ ಆಡುತ್ತಿರುವ ಅರವಿಂದ್ ಮತ್ತು ನಿಧಿ ಸುಬ್ಬಯ್ಯ ಒಬ್ಬರಿಗೊಬ್ಬರು ಮಾತನಾಡದೆ ಇರುವಷ್ಟರ ಮಟ್ಟಿಗೆ ಜಗಳವಾಡಿಕೊಂಡು ಮನೆಯಲ್ಲಿ ಕುತೂಹಲ ಮೂಡಿಸಿದ್ದಾರೆ.

    ಅರವಿಂದ್ ಮತ್ತು ನಿಧಿ ಜಗಳದ ಬಳಿಕ ಅರವಿಂದ್ ಬಳಿ ಬಂದ ಶುಭಾ ಪೂಂಜಾ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಈ ವೇಳೆ ಅರವಿಂದ್, ನನಗೆ ನಿಧಿ ಯಾರು ಅಂತಾನೆ ಗೊತ್ತಿರಲಿಲ್ಲಾ ಬಿಗ್‍ಬಾಸ್ ಮನೆಗೆ ಬಂದ ನಂತರ ಗೊತ್ತಾಗಿದ್ದು, ನಾನು ಅವಳ ಬಗ್ಗೆ ಕೆಟ್ಟದಾಗಿ ಏನು ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಶುಭಾ ನನಗೆ ನೀವಿಬ್ಬರು ಚೆನ್ನಾಗಿ ಗೊತ್ತು ನೀವಿಬ್ಬರು ಕೂಡ ನನ್ನ ಉತ್ತಮವಾದ ಸ್ನೇಹಿತರು. ಇದೀಗ ನೀವು ಹೀಗೆ ಜಗಳ ಮಾಡಿಕೊಂಡರೆ ನಾನು ಏನು ಮಾಡೋದು. ನನಗೆ ಇಲ್ಲಿ ಇರುವವರೆಲ್ಲಾ ಸ್ನೇಹಿತರೆ. ನಾನೀಗ ಯಾರ ಪರ ನಿಲ್ಲುವುದು ಎಂದು ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ನಾನು ಮತ್ತು ಮಂಜು ಮಾತನಾಡುತ್ತಿರುವಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಮುಚ್ಚು ಎಂದಿದ್ದೆ ಅದರಲ್ಲಿ ಏನು ತಪ್ಪು ಎಂದು ಅರವಿಂದ್ ಶುಭಾಗೆ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶುಭಾ ನೀನು ಎಲ್ಲರ ಮುಂದೆ ಆ ರೀತಿ ಹೆಳಿದರೆ ಅವಳಿಗೂ ನೋವಾಗಲ್ವ ಎಂದಿದ್ದಾರೆ. ಬಳಿಕ ಅರವಿಂದ್ ಅವಳು ನನಗೆ ಏನೇನೊ ಹೇಳಿದ್ದಾಳೆ ನನಗೆ ಹೇಗೆ ಅನಿಸಬೇಕು. ನಾನು ಉದ್ದೇಶಪೂರ್ವಕವಾಗಿ ಕಟ್ಟ ಪದ ಬಳಸಿಲ್ಲ. ಅವಳು ದೊಡ್ಡ ಫಿಗರ್ ಆದರೆ ನಾನು ಕೂಡ ಫಿಗರ್. ನನಗೆ ಇಲ್ಲಿ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಈ ಬಗ್ಗೆ ನಾನು ಇನ್ನೂ ಅವಳೊಂದಿಗೆ ಏನು ಮಾತನಾಡೊದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

    ಅರವಿಂದ್ ಮತ್ತು ನಿಧಿ ಜಗಳದ ಮಧ್ಯೆ ಇದೀಗ ಶುಭಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಅರವಿಂದ್ ಮತ್ತು ನಿಧಿ ನಡುವೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಸರಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.