Tag: Shruthi Prakash
-

`ಮನವೆಂಬ ಕಡಲ ತೀರದ’ ಚಿತ್ರಣ
ನಮ್ಮ ಸಿನಿಮಾದ ಹೆಸರು `ಕಡಲ ತೀರದ ಭಾರ್ಗವ’ (Kadala Theerada Bhargava) ಅಂತಿದೆ. ಹಾಗಂತ ಇದು ಸಾಹಿತಿ ಕೋಟ ಶಿವರಾಮ ಕಾರಂತರ ಸಿನಿಮಾವಲ್ಲ. ಅಥವಾ ಅವರ ಯಾವುದೇ ಕೃತಿಗೂ ಸಂಬಂಧಿಸಿದ್ದಲ್ಲ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯ ಸಿನಿಮಾ. ಮನುಷ್ಯನ ಮನಸ್ಸು ಒಂಥರಾ ಕೊನೆಯಿರದ ಕಡಲಿನಂತೆ. ಅದರ ಆಳ, ಅಗಲ ಎಲ್ಲವೂ ಕಡಲಿನಂತೆ, ಅಳತೆಗೆ ನಿಲುಕದ್ದು. ಅಂಥದ್ದೇ ಮನಸ್ಸಿನ ಚಿತ್ರಣ ಈ ಸಿನಿಮಾದ ಕಥಾವಸ್ತು. ಹಾಗಾಗಿ ಸಿನಿಮಾದ ಸಬ್ಜೆಕ್ಟ್‌ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ, ನಮ್ಮ ಸಿನಿಮಾಕ್ಕೆ ಈ ಟೈಟಲ್ ಇಟ್ಟಿದ್ದೇವೆ ಇದು ತೆರೆ ಕಾಣಲು ರೆಡಿಯಾಗಿರುವ `ಕಡಲ ತೀರದ ಭಾರ್ಗವ’ ಸಿನಿಮಾದ ಬಗ್ಗೆ ನಿರ್ದೇಶಕ ಪನ್ನಗ ಸೋಮಶೇಖರ್ (Pannaga Somashekar) ಮಾತನಾಡಿದ್ದಾರೆ.

ಸದ್ಯ ತನ್ನ ಟೈಟಲ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಸಿನಿಮಾ `ಕಡಲ ತೀರದ ಭಾರ್ಗವ’ ಇದೇ ಮಾ.3ಕ್ಕೆ ತೆರೆಗೆ ಬರುತ್ತಿದೆ. ಇದೇ ವೇಳೆ ಸಿನಿಮಾದ ಬಗ್ಗೆ ಮಾತಿಗೆ ಸಿಕ್ಕ ನಿರ್ದೇಶಕ ಪನ್ನಗ ಸೋಮಶೇಖರ್, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

`ಕಡಲ ತೀರದ ಭಾರ್ಗವ’ ಸುಮಾರು ನಾಲ್ಕು ವರ್ಷಗಳ ಹಿಂದಿನ ಕನಸು. ಇದೇ ಕಥೆಯನ್ನು ಮೊದಲು ಶಾರ್ಟ್ ಮೂವಿ ಮಾಡಿದ್ದೆವು. ಬಳಿಕ ಅದನ್ನೇ ಪೂರ್ಣ ಪ್ರಮಾಣದ ಸಿನಿಮಾವಾಗಿ ಮಾಡಿದ್ದೇವೆ. ಎಲ್ಲರ ಮನಮುಟ್ಟುವಂಥ ಕಥೆ ಈ ಸಿನಿಮಾದಲ್ಲಿದೆ. ಭಾರ್ಗವ ಎಲ್ಲರಿಗೂ ಇಷ್ಟವಾಗುತ್ತಾನೆ ಎಂಬುದು ನಿರ್ದೇಶಕ ಪನ್ನಗ ಅವರ ಭರವಸೆಯ ಮಾತು.
ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ `ಕಡಲ ತೀರದ ಭಾರ್ಗವ’ ಸಿನಿಮಾದ ಮೂಲಕ ಭರತ್ ಗೌಡ (Bharath Gowda) ಮತ್ತು ವರುಣ್ ರಾಜು ಪಟೇಲ್ (Varun Patel Raju) ನಾಯಕ ನಟರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ನಿರ್ಮಾಪಕರಾಗಿ ಬಂಡವಾಳ ಹೂಡಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರುತಿ ಪ್ರಕಾಶ್ (Shruthi Prakash) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್, ರಾಘವ ನಾಗ್, ಅಶ್ವಿನ್ ಹಾಸನ್ ಮೊದಲಾದವರು `ಕಡಲ ತೀರದ ಭಾರ್ಗವ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ʻಜೊತೆ ಜೊತೆಯಲಿʼ ನಟಿಯ ಹೊಸ ಫೋಟೋಶೂಟ್

ಒಟ್ಟಾರೆ ತನ್ನ ಕಂಟೆಂಟ್, ಟ್ರೇಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿರುವ `ಕಡಲ ತೀರದ ಭಾರ್ಗವ’ನ ಕಥೆ ಏನೆಂಬುದು ಮಾರ್ಚ್ 3ಕ್ಕೆ ಅನಾವರಣವಾಗಲಿದೆ.
-

ಬಾಲಿಯಲ್ಲಿ ಬಿಗ್‍ಬಾಸ್ ಹುಡುಗಿಯರು ಬಿಂದಾಸ್- ಫೋಟೋ ವೈರಲ್
ಬೆಂಗಳೂರು: ಬಿಗ್ ಬಾಸ್-5 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಶೃತಿ ಪ್ರಕಾಶ್, ಕೃಷಿ ತಾಪಂಡ ಹಾಗೂ ಅನುಪಮಾ ಗೌಡ ಬಿಂದಾಸ್ ಆಗಿ ಬಾಲಿಯಲ್ಲಿ ತಮ್ಮ ರಜೆಯನ್ನು ಕಳೆದಿದ್ದಾರೆ.
ಇತ್ತೀಚೆಗೆ ನಟಿ ಕೃಷಿ ತಾಪಂಡ, ಅನುಪಮಾ ಗೌಡ ಹಾಗೂ ಶೃತಿ ಪ್ರಕಾಶ್ ಇಂಡೋನೇಷಿಯಾದ ಬಾಲಿಗೆ ತೆರೆಳಿದ್ದರು. ಅಲ್ಲಿ ಈ ಮೂವರು ಸಾಕಷ್ಟು ಮಜಾ ಮಾಡಿದ್ದಾರೆ. ಸದ್ಯ ಬಾಲಿಯಲ್ಲಿ ಇವರು ತೆಗೆದ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಮುಗಿದ ಮೇಲೆ ರಜೆ ಕಳೆಯಲು ಹೊರಗೆ ಹೋಗಲು ಎಲ್ಲರೂ ಪ್ಲಾನ್ ಮಾಡುತ್ತಿದ್ದರು. ಆದರೆ ಕಾರಣಾಂತರದಿಂದ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಮೂವರು ನಟಿಯರು ಬಾಲಿಗೆ ಹೋಗಿ ಅಲಲಿನ ರೆಸಾರ್ಟ್‍ವೊಂದರಲ್ಲಿ ಸುಂದರ್ ಕ್ಷಣಗಳನ್ನು ಕಳೆದಿದ್ದಾರೆ.

ನಟಿ ಅನುಪಮಾ ಗೌಡ ಅವರಿಗೆ ಇದು ಮೊದಲ ಫಾರೀನ್ ಟ್ರಿಪ್. ಹಾಗಾಗಿ ಅವರು ತಮ್ಮ ಫ್ಲೈಟ್ ಟಿಕೆಟ್ ಅನ್ನು ಹಿಡಿದು ಅದರ ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಮೊದಲ ಇಂಟರ್ ನ್ಯಾಷನಲ್ ಟ್ರಿಪ್‍ಗೆ ತುಂಬಾ ಸಂತೋಷದಿಂದ ಇದ್ದರು.

ಅನುಪಮಾ ಗೌಡ, ಶೃತಿ ಪ್ರಕಾಶ್ ಹಾಗೂ ಕೃಷಿ ತಾಪಂಡ ಮೂವರು ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ಅಲ್ಲದೇ ಹೀಗಿರುವ ಹಾಗೇ ರೀತಿಯಲ್ಲೇ ಮುಂದೆಯೂ ಇರುತ್ತೇವೆ ಎಂದು ಕೃಷಿ ತಾಂಪಡ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
-

ಕನ್ನಡ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್‍ಗೆ ಹಾರಿದ ಶೃತಿ ಪ್ರಕಾಶ್
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಶೃತಿ ಪ್ರಕಾಶ್‍ಗೆ ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬಂದಿದೆ. ಕನ್ನಡದಲ್ಲಿ ಸಿನಿಮಾವೊಂದಕ್ಕೆ ಸಹಿ ಹಾಕಿದ ಶೃತಿ ಆ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡದಲ್ಲಿ ಹೊಸಬರು ಸೇರಿ ಮಾಡುತ್ತಿರುವ ‘ಲಂಡನ್ ನಲ್ಲಿ ಲಂಬೋದರ’ ಚಿತ್ರದಲ್ಲಿ ಶೃತಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶೃತಿ ನಟಿಸುವ ಮೊದಲೇ ಬಾಲಿವುಡ್‍ಗೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಶೃತಿ ಪ್ರಕಾಶ್ ಬಾಲಿವುಡ್‍ನಲ್ಲಿ ಸಾಕಷ್ಟು ಆಲ್ಬಂ ಹಾಡುಗಳನ್ನು ಹಾಡಿ, ಹಿಂದಿ ಕಿರುತರೆಯಲ್ಲಿ ಮಿಂಚಿದ್ದರು.

ಈಗ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಶೃತಿ ಮಿಂಚುತ್ತಿದ್ದಾರೆ. ಕನ್ನಡದ ಮೊದಲ ಸಿನಿಮಾ ಪ್ರಾರಂಭವಾಗುತ್ತಲೇ ಬಾಲಿವುಡ್ ಚಿತ್ರ ಕೂಡ ಸೆಟ್ಟೇರುತ್ತಿದೆ ಎಂದು ಶೃತಿ ಟ್ವಿಟ್ಟರಿನಲ್ಲಿ ತಮ್ಮ ಬಾಲಿವುಡ್ ಚಿತ್ರದ ಬಗ್ಗೆ ಟ್ವೀಟ್ ಮಾಡಿ ವಿಚಾರ ತಿಳಿಸಿದ್ದಾರೆ.
ಶೃತಿ ನಟಿಸುತ್ತಿರುವ ಈ ಚಿತ್ರಕ್ಕೆ ಗುಮ್ನಾಮ್ ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಶೃತಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಶೃತಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಲಂಡನ್‍ನಲ್ಲಿ ಲಂಬೋದರ ಚಿತ್ರದಲ್ಲಿ ನಟಿಸುತ್ತಿರುವ ಶೃತಿ ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅಭಿನಯಿಸಿ ಒಂದು ಹಾಡನ್ನು ಕೂಡ ಹಾಡಿದ್ದಾರೆ.
