Tag: shrinagar

  • ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

    ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಯುವ ಎನ್‍ಕೌಂಟರ್ ನಡೆಸಿದ್ದು, ಮೂವರು ಭಯೋತ್ಪಾದಕರು ಮೃತಪಟ್ಟಿದ್ದಾರೆ.

    ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನೂ ಅನೇಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಹತ್ಯೆಗೀಡಾದ ಮೂವರು ಭಯೋತ್ಪಾದಕರು ಸ್ಥಳೀಯರಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್‍ಇಟಿ ಜೊತೆ ನಂಟು ಹೊಂದಿದ್ದರು. ಅವರಲ್ಲಿ ಓರ್ವನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದೆ. ಮೇ 13 ರಂದು ನಮ್ಮ ಸಹೋದ್ಯೋಗಿ ಹುತಾತ್ಮ ರೆಯಾಜ್ ಅಹ್ಮದ್ ಹತ್ಯೆಯಲ್ಲಿ  ಭಾಗಿಯಾಗಿದ್ದಾನೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹೇಳಿದ್ದಾರೆ.

    ಇದಕ್ಕೂ ಮುನ್ನ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎನ್‍ಕೌಂಟರ್ ನಡೆಸಿ ಓರ್ವ ಭಯೋತ್ಪಾದಕನನ್ನು ಕೊಂದಿದ್ದರು. ಶನಿವಾರ ಸಂಜೆಯಿಂದಲೇ ಎನ್‍ಕೌಂಟರ್ ನಡೆಸಲು ಆರಂಭಿಸಲಾಗಿತ್ತು ಎಂದು ಕಾಶ್ಮೀರ್ ವಲಯ ಪೊಲೀಸರು ಟ್ವೀಟ್‍ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

  • ಕಾಶ್ಮೀರಿ ಪಂಡಿತರ ನಿರ್ಗಮನಕ್ಕೆ ಫಾರೂಕ್ ಅಬ್ದುಲ್ಲಾ ಕಾರಣನಲ್ಲ: ಸುಬ್ರಮಣಿಯನ್ ಸ್ವಾಮಿ

    ಕಾಶ್ಮೀರಿ ಪಂಡಿತರ ನಿರ್ಗಮನಕ್ಕೆ ಫಾರೂಕ್ ಅಬ್ದುಲ್ಲಾ ಕಾರಣನಲ್ಲ: ಸುಬ್ರಮಣಿಯನ್ ಸ್ವಾಮಿ

    ಶ್ರೀನಗರ: ಕಾಶ್ಮೀರಿ ಪಂಡಿತರ ನಿರ್ಗಮನದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರ ಪಾತ್ರವಿಲ್ಲ. ಇದಕ್ಕೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಮತ್ತು ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಕಾರಣ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಮತ್ತು ಪಂಡಿತರು ಸಮಾನರು ಮತ್ತು ಅವರಲ್ಲಿ ಒಂದೇ ರಕ್ತವಿದೆ. ನೀವು ಎರಡರ ಡಿಎನ್‍ಎ ಪರೀಕ್ಷೆಯನ್ನು ಮಾಡಿದರೆ, ಫಲಿತಾಂಶಗಳು ಒಂದೇ ಆಗಿರುತ್ತವೆ. ಪಂಡಿತರಿಗೆ ಅನ್ಯಾಯವಾಗಿದೆ. ವಿ.ಪಿ. ಸಿಂಗ್ ಮತ್ತು ಮುಫ್ತಿ ಮುಹಮ್ಮದ್ ಸಯೀದ್ ಅವರು ಪಂಡಿತ್ ನಿರ್ಗಮನಕ್ಕೆ ಕಾರಣರಾಗಿದ್ದಾರೆ ಎಂದ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿಲ್ಲ ಎಂದು ಹೇಳಿದರು.

    ಚಂದ್ರಶೇಖರ್ ಸರ್ಕಾರದಲ್ಲಿ ಮಂತ್ರಿಯಾದಾಗ, ಆಗಿನ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಸೈಫುದ್ದೀನ್ ಸೋಜ್ ಅವರ ಮಗಳನ್ನು ಜೆಕೆಎಲ್‍ಎಫ್ ಕಿಡ್ನಾಪ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಫ್ತಿ ಮತ್ತು ವಿಪಿ ಸಿಂಗ್ ಸೇರಿದಂತೆ 13 ಜನರನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಕೊನೆಗೆ ಆಟೋದಲ್ಲಿ ಅವರ ಮಗಳನ್ನು ಕಳುಹಿಸಿದ್ದರು. ಆದರೆ ಘಟನೆಗೆ ಕಾರಣರಾದವರ ಬಗ್ಗೆ ಈವರೆಗೂ ತನಿಖೆಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಜನರು ತಮ್ಮ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳು ನಡೆದ ನಂತರ ನೀವು ಉತ್ತಮ ಪ್ರತಿನಿಧಿಗಳನ್ನು ಪಡೆಯುತ್ತೀರಿ ಎಂದು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

  • ಹಿಮಪಾತದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

    ಹಿಮಪಾತದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತವಾಗಿದ್ದು, ಅದರಲ್ಲಿ ಸಿಲುಕಿಕೊಂಡಿದ್ದ ಮಗು ಸೇರಿ 30 ಮಂದಿಯನ್ನು ಸತತ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ ಯೋಧರು ರಕ್ಷಿಸಿದ್ದಾರೆ.

    ಘಟನೆಯು ತಂಗಧಾರ್-ಚೌಕಿಬಾಲ್ ಆಕ್ಸಿಸ್ ಬಳಿ ನಡೆದಿದೆ. ಖೂನಿ ನಾಲಾ ಮತ್ತು ಎಸ್‍ಎಂ ಹಿಮಪರ್ವತದ ಹತ್ತಿರವಿರುವ ಎನ್‍ಎಚ್ 701 ರಸ್ತೆಯಲ್ಲಿ ವಾಹನವು ಚಲಿಸುತ್ತಿದ್ದ ಸಂದರ್ಭದಲ್ಲಿ ಹಿಮಪಾತವಾಗಿ ನಾಗರಿಕರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಈ ವೇಳೆ ತಕ್ಷಣ ಭಾರತೀಯ ಸೇನೆಯ ಹಿಮಪಾತ ರಕ್ಷಣಾ ತಂಡಗಳಾದ 2 ರಕ್ಷಣಾ ತಂಡಗಳು ಮತ್ತು (ಜಿಆರ್‍ಇಎಫ್) ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್  ಸತತ  6 ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ವಾಹನದಲ್ಲಿದ್ದ ಜನರನ್ನು ರಕ್ಷಸಿದ್ದೇವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

    ಭಾರತೀಯ ಯೋಧರು ಹಿಮಪಾತದಲ್ಲಿ ಸಿಲುಕಿರುವ 30 ಮಂದಿಯನ್ನು ರಕ್ಷಿಸಿ 14 ಜನರನ್ನು ನಿಲಂಗೆ ಮತ್ತು ಇನ್ನೂ 16 ಜನರನ್ನು ನಗರದ ಎಸ್‍ಸಿ ಪಾಸ್‍ಗೆ ಸ್ಥಳಾಂತರಿಸಲಾಗಿದೆ. ರಕ್ಷಿಸಲ್ಪಟ್ಟ ನಾಗರಿಕರಿಗೆ ರಾತ್ರಿ ಆಹಾರ, ವೈದ್ಯಕೀಯ ಸೌಲಭ್ಯಗಳನ್ನು ಸಹ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ

    ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ 16 ಜನರ ಮತ್ತೊಂದು ಗುಂಪು ಸಿಲುಕಿಕೊಂಡಿದ್ದು, ಅವರನ್ನೂ ಸಹ ರಕ್ಷಿಸುವ ಭರವಸೆ ನೀಡಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ – ಉಗ್ರ ನಾಯಕರ ಪೋಸ್ಟರ್ ಹಿಡಿದ ಕಿಡಿಗೇಡಿಗಳು

    ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ – ಉಗ್ರ ನಾಯಕರ ಪೋಸ್ಟರ್ ಹಿಡಿದ ಕಿಡಿಗೇಡಿಗಳು

    ಶ್ರೀನಗರ: ರಂಜಾನ್ ಹಬ್ಬದಂದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದ್ದು, ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

    ಭದ್ರತಾ ಪಡೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕೆಲ ಭಧ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಜೈಷ್-ಇ- ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಉಗ್ರ ಮಸೂದ್ ಅಜಾದ್ ಹಾಗೂ ಅಲ್-ಖೈದಾ ಉಗ್ರ ಸಂಘಟನೆಯ ಕಾಶ್ಮೀರ ವಿಭಾಗದ ಮುಖ್ಯಸ್ಥ ಉಗ್ರ ಝಾಕಿರ್ ಮೂಸನ ಪೋಸ್ಟರ್ ಮತ್ತು `ಮೂಸ ಆರ್ಮಿ’ ಎಂದು ಬರೆದ ಪೋಸ್ಟರ್ ಹಿಡಿದು ದುಷ್ಟತನ ಮೆರೆದಿದ್ದಾರೆ. ಹೀಗಾಗಿ ಭದ್ರತಾ ಪಡೆ ಹಾಗೂ ದುಷ್ಕರ್ಮಿಗಳ ನಡುವೆ ಘರ್ಷಣೆ ನಡೆದಿದೆ. ಇದನ್ನೂ ಓದಿ:ರಂಜಾನ್ ಹಬ್ಬದಂದು ಉಗ್ರರಿಂದ ಗುಂಡಿಕ್ಕಿ ಮಹಿಳೆಯ ಹತ್ಯೆ

    ನಡೆದಿದ್ದು ಏನು?
    ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಸೀದಿಯಿಂದ ಹೊರಬಂದ ಕೆಲ ಯುವಕರ ಗುಂಪು ಏಕಾಏಕಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಟಿಯರ್ ಗ್ಯಾಸ್ ಅನ್ನು ಬಳಿಸಿ ಸಿಬ್ಬಂದಿ ಯುವಕರನ್ನು ಓಡಿಸಿದ್ದಾರೆ.

    ಹಾಗೆಯೇ ಉತ್ತರ ಕಾಶ್ಮೀರದಲ್ಲೂ ಕೂಡ ಇದೇ ರೀತಿ ಹಿಂಸಾಚಾರ ನಡೆದಿದೆ. ಬರಮುಲ್ಲಾ ಜಿಲ್ಲೆಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವ ವೇಳೆ ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಯುವಕರ ಗುಂಪಿನ ನಡುವೆ ಗಲಾಟೆ ನಡೆದಿದೆ.

  • ಉತ್ತರ ಪ್ರದೇಶದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಪಾಕ್ ಜೈಲಿನಲ್ಲಿ ಪತ್ತೆ!

    ಉತ್ತರ ಪ್ರದೇಶದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಪಾಕ್ ಜೈಲಿನಲ್ಲಿ ಪತ್ತೆ!

    ಶ್ರೀನಗರ: ಕಳೆದ 5 ತಿಂಗಳ ಹಿಂದೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾಣೆಯಾಗಿದ್ದ ಕಾಶ್ಮೀರ ಮೂಲದ ಯುವಕ ಪಾಕಿಸ್ತಾನದ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಉತ್ತರಪ್ರದೇಶದ ನೋಯ್ಡಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸೈಯದ್ ವಾಹಿದ್(23) ಡಿ. 12ರಂದು ವಿವಿಯಿಂದಲೇ ಕಾಣೆಯಾಗಿದ್ದನು. ಆದರೆ ಕಾಣೆಯಾಗಿದ್ದ ವಿದ್ಯಾರ್ಥಿ ಎಲ್ಲಿದ್ದಾನೆ? ಕಾಣೆಯಾಗಲು ಕಾರಣವೇನು? ಎಂದು ಯಾರಿಗೂ ಗೊತ್ತಿರಲಿಲ್ಲ. ಹಾಗೆಯೇ ಇತ್ತ ಮಗನನ್ನು ಕಾಣದೆ ಹೆತ್ತವರು ಕಂಗಾಲಾಗಿದ್ದರು. ಇದೀಗ ವಿದ್ಯಾರ್ಥಿ ಪಾಕಿಸ್ತಾನದ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ದೊರಕಿದೆ ಎಂದು ಸ್ವತಃ ಪೋಷಕರೇ ಸೋಮವಾರದಂದು ಪೊಲೀಸರಿಗೆ ತಿಳಿಸಿದ್ದಾರೆ.

    ವಿದ್ಯಾರ್ಥಿಯ ಪೋಷಕರಿಗೆ ಪಾಕಿಸ್ತಾನದಿಂದ ಫೋನ್ ಕರೆಯೊಂದು ಬಂದಿದ್ದು, ಅವರ ಮಗ ಪಾಕ್ ಜೈಲಿನಲ್ಲಿದ್ದಾನೆ ಎಂದು ಮಾಹಿತಿ ನೀಡಲಾಗಿದೆ. ಈಗಾಗಲೇ ವಿದ್ಯಾರ್ಥಿ ಕಣ್ಮರೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಈಗ ವಿದ್ಯಾರ್ಥಿ ಪಾಕ್ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ದೊರಕಿರುವ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ.

    ಎಫ್ 16 ವಿಮಾನವನ್ನು ಹೊಡೆದು ಹಾಕಿ ಪಾಕ್ ಕಸ್ಟಡಿಯಲ್ಲಿದ್ದ ಅಭಿನಂದನ್ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ವಾಯು ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಸಹೋದ್ಯೋಗಿಗಳು ಅಭಿನಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

    ಈ ವೇಳೆ ಅಭಿನಂದನ್, ನನ್ನ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ನನ್ನ ಧನ್ಯವಾದ, ನಾನು ನಿಮ್ಮ ಕುಟುಂಬಕ್ಕಾಗಿ ಪೋಸ್ ಕೊಡುತ್ತಿದ್ದೇನೆ ಎಂದು ಪ್ರೀತಿಯಿಂದ ಹೇಳಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಅಭಿನಂದನ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈಗ ವಿಡಿಯೋ ವೈರಲ್ ಆಗಿದೆ.

    ಅಭಿನಂದನ್ ವರ್ಧಮಾನ್ ಅವರು ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಅವರಿಗೆ ಜೈಶ್ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದಿಂದ ಈಗ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

    ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು. ಡಿ ಬ್ರೀಫಿಂಗ್ ಆದ ಬಳಿಕ ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದರು. ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

    ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

  • ಕಾಶ್ಮೀರದಲ್ಲಿ ಕಾರ್ ಬ್ಲಾಸ್ಟ್ ಕೇಸ್ – ಪಿಎಚ್‍ಡಿ ಪದವೀಧರ ಸೇರಿ 6 ಉಗ್ರರ ಬಂಧನ!

    ಕಾಶ್ಮೀರದಲ್ಲಿ ಕಾರ್ ಬ್ಲಾಸ್ಟ್ ಕೇಸ್ – ಪಿಎಚ್‍ಡಿ ಪದವೀಧರ ಸೇರಿ 6 ಉಗ್ರರ ಬಂಧನ!

    ಶ್ರೀನಗರ: ಕಳೆದ ಮಾರ್ಚ್ 31 ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ನಡೆದ ಕಾರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಹಾಗೂ ಹಿಜ್‍ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ 6 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

    ಕಳೆದ ಫೆ.14ರಂದು ಪುಲ್ವಾಮದಲ್ಲಿ 30 ಸಿಆರ್​ಪಿಎಫ್​​  ಯೋಧರು ಹುತಾತ್ಮರಾದ ನೋವು ಮಾಸುವ ಮುನ್ನವೇ ಪುಲ್ವಾಮ ದಾಳಿ ರೀತಿಯಲ್ಲೇ ಬನಿಹಾಲ್ ಬಳಿ ಭಾರತೀಯ ಯೋಧರ ಕಾಂವಾಯ್ ಸಾಗುತ್ತಿದ್ದ ದಾರಿಯಲ್ಲಿ ಕಾರು ಬ್ಲಾಸ್ಟ್ ಆಗಿತ್ತು. ಈ ಬಗ್ಗೆ ತನಿಖೆ ಕೈಕೊಂಡಿದ್ದ ಪೊಲೀಸರು ಕೊನೆಗೂ ಪ್ರಕರಣದಲ್ಲಿ ಶಾಮಿಲಾಗಿದ್ದ 6 ಮಂದಿ ಉಗ್ರರನ್ನು ಬಂಧಿಸಿದ್ದಾರೆ. ಈ ಉಗ್ರರಲ್ಲಿ ಓರ್ವ ಪಿಎಚ್‍ಡಿ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ.

    ಪಾಕ್ ಉಗ್ರ ಮುನ್ನಾ ಬಿಹಾರಿ ನೇತೃತ್ವದಲ್ಲಿ ಜೈಷ್-ಇ-ಮೊಹಮ್ಮದ್ ಹಾಗೂ ಹಿಜ್‍ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಉಗ್ರರು ಈ ದಾಳಿ ನಡೆಸಿದ್ದರು. ಆದ್ರೆ ಪುಲ್ವಾಮಾ ದಾಳಿ ಯಶಸ್ವಿಯಾದಂತೆ ಈ ಕಾರ್ ಸ್ಫೋಟದ ದಾಳಿ ಯಶಸ್ವಿಯಾಗಿರಲಿಲ್ಲ. ಈ ದಾಳಿಯಲ್ಲಿ ಶಾಮೀಲಾಗಿದ್ದ ಪಿಎಚ್‍ಡಿ ಪದವೀಧರನನ್ನು ಹಿಲಾಲ್ ಅಹ್ಮದ್ ಮಾಂತೋ ಎಂದು ಗುರುತಿಸಲಾಗಿದ್ದು, ಈತನನ್ನು ಪಂಜಾಬ್‍ನ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂಶೋಧನೆ ಮಾಡುತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

    ಯುವಕರಿಗೆ ಧರ್ಮದ ಬಗ್ಗೆ ಪ್ರಚೋದನಕಾರಿ ಮಾತುಗಳ ಮೂಲಕ ಸೆಳೆದು, ಅವರನ್ನು ಜಮತ್-ಉಲ್-ತಲ್ಬಾದಲ್ಲಿ ಸೇರಿಸಿಕೊಂಡು ಉಗ್ರ ತರಬೇತಿಯನ್ನು ನೀಡಲಾಗುತ್ತದೆ. ಯುವಕರ ಮನ ಪರಿವರ್ತಿಸಿ ಅವರನ್ನು ಭಯೋತ್ಪಾದನೆ ಮಾಡುವಂತೆ ಎತ್ತಿಕಟ್ಟುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

    ವಶೀಮ್ ಅಲಿಯಾಸ್ ಡಾಕ್ಟರ್, ಉಮರ್ ಶಫಿ, ಶೋಫಿಯಾನ್ ನಿವಾಸಿ ಅಕಿಬ್ ಷಾ, ಶಾಹಿದ್ ವಾನಿ ಅಥವಾ ವ್ಯಾಟ್ಸನ್ ಮತ್ತು ಒವಾಯಿಸ್ ಅಮೀನ್ ಎಂಬ 5 ಮಂದಿ ಉಗ್ರರ ಜೊತೆಗೆ ಹಿಲಾಲ್ ಅಹ್ಮದ್ ಮಾಂತೋನನ್ನು ಪೊಲೀಸರು ಬಂಧಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ.

    ಓವೈಸ್ ಅಮಿನ್ ಒಬ್ಬ ಬಿಬಿಎ ವಿದ್ಯಾರ್ಥಿಯಾಗಿದ್ದು, ಹುಂಡೈ ಸ್ಯಾಂಟ್ರೋ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. ಆತನನ್ನು ಏಪ್ರಿಲ್ 1 ರಂದು ಬನಿಹಾಲಿಯಲ್ಲಿ ಬಂಧಿಸಲಾಯಿತು. ಚಾಲಕ ಮತ್ತು ಉಮರ್ ಶಫಿ, ಅಕಿಬ್ ಷಾ ರೇಯ್ಸ್ ಖಾನ್ನ ಅವರ ಬಳಿ ಕೆಲಸ ಮಾಡುತ್ತಿದ್ದರು. ಬಳಿಕ 2018ರಲ್ಲಿ ಹಿಜ್‍ಬುಲ್ ಸೇರಿ ಅವರೆಲ್ಲ ಭಯೋತ್ಪಾದಕರಾಗಿದ್ದರು. ಅಲ್ಲದೆ ಉಮರ್ ಶಫಿ ಶ್ರೀನಗರದಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ.

    ಕಾರ್ ಗೆ ಎರಡು ಎಲ್‍ಪಿಜಿ ಸಿಲಿಂಡರ್ ಗಳನ್ನು ಅಳವಡಿಕೆ ಮಾಡಲಾಗಿತ್ತು, ಅಲ್ಲದೆ ಪೆಟ್ರೋಲ್, ಜೆರ್ರಿ ಕ್ಯಾನ್, ಜಿಲೆಟಿನ್ ಕಡ್ಡಿ, ಯುರಿಯಾ ಮತ್ತು ಗಂಧಕವನ್ನು ಕೂಡಾ ಬಳಸಲಾಗಿತ್ತು. ಕಾರ್ ಮಾಲೀಕ ಹಾಗೂ ದಾಳಿಯ ರೂವಾರಿ ಇನ್ನೂ ಪತ್ತೆಯಾಗಿಲ್ಲ. ಅಲ್ಲದೇ ಜಿಲೆಟಿನ್ ಕಡ್ಡಿಯ ಮೂಲ ಕೂಡ ಬಹಿರಂಗಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  • 2005ರಿಂದ ನಾಪತ್ತೆಯಾಗಿದ್ದ ಉಗ್ರ ಕೊನೆಗೂ ಪೊಲೀಸರ ಬಲೆಗೆ ಬಿದ್ದ

    2005ರಿಂದ ನಾಪತ್ತೆಯಾಗಿದ್ದ ಉಗ್ರ ಕೊನೆಗೂ ಪೊಲೀಸರ ಬಲೆಗೆ ಬಿದ್ದ

    ನವದೆಹಲಿ: 2005ರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದ ಜೈಷ್-ಈ-ಮೊಹಮದ್ ಉಗ್ರ ಸಂಘಟನೆಯ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಿದೆ.

    ಫಯಾಜ್ ಅಹ್ಮದ್ ಲೋನ್ ಬಂಧಿತ ಉಗ್ರ. 2005ರಿಂದಲೂ ಈ ಉಗ್ರನಿಗಾಗಿ ದೆಹಲಿ ಪೊಲೀಸರು ಬಲೆ ಬೀಸಿದ್ದರು. ಆದ್ರೆ ಈತ ಮಾತ್ರ ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾಗಿದ್ದ. ಆದರಿಂದ ಈತನನ್ನು ಹುಡುಕಿ ಕೊಟ್ಟವರಿಗೆ ಪೊಲೀಸ್ ಇಲಾಖೆಯಿಂದ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು.

    ಈಗಾಗಲೇ ಫಯಾಜ್ ಅಹ್ಮದ್ ಲೋನ್ ವಿರುದ್ಧ ಜಾಮೀನುರಹಿತ ವಾರೆಂಟ್ ಅನ್ನು ಪೊಲೀಸರು ನೀಡಿದ್ದಾರೆ. ಈ ಹಿಂದೆ ಮಾರ್ಚ್ 21ರಂದು ಪುಲ್ವಾಮಾ ದಾಳಿಯ ಮುಖ್ಯ ಆರೋಪಿ ಮುದಸೀರ್ ಅಹ್ಮದ್ ಖಾನ್ ಜೊತೆ ಕೈಜೊಡಿಸಿದ್ದ ಉಗ್ರ ಸಜ್ಜಿದ್ ಖಾನ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿ ಕೆಂಪು ಕೋಟೆಯ ಪ್ರದೇಶದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಿದ್ದಾರೆ.

  • ಜೈಶ್ ಉಗ್ರರ ಬಳಿ ಪತ್ತೆಯಾಯ್ತು ಪಾಕ್ ಸೇನೆಯ ರೈಫಲ್

    ಜೈಶ್ ಉಗ್ರರ ಬಳಿ ಪತ್ತೆಯಾಯ್ತು ಪಾಕ್ ಸೇನೆಯ ರೈಫಲ್

    -ಭಯೋತ್ಪಾದನೆಗೆ ಪಾಕ್ ಸಹಕಾರ

    ಶ್ರೀನಗರ: ಭಾರತ ಗಡಿಯಲ್ಲಿ ಉಗ್ರರು ನಡೆಸುತ್ತಿರುವ ದಾಳಿಗೆ ಪಾಕ್ ಸೇನೆ ನೆರವನ್ನು ನೀಡುತ್ತಿದೆ ಎಂಬುವುದಕ್ಕೆ ಪುರಾವೆ ದೊರೆತಿದೆ. ಉಗ್ರರು ಸದೆಬಡಿರುವ ಸೇನೆ ಅವರ ಬಳಿಕ ಪಾಕ್ ಸೇನೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

    ಶುಕ್ರವಾರ ಬದ್ಗಾಮ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಭದ್ರತಾಪಡೆ ಜೈಶ್-ಎ- ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಒರ್ವನನ್ನು ಬಂಧಿಸಿದೆ. ಈ ವೇಳೆ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನ ಸೇನೆಯ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್ ಕೂಡಾ ಪತ್ತೆಯಾಗಿದೆ. ಇದರಿಂದ ಪಾಕ್ ಸೈನ್ಯವೇ ನೇರವಾಗಿ ಈ ರೈಫಲ್‍ಗಳನ್ನು ಉಗ್ರರಿಗೆ ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ.

    ಪಾಕ್ ಯೋಧರು ಬಳಸುವ ರೈಫಲ್ ಉಗ್ರರ ಬಳಿ ಪತ್ತೆಯಾಗುತ್ತಿರುವುದು ಇದು 3ನೇ ಬಾರಿಯಾಗಿದ್ದು, ಈ ಹಿಂದೆ 2017ರ ಅಕ್ಟೋಬರ್‍ನಲ್ಲಿ ಮಸೂದ್ ಅಜರ್‍ನ ಅಳಿಯ ತಲ್ಹಾ ರಶೀದ್‍ನ ಎನ್‍ಕೌಂಟರ್ ನಡೆದಾಗ ಇದೇ ಶಸ್ತ್ರ ದೊರಕಿತ್ತು. ಅಲ್ಲದೆ 2018ರ ಅಕ್ಟೋಬರ್ 31ರಂದು ಪುಲ್ವಾಮಾ ಜಿಲ್ಲೆಯ ಟ್ರಾನ್‍ನಲ್ಲಿ ಜೈಷ್‍ಟ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಸ್ಥಳದಲ್ಲೂ ಎಂ4 ರೈಫಲ್ ಪತ್ತೆಯಾಗಿತ್ತು.

    ಏನಿದು ಎಂ4 ರೈಫಲ್?
    ಎಂ4 ಕಾರ್ಬೈನ್ ರೈಫಲ್‍ಗಳು ಅರೆಸ್ವಯಂಚಾಲಿತ ಶಸ್ತ್ರವಾಗಿದ್ದು, ಇದರಿಂದ ಮೂರು ಸುತ್ತು ಗುಂಡು ಹಾರಿಸಬಹುದಾಗಿದೆ. ಅಮೆರಿಕ ಯೋಧರು ಇದನ್ನು ಪ್ರಧಾನವಾಗಿ ಬಳಸುತ್ತಾರೆ. ಹಲವಾರು ಯುದ್ಧಗಳಲ್ಲಿ ಅಮೆರಿಕಾ ಎಂ4 ರೈಫಲ್‍ಗಳನ್ನು ಬಳಸಿದೆ. ಹಾಗೆಯೇ ಈ ಶಸ್ತ್ರಗಳನ್ನು ಪಾಕಿಸ್ತಾನಕ್ಕೂ ಮಾರಾಟ ಮಾಡಿದೆ.

    ಪುಲ್ವಾಮಾ ದಾಳಿ ಬಳಿಕ ಗಡಿಭಾಗದಲ್ಲಿ ಗುಂಡಿನ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಅಲ್ಲದೆ ಈ ದಾಳಿ ಬಳಿಕ ಭಾರತೀಯ ಭದ್ರತಾ ಪಡೆ ಕಣಿವೆಯಲ್ಲಿ ಉಗ್ರರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಈವರೆಗೆ ಸುಮಾರು ಜೈಶ್ ಸಂಘಟನೆಗೆ ಸೇರಿರುವ 30 ಉಗ್ರರನ್ನು ಸದೆಬಡಿಯಲಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಸುಮಾರು 6 ಮಂದಿ ಉಗ್ರರನ್ನು ಭದ್ರತಾಪಡೆ ಹತ್ಯೆಗೈದಿದೆ. ಗುರುವಾರ ಶೋಪಿಯಾನ್ ಬಳಿ ನಡೆಸಿದ ಎನ್‍ಕೌಂಟರ್‍ನಲ್ಲಿ ನಾಲ್ವರು ಉಗ್ರರು ಹಾಗೂ ಶುಕ್ರವಾರದಂದು ಬದ್ಗಾಮ್‍ನಲ್ಲಿ ಇಬ್ಬರು ಜೈಷ್ ಉಗ್ರರು ಹತರಾಗಿದ್ದಾರೆ.

  • ಸಿಆರ್‌ಪಿಎಫ್ ಪೇದೆಯಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ- ಮೂವರು ಸಾವು

    ಸಿಆರ್‌ಪಿಎಫ್ ಪೇದೆಯಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ- ಮೂವರು ಸಾವು

    ಶ್ರೀನಗರ: ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಸಿಆರ್‌ಪಿಎಫ್ ಪೇದೆಯೊಬ್ಬ ಮೂವರು ಸಹೋದ್ಯೋಗಿಗಳಿಗೇ ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರ ಜಿಲ್ಲೆಯ ಸಿಆರ್‌ಪಿಎಫ್ ಕ್ಯಾಂಪ್ ಬಳಿ ನಡೆದಿದೆ.

    ಅಜಿತ್ ಕುಮಾರ್ ಬುಧವಾರ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಉಧಮ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಐಜಿಪಿ ಎಂ.ಕೆ ಸಿನ್ಹ ತಿಳಿಸಿದ್ದಾರೆ. ಇದನ್ನೂ ಓದಿ:ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

    ಕ್ಷುಲ್ಲಕ ಕಾರಣಕ್ಕೆ ನಾಲ್ವರು ಪೇದೆಗಳ ಮಧ್ಯೆ ಮಾತಿನ ಚಕಮಕಿ ಶುರುವಾಗಿತ್ತು. ಬಳಿಕ ಮಾತಿಗೆ ಮಾತು ಬೆಳೆದು ಕೋಪಗೊಂಡ ಅಜಿತ್ ಮೂವರು ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡ ಪೇದೆಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.