ಬೆಂಗಳೂರು: ನೀಲಸಂದ್ರದ ಆಂಜನೇಯ ದೇಗುಲದ ಮೈಕ್‍ನಲ್ಲಿ ಓಂಕಾರ ನಾದ ಹನುಮಾನ್ ಚಾಲೀಸ್ ಹಾಕಲು ಶ್ರೀರಾಮ ಸೇನೆ ಸಜ್ಜುಗೊಂಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಜಾನ್ ವಿರೋಧಿಸಿ ಸುಪ್ರಭಾತ ಅಭಿಯಾನವನ್ನು ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ದರ್ಶನ ಮಾಡುತ್ತೇವೆ ಬಿಡಿ ಎಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಆದರೆ ಅವಕಾಶ ಕೊಡದ ಪೊಲೀಸರು ಯಾವ ಅವಕಾಶವನ್ನು ಕೊಡಲ್ಲ ಎಂದು ತಿಳಿಸಿದ್ದಾರೆ. ಆಗ ಹಿಂದೂ ಕಾರ್ಯಕರ್ತರು ಧಾರ್ಮಿಕ ಹಕ್ಕು ಇದೆ ಎಂದು ವಾದಿಸಿದ್ದಾರೆ. ಆದರೂ ಅಂಬೇಡ್ಕರ್ ಸರ್ಕಲ್ ನೀಲಸಂದ್ರ ದೇಗುಲದಿಂದ ಅರ್ಧ ಕಿಮೀ ದೂರದಲ್ಲೇ ಪೊಲೀಸರು ಹಿಂದೂ ಕಾರ್ಯಕರ್ತರನ್ನು ತಡೆದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್
ನಿಮಗೆ ತಾಕತ್ತಿದ್ದರೇ ಮಸೀದಿಗಳ ಆಜಾನ್ ತಡೆಯಿರಿ. ನಮ್ಮನ್ನು ತಡೆಯಬೇಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದ ಅಶೋಕ ನಗರ ಪೊಲೀಸರು ನಂತರ ಕಾರ್ಯಕರ್ತರನ್ನು ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಮಂಡ್ಯ: ಬುರ್ಕಾ ಹಾಕ್ಕೊಂಡು ಹೋಡಾಡಿದ್ರೂ ಬಿಜೆಪಿಗೆ ಒಂದು ಮುಸ್ಲಿಂ ವೋಟು ಬರಲ್ಲ. ಹಾಗಿದ್ದರೂ ಯಾಕೆ ಮುಸ್ಲಿಮರ ಓಲೈಕೆ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ.
ಇದೇ ವೇಳೆ `ಪಾಕಿಸ್ತಾನ ಜಿಂದಾಬಾದ್’ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಸ್ಲಾಂ ಅಜೆಂಡಾ ಅಲ್ಲಲ್ಲಿ ಹೊರಬರುತ್ತಿದೆ. ಮುಸ್ಲಿಮರ ಸೊಕ್ಕು, ನಿರ್ಲಕ್ಷ್ಯತನ, ದೇಶದ್ರೋಹಿತನ ಈ ರೀತಿ ಹೊರಬರುತ್ತಿದೆ. ಇವರ ವಿರುದ್ಧ ಸರಿಯಾದ ಕ್ರಮ ಆಗುತ್ತಿಲ್ಲ. ಹಾಗಾಗಿಯೇ ದೇಶದ್ರೋಹದ ಕ್ಯಾನ್ಸರ್ ಹರಡುತ್ತಿದೆ. ಈ ಕ್ಯಾನ್ಸರ್ ಬಿಜೆಪಿ ಸರ್ಕಾರ ಮಾತ್ರವಲ್ಲದೇ, ದೇಶವನ್ನೇ ನುಂಗಿಹಾಕುತ್ತದೆ. ಆದ್ದರಿಂದ ಅಂತಹವರನ್ನು ಒದ್ದು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್
ಸಾಂದರ್ಭಿಕ ಚಿತ್ರ
ಕವಲಂದೆ ಘಟನೆಗೆ ಸಂಬಂಧಿಸಿದಂತೆ ಮಾತನಾಡಿ, ಇಲ್ಲಿನ ಘಟನೆ ಹಿಂದೆ ಮೌಲ್ವಿ ಇದ್ದಾನೆ. ಅವನ ಪ್ರಚೋದನಕಾರಿ ಭಾಷಣದಿಂದಲೇ ಈ ರೀತಿ ಆಗಿದೆ. ತಪ್ಪಿತಸ್ಥರನ್ನು ಎನ್‌ಕೌಂಟರ್ ಮಾಡಿ ಬಿಸಾಕಿ. ಅವರನ್ನೇಕೆ ಸಾಕಿ ಸಲುಹುತ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಕವಲಂದೆ ಶೇ.60ರಷ್ಟು ಮುಸ್ಲಿಮರೇ ಇದ್ದಾರೆ. ಅಲ್ಲಿ ಯಾಕೆ ಪೊಲೀಸರು ವೀಡಿಯೋ ಮಾಡಿಲ್ಲ. ಹಿಂದೂಗಳ ಕಾರ್ಯಕ್ರಮ ಇದ್ದಾಗ ಕ್ಯಾಮೆರಾ ಹಿಡಿದು ಬರುತ್ತಾರೆ. ಅಲ್ಲಿ ಏಕೆ ವಿಡಿಯೋ ಮಾಡಲಿಲ್ಲ. ಇದು ಪೊಲೀಸರ ನಿರ್ಲಕ್ಷ್ಯ ಅಲ್ಲವೇ? ಈ ಕವಲಂದೆಯ ಮುಸ್ಲಿಮ ಮುಖಂಡ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯ: ಗಲಭೆ ಅಶಾಂತಿ ಎಲ್ಲವೂ ಮಸೀದಿಯ ಮೈಕ್ ಮೂಲಕ ಆಗುತ್ತಿದೆ. ಆದ್ದರಿಂದಲೇ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಅವರು ಏಕೆ ಗಟ್ಸ್ ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈಕ್‌ಗಳನ್ನು ನಿಷೇಧಿಸುವ ಕೆಲಸ ನಮ್ಮ ರಾಜ್ಯದಲ್ಲಿ ಏಕೆ ಆ ಕೆಲಸ ಆಗುತ್ತಿಲ್ಲ? ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರಗ ಜ್ಞಾನೇಂದ್ರ ಅವರು ಏಕೆ ಯೋಗಿ ರೀತಿ ಗಡ್ಸ್ ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿರುವ ಮುತಾಲಿಕ್, ಸುಪ್ರೀಂ ಆದೇಶ ಎಲ್ಲರಿಗೂ ಒಂದೇ. ನೀವು ಹೊಸ ನಿಯಮ ಮಾಡಬೇಕಿಲ್ಲ. ಸರ್ಕಾರ ಆದೇಶ ಪಾಲಿಸದೇ ಇರೋದ್ರಿಂದ ನಮ್ಮ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ MLAಗಳು ಜೈಲಿಗೆ ಏಕೆ ಹೋಗಿದ್ರು: ಕಟೀಲ್‍ಗೆ ಡಿಕೆಶಿ ಪ್ರಶ್ನೆ
ನಾಳೆಯಿಂದಲೇ ಹಿಂದೂ ಸಂಘಟನೆಗಳಿಂದ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ ಹಾಗೂ ಭಕ್ತಿಗೀತೆಗಳ ಪ್ರಸಾರ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮಂಡ್ಯದ ಕಲ್ಲಹಳ್ಳಿಯ ಹನುಮ ಮಂದಿರ ಸೇರಿದಂತೆ 3 ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಚಾಲನೆ ನೀಡಲಾಗುತ್ತಿದೆ. ನಾಳೆಯ ಅಭಿಯಾನ ತಡೆಯಲು ಬಂದ್ರೆ ಸಂಘರ್ಷ ಗ್ಯಾರೆಂಟಿ. ಪೊಲೀಸರು ನಮ್ಮ ಅಭಿಯಾನ ತಡೆಯುವುದಲ್ಲ, ಮಸೀದಿಗಳಲ್ಲಿ ಮೈಕ್ ಅಳವಡಿಸುವುದನ್ನು ತಡೆಯಲಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವ ತಾಯಂದಿರ ದಿನಾಚರಣೆ – 600ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ
ನಮ್ಮ ಸಂಘಟನೆ ಕಾರ್ಯಕರ್ತರು ರಾಜ್ಯದಾದ್ಯಂತ ದೇವಾಲಯಗಳಲ್ಲಿ ಅಭಿಯಾನ ನಡೆಸಲು ಮನವಿ ಮಾಡಿದ್ದಾರೆ. ನಾಳೆಯಿಂದ ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಕ್ತಿಗೀತೆಗಳನ್ನು ಹಾಕ್ತಾರೆ. ಬೆಳಿಗ್ಗೆ 5 ಗಂಟೆಗೆ ಹಾಕಲು ಅಭಿಯಾನ ಆರಂಭಿಸಿದ್ದು, ದಿನಕ್ಕೆ 4 ಬಾರಿ ಮಸೀದಿ ಅಜಾನ್ ಮೊಳಗುವ ವೇಳೆ ಭಕ್ತಿಗೀತೆ ಹಾಕುವ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.
ಸರ್ಕಾರದಿಂದಲೇ ಬೆದರಿಕೆ: ರಾಜ್ಯದ್ಯಾಂತ ಸುಮಾರು ಸಾವಿರ ದೇವಾಲಯಗಳನ್ನು ಸಂಪರ್ಕಿಸಿದ್ದೇವೆ. ದೇವಾಲಯದ ಅರ್ಚಕರು, ಟ್ರಸ್ಟ್ನವರು ಸಂತೋಷದಿAದಲೇ ಒಪ್ಪಿದ್ದಾರೆ. ಬೆಳಗ್ಗಿನ ಜಾವ ಭಕ್ತಿ ಗೀತೆ, ಹನುಮಾನ್ ಚಾಲೀಸಾ ಹಾಕಲು ಮುಂದಾಗಿದ್ದಾರೆ. ಎಲ್ಲರಲ್ಲೂ ಸಂತೋಷ ಇದೆ, ಆಕ್ರೋಶವೂ ಇದೆ. ಏಕೆಂದರೆ ಮುಸ್ಲಿಂರ ಉದ್ಧಟತನ ಹೆಚ್ಚಾಗಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ. ನಮ್ಮ ಅಭಿಯಾನವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಾವು ಸಂಪರ್ಕಿಸಿದ ದೇವಾಲಯಗಳಿಗೆ ಹೋಗಿ ಹೆದರಿಸುತ್ತಿದ್ದಾರೆ. ಈ ದಾದ ಗಿರಿ ನಡೆಯಲ್ಲ, ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಬಾಗಲಕೋಟೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಗಾಂಧೀಜಿ, ನೆಹರೂಜಿ ಅವ್ರಿಂದಲ್ಲ, ಬಾಂಬ್-ಬಂದೂಕಿನಿಂದ ಸಿಕ್ಕಿದೆ. ಭಗತ್ ಸಿಂಗ್, ರಾಜ್‍ಗುರು, ಸುಖದೇವ, ಚಂದ್ರಶೇಕರ್ ಆಜಾದ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಅವರಂತಹ ಕಾಂತ್ರಿಕಾರಿಗಳಿಂದ ದೇಶ ಸ್ವಂತಂತ್ರವಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ವಿದ್ಯಾಗಿರಿಯ 17ನೇ ಕ್ರಾಸ್ ನಲ್ಲಿ, ಡೆಮಾಕ್ರೆಟಿಕ್ ಯೂತ್ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಗತ್ ಸಿಂಗ್ ಬಲಿದಾನ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗತ್‍ಸಿಂಗ್ ಬಲಿದಾನ ದಿವಸ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿರುವ ಪಕ್ಷಕ್ಕೆ ನನ್ನ ಧಿಕ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇಂತಹ ಕ್ರಾಂತಿಕಾರಿ ಬಲಿದಾನದ ಇವರ ಆಚರಣೆಗೆ ವಿರೋಧ ವ್ಯಕ್ತಪಡಿಸೋದು ದೇಶ ದ್ರೋಹ. ನನ್ನ ಮೇಲೆ 97 ಅಲ್ಲ 107 ಕೇಸ್ ದಾಖಲಾಗಿವೆ. ಇದಕ್ಕೆ ನಾನು ಹೆದರಲ್ಲ. ನನಗ್ಯಾಕೆ ತೊಂದರೆ ಕೊಡುತ್ತಿದ್ದೀರಿ. ನನಗೆ ಮದುವೆಯಿಲ್ಲ, ಮಕ್ಕಳಿಲ್ಲ, ಆಸ್ತಿ ಗಳಿಸಿಲ್ಲ. ಕ್ರಾಂತಿಕಾರಿಗಳ ಹೋರಾಟ, ತ್ಯಾಗವನ್ನು ವ್ಯವಸ್ಥಿತವಾಗಿ ಮುಚ್ಚುಹಾಕಲಾಗಿದೆ ಎಂದು ಗುಡುಗಿದ್ರು.
ನಮ್ಮ ದೇಶದಲ್ಲಿ ದೇಶಭಕ್ತರಿರಬಾರದು, ಅಂಜುಪುಕಲರು ಇರಬೇಕು. ಢರ್ಪೋಕ್ ಭಾರತೀಯರು, ಬ್ರಿಟಿಷರ ನೋಡಿ ಉಚ್ಚೆ ಹೊಯ್ಕೊಳ್ಳುವಂತಹ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ. ಇಂತಹ ಭಾರತೀಯರಿಗೆ ಧೈರ್ಯ ತುಂಬಲು ಭಗತ್ ಸಿಂಗ್ ಪಾರ್ಲಿಮೆಂಟ್‍ನಲ್ಲಿ ಬಾಂಬ್ ಹಾಕಿದ್ರು ಅಂತ ಮುತಾಲಿಕ್ ಹೇಳಿದ್ರು.
ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಎನ್ ಕೌಂಟರ್ ಮಾಡ ಹೊರಟವರು ಮೊದಲು ಹಿಂದೂ ವಿರೋಧಿ ಅಕ್ಬರುದ್ದೀನ್ ಓವೈಸಿಯನ್ನು ಎನ್ ಕೌಂಟರ್ ಮಾಡಬೇಕಿತ್ತು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ರಾಯ್ಕರ ಭವನದಲ್ಲಿ ಪ್ರವೀಣ್ ಭಾಯ್ ತೊಗಾಡಿಯಾ ಅಭಿಮಾನಿ ಬಳಗ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಹಿಂದೂಸ್ತಾನ್ ದಲ್ಲಿಯೇ ಹಿಂದೂ ಹೋರಾಟಗಾರರನ್ನು ಎನ್ ಕೌಂಟರ್ ಮಾಡಲು ಮುಂದಾಗಿದ್ದು ದುರಂತ. ತೊಗಾಡಿಯಾ ಅವರ ಎನ್ ಕೌಂಟರ್ ಮಾಡುವ ಬದಲು ಹಿಂದು ವಿರೋಧಿ ಓವೈಸಿ ಎನ್‍ಕೌಂಟರ್ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಹಿಂದೂ ಸಮಾಜವನ್ನು ಬಳಸಿಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ. ಈಗ ಹಿಂದು ಹೋರಾಟಗಾರ ತೆಲೆಯ ಮೇಲೆ ಕಾಲಿಟ್ಟು ಬಿಜೆಪಿ ಅಧಿಕಾರ ಮಾಡುತ್ತಿದೆ. ನಮ್ಮ ಹೋರಾಟವನ್ನು ಬಳಸಿಕೊಂಡು ಅಧಿಕಾರ ಹಿಡಿದಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಿಜೆಪಿಯ ದರ್ಪ ಹಾಗೂ ದುರಾಡಳಿತ ಕಾರಣವಾಗಿದೆ. ಕಳೆದ 50 ವರ್ಷದಲ್ಲಿ ಕಾಂಗ್ರೆಸ್ ಲೂಟಿ ಮಾಡಿದಕ್ಕಿಂತ ಹೆಚ್ಚು 5 ವರ್ಷದಲ್ಲಿ ಬಿಜೆಪಿ ಅವರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಯಾರು ಅಕ್ಬರುದ್ದೀನ್ ಓವೈಸಿ:
ಆಲ್ ಇಂಡಿಯಾ ಮಜ್ಲಿಸ್ ಎಇತ್ತೆಹಾದುಲ್ ಮುಸ್ಲಿಮೀನ್‍ನ (ಎಂಐಎಂ) ಪಕ್ಷದ ನಾಯಕ, ಹಾಲಿ ಸಂಸದರಾಗಿರುವ ಅಸಾದುದ್ದೀನ್ ಓವೈಸಿ ಅವರ ಸಹೋದರರಾಗಿರುವ ಅಕ್ಬರುದ್ದೀನ್ ಓವೈಸಿ ಈ ಹಿಂದೆ ಹಿಂದೂ ಧರ್ಮವನ್ನು ವಿರೋಧಿಸಿ ಭಾಷಣ ಮಾಡಿದ್ದರು. ಪ್ರಸ್ತುತ ಅಕ್ಬರುದ್ದೀನ್ ಓವೈಸಿ ತೆಲಂಗಾಣ ರಾಜ್ಯದ ಎಂಐಎಂ ಪಕ್ಷದ ಚಂದ್ರರಾಯನಗುಟ್ಟ ಕ್ಷೇತ್ರದ ಶಾಸಕರಾಗಿದ್ದಾರೆ.
ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆ ಈಗಾಗಲೇ ಡೇಟ್ ಫಿಕ್ಸ್ ಮಾಡಿದೆ. ಈ ನಡುವೆ, ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾದ್ರೆ ಮಠಕ್ಕೆ ಭದ್ರತೆ ಕೊಡಲು ಸಿದ್ಧ ಅಂತಾ ಯುವ ಕಾಂಗ್ರೆಸ್ ಹೇಳಿದೆ. ಈ ಮೂಲಕ ಘಟನೆಗೆ ರಾಜಕೀಯ ಬಣ್ಣ ಬಂದಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಇಫ್ತಾರ್ ಸಭೆ ವಿರುದ್ಧ ಶ್ರೀರಾಮ ಸೇನೆ ತಗಾದೆ ಎತ್ತಿತ್ತು. ಪ್ರಮೋದ್ ಮುತಾಲಿಕ್ ಸ್ವಾಮೀಜಿಯವರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ರು. ವಿಶ್ವೇಶತೀರ್ಥರ ಉತ್ತರದಿಂದ ಸಂತುಷ್ಟರಾಗದ ಮುತಾಲಿಕ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆ ನಡೆಸದಂತೆ ಹಿಂದೂ ಮುಖಂಡರು ಮುತಾಲಿಕ್ ಗೆ ಒತ್ತಡ ಹೇರಿದ್ದರು. ಆದ್ರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವ ಪ್ರಮೇಯವೇ ಇಲ್ಲ ಅಂತ ಶ್ರೀರಾಮಸೇನೆ ಸ್ಪಷ್ಟಪಡಿಸಿದೆ.
ಶ್ರೀರಾಮ ಸೇನೆ ಜಿಲ್ಲಾ ವಕ್ತಾರ ಜಯರಾಂ ಮಾತನಾಡಿ, ಪ್ರತಿಭಟನೆಯಿಂದ ನಾವು ಹಿಂದೆ ಸರಿಯಲ್ಲ. ಪ್ರತಿಭಟನೆ ನಡೆಸಿಯೇ ಸಿದ್ಧ ಎಂದಿದ್ದಾರೆ. ನಾವು ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಯುವ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿವೆ. ಪೇಜಾವರ ಶ್ರೀಗಳು ನಮ್ಮ ಗುರುಗಳು- ನಾವೆಲ್ಲಾ ಅವರ ಶಿಷ್ಯರು. ನಾವು ಯಾವತ್ತೂ ಸ್ವಾಮೀಜಿಗಳ ಬೆಂಬಲಕ್ಕೆ ಇದ್ದೇವೆ. ಇಫ್ತಾರ್ ಕೂಟ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ನಮ್ಮ ವಿರೋಧವೇನಿದ್ದರೂ ಕೃಷ್ಣಮಠದಲ್ಲಿ ನಡೆದ ನಮಾಜ್ ವಿಚಾರಕ್ಕೆ ಮಾತ್ರ ಎಂದರು. ಜುಲೈ 2ರಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡುತ್ತೆವೆ. ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯಲಿದೆ ಎಂದರು.
ಮಠಕ್ಕೆ ಭದ್ರತೆ: ಜುಲೈ 2ರಂದು ರಾಜ್ಯದಾದ್ಯಂತ ಶಾಂತ ರೀತಿಯ ಪ್ರತಿಭಟನೆ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದೆ. ಈ ನಡುವೆ ಶ್ರೀರಾಮ ಸೇನೆ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಗುಲ್ಲೆದ್ದಿದೆ. ಮಠಕ್ಕೆ ಮುತ್ತಿಗೆ ಹಾಕುವುದಾದರೆ ಯುವ ಕಾಂಗ್ರೆಸ್ ಮಠಕ್ಕೆ ಭದ್ರತೆ ನೀಡುವುದಾಗಿ ಹೇಳಿದೆ. ಶ್ರೀರಾಮಸೇನೆಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೃಷ್ಣಮಠವನ್ನು ಶ್ರೀರಾಮ ಸೇನೆ ಗುತ್ತಿಗೆಗೆ ಪಡೆದಿಲ್ಲ. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದೇವೆ, ಅವರಿಗೆ ಧೈರ್ಯ ಹೇಳಿದ್ದೇವೆ. ಶ್ರೀರಾಮಸೇನೆ ಮುತ್ತಿಗೆ ಹಾಕಿದ್ರೆ ಮಠದ ಸುತ್ತಲೂ ಮಾನವ ಸರಪಳಿ ರಚಿಸಿ ಭದ್ರತೆ ಕೊಡುವುದಾಗಿ ಹೇಳಿದರು.
ಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಭಾರೀ ವಿವಾದ ಎಬ್ಬಿಸಿದ ಬೆನ್ನಲ್ಲೇ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಸೌಹಾರ್ದ ಈದ್ ಆಚರಣೆ ನಡೆದಿದೆ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ, ಶೀರೂರು ಲಕ್ಷ್ಮೀವರಶ್ರೀ, ಮುಸ್ಲೀಂ ಧರ್ಮಗುರು ಮೌಲಾನ ಅಬ್ದುಲ್ ರಹೀಮಾನ್ ರಜ್ವೀ ಕಲ್ಕಟ್ ಜೊತೆ ಸೇರಿ ಈದ್ ಸೌಹಾರ್ದ ಕೂಟ ಆಯೋಜಿಸಿದ್ದಾರೆ.