Tag: shrini

  • ‘ಘೋಸ್ಟ್’ ಚಿತ್ರದ ಬಿಗ್ ಡ್ಯಾಡಿ ಪೋಸ್ಟರ್ ಔಟ್- ಕಿಕ್ ಕೊಡ್ತಿದೆ ಶಿವಣ್ಣ ಲುಕ್

    ‘ಘೋಸ್ಟ್’ ಚಿತ್ರದ ಬಿಗ್ ಡ್ಯಾಡಿ ಪೋಸ್ಟರ್ ಔಟ್- ಕಿಕ್ ಕೊಡ್ತಿದೆ ಶಿವಣ್ಣ ಲುಕ್

    ನ್ನಡದ ಬ್ಯುಸಿಯೇಷ್ಟ್ ನಟ ಅಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಇದೀಗ ‘ಘೋಸ್ಟ್’ (Ghost) ಸಿನಿಮಾ ಬಿಗ್ ಡ್ಯಾಡಿ ಪೋಸ್ಟರ್ ಮೂಲಕ ಶಿವಣ್ಣ ಗಮನ ಸೆಳೆಯುತ್ತಿದ್ದಾರೆ. ಘೋಸ್ಟ್ ಸಿನಿಮಾ ನಿರ್ದೇಶಕ ಶ್ರೀನಿ (ಜುಲೈ 9) ಅವರ ಹುಟ್ಟುಹಬ್ಬದಂದು ಶಿವಣ್ಣ ಫ್ಯಾನ್ಸ್ ಹ್ಯಾಪಿ ನ್ಯೂಸ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ಘೋಸ್ಟ್ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಡ್ತಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ.

    ಇದೇ ಜುಲೈ 12ರಂದು ಎನರ್ಜಿಟಿಕ್ ಹೀರೋ ಶಿವಣ್ಣ ಅವರ ಜನ್ಮದಿನ. ಪ್ರತಿ ವರ್ಷದಂತೆ ಈ ಬಾರಿ ಕೂಡ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಲಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11.45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

    ಈ ಪೋಸ್ಟರ್‌ನಲ್ಲಿ ಶಿವಣ್ಣ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ಇಂದು (ಜುಲೈ 9) ನಿರ್ದೇಶಕ ಎಂ.ಜಿ. ಶ್ರೀನಿವಾಸ್ (Director Shrinivas) ಅವರ ಬರ್ತ್‌ಡೇಯಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಾಗಿದೆ. ಇದನ್ನೂ ಓದಿ:ಹಿರಿಯ ನಟಿ ಲೀಲಾವತಿ ಮನೆಗೆ ಉಮಾಶ್ರೀ- ಪದ್ಮಾವಾಸಂತಿ ಭೇಟಿ

    ಶಿವಣ್ಣ ಜೊತೆ ಜಯರಾಂ, ಅನುಪಮ್ ಖೇರ್, ಸತ್ಯಪ್ರಕಾಶ್, ದತ್ತಣ್ಣ, ಅಭಿಜಿತ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಘೋಸ್ಟ್’ ಚಿತ್ರತಂಡ ಸೇರಿದ ಬಾಲಿವುಡ್ ನಟ ಅನುಪಮ್ ಖೇರ್

    `ಘೋಸ್ಟ್’ ಚಿತ್ರತಂಡ ಸೇರಿದ ಬಾಲಿವುಡ್ ನಟ ಅನುಪಮ್ ಖೇರ್

    ಹ್ಯಾಟ್ರಿಕ್ ಹೀರೋ ಶಿವಣ್ಣ- ಡೈರೆಕ್ಟರ್ ಶ್ರೀನಿ ಕಾಂಬಿನೇಷನ್ ಸಿನಿಮಾ `ಘೋಸ್ಟ್’ (Ghost) ಚಿತ್ರಕ್ಕೆ ಬಾಲಿವುಡ್ (Bollywood) ಖ್ಯಾತ ನಟ ಅನುಪಮ್ ಖೇರ್ (Anupam Kher) ಎಂಟ್ರಿಯಾಗಿದ್ದಾರೆ. ಶಿವರಾಜ್‌ಕುಮಾರ್‌ಗೆ ಜೊತೆಯಾಗುವ ಮೂಲಕ ಕನ್ನಡಕ್ಕೆ ಅನುಪಮ್ ಖೇರ್ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು

     

    View this post on Instagram

     

    A post shared by SRINI (@lordmgsrinivas)

    `ಘೋಸ್ಟ್’ ಸಿನಿಮಾಗೆ ಚಾಲನೆ ಸಿಕ್ಕ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ತಮ್ಮ ಪಾತ್ರದ ಕುರಿತು ಡೈರೆಕ್ಟರ್ ಶ್ರೀನಿ ಜೊತೆಗೆ ಚರ್ಚೆ ಮಾಡಿದ್ದಾರೆ. ಶ್ರೀನಿ ಕೂಡ ಅನುಪಮ್ ಖೇರ್ ಅವರಿಗೆ ಸಿನಿಮಾದ ಶೂಟಿಂಗ್ ಮತ್ತು ಇತರೆ ವಿಷಯಗಳನ್ನ ವಿವರಿಸಿದ್ದಾರೆ.

     

    View this post on Instagram

     

    A post shared by SRINI (@lordmgsrinivas)

    `ದಿ ಕಾಶ್ಮೀರ್ ಫೈಲ್ಸ್’ ದಂತಹ ಸಿನಿಮಾದಲ್ಲಿ ಅಭಿನಯಿಸಿರೋ ಅನುಪಮ್ ಖೇರ್ ಅವರು ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಂದು ಅದ್ಭುತ ರೋಲ್ ಅನ್ನ ಅನುಪಮ್ ಖೇರ್ ನಿರ್ವಹಿಸುತ್ತಿದ್ದಾರೆ.

    ಇನ್ನೂ `ವೇದ’ ಸೂಪರ್ ಸಕ್ಸಸ್ ನಂತರ ಶಿವಣ್ಣ `ಘೋಸ್ಟ್’, ಭೈರತಿ ರಣಗಲ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ (Shivanna) ಜೊತೆ ಅನುಪಮ್ ಖೇರ್ ಕಾಂಬಿನೇಷನ್ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

  • ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ಶಿವಣ್ಣ ನಟನೆಯ `ಘೋಸ್ಟ್’ (Ghost) ಸಿನಿಮಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುಲೇ ಇದೆ. ಸ್ಟಾರ್ ಕಲಾವಿದರ ದಂಡೇ ಶಿವಣ್ಣನ ಟೀಮ್‌ಗೆ ಸೇರ್ಪಡೆಯಾಗುತ್ತಿದೆ. ಸದ್ಯ `ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ (Archana Jois) `ಘೋಸ್ಟ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

     

    View this post on Instagram

     

    A post shared by Archana Jois (@jois_archie)

    `ವೇದ’ ಬಳಿಕ ಶಿವಣ್ಣ ನಟನೆಯ `ಘೋಸ್ಟ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚಿಗೆ ಚಿತ್ರತಂಡಕ್ಕೆ ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈಗ ನಟಿ ಅರ್ಚನಾ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ `ಕೆಜಿಎಫ್’ (Kgf) ನಟಿ ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಅರ್ಚನಾ ನಟಿಸಿದ್ದಾರೆ.

    ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ 60ರಷ್ಟು ಚಿತ್ರೀಕರಣ ಆಗಿದೆ. ಸದ್ಯದಲ್ಲೇ 3ನೇ ಹಂತದ ಶೂಟಿಂಗ್ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್‌ಜೆ ಆಗಿ `ಆನ್ ಏರ್’ ಆಗ್ತಿದ್ದಾರೆ `ಓಲ್ಡ್ ಮಾಂಕ್’ ಶ್ರೀನಿ

    ಆರ್‌ಜೆ ಆಗಿ `ಆನ್ ಏರ್’ ಆಗ್ತಿದ್ದಾರೆ `ಓಲ್ಡ್ ಮಾಂಕ್’ ಶ್ರೀನಿ

    ʻಓಲ್ಡ್‌ಮಾಂಕ್‌ʼ  ಚಿತ್ರದ ನಂತರ ನಟ ಶಿವರಾಜ್ ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ನಟ ಕಮ್ ನಿರ್ದೇಶಕ ಶ್ರೀನಿ ಮತ್ತೆ ಸುದ್ದಿಯಲ್ಲಿದ್ದಾರೆ. `ಆನ್ ಏರ್’ ಅಂತಾ ಥ್ರಿಲರ್ ಕಥೆ ಹೇಳಲು ಹೊರಟಿದ್ದಾರೆ.

    ಅದಿತಿ ಪ್ರಭುದೇವಾ ಜತೆ ಡ್ಯುಯೇಟ್ ಹಾಡಿದ ನಂತರ ʻಓಲ್ಡ್‌ಮಾಂಕ್‌ʼ ಶ್ರೀನಿ ಡೈರೆಕ್ಷನ್ ಕ್ಯಾಪ್ ತೊಟ್ಟು ರೆಡಿಯಾಗಿದ್ದಾರೆ. ಆ ಗ್ಯಾಪ್‌ನಲ್ಲೇ ತಮ್ಮ ನಟನೆಯ ಹೊಸ ಚಿತ್ರದ ಕುರಿತು ರಿವೀಲ್ ಮಾಡಿದ್ದಾರೆ. ಶ್ರೀನಿ ನಟನೆಯ `ಆನ್ ಏರ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಪೋಸ್ಟರ್ ಲುಕ್ ನೋಡುಗರನ್ನ ಅಟ್ರಾಕ್ಟ್ ಮಾಡ್ತಿದೆ.

    `ಆನ್ ಏರ್’ ಚಿತ್ರದಲ್ಲಿ ಆರ್ ಜೆ ಪಾತ್ರಕ್ಕೆ ನಟ ಶ್ರೀನಿ ಜೀವ ತುಂಬಿದ್ದಾರೆ. ಇದೊಂದು ಥ್ರಿಲರ್ ಕಥೆಯಾಗಿದ್ದು, ಭಿನ್ನ ಕಥೆಯ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಜುಲೈನಲ್ಲಿ ನೇರವಾಗಿ ಒಟಿಟಿನಲ್ಲಿ ಚಿತ್ರ ತೆರೆಕಾಣಲಿದೆ. ಇದನ್ನೂ ಓದಿ: ಯಶೋದಾ ಫಸ್ಟ್ ಗ್ಲಿಂಪ್ಸ್ ರಿಲೀಸ್: ಜೈ ಹೋ ಅಂದ ಸಮಂತಾ ಅಭಿಮಾನಿಗಳು

     

    View this post on Instagram

     

    A post shared by SRINI (@lordmgsrinivas)

    ಚಿತ್ರದ ವಿಶೇಷ ಅಂದ್ರೆ, `ಬಾಹುಬಲಿ’ ಚಿತ್ರದ ಬರಹಗಾರ ವಿಜೇಂದ್ರ ಪ್ರಸಾದ್ ಜತೆ ಕೆಲಸ ಮಾಡಿದ್ದ ಪ್ರಶಾಂತ್ ಸಾಗರ್ ಆನ್ ಏರ್ ಚಿತ್ರವನ್ನ ನಿರ್ದೇಶಿಸಿದ್ದಾರೆ. ಚಿತ್ರತಂಡದ ಯೋಜನೆಗೆ ರಘುವೀರ್ ಗೋರಿಪತಿ ಮತ್ತು ಸೃಜನ್ ಯರಬೋಲು ಸಾಥ್ ನೀಡಿದ್ದಾರೆ.