Tag: Shruti Naidu

  • ಬರ್ತ್‌ಡೇ ಖುಷಿಯಲ್ಲಿದ್ದ ಲವ್ಲಿ ಸ್ಟಾರ್ ಪ್ರೇಮ್‌ಗೆ ಶಾಕ್ ಕೊಟ್ಟ ನಿರ್ಮಾಪಕಿ

    ಬರ್ತ್‌ಡೇ ಖುಷಿಯಲ್ಲಿದ್ದ ಲವ್ಲಿ ಸ್ಟಾರ್ ಪ್ರೇಮ್‌ಗೆ ಶಾಕ್ ಕೊಟ್ಟ ನಿರ್ಮಾಪಕಿ

    ವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಇಂದು (ಏ.18) ಹುಟ್ಟುಹಬ್ಬದ ಸಂಭ್ರಮ. ಆದರೆ ಬರ್ತ್‌ಡೇ ಖುಷಿಯಲ್ಲಿದ್ದ ನಟನ ವಿರುದ್ಧ ನಿರ್ಮಾಪಕಿ ಶ್ರುತಿ ನಾಯ್ಡು (Shruti Naidu) ಗರಂ ಆಗಿದ್ದಾರೆ. ಪ್ರೇಮ್ ವಿರುದ್ಧ ಕಾನೂನು ಸಮರಕ್ಕೆ ನಿಂತಿದ್ದಾರೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್‌- ‘ಸ್ಪಾರ್ಕ್‌’ನಲ್ಲಿ ನೆನಪಿರಲಿ ಪ್ರೇಮ್

    ನಟನ ಹುಟ್ಟುಹಬ್ಬದ ಹಿನ್ನೆಲೆ ಇಂದು ‘ಸ್ಪಾರ್ಕ್’ (Spark Film) ಚಿತ್ರತಂಡ ವಿಶೇಷವಾಗಿ ಪ್ರೇಮ್ ಪಾತ್ರದ ಪೋಸ್ಟರ್ ಅನ್ನು ರಿವೀಲ್ ಮಾಡಿತ್ತು. ಆ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಅವರ ಫೋಟೋವನ್ನು ಸಿಗಾರ್‌ನಿಂದ ಪ್ರೇಮ್ ಸುಡುತ್ತಿರುವಂತೆ ಡಿಸೈನ್ ಮಾಡಲಾಗಿತ್ತು. ಆದರೆ ಆ ರಮೇಶ್ ಇಂದಿರಾ ನಟಿಸಿದ್ದ ‘ಭೀಮ’ ಸಿನಿಮಾದಾಗಿತ್ತು. ಅನುಮತಿ ಪಡೆಯದೇ ರಮೇಶ್ ಇಂದಿರಾ ಅವರ ಫೋಟೋ ಬಳಸಿದ್ದಕ್ಕೆ ಪ್ರೇಮ್ ಮತ್ತು ಚಿತ್ರತಂದ ವಿರುದ್ಧ ಶ್ರುತಿ ನಾಯ್ಡು ಗರಂ ಆಗಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

    ಆ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ರುತಿ ನಾಯ್ಡು, ಈ ಚಿತ್ರತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ‘ಭೀಮ’ ಚಿತ್ರದ್ದು. ಅದರಲ್ಲಿರೋ ಫೋಟೋವನ್ನು ಭೀಮ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಬರೆದುಕೊಂಡಿದ್ದಾರೆ. ಚಿತ್ರತಂಡ ಈ ನಡೆ ಶ್ರುತಿ ನಾಯ್ಡು ಮುನಿಸಿಗೆ ಕಾರಣವಾಗಿದೆ.

    ಶ್ರುತಿ ನಾಯ್ಡು ಹಂಚಿಕೊಂಡಿರುವ ಪೋಸ್ಟ್‌ಗೆ ಚಿತ್ರತಂಡದವರಾಗಲಿ ಅಥವಾ ನಟನಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾರೆ ಎಂಬುದುನ್ನು ಕಾದುನೋಡಬೇಕಿದೆ.

  • ‘ಸಲಾರ್’ ಹುಡುಗನ ಜೊತೆ ಮತ್ತೆ ಸಿನಿಮಾ ಘೋಷಿಸಿದ ಶ್ರುತಿ ನಾಯ್ಡು

    ‘ಸಲಾರ್’ ಹುಡುಗನ ಜೊತೆ ಮತ್ತೆ ಸಿನಿಮಾ ಘೋಷಿಸಿದ ಶ್ರುತಿ ನಾಯ್ಡು

    ನ್ನಡ ಕಿರುತೆರೆ ಲೋಕದ ಹೆಸರಾಂತ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು, ಈ ಹಿಂದೆ ಪ್ರೀಮಿಯರ್ ಪದ್ಮಿನಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಜಗ್ಗೇಶ್ ಮತ್ತು ಪ್ರಮೋದ್ ಕಾಂಬಿನೇಷನ್ ನ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲೂ ಹಿಟ್ ಆಗಿತ್ತು. ಆ ನಂತರ ಈ ಚಿತ್ರದ ಸಿಕ್ವೇಲ್ ಮಾಡುವ ಕುರಿತು ಚರ್ಚೆ ನಡೆದಿತ್ತು. ಅದಕ್ಕೂ ಮೊದಲು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.

    ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಪ್ರಮೋದ್ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ ಶ್ರುತಿ ನಾಯ್ಡು. ಪ್ರಮೋದ್ ಹುಟ್ಟು ಹಬ್ಬದಂದು ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಪ್ರೀಮಿಯರ್ ಪದ್ಮಿನಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಮೇಶ್ ಇಂದಿರಾ ಅವರೇ ಈ ಚಿತ್ರಕ್ಕೂ ನಿರ್ದೇಶಕರು.

    ಸಲಾರ್ ಸಿನಿಮಾದಲ್ಲಿ ಪ್ರಮೋದ್ ಗಟ್ಟಿಯಾಗಿರೋ ಪಾತ್ರವನ್ನೇ ಮಾಡಿದ್ದಾರೆ. ಆ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇದೀಗ ಮತ್ತೆ ಶ್ರುತಿ ನಾಯ್ಡು ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.  ಈಗಾಗಲೇ ಚಿತ್ರಕ್ಕೆ ಪೂಜೆ ಕೂಡ ಆಗಿದ್ದು, ಫೆಬ್ರವರಿಯಲ್ಲಿ ಚಿತ್ರೀಕರಣಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ.

  • ನಟ, ನಿರ್ದೇಶಕ ನಿತಿನ್ ಗೋಪಿ ಹೃದಯಾಘಾತದಿಂದ ನಿಧನ

    ನಟ, ನಿರ್ದೇಶಕ ನಿತಿನ್ ಗೋಪಿ ಹೃದಯಾಘಾತದಿಂದ ನಿಧನ

    ಬಾಲ ನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಹಾಗೂ ಇತ್ತೀಚೆಗೆ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದ ನಿತಿನ್ ಗೋಪಿ (Nithin Gopi) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ (Death). ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ‘ಹಲೋ ಡ್ಯಾಡಿ’ (Hello Daddy) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಇವರು ಬಾಲನಟರಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ಶಾಲೆಗೆ ಈ ದಿನ ರಜಾ’ ಹಾಡಿನ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ನೆಲೆಯೂರಿದ್ದರು.

    ನಿತಿನ್ ಗೋಪಿ ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. ಬೆಳಗ್ಗೆ ನಾಲ್ಕು ಗಂಟೆಗೆ ಅವರಿಗೆ ಹೃದಯಾಘಾತವಾಗಿತ್ತು (Heart Attack). ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿತ್ತು ಅವರ ಕುಟುಂಬ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಬಾಲಕಲಾವಿದರಾಗಿ ನಟಿಸಿದ್ದರು. ಶ್ರುತಿ ನಾಯ್ಡು (Shruti Naidu) ಪ್ರೊಡಕ್ಷನ್ ನಲ್ಲಿ ಹಾಗೂ ಬಾಲಾಜಿ ಟೆಲಿಫಿಲಮ್ಸ್ ಅಡಿಯಲ್ಲಿ ಮೂಡಿ ಬಂದ ಧಾರಾವಾಹಿಗಳಿಗೆ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತಮಿಳು ಧಾರಾವಾಹಿಯನ್ನೂ ಅವರು ನಿರ್ದೇಶನ ಮಾಡಿದ್ದಾರೆ.

    ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅಂದಹಾಗೆ ಇವರು ಖ್ಯಾತ ಕೊಳಲು ವಾದ ಗೋಪಿ ಅವರ ಪುತ್ರ. ನಿತಿನ್ ಅಗಲಿಕೆಗೆ ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿಸಿದ್ದಾರೆ.

  • ‘ಸಲಾರ್’ ಸಿನಿಮಾದಲ್ಲಿ ಪ್ರಮೋದ್: ಶ್ರುತಿ ನಾಯ್ಡು ಹೇಳಿದ್ದ ಭವಿಷ್ಯ ನಿಜವಾಯ್ತು

    ‘ಸಲಾರ್’ ಸಿನಿಮಾದಲ್ಲಿ ಪ್ರಮೋದ್: ಶ್ರುತಿ ನಾಯ್ಡು ಹೇಳಿದ್ದ ಭವಿಷ್ಯ ನಿಜವಾಯ್ತು

    ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಕಾಯುತ್ತಿದ್ದಾರೆ. ಕೆಲವರಂತೂ ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ, ಬಯಸದೇ ಬಂದ ಭಾಗ್ಯ ಅನ್ನುವಂತೆ ಪ್ರಮೋದ್ ‘ಸಲಾರ್’ ಸಿನಿಮಾದಲ್ಲಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂಥದ್ದೊಂದು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದಗಳನ್ನೂ ಹೇಳಿದ್ದಾರೆ ಪ್ರಮೋದ್.

    ತಮಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಪ್ರಮೋದ್, ರತ್ನನ್ ಪ್ರಪಂಚ ಸಿನಿಮಾದ ಪಾತ್ರವೇ ಅವರಿಗೆ ಸಲಾರ್ ದಲ್ಲಿ ನಟಿಸುವಂತಹ ಅವಕಾಶ ಮಾಡಿದ್ದು ಎನ್ನುತ್ತಾರೆ. ‘ರತ್ನನ್ ಪ್ರಪಂಚ ಸಿನಿಮಾವನ್ನು ನೋಡಿದ್ದ ಪ್ರಶಾಂತ್ ನೀಲ್, ಆ ಪಾತ್ರವನ್ನು ನೋಡಿ ನನ್ನೊಳಗಿನ ಶಕ್ತಿಯನ್ನು ಗುರುತಿಸಿದ್ದರು. ನಿನ್ನಿಂದ ಒಂದು ಪಾತ್ರ ಮಾಡಿಸುವೆ ಅಂದಿದ್ದರು. ಆದಾದ ನಂತರ ಆರೇಳು ತಿಂಗಳಾದರೂ, ಸಲಾರ್ ಸಿನಿಮಾದ ಶೂಟಿಂಗ್ ಶುರುವಾಗಿದ್ದರೂ ನನ್ನನ್ನು ಕರೆಯಲೇ ಇಲ್ಲ’ ಎಂದು ನಿರಾಸೆ ವ್ಯಕ್ತ ಪಡಿಸಿದರು.

    ಆರೇಳು ತಿಂಗಳು ನಂತರ ಪ್ರಶಾಂತ್ ನೀಲ್ ಅವರು ಕರೆ ಮಾಡಿದರು ಎಂದು ಉತ್ಸಾಹದಿಂದಲೇ ಮಾತನ್ನು ಮುಂದುವರೆಸಿದ ಪ್ರಮೋದ್, ‘ನಿನಗೊಂದು ಪಾತ್ರ ಸಿದ್ದವಿದೆ. ಹೈದರಾಬಾದ್ ಗೆ ಬನ್ನಿ, ಲುಕ್ ಟೆಸ್ಟ್ ಮಾಡಿಸೋಣ ಅಂತ ಪ್ರಶಾಂತ್ ಅವರು ಫೋನ್ ಮಾಡಿದರು. ನಿಜಕ್ಕೂ ನನಗೆ ಖುಷಿ ಆಯಿತು. ನನಗಾಗಿ ಇನ್ನೂ ಪಾತ್ರ ಕಾದಿದೆ ಎಂದು ಹೊರಟೆ. ಲುಕ್ ಟೆಸ್ಟ್ ಮಾಡಿದರೂ, ತುಂಬಾ ಮೆಚ್ಚುಗೆ ಸೂಚಿಸಿದರು. ಈ ರೀತಿಯ ಪಾತ್ರ ಕೊಡುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ನನ್ನ ವೃತ್ತಿ ಜೀವನದ ಬೆಸ್ಟ್ ಪಾತ್ರ ಮತ್ತು ಸಿನಿಮಾ ಇದಾಗಲಿದೆ’ ಎನ್ನುತ್ತಾರೆ ಪ್ರಶಾಂತ್.

    ಶ್ರುತಿ ನಾಯ್ಡು ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಮಾಡಿದಾಗ, ಪ್ರಮೋದ್ ಅವರ ಪಾತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆವಾಗಲೇ ಪ್ರಮೋದ್ ಬಗ್ಗೆ ಶ್ರುತಿ ನಾಯ್ಡು ಮಾತನಾಡುತ್ತಾ, ‘ಪ್ರಮೋದ್ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಿನಿಮಾದಲ್ಲಿ ಪಾತ್ರ ಮಾಡುತ್ತಾರೆ. ಒಳ್ಳೆಯ ಭವಿಷ್ಯವಿದೆ’ ಎಂದು ನುಡಿದಿದ್ದರು. ಇದೀಗ ಪ್ರಮೋದ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೊಡ್ಡ ಪಾತ್ರವನ್ನೇ ಮಾಡಿದ್ದಾರೆ. ಪ್ರಭಾಸ್, ಪೃಥ್ವಿ ಸುಕುಮಾರ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ದಿಗ್ಗಜರೇ ನಟಿಸಿರುವ ಸಲಾರ್ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]