Tag: Shruti Haasan

  • ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಶ್ರುತಿ ಹಾಸನ್?

    ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಶ್ರುತಿ ಹಾಸನ್?

    ʻದೇವರ’ ಸಿನಿಮಾ ಬಳಿಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.NTR) ಬ್ಯುಸಿಯಾಗಿದ್ದಾರೆ. ಇದೀಗ ಈ ಚಿತ್ರದ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದಲ್ಲಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್

    ಯಾವುದೇ ಕೆಲಸವಾಗಿದ್ರೂ ಅಚ್ಚುಕಟ್ಟಾಗಿ ಕೆಲಸ ಮಾಡುವ ಶ್ರುತಿ ಹಾಸನ್ ಇದೀಗ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜ್ಯೂ.ಎನ್‌ಟಿಆರ್ ಜೊತೆ ಶ್ರುತಿ (Shruti Haasan) ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರಂತೆ. ಹಾಗಂತ ಟಾಲಿವುಡ್‌ನ ಗಲ್ಲಿಯಲ್ಲಿ ಈ ವಿಷ್ಯ ಚರ್ಚೆಯಾಗ್ತಿದೆ. ಈ ಸುದ್ದಿ ನಿಜನಾ ಎಂಬುದನ್ನು ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ. ಇದನ್ನೂ ಓದಿ:ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ಈಗಾಗಲೇ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ನಲ್ಲಿ ಶ್ರುತಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಜ್ಯೂ.ಎನ್‌ಟಿಆರ್ ಸಿನಿಮಾದಲ್ಲೂ ಅವರು ಕಾಣಿಸಿಕೊಂಡ್ರೆ ಪಡ್ಡೆಹುಡುಗರಿಗೆ ಹಬ್ಬ ಎಂದೇ ಹೇಳಬಹುದು. ಎಲ್ಲದ್ದಕ್ಕೂ ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

    ಈ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಚಿತ್ರತಂಡದ ಕಡೆಯಿಂದ ಅಫಿಷಿಯಲ್ ಅಪ್‌ಡೇಟ್ ಸಿಕ್ಕಿಲ್ಲ. ಮುಂದಿನ ವರ್ಷ ಜ.9ರಂದು ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

  • Coolie: ತಲೈವಾ ಸಿನಿಮಾದಲ್ಲಿ ಶ್ರುತಿ ಹಾಸನ್- ಪೋಸ್ಟರ್ ಔಟ್

    Coolie: ತಲೈವಾ ಸಿನಿಮಾದಲ್ಲಿ ಶ್ರುತಿ ಹಾಸನ್- ಪೋಸ್ಟರ್ ಔಟ್

    ಕಾಲಿವುಡ್‌ನ ಬಹುನಿರೀಕ್ಷಿತ ‘ಕೂಲಿ’ (Coolie) ಸಿನಿಮಾದಲ್ಲಿ ರಜನಿಕಾಂತ್ (Rajanikanth) ಜೊತೆ ಶ್ರುತಿ ಹಾಸನ್ (Shruti Haasan) ನಟಿಸುವ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ಜೊತೆಗೆ ಸಿನಿಮಾದಲ್ಲಿನ ಶ್ರುತಿ ಹಾಸನ್ ಲುಕ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ

    ‘ಕೂಲಿ’ ಸಿನಿಮಾದಲ್ಲಿನ ಶ್ರುತಿ ಪಾತ್ರದ ಲುಕ್ ರಿವೀಲ್ ಮಾಡಲಾಗಿದೆ. ಪ್ರೀತಿ ಎಂಬ ಪಾತ್ರದಲ್ಲಿ ನಟಿಸಿರುವ ಶ್ರುತಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಚೂಪಾದ ಆಯುಧ ಹಿಡಿದು ಖಡಕ್ ಲುಕ್ ಕೊಟ್ಟಿದ್ದಾರೆ. ಈ ಪೋಸ್ಟರ್ ನೋಡಿರುವ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕೌತುಕ ಮೂಡಿಸಿದೆ.

    ಅಂದಹಾಗೆ, ‘ಕೂಲಿ’ ಚಿತ್ರಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಲೈವಾ ಜೊತೆ ಕನ್ನಡದ ನಟ ಉಪೇಂದ್ರ (Upendra), ಶ್ರುತಿ ಹಾಸನ್, ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಜೈಲರ್ ಬಳಿಕ ಮತ್ತೆ ಅದೇ ಮಾಸ್ ಅವತಾರದಲ್ಲಿ ತಲೈವಾ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ‌’ಸಲಾರ್‌’ ಬಳಿಕ ಬಿಗ್‌ ಚಾನ್ಸ್- ರಜನಿಕಾಂತ್ ಸಿನಿಮಾದಲ್ಲಿ ಶ್ರುತಿ ಹಾಸನ್

    ‌’ಸಲಾರ್‌’ ಬಳಿಕ ಬಿಗ್‌ ಚಾನ್ಸ್- ರಜನಿಕಾಂತ್ ಸಿನಿಮಾದಲ್ಲಿ ಶ್ರುತಿ ಹಾಸನ್

    ಸ್ಟಾರ್ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಬಹುಬೇಡಿಕೆ ನಟಿಯಾಗಿದ್ದಾರೆ. ‘ಸಲಾರ್’ ಸಿನಿಮಾದ ನಂತರ ಬಂಪರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ನಟಿಸುವ ಅವಕಾಶ ಒಲಿದು ಬಂದಿದೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಶಿಕುಮಾರ್‌ಗೆ ಚೈತ್ರಾ ಆಚಾರ್ ನಾಯಕಿ

    ಪ್ರಭಾಸ್ ಜೊತೆಗಿನ ‘ಸಲಾರ್’ ಸಿನಿಮಾ ಆದ್ಮೇಲೆ ಯಾವುದೇ ಚಿತ್ರದ ಅಪ್‌ಡೇಟ್ ಹೊರಬಿದ್ದಿರಲಿಲ್ಲ. ಬ್ರೇಕಪ್‌ನಿಂದಲೇ ಹೆಚ್ಚು ಸುದ್ದಿಯಲ್ಲಿದ್ದ ಶ್ರುತಿ ಈಗ ಹೊಸ ಚಿತ್ರದ ಅಪ್‌ಡೇಟ್ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಕೂಲಿ’ (Coolie Film) ಚಿತ್ರಕ್ಕೆ ನಟಿ ಎಂಟ್ರಿ ಕೊಟ್ಟಿದ್ದಾರೆ.

    ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ಪ್ರಸ್ತುತ ರಜನಿಕಾಂತ್ ಬ್ಯುಸಿಯಾಗಿದ್ದಾರೆ. ಈ ತಂಡದ ಜೊತೆ ನಟಿ ಸೇರಿಕೊಂಡಿದ್ದಾರೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ‘ಕೂಲಿ’ ಚಿತ್ರೀಕರಣದಲ್ಲಿ ಮೊದಲೇ ದಿನ ಎಂದು ನಟಿ ಅಡಿಬರಹ ನೀಡಿ ಶೂಟಿಂಗ್ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋದು ಈಗ ವೈರಲ್ ಆಗಿದೆ. ಸದ್ಯ ಈ ಬ್ರೇಕಿಂಗ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ಚಿತ್ರದಲ್ಲಿ ಶ್ರುತಿ ಹಾಸನ್ ಪಾತ್ರದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ ಒಂದೇ ಚಿತ್ರದಲ್ಲಿ ರಜನಿಕಾಂತ್ (Rajanikanth) ಮತ್ತು ಶ್ರುತಿ ನಟಿಸ್ತಾರೆ ಎಂದು ಕೇಳಿ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    ಅಂದಹಾಗೆ, ಸಲಾರ್ 2, ಡಕಾಯಿತ್, ಚೆನ್ನೈ ಸ್ಟೋರಿ ಸಿನಿಮಾಗಳಲ್ಲಿ ಶ್ರುತಿ ಹಾಸನ್ ಬ್ಯುಸಿಯಾಗಿದ್ದಾರೆ. ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ.

  • ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ಶ್ರುತಿ ಹಾಸನ್ ಗರಂ

    ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ಶ್ರುತಿ ಹಾಸನ್ ಗರಂ

    ಸೌತ್ ಬ್ಯೂಟಿ ಶ್ರುತಿ ಹಾಸನ್ (Shruti Haasan) ಸಿನಿಮಾಗಿಂತ ಹೆಚ್ಚು ಖಾಸಗಿ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ. ಇದೀಗ ಅಭಿಮಾನಿಯೊಬ್ಬ, ನಿಮ್ಮ ಮದುವೆ (Wedding) ಯಾವಾಗ ಎಂದಿದ್ದಕ್ಕೆ ನಟಿ ಗರಂ ಆಗಿದ್ದಾರೆ. ಖಡಕ್ ಆಗಿ ಶ್ರುತಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ಕೂದಲಿಗೆ ಬಿತ್ತು ಕತ್ತರಿ

    ಇತ್ತೀಚೆಗೆ ಬಹುಕಾಲದ ಗೆಳೆಯ ಶಾಂತನು ಜೊತೆಗಿನ ಸಂಬಂಧಕ್ಕೆ ನಟಿ ಬ್ರೇಕ್ ಹಾಕಿದ್ದರು. ಸದ್ಯ ಸಿಂಗಲ್ ಇರುವ ಶ್ರುತಿಗೆ ಮದುವೆ ಕುರಿತು ಪ್ರಶ್ನೆ ಎದುರಾಗ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ನಟಿ ಚಾಟ್ ಸೆಷನ್ ಮಾಡಿದ್ದಾರೆ.

    ಆಗ ಅಭಿಮಾನಿಯೊಬ್ಬ, ನೀವು ಯಾವ ರೀತಿಯ ವ್ಯಕ್ತಿಯನ್ನು ಮದುವೆಯಾಗುತ್ತೀರಿ? ಎಂದು ಕೇಳಿದ್ದಾರೆ. ಅದಕ್ಕೆ ನಟಿ, ಇದು 2024 ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮದುವೆ ಯಾವಾಗ ಆಗ್ತೀರಾ ಎಂದು ಕೇಳಿದ್ದಾರೆ. ನಾನು ಮದುವೆ ಆಗುವುದಿಲ್ಲ ಎಂದು ಖಡಕ್ ಆಗಿ ಕಮಲ್ ಹಾಸನ್ (Kamal Haasan) ಪುತ್ರಿ ಉತ್ತರಿಸಿದ್ದಾರೆ. ಈ ಮೂಲಕ ನಾನು ಸಿಂಗಲ್ ಆಗಿಯೇ ಇರುತ್ತೇನೆ ಎಂದಿದ್ದಾರೆ.

    ಅಂದಹಾಗೆ, ಸಲಾರ್ (Salaar) ಬಳಿಕ ಸಲಾರ್ 2, ಡಕಾಯಿತ್, ಚೆನ್ನೈ ಸ್ಟೋರಿ ಸಿನಿಮಾಗಳಲ್ಲಿ ಶ್ರುತಿ ಹಾಸನ್ ಬ್ಯುಸಿಯಾಗಿದ್ದಾರೆ.

  • ಬ್ರೇಕಪ್ ಬಳಿಕ ಜೀವನ ಹೇಗಿದೆ ಎಂದು ಹಾಡಿದ ಶ್ರುತಿ ಹಾಸನ್

    ಬ್ರೇಕಪ್ ಬಳಿಕ ಜೀವನ ಹೇಗಿದೆ ಎಂದು ಹಾಡಿದ ಶ್ರುತಿ ಹಾಸನ್

    ‘ಸಲಾರ್’ (Salaar) ನಟಿ ಶ್ರುತಿ ಹಾಸನ್ (Shruti Haasan) ಇತ್ತೀಚೆಗೆ ಶಾಂತನು ಹಜಾರಿಕಾ (Santanu Hazarika) ಜೊತೆ ಬ್ರೇಕಪ್ ಮಾಡಿಕೊಂಡರು. ಇದೀಗ ಸಿಂಗಲ್ ಇರುವ ನಟಿ, ಬ್ರೇಕಪ್ ಕುರಿತಂತೆ ಗೀತೆ ರಚಿಸಿ ಆ ಹಾಡಿಗೆ ಶ್ರುತಿ ದನಿಯಾಗಿದ್ದಾರೆ. ಬ್ರೇಕಪ್ (Breakup) ಮತ್ತು ಸೆಲ್ಫ್ ಲವ್ ಬಗ್ಗೆ ಹಾಡಿನ ಮೂಲಕ ನಟಿ ತಿಳಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿವ್ಸ್ ಪಡೆದುಕೊಳ್ಳುತ್ತಿದೆ.

    ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್‌ಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಆದರೆ ಸಿನಿಮಾಗಿಂತ ಖಾಸಗಿ ಬದುಕಿನ ವಿಚಾರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಇನ್ನೇನು ಬಹುಕಾಲದ ಗೆಳೆಯ ಶಾಂತನು ಜೊತೆ ಶ್ರುತಿ ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಬ್ರೇಕಪ್ ನ್ಯೂಸ್ ಕೊಟ್ಟು ನಟಿ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:ಸಂದೇಶ್ ಪ್ರೊಡಕ್ಷನ್ಸ್ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

    View this post on Instagram

    A post shared by Shruti Haasan (@shrutzhaasan)

    ಸದ್ಯ ಮಾಜಿ ಗೆಳೆಯನ ಜೊತೆ ಬೇರೆಯಾದ್ಮೇಲೆ ಜೀವನ ಹೇಗಿದೆ ಎಂದು ತಮ್ಮ ಹಾಡಿನ ಮೂಲಕ ನಟಿ ಸುಳಿವು ನೀಡಿದ್ದಾರೆ. ನನ್ನ ಹೃದಯದ ಬಾಗಿಲು ಮುಚ್ಚಿದೆ. ಪ್ರೀತಿ ಎನ್ನುವ ಬೀಗದ ಕೈ ಬೇಕಿಲ್ಲ ಎನ್ನುವ ಅರ್ಥದಲ್ಲಿ ನಟಿ ಹಾಡಿದ್ದಾರೆ. ನಟಿಯ ಹಾಡಿಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿದೆ.

    ಅಂದಹಾಗೆ, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೊತೆಗಿನ ‘ಸಲಾರ್’ ಬಳಿಕ ಇದೀಗ ‘ಚೆನ್ನೈ ಸ್ಟೋರಿಸ್’, ಸಲಾರ್ ಪಾರ್ಟ್ 2 ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

  • ನಾನು ಸಿಂಗಲ್‌, ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ ಎಂದು ಬ್ರೇಕಪ್‌ ಬಗ್ಗೆ ತಿಳಿಸಿದ ‘ಸಲಾರ್‌’ ನಟಿ

    ನಾನು ಸಿಂಗಲ್‌, ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ ಎಂದು ಬ್ರೇಕಪ್‌ ಬಗ್ಗೆ ತಿಳಿಸಿದ ‘ಸಲಾರ್‌’ ನಟಿ

    ‘ಸಲಾರ್’ (Salaar) ಬೆಡಗಿ ಶ್ರುತಿ ಹಾಸನ್ (Shruti Hasaan) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇತ್ತೀಚೆಗೆ ಅವರ ಬ್ರೇಕಪ್ ಮ್ಯಾಟರ್ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಮೊದಲ ಬಾರಿಗೆ ಶಾಂತನು ಜೊತೆಗಿನ ಬ್ರೇಕಪ್ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಮಾರಿಗೆ ದಾರಿ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್

    ‘ಸಲಾರ್’ ನಟಿ ಶ್ರುತಿ ಅವರು ಶಾಂತನು ಹಜಾರಿಕಾ (Shantanu Hazarika) ಜೊತೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್‌ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ. ಬಹುದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ‘ಆಸ್ಕ್ ಮಿ ಅನಿಥಿಂಗ್’ ಸೆಷನ್ ಅನ್ನು ಶ್ರುತಿ ಮಾಡಿದ್ದಾರೆ. ಈ ವೇಳೆ, ಅಭಿಮಾನಿಯೊಬ್ಬರು ಶ್ರುತಿಗೆ ಸಿಂಗಲ್ ಅಥವಾ ಕಮಿಟೆಡ್ ಎಂದು ಕೇಳಿದ್ದಾರೆ.

    ನಾನು ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಸಿದ್ಧವಾಗಿಲ್ಲ. ನಾನು ಸಿಂಗಲ್. ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ. ಸದ್ಯ ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ‘ಸಲಾರ್’ ನಟಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. ಬ್ರೇಕಪ್ ಬಗ್ಗೆ ಪರೋಕ್ಷವಾಗಿ ನಟಿ ಹೇಳಿದ್ದಾರೆ.

    ಶ್ರುತಿ ಹಾಸನ್ ನಟನೆಯ ಡಕಾಯಿಟ್, ಚೆನ್ನೈ ಸ್ಟೋರಿಸ್, ಸಲಾರ್ 2 ಸೇರಿದಂತೆ ಹಲವು ಸಿನಿಮಾಗಳು ಶ್ರುತಿ ಹಾಸನ್ ಕೈಯಲ್ಲಿವೆ.

  • ಲವ್ ‍ಬ್ರೇಕಪ್ ನಂತರ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಳ್ಳಲು ಶ್ರುತಿ ನಿರ್ಧಾರ

    ಲವ್ ‍ಬ್ರೇಕಪ್ ನಂತರ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಳ್ಳಲು ಶ್ರುತಿ ನಿರ್ಧಾರ

    ಟಿ ಶ್ರುತಿ ಹಾಸನ್ ಬ್ರೇಕಪ್ ಮಾಡಿಕೊಂಡ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಇದು ನಿಜ ಎಂದು ಅವರು ಆಪ್ತರು ಮಾತಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶ್ರುತಿ ಬೆನ್ನ ಮೇಲೆ (Tattoo) ಮತ್ತೊಂದು ಟ್ಯಾಟೋ ಹಾಕಿಸಿಕೊಳ್ಳಲು ಮುಂದಾಗಿದ್ದಾರಂತೆ. ಇದು ನೋವು ಮರೆಯಲು ಮಾಡಿರುವ ಪ್ಲ್ಯಾನ್ ಎಂದು ಹೇಳಲಾಗುತ್ತಿದೆ.

    ಶಂತನು ಜೊತೆ ಚೆನ್ನಾಗಿಯೇ ಇದ್ದ ಶ್ರುತಿ ಈಗ ಸಡನ್ನಾಗಿ ಬ್ರೇಕ್ ಅಪ್  ಮಾಡಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಮದುವೆ (Marriage) ವಿಚಾರ ಎಂದು ಗೊತ್ತಾಗಿದೆ. ಶಂತನು ಮತ್ತು ಶ್ರುತಿ ಮಧ್ಯೆ ಮದುವೆ ವಿಚಾರದಲ್ಲಿ ಗಲಾಟೆ ಕಾರಣದಿಂದಾಗಿ ಇಬ್ಬರೂ ದೂರವಾಗಿದ್ದಾರೆ ಎನ್ನುವುದು ಸದ್ಯದ ವರ್ತಮಾನ.

    ಮೂರು ವರ್ಷಗಳ ಹಿಂದೆಯಷ್ಟೇ ಶ್ರುತಿ ಅವರು ಮೈಕಲ್ ಕೊರ್ಸಲ್ ಎನ್ನುವವರ ಜೊತೆ ಓಡಾಡುತ್ತಿದ್ದರು. ಅವರೇ ತಮ್ಮ ಬಾಯ್ ಫ್ರೆಂಡ್ ಅಂತಾನೂ ಪರಿಚಯಿಸಿದ್ದರು. ಆನಂತರ ಅವರೊಂದಿಗೆ ಅಂತರ ಬಯಸಿದರು. ನಂತರ ಶಂತನು ಹಜಾರಿಕಾ ಜೊತೆ ಸ್ನೇಹ ಬೆಳೆಸಿದ್ದರು.

    ಶ್ರುತಿ ಹಾಸನ್ ಮತ್ತು ಶಂತನು ಒಂದು ರೀತಿಯಲ್ಲಿ ಸಹ ಜೀವನವನ್ನೇ ನಡೆಸುತ್ತಿದ್ದರು. ಅದನ್ನು ಅವರೂ ಒಪ್ಪಿಕೊಂಡಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಅವರೊಂದಿಗೂ ಶ್ರುತಿ ಸ್ನೇಹವನ್ನು ಕಡಿದುಕೊಂಡಿದ್ದಾರಂತೆ (Love Break Up). ಅದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜೊತೆಗಿರುವ ಫೋಟೋ ಡಿಲಿಟ್ ಮಾಡಿದ್ದಾರೆ. ಮತ್ತು ಸೋಷಿಯಲ್ ಮೀಡಿಯಾ ಖಾತೆಯಿಂದ ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ಹಾಸನ್ (Shruti Haasan) ಶಾಂತನೂ ಹಜಾರಿಕಾ ಜೊತೆ ಡೇಟ್ ಮಾಡ್ತಿರೋ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ನಡುವೆ ಬಾಯ್‌ಫ್ರೆಂಡ್ (Boyfriend) ಬಗ್ಗೆ ಸ್ವೀಟ್ ಆಗಿ ದೂರು ಹಂಚಿಕೊಂಡಿದ್ದರು. ತನ್ನ ಪಾರ್ಟನರ್ ಅದೆಷ್ಟರ ಮಟ್ಟಿಗೆ ಅನ್‌ರೊಮ್ಯಾಂಟಿಕ್ ಎಂದು ಕಂಪ್ಲೇಟ್‌ವೊಂದನ್ನ ಎಲ್ಲರ ಮುಂದಿಟ್ಟಿದ್ದರು.

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶಾಂತನು (Shantanu Hazarika) ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಗೆಳೆಯ ಶಾಂತನು ಅವರನ್ನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಕರೆದಿದ್ದಾರೆ. ಶ್ರುತಿ ಹಾಸನ್ ಭಾನುವಾರ (ಜುಲೈ 2)ರಂದು  ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದರು. ನೀನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದು ಬರೆದುಕೊಂಡಿದ್ದರು. ಆದರೆ, ಈಗ ಇಬ್ಬರೂ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಶ್ರುತಿ ಹಾಸನ್ ‘ಲವ್ ಬ್ರೇಕ್ ಅಪ್’ಗೆ ಮದುವೆ ಕಾರಣ

    ಶ್ರುತಿ ಹಾಸನ್ ‘ಲವ್ ಬ್ರೇಕ್ ಅಪ್’ಗೆ ಮದುವೆ ಕಾರಣ

    ಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮತ್ತೆ ಬ್ರೇಕ್ ಅಪ್ ಮಾಡಿಕೊಂಡ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಇದು ನಿಜ ಎಂದು ಅವರು ಆಪ್ತರು ಮಾತಾಡಿಕೊಳ್ಳುತ್ತಿದ್ದಾರೆ. ಈ ಬ್ರೇಕ್ ಅಪ್ ಗೆ ಕಾರಣ ಮದುವೆ (Marriage) ವಿಚಾರ ಎಂದು ಗೊತ್ತಾಗಿದೆ. ಶಂತನು ಮತ್ತು ಶ್ರುತಿ ಮಧ್ಯೆ ಮದುವೆ ವಿಚಾರದಲ್ಲಿ ಗಲಾಟೆ ಕಾರಣದಿಂದಾಗಿ ಇಬ್ಬರೂ ದೂರವಾಗಿದ್ದಾರೆ ಎನ್ನುವುದು ಸದ್ಯದ ವರ್ತಮಾನ.

    ಮೂರು ವರ್ಷಗಳ ಹಿಂದೆಯಷ್ಟೇ ಶ್ರುತಿ ಅವರು ಮೈಕಲ್ ಕೊರ್ಸಲ್ ಎನ್ನುವವರ ಜೊತೆ ಓಡಾಡುತ್ತಿದ್ದರು. ಅವರೇ ತಮ್ಮ ಬಾಯ್ ಫ್ರೆಂಡ್ ಅಂತಾನೂ ಪರಿಚಯಿಸಿದ್ದರು. ಆನಂತರ ಅವರೊಂದಿಗೆ ಅಂತರ ಬಯಸಿದರು. ನಂತರ ಶಂತನು ಹಜಾರಿಕಾ ಜೊತೆ ಸ್ನೇಹ ಬೆಳೆಸಿದ್ದರು.

    ಶ್ರುತಿ ಹಾಸನ್ ಮತ್ತು ಶಂತನು ಒಂದು ರೀತಿಯಲ್ಲಿ ಸಹ ಜೀವನವನ್ನೇ ನಡೆಸುತ್ತಿದ್ದರು. ಅದನ್ನು ಅವರೂ ಒಪ್ಪಿಕೊಂಡಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಅವರೊಂದಿಗೂ ಶ್ರುತಿ ಸ್ನೇಹವನ್ನು ಕಡಿದುಕೊಂಡಿದ್ದಾರಂತೆ (Love Break Up). ಅದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜೊತೆಗಿರುವ ಫೋಟೋ ಡಿಲಿಟ್ ಮಾಡಿದ್ದಾರೆ. ಮತ್ತು ಸೋಷಿಯಲ್ ಮೀಡಿಯಾ ಖಾತೆಯಿಂದ ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ಹಾಸನ್ (Shruti Haasan) ಶಾಂತನೂ ಹಜಾರಿಕಾ ಜೊತೆ ಡೇಟ್ ಮಾಡ್ತಿರೋ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ನಡುವೆ ಬಾಯ್‌ಫ್ರೆಂಡ್ (Boyfriend) ಬಗ್ಗೆ ಸ್ವೀಟ್ ಆಗಿ ದೂರು ಹಂಚಿಕೊಂಡಿದ್ದರು. ತನ್ನ ಪಾರ್ಟನರ್ ಅದೆಷ್ಟರ ಮಟ್ಟಿಗೆ ಅನ್‌ರೊಮ್ಯಾಂಟಿಕ್ ಎಂದು ಕಂಪ್ಲೇಟ್‌ವೊಂದನ್ನ ಎಲ್ಲರ ಮುಂದಿಟ್ಟಿದ್ದರು.

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶಾಂತನು (Shantanu Hazarika) ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಗೆಳೆಯ ಶಾಂತನು ಅವರನ್ನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಕರೆದಿದ್ದಾರೆ. ಶ್ರುತಿ ಹಾಸನ್ ಭಾನುವಾರ (ಜುಲೈ 2)ರಂದು  ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದರು. ನೀನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದು ಬರೆದುಕೊಂಡಿದ್ದರು. ಆದರೆ, ಈಗ ಇಬ್ಬರೂ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  • 2ನೇ ಬಾಯ್ ಫ್ರೆಂಡ್ ಜೊತೆನೂ ಕಮಲ್ ಪುತ್ರಿ ಬ್ರೇಕ್ ಅಪ್

    2ನೇ ಬಾಯ್ ಫ್ರೆಂಡ್ ಜೊತೆನೂ ಕಮಲ್ ಪುತ್ರಿ ಬ್ರೇಕ್ ಅಪ್

    ಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮತ್ತೆ ಬ್ರೇಕ್ ಅಪ್ ಮಾಡಿಕೊಂಡ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಮೂರು ವರ್ಷಗಳ ಹಿಂದೆಯಷ್ಟೇ ಅವರು ಮೈಕಲ್ ಕೊರ್ಸಲ್ ಎನ್ನುವವರ ಜೊತೆ ಓಡಾಡುತ್ತಿದ್ದರು. ಅವರೇ ತಮ್ಮ ಬಾಯ್ ಫ್ರೆಂಡ್ ಅಂತಾನೂ ಪರಿಚಯಿಸಿದ್ದರು. ಆನಂತರ ಅವರೊಂದಿಗೆ ಅಂತರ ಬಯಸಿದರು. ನಂತರ ಶಂತನು ಹಜಾರಿಕಾ ಜೊತೆ ಸ್ನೇಹ ಬೆಳೆಸಿದ್ದರು.

    ಶ್ರುತಿ ಹಾಸನ್ ಮತ್ತು ಶಂತನು ಒಂದು ರೀತಿಯಲ್ಲಿ ಸಹ ಜೀವನವನ್ನೇ ನಡೆಸುತ್ತಿದ್ದರು. ಅದನ್ನು ಅವರೂ ಒಪ್ಪಿಕೊಂಡಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಅವರೊಂದಿಗೂ ಶ್ರುತಿ ಸ್ನೇಹವನ್ನು ಕಡಿದುಕೊಂಡಿದ್ದಾರಂತೆ (Love Break Up). ಅದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜೊತೆಗಿರುವ ಫೋಟೋ ಡಿಲಿಟ್ ಮಾಡಿದ್ದಾರೆ. ಮತ್ತು ಸೋಷಿಯಲ್ ಮೀಡಿಯಾ ಖಾತೆಯಿಂದ ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ಹಾಸನ್ (Shruti Haasan) ಶಾಂತನೂ ಹಜಾರಿಕಾ ಜೊತೆ ಡೇಟ್ ಮಾಡ್ತಿರೋ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ನಡುವೆ ಬಾಯ್‌ಫ್ರೆಂಡ್ (Boyfriend) ಬಗ್ಗೆ ಸ್ವೀಟ್ ಆಗಿ ದೂರು ಹಂಚಿಕೊಂಡಿದ್ದರು. ತನ್ನ ಪಾರ್ಟನರ್ ಅದೆಷ್ಟರ ಮಟ್ಟಿಗೆ ಅನ್‌ರೊಮ್ಯಾಂಟಿಕ್ ಎಂದು ಕಂಪ್ಲೇಟ್‌ವೊಂದನ್ನ ಎಲ್ಲರ ಮುಂದಿಟ್ಟಿದ್ದರು.

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶಾಂತನು (Shantanu Hazarika) ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಗೆಳೆಯ ಶಾಂತನು ಅವರನ್ನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಕರೆದಿದ್ದಾರೆ. ಶ್ರುತಿ ಹಾಸನ್ ಭಾನುವಾರ (ಜುಲೈ 2)ರಂದು  ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದರು. ನೀನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದು ಬರೆದುಕೊಂಡಿದ್ದರು. ಆದರೆ, ಈಗ ಇಬ್ಬರೂ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಒಪ್ಪಿಕೊಂಡ ಹಾಲಿವುಡ್ ಚಿತ್ರದಿಂದ ಹೊರಬಂದ ಶ್ರುತಿ ಹಾಸನ್

    ಒಪ್ಪಿಕೊಂಡ ಹಾಲಿವುಡ್ ಚಿತ್ರದಿಂದ ಹೊರಬಂದ ಶ್ರುತಿ ಹಾಸನ್

    ಇಂಗ್ಲಿಷ್ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ರೆಡಿ ಆಗುತ್ತಿರುವ ಚೆನ್ನೈ ಸ್ಟೋರಿಗೆ (Chennai Story) ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಎಂಟ್ರಿ ಆಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿ ಆಗಿತ್ತು. ಆದರೆ, ಈ ಸಿನಿಮಾದಿಂದ ಶ್ರುತಿ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಚಿತ್ರದ ಮುಹೂರ್ತವಾದಾಗ ಈ ಸಿನಿಮಾಗೆ ಸಮಂತಾ ನಾಯಕಿ ಎಂದು ಹೇಳಲಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಸಮಂತಾ ಬದಲು ಶ್ರುತಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಈಗ ಇಬ್ಬರೂ ಚಿತ್ರದಲ್ಲಿ ಇರಲ್ಲ ಎಂದು ಹೇಳಲಾಗುತ್ತಿದೆ.

    ತಿಮೇರಿ ಆರ್ ಮುರಾರಿ ಅವರ ದ ಅರೇಂಜ್ಮೆಂಟ್ ಆಫ್ ಲವ್ ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಫಿಲಿಪ್ ಜಾನ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಮೂಲಕ ಶ್ರುತಿ ಹಾಸನ್ ಹಾಲಿವುಡ್ ಗೆ ಎಂಟ್ರಿ ಪಡೆದಿದ್ದಾರೆ ಎನ್ನುವುದು ಅವರ ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿತ್ತು. ಯಾವ ಕಾರಣಕ್ಕೆ ಅವರು ಹೊರ ಬಂದಿದ್ದಾರೆ ಎನ್ನುವುದು ಗೊತ್ತಾಗಲ್ಲ.

    ನೇರಮಾತಿಗೆ ಹೆಸರು ಮಾಡಿದವರು ಶ್ರುತಿ. ಒಂದು ಕಡೆ ಸಿನಿಮಾದಿಂದ ಆಚೆ ಬಂದು ಸುದ್ದಿಯಾದರೆ ಮತ್ತೊಂದು ಕಡೆ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿಯೂ ಸುದ್ದಿ ಆಗಿದ್ದಾರೆ. ಬಾಯ್ ಫ್ರೆಂಡ್, ಡಿಪ್ರೆಷನ್ ಹೀಗೆ ಅನೇಕ ವಿಚಾರಗಳನ್ನು ಈವರೆಗೂ ಮಾತನಾಡಿದ್ದಾರೆ. ಈ ಬಾರಿ ಕುಡಿತ (Alcohol) ಮತ್ತು ಡ್ರಗ್ಸ್ (Drugs) ಬಗ್ಗೆ ಮಾತನಾಡಿದ್ದಾರೆ. ತಾನು ಕುಡಿತದ ಚಟಕ್ಕೆ ದಾಸಳಾಗಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

    ನಾನು ಸಾಕಷ್ಟು ಕುಡಿತಿದ್ದೆ. ಫ್ರೆಂಡ್ಸ್ ಸಿಕ್ಕಾಗೆಲ್ಲ ಕುಡಿತಿದ್ದೆ. ಕುಡಿತದ ಚಟ ನನ್ನನ್ನು ಆಳುತ್ತಿದೆ ಅಂತ ಅನಿಸಿತು. ಕುಡಿತದ ಬಗ್ಗೆ ಬೇಸರವಾಯಿತು. ಆಗ ಬಿಟ್ಟು ಬಿಟ್ಟು. ನಾನು ಕುಡಿಯೋದನ್ನು ಬಿಟ್ಟು ಎಂಟು ವರ್ಷಗಳೇ ಆಗಿವೆ. ಕುಡಿತಿದ್ದೆ ನಿಜ. ಆದರೆ, ಡ್ರಗ್ಸ್ ತಗೆದುಕೊಳ್ಳುತ್ತಿರಲಿಲ್ಲ. ಇವತ್ತಿನವರೆಗೂ ನಾನು ಒಂದೇ ಒಂದು ಬಾರಿಯೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ ಶ್ರುತಿ.

    ಯೂಟ್ಯೂಬ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರುತಿ, ತಮ್ಮ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅದರಲ್ಲೂ ಕುಡಿತದ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದರು. ಜೊತೆಗೆ ಇನ್ನಷ್ಟೇ ರಿಲೀಸ್ ಆಗಬೇಕಿರುವ ಸಲಾರ್ ಸಿನಿಮಾದ ಬಗ್ಗೆಯೂ ಶ್ರುತಿ ಮಾತನಾಡಿದ್ದಾರೆ.