Tag: Shriya Sharan

  • ಫ್ಯಾಮಿಲಿ ಆಡಿಯನ್ಸ್ ನ ಮತ್ತೆ ಥಿಯೇಟರ್ ಒಳಗೆ ಕರೆಯಿಸಿದ ‘ಕಬ್ಜ’

    ಫ್ಯಾಮಿಲಿ ಆಡಿಯನ್ಸ್ ನ ಮತ್ತೆ ಥಿಯೇಟರ್ ಒಳಗೆ ಕರೆಯಿಸಿದ ‘ಕಬ್ಜ’

    ನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ಅವರ ‘ಕಬ್ಜ’ (Kabzaa) ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ವೀಕೆಂಡ್ ನಲ್ಲೂ ಚಿತ್ರ ಬಾಕ್ಸ್ ಆಫೀಸ್ ಭರ್ತಿ ಮಾಡಿದೆ. ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ ಮತ್ತೆ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ ಹೆಗ್ಗಳಿಕೆ ಈ ಸಿನಿಮಾದ್ದು. ಈ ಚಿತ್ರದಲ್ಲಿ ಬರುವ ‘ನಮಾಮಿ ನಮಾಮಿ’ (Namami) ಹಾಡು ಮಹಿಳೆಯರಿಗೆ ಹೆಚ್ಚು ಇಷ್ಟವಾಗಿದ್ದು ಶ್ರಿಯಾ ಶರಣ್ (Shriya Sharan) ಅವರ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆಯಂತೆ. ಈ ಮಾತನ್ನು ಸ್ವತಃ ಶ್ರಿಯಾ ಹೇಳಿಕೊಂಡಿದ್ದಾರೆ.

    ನಾಳೆ ಯುಗಾದಿ ಹಬ್ಬ. ಹಾಗಾಗಿ ಮತ್ತಷ್ಟು ಶೋಗಳ ಸಂಖ್ಯೆ ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅದರಲ್ಲೂ ನಾಳೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಬರುವ ಸಾಧ್ಯತೆಯನ್ನೂ ತಿಳಿಸಿದೆ. ‘ನಮಾಮಿ’ ಹಾಡಿನಲ್ಲಿ ಶ್ರಿಯಾ ಹಾಕಿರುವ ಕಾಸ್ಟ್ಯೂಮ್, ಜ್ಯುವೆಲರಿಸ್ , ಕಾಲ್ಗೆಜ್ಜೆ ಹೀಗೆ ಮಹಿಳೆಯರನ್ನು ಗಮನ ಸೆಳೆದಿದ್ದು ಸುಳ್ಳಲ್ಲ. ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ಕಬ್ಜ ಸಿನಿಮಾ 100 ಕೋಟಿ ಕ್ಲಬ್ ಸೇರಿರುವ ಕುರಿತು ಅಧಿಕೃತವಾಗಿಯೇ ಚಿತ್ರತಂಡ ಮಾಹಿತಿ ನೀಡಿತ್ತು. ಇದೀಗ 250 ಕೋಟಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಿಯೇಟರ್ ಹಾಗೂ ಡಿಜಿಟಲ್, ಡಬ್ಬಿಂಗ್ ರೈಟ್ಸ್ ಇವೆಲ್ಲವೂ ಸೇರಿ 200 ಕೋಟಿ ರೂಪಾಯಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗುತ್ತಿದೆ.

    ನಾನಾ ಕಾರಣಗಳಿಂದಾಗಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಉಪೇಂದ್ರ (Upendra), ಸುದೀಪ್ ಮತ್ತು ಶಿವರಾಜ್ ಕುಮಾರ್ ಮೂವರು ಸ್ಟಾರ್ ನಟರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ಚಂದ್ರು ಮೇಕಿಂಗ್ ಮಾಡಿದ್ದಾರೆ. ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ನುರಿತ ತಂತ್ರಜ್ಞರ ತಂಡವೇ ಈ ಚಿತ್ರದಲ್ಲಿ ಒಂದಾಗಿದೆ.

  • Breaking- ‘ಕಬ್ಜ 2’ ಪಕ್ಕಾ : ಸುಳಿವು ನೀಡಿದ ರಿಯಲ್ ಸ್ಟಾರ್ ಉಪೇಂದ್ರ

    Breaking- ‘ಕಬ್ಜ 2’ ಪಕ್ಕಾ : ಸುಳಿವು ನೀಡಿದ ರಿಯಲ್ ಸ್ಟಾರ್ ಉಪೇಂದ್ರ

    ನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ಕಬ್ಜ (Kabzaa) ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಕಬ್ಜ 2 ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ ನಟ ಉಪೇಂದ್ರ (Upendra). ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಬ್ಜ 2 ಸಿನಿಮಾದಲ್ಲಿ ನನಗೆ ಅತಿಥಿ ಪಾತ್ರ ಕೊಡಿ, ಸುದೀಪ್ ಅವರನ್ನು ಹೀರೋ ಆಗಿ ಮಾಡಿ ಎಂದು ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು.

    ‘ಕಬ್ಜ ಇದು ನಟರ ಸಿನಿಮಾವಲ್ಲ, ಟೆಕ್ನಿಷಿಯನ್ಸ್ ಸಿನಿಮಾ. ಈ ಸಿನಿಮಾದಲ್ಲಿ ನಿರ್ದೇಶಕರು, ಸಂಗೀತ ನಿರ್ದೇಶಕರ, ಕಲಾ ನಿರ್ದೇಶಕ, ಸಿನಿಮಾಟೋಗ್ರಾಫರ್ ಕಾಣುತ್ತಾರೆ. ನಟರು ಕೇವಲ ಹಿಂದಿನ ಶಕ್ತಿ ಅಷ್ಟೇ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ. ಕಬ್ಜ 2 ಸಿನಿಮಾ ಕೂಡ ಆಗಲಿ. ಆ ಸಿನಿಮಾದಲ್ಲಿ ಸುದೀಪ್ ಮುಖ್ಯ ಪಾತ್ರ ಮಾಡಲಿ’ ಎಂದು ಹಾರೈಸಿದರು ಹಾಗೂ ಕಬ್ಜ 2 ಬರುವ ಕುರಿತು ಸುಳಿವನ್ನೂ ಅವರು ನೀಡಿದರು. ಇದನ್ನೂ ಓದಿ: ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ

    ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ್, ‘ಕಬ್ಜ ಸಿನಿಮಾದಲ್ಲಿ ನನಗೆ ಅವಕಾಶ ನೀಡಿಲ್ಲ. ನಿರ್ದೇಶಕರು ಬಹುಶಃ ನನ್ನನ್ನು ಮರೆತಿದ್ದಾರೆ. ಕಬ್ಜ 2 ನಲ್ಲಾದರೂ ಅವಕಾಶ ಕೊಡಲಿ ಎಂದರು. ಅಲ್ಲದೇ ಮೊದಲ ಶೋ ರಾತ್ರಿಯೇ ಇರಲಿ, ಬೆಳಗ್ಗೆ ಆಯೋಜನೆ ಆಗಿರಲಿ ಒಬ್ಬ ಅಭಿಮಾನಿಯಾಗಿ ಬಂದು ಥಿಯೇಟರ್ ನಲ್ಲಿ ಸಂಭ್ರಮಿಸುತ್ತೇನೆ’ ಎಂದರು.

    ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್ (Sudeep), ‘ಇಂಥದ್ದೊಂದು ಸಿನಿಮಾದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವುದು ಸಂತಸ ತಂದಿದೆ. ನಿರ್ದೇಶಕರು ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ಹೃದಯಕ್ಕೆ ಹತ್ತಿರ ಇದ್ದವರು ಸಿನಿಮಾ ಮಾಡಿದಾಗ, ಅವರಿಗೆ ಸಪೋರ್ಟ್ ಮಾಡುವುದು ನನ್ನ ಕರ್ತವ್ಯ. ನಾನು ಮಾಡಿದ್ದೇನೆ’ ಎಂದು ಹೇಳಿದರು.

    ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ನೆನಪಿರಲಿ ಪ್ರೇಮ್, ನಟಿ ಶ್ರಿಯಾ ಸರಣ್ (Shriya Sharan), ತಾನ್ಯ ಹೋಪ್, ಚಕ್ರವರ್ತಿ ಚಂದ್ರಚೂಡ, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಜಾಕ್ ಮಂಜು, ಸುದೀಪ್ ಪುತ್ರಿ ಶಾನ್ವಿ ಸೇರಿದಂತೆ ಹಲವಾರು ಸಿಲೆಬ್ರಿಟಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾದ ಹಾಡುಗಳನ್ನು ಮತ್ತು ಟ್ರೈಲರ್ ತೋರಿಸಲಾಯಿತು.

  • ಬಾಲಿವುಡ್ ನಂತರ ತಮಿಳಿನಲ್ಲೂ ಹವಾ ಸೃಷ್ಟಿಸಿದ ‘ಕಬ್ಜ’ ಸಿನಿಮಾ

    ಬಾಲಿವುಡ್ ನಂತರ ತಮಿಳಿನಲ್ಲೂ ಹವಾ ಸೃಷ್ಟಿಸಿದ ‘ಕಬ್ಜ’ ಸಿನಿಮಾ

    ನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ಕಬ್ಜ (Kabzaa) ಸಿನಿಮಾ ತಮಿಳು ಚಿತ್ರರಂಗದಲ್ಲೂ ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಚೆನ್ನೈನಲ್ಲಿ (Chennai) ನಡೆದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಟ ಉಪೇಂದ್ರ (Upendra), ನಟಿ ಶ್ರಿಯಾ ಶರಣ್ (Shriya Sharan), ಕೆ.ಪಿ ಶ್ರೀಕಾಂತ್ ಸೇರಿದಂತೆ ಚಿತ್ರತಂಡ ಹಲವಾರು ಸದಸ್ಯರು ಭಾಗಿಯಾಗಿದ್ದರು. ಕಬ್ಜ ಸಿನಿಮಾ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

    ಉಪೇಂದ್ರ, ಸುದೀಪ್​ ಅಭಿನಯದ ‘ಕಬ್ಜ’ ಅಲೆ ಜೋರಾಗಿದೆ. ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ ಅರ್ಕೇಶ್ವರನದ್ದೇ ಆರ್ಭಟ, ಭಾರ್ಗವ್ ಭಕ್ಷಿಯದ್ದೇ ಹವಾ ಆಗಿತ್ತು, ಇದೀಗ ಚೆನ್ನೈನಲ್ಲೂ ತನ್ನ ಖದರ್ ತೋರಿಸಿದೆ. ‘ಕಬ್ಜ’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಮಾತನಾಡಿದ ಉಪೇಂದ್ರ ಚಿತ್ರದ ಪ್ರಚಾರ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವುದರ ಜತೆಗೆ, ಅಭಿಮಾನಿಗಳ ಈ ಪ್ರೀತಿ ನೋಡಿ ತಮ್ಮ ಕಣ್ತುಂಬಿ ಬಂದಿದೆ ಎಂದರು. ಚಿತ್ರವನ್ನು ನೋಡಿ ಹರಸಿ, ಹಾರೈಸಿ ಎಂದರು. ತಮ್ಮ ಸಿನಿಮಾದ ಬಗ್ಗೆ ನಿರ್ದೇಶಕ ಆರ್.ಚಂದ್ರು ಅಭಿಮಾನದಿಂದ ಮಾತುಗಳನ್ನು ಆಡಿದರು.

    ನಾನಾ ಕಾರಣಗಳಿಂದಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ. 1945  ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆ ಸಿನಿಮಾದಲ್ಲಿ. ಒಂದು ಕಡೆ ಸ್ವತಂತ್ರ ಪೂರ್ವ ಮತ್ತೊಂದು ಕಡೆ ಸ್ವತಂತ್ರದ ನಂತರ ಭಾರತ ಹೇಗಿತ್ತು ಅನ್ನುವುದನ್ನು ತೋರಿಸಲಾಗಿದೆ. ‘ಕಬ್ಜ’ ಚಿತ್ರವು ಮಾರ್ಚ್ 17 ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

  • ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ

    ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ

    ಪೇಂದ್ರ, ಸುದೀಪ್​ (Sudeep) ಅಭಿನಯದ ‘ಕಬ್ಜ’ (Kabzaa) ಅಲೆ ಜೋರಾಗಿದೆ. ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ ಅರ್ಕೇಶ್ವರನದ್ದೇ ಆರ್ಭಟ, ಭಾರ್ಗವ್ ಭಕ್ಷಿಯದ್ದೇ ಹವಾ. ಆರ್​. ಚಂದ್ರು (R. Chandru) ನಿರ್ಮಾಣದ, ನಿರ್ದೇಶನದ ‘ಕಬ್ಜ’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಗುರುವಾರ ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬಂದಿದೆ. ಮುಂಬೈನಲ್ಲಿ ‘ಕಬ್ಜ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬಹಳ ಗ್ರ್ಯಾಂಡ್ ಆಗಿ ನಡೆದಿದೆ.

    ಹಿಂದಿ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಮತ್ತು ವಿತರಕ ಆನಂದ್​ ಪಂಡಿತ್​, ‘ಕಬ್ಜ’ ಚಿತ್ರದ ಹಿಂದಿ ಭಾಷೆಯ ವಿತರಣೆಯ ಹಕ್ಕುಗಳನ್ನು ಪಡೆದಾಗಲೇ, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಅದಕ್ಕೆ ತಕ್ಕ ಹಾಗೆ ಅದ್ದೂರಿಯಾಗಿ ಪ್ರಿ-ರಿಲೀಸ್ ಈವೆಂಟ್ ಆಯೋಜಿಸಿದ್ದರು ಆನಂದ್ ಪಂಡಿತ್.‌ ಮೊದಲಿಗೆ ಬುಲೆಟ್ ಮೂಲಕ ಸುಮಾರು 60 ಬೈಕ್​ಗಳಲ್ಲಿ ಎರಡೂ ವರೆ ಕಿ.ಮೀ Rallt ಮಾಡಲಾಯಿತ. ಉಪೇಂದ್ರ, ಆನಂದ್ ಪಂಡಿತ್ ಬುಲೆಟ್ ಏರಿ ಸವಾರಿ ಮಾಡಿದರು. ಇನ್ನು, ಸುದೀಪ್, ಶ್ರೇಯಾ ಶರಣ್ ಸಹ ಅವರಿಗೆ ಸಾಥ್​ ಕೊಟ್ಟರು. ಇದನ್ನೂ ಓದಿ: ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

    ನಂತರ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಮಾತನಾಡಿದ ಉಪೇಂದ್ರ, ಮುಂಬೈನಲ್ಲಿ ಚಿತ್ರದ ಪ್ರಚಾರ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವುದರ ಜತೆಗೆ, ಅಭಿಮಾನಿಗಳ ಈ ಪ್ರೀತಿ ನೋಡಿ ತಮ್ಮ ಕಣ್ತುಂಬಿ ಬಂದಿದೆ ಎಂದರು. ಚಿತ್ರವನ್ನು ನೋಡಿ ಹರಸಿ, ಹಾರೈಸಿ ಎಂದರು.

    ಸುದೀಪ್​ಗೆ ಮುಂಬೈ ಹೊಸದಲ್ಲ. ಈಗಾಗಲೇ ಅಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು, ತಮ್ಮ ಹೃದಯದಲ್ಲಿ ಮುಂಬೈ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದರು. ‘ಜನ ನಮ್ಮ ಚಿತ್ರದ ಟ್ರೇಲರ್​ಗೆ ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ. ಈ ಪ್ರೀತಿ ಚಿತ್ರ ಬಿಡುಗಡೆಯಾದ ಮೇಲೂ ಮುಂದುವರೆಯಲಿ’ ಎಂದು ಹೇಳಿದರು. ‘ಕಬ್ಜ’ ಚಿತ್ರವು ಮಾರ್ಚ್ ೧೭ ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

  • ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ‘ಕಬ್ಜ’ (Kabzaa) ಸಿನಿಮಾ ಟೀಮ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಮಾರ್ಚ್ 4ರಂದು ಚಿತ್ರದ ಟ್ರೈಲರ್ (Trailer) ರಿಲೀಸ್ ಮಾಡುತ್ತಿದ್ದು, ಟ್ರೈಲರ್ ನೋಡುವುದಕ್ಕಾಗಿಯೇ ಹಲವು ತಿಂಗಳುಗಳಿಂದ ಅಭಿಮಾನಿಗಳು ಕಾದಿದ್ದಾರೆ. ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು.

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಹಾಡು ಈಗಾಗಲೇ ಕೋಟ್ಯಂತರ ಕೇಳುಗರನ್ನು ತಲುಪಿದೆ. ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕರು. ಶನಿವಾರ (ಮಾ.4) ಸಂಜೆ 5 ಗಂಟೆ 2 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಏಕಕಾಲಕ್ಕೆ ಎಲ್ಲ ಭಾಷೆಯ ಟ್ರೈಲರ್ ಗಳು ರಿಲೀಸ್ ಆಗಲಿವೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ನಿರ್ದೇಶಕ ಆರ್.ಚಂದ್ರು (R. Chandru), ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಶ್ರೀಯಾ ಶರಣ್ (Shriya Sharan) ನಾಯಕಿಯಾಗಿದ್ದಾರೆ. ಭಾರೀ ಬಜೆಟ್, ಅದ್ಧೂರಿ ತಾರಾಗಣ ಹೊಂದಿರುವ ಚಿತ್ರ ಇದಾಗಿದೆ. ಅಲ್ಲದೇ, ಅಚ್ಚರಿ ಮೂಡಿಸುವಂತ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಯಾರೆಲ್ಲ ನಟಿಸಿದ್ದಾರೆ ಎನ್ನುವ ವಿಷಯವನ್ನು ಸದ್ಯಕ್ಕೆ ಹೇಳುವುದಿಲ್ಲ ಎನ್ನುತ್ತಾರೆ ಚಂದ್ರು.

    ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ನಿರ್ದೇಶಕರದ್ದು. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದಾರೆ. ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಆಗುತ್ತಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲೂ ಏಕಕಾಲಕ್ಕೆ ಕಬ್ಜ ಬಿಡುಗಡೆ ಆಗಲಿದೆ.

  • ಚೆನ್ನೈನಲ್ಲಿ ಕಬ್ಜ ಚಿತ್ರದ ‘ನಮಾಮಿ ನಮಾಮಿ’ ಹಾಡು ರಿಲೀಸ್

    ಚೆನ್ನೈನಲ್ಲಿ ಕಬ್ಜ ಚಿತ್ರದ ‘ನಮಾಮಿ ನಮಾಮಿ’ ಹಾಡು ರಿಲೀಸ್

    ಡೀ ಭಾರತಾದ್ಯಂತ ಬಿಡುಗಡೆಗೂ ಮುಂಚೆಯೇ ಎಲ್ಲರ ಗಮನ ಸೆಳೆದಿರುವ,  ಆರ್ ಚಂದ್ರು (R. Chandru) ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra) ನಾಯಕರಾಗಿ ಹಾಗೂ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ (Sudeep) ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ (Kabzaa) ಚಿತ್ರದಿಂದ ಮಹಾಶಿವರಾತ್ರಿಗೆ ಮಹಾಶಿವನನ್ನು ಕೊಂಡಾಡುವ ‘ನಮಾಮಿ ನಮಾಮಿ’ ಎಂಬ ಸುಮಧುರ ಗೀತೆ ಬಿಡುಗಡೆಯಾಗಿದೆ.

    ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಖ್ಯಾತ ನಟಿ ಶ್ರೇಯಾ ಶರಣ್ (Shriya Sharan) ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

    ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಿತು. ಸಾಕಷ್ಟು ಗಣ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.  ಚಿತ್ರ ಸಾಗಿ ಬಂದ ಬಗ್ಗೆ ಹಾಗೂ ಹಾಡಿನ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್ ಚಂದ್ರು, ‘ಕಬ್ಜ’  ಚಿತ್ರದ ಹಾಡುಗಳನ್ನು  ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ. ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ  ಧನ್ಯವಾದ ತಿಳಿಸಿದರು.

    ‘ಕಬ್ಜ’ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ.  ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ನಟಿ ಶ್ರೇಯಾ ಶರಣ್. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ‘ಕಬ್ಜ’ ಚಿತ್ರದ  ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕಮರ್ಷಿಯಲ್ ಹಾಡೊಂದು ಲೋಕಾರ್ಪಣೆಯಾಗಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಐಎಂಡಿಬಿ 2023ರ ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ ಕನ್ನಡಕ್ಕೆ ಒಂದೇ ಸ್ಥಾನ

    ಐಎಂಡಿಬಿ 2023ರ ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ ಕನ್ನಡಕ್ಕೆ ಒಂದೇ ಸ್ಥಾನ

    ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ  ಇಂಟರ್​ನೆಟ್​ ಮೂವಿ ಡೇಟಾಬೇಸ್​ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ಉಪೇಂದ್ರ ಹಾಗೂ ಸುದೀಪ್​ ಅಭಿನಯಿಸಿರುವ ಪ್ಯಾನ್​ ಇಂಡಿಯಾ ಚಿತ್ರ ‘ಕಬ್ಜ’ ಮಾತ್ರ ಇರುವುದು ವಿಶೇಷ.

    ‘ಕಬ್ಜ’ ಚಿತ್ರವು ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದು, ಮಿಕ್ಕಂತೆ ಶಾರುಖ್​ ಖಾನ್​ ಅಭಿನಯದ ‘ಪಠಾಣ್​’, ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ – ದಿ ರೂಲ್​’, ಪ್ರಭಾಸ್​ ಅಭಿನಯದ ‘ಸಲಾರ್​’ ಮತ್ತು ‘ಆದಿಪುರುಷ್​’, ವಿಜಯ್​ ಅಭಿನಯದ ‘ವಾರಿಸು’, ಸಲ್ಮಾನ್​ ಖಾನ್​ ಅಭಿನಯದ ‘ಟೈಗರ್​ 3’, ಕಮಲ್​ ಹಾಸನ್​ ಅಭಿನಯದ ‘ಇಂಡಿಯನ್​ 2’ ಮುಂತಾದ ಚಿತ್ರಗಳಿವೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳೇ ಹೆಚ್ಚಿರುವ ಈ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಏಕೈಕ ಚಿತ್ರವಾಗಿ ‘ಕಬ್ಜ’ ಹೊರಹೊಮ್ಮಿದೆ. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್​ನಡಿ ಆರ್​. ಚಂದ್ರು ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರವು ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್​ ಬಿಡುಗಡೆಯಾದ ಮೇಲೆ ಆ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ. ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್​ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್​​ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ.

    ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇರುವ ಈ ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶ್ರೀಯಾ ಶರಣ್ ಜೊತೆ ನಾಳೆ ಬೆಂಗಳೂರಿಗೆ ಬರಲಿದ್ದಾರೆ ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ

    ಶ್ರೀಯಾ ಶರಣ್ ಜೊತೆ ನಾಳೆ ಬೆಂಗಳೂರಿಗೆ ಬರಲಿದ್ದಾರೆ ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ

    ತೆಲುಗಿನ ಖ್ಯಾತ ನಟ ರಾಣಾ ದುಗ್ಗುಬಾಟಿ (Rana Daggubati)ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಸಂಜೆ 4.30ಕ್ಕೆ ಬೆಂಗಳೂರಿನ ಮಾಲ್ ವೊಂದರಲ್ಲಿ ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ (Teaser) ಬಿಡುಗಡೆ ಆಗುತ್ತಿದ್ದು, ಈ ಸಮಾರಂಭಕ್ಕೆ ರಾಣಾ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇವರೊಂದಿಗೆ ಶ್ರೀಯಾ ಶರಣ್  (Shriya Sharan) ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ.

    ಐದು ಭಾಷೆಗಳಲ್ಲಿ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದ್ದು, ಉಪೇಂದ್ರ ಅವರ ಹುಟ್ಟು ಹಬ್ಬಕ್ಕಾಗಿ ಈ ಉಡುಗೊರೆಯ‍ನ್ನು ನೀಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು. ಈವರೆಗೂ ಫಸ್ಟ್ ಲುಕ್, ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು ,ಇದೇ ಮೊದಲ ಬಾರಿಗೆ ಕಬ್ಜ ಸಿನಿಮಾದ ಟೀಸರ್ ಅಭಿಮಾನಿಗಳಿಗೆ ನೋಡಲು ಸಿಗುತ್ತಿದೆ. ಹಾಗಾಗಿ ಸಹಜವಾಗಿಯೇ ಉಪ್ಪಿ ಮತ್ತು ಸುದೀಪ್ ಅಭಿಮಾನಿಗಳಿಗೆ ಕಾಯುವಂತಾಗಿದೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ಕನ್ನಡದ ಸಿನಿಮಾವೊಂದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ಈಗಾಗಲೇ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ನಿರ್ದೇಶಕ ಚಂದ್ರು, (R. Chandru) ಕಿಚ್ಚ ಸುದೀಪ್ (Sudeep) ಮತ್ತು ಉಪೇಂದ್ರ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದು, ಕೆಜಿಎಫ್ 2 ಸಿನಿಮಾದಲ್ಲಿದ್ದ ತಾಂತ್ರಿಕ ತಂಡ ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ. ಹಾಗಾಗಿ ಕೆಜಿಎಫ್ 2 ಸಿನಿಮಾಗೆ ಕಬ್ಜವನ್ನು ಹೋಲಿಕೆ ಮಾಡಲಾಗುತ್ತಿದೆ.

    ಉಪ್ಪಿ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗಾಗಿಸಲು ಕಬ್ಜ ನಿರ್ದೇಶಕ ಆರ್.ಚಂದ್ರು ಸಜ್ಜಾಗಿದ್ದು, ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ಬಹುಮಾನವನ್ನೇ ಕೊಡಲಿದ್ದಾರಂತೆ. ‘ಕೆಜಿಎಫ್ 2’ ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರ್ ಅವರೇ ಈ ಸಿನಿಮಾಗೂ ಸಂಗೀತ ನೀಡುತ್ತಿದ್ದು, ಟೀಸರ್ ಹೇಗೆ ಇರಲಿದೆ ಎನ್ನುವ ಕುತೂಹಲವಂತೂ ಮೂಡಿದೆ. ಚಂದ್ರು ಅವರು ಸೆರೆ ಹಿಡಿದಿರುವ ವಿಷ್ಯುವೆಲ್ಸ್, ರವಿ ಬಸ್ರೂರ್ ಮ್ಯೂಸಿಕ್ ಅಭಿಮಾನಿಗಳನ್ನು ಮೋಡಿ ಮಾಡುವದಂತೂ ಕಂಡಿತ.

    Live Tv
    [brid partner=56869869 player=32851 video=960834 autoplay=true]

  • ಸುದೀಪ್ ‘ಕಬ್ಜ’ ಚಿತ್ರದಿಂದ ಹೊರ ನಡೆದಿರುವ ಸುದ್ದಿ ಸುಳ್ಳು : ನಿರ್ದೇಶಕ ಆರ್.ಚಂದ್ರು

    ಸುದೀಪ್ ‘ಕಬ್ಜ’ ಚಿತ್ರದಿಂದ ಹೊರ ನಡೆದಿರುವ ಸುದ್ದಿ ಸುಳ್ಳು : ನಿರ್ದೇಶಕ ಆರ್.ಚಂದ್ರು

    ಹೆಸರಾಂತ ನಿರ್ದೇಶಕ ಆರ್.ಚಂದ್ರು ಅವರ ‘ಕಬ್ಜ’ ಸಿನಿಮಾದಿಂದ ಸುದೀಪ್ ಅವರು ಹೊರ ನಡೆದಿದ್ದಾರೆ ಎನ್ನುವ ಸುದ್ದಿ ನೆನ್ನೆಯಿಂದ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿತ್ತು. ಆರ್.ಚಂದ್ರು ಮತ್ತು ಸುದೀಪ್ ನಡುವೆ ಮನಸ್ತಾಪ ಕಾರಣದಿಂದಾಗಿ ಕಿಚ್ಚ ‘ಕಬ್ಜ’ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ಸುದೀಪ್ ಮತ್ತು ಉಪೇಂದ್ರ ಕಾಂಬಿನೇಷನ್ ನ ಈ ಸಿನಿಮಾ ಭಾರೀ ಬಜೆಟ್ ನಲ್ಲಿ ಮೂಡಿ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಸುದೀಪ್ ಮತ್ತು ಉಪೇಂದ್ರ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸುದೀಪ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ, ಕಿಚ್ಚ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವುದು ನಾನಾ ರೀತಿಯ ಅನುಮಾನಕ್ಕೂ ಕಾರಣವಾಗಿತ್ತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

    ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಆರ್.ಚಂದ್ರು, “ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಸುದೀಪ್ ಅವರು ಕಬ್ಜ ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಕಿಚ್ಚು ಸುದೀಪ್ ಅವರು ಈಗಾಗಲೇ ಕಬ್ಜ ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು” ಎಂದು ಟ್ವಿಟ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಇಬ್ಬರು ಸ್ಟಾರ್ ನಟರು ಸಿನಿಮಾದಲ್ಲಿ ಇದ್ದಾರೆ ಎಂದರೆ, ಸಿನಿಮಾ ಕುರಿತು ಹೈಪ್ ಕ್ರಿಯೇಟ್ ಆಗುವುದು ಸಹಜ. ಅಲ್ಲದೇ, ಈ ಇಬ್ಬರೂ ಸ್ಟಾರ್ ನಟರು ಈಗಾಗಲೇ ಹಲವು ಚಿತ್ರರಂಗಗಳ ಜತೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲೇ ತಯಾರಾಗಿದೆ. ಅಷ್ಟೇ ಸದ್ದು ಮಾಡುತ್ತಿದೆ. ಹೀಗಾಗಿ ಕಿಚ್ಚನ ಬಗ್ಗೆ ಗಾಸಿಪ್ ಮೂಡಿದೆ. ಏ.1 ರಿಂದ ಈ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದ್ದರಿಂದ ಅದು ಏಪ್ರಿಲ್ ಫೂಲ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಸುದ್ದಿ ಬೇರೆ ರೀತಿಯಲ್ಲಿ ಗಂಭೀರತೆಯನ್ನು ಸೃಷ್ಟಿ ಮಾಡಿತ್ತು. ಹಾಗಾಗಿ ಆರ್.ಚಂದ್ರು ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.