Tag: shruthihariharan

  • ಜಗತ್ತಿನ ಎಲ್ಲಾ ಸಂತಸ ನಿನಗೆ ಸಿಗಲಿ- ಶ್ರುತಿ ವಿಡಿಯೋಗೆ ರಶ್ಮಿಕಾ ಕಮೆಂಟ್

    ಜಗತ್ತಿನ ಎಲ್ಲಾ ಸಂತಸ ನಿನಗೆ ಸಿಗಲಿ- ಶ್ರುತಿ ವಿಡಿಯೋಗೆ ರಶ್ಮಿಕಾ ಕಮೆಂಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಅವರು ಎರಡು ದಿನಗಳ ಹಿಂದೆಯಷ್ಟೇ ತಮ್ಮ ಮಗಳ ಮೊದಲ ವಿಡಿಯೋವೊಂದನ್ನು ಇನ್‍ಸ್ಟಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಶ್ರುತಿ ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರು ಮತ್ತು ಸಿನಿಮಾರಂಗದವರು ಕಮೆಂಟ್ ಮೂಲಕ ವಿಶ್ ಮಾಡುತ್ತಿದ್ದಾರೆ. ಈ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯಿಸಿದ್ದಾರೆ.

    ಸಾಮಾನ್ಯವಾಗಿ ರಶ್ಮಿಕಾ ಅವರು ಯಾವುದೇ ಪೋಸ್ಟ್ ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಶ್ರುತಿ ಹರಿಹರನ್ ಶೇರ್ ಮಾಡಿರುವ ಮಗುವಿನ ವಿಡಿಯೋಗೆ “ಜಗತ್ತಿನ ಎಲ್ಲಾ ಸಂತಸ ನಿನಗೆ ಸಿಗಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಕಮೆಂಟ್ ಮಾಡಿದ್ದಾರೆ.

    ಶ್ರುತಿ ವಿಡಿಯೋ ಅಪ್ಲೋಡ್:
    ನಟಿ ಶ್ರುತಿ ತಮ್ಮ ಮಗಳ ವಿಡಿಯೋ ಶೇರ್ ಮಾಡಿ, “ಸ್ವಲ್ಪ ದೂರ ನಡೆಯಲು ಅಥವಾ ಓಡಾಡಲು ಒಂದು ದಿನ ನಾನು ಕೊಚ್ಚೆ ಗುಂಡಿಗಳನ್ನು ಜಿಗಿಯುತ್ತೇನೆ. ಒಂದು ದಿನ ರಸ್ತೆ ದಾಟುತ್ತೇನೆ ಅಥವಾ ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದು ದಿನ ನಾನು ಪರ್ವತವನ್ನು ಅಳೆಯಬಹುದು. ಒಂದು ದಿನ ನಾನು ಬಿಗಿಹಗ್ಗದ ಮೇಲೆ ನಡೆಯುತ್ತೇನೆ ಅಥವಾ ಸಾಗರ ತಳದಲ್ಲಿ ಈಜುತ್ತೇನೆ. ಒಂದು ದಿನ ಈ ಪಾದಗಳು ಕೆಲಸಗಳನ್ನು ಮಾಡುತ್ತವೆ. ಆದರೆ ಇಂದು ಈ ಕಾಲುಗಳು ಸಂತೋಷವಾಗಿದೆ. ಎಲ್ಲಾ ಕಾಲ್ಬೆರಳುಗಳನ್ನು ಅಲುಗಿಸುತ್ತವೆ. ನಿಮ್ಮೊಂದಿಗೆ ಎರಡು ತಿಂಗಳುಗಳು ಸಂಪೂರ್ಣ ಕಳೆದಿದ್ದೇನೆ. ಈ ರೀತಿಯ ಪ್ರೀತಿಯನ್ನು ಎಂದಿಗೂ ಕಂಡಿರಲಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ಶ್ರುತಿ ಹರಿಹರನ್ ಸದ್ಯ ಕೇರಳದಲ್ಲಿದ್ದು, ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈವರೆಗೂ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪುತ್ರಿಯ ಕಾಲುಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ತಮ್ಮ ಮೊದಲ ಮಗುವಿನೊಂದಿಗೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.

    https://www.instagram.com/p/B3HExcyJ44W/?utm_source=ig_embed&utm_campaign=dlfix