Tag: Shri Ananthapadmanabha Temple

  • ಉಡುಪಿ ಪಣಿಯಾಡಿ ಅನಂತ ಪದ್ಮನಾಭ ದೇವರಿಗೆ ಶಿಲಾಗರ್ಭಗುಡಿ ಸಮರ್ಪಣೆ

    ಉಡುಪಿ ಪಣಿಯಾಡಿ ಅನಂತ ಪದ್ಮನಾಭ ದೇವರಿಗೆ ಶಿಲಾಗರ್ಭಗುಡಿ ಸಮರ್ಪಣೆ

    ಉಡುಪಿ: ಇತಿಹಾಸ ಪ್ರಸಿದ್ಧ ಪಣಿಯಾಡಿಯಲ್ಲಿನ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ನವೀಕರಣದ ನಡೆಸಲಾಗಿದೆ. ಶಿಲಾಮಯ ಗರ್ಭಗೃಹ ಹಾಗೂ ಶಿಲಾಮಯ ತೀರ್ಥಮಂಟಪ ನಿರ್ಮಿಸಿ ದೇವರಿಗೆ ಸಮರ್ಪಣೆ ಮಾಡಲಾಯ್ತು. ಇದನ್ನೂ ಓದಿ:  ಶಾರೂಖ್ ಬಳಿ 300 ರೂ. ಪಡೆದಿದ್ದ ಪ್ರಿಯಾಮಣಿ

    ಕೊರೊನಾ ಲಾಕ್‍ಡೌನ್ ನಿಯಮ ಇರುವುದರಿಂದ ದೇಗುಲದ ಅರ್ಚಕ ಆಡಳಿತ ಮಂಡಳಿ ಸದಸ್ಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಶ್ರೀದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶ ಅಭಿಷೇಕವು ನಡೆಸಲಾಯ್ತು. ಉಡುಪಿ ಪುತ್ತಿಗೆ ಮಠಕ್ಕೆ ಆಡಳಿತವಿರುವ ದೇಗುಲದ ಪುನಃಸ್ಥಾಪನಾ ಕಾರ್ಯಕ್ರಮಗಳು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು. ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಹಾಗೂ ಪಂಜ ಭಾಸ್ಕರ ಭಟ್ ಇವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

    ಶಾಸ್ತ್ರಕ್ಕೆ ಚ್ಯುತಿಯಾಗದಂತೆ ಸರಳವಾಗಿ ಕಾರ್ಯಕ್ರಮ ಸಂಪನ್ನ ಗೊಂಡಿತು. ಪ್ರತಿಷ್ಠೆ ಸಂದರ್ಭ 108 ಕಲಶಾಭಿಷೇಕ ನಡೆಸಲಾಗಿದ್ದು, ಜೀರ್ಣೋದ್ಧಾರ ಸಂಪೂರ್ಣವಾದ ನಂತರ 1008 ಕಲಶಾಭಿಷೇಕ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಸತ್ಯನಾರಾಯಣ ಪೂಜೆಯನ್ನು ನಡೆಸುವ ಮೂಲಕ ಎರಡನೇ ಹಂತದ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

    ಲಾಕ್‍ಡೌನ್ ಇರುವುದರಿಂದ ಭಕ್ತಾಧಿಗಳಿಗೆ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಾಯ ಮಾಡಿದ ದಾನಿಗಳಿಗೆ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಮುಂದೆ ದೇವಸ್ಥಾನದ ಕಾಮಗಾರಿ ಸಂಪೂರ್ಣ ಗೊಂಡ ನಂತರ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.