Tag: Shrirangapatna

  • ಮೈ-ಬೆಂ. ಎಕ್ಸ್‌ಪ್ರೆಸ್‌ವೇನಲ್ಲಿ  ಭೀಕರ ಅಪಘಾತ- ಚಾಲಕ ಸಾವು

    ಮೈ-ಬೆಂ. ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ- ಚಾಲಕ ಸಾವು

    ಮಂಡ್ಯ: ಮೈಸೂರು-ಬೆಂಗಳೂರು (Bengaluru-Mysuru) ಹೆದ್ದಾರಿಯಲ್ಲಿ ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲೇ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ (ShriRangapatna) ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಬಳಿ ನಡೆದಿದೆ.

    ಮೈಸೂರು ಕಡೆಗೆ ಸ್ವಿಫ್ಟ್ ಕಾರು, ಬೆಂಗಳೂರಿನತ್ತ ವರ್ನಾ ಕಾರು ಹೊರಟಿತ್ತು. ಈ ವೇಳೆ ವರ್ನಾ ಕಾರು ಡಿವೈಡರ್ ಹಾರಿ ಬಂದು ಮೈಸೂರಿನ ಕಡೆ ಹೋಗುತ್ತಿದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಹೆತ್ತ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

    ಕಾರು ಡಿಕ್ಕಿಯಾದ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಯಾಳುಗಳನ್ನು ಮೈಸೂರು ಖಾಸಗಿ ಆಸ್ವತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

  • ಶ್ರೀರಂಗಪಟ್ಟಣದಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್, ಕಾಳಿ ಸ್ವಾಮಿ

    ಶ್ರೀರಂಗಪಟ್ಟಣದಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್, ಕಾಳಿ ಸ್ವಾಮಿ

    ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾಳಿ ಸ್ವಾಮಿ ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಅಸ್ಥಿಯನ್ನು ವಿಸರ್ಜನೆ ಮಾಡಿದರು.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಕಾಳಿ ಸ್ವಾಮಿ ಮೃತ ಹರ್ಷನ ಅಸ್ಥಿಯನ್ನು ಸೇತುವೆ ಬಳಿಯಿಂದ ಪೂಜಾ ಸ್ಥಳಕ್ಕೆ ತಲೆ ಮೇಲೆ ಹೊತ್ತು ತಂದಿದ್ದಾರೆ. ನಂತರ ಮುತಾಲಿಕ್‍ರಿಂದ ಪಶ್ಚಿಮವಾಹಿನಿಯ ಅರಳಿ ಕಟ್ಟೆ ಬಳಿ ಅಸ್ಥಿ ವಿಸರ್ಜನಾ ಕಾರ್ಯ ಆರಂಭವಾಯಿತು.

    ಪ್ರಧಾನ ಅರ್ಚಕರಾದ ಸಂದೀಪ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದಿದೆ. ಧುರುಮತಿ ನಾರಾಯಣ ಹೋಮ, ಅಸ್ಥಿ ಸಂಚಯನ, ವಿಸರ್ಜನೆ, ಪಂಚಾಮೃತ ಅಭಿಷೇಕ, ದಶದಾನ, ಪುಣ್ಯಃ ಸೇರಿದಂತೆ ಹಲವು ಪೂಜಾ ವಿಧಿ ವಿಧಾನ ನಡೆದಿದೆ. ಈ ವೇಳೆ ಕಾವೇರಿ ನದಿಗೆ ಅಸ್ಥಿ ವಿಸರ್ಜನೆ ಮೂಲಕ ಹರ್ಷ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದರು. ಪೂಜೆ ಮುಗಿದ ಬಳಿಕ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು. ಇದನ್ನೂ ಓದಿ: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು- ಯಾರದೋ ಬಂಗಾರ ಮತ್ಯಾರಿಗೋ

    ಹರ್ಷನ ಕೊಲೆ ಪ್ರಕರಣದಿಂದಾಗಿ ಶಿವಮೊಗ್ಗವೇ ಹೊತ್ತಿ ಉರಿದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್‍ನ್ನು ಹಾಕಲಾಗಿತ್ತು. ಹರ್ಷನ ಶವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಬೊಮ್ಮಾಯಿ

  • ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್

    ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್

    ಮಂಡ್ಯ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕಾಳಿ ಮಠದ ಸ್ವಾಮೀಜಿಯನ್ನು ಪೊಲೀಸರು ಶ್ರೀರಂಗಪಟ್ಟಣಕ್ಕೆ ಕರೆತಂದಿದ್ದು, ತಾಲೂಕು ಆಸ್ಪತ್ರೆಯಲ್ಲಿ ಸ್ವಾಮೀಜಿಯ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಹಾಕಿರುವ ವಿವಾದಾತ್ಮಕ ಹೇಳಿಕೆಗೆ ಪೊಲೀಸರು ಋಷಿಕುಮಾರ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್

    ನಾನು ಹೇಳಿರುವ ಮಾತಿಗೆ ಇಂದು ಬದ್ಧನಿದ್ದೇನೆ. ಅದು ಹಿಂದೂ ದೇವಸ್ಥಾನ, ಅಲ್ಲಿರುವುದು ಹಿಂದೂ ಕಲಾಕೃತಿಗಳು. ಆ ಮಸೀದಿಯನ್ನು ಒಡೆದೇ ಒಡೆಯುತ್ತೇವೆ. ಅಲ್ಲಿ ಹನುಮನ ದೇವಸ್ಥಾನ ಕಟ್ಟುತ್ತೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ, ಶ್ರೀರಂಗಪಟ್ಟಣದಲ್ಲಿ ಹನುಮಮಂದಿರ ಕಟ್ಟಿಸುತ್ತೇವೆ. ಇದಕ್ಕಾಗಿ ಹಿಂದೂ ಸಂಘಟನೆಗಳು ಒಂದಾಗಬೇಕು ಎಂದು ಋಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!

  • ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ – ಹನುಮ ಮಾಲಾಧಾರಿಗಳ ಮೇಲೆ ಯುವಕನಿಂದ ಹಲ್ಲೆ

    ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ – ಹನುಮ ಮಾಲಾಧಾರಿಗಳ ಮೇಲೆ ಯುವಕನಿಂದ ಹಲ್ಲೆ

    ಮಂಡ್ಯ: ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಾರಿಗಳ ಮೇಲೆ ಯುವಕನೊಬ್ಬ ಹಲ್ಲೆಗೆ ಮುಂದಾದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

    ಇಂದು ಹನುಮ ಜಯಂತಿ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಯುತ್ತಿತ್ತು. ಈ ಸಂಕೀರ್ತನಾ ಯಾತ್ರೆ ವೇಳೆ ಯುವಕನೊಬ್ಬ ಮಧ್ಯಪ್ರವೇಶಿಸಿ, ಹನುಮ ಮಾಲಾಧಾರಿಗಳ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಆದರೆ ಯುವಕನನ್ನು ಹನುಮ ಮಾಲಾಧಾರಿಗಳು ಥಳಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಯುವಕನಿಗೆ ಏಟು ನೀಡಿರುವ ಘಟನೆ ನಡೆದಿದೆ.

    ಸಂಕೀರ್ತನಾ ಯಾತ್ರೆ ಹೆಸರಲ್ಲಿ ಜಾಮಿಯ ಮಸೀದಿ ದ್ವಂಸಕ್ಕೆ ಸಂಚು ರೂಪಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗಬಾರದೆಂದು ಮೊದಲೇ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ ಬಿಗಿ ಭದ್ರತೆ ನೀಡಲಾಗಿತ್ತು. ಇದನ್ನೂ ಓದಿ: ಮೈಸೂರಿನಲ್ಲಿ ಒಂದೇ ದಿನ 2 ಸರಕಳ್ಳತನ – ಆರೋಪಿಗಳು ಪರಾರಿ

    ಜಾಮೀಯಾ ಮಸೀದಿಗೆ ಭಾರಿ ಬಂದೋಬಸ್ತ್ ಮಾಡಿ, ಮಸೀದಿ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅಷ್ಟೇ ಅಲ್ಲದೇ ಸಾರ್ವಜನಿಕರಿಗೆ ಮಸೀದಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೇಡೌನ್‌ ಮೇಲೆ ಅಧಿಕಾರಿಗಳ ದಾಳಿ

  • ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ!

    ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ!

    ಮಂಡ್ಯ: ಕುಡಿದ ಮತ್ತಿನಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.

    ನಗುವನಹಳ್ಳಿ ಗ್ರಾಮದ ನಿವಾಸಿ ಹರೀಶ್ ಮೃತ ದುರ್ದೈವಿ. ಗುರು ಕೊಲೆ ಮಾಡಿದ ಆರೋಪಿ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ನಗುವನಹಳ್ಳಿ ಗ್ರಾಮದ ಯುವಕರ ನಡುವೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಗುರು ಮಚ್ಚುನಿಂದ ಹರೀಶ್ ಹಾಗೂ ಆನಂದ್ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಹಾಗೂ ಆನಂದನಿಗೆ ತೀವ್ರವಾದ ಗಾಯವಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಹಲ್ಲೆ ನಡೆಸಿದ ಗುರು ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟಿಪ್ಪು ಅಭಿಮಾನಿಗಳಿಗೆ ಸಿಎಂ ಶಾಕ್-ಗಲಾಟೆ ಮಾಡಿದವ್ರ ವಿರುದ್ಧ ಬಿತ್ತು ಕೇಸ್

    ಟಿಪ್ಪು ಅಭಿಮಾನಿಗಳಿಗೆ ಸಿಎಂ ಶಾಕ್-ಗಲಾಟೆ ಮಾಡಿದವ್ರ ವಿರುದ್ಧ ಬಿತ್ತು ಕೇಸ್

    – ಮಡಿಕೇರಿಯಲ್ಲಿ ಕಲ್ಲೆಸೆದ ಮೂವರ ಬಂಧನ

    ಮಂಡ್ಯ/ಮಡಿಕೇರಿ: ಟಿಪ್ಪು ಜಯಂತಿ ದಿನ ನಿಷೇಧಾಜ್ಞೆ ಉಲ್ಲಂಘಿಸಿ ಆಟಾಟೋಪ ಪ್ರದರ್ಶಿಸಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್ ರ್ಯಾಲಿ, ತ್ರಿಬಲ್ ರೈಡಿಂಗ್, ಪೊಲೀಸರೊಂದಿಗೆ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶ್ರೀರಂಗಪಟ್ಟಣದಲ್ಲಿ ಒಟ್ಟು ಏಳು ಕೇಸ್ ದಾಖಲಾಗಿದೆ. ನವೆಂಬರ್ 10ರಂದು ಟಿಪ್ಪು ಜಯಂತಿಯಂದು ಟಿಪ್ಪು ಸಮಾಧಿ ಇರುವ ಶ್ರೀರಂಗಪಟ್ಟಣ ಪಶ್ಚಿಮ ವಾಹಿನಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು.

    ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಆದರೂ ಬೈಕ್‍ನಲ್ಲಿ ಜಾಥಾ ಮೂಲಕ ಬಂದಿದ್ದ ಟಿಪ್ಪು ಅಭಿಮಾನಿಗಳು ತಮ್ಮನ್ನು ತಡೆದಿದ್ದ ಪೊಲೀಸ್ರಿಗೆ ಅವಾಜ್ ಹಾಕಿದ್ದರು. ಟಿಪ್ಪು ಜಯಂತಿ ದಿನದ ದೃಶ್ಯಾವಳಿ ಆಧರಿಸಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಲಾಗಿದೆ.

    ಇನ್ನು ಮಡಿಕೇರಿಲ್ಲಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಕಟ್ಟೆಕಲ್ಲು ಬಳಿ ನವೆಂಬರ್ 10ರಂದು ಅಂದ್ರೆ ಟಿಪ್ಪು ಜಯಂತಿ ದಿನ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬೈಕಿನಲ್ಲಿ ಬಂದ ನಾಲ್ವರು ಕೆಎ-09-ಎಫ್ -5205 ನಂಬರಿನ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಬಸ್ಸಿನ ಗಾಜು ಪುಡಿ ಪುಡಿಯಾಗಿತ್ತು. ಕಲ್ಲು ತೂರಾಟದ ವೇಳೆ ಬಸ್ ನಲ್ಲಿದ್ದ ಚಾಲಕ ರಘು ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಧೀಂದ್ರ, ಉಮೇಶ್, ಅಕ್ಷಯ್, ನವೀನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

  • ಮಂಡ್ಯದಲ್ಲಿ ದೇವರ ವಿಗ್ರಹದ ಮುಂದೆಯೇ ವ್ಯಕ್ತಿ ನೇಣಿಗೆ ಶರಣು!

    ಮಂಡ್ಯದಲ್ಲಿ ದೇವರ ವಿಗ್ರಹದ ಮುಂದೆಯೇ ವ್ಯಕ್ತಿ ನೇಣಿಗೆ ಶರಣು!

    ಮಂಡ್ಯ: ವ್ಯಕ್ತಿಯೊಬ್ಬರು ದೇವರ ವಿಗ್ರಹದ ಮುಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕಲ್ಯಾಣ್ ಚಂದನ್ ಕುಮಾರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

    ಗ್ರಾಮದಲ್ಲಿ ಒಂದು ಕುಟೀರ ನಿರ್ಮಿಸಿಕೊಂಡಿದ್ದ ಇವರು, ವಾಮಾಚಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದ್ರೆ ಇಂದು ಬೆಳಗ್ಗೆ ಕುಟೀರದೊಳಗೆ ದೇವಿಯ ವಿಗ್ರಹದ ಮುಂದೆಯೇ ಕಲ್ಯಾಣ್ ಚಂದನ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಂಗಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಮಹಿಳೆಯರೇ, ದೇವಸ್ಥಾನಗಳಲ್ಲಿ ಭಕ್ತಿಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿ ಓದಿ

    ಮಹಿಳೆಯರೇ, ದೇವಸ್ಥಾನಗಳಲ್ಲಿ ಭಕ್ತಿಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿ ಓದಿ

    ಹಾಸನ: ದೇವಸ್ಥಾನಗಳಲ್ಲಿ ಭಕ್ತಿ ಭಾವದಲ್ಲಿರುವ ಭಕ್ತರು ಮೈಮರೆಯುವ ಮುನ್ನ ಸ್ವಲ್ಪ ಎಚ್ಚರವಾಗಿರಬೇಕು. ದೇವಸ್ಥಾನದಲ್ಲಿ ಬರುವ ಮಹಿಳೆಯರು ಭಕ್ತಿಯಲ್ಲಿ ಮೈಮರೆತ್ರೆ, ಇತ್ತ ಕಳ್ಳಿಯರು ತಮ್ಮ ಕೈಚಳಕ ತೋರುತ್ತಾರೆ. ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಸ್ಥಾನದಲ್ಲಿ ನಡೆದಿರುವ ಕಳ್ಳಿಯರ ಕೈಚಳಕದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಹಾಸನ ಮೂಲದ ಭವ್ಯ ಎಂಬವರು ನಿಮಿಷಾಂಭ ದೇವಸ್ಥಾನದಲ್ಲಿ ದರ್ಶನ ಪಡೆದು ಕುಂಕುಮ ನೀಡುವ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಕಳ್ಳಿಯರು ತಮ್ಮ ಕರಾಮತ್ ತೋರಿಸಿದ್ದಾರೆ. ಸರದಿ ಸಾಲಿನಲ್ಲಿ ಬರುವಂತೆ ನಟಿಸಿರುವ ಕಳ್ಳಿಯರು ಭವ್ಯರನ್ನು ಹಿಂಬಾಲಿಸಿದ್ದಾರೆ. ಅರ್ಚಕರಿಂದ ಕುಂಕುಮ ಪಡೆಯುವ ನೆಪದಲ್ಲಿ ಬ್ಯಾಗ್‍ನಿಂದ ಪರ್ಸ್‍ನ್ನು ಕದ್ದು, ತನ್ನ ಸಹವರ್ತಿ ಕಳ್ಳಿಗೆ ನೀಡುತ್ತಾಳೆ. ಆ ಕಳ್ಳಿ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

    ಭವ್ಯ-ಪರ್ಸ್ ಕಳೆದುಕೊಂಡವರು

    ಮನೆಗೆ ಬಂಬ ಬಳಿಕ ಭವ್ಯ ತಮ್ಮ ಬ್ಯಾಗ್‍ನಲ್ಲಿ ಪರ್ಸ್ ಇಲ್ಲದೇ ಇರೋದನ್ನು ಗಮನಿಸಿದ್ದಾರೆ. ಪರ್ಸ್ ನಲ್ಲಿ ಮೂರು ಸಾವಿರ ರೂಪಾಯಿ ಹಣವಿದ್ದಿದ್ದು ಎಂದು ಸುಮ್ಮನಾಗುವಷ್ಟರಲ್ಲಿ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ಹಣ ಡ್ರಾ ಆಗಿದೆ ಅಂತಾ ಮೆಸೇಜ್ ಬಂತು.

    ಇದನ್ನೂ ಓದಿ: ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

    ಸದ್ಯ ಎರಡು ಎಟಿಎಂ ಕಾರ್ಡ್‍ಗಳು ವೋಟರ್ ಐಡಿ ಜೊತೆಗೆ ಮೂರು ಸಾವಿರ ನಗದು ಕಳೆದುಕೊಂಡಿರುವ ಭವ್ಯ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳಿಯರ ಕೈಚಳಕ ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಕ್ರಮ ಕೈಗೊಂಡ್ರೆ ನಮ್ಮ ಹಣ ನಮಗೆ ಸಿಗುತ್ತೆ. ನಮಗೆ ನ್ಯಾಯ ಕೊಡಿಸಿ ಎಂದು ಭವ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.

    https://youtu.be/EYaWW-Nl2Bw