Tag: shrinagara kitty

  • ರಾತ್ರಿ ಮಾವನನ್ನು ಭೇಟಿಯಾದ ಶ್ರೀನಗರ ಕಿಟ್ಟಿ- ಸುನಿಲ್ ಹೆಗ್ಗರವಳ್ಳಿ ಮಾತಿಗೆ ಬೇಸರ

    ರಾತ್ರಿ ಮಾವನನ್ನು ಭೇಟಿಯಾದ ಶ್ರೀನಗರ ಕಿಟ್ಟಿ- ಸುನಿಲ್ ಹೆಗ್ಗರವಳ್ಳಿ ಮಾತಿಗೆ ಬೇಸರ

    ಬೆಂಗಳೂರು: ಸಿಸಿಬಿ ಕಚೇರಿಯಲ್ಲಿದ್ದ ತಮ್ಮ ಮಾವನನ್ನು ನಟ ಶ್ರೀನಗರ ಕಿಟ್ಟಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಬಳಿಕ ಮಾತನಾಡಿದ ಕಿಟ್ಟಿ, ಸುನಿಲ್ ಹೆಗ್ಗರವಳ್ಳಿ ಬಗ್ಗೆ ಮಾತನಾಡೋಕೂ ಇಷ್ಟವಿಲ್ಲ. ಅವನನ್ನು ನಾನು ನಿನ್ನೆ ಮೊನ್ನೆಯಿಂದ ನೋಡ್ತಿಲ್ಲ. ಅವನನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನಗೆ ಕೆಲಸ ಕಲಿಸಿಕೊಟ್ಟವರು ರವಿ ಬೆಳಗೆರೆ ಅಂತ ಅವನೇ ಹೇಳಿಕೊಂಡಿದ್ದಾನೆ. ಅದರಲ್ಲೂ ಯಾರನ್ನೂ ಏಕವಚನದಲ್ಲಿ ಮಾತನಾಡೋದು ಸರಿಯಲ್ಲ. ಆದ್ರೆ ಮೊನೆನ ಅವನು ಆಡಿದ ಮಾತುಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಅಂದ್ರು.

    ತಪ್ಪು ಮಾಡದಿದ್ದಾಗ ಹೊರಗಿನವರು ಆಡೋ ಮಾತುಗಳು ಮನಸ್ಸಿಗೆ ನೋವುಂಟು ಮಾಡುತ್ತೆ. ರವಿ ಬೆಳಗೆರೆಗೆ ಬಿಪಿ ಹೆಚ್ಚಾಗಿದ್ದು ಸುಧಾರಿಸಿಕೊಳ್ತಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗೇ ಆಗುತ್ತೆ ಅಂತ ಅವರು ಹೇಳಿದ್ದರು.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗೆರೆ ಬಂಧನವಾಗಿ ವಿಚಾರಣೆ ನಡೆಯುತ್ತಿತ್ತು. ಅಂತೆಯೇ ಭಾನುವಾರ ರಾತ್ರಿ ಸುಮಾರು 9.40ರ ವೇಳೆಗೆ ಮಧು ಎಂಬಾತ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ.

    ಸುನೀಲ್ ರಿಸೀವ್ ಮಾಡಿದಾಗ ಕರೆ ಮಾಡಿದ್ದ ಮಧು ಎಂಬಾತ ರವಿ ಬೆಳೆಗೆರೆಯವರಿಗೆ ಫೋನ್ ಕೊಟ್ಟಿದ್ದಾನೆ. ಈ ವೇಳೆ ಸುನೀಲ್ ಜೊತೆ ಮಾತನಾಡಿದ ರವಿ ಬೆಳಗೆರೆ, ಯಶೋಮತಿ ಜೊತೆ ಸಂಬಂಧ ಇದೆ ಅಂತಾ ಮಾಧ್ಯಮಗಳ ಮುಂದೆ ಹೇಳಿದ್ದೀಯಾ? ಅಂತಾ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸುನೀಲ್, ನನಗೆ ಯಶೋಮತಿ ಜೊತೆ ಸಂಬಂಧವಿಲ್ಲ. ಹೀಗಿದ್ದಾಗ ನಾನ್ ಯಾಕೆ ಹಾಗೆ ಹೇಳಲಿ? ಅಂತಾ ಪ್ರಶ್ನಿಸಿದ್ದರು ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

    ನನಗೆ ಏನೇ ಆದರೂ ರವಿ ಬೆಳಗೆರೆ ಅವರೇ ಕಾರಣ. ಸಿಸಿಬಿ ಕಚೇರಿಯಿಂದ ಕರೆ ಮಾಡುವ ಮೂಲಕ ತಾನು ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಯಶೋಮತಿ ನನ್ನ ಗೆಳತಿಯಷ್ಟೇ. ಎಲ್ಲರೂ ರವಿ ಬೆಳಗೆರೆಯಂತೆ ಇರಲು ಆಗುತ್ತಾ? ಅವರಿಗಾದರೂ ಹತ್ತಾರು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ ಅಂತಾ ಸುನಿಲ್ ಕೂಡ ಪ್ರತಿಕ್ರಿಯಿಸಿದ್ದರು.

    https://www.youtube.com/watch?v=4amfU_N3xCI

    https://www.youtube.com/watch?v=kbcTIaQVj5Q

    https://www.youtube.com/watch?v=ED0FdtDgq5U