Tag: shriramulu

  • ಕಾಂಗ್ರೆಸ್ Vs ಬಿಜೆಪಿ: ಅನುದಾನ ಹಂಚಿಕೆ 1 ರೂ. ಹೆಚ್ಚಾದರೆ ನಾನು ರಾಜಕೀಯ ನಿವೃತ್ತಿ: ಶ್ರೀರಾಮುಲು

    ಕಾಂಗ್ರೆಸ್ Vs ಬಿಜೆಪಿ: ಅನುದಾನ ಹಂಚಿಕೆ 1 ರೂ. ಹೆಚ್ಚಾದರೆ ನಾನು ರಾಜಕೀಯ ನಿವೃತ್ತಿ: ಶ್ರೀರಾಮುಲು

    ಬಳ್ಳಾರಿ: ಕಾಂಗ್ರೆಸ್‍ನಲ್ಲಿ ಸಿಎಂ ಆದಾಗ ಕೊಟ್ಟ ಅನುದಾನವೆಷ್ಟು, ಯಡಿಯೂರಪ್ಪ ಅವರು ಸಿಎಂ ಆದಾಗ ಬಳ್ಳಾರಿಗೆ ಕೊಟ್ಟ ಅನುದಾನ ಎಷ್ಟು ಎಂಬುದಕ್ಕೆ ಶ್ವೇತಪತ್ರ ಹೊರಡಿಸಲಿ. ಒಂದು ವೇಳೆ ಈ ದಾಖಲೆಯಲ್ಲಿ ಅನುದಾನ ಹಂಚಿಕೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ 1 ರೂ. ಹೆಚ್ಚಿಗೆ ಬಂದಿದ್ದರೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಶಾಸಕ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಮುಲು ಜಿಲ್ಲೆಗೆ ಏನೂ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಅಲ್ಲವೇ? ಈ ಬಗ್ಗೆ ಇಂದು ನಾನು ಬಹಿರಂಗವಾಗಿ ಸವಾಲನ್ನು ಹಾಕುತ್ತಿದ್ದೇನೆ. ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಐದು ವರ್ಷವಾಗಿದೆ. ಬಳ್ಳಾರಿಯಿಂದ ಚಿತ್ರದುರ್ಗಕ್ಕೆ, ಚಿತ್ರದುರ್ಗದಿಂದ ಹೊಸಪೇಟೆಗೆ, ಹೊಸಪೇಟೆಯಿಂದ ಧಾರವಾಡಕ್ಕೆ, ಇದೇ ರೀತಿ ಬೀದರ್‍ನಿಂದ ಶ್ರೀರಂಗಪಟ್ಟಣಕ್ಕೆ ಸುಮಾರು 10 ಸಾವಿರಕೋಟಿ ಅನುದಾನವನ್ನು ಕೇವಲ ರಸ್ತೆಗೆ ಮಾತ್ರ ನೀಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಬಳ್ಳಾರಿಗೆ ಸುಮಾರು 8 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಏನೂ ಬೇಕಾದರೂ ಆಗಲಿ ನಾನು ಸವಾಲು ಸ್ವೀಕಾರ ಮಾಡುತ್ತಿದ್ದೇನೆ. ಅಭಿವೃದ್ಧಿ ಮಾಡಿದ್ದರೂ ಕಾಂಗ್ರೆಸ್ ನಾಯಕರು ಇಲ್ಲವೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ನನ್ನ ಮಾತುಗಳು ಬದಲಾವಣೆ ಇರಬಹುದು. ಆದರೆ ದಾಖಲಾತಿಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಶ್ವೇತಪತ್ರದ ದಾಖಲಾತಿಗಳನ್ನು ತೆಗೆಯಲಿ. ಒಂದು ರೂಪಾಯಿ ಹೆಚ್ಚಾದಲ್ಲಿ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ. ಇದನ್ನು ನಾನು ಸವಾಲಾಗಿ ಸ್ವೀಕಾರ ಮಾಡುತ್ತೇನೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರಿಗೆ ಉತ್ತರವನ್ನು ಕೊಡುತ್ತೇನೆ ಎಂದು ತಿಳಿಸಿದರು.

    ಪ್ರಾಯಶಃ ಕಾಂಗ್ರೆಸಿನ ನಾಯಕರಿಗೆ ಸೋಲುತ್ತಿವೆ ಎಂಬ ಭಯ ಪ್ರಾರಂಭವಾಗಿದೆ. ಅವರು ಮಾತನಾಡುವಂತಹ ಭಾಷೆ ಲಂಗು ಲಗಾಮು ಇಲ್ಲದೇ ಇರುವ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಭಾಷೆ ಎಲ್ಲರಿಗೂ ಬರುತ್ತೆ. ಭಾಷೆ ಮಾತನಾಡುವ ಸಂದರ್ಭದಲ್ಲಿ ಒಬ್ಬ ಮನುಷ್ಯ ಬೈಯಲೇಬೇಕು, ಮಾತನಾಡಬೇಕು ಎಂದರೆ ಏನೂ ಬೇಕಾದರೂ ಮಾತನಾಡುವ ಶಕ್ತಿ ಆತನಿಗಿದೆ. ಹೀಗಾಗಿ ಇವತ್ತು ನಾನು ದೊಡ್ಡ ದೊಡ್ಡ ಮಾತುಗಳನ್ನು ಮಾತನಾಡುವುದಿಲ್ಲ. ನನ್ನ ಜಿಲ್ಲೆಯ ಜನರು ನನ್ನ ಕೈ ಹಿಡಿದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ಬೆಂಗಳೂರು: ಕನ್ನಡ ನಾಡನ್ನು ಆಳಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಈಗ ಕರ್ನಾಟಕ ಕುರುಕ್ಷೇತ್ರದಲ್ಲಿ ಮತ್ತೊಮ್ಮೆ ಅಕ್ಷರಶಃ ರಾಜಕೀಯ ರಾಜಧಾನಿಯಾಗಿ ಮಾರ್ಪಟ್ಟಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರೋ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸವಾಲೆಸೆದಿರೋ ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಸ್ತಾರೆ.

    ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‍ನಲ್ಲಿ 12.30ಕ್ಕೆ ಬಾದಾಮಿಗೆ ಬರೋ ಸಿಎಂ ಮೊದಲು ಬನಶಂಕರಿ ದೇವಿಯ ದರ್ಶನ ಪಡೀತಾರೆ. ಅಲ್ಲಿಂದ ಬಾದಾಮಿಯಲ್ಲಿ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡ್ತಾರೆ. ಮಧ್ಯಾಹ್ನ 2 ರಿಂದ 2.30ಕ್ಕೆ ಚುನಾವಣಾಧಿಕಾರಿ ಉಮೇದುವಾರಿಕೆ ಸಲ್ಲಿಸ್ತಾರೆ. ಈ ವೇಳೆ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‍ಆರ್ ಪಾಟೀಲ್, ಆಪ್ತ ಸಿಎಂ ಇಬ್ರಾಹಿಂ ಸೇರಿದಂತೆ ದೊಡ್ಡ ದಂಡೇ ಜೊತೆಗಿರಲಿದೆ. ಇದನ್ನೂ ಓದಿ: ರಾಷ್ಟ್ರೀಯ ವಾಹಿನಿಗಳ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ಸ್ಥಿತಿ, ಯಾರಿಗೆ ಎಷ್ಟು ಸ್ಥಾನ?

    ಇತ್ತ ಬೆಳಗ್ಗೆ 11 ಗಂಟೆಗೆ ಬಾದಾಮಿಯ ಬಸವೇಶ್ವರ ವೃತ್ತದಿಂದ ಬೃಹತ್ ರೋಡ್ ಶೋ ಮೂಲಕ ಬಲ ಪ್ರದರ್ಶನ ಮಾಡಲಿರೋ ರಾಮುಲು ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸ್ತಾರೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ ಸೇರಿದಂತೆ ಬಿಜೆಪಿ ಗುಂಪೇ ಜೊತೆಗಿರಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್

  • ಬಿಜೆಪಿಗೂ, ರೆಡ್ಡಿಗೂ ಸಂಬಂಧವಿಲ್ಲ ಅಂದ ಶಾ ಹೇಳಿಕೆಗೆ ಶ್ರೀರಾಮುಲು ಹೀಗಂದ್ರು

    ಬಿಜೆಪಿಗೂ, ರೆಡ್ಡಿಗೂ ಸಂಬಂಧವಿಲ್ಲ ಅಂದ ಶಾ ಹೇಳಿಕೆಗೆ ಶ್ರೀರಾಮುಲು ಹೀಗಂದ್ರು

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಧವಿಲ್ಲ ಅಂತ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಹಿರಂಗವಾಗಿ ಸ್ಪಷ್ಟಪಡಿಸಿದ್ದು, ಈ ವಿಚಾರವಾಗಿ ಸಂಸದ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

    ಶಾ ಹೇಳಿಕೆ ಕುರಿತು ಬಳ್ಳಾರಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇದ್ದಾರೆ. ಅವರು ಬೇರೆಯಲ್ಲ ನಾನು ಬೇರೆಯಲ್ಲ. ಆದ್ರೆ ಇದೀಗ ಅವರ ವಿಚಾರದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋಕೆ ನಾನು ಇಷ್ಟಪಡಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

    ಜನಾರ್ದನ ರೆಡ್ಡಿ ಬಿಜೆಪಿಯ ಅಭಿಮಾನಿ. ಹೀಗಾಗಿ ಅವರ ಬೆಂಬಲಿಗರು ಅಭಿಮಾನಿಗಳು ಬಿಜೆಪಿಯೊಂದಿಗೆ ಇದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಬೇರೆಯಲ್ಲ ಜನಾರ್ದನ ರೆಡ್ಡಿ ಬೇರೆಯಲ್ಲ ಹೀಗಾಗಿ ನಾನು ಮತ್ತು ರೆಡ್ಡಿ ಕುಟುಂಬ ಒಂದೇ ಆಗಿದೆ. ಜನಾರ್ದನ ರೆಡ್ಡಿ ವಿಚಾರದ ಬಗ್ಗೆ ಬಹಿರಂಗ ಚರ್ಚೆ ಮಾಡಲು ನಾನು ಇಷ್ಟಪಡಲ್ಲ. ಹಿರಿಯ ನಾಯಕರ ಜೊತೆ ನಾನು ಮಾತನಾಡಿ ಎಲ್ಲ ಸರಿಪಡಿಸುವೆ. ನಮ್ಮ ಗುರಿ ಇದೀಗ ಬಳ್ಳಾರಿಯ 9 ಕ್ಷೇತ್ರಗಳಲ್ಲಿ ಗೆಲ್ಲೋದಾಗಿದೆ ಅಂದ್ರು. ಇದನ್ನೂ ಓದಿ: ಸಾರ್ವಜನಿಕ ಜೀವನ ಪರಿಗಣಿಸಿ ಬಿಜೆಪಿ ಟಿಕೆಟ್?- ರೆಡ್ಡಿ, ರಾಮುಲು ಆಪ್ತರಿಗೂ ಟಿಕೆಟ್ ಡೌಟ್

    ಕೂಡ್ಲಿಗಿ ಶಾಸಕ ನಾಗೇಂದ್ರಗೆ ಅಧಿಕಾರ ಮತ್ತು ಹಣ ಬಲ ಹೆಚ್ಚಾದ ಪರಿಣಾಮ ನಮ್ಮಿಂದ ದೂರವಾಗಿದ್ದಾರೆ. ಅವರ ಬಗ್ಗೆ ಮಾತನಾಡಲು ಇಷ್ಟಪಡಲ್ಲವೆಂದು ಅಂತ ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

  • ರಾಹುಲ್ ಗಾಂಧಿ ರಾಹು ಗ್ರಹವಿದ್ದಂತೆ, ಸಿಎಂಗೆ ಜೈಲಿಗೆ ಹೋಗಿ ಬಂದವರೇ ಬೇಕು- ಶ್ರೀರಾಮುಲು

    ರಾಹುಲ್ ಗಾಂಧಿ ರಾಹು ಗ್ರಹವಿದ್ದಂತೆ, ಸಿಎಂಗೆ ಜೈಲಿಗೆ ಹೋಗಿ ಬಂದವರೇ ಬೇಕು- ಶ್ರೀರಾಮುಲು

    ಬಳ್ಳಾರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಹು ಗ್ರಹವಿದ್ದಂತೆ. ಸಿಎಂ ಸಿದ್ದರಾಮಯ್ಯಗೆ ಜೈಲಿಗೆ ಹೋಗಿ ಬಂದವರೇ ಬೇಕು. ಕಾಂಗ್ರೆಸ್ ಪಕ್ಷದಲ್ಲೀಗ ಮಾತನಾಡಲು ಯಾವ ನಾಯಕರಿಗೂ ನೈತಿಕತೆಯಿಲ್ಲ ಎಂದು ಸಂಸದ ಬಿ ರಾಮುಲು ಹೇಳಿದ್ದಾರೆ.

    ಕಳೆದ ರಾತ್ರಿ ಬಳ್ಳಾರಿಯ ಶ್ರೀರಾಂಪುರ ಕಾಲೋನಿಯ ಸ್ಲಂ ನಿವಾಸಿಯಾದ ಮಾಯಮ್ಮ ಎಂಬವರ ಮನೆಯಲ್ಲಿ ಸ್ಲಂ ಸಮಸ್ಯೆ ಅರಿಯಲು ವಾಸ್ತವ್ಯ ಮಾಡಿದ  ಶ್ರೀರಾಮುಲು ಹಾಗೂ ಮಾಜಿ ಶಾಸಕ ಸೋಮಶೇಖರರೆಡ್ಡಿ ರಾಹುಲ್ ಹಾಗೂ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಸ್ಲಂ ನಿವಾಸಿಗಳಿಗೆ ಕಾಂಗ್ರೆಸ್ ಸರ್ಕಾರ ಏನೂ ವ್ಯವಸ್ಥೆ ಮಾಡಿಲ್ಲ. ಬದಲಾಗಿ ಬರೀ ಕಾಲಹರಣ ಮಾಡಿದ್ರೂ, ಬಿಜೆಪಿ ಸ್ಲಂ ಜನರಿಗೆ ಸಾಕಷ್ಟು ಆಶ್ರಯ ವ್ಯವಸ್ಥೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅಕ್ರಮ ಗಣಿಗಾರಿಕೆ ವಿರುದ್ಧ ಬೊಬ್ಬಿರಿದ್ರೂ ಪಾದಯಾತ್ರೆ ಮಾಡಿದ ವೇಳೆ ಮಾಡಿದ ಭಾಷಣ ಮರೆತುಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇದೀಗ ನೈತಿಕತೆಯೇ ಇಲ್ಲದಾಗಿದೆ ಎಂದರು.

  • ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗ್ಬೇಕು: ಡಿವಿಎಸ್ ಎಡವಟ್ಟು

    ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗ್ಬೇಕು: ಡಿವಿಎಸ್ ಎಡವಟ್ಟು

    ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಶುಕ್ರವಾರ ಬಳ್ಳಾರಿ ಸಂಸದ ಶ್ರೀರಾಮುಲು ಎಡವಟ್ಟು ಮಾಡಿದ್ದು, ಇದೀಗ ಇಂದು ಮತ್ತೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿವಿ ಸದಾನಂದ ಗೌಡ ಅವರು ಎಡವಟ್ಟು ಮಾಡುವ ಮೂಲಕ ವಿರೋಧ ಪಕ್ಷದವರ ನಗೆಪಾಟಲಿಗೀಡಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿನ್ನೆ ನಡೆದಿದ್ದು, ಇಂದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಸಮಾವೇಶ ನಡೆಯಿತು. ತಮ್ಮ ಭಾಷಣದ ವೇಳೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ನರೇಂದ್ರ ಮೋದಿಯವರಿಗೆ ನಾಚಿಗೆಯಾಗಬೇಕು ಎಂದು ಹೇಳಿದರು.

    ಇದನ್ನೂ ಓದಿ: ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ:ಶ್ರೀರಾಮುಲು ಎಡವಟ್ಟು


    ಬಳಿಕ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯ ಮೈಯಲ್ಲಿ ಕನಕದಾಸರ ರಕ್ತ ಹರೀತಿಲ್ಲ. ಅವರ ಮೈಯಲ್ಲಿ ಟಿಪ್ಪುವಿನ ರಕ್ತ ಹರೀತಿದೆ. ಹಾಗಾಗಿ ಮೈಯನ್ನು ಕುಲುಕಿಸಿ ಟಿಪ್ಪು ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಸಿದ್ರಾಮಯ್ಯ ತಮಗೆ ಟಿಪ್ಪು ಹೆಸರನ್ನೇ ಇಟ್ಟುಕೊಳ್ಳಲಿ. ಹಿಂದುಗಳ ಮುದ್ರಾಧಾರಣೆ, ತ್ರಿಶೂಲಧಾರಣೆಯನ್ನು ಹಿಂಸೆ ಎನ್ನುತ್ತಾರೆ. ತಾಕತ್ತಿದ್ದರೆ ಮುಸ್ಲಿಮರು ಮಾಡುವ ಸುನ್ನತ್ ನಿಲ್ಲಿಸಿ, ಅದು ಕೂಡ ಹಿಂಸೆಯೇ. ಸುನ್ನತ್ ನಿಷೇಧಿಸುತ್ತೀರಾ ಅಂತ ಸಿಎಂಗೆ ಈಶ್ವರಪ್ಪ ಪ್ರಶ್ನೆ ಹಾಕಿದ್ರು.

    ಡಿಕೆಶಿ ಬಿಜೆಪಿಗೆ ಆಹ್ವಾನ ವದಂತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ಸೇರಿಸಲು ಸಾಧ್ಯವೇ ಇಲ್ಲ. ಸಿದ್ಧರಾಮಯ್ಯ, ಡಿಕೆಶಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ತಗೊಳಲ್ಲ. ಇವರು ಪ್ರಭಾಕರ್ ಭಟ್ಟರನ್ನು ಬಂಧಿಸುವ ಉದ್ದೇಶ ಹೊಂದಿದ್ದರು. ಪ್ರಭಾಕರ್ ಭಟ್ ರೋಮ ಮುಟ್ಟಿದರೆ ರಾಜ್ಯದಲ್ಲಿ ಜನ ಸುಮ್ಮನಿರಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯಾ ನಿಷೇಧ ಕಾನೂನು ತರುತ್ತೇವೆ ಅಂತ ಹೇಳಿದ್ರು.

    https://www.youtube.com/watch?v=paACKy7LMQs