Tag: shriki

  • ಬಿಟ್ ಕಾಯಿನ್ ಕೇಸ್ – ನಲಪಾಡ್ ಎಸ್‌ಐಟಿ ನೋಟಿಸ್ 

    ಬಿಟ್ ಕಾಯಿನ್ ಕೇಸ್ – ನಲಪಾಡ್ ಎಸ್‌ಐಟಿ ನೋಟಿಸ್ 

    ಬೆಂಗಳೂರು: ಬಿಟ್ ಕಾಯಿನ್ ಕೇಸ್‍ನಲ್ಲಿ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಮಹಮದ್ ನಲಪಾಡ್ (Mohammed Nalapad) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ನೋಟಿಸ್ ನೀಡಿದೆ.

    ನಲಪಾಡ್ ವಿರುದ್ಧ ಶ್ರೀಕಿ (Shriki) ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲ್ಪಾಡ್ ಅವರನ್ನು ಎಸ್‍ಐಟಿ ಆರೋಪಿ ಎಂದು ಪರಿಗಣಿಸಿದ್ದು, ನೋಟಿಸ್ ನೀಡಿದೆ. ಇದನ್ನೂ ಓದಿ: ರಾಜ್ಯದ ಮೊದಲ ಕ್ಯಾನ್ಸರ್ ಡೇ ಕೇರ್ ಕೀಮೋಥೇರಪಿ ಸೆಂಟರ್ ರಾಯಚೂರಿನಲ್ಲಿ ಆರಂಭ

    ಫೆ.7ರಂದು ವಿಚಾರಣೆಗೆ ಹಾಜರಾಗಲು ಎಸ್‌ಐಟಿ ನೋಟಿಸ್‌ನಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಹೇಳಿಕೆ ದಾಖಲು ಮಾಡಿದ್ದ ಎಸ್‍ಐಟಿ ಅಧಿಕಾರಿಗಳು. ಹೇಳಿಕೆಯ ಬಳಿಕ ಆರೋಪಿಯನ್ನಾಗಿಸಿತ್ತು.

    ಶ್ರೀಕಿ ಜೊತೆಗೆ ಕೋಟ್ಯಾಂತರ ರೂ. ವ್ಯವಹಾರ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ವಿಜಯೇಂದ್ರರನ್ನ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಬರಲ್ಲ: ರೇಣುಕಾಚಾರ್ಯ

  • ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಅರಗ ಜ್ಞಾನೇಂದ್ರ

    ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಅರಗ ಜ್ಞಾನೇಂದ್ರ

    ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

    ಬಿಟ್ ಕಾಯಿನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರತಿಪಕ್ಷಗಳು ಬಿಟ್ ಕಾಯಿನ್ ಪ್ರಕರಣದಲ್ಲಿ ಅಕ್ರಮವಾಗಿ ಏನಾದರೂ ನಡೆದಿದ್ದರೆ, ಅವರ ಬಳಿ ದಾಖಲೆ ಇದ್ರೆ ಕೊಡಲಿ ಎಂದು ಸವಾಲನ್ನು ಹಾಕಿದರು. ಇದನ್ನೂ ಓದಿ: ಪುಟಾಣಿಗಳನ್ನು ಅದ್ದೂರಿ, ಪ್ರೀತಿಯಿಂದ ಬರ ಮಾಡಿಕೊಂಡ ಅಂಗನವಾಡಿ ಶಿಕ್ಷಕರು

    ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಇಡಿಗೆ ನೀಡಿದ್ದೇವೆ. ಪ್ರಕರಣದ ತನಿಖೆಯಲ್ಲಿ ಏನಾದ್ರೂ ಪ್ರಗತಿಯಾದರೆ ತಿಳಿಸ್ತೇವೆ. ಅದು ಅಲ್ಲದೇ ಹಲ್ಲೆ ಮಾಡಿದ ಪ್ರಕರಣದಲ್ಲಿ ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತು ವಿಷ್ಣು ಭಟ್ ಬಂಧನ ಆಗಿದ್ದಾರೆ. ಈ ಕೇಸ್ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. 2018 ರಲ್ಲೂ ಹೊಟೇಲ್ ಗಲಾಟೆ ಕೇಸ್ ನಲ್ಲಿ ಶ್ರೀಕಿ ಬಂಧನವಾಗಿತ್ತು. ಆಗ ಕಾಂಗ್ರೆಸ್ ಸರ್ಕಾರವೇ ಇತ್ತು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ

    2020ರಲ್ಲಿ ಡ್ರಗ್ ಕೇಸ್ ನಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಮಕ್ಕಳ ಜತೆ ಶ್ರೀಕಿ ಬಂಧನವಾಗಿತ್ತು. ಹಾಗಾಗಿ ಶ್ರೀಕಿ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ಅವರಿಗೇ ಹೆಚ್ಚು ಗೊತ್ತಿರಬೇಕು ಎಂದು ವ್ಯಂಗ್ಯವಾಡಿದರು.

  • ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

    ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

    ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಶ್ರೀಕಿ ಸಿಸಿಬಿ ವಿಚಾರಣೆಯ ವೇಳೆ ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಸಹ ಶ್ರೀಕಿ ಕ್ಯಾಕ್ ಮಾಡ್ತಿದ್ದನು.

    ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಪೋಕರ್ ಗೇಮ್ ಸೈಟ್, ಬಿಟ್ ಕಾಯಿನ್, ವೈಎಫ್‍ಐ, ಇಥೆರಿಯಂ ಖಾತೆಗಳು ಹೀಗೆ ಹಲವು ವೆಬ್ ಸೈಟ್ ಗಳ ಹ್ಯಾಕ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಇದೀಗ ಸಿಸಿಬಿ ಪೊಲೀಸರು ಆತನ ಬಳಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆದಿದ್ದಾರೆ.

    ಈತ ತನ್ನ ಸಹಚರರಾದ ಸುನೀಷ್ ಹೆಗ್ಡೆ, ಸುಜಯ್, ಹೇಮಂತ್, ರಾಬಿನ್ ಖಂಡೇಲ್ವಾಲ್ ಮೂಲಕವೂ ಹ್ಯಾಕ್ ಮಾಡುತ್ತಿದ್ದ. ಬಳಿಕ ಬಿಟ್ ಕಾಯಿನ್ ಟ್ರೇಡರ್ಸ್ ಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಹಣ ಹಾಗೂ ಹವಾಲ ಹಣ ಪಡೆದು ವಿದೇಶದಿಂದ ಗಾಂಜಾ ತರಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು.

    ದೇಶ ವಿದೇಶಗಳ ಪೋಕರ್ ಗೇಮ್ ವೆಬ್ ಗಳನ್ನ ಹ್ಯಾಕ್ ಮಾಡಿ ಡೇಟಾ ಕಳವು ಮಾಡುತ್ತಿದ್ದ. ಸಿಸಿಬಿ ತನಿಖೆಯಿಂದ ಶ್ರೀಕೃಷ್ಣ ಹ್ಯಾಕಿಂಗ್ ಜಾಲ ಕಂಪ್ಲೀಟ್ ಬಯಲಾಗಿದೆ. 3 ಬಿಟ್ ಕಾಯಿನ್ ಎಕ್ಸ್ ಚೇಂಜ್, 10 ಪೋಕರ್ ವೆಬ್ ಸೈಟ್, 4 ಹ್ಯಾಕಿಂಗ್ ವೆಬ್ ಸೈಟ್, 3 ಮಲ್ವಾರ್ಸ್ ಎಕ್ಸ್‍ಪ್ಲೋಟೇಡ್ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ವೆಬ್ ಸೈಟ್ ಹ್ಯಾಕಿಂಗ್ ಬಗ್ಗೆ ಇಂಟರ್ ಪೋಲ್ ಮೂಲಕ ಸಂಬಂಧಪಟ್ಟ ಕಂಪನಿಗಳಿಗೆ ಮಾಹಿತಿ ನೀಡಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.