Tag: Shruti Haasan

  • ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಬಾಲಿವುಡ್ ನ ವಿವಾದಿತ ಸಿನಿಮಾ ವಿಮರ್ಶಕನೆಂದೇ ಖ್ಯಾತನಾಗಿರುವ ಉಮೈರ್ ಸಂಧು (Umair Sandhu) , ಮೊದ ಮೊದಲು ಸಿನಿಮಾ ರಿಲೀಸ್ ಗೂ ಮುನ್ನ ಚಿತ್ರದ ಬಗ್ಗೆ ವಿಮರ್ಶೆ ಮಾಡಿ ಸಂಚಲನ ಸೃಷ್ಟಿಸುತ್ತಿದ್ದ. ಅದರಲ್ಲೂ ವಿದೇಶದಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ನಾನು ಸೆನ್ಸಾರ್ ಮಂಡಳಿಯ ಸದಸ್ಯನೆಂದು ಹೇಳಿಕೊಂಡು, ರಿಲೀಸ್ ಗೂ ಮುನ್ನವೇ ಚಿತ್ರ ವಿಮರ್ಶೆ ಪ್ರಕಟಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಉಮೈರ್ ಸಿಲೆಬ್ರಿಟಿಗಳ ಹಿಂದೆ ಬಿದ್ದಿದ್ದಾನೆ.

    ಉಮೈರ್ ಸಂಧು ಸಿಲೆಬ್ರಿಟಿಗಳ ಬಗ್ಗೆ ಕಾಮೆಂಟ್ ಮಾಡುವುದು, ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಹೊಸದೇನೂ ಅಲ್ಲ. ಈವರೆಗೂ ಬಾಲಿವುಡ್ ನಟ ನಟಿಯರ ಬಗ್ಗೆ ಕಾಮೆಂಟ್ ಮಾಡುತ್ತಿದ್ದವರು. ಇದೀಗ ದಕ್ಷಿಣದ ತಾರೆಯರ ಹಿಂದೆ ಬಿದ್ದಿದ್ದಾರೆ. ಈ ಬಾರಿ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಬಗ್ಗೆ ಟ್ವೀಟ್ ಮಾಡಿದ್ದಾರೆ ಉಮೈರ್. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಶ್ರುತಿ ಹಾಸನ್ (Shruti Haasan) ಬಗ್ಗೆ ಟ್ವೀಟ್ ಮಾಡಿರುವ ಉಮೈರ್, ‘ಶ್ರುತಿ ಹಾಸನ್ ಸೈಕೋ (Psycho) ವುಮನ್. ಅವರು ಇತ್ತೀಚಿನ ದಿನಗಳಲ್ಲಿ ಆಂಟಿ ಡಿಪ್ರೆಸೆಂಟ್ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಅವರ ಬಾಯ್ ಫ್ರೆಂಡ್ ಜೊತೆ ನಿತ್ಯವೂ ಅವರು ಡ್ರಗ್ಸ್ (Drugs) ಸೇವಿಸುತ್ತಾರೆ. ನಿನ್ನೆ ರಾತ್ರಿ ಕೂಡ ಶ್ರುತಿ ಅವರು ತಮ್ಮ ತಂದೆ ಕಮಲ್ ಹಾಸನ್ ಜೊತೆ ಜಗಳ ಮಾಡಿಕೊಂಡಿದ್ದರು’ ಎಂದು ಟ್ವೀಟ್ ಮಾಡಿದ್ದಾರೆ.

     

    ಉಮೈರ್ ಸಂಧು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ಟ್ವೀಟ್ ಗೆ ಕಾಮೆಂಟ್ ಮಾಡಿದ್ದಾರೆ. ಶ್ರುತಿ ಹಾಸನ್ ಅವರು ಶಂತನು ಹಜಾರಿಕಾ (Shantanu Hazarika) ಅವರ ಜೊತೆ ಡೇಟಿಂಗ್ ಮಾಡುತ್ತಿರುವುದು ಗುಟ್ಟಿನ ವಿಚಾರವೇನೂ ಅಲ್ಲ. ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಡ್ರಗ್ಸ್ ತೆಗೆದುಕೊಳ್ಳುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬೋಲ್ಡ್ ಅವತಾರ ತಾಳಿದ ಶ್ರುತಿ ಹಾಸನ್

    ಬೋಲ್ಡ್ ಅವತಾರ ತಾಳಿದ ಶ್ರುತಿ ಹಾಸನ್

    ‘ಸಲಾರ್’ (Salaar) ಬ್ಯೂಟಿ ಶ್ರುತಿ ಹಾಸನ್ (Shruti Haasan) ಅವರು ಸದ್ಯ ಕಾನ್ ಫೆಸ್ಟಿವಲ್‌ನಲ್ಲಿ (Cannes Festival 2023) ಪಾಲ್ಗೊಂಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:‘ಕೊರಗಜ್ಜ’ ಸಿನಿಮಾಗೆ ಬಾಲಿವುಡ್ ನಟ ಕಬೀರ್ ಬೇಡಿ ಕನ್ನಡದಲ್ಲಿ ಡಬ್ಬಿಂಗ್

    ತೆಲುಗು- ತಮಿಳಿನ ಸೂಪರ್ ಸ್ಟಾರ್‌ಗಳಿಗೆ ನಾಯಕಿಯಾಗುವ ಮೂಲಕ ಶ್ರುತಿ ಹಾಸನ್ ಚಿತ್ರರಂಗದಲ್ಲಿ ಮೋಡಿ ಮಾಡ್ತಿದ್ದಾರೆ. ಸಾಲು ಸಾಲು ಬಂಪರ್ ಆಫರ್‌ಗಳು ಅವರ ಕೈಯಲ್ಲಿದೆ. ನಟಿ, ಗಾಯಕಿಯಾಗಿ ಕಮಲ್ ಪುತ್ರಿ ಗುರುತಿಸಿಕೊಂಡಿದ್ದಾರೆ.

     

    View this post on Instagram

     

    A post shared by Shruti Haasan (@shrutzhaasan)

    ಫ್ರಾನ್ಸ್‌ನಲ್ಲಿ ಕಾನ್ ಫೆಸ್ಟಿವಲ್ ಮೇ 16ರಿಂದ ಶುರುವಾಗಿ ಮೇ 27ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್, ಐಶ್ವರ್ಯ ರೈ, ಇಶಾ ದತ್ತ್, ಅದಿತಿ ರಾವ್ ಹೈದರಿ (Aditi Rao Hydari) ಸೇರಿದಂತೆ ಹಲವು ನಟಿಮಣಿಯರು ರೆಡಿ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

     

    View this post on Instagram

     

    A post shared by Shruti Haasan (@shrutzhaasan)

    ಇದೀಗ ಕಾನ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ, ಕಪ್ಪು ಬಣ್ಣದ ಹೂವಿನ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಸಲಾರ್ ಸುಂದರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

  • ಲಂಡನ್‌ನಲ್ಲಿ ‘ಸಲಾರ್’ ನಟಿ ಶ್ರುತಿ ಹಾಸನ್ ನ್ಯೂ ಫೋಟೋಶೂಟ್

    ಲಂಡನ್‌ನಲ್ಲಿ ‘ಸಲಾರ್’ ನಟಿ ಶ್ರುತಿ ಹಾಸನ್ ನ್ಯೂ ಫೋಟೋಶೂಟ್

    ‘ಸಲಾರ್’ (Salaar) ಸುಂದರಿ ಶ್ರುತಿ ಹಾಸನ್ ಲಂಡನ್‌ಗೆ ಹಾರಿದ್ದಾರೆ. ದೇಸಿ ಲುಕ್‌ನಲ್ಲಿ ಹೊಸ ಫೋಟೋಶೂಟ್ ಮೂಲಕ ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈ ವರ್ಷ ಬಾಲಯ್ಯ- ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ನಟನೆಯ ಸಿನಿಮಾಗಳಿಗೆ ನಾಯಕಿಯಾಗುವ ಮೂಲಕ ಗ್ರ್ಯಾಂಡ್ ಓಪನಿಂಗ್ಸ್ ಪಡೆದುಕೊಂಡಿದ್ದರು. ಸದ್ಯ ಪ್ರಭಾಸ್ ಜೊತೆಗಿನ ‘ಸಲಾರ್’ (Salaar) ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.

     

    View this post on Instagram

     

    A post shared by Shruti Haasan (@shrutzhaasan)

    ಸದ್ಯ ಲೈಟ್ ಬಣ್ಣದ ಡ್ರೆಸ್‌ನಲ್ಲಿ ಶ್ರುತಿ ಮಿಂಚಿದ್ದಾರೆ. ಲಂಡನ್‌ನಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲಿಯೂ ಶ್ರುತಿಯ ತುಟಿಯುಂಗುರದ ಬಗ್ಗೆ ಕಾಮೆಂಟ್ ಸೆಕ್ಷನ್‌ನಲ್ಲಿ ಚರ್ಚೆಯಾಗುತ್ತಿದೆ. ಒಟ್ನಲ್ಲಿ ಶ್ರುತಿ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಲಂಡನ್‌ಗೆ ತೆರಳಿ ಹಾಡು ರೆಕಾರ್ಡ್ ಮಾಡುತ್ತಿರುವ ವಿಡಿಯೋವನ್ನು ಶ್ರುತಿ ಹಾಸನ್ ಹಂಚಿಕೊಂಡಿದ್ದಾರೆ. ಹೊಸ ಆಲ್ಬಂ ಬಿಡುಗಡೆ ಮಾಡುತ್ತಿದ್ದಾರಾ ಕಾದು ನೋಡಬೇಕಿದೆ. ಇದನ್ನೂ ಓದಿ:’ಟೈಗರ್ ನಾಗೇಶ್ವರ್ ರಾವ್’ ಸಿನಿಮಾದ ಕನ್ನಡ ಫಸ್ಟ್ ಲುಕ್ ಗೆ ಶಿವಣ್ಣ ವಾಯ್ಸ್

    ನ್ಯಾಚುರಲ್ ಸ್ಟಾರ್ ನಾನಿ ಮುಂದಿನ ಸಿನಿಮಾ ‘ಥರ್ಡ್ ಐ’ ಹೆಸರಿನ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿದ್ದಾರೆ. ಒಂದಿಷ್ಟು ಹೊಸ ಪ್ರಾಜೆಕ್ಟ್ ಮಾತುಕತೆಯಲ್ಲಿದ್ದಾರೆ.

  • ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan)  ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರುತಿ ಹಾಸನ್ (Shruti Haasan) ನಂತರದ ದಿನಗಳಲ್ಲಿ ಸರಿಯಾದ ಹಿಟ್‌ಗಳಿಲ್ಲದೇ ಸಾಕಷ್ಟು ವರ್ಷಗಳ ಕಾಲ ಐರೆನ್ ಲೆಗ್ ಎಂದು ಹಂಗಿಸಿದ್ದರು. ಇದೀಗ ಮತ್ತೆ ಶ್ರುತಿ ಹಾಸನ್ ಅಬ್ಬರ ಜೋರಾಗಿದೆ. ಟೀಕಿಸಿದವರಿಗೆ ಶ್ರುತಿ ಉತ್ತರಿಸಿದ್ದಾರೆ. ಇದನ್ನೂ ಓದಿ:ನಟಿ ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?

    ಶ್ರುತಿ ಹಾಸನ್ ಅವರು ಸದಾ ಲವ್, ಡೇಟಿಂಗ್, ಬ್ರೇಕಪ್ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಇದೀಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಮೂಲಕ ಕಮಾಲ್ ಮಾಡ್ತಿದ್ದಾರೆ.

    ಗ್ಯಾಪ್ ಬಳಿಕ ಶ್ರುತಿ ಹಾಸನ್, ರವಿತೇಜಾ ಜೊತೆ ಕ್ರ್ಯಾಕ್, ಪವನ್ ಕಲ್ಯಾಣ್ ಜೊತೆ ‘ವಕೀಲ್ ಸಾಬ್’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಈ ವರ್ಷ ‘ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಜೊತೆ ಶ್ರುತಿ ನಟಿಸಿದ್ದರು. ‘ವಾಲ್ತೇರು ವೀರಯ್ಯ’ ಸಿನಿಮಾದಲ್ಲಿ  ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ನಟಿಸಿದ್ದರು.

    ಈ ವರ್ಷ ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಐರೆನ್ ಲೆಗ್ (Iron Leg) ಎಂಬ ಟೀಕೆಗೆ ತನ್ನ ಸಕ್ಸಸ್‌ನಿಂದ ಖಡಕ್ ಉತ್ತರ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್‌ʼನಲ್ಲಿ (Salaar) ನಾಯಕಿಯಾಗಿ ನಟಿಸಿದ್ದಾರೆ.

  • ಧನುಷ್ ವಿಚ್ಛೇದನಕ್ಕೆ ಕಾರಣ ನಾನಲ್ಲ : ನಟಿ ಶ್ರುತಿ ಹಾಸನ್

    ಧನುಷ್ ವಿಚ್ಛೇದನಕ್ಕೆ ಕಾರಣ ನಾನಲ್ಲ : ನಟಿ ಶ್ರುತಿ ಹಾಸನ್

    ಮಿಳಿನ ಖ್ಯಾತ ನಟ ಧನುಷ್ (Dhanush) ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಡುವಿನ ಮನಸ್ತಾಪ ಹಾಗೂ ಡಿವೋರ್ಸ್ (Divorced) ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಜೋಡಿಯು ದೂರ ಆಗುವುದಕ್ಕೆ ಧನುಷ್ ಜೊತೆ ನಟಿಸಿದ ಒಬ್ಬ ನಟಿಯು ಕಾರಣ ಎಂದು ಸುದ್ದಿ ಆಗಿತ್ತು. ಆ ನಟಿ ಬೇರೆ ಯಾರೂ ಅಲ್ಲ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಶ್ರುತಿ ಟ್ರೋಲ್ ಕೂಡ ಆಗಿದ್ದರು. ಇದೀಗ ಈ ಕುರಿತು ಶ್ರುತಿ ಮಾತನಾಡಿದ್ದಾರೆ.

    ಧನುಷ್ ಮತ್ತು ಐಶ್ವರ್ಯ ಡಿವೋರ್ಸ್  ಕುರಿತಾಗಿ ಮಾತನಾಡಿರುವ ಶ್ರುತಿ ಹಾಸನ್, ‘ಅವರ ಬದುಕಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕಾರಣದಿಂದಾಗಿ ದೂರವಾಗಿಲ್ಲ. ನಾನು ಮತ್ತು ಧನುಷ್ ಒಳ್ಳೆಯ ಸ್ನೇಹಿತರು ನಿಜ. ಅದು ಕೇವಲ ವೃತ್ತಿ ಸ್ನೇಹವಾಗಿತ್ತು. ನನ್ನ ಕಷ್ಟದ ದಿನಗಳಲ್ಲಿ ಅವರು ಸಹಾಯ ಮಾಡಿದ್ದಾರೆ. ಅದರಾಚೆ ಯಾವುದೇ ಸಂಬಂಧವಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಧನುಷ್ ಅತ್ಯುತ್ತಮ ನಟನಾದರೆ, ಐಶ್ವರ್ಯ ರಜನಿಕಾಂತ್ ಹೊಸ ಆಲೋಚನೆಯ ನಿರ್ದೇಶಕಿ. ಈ ಜೋಡಿಗೆ ಎರಡು ಮಕ್ಕಳು ಕೂಡ ಇವೆ. ಖುಷಿ ಖುಷಿಯಾಗಿಯೇ ಇದ್ದ ಸಂಬಂಧದಲ್ಲಿ ಬಿರುಕು ಮೂಡಿತು. ಆನಂತರ ಇಬ್ಬರೂ ದೂರವಾಗಲು ನಿರ್ಧರಿಸಿದರು. ಸ್ವತಃ ರಜನಿಕಾಂತ್ ಅವರೇ ಇಬ್ಬರನ್ನೂ ಸರಿ ಮಾಡಲು ಪ್ರಯತ್ನಪಟ್ಟರು ಅದು ಸಾಧ್ಯವಾಗಲಿಲ್ಲ. ಹಾಗಾಗಿ ಇಬ್ಬರೂ ದೂರವಾಗಿದ್ದಾರೆ.

    ಐಶ್ವರ್ಯ ಹೊಸ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಧನುಷ್ ಕೂಡ ಹಲವು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರ ಡಿವೋರ್ಸ್ ವಿಚಾರ ಮಾತ್ರ ಎರಡೂ ಕುಟುಂಬಕ್ಕೆ ನೋವು ತಂದಿದ್ದು ಸುಳ್ಳಲ್ಲ.

  • ಬಾಯ್ ಫ್ರೆಂಡ್  ಜೊತೆಗಿನ ‘ಆ’ ಫೋಟೋ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ

    ಬಾಯ್ ಫ್ರೆಂಡ್ ಜೊತೆಗಿನ ‘ಆ’ ಫೋಟೋ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ

    ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಹಾಗೂ ನಟಿಯೂ ಆಗಿರುವ ಶ್ರುತಿ ಹಾಸನ್ (Shruti Haasan) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಖಾಸಗಿ ಕ್ಷಣದ ಆ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ, ಇಂಥ ಫೋಟೊ ಹಂಚಿಕೊಳ್ಳಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಹಲವು ವರ್ಷಗಳಿಂದ ಶ್ರುತಿ ಹಾಸನ್, ಶಾಂತನು (Shantanu) ಜೊತೆ ರಿಲೇಷನ್ ಶಿಪ್ ನಲ್ಲಿ (Relationship) ಇದ್ದಾರೆ. ಅಲ್ಲದೇ, ಮುಂಬೈನಲ್ಲಿ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ. ಶಾಂತನು ಜೊತೆಗಿನ ಸಂಬಂಧಕ್ಕಾಗಿ ಸಾಕಷ್ಟು ಸುದ್ದಿ ಕೂಡ ಮಾಡಿದ್ದಾರೆ. ಶಾಂತನು ಕುರಿತಾಗಿ ಆಗಾಗ್ಗೆ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಬೆಡ್ ರೂಮ್ ನಲ್ಲಿರುವ ಫೋಟೋ ಹಂಚಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

    ಇಬ್ಬರೂ ಅರೆನಗ್ನರಂತೆ ಕಾಣುವ ಫೋಟೋವೊಂದನ್ನು ಶೇರ್ ಮಾಡಿರುವ ಶ್ರುತಿ ಹಾಸನ್, ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶಾಂತನು ಮೇಲಿನ ಪ್ರೀತಿಯನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.

    ಶಾಂತನು ಮತ್ತು ಶ್ರುತಿ ಹಾಸನ್ ಹಲವು ವರ್ಷಗಳಿಂದ ಸಹಜೀವನ ನಡೆಸುತ್ತಿರುವುದು ಗುಟ್ಟಿನ ಸಂಗತಿ ಏನೂ ಅಲ್ಲ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ಪ್ರವಾಸಗಳನ್ನು ಒಟ್ಟಿಗೆ ಮಾಡಿದ್ದಾರೆ. ಹಾಗಾಗಿ ಈ ಫೋಟೋಗಳು ಸಹಜ ಎನ್ನುವ ಕಾಮೆಂಟ್ ಕೂಡ ಹರಿದಾಡುತ್ತಿವೆ.

  • Breaking- ಮಾರ್ಚ್ 5 ರಿಂದ ಯುರೋಪ್ ನಲ್ಲಿ ಸಲಾರ್ ಶೂಟಿಂಗ್

    Breaking- ಮಾರ್ಚ್ 5 ರಿಂದ ಯುರೋಪ್ ನಲ್ಲಿ ಸಲಾರ್ ಶೂಟಿಂಗ್

    ಪ್ರಶಾಂತ್ ನೀಲ್ (Prashant Neil) ಮತ್ತು ಪ್ರಭಾಸ್ (Prabhas) ಕಾಂಬಿನೇಷನ್ ನ ‘ಸಲಾರ್’ (Salar) ಸಿನಿಮಾದ ಚಿತ್ರೀಕರಣದ ಹೊಸ ಅಪ್ ಡೇಟ್ ಸಿಕ್ಕಿದೆ. ಮಾರ್ಚ್ 3 ರಿಂದ ಇಡೀ ಚಿತ್ರತಂಡ ಯುರೋಪ್ (Europe) ನತ್ತ ಪ್ರಯಾಣ ಬೆಳೆಸಲಿದೆ. ಹಲವು ದಿನಗಳ ಕಾಲ ಯುರೋಪ್ ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಹೈದರಾಬಾದ್ ಸೇರಿದಂತೆ ಹಲವು ಕಡೆ ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಯುರೋಪ್ ನಲ್ಲಿ ಮಹತ್ವದ ದೃಶ್ಯಗಳನ್ನು ಸೆರೆ ಹಿಡಿಯಲಿದೆ.

    ನಿನ್ನೆಯಷ್ಟೇ ಚಿತ್ರದ ನಾಯಕಿ ಶ್ರುತಿ ಹಾಸನ್ (Shruti Haasan) ಫೋಟೋವೊಂದನ್ನು ಶೇರ್ ಮಾಡಿ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿರುವುದಾಗಿ ಬರೆದುಕೊಂಡಿದ್ದಾರೆ. ಶೂಟಿಂಗ್ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಿನಿಮಾಟೋಗ್ರಾಫರ್ ಭುವನ್ ಗೌಡ ಜೊತೆಗಿನ ಫೋಟೋವನ್ನೂ ಅವರು ಹಾಕಿಕೊಂಡಿದ್ದಾರೆ. ಇಡೀ ತಂಡಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

    ಈ ಸಿನಿಮಾ ಹಲವು ವಿಶೇಷಗಳನ್ನು ಹೊಂದಿದೆ ಎಂದು ಸ್ವತಃ ತಾರಾಗಣವೇ ಆಗಾಗ್ಗೆ ಹೇಳಿಕೊಂಡಿದೆ. ಪ್ರಭಾಸ್ ಜೊತೆ ಕನ್ನಡದ ಮತ್ತೋರ್ವ ನಾಯಕ ಪ್ರಮೋದ್ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಯಶ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ. ಇದನ್ನೂ ಓದಿ:ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ಬಹುಕೋಟಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿದ್ದು, ಈ ವರ್ಷದ ಮಧ್ಯದಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಪ್ರಭಾಸ್ ಕಾರಣದಿಂದಾಗಿ ಚಿತ್ರೀಕರಣ ತಡವಾಗಿತ್ತು. ಹಾಗಾಗಿ ಇನ್ನು ಕೆಲವೇ ಹಂತಗಳ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್‌ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ `ಸಲಾರ್’ ಬೆಡಗಿ ಶ್ರುತಿ

    ಬಾಯ್‌ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ `ಸಲಾರ್’ ಬೆಡಗಿ ಶ್ರುತಿ

    ಸೌತ್ ಬೆಡಗಿ ಶ್ರುತಿ ಹಾಸನ್ (Shruti Haasan) ಇದೀಗ ತಮ್ಮ 37ನೇ ಹುಟ್ಟುಹಬ್ಬದ (Birthday)ಸಂಭ್ರಮದಲ್ಲಿದ್ದಾರೆ. ತಮ್ಮ ಬರ್ತಡೇಯನ್ನು ಬಾಯ್‌ಫ್ರೆಂಡ್ ಜೊತೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಬಹುಭಾಷಾ ನಟಿ ಶ್ರುತಿ ಹಾಸನ್ ತಮ್ಮ ಹುಟ್ಟುಹಬ್ಬವನ್ನ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ (Shantanu Hajarika), ಶ್ರುತಿ ಹುಟ್ಟಿದ ದಿನವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ. ನಟಿಯ ಹುಟ್ಟುಹಬ್ಬದಲ್ಲಿ ಕೆಲ ಆಪ್ತರು ಕೂಡ ಭಾಗವಹಿಸಿದ್ದಾರೆ.

    ಸಾಕಷ್ಟು ವರ್ಷಗಳಿಂದ ಶ್ರುತಿ ಮತ್ತು ಶಾಂತನು ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರು ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಸದ್ಯದಲ್ಲೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

     

    View this post on Instagram

     

    A post shared by Hombale Films (@hombalefilms)

    ಇನ್ನೂ ಹೊಂಬಾಳೆ ಸಂಸ್ಥೆ ನಿರ್ಮಾಣದ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ `ಸಲಾರ್’  (Salar Film) ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್‌ಗಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಮಾನಸಿಕ ಸಮಸ್ಯೆ’ ಎಂದವರಿಗೆ ಖಡಕ್‌ ಉತ್ತರ ಕೊಟ್ರು ಶ್ರುತಿ ಹಾಸನ್

    `ಮಾನಸಿಕ ಸಮಸ್ಯೆ’ ಎಂದವರಿಗೆ ಖಡಕ್‌ ಉತ್ತರ ಕೊಟ್ರು ಶ್ರುತಿ ಹಾಸನ್

    ಸೌತ್ ಬ್ಯೂಟಿ ಶ್ರುತಿ ಹಾಸನ್ (Shruti Haasan) ಸಿನಿಮಾ ಕೆರಿಯರ್‌ಗೆ ಇತ್ತೀಚೆಗೆ ಯಾವುದೇ ಚಿತ್ರ ಬಿಗ್ ಬ್ರೇಕ್ ಕೊಡದೇ ಇದ್ದರೂ ಈ ನಟಿಗೆ ಇರುವ ಡಿಮ್ಯಾಂಡ್ ಕೊಂಚವೂ ಕಮ್ಮಿಯಾಗಿಲ್ಲ. ಹೀಗಿರುವಾಗ ಬಾಲಯ್ಯ ಮತ್ತು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆಗಿನ ಎರಡು ಸಿನಿಮಾಗಳು ರಿಲೀಸ್ ಆಗಿದೆ. ಈ ಚಿತ್ರದ ಪ್ರಿ ರಿಲೀಸ್ ಇವೆಂಟ್‌ಗೆ ಶ್ರುತಿ ಗೈರಾಗಿದ್ದರು. ಇದನ್ನ ಗಮನಿಸಿ ನೆಟ್ಟಿಗರು ಶ್ರುತಿಗೆ ಮಾನಸಿಕ ಸಮಸ್ಯೆಯಿದೆ (Mental Health) ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಟಿ ತಿರುಗೇಟು ಕೊಟ್ಟಿದ್ದಾರೆ.

    ಶ್ರುತಿ ಸದ್ಯ ಸಲಾರ್‌ನಲ್ಲಿ (Salar) ಬ್ಯುಸಿಯಾಗಿದ್ದಾರೆ. ನಟಿಯ ಲಿಸ್ಟ್‌ನಲ್ಲಿ ಕೈತುಂಬಾ ಸಿನಿಮಾಗಳಿವೆ. ಇದರ ಮಧ್ಯೆ ಚಿರಂಜೀವಿ ಜೊತೆಗೆ `ವಾಲ್ತೇರ್ ವೀರಯ್ಯ’ ಮತ್ತು ಬಾಲಯ್ಯಗೆ ನಾಯಕಿಯಾಗಿ `ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರಗಳಲ್ಲಿ ಶ್ರುತಿ ನಟಿಸಿದ್ದರು. ಈ ಸಿನಿಮಾ ಇದೀಗ ತೆರೆ ಕಂಡಿದೆ. ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಗೈರಾಗಿದ್ದರು. ಇದನ್ನೆಲ್ಲ ಗಮನಿಸಿರುವ ಕೆಲ ನೆಟ್ಟಿಗರು ನಟ್ಟಿಗೆ ಹಿಗ್ಗಾಮುಗ್ಗಾ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಜಶ್ವಂತ್ ನನ್ನ ಜೊತೆಯಿಲ್ಲ ಎಂದು ಬೇಸರಪಡಲ್ಲ: ಬ್ರೇಕಪ್ ಬಗ್ಗೆ ನಂದು ಪ್ರತಿಕ್ರಿಯೆ

    ಈ ಬಗ್ಗೆ ಶ್ರುತಿ ಫುಲ್ ಗರಂ ಆಗಿದ್ದಾರೆ. ಮಾನಸಿಕ ಸಮಸ್ಯೆಯಿದೆ ಎಂದವರಿಗೆ ಶ್ರುತಿ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಕೊಟ್ಟಿದ್ದಾರೆ. ನನಗೆ ಜ್ವರ ಇತ್ತು ಅಷ್ಟೇ ಈಗ ಮಾನಸಿಕ ಸಮಸ್ಯೆ ಆಗಿ ಬದಲಾಗುತ್ತಿದೆ. ನಾನು ಯಾವಾಗಲೂ ಮಾನಸಿಕ ಆರೋಗ್ಯ ವಕೀಲೆಯಾಗಿ ಇರುತ್ತೇನೆ. ನನಗೆ ಜ್ವರವಿತ್ತು ಅಷ್ಟೇ. ನೀವು ದಯವಿಟ್ಟು ವೈದ್ಯರನ್ನ ಸಂಪರ್ಕಿಸಿ ಎಂದು ಮಾತನಾಡಿದ್ದಾರೆ.

    ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಗುಣಮುಖಳಾದ ಮೇಲೆ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗುತ್ತೇನೆ ಎಂದು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್

    ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್

    ಸೌತ್ ಸುಂದರಿ ಶ್ರುತಿ ಹಾಸನ್ ಸಿನಿಮಾ ವಿಚಾರವಲ್ಲದೇ ಆಗಾಗ ತಮ್ಮ ವೈಯಕ್ತಿಕ ವಿಚಾರವಾಗಿವೂ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ (Romantic) ಫೋಟೋ ಹಂಚಿಕೊಂಡಿದ್ದಾರೆ.

    ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ (Shruti Haasan) ಟಾಲಿವುಡ್, ಬಾಲಿವುಡ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಆಕ್ಟ್ ಮಾಡುತ್ತ ಬ್ಯುಸಿಯಾಗಿದ್ದಾರೆ. ಒಂದಿಷ್ಟು ಬ್ರೇಕಪ್ ನಂತರ ಇದೀಗ ಸಂತಾನೂ ಹಜಾರಿಕಾ (Santanu Hazarika) ಜೊತೆ ನಟಿ ಡೇಟಿಂಗ್ ಮಾಡ್ತಿದ್ದಾರೆ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ಆಚರಣೆಗಾಗಿ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚೋಪ್ರಾ

    ಸದ್ಯ ಸಂತಾನೂ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ. ಒಬ್ಬರನೊಬ್ಬರು ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿ, ನನಗೆ ಬೇಕಾಗಿರುವುದು ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫ್ಯಾನ್ಸ್‌ ಈ ಜೋಡಿಗೆ, ಮದುವೆ ಯಾವಾಗ ಅಂತಾ ಕೇಳ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]