Tag: shrirama

  • ಶ್ರೀರಾಮನ ಕುರಿತು ಅಸಭ್ಯ ಪೋಸ್ಟ್ – ವಾಯ್ಸ್ ಆಫ್ ಮುಸ್ಲಿಂ ಪೇಜ್ ವಿರುದ್ಧ ಕೇಸ್

    ಶ್ರೀರಾಮನ ಕುರಿತು ಅಸಭ್ಯ ಪೋಸ್ಟ್ – ವಾಯ್ಸ್ ಆಫ್ ಮುಸ್ಲಿಂ ಪೇಜ್ ವಿರುದ್ಧ ಕೇಸ್

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮನ ಕುರಿತು ಅಸಭ್ಯವಾಗಿ ಪೋಸ್ಟ್ ಮಾಡಿದ್ದಕ್ಕೆ ವಾಯ್ಸ್ ಆಫ್ ಕರ್ನಾಟಕ ಮುಸ್ಲಿಂ ಹೆಸರಿನಲ್ಲಿದ್ದ ಪೇಜ್ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಶ್ರೀರಾಮ ಕಳ್ಳ, ಕುಡುಕ, ಹೆಂಡತಿಯನ್ನು ತೃಪ್ತಿಪಡಿಸಲಾಗದವನು, ಪತ್ನಿಯನ್ನು ಕಾಡಿಗೆ ಬಿಟ್ಟ ನಪುಂಸಕ ಎಂದು ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್‍ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ವಕೀಲರಾದ ಮೀರಾ ರಾಘವೇಂದ್ರ ಅವರು ದೂರು ನೀಡಿದ್ದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    https://www.facebook.com/VoiceOfKarnatakaMuslim/photos/a.1732362953462606/1818018408230393/?type=3&theater

    ಪೋಸ್ಟ್‍ನಲ್ಲಿ ಏನಿದೆ?
    ರಾಮ ಒಬ್ಬ ಕಳ್ಳ, ಕುಡುಕ, ಹೆಂಡತಿಯನ್ನು ತೃಪ್ತಿ ಪಡಿಸಲು ಆಗದೇ ಕಾಡಿನಲ್ಲಿ ಬಿಟ್ಟ ನಪುಂಸಕ. ಸಲಿಂಗಕಾಮಿ ಇವನ ಹೆಸರಲ್ಲಿ ಹತ್ಯೆ ನಡೆಯುತ್ತದೆ ಎಂದರೆ ಇವನು ಭಯೋತ್ಪಾದಕನಲ್ಲದೆ ಇನ್ಯಾರು? ರಾಮ ದೇವು ಆಗಿದ್ದರೆ ಈಗ ಬರಲಿ, ಅಥವಾ ರಾಮ ದೇರು ಪ್ರೂ ಮಾಡಿ. ಪೋಸ್ಟ್ ಮಾಡುವೆ.

    ರಾಮ ಹೋ ರಾಮ ಎಲ್ಲಿದ್ಯಪ್ಪ? ನಿನ್ನ ಹೆಸರಿನಲ್ಲಿ ಅಧುನಿಕ ರಾಮ ಭಕ್ತ ಭಯೋತ್ಪಾದಕರು. ಕೊಲೆ ಮಾಡುತ್ತಿದ್ದಾರಪ್ಪ ತಾಖತ್ ಇದ್ರೆ ಈಗ ಬಾ. ರಾಮ ಮೆಜೆಸ್ಟಿಕ್ ಮಾಮ ಎಂದು ಬರೆದು ಪೋಸ್ಟ್ ಮಾಡಲಾಗಿದೆ.

  • ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಕೊಪ್ಪಳ: ಶ್ರೀರಾಮನ ಹೆಸರಲ್ಲಿ ಕೊಲೆ, ಸುಲಿಗೆ ಮಾಡ್ತಾರೆ ಅನ್ನೋ ವಿವಾದಿತ ಹೇಳಿಕೆಯನ್ನ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಸಮರ್ಥಿಸಿಕೊಂಡಿದ್ದಾರೆ.

    ಗಂಗಾವತಿಯಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯೊಳಗೆ ಶ್ರೀರಾಮನ ಪೂಜೆ ಮಾಡ್ತಾರೆ. ಹೊರಗಡೆ ಬಂದು ಬೆಂಕಿ ಹಚ್ಚುತ್ತಾರೆ. ಅತ್ಯಾಚಾರ ಮಾಡ್ತಾರೆ. ಈ ರೀತಿ ಮಾಡಲು ದೇವರು ಹೇಳಿದ್ದಾರಾ? ಯಾವ ಧರ್ಮ ಗ್ರಂಥದಲ್ಲಿ ಇಂಥ ಕೆಲಸ ಮಾಡಿ ಅಂತ ಹೇಳಿಲ್ಲ ಅಂತ ಹೇಳುವುದರ ಮೂಲಕ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

    ನಾನು ಏನು ಹೇಳಿದ್ದೀನಿ ಅನ್ನೋದು ಟಿವಿಯವರು ಪೂರ್ಣ ತೋರಿಸುವುದಿಲ್ಲ. ಹಿಂದೆ- ಮುಂದೆ ಏನು ಹೇಳಿದ್ದೀನಿ ಅನ್ನೋದು ಬಿಟ್ಟು ಶ್ರೀರಾಮ ಹೆಸ್ರಲ್ಲಿ ಕೊಲೆ ಅನ್ಸಾರಿ ಹೇಳಿಕೆ ಅಂತ ತೋರಿಸ್ತಾರೆ. ಇದಕ್ಕೆ ಗೋಮಧುಸೂದನ್ ಕರೆದು ಡಿಬೆಟ್ ಮಾಡ್ತಾರೆ. ಗಡ್ಡ ಬಿಟ್ಟ ಅಮಾಯಕ ಮುಸ್ಲಿಮ್ ವ್ಯಕ್ತಿಗಳನ್ನು ಕರೆದು ಏನ್ರಿ ಶಾಸಕ ಅನ್ಸಾರಿ ಹೀಗೆ ಹೇಳಿದ್ದಾರೆ ಅಂತ ಕೇಳ್ತಾರೆ. ಅದಕ್ಕೆ ಅವರು ಈ ರೀತಿ ಹೇಳೊದು ತಪ್ಪು ಅಂತಾರೆ ಎಂದು ಟಿವಿ ಮಾಧ್ಯಮದ ವಿರುದ್ಧ ಅನ್ಸಾರಿ ಹರಿಹಾಯ್ದಿದರು. ಇದನ್ನೂ ಓದಿ: ಮನೆಯೊಳಗೆ ಜೈ ಶ್ರೀರಾಮ್, ಹೊರಗೆ ಕೊಲೆ ಸುಲಿಗೆ: ಶಾಸಕ ಇಕ್ಬಾಲ್ ಅನ್ಸಾರಿ ವಿವಾದಿತ ಹೇಳಿಕೆ

    ಪದೇ ಪದೇ ಗೋಮಧುಸೂದನ್ ನನ್ನ ಡಿಬೇಟ್ ಗೆ ಯಾಕೆ ಕರೀತಿರಾ. ನೀವು ಏನಾದ್ರೂ ಅವರಿಗೆ ಜಾಹೀರಾತಿಗೆ ಇಟ್ಟುಕೊಂಡಿದ್ದೀರಾ? ಬಿಜೆಪಿಯಲ್ಲಿ ಮತ್ತ್ಯಾರು ಇಲ್ವಾ. ಗೋಮಧುಸೂದನ್ ಒಬ್ಬರೇ ಇರೋದಾ? ನಿಮಗೆ ಧೈರ್ಯ ಇದ್ರೆ ಚರ್ಚೆಗೆ ನಮ್ಮಂತವರನ್ನು ಕರೆಯಿರಿ. ದೇಶದಲ್ಲಿ ಪ್ರಚೋದನಾಕಾರಿ ನಡೆಯುತ್ತಿದೆ ಅಂದ್ರೆ ಇವರಿಂದಲೇ ಮಾತ್ರ ನಡೆಯುತ್ತಿದೆ ಎಂದು ಮಾಧ್ಯಮದ ವಿರುದ್ಧ ಕಿಡಿ ಕಾರಿದ್ರು.

    ಇಂದು ಟಿವಿ ನಡೆಯಬೇಕಲ್ಲ, ರಾಜ್ಯದಲ್ಲಿ ಸುದ್ದಿ ಇರೋಲ್ಲ. ಹೀಗಾಗಿ ಇಷ್ಟ ಇರೋ ಸುದ್ದಿಯನ್ನ ತಗೊಂಡು ಸೆವಂಟಿ ಎಂಎಂ ಮಾಡಿ ಇಷ್ಟುದ್ದ ತೋರಿಸ್ತಾರೆ. ನಿಮಗೆ ಧಮ್ ಇದ್ರೆ ಇಕ್ಬಾಲ್ ಅನ್ಸಾರಿ ಮಂತ್ರಿ ಏನು ಮಾಡಿದ್ದಾನೆ ಅನ್ನೋದು ತೋರಿಸಿ. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಟ್ಟಿದ್ದಾರೆ ಅನ್ನೋದು ಏನೆಲ್ಲಾ ಮಾಡಿದೀನಿ ತೋರಿಸಿ ನೋಡೋಣ ಅಂತ ಟಿವಿ ಮಾಧ್ಯಮಕ್ಕೆ ಪಂಥಾಹ್ವಾನ ನೀಡಿದರು.