Tag: Shrimati

  • 2 ದಶಕಗಳಿಂದ ನಾಪತ್ತೆಯಾಗಿದ್ದ ನಕ್ಸಲ್‌ ಶ್ರೀಮತಿಗೆ ನ್ಯಾಯಾಂಗ ಬಂಧನ

    2 ದಶಕಗಳಿಂದ ನಾಪತ್ತೆಯಾಗಿದ್ದ ನಕ್ಸಲ್‌ ಶ್ರೀಮತಿಗೆ ನ್ಯಾಯಾಂಗ ಬಂಧನ

    ಚಿಕ್ಕಮಗಳೂರು: ಹಲವು ವರ್ಷಗಳಿಂದ ಭೂಗತಳಾಗಿದ್ದ ಜಿಲ್ಲೆಯ ಶೃಂಗೇರಿ ತಾಲೂಕಿನ ನಕ್ಸಲ್ (Naxal) ಶ್ರೀಮತಿಗೆ (Shrimati) ಎನ್.ಆರ್.ಪುರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

    ಕಳೆದ ಎರಡು ದಶಕಗಳಿಂದ ಶ್ರೀಮತಿ 2002ರಿಂದ ನಾಪತ್ತೆಯಾಗಿದ್ದಳು. ಆಕೆ ಮೇಲೆ ಚಿಕ್ಕಮಗಳೂರು (Chikkmagaluru) ಜಿಲ್ಲೆಯೊಂದರಲ್ಲೇ 12ಕ್ಕೂ ಹೆಚ್ಚು ಪ್ರಕರಣಗಳ ದಾಖಲಾಗಿದ್ದವು.

    ಮಲೆನಾಡಲ್ಲಿ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿಯನ್ನ ನಷ್ಟ ಮಾಡಿದ್ದು, ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಆಯುಧಗಳನ್ನ ಶೇಖರಣೆ ಮಾಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆದರಿಸಿ ಹಣ, ಆಹಾರ ಸಾಮಗ್ರಿಗಳನ್ನ ತೆಗೆದುಕೊಂಡು ಹೋಗಿದ್ದು, ಪೊಲೀಸರನ್ನು ಬೆಂಬಲಿಸದಂತೆ ಹಳ್ಳಿಗರನ್ನ ಹೆದರಿಸಿದ ಪ್ರಕರಣ ಸೇರಿ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.  ಇದನ್ನೂ ಓದಿ: ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್‌ – ಸುರಂಗ, ಸ್ಕೈಡೆಕ್‌ ಯೋಜನೆಗೆ ಸಿಕ್ಕಿಲ್ಲ ಸ್ಪಷ್ಪತೆ

    ಕಳೆದ ತಿಂಗಳ ಹಿಂದೆ ಕೇರಳದಲ್ಲಿ ಕಾಡಿನಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸ ಕೂಂಬಿಂಗ್ ಮಾಡುತ್ತಿದ್ದ ವೇಳೆ ಶ್ರೀಮತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಕೇರಳ ಪೊಲೀಸರು ತನಿಖೆ ಬಳಿಕ ಆಕೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರಿಗೆ ನೀಡಿದ್ದರು.

    ವಿಚಾರಣೆ ಬಳಿಕ ಆಕೆಯನ್ನ ಶೃಂಗೇರಿ ಪೊಲೀಸರ ಸುಪರ್ದಿಗೆ ನೀಡಿದ್ದರು. ಶೃಂಗೇರಿ ಪೊಲೀಸರು ಶೃಂಗೇರಿ ನ್ಯಾಯಾಧೀಶರು ಇಲ್ಲದ ಕಾರಣ ಎನ್.ಆರ್.ಪುರ ಕೋರ್ಟಿಗೆ ಹಾಜರುಪಡಿಸಿದ್ದರು. ಇದನ್ನೂ ಓದಿ: ಕಾಂತಾರ-2ನಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಉಗ್ರ ಹೋರಾಟ – ರಿಷಬ್ ಶೆಟ್ಟಿಗೆ ವಿಹೆಚ್‌ಪಿ, ಬಜರಂಗ ದಳ ಎಚ್ಚರಿಕೆ

    ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಇಂದು ಆಕೆ ಮೇಲಿರುವ ಪ್ರಕರಣಗಳ ಸಂಬಂಧ ಸ್ಥಳ ಮಹಜರ್ ಗೆ ಕರೆದೊಯ್ದಿದ್ದಾರೆ. ತನಿಖೆ ಬಳಿ ಆಕೆಯನ್ನ ಕೇರಳ ಪೊಲೀಸರಿಗೆ ಹಿಂದಿರುಗಿಸಲಿದ್ದಾರೆ.