Tag: shrilanka

  • 20 ವರ್ಷದ ಹಿಂದಿನ ದಾಖಲೆ ಮುರಿದ ಶ್ರೀಲಂಕಾ, ಇಂಗ್ಲೆಂಡ್ ಸ್ಪಿನ್ನರ್‌ಗಳು!

    20 ವರ್ಷದ ಹಿಂದಿನ ದಾಖಲೆ ಮುರಿದ ಶ್ರೀಲಂಕಾ, ಇಂಗ್ಲೆಂಡ್ ಸ್ಪಿನ್ನರ್‌ಗಳು!

    ಕೊಲಂಬೋ: ಶ್ರೀಲಂಕಾ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು 20 ವರ್ಷದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

    ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳ ಸ್ಪಿನ್ನರ್ ಗಳು ಒಟ್ಟು 82 ವಿಕೆಟ್ ಗಳನ್ನು ಪಡೆಯುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಈ ಹಿಂದೆ 1998ರಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ ಪಂದ್ಯದಲ್ಲಿ ಸ್ಪಿನ್ನರ್‌ಗಳು 79 ವಿಕೆಟ್ ಗಳನ್ನು ಪಡೆದಿದ್ದರು.ಈ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯವನ್ನು 211 ರನ್ ಗಳಿಂದ ಗೆದ್ದುಕೊಂಡರೆ, ಎರಡನೇ ಪಂದ್ಯವನ್ನು 57 ರನ್ ಗಳಿಂದ ಗೆದ್ದುಕೊಂಡಿತ್ತು.

    ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 336 ರನ್ ಗಳಿಸಿದ್ದರೆ ಶ್ರೀಲಂಕಾ 240 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿರುವ ಇಂಗ್ಲೆಂಡ್ ಇತ್ತೀಚಿನ ವರದಿ ಬಂದಾಗ 199 ರನ್ ಗಳೊಂದಿಗೆ ಇಂಗ್ಲೆಂಡ್ ಮುನ್ನಡೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಉಡುಪಿ: ಇಲ್ಲಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ತನ್ನ ಪತ್ನಿಯ ಬಹು ವರ್ಷದ ಹರಕೆ ತೀರಿಸಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಜೊತೆ ಆಗಮಿಸಿದರು. ಎರಡು ತಿಂಗಳಿಂದ ಕೊಲ್ಲೂರಿಗೆ ಬರಲು ಪ್ರಯತ್ನಿಸುತ್ತಿದ್ದ ಲಂಕಾ ಪ್ರಧಾನಿಗೆ ಇಂದು ಮೂಕಾಂಬಿಕೆಯ ಸನ್ನಿಧಿಗೆ ಬರಲು ಕಾಲ ಕೂಡಿ ಬಂದಿದೆ.

    ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶೀರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಆಗಮಿಸಿದ ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು.

    ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ – ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು.

    ಪ್ರಧಾನಿ ಪತ್ನಿ ಡಾ. ಮೈತ್ರಿ ಕೇರಳ ಮೂಲದವರು. ಕೊಲ್ಲೂರಿನಲ್ಲಿ ಡಾ. ಮೈತ್ರಿಯ ಹಿಂದಿನ ಹರಕೆ ತೀರಿಸಲು ಬಾಕಿಯಿತ್ತು. ಹೀಗಾಗಿ ಆಗಸ್ಟ್ 26 ಮತ್ತು 27ರಂದು ಕೊಲ್ಲೂರಿಗೆ ಬರಲು ಯತ್ನಿಸಿದ್ದರು. ಆದ್ರೆ ಸಿಕ್ಕಾಪಟ್ಟೆ ಮಳೆ ಮತ್ತು ಮೋಡ ಕವಿದ ಕಾರಣ ಕೊಲ್ಲೂರು ಭೇಟಿ ರದ್ಧಾಗಿತ್ತು. ಇದೀಗ ಕೊಲ್ಲೂರು ಬಂದು ದೇವಿ ದರ್ಶನ ಮಾಡಿ ಹರಕೆ ತೀರಿಸುವ ಬಯಕೆ ಪೂರ್ಣಗೊಂಡಿದೆ.

  • ಟೀಂ ಇಂಡಿಯಾದ ಯುವ ಕ್ರಿಕೆಟಿಗ ಶ್ರೀಲಂಕಾದಲ್ಲಿ ದುರ್ಮರಣ!

    ಟೀಂ ಇಂಡಿಯಾದ ಯುವ ಕ್ರಿಕೆಟಿಗ ಶ್ರೀಲಂಕಾದಲ್ಲಿ ದುರ್ಮರಣ!

    ನವದೆಹಲಿ: 12 ವರ್ಷದ ಭಾರತೀಯ ಯುವ ಕ್ರಿಕೆಟಿಗನೊಬ್ಬ ಶ್ರೀಲಂಕಾದ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮೃತ ಆಟಗಾರನನ್ನು ಮೋನಾತ್ ಸೋನಾ ನರೇಂದ್ರ ಎಂಬುವುದಾಗಿ ಗುರುತಿಸಲಾಗಿದೆ. ಇವರು ಗುಜರಾತ್ ನ ಸೂರತ್ ಮೂಲದವರರು ಎಂಬುವುದಾಗಿ ವರದಿಯಾಗಿದೆ. 17 ವರ್ಷದ ಒಳಗಿನ ಟೂರ್ನಿಯಲ್ಲಿ ಭಾಗವಹಿಸಲೆಂದು ಇವರು ಬಂದಿದ್ದರು ಅಂತ ಶ್ರೀಲಂಕಾ ಮಾಧ್ಯಮ ವರದಿ ಮಾಡಿದೆ.

    ನಾಲ್ವರು ಸದಸ್ಯರೊಂದಿಗೆ ಬಂದಿದ್ದ ಮೃತ ಆಟಗಾರ, ಮಂಗಳವಾರ ಸಂಜೆ ಪಮುನುಗಾಮಾ ಈಜುಕೊಳಕ್ಕೆ ಇಳಿದಿದ್ದ ವೇಳೆ ಈ ದುರಂತ ಸಂಭವಿಸಿದೆ. ನೀರಿನಲ್ಲಿ ಮುಳುಗಿದ ಕೂಡಲೇ ಸ್ನೇಹಿತರು ಅವರನ್ನು ಈಜುಕೊಳದಿಂದ ಹೊರತೆಗೆದು ಪಮುನುಗಾಮಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

    ಸದ್ಯ ಅವರ ಮೃತದೇಹವನ್ನು ರಾಗಮ ಟೀಚಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂಬುವುದಾಗಿ ವರದಿಯಾಗಿದೆ.

  • ಮೊನ್ನೆ ಮದುವೆ, ನಿನ್ನೆ ಟೀಂ ಇಂಡಿಯಾ ಬೆಚ್ಚಿ ಬೀಳಿಸಿದ ಸ್ಪಿನ್ನರ್!

    ಮೊನ್ನೆ ಮದುವೆ, ನಿನ್ನೆ ಟೀಂ ಇಂಡಿಯಾ ಬೆಚ್ಚಿ ಬೀಳಿಸಿದ ಸ್ಪಿನ್ನರ್!

    – ಮದುವೆಯಾದ 24 ಗಂಟೆಯಲ್ಲೇ ತಂಡಕ್ಕೆ ವಾಪಾಸಾದ ಧನಂಜಯ
    – ಟೀಂ ಇಂಡಿಯಾದ 6 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್

    ಬೆಂಗಳೂರು: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಒಂದು ಹಂತದಲ್ಲಿ ಟೀಂ ಇಂಡಿಯಾವನ್ನು ಸೋಲಿನ ದವಡೆಯಲ್ಲಿತ್ತು. ಆದರೆ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹಾಗೂ ಭುವನೇಶ್ವರ್ ಕುಮಾರ್ ಉತ್ತಮ ಆಟವಾಡಿ ಭಾರತವನ್ನು ಗೆಲ್ಲಿಸಿದರು.

    ಆದರೆ ಭಾರತದ 6 ವಿಕೆಟ್ ಕಿತ್ತ ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ. ಮದುವೆಯಾಗಿ ಕೇವಲ 24 ಗಂಟೆ ಮುಗಿಯುವಷ್ಟರಲ್ಲಿ ತಂಡವನ್ನು ಸೇರಿ ಭಾರತವನ್ನು ಬೆಚ್ಚಿ ಬೀಳಿಸಿದ್ದು ಮಾತ್ರ ಸುಳ್ಳಲ್ಲ. ಕೊಲಂಬೋದ ರಾಮಾದಿಯಾ ರನಮಲ್ ಹಾಲಿಡೇ ರೆಸಾರ್ಟ್ ನಲ್ಲಿ ಆಗಸ್ಟ್ 23ರಂದು 23 ವರ್ಷದ ಅಕಿಲ ಧನಂಜಯ್ ವಿವಾಹ ಗರ್ಲ್ ಫ್ರೆಂಡ್ ನತಾಲಿ ತೆಕ್ಶಿನಿ ಜೊತೆ ನೆರವೇರಿತ್ತು. ಆಗಸ್ಟ್ 23ರಂದು ರಾತ್ರಿಯೇ ಧನಂಜಯ ಭಾರತ ವಿರುದ್ಧ ಪಂದ್ಯವನ್ನಾಡಲು ಶ್ರೀಲಂಕಾ ತಂಡ ಉಳಿದಿದ್ದ ಹೋಟೆಲ್ ಗೆ ಬಂದು ಸೇರಿಕೊಂಡಿದ್ದರು. ಧನಂಜಯ ಮದುವೆಯಲ್ಲಿ ಶ್ರೀಲಂಕಾದ ಹಿರಿಯ ಆಟಗಾರರಾದ ರಂಗನಾ ಹೀರತ್ ಮತ್ತು ಅಜಂತಾ ಮೆಂಡಿಸ್ ಕೂಡಾ ಪಾಲ್ಗೊಂಡಿದ್ದರು.

    ಪಂದ್ಯದಲ್ಲಿ ಧನಂಜಯ್ ಕಮಾಲ್: 10 ಓವರ್ ನಲ್ಲಿ 54 ರನ್ ನೀಡಿ 6 ವಿಕೆಟ್ ಗಳಿಸಿದ ಧನಂಜಯ ಆರಂಭದ 13 ಎಸೆತಗಳಲ್ಲೇ 5 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದರು.
    ರೋಹಿತ್ ಶರ್ಮಾ, ರಾಹುಲ್, ಕೇದಾರ್ ಜಾಧವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರನ್ನು ಔಟ್ ಮಾಡಿ ಭಾರತದ ಬ್ಯಾಟಿಂಗ್ ಪಡೆಯನ್ನು ಪೆವಿಲಿಯನ್ ಗೆ ಕಳಿಸಿದರು.

    ಅಕಿಲ ಧನಂಜಯ್ ಗೆ ಇದು 4ನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಆಡಿದ 3 ಪಂದ್ಯಗಳಲ್ಲಿ ಧನಂಜಯ ಒಟ್ಟು 5 ವಿಕೆಟ್ ಗಳಿಸಿದ್ದರು. ಐಪಿಎಲ್ ನಲ್ಲೂ ಧನಂಜಯ ಆಟವಾಡಿದ್ದಾರೆ. 2013ರಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.