Tag: Shubh Poonja

  • ಫಿನಾಲೆಗೂ ಮೊದಲೇ  ಶುಭಾಗೆ ಶಾಕ್

    ಫಿನಾಲೆಗೂ ಮೊದಲೇ ಶುಭಾಗೆ ಶಾಕ್

    ನೆಯಲ್ಲಿ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಫಿನಾಲೆಗೆ ಬರಬೇಕು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಹೀಗಿರುವಾಗ ಬಿಗ್‍ಬಾಸ್ ಶುಭಾ ಪೂಂಜಾಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನಾ ನೀನಾ ಹೆಸರಿನ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಅಡಿಯಲ್ಲಿ ಸಾಕಷ್ಟು ಟಾಸ್ಕ್‌ಗಳನ್ನು ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಐದು ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು. ದಿವ್ಯಾ ಉರುಡುಗ ಕ್ಯಾಪ್ಟನ್ ಕೂಡ ಆದರು.

    ಆದರೆ, ಶುಭಾ ಒಟ್ಟಾರೆ ಟಾಸ್ಕ್‌ನಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದಾರೆ. ಕಡಿಮೆಅಂಕವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ, ಬಿಗ್‍ಬಾಸ್ ಈ ವಿಚಾರದಲ್ಲಿ ಶುಭಾಗೆ ಶಾಕ್ ನೀಡಿದ್ದಾರೆ ಬಿಗ್‍ಬಾಸ್. ಶುಭಾ ನೀವು ಕಡಿಮೆ ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದೀರಿ. ಹೀಗಾಗಿ, ಈ ವಾರ ಎಲಿಮಿನೇಷ್‍ನಿಂದ ಸೇವ್ ಆದರೂ ನೀವು ಕಡಿಮೆ ಅಂಕ ಹೊಂದಿದ್ದರಿಂದ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗುತ್ತೀರಿ ಎಂದರು ಬಿಗ್ ಬಾಸ್ ಹೇಳಿದ್ದಾರೆ.

    ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್‍ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿ, ಬಿಗ್‍ಬಾಸ್ ಜೊತೆಗೆ ಹಟ ಮಾಡಿರುವ ಉದಾಹರಣೆಗಳು ಇವೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ. ಎಲ್ಲರ ಜತೆಯೂ ಅವರು ಹೊಂದಿಕೊಂಡು ಹೋಗುತ್ತಿದ್ದಾರೆ. ಆದರೆ, ಫಿನಾಲೆ ಸಮೀಪವಾಗುತ್ತಿದ್ದಂತೆಯೇ ಇದು ಸಹಾಯಕ್ಕೆ ಬರುತ್ತಿಲ್ಲ. ಅವರು ಟಾಸ್ಕ್‌ನಲ್ಲಿ ಡಲ್ ಆಗಿರುವುದು ಅವರು ಮುಂದಿನ ಆಟಕ್ಕೆ ತೊಂದರೆಯಾವ ಎಲ್ಲಾ ಲಕ್ಷಣಗಳಿವೆ.

    ಕಳೆದ ವಾರ ದಿವ್ಯಾ ಉರುಡುಗ ಕೈಗೆ ಪೆಟ್ಟಾಗಿತ್ತು. ಹೀಗಾಗಿ, ಈ ವಾರ ಅವರಿಗೆ ಆಡೋದು ಬಹಳ ಕಷ್ಟವಾಗಿತ್ತು. ಆದರೆ, ಇದೆಲ್ಲವನ್ನೂ ಮೀರಿ ದಿವ್ಯಾ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಸ್ಟ್ರಾಂಗ್ ಕಂಟೆಸ್ಟೆಂಟ್‍ಗಳ ಎದುರು ನಿಂತು ಗೆದ್ದಿದ್ದಾರೆ. ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರ ನಾಮಿನೇಟ್ ಆಗುವುದಿಲ್ಲ, ಹೀಗಾಗಿ ಅವರು ಬಿಗ್‍ಬಾಸ್ ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.

  • ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    – ದಿವ್ಯಾಗೆ ಊಟ ಮಾಡಿಸಿದ ಅರವಿಂದ್

    ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ಮೂಲಕ ಒಂದಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ, ಇದೀಗ ಮತ್ತೆ ಬಿಗ್‍ಬಾಸ್ ನೀಡಿದ ಟಾಸ್ಕ್ ಮೂಲಕವೇ ಇನ್ನಷ್ಟು ಹತ್ತಿರವಾಗ್ತಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

    ನಿನ್ನೆ ಬಿಗ್‍ಬಾಸ್ ಶುಭಾ ಪೂಂಜಾರವರಿಗೆ ಕನ್ಫೆಷನ್ ರೂಮ್‍ಗೆ ಕರೆದು ಒಂದು ಪ್ಲೇಟ್‍ನಲ್ಲಿ ಚಿಕನ್ ನೀಡಿ, ಮುಂದಿನ ಆದೇಶದವರೆಗೂ ಮನೆಯ ಸದಸ್ಯರು ಚಿಕನ್‍ನನ್ನು ಒಬ್ಬೊಬ್ಬರು ಬಜರ್ ಆದ ಬಳಿಕ ವರ್ಗಾಹಿಸಿಕೊಂಡು ಕೆಳಗೆ ಇಡದಂತೆ ನೋಡಿಕೊಳ್ಳಬೇಕು. ಹೀಗೆ ಜಾಗೃತರಾಗಿ ನೋಡಿಕೊಂಡರೆ ಲಕ್ಷುರಿ ಬಜೆಟ್‍ನಲ್ಲಿ ಕಳೆದುಕೊಂಡಿರುವ ಚಿಕನ್‍ನನ್ನು ಹಿಂಪಡೆಯಬಹುದು ಎಂದು ತಿಳಿಸಿದ್ದರು.

    ಅದರಂತೆ ಮೊದಲಿಗೆ ಶುಭಾ ಚಿಕನ್‍ನನ್ನು ಕೈಯಲ್ಲಿ ಇಟ್ಟುಕೊಂಡು ಜೋಪಾನವಾಗಿ ನೋಡಿಕೊಂಡರು. ಬಳಿಕ ಬಜರ್ ಆದನಂತರ ದಿವ್ಯಾ ಉರುಡಗೆ ಚಿಕನ್ ಪ್ಲೇಟ್‍ನನ್ನು ಪಾಸ್ ಮಾಡಿದರು. ಚಿಕನ್ ನೋಡಿ ದಿವ್ಯಾ ಉರುಡಗ ಖುಷಿಖುಷಿಯಿಂದ ಸ್ವೀಕರಿಸಿ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳಲು ಬರುತ್ತಾರೆ. ಆಗ ದಿವ್ಯಾ ಕುಳಿತುಕೊಳ್ಳಲು ಮೈಕ್ ಅಡ್ಡ ಬರುತ್ತದೆ ಎಂದು ಅರವಿಂದ್ ದಿವ್ಯಾ ಮೈಕ್‍ನನ್ನು ಪಕ್ಕಕ್ಕೆ ಸರಿಸುತ್ತಾರೆ.

    ನಂತರ ದಿವ್ಯಾ ನನ್ನ ಕೆನ್ನೆ ಮೇಲೆ ಸೊಳ್ಳೆ ಕಚ್ಚುತ್ತಿರುವುದಾಗಿ ತಿಳಿಸಿದಾಗ, ಅರವಿಂದ್ ಕೂಡಲೇ ಎಲ್ಲಿ ಎಂದು ಕೆನ್ನೆ, ಹಣೆ ಹಾಗೂ ಗಲ್ಲದ ಮೇಲೆ ಕೈನಲ್ಲಿ ಸವರುತ್ತಾರೆ. ಬಳಿಕ ಬಾಯಿಯಿಂದ ಗಾಳಿಯನ್ನು ಊದಿ, ಯಾವ ಸೊಳ್ಳೆಯು ಇಲ್ಲ ಎಂದು ಹೇಳುತ್ತಾರೆ. ಇದಾದ ನಂತರ ಮನೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿರುತ್ತಾರೆ. ಈ ವೇಳೆ ಅರವಿಂದ್ ತಾವು ಊಟ ಮಾಡದೇ ಅನ್ನ, ಸಾಂಬಾರ್ ತಂದು ದಿವ್ಯಾ ಉರುಡುಗಗೆ ಒಂದೊಂದೇ ತುತ್ತು ತಿನ್ನಿಸಿದ್ದಾರೆ.

    ಒಟ್ಟಾರೆ ಈ ಕ್ಯೂಟ್ ಪೇರ್ ಒಬ್ಬರ ಮೇಲೊಬ್ಬರು ಹೊಂದಿರುವ ಕಾಳಜಿ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಈ ಜೋಡಿಗೆ ದೃಷ್ಟಿ ತಾಗದಿರಲಿ ಎಂದು ಆಶಿಸುತ್ತಿದ್ದಾರೆ ಎಂದೇ ಹೇಳಬಹುದು.

  • ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳು ಪ್ರತಿದಿನ ತಮಗೆ ಇಷ್ಟವಾದಂತಹ ಟ್ರೆಂಡಿ ಹಾಗೂ ಡಿಫರೆಂಟ್, ಡ್ರೆಸ್‍ಗಳನ್ನು ಹಾಕಿಕೊಳ್ಳುವ ಮೂಲಕ ಕಂಗೊಳಿಸುತ್ತಿದ್ದಾರೆ. ಸದ್ಯ ಬಿಗ್‍ಬಾಸ್, ಕ್ಯಾಪ್ಟನ್ ಮಂಜು ಸಾರಥ್ಯದಲ್ಲಿ ಮನೆಯ ಸದಸ್ಯರನ್ನು ನಾಲ್ಕು ಗುಂಪುಗಳಾಗಿ ಮಾಡಿ ಟಾಸ್ಕ್ ನೀಡುತ್ತಿದ್ದಾರೆ. ಅಲ್ಲದೆ ಈ ನಾಲ್ಕು ತಂಡದ ಸದಸ್ಯರಿಗೆ ಕೆಂಪು, ಬಿಳಿ, ಪಿಂಕ್ ಹಾಗೂ ಹಸಿರು ಬಣ್ಣದ ಟಿ-ಶರ್ಟ್‍ಗಳನ್ನು ನೀಡಿದ್ದಾರೆ.

    ಹೀಗಾಗಿ ಮನೆಯ ಎಲ್ಲಾ ಸದಸ್ಯರು ಟಿ-ಶರ್ಟ್ ಧರಿಸಿ ಟಾಸ್ಕ್ ಆಡಲು ಮುಂದಾಗಿದ್ದಾರೆ. ಈ ವೇಳೆ ವೈಷ್ಣವಿ ಹಾಗೂ ಶುಭಾ ಪೂಂಜಾ ಕೂಡ ಟಿ-ಶರ್ಟ್ ಧರಿಸಿ ಡ್ರೆಸಿಂಗ್ ಟೇಬಲ್‍ನ ಮೀರರ್ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಆಗ ವೈಷ್ಣವಿ, ಶುಭಾ ಪೂಂಜಾಗೆ ಯಾಕೆ ಟಿ-ಶರ್ಟ್ ಇಷ್ಟ ಇಲ್ವಾ ಅಂತ ಕೇಳ್ತಾರೆ. ಅದಕ್ಕೆ ಶುಭಾ, ಚಿಕ್ಕ ಮಕ್ಕಳಂತೆ ನನಗೆ ಇಷ್ಟ ಇಲ್ಲಾ ವೈಶು, ನನಗೆ ಈ ತರ ಟಿ-ಶಟ್ರ್ಸ್ ಇಷ್ಟ ಆಗಲ್ಲ. ನಾನು ಮನೆಯಲ್ಲೂ ಈ ತರ ಟಿ-ಶಟ್ರ್ಸ್ ಹಾಕಿಕೊಳ್ಳುವುದಿಲ್ಲ ಅಂತಾರೆ. ಅದಕ್ಕೆ ವೈಷ್ಣವಿ ಹಾಗಾದರೆ ಹಾಕಿಕೊಳ್ಳಬೇಡಿ ಬಿಚ್ಚಿಬಿಡಿ. ಗೌನ್ ಹಾಕಿಕೊಳ್ಳಿ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಇಲ್ಲ,.. ಅವರು ಬೈತಾರೆ, ಹ್ಯಾಸ್ ಇಟ್ ಈಸ್ ಅವರು ನನಗೆ ತುಂಬಾನೇ ಬೈತಿದ್ದಾರೆ ಇತ್ತೀಚಿಗೆ ಅಂತಾ ಹೇಳ್ತಾರೆ. ಆಗ ವೈಷ್ಣವಿ ನಿಮಗೆ ಬೈಯ್ಯಲು ಧೈರ್ಯ ಯಾರಿಗಿದೆ ಹೇಳಿ ಎಂದು ಕೇಳುತ್ತಾರೆ. ಇಲ್ಲ ಬೈತಿದ್ದಾರೆ, ತುಂಬಾ ತುಂಬಾ ಬೈತಿದ್ದಾರೆ, ನಾನು ಏನು ಮಾಡಿದೆ ಎಂದು ಶುಭ ಹೇಳಿದಾಗ, ವೈಷ್ಣವಿ ಮೈಕ್ ಹಾಕಲ್ಲ. ಗ್ಲಾಸ್ ಕದಿತ್ತಿರಾ ಅದಕ್ಕೆ ಬೈಯ್ತಾರೆ ಅಂತಾರೆ. ಇಲ್ಲ ನಾನು ನನ್ನ ಪಾಡಿಗೆ ಆಟ ಆಡ್ತಿದ್ದೀನಿ. ನನಗೆ ಯಾರಾದರೂ ಬೈದರೆ ನನಗೆ ಅರ್ಥನೇ ಆಗುವುದಿಲ್ಲ. ಯಾಕ್ ಬೈಬೇಕು? ನನ್ನ ಪಾಡಿಗೆ ನಾನು ಇದ್ದೇನೆ ಎಂದು ಕ್ಯೂಟ್ ಕ್ಯೂಟ್ ಆಗಿ ಸಣ್ಣ ಮಕ್ಕಳಂತೆ ಶುಭಾ.. ವೈಷ್ಣವಿ ಜೊತೆ ಮಾತನಾಡಿದ್ದಾರೆ.

    ಒಟ್ಟಾರೆ ಮಗುವಿನಂತೆ ಮನಸ್ಸು ಹೊಂದಿರುವ ಶುಭಾ, ನಿಜವಾಗಿಯೂ ಮಗುವಿನಂತೆ ಮುದ್ದು-ಮುದ್ದಾಗಿ ಮಾತನಾಡಿರುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.

  • ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ನಿನ್ನೆ ಬಿಗ್‍ಬಾಸ್, ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಿ ಇಬ್ಬರನ್ನು ನಾಯಕರಾಗಿ ಸುಚಿಸುವಂತೆ ಕ್ಯಾಪ್ಟನ್ ವಿಶ್ವನಾಥ್‍ಗೆ ಸೂಚಿಸಿದರು. ಅದರಂತೆ ವಿಶ್ವನಾಥ್ ದಿವ್ಯಾ ಉರುಡುಗ ಹಾಗೂ ಶುಭರನ್ನು ನಾಯಕರಾಗಿ ಆಯ್ಕೆ ಮಾಡಿದರು.

    ನಂತರ ದಿವ್ಯಾ ಉರುಡುಗ ತನ್ನ ತಂಡಕ್ಕೆ ಅರವಿಂದ್, ರಾಜೀವ್, ದಿವ್ಯಾ ಸುರೇಶ್, ಶಮಂತ್, ಶಂಕರ್‍ರನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ‘ಅನುಬಂಧ’ ಎಂದು ಹೆಸರಿಟ್ಟರೆ, ಶುಭ ಪೂಂಜಾ, ಮಂಜು, ನಿಧಿ, ಪ್ರಶಾಂತ್, ವೈಷ್ಣವಿ, ರಘುರನ್ನು ಸೇರಿಸಿಕೊಂಡು ತಂಡಕ್ಕೆ ‘ಜಾತ್ರೆ’ ಎಂದು ಹೆಸರಿಡುತ್ತಾರೆ.

    ಬಳಿಕ ಎರಡು ತಂಡಕ್ಕೆ ಬಿಗ್‍ಬಾಸ್, ಗುಂಪು ಚಟುವಟಿಕೆಯನ್ನು ನೀಡುತ್ತಾರೆ. ಗಾರ್ಡನ್ ಏರಿಯದಲ್ಲಿ ಬಲೂನ್‍ಗಳನ್ನು ಇರಿಸಲಾಗಿದ್ದು, ಸದಸ್ಯರು ಬಲೂನ್‍ಗಳ ಮೇಲೆ ಕುಳಿತು ಹೊಡೆದು ಹಾಕಬೇಕು. ಆಗ ಬಲೂನ್‍ನಲ್ಲಿದ್ದ ಬೆಳ್ಳಿ ಹಾಗೂ ಚಿನ್ನದ ಚೀಟಿಗಳನ್ನು ಯಾವ ತಂಡ ಹೆಚ್ಚಾಗಿ ಸಂಗ್ರಹಿಸಿರುತ್ತಾರೋ ಅವರು ವಿಜೇತರಾಗಿರುತ್ತಾರೆ ಹಾಗೂ ಗೆದ್ದ ತಂಡಕ್ಕೆ ಬಹುಮಾನವಾಗಿ ಚಾಕಲೇಟ್ ನೀಡುವುದಾಗಿ ತಿಳಿಸಿರುತ್ತಾರೆ.

    ಅದರಂತೆ ಚಾಕಲೇಟ್ ತಿನ್ನುವ ಆಸೆಯಿಂದ ರೊಚ್ಚಿಗೆದ್ದ ಮನೆಮಂದಿ, ಒಂದು ಬಲೂನ್‍ನನ್ನು ಬಿಡದಂತೆ ಕುಳಿತು ಹೊಡೆದು ಹಾಕಿ ಚಿನ್ನದ ಹಾಗೂ ಬೆಳ್ಳಿಯ ಚೀಟಿಗಳನ್ನು ಸಂಗ್ರಹಿಸುತ್ತಾರೆ. ಈ ಟಾಸ್ಕ್‍ನಲ್ಲಿ ಶುಭ ಪೂಂಜಾರ ಜಾತ್ರೆ ಗ್ಯಾಂಗ್ 29 ಬಂಗಾರದ ಚೀಟಿಗಳನ್ನು ಸಂಗ್ರಹಿಸುವ ಮೂಲಕ ವಿಜೇತರಾಗುತ್ತಾರೆ. ಬಳಿಕ ಬಿಗ್‍ಬಾಸ್ ಜಾತ್ರೆ ತಂಡಕ್ಕೆ ಚಾಕಲೇಟ್ ಕಳುಹಿಸಿಕೊಡುತ್ತಾರೆ.

    ನಂತರ ಜಾತ್ರೆ ತಂಡದವರು ಎದುರಾಳಿ ತಂಡದವರಿಗೆ ಅಣುಕಿಸುತ್ತಾ ಚಾಕಲೇಟ್‍ನನ್ನು ಸವಿದು ಆನಂದಿಸುತ್ತಾರೆ. ಒಟ್ಟಾರೆ ಈ ವಾರದ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಜಾತ್ರೆ ತಂಡ ಸಿಹಿ ತಿನ್ನುವ ಮೂಲಕ ನ್ಯೂ ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಆದರೆ ಮುಂದೆ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

  • ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಆರಂಭವಾದಾಗ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಇವರಿಬ್ಬರ ನಡುವಿನ ಆಲೋಚನೆ, ಹೊಂದಾಣಿಕೆ, ಪ್ರೀತಿ ಎಲ್ಲವನ್ನು ನೋಡಿ ದೊಡ್ಮನೆ ಮಂದಿ ಇವರಿಬ್ಬರ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

    ಆದರೆ ನಿನ್ನೆ ಶುಭ ಪೂಂಜಾ ದಿವ್ಯಾ ಬಗ್ಗೆ ಅರವಿಂದ್ ಜೊತೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ಅರವಿಂದ್ ದಿವ್ಯಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನೇರವಾಗಿ ಶುಭ ಜೊತೆ ಹಂಚಿಕೊಂಡಿದ್ದಾರೆ. ನಿನ್ನೆ ದಿವ್ಯಾ ಉರುಡಗಗೆ ಅರವಿಂದ್‍ನನ್ನು ಮದುವೆ ಆಗ್ತೀನಿ ಅಂದರೆ ನಿಮ್ಮ ಮನೆಯಲ್ಲಿ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದ್ದೆ. ಇದಕ್ಕೆ ದಿವ್ಯಾ ಹಾಗೇನಾದರೂ ನಾನು ನಿಜವಾಗಿಯೂ ಇಷ್ಟಪಡುತ್ತಿದ್ದೇನೆ ಅಂದ್ರೆ ನಮ್ಮ ಮನೆಯಲ್ಲಿ ಯಾವುದೇ ಅಭ್ಯಂತರವಿರುವುದಿಲ್ಲ. ಈ ಬಗ್ಗೆ ಮೊದಲಿಗೆ ಅರವಿಂದ್ ಅಭಿಪ್ರಾಯ ಕೇಳಿ ಎಂದು ಹೇಳಿದ್ದಾಳೆ ಎಂದು ಶುಭ ಅರವಿಂದ್‍ಗೆ ಹೇಳುತ್ತಾರೆ.

    ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.

    ನಂತರ ಶುಭ ಬಿಗ್‍ಬಾಸ್ ಮನೆಯೊಳಗೆ ಇದ್ದು ನಿಜವಾಗಿಯೂ ನೀವಿಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟರೆ ಹೊರಗಡೆ ಹೋಗಿ ಕೂಡ ನಾಲ್ಕು ತಿಂಗಳು ಸಮಯ ಕಳೆಯಿರಿ. ನಂತರ ನಿಮ್ಮಿಬ್ಬರಿಗೂ ಒಪ್ಪಿಗೆ ಇದ್ದರೆ ಮುಂದುವರೆಸಿಕೊಂಡು ಹೋಗಿ ಎಂದು ಟಿಪ್ಸ್ ನೀಡುತ್ತಾರೆ. ಒಟ್ಟಾರೆ ಬಿಗ್‍ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಅರವಿಂದ್ ದಿವ್ಯಾ ಲವ್‍ಸ್ಟೋರಿ ನಡಿತಿದೆ ಎಂದರೆ ತಪ್ಪಾಗಲಾರದು.

  • ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ದೊಡ್ಮನೆಗೆ ಎಂಟ್ರಿ ಕೊಟ್ಟ ಕೆಲವು ಬ್ಯಾಚುಲರ್ ಹುಡುಗರಲ್ಲಿ ಬ್ರೋಗೌಡ ಕೂಡ ಒಬ್ಬರು. ಮೊನ್ನೆ ಟಾಸ್ಕ್ ನಲ್ಲಿ ಕಿರುಚಾಡುತ್ತಾ, ಕಿತ್ತಾಡಿ, ಗುದ್ದಾಡಿಕೊಂಡಿದ್ದ ಬಿಗ್‍ಬಾಸ್ ಮಂದಿ ನಿನ್ನೆ ಹಾಸ್ಯದ ಹೊನಲಿನಲ್ಲಿ ತೇಲಿದ್ದಾರೆ.

    ಬಿಗ್‍ಬಾಸ್ ಮನೆಗೆ ಬಂದಾಗನಿಂದ ಮಗುವಿನಂತೆ ಎಲ್ಲರೊಂದಿಗೆ ಬೆರೆತು, ಸಿರಿಯಸ್ ಸಮಯದಲ್ಲಿ ಕೂಡ ಹಾಸ್ಯ ಚಟಾಕಿ ಹರಿಸುವ ನಟಿ ಶುಭಾ ಪೂಂಜಾ ನಿನ್ನೆ ಬ್ರೋ ಗೌಡರ ಕಾಲೆಳೆದಿದ್ದಾರೆ. ನಿನ್ನೆ ಮನೆ ಮಂದಿಯೆಲ್ಲಾ ಒಟ್ಟಾಗಿ ಲೀವಿಂಗ್ ಏರಿಯಾದಲ್ಲಿ ಟೈಪಾಸ್ ಮಾಡುತ್ತಿದ್ದ ವೇಳೆ ಮಂಜು ಸುಮ್ ಸುಮ್ ನೇ ನಗ್ತಾಳೆ ಎಂದು ದಿವ್ಯಾ ಸುರೇಶ್ ನೋಡುತ್ತಾ ಹಾಡು ಹೇಳಿದ್ದಾರೆ. ಇದಕ್ಕೆ ದಿವ್ಯಾ ಮುಖ ತಿರುಗಿಸಿಕೊಂಡು ಬೇರೆ ಕಡೆ ನೋಡುತ್ತಾರೆ. ಅದಕ್ಕೆ ಮಂಜು ನಾನು ಹೇಳಿದೆ ಅಲ್ಲವಾ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಅವಳ ಕೈನಲ್ಲಿ ಆಗುವುದಿಲ್ಲ ಎಂದು ಹೇಳುತ್ತಾರೆ.

    ರಾಜೀವ್, ಬ್ರೋ ಗೌಡ ಬರುವವರೆಗೂ ಹೀಗೆ ಹಾಡು ಹೇಳು ಎನ್ನುತ್ತಾರೆ. ಈ ವೇಳೆ ಶುಭಾ ಅವನು ಸುಮ್ನೆ ರೆಡಿಯಾಗಿ ಬೇರೆಯವರಿಗೆ ಹೇಳುವುದಾಯ್ತು. ಇಲ್ಲಿಯವರೆಗೂ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಆಗಲಿಲ್ಲ. ಹೊರಗಡೆ ನೋಡಿದರೆ ನನಗೆ ಇಷ್ಟು ಜನ ಹುಡುಗಿಯರು ಬಿದ್ದಿದ್ದರು, ಅಷ್ಟು ಜನ ಹುಡುಗಿಯರು ಬಿದ್ದಿದ್ದಾರೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಹೊರಗಡೆ 22 ಜನ ಹುಡುಗಿಯರು ಬಿದ್ದಿರುವ ಅವನಿಗೆ ಬಿಗ್‍ಬಾಸ್ ಮನೆಯಲ್ಲಿ ಒಬ್ಬರನ್ನು ಕೂಡ ಬೀಳಿಸಲು ಆಗಲಿಲ್ಲ. ಮೊದಲನೇಯದಾಗಿ ಅವನಿಗೆ ಹುಡುಗಿಯರನ್ನು ಬೀಳಿಸುವ ನ್ಯಾಕ್ ಗೊತ್ತಿಲ್ಲ. ನೋಡಿದಾಗಲೆಲ್ಲ ಎಲ್ಲ ಹುಡುಗಿಯರಿಗೂ ಕೆಲಸ ಕೊಡುತ್ತಾನೆ. ಅವನಿಗ್ಯಾರು ಬೀಳುತ್ತಾರೆ? ಎಂದು ನಗೆ ವ್ಯಂಗ್ಯ ಮಾಡಿದರು. ಇದನ್ನು ಕೇಳಿ ಮನೆಯ ಸದಸ್ಯರೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

    ಈ ವೇಳೆ ಲ್ಯಾಂಗ್ ಮಂಜು ನಾನೇದರೂ ಕ್ಯಾಪ್ಟನ್ ಆದರೆ ನನ್ನ ಎರಡು ಕಣ್ಣುಗಳಿಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ರೊಚ್ಚಿಗೆದ್ದ ಶುಭಾ ಪೂಂಜಾ, ಮಗನೇ ಹಾಗಾದರೆ ನಮ್ಮ ಕೈನಲ್ಲಿ ಕೆಲಸ ಮಾಡಿಸ್ತಿಯಾ ಎಂದು ವಾಟರ್ ಬಾಟಲ್‍ನಿಂದ ಹೊಡೆಯುತ್ತಾರೆ.

    ಬಳಿಕ ಲ.. ಲವರ್ ಬಾಯ್ ಬಾ ಇಲ್ಲಿ ಎಂದು ಬ್ರೋಗೌಡರನ್ನು ಕರೆದ ಶುಭಾ, ನಿನಗೊಂದು ಟಾಸ್ಕ್ ಈ ವೀಕೆಂಡ್ ಒಳಗೆ ಒಬ್ಬರನ್ನಾದರೂ ನೀನು ಬೀಳಿಸಬೇಕು. ಕಮಾನ್ ಶಮಂತ್ ಎದ್ದು ತೊಡೆ ತಟ್ಟುತ್ತಾ ಸವಾಲೆಸೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬ್ರೋ ಗೌಡ ವೇಟ್ ವೇಟ್. ನಾನು ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ.

    ಇದಕ್ಕೆ ಶುಭಾ ನೀನು ಹೆಣ್ಣು ಮಕ್ಕಳನ್ನು ನೋಡಿದಾಗೆಲ್ಲಾ ಕಸ ಗುಡಿಸಿ, ಪಾತ್ರೆ ತೊಳೆಯಿರಿ, ಕ್ಲೀನ್ ಮಾಡಿ ಎಂದರೆ ನಿನಗೆ ಯಾರು ಬೀಳುವುದಿಲ್ಲ ಎಂದು ಹೇಳುವ ಮೂಲಕ ಬ್ರೋ ಗೌಡ ಕಾಲೆಳೆದಿದ್ದಾರೆ.