Tag: Shrutiprakash

  • ರೋಚಕ ಟೀಸರ್ ಹೊತ್ತು ಬಂದ ‘ಕಡಲ ತೀರದ ಭಾರ್ಗವ’ ಚಿತ್ರತಂಡ

    ರೋಚಕ ಟೀಸರ್ ಹೊತ್ತು ಬಂದ ‘ಕಡಲ ತೀರದ ಭಾರ್ಗವ’ ಚಿತ್ರತಂಡ

    ಡಲ ತೀರದ ಭಾರ್ಗವ ಎಂದಾಕ್ಷಣ ದುತ್ತನೆ ಕಣ್ಮುಂದೆ ಬರುವ ವ್ಯಕ್ತಿತ್ವ ಶಿವರಾಮ ಕಾರಂತರು. ಆ ಜನಪ್ರಿಯ ಹೆಸರನ್ನು ಸಿನಿಮಾ ಶೀರ್ಷಿಕೆಯಾಗಿಸಿಕೊಂಡು ಸಿನಿಮಾವೊಂದು ಸೆಟ್ಟೇರಿದ್ದು ಕೂಡ ನಿಮಗೆ ಗೊತ್ತಿರಬಹುದು. ಹಾಗಂತ ಇದು ಕಾರಂತರ ಜೀವನ ಕಥೆಯಾ? ಅಂದ್ರೆ ಖಂಡಿತ ಅಲ್ಲ. ಸಿನಿಮಾ ಕಥೆಗೆ ಈ ಹೆಸರು ಸೂಕ್ತ ಎನ್ನಿಸಿದ್ದರಿಂದ ಕಡಲ ತೀರದ ಭಾರ್ಗವ ಎಂದು ಟೈಟಲ್ ಫಿಕ್ಸ್ ಮಾಡಿದೆ ಚಿತ್ರತಂಡ. ಇದೀಗ ‘ಕಡಲ ತೀರದ ಭಾರ್ಗವ’ ಚಿತ್ರತಂಡ ಟೀಸರ್ ಮೂಲಕ ಪ್ರೇಕ್ಷಕರೆದುರು ಬಂದಿದೆ.

    ಹೊಸ ತಂಡವೊಂದು ಹೊಸ ಕನಸಿಟ್ಟುಕೊಂಡು ಹೊಸ ಹುರುಪಿನಿಂದ ಮಾಡಿರುವ ಸಿನಿಮಾ ‘ಕಡಲ ತೀರದ ಭಾರ್ಗವ’. ಟೀಸರ್ ಎಲ್ಲರ ಹುಬ್ಬೇರಿಸುವಂತಿದ್ದು, ಹೊಸಬರ ಸಿನಿಮಾ ಎನ್ನಲಾರದಷ್ಟು ಪ್ರಾಮಿಸಿಂಗ್ ಆಗಿ ಮೂಡಿಬಂದಿದೆ. ಒಂದಿಷ್ಟು ರೋಚಕತೆಯನ್ನು ಒಳಗೊಂಡಿರುವ ಟೀಸರ್ ತುಣುಕು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದಕ್ಕೆ ತಕ್ಕಂತೆ ಅನಿಲ್ ಸಿ.ಜೆ ಹಿನ್ನೆಲೆ ಸಂಗೀತದ ಜುಗಲ್ಬಂದಿಯಿದೆ. ಪ್ರೀತಿ, ಕೋಪ, ನೋವಿನ ಎಳೆ ಒಳಗೊಂಡ ಟೀಸರ್ ಖಂಡಿತ ಸಿನಿಮಾ ತಂಡ ಹೊಸದೇನನ್ನೋ ಹೇಳ ಹೊರಟಿದೆ ಎಂಬ ಫೀಲ್ ನೀಡದೇ ಇರದು. ಇದನ್ನೂ ಓದಿ: ಕತ್ರಿನಾ ಜೊತೆಗೆ ವಿಕ್ಕಿ ಕೌಶಲ್ ಎಂಗೇಜ್‍ಮೆಂಟ್?

    Kadalatheeradabhargava

    ಇಬ್ಬರು ಸ್ನೇಹಿತರು ಹಾಗೂ ನಾಯಕಿ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ‘ಕಡಲ ತೀರದ ಭಾರ್ಗವ’. ಪನ್ನಗ ಸೋಮಶೇಖರ್ ಚಿತ್ರದ ಸೂತ್ರಧಾರ. ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಇವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನವ ಪ್ರತಿಭೆಗಳಾದ ಭರತ್ ಗೌಡ, ವರುಣ್ ರಾಜು ಪಟೇಲ್ ನಾಯಕ ನಟರಾಗಿ ಗಾಂಧಿನಗರಕ್ಕೆ ಈ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಕೇವಲ ನಾಯಕ ನಟರಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಈ ಇಬ್ಬರು ಮೊದಲ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟಿ ಶ್ರುತಿ ಪ್ರಕಾಶ್ ಚಿತ್ರದ ನಾಯಕ ನಟಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

    ಇವಕಲ ಸ್ಟುಡಿಯೋ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಒಳಗೊಂಡ ಹಲವು ಕಲಾವಿದರ ತಾರಾಬಳಗವಿದೆ. ಬೆಂಗಳೂರು, ಕೊಡಗು, ಉಡುಪಿ, ಭಟ್ಕಳ, ಮುರುಡೇಶ್ವರದ ಕಡಲ ತೀರದಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಅನಿಲ್ ಸಿ.ಜೆ ಸಂಗೀತ ಸಂಯೋಜನೆ, ಕೀರ್ತನ್ ಪೂಜಾರ್ ಚೆಂದದ ಸಿನಿಮ್ಯಾಟೋಗ್ರಫಿ, ಆಶಿಕ್ ಕುಸುಗೊಳ್ಳಿ, ಉಮೇಶ್ ಬೋಸಗಿ ಸಂಕಲನ ಚಿತ್ರಕ್ಕಿದೆ. ಪ್ರಾಮಿಸಿಂಗ್ ಟೀಸರ್ ಮೂಲಕ ಸಿನಿಮಾದ ಝಲಕ್ ತೋರಿಸಿ ಕುತೂಹಲ ಹುಟ್ಟು ಹಾಕಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊತ್ತು ತರಲಿದೆ. ಇದನ್ನೂ ಓದಿ: ಕನ್ನಡದ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನ