Tag: shri ramulu

  • ಸೂರ್ಯ, ಚಂದ್ರ ಗ್ರಹಣದಂತೆ ಕಾಂಗ್ರೆಸ್ ದೇಶಕ್ಕೆ ಮಾರಕ: ಬಿ.ಶ್ರೀರಾಮುಲು

    ಸೂರ್ಯ, ಚಂದ್ರ ಗ್ರಹಣದಂತೆ ಕಾಂಗ್ರೆಸ್ ದೇಶಕ್ಕೆ ಮಾರಕ: ಬಿ.ಶ್ರೀರಾಮುಲು

    ಚಿತ್ರದುರ್ಗ: ಕಾಂಗ್ರೆಸ್ ಈ ದೇಶಕ್ಕೆ ಸೂರ್ಯಗ್ರಹಣ ಹಾಗೂ ಚಂದ್ರ ಗ್ರಹಣವಿದ್ದಂತೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

    Sriramulu

    ನಗರದಲ್ಲಿ ಇಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 65 ನೇ ಪುಣ್ಯ ಸ್ಮರಣೆ ನಿಮಿತ್ತ ನಗರದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಹಣಗಳು ಯಾವ ರೀತಿ ಬಂದು ಹೋಗುತ್ತವೋ ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಬಂದು ಹೋಗುತ್ತದೆ. ಈ ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಅಭಿವೃದ್ಧಿ ಕಾರ್ಯಗಳಿಗೆ ತಡೆಗೋಡೆಯಾಗಿ ನಿಲ್ಲುವಂತಹ ಪಕ್ಷ ಕಾಂಗ್ರೆಸ್ ಎಂದು ಆರೋಪಿಸಿದರು. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

    ಈ ಕಾಂಗ್ರೆಸ್‍ನವರಿಂದ ದೇಶ ಹಾಗೂ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ಪಕ್ಷಕ್ಕೆ ಜನರ ಆಶೀರ್ವಾದ ಇದ್ದು, ರಾಜ್ಯದಲ್ಲಿ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅದರಲ್ಲಿ 15 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಹೇಳಿದರು.

    ಪ್ರಸ್ತುತ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದೆ. ಇವರಿಗೆ ಜನರು ಇಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದು, ಬಿಜೆಪಿ ಚಿತ್ರದುರ್ಗದಲ್ಲಿ ನವೀನ್ ಸೇರಿದಂತೆ 15 ಸ್ಥಾನಗಳನ್ನು ಗೆಲ್ಲಲಿದೆ ಎಂದರು. ಇದೇ ವೇಳೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಕೆ.ಎಸ್.ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ 18 ವರ್ಷ ಮೇಲ್ಪಟ್ಟಯುವತಿಯರಿಗೆ ಪತ್ರಿ ತಿಂಗಳು 1 ಸಾವಿರ- ಕೇಜ್ರಿವಾಲ್

  • ರಾಜ್ಯದಲ್ಲಿ ಸಮರ್ಥ ಮಂತ್ರಿ ಮಂಡಲವಿದೆ: ಶ್ರೀ ರಾಮುಲು

    ರಾಜ್ಯದಲ್ಲಿ ಸಮರ್ಥ ಮಂತ್ರಿ ಮಂಡಲವಿದೆ: ಶ್ರೀ ರಾಮುಲು

    ಚಿತ್ರದುರ್ಗ: ಸಚಿವರ ಖಾತೆ ಬದಲಾವಣೆ ಮಾಡಿದಾಗ ಎಲ್ಲರಿಗೂ ಅಸಮಾಧಾನ ಇದ್ದೇ ಇರುತ್ತೇ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

    ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಅವರ ಖಾತೆ ಬದಲಾವಣೆಯಿಂದಾಗಿ ಸರ್ಕಾರಕ್ಕೆ ಕಂಟಕ ಎದುರಾಗಬಹುದಾ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ಸಚಿವರ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಲಿದ್ದಾರೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

    ರಾಜ್ಯದ ಅಭಿವೃದ್ಧಿಗಾಗಿ ಸಮರ್ಥ ಮಂತ್ರಿ ಮಂಡಲ ರಚನೆ ಮಾಡುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಕೆಲ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸಮರ್ಥರಾದವರಿಗೆ ಖಾತೆ ನೀಡುವುದರಿಂದ ದೇಶ ಬದಲಾವಣೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಹಾಗೆಯೇ ಸಚಿವರ ಖಾತೆ ಬದಲಾವಣೆಯ ತೀರ್ಮಾನವನ್ನು ಸಿಎಂ ಬಿಎಸ್ ವೈ ಅವರೇ ಮಾಡಲಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಯಾರಿಗೂ ಯಾವುದೇ ಅಸಮಾಧಾನವಿಲ್ಲ. ಸದ್ಯ ರಾಜ್ಯದಲ್ಲಿ ಸಮರ್ಥವಾದ ಮಂತ್ರಿ ಮಂಡಲವಿದೆ. ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಗೆ ಖಾತೆ ವಿಚಾರವಾಗಿ ಸಮಾಧಾನವಾಗಿದ್ದಾರೆ. ಅವರಿಗೆ ಈ ವಿಚಾರವಾಗಿ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ಮುಂದೆ ಹೇಳಿದ್ದಾರೆ ಎಂದು ತಿಳಿಸುವ ಮೂಲಕ ಸಚಿವ ಸಂಪುಟದ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

  • ಬಳ್ಳಾರಿ ಸಂಸದರಿಗೆ `ದೊಡ್ಡಣ್ಣ’ನ ಆಹ್ವಾನ- ಟ್ರಂಪ್ ಆಹ್ವಾನಿತ ಗಣ್ಯರ ಲಿಸ್ಟ್ ನಲ್ಲಿ ಶ್ರೀರಾಮುಲುಗೂ ಕರೆ

    ಬಳ್ಳಾರಿ ಸಂಸದರಿಗೆ `ದೊಡ್ಡಣ್ಣ’ನ ಆಹ್ವಾನ- ಟ್ರಂಪ್ ಆಹ್ವಾನಿತ ಗಣ್ಯರ ಲಿಸ್ಟ್ ನಲ್ಲಿ ಶ್ರೀರಾಮುಲುಗೂ ಕರೆ

    ಬಳ್ಳಾರಿ: ಸಂಸದ ಶ್ರೀರಾಮುಲು ಅವರಿಗೆ ವಿಶ್ವದ ದೊಡ್ಡಣ್ಣ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ.

    130 ರಾಷ್ಟ್ರಗಳ ಗಣ್ಯರಿಗೆ ಆಹ್ವಾನ ನೀಡಿರುವ ಟ್ರಂಪ್ ಅವರು, ಭಾರತದಿಂದ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನಾವಿಸ್ ಗೂ ಆಹ್ವಾನವಿಟ್ಟಿದ್ದಾರೆ.

    ಒಕ್ಕೂಟ ವ್ಯವಸ್ಥೆಯ ರಾಷ್ಟ್ರಗಳ ಗಣ್ಯರಿಗೆ ಪ್ರತಿ ವರ್ಷ ಔತಣಕೂಟ ಹಾಗೂ ಶಾಂತಿ ಸ್ಥಾಪನೆ ಬಗ್ಗೆ ನಡೆಯೋ ಚರ್ಚೆಗೆ ತಮ್ಮನ್ನೂ ಆಹ್ವಾನಿಸಿರುವುದು ನನ್ನ ಪುಣ್ಯವೆಂದು ಶ್ರೀರಾಮುಲು ಬಣ್ಣಿಸಿದ್ದಾರೆ. ಅಲ್ಲದೇ ಫೆಬ್ರವರಿ 7,8 ರಂದು ಅಮೆರಿಕಾಕ್ಕೆ ಹೋಗಬೇಕಾಗಿದೆ. ಆದ್ರೆ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ಬಿಜೆಪಿ ಸಂಸದರಿಗೆ ವಿಪ್ ಜಾರಿಯಾಗಿರುವುದರಿಂದ ತಾವೂ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಅಮೆರಿಕಾಕ್ಕೆ ತೆರಳುವ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

    ಈಗಾಗಲೇ ಅಮೆರಿಕಾಕ್ಕೆ ತೆರಳಲು ಸಿದ್ಧತೆ ಹಾಗೂ ವೀಸಾ ಸಿದ್ಧಪಡಿಸಿಕೊಂಡಿರುವ ಶ್ರೀರಾಮುಲುಗೆ ಪಕ್ಷದ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ರೆ ಭಾರತದ ಪರವಾಗಿ ಅಮೆರಿಕಾದ ಅಧ್ಯಕ್ಷರ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.

  • ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ: ಜನಾರ್ದನ ರೆಡ್ಡಿ

    ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ: ಜನಾರ್ದನ ರೆಡ್ಡಿ

    ಬೆಂಗಳೂರು: ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ. ಅಲ್ಲಿಯ ಪ್ರತಿಯೊಬ್ಬ ನಾಗರಿಕನು ಒಬ್ಬೊಬ್ಬ ಜನಾರ್ದನ ರೆಡ್ಡಿಯಾಗಿ ಶ್ರೀರಾಮುಲು ಕೈ ಬಲ ಪಡಿಸಿ ಬಳ್ಳಾರಿಯ 8 ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತೇವೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ವರ್ತೂರು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಆಕ್ರೋಶ ಭರಿತರಾಗಿ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಸಿಎಂ ಸಿದ್ದರಾಮಯ್ಯ ಬಳ್ಳಾರಿ ಶಾಸಕರಾದ ಆನಂದ್ ಸಿಂಗ್ ಹಾಗೂ ನಾಗೇಂದ್ರರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಹುನ್ನಾರ ನಡೆಸುತ್ತಿದ್ದು, ಮುಖ್ಯಮಂತ್ರಿಯವರ ಕನಸು ಕನಸಾಗಿ ಉಳಿಯುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಾತು ಮಾತಿಗು ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಜೈಲು, ಯಡಿಯೂರಪ್ಪ ಜೈಲು, ಜನಾರ್ದನ ರೆಡ್ಡಿ ಜೈಲು ಎಂದು ವ್ಯಂಗ್ಯವಾಡುತ್ತಾರೆ. ಮುಂದೆ ಇದಕ್ಕೆ ಬಿಜೆಪಿ ಕಾರ್ಯಕರ್ತರು ತಕ್ಕಪಾಠ ಕಲಿಸುತ್ತಾರೆ ಎಂದಿದ್ದಾರೆ.

  • ಕೊಟ್ಟ ಮಾತು ತಪ್ಪಿದ ಸಂಸದ ಶ್ರೀರಾಮುಲು- ಮೋದಿ ಆದೇಶಕ್ಕೆ ಬೆಲೆಯೇ ಇಲ್ಲ

    ಕೊಟ್ಟ ಮಾತು ತಪ್ಪಿದ ಸಂಸದ ಶ್ರೀರಾಮುಲು- ಮೋದಿ ಆದೇಶಕ್ಕೆ ಬೆಲೆಯೇ ಇಲ್ಲ

    ಬಳ್ಳಾರಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಬಿಜೆಪಿ ನಾಯಕರು ಸಾರ್ವಜನಿಕ ಶೌಚಾಲಯ ಕ್ಲೀನ್ ಮಾಡೋಕೆ ಮುಂದಾಗಿರುವುದು ಕ್ರಾಂತಿಕಾರಕ ನಿರ್ಧಾರವೆಂದು ಮಾಧ್ಯಮಗಳ ಮುಂದೆ ಹೊಗಳಿದ್ದ ಬಳ್ಳಾರಿ ಸಂಸದ ಶ್ರೀರಾಮುಲು ಇಂದು ಶೌಚಾಲಯ ಕ್ಲೀನ್ ಮಾಡದೇ ನಾಪತ್ತೆಯಾಗಿದ್ದಾರೆ.

    ಮೋದಿ ಹುಟ್ಟುಹಬ್ಬದ ಅಂಗವಾಗಿ ತಾವೂ ಸಹ ಬಳ್ಳಾರಿಯ ಒಂದು ಶೌಚಾಲಯ ಕ್ಲೀನ್ ಮಾಡಲು ರೆಡಿ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ ಕೊಟ್ಟ ಮಾತನ್ನು ಒಂದೇ ದಿನದಲ್ಲಿ ಮರೆತಿರುವ ಅವರು ಇಂದು ಟಾಯ್ಲೆಟ್ ಕ್ಲೀನ್ ಮಾಡೋ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಹೀಗಾಗಿ ಶ್ರೀರಾಮುಲು ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರು ಕೊನೆಗೆ ಬಳ್ಳಾರಿಯ ಮಾಜಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಗರದ ಬಾಪೂಜಿ ನಗರದ ಸಾರ್ವಜನಿಕ ಶೌಚಾಲಯವನ್ನು ಕ್ಲೀನ್ ಮಾಡಿದ್ರು.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಸೋಮಶೇಖರ ರೆಡ್ಡಿ, ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಅವರ ಆಶಯದಂತೆ ಸೇವಾ ದಿವಾಸ್ ಎಂದು ಆಚರಣೆ ಮಾಡುತ್ತಿದ್ದವೆ. ಆಗಸ್ಟ್ 02 ರ ಗಾಂಧಿ ಜಯಂತಿ 15 ದಿನಗಳ ಮುಂಚೆಯೇ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿರುವುದು ಮತ್ತು ಶೌಚಾಲಯ ಕ್ಲೀನ್ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.