ಹೆಸರಾಂತ ದಿಗ್ಗಜರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್ (S. Narayan) ಅವರ ನಿರ್ದೇಶನದ “ಪ್ರೊಡಕ್ಷನ್ ನಂ 1” ಚಿತ್ರ ಇತ್ತೀಚೆಗಷ್ಟೇ ಆರಂಭವಾಗಿದೆ. ಈ ನೂತನ ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟ ದುನಿಯಾ ವಿಜಯ್ (Duniya Vijay) ಹಾಗೂ ಶ್ರೇಯಸ್ ಮಂಜು ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್ ಅವರು ಜೂನ್ 5 ರಿಂದ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಶ್ರೇಯಸ್ ಮಂಜು ಮುಂತಾದ ಕಲಾವಿದರ ಅಭಿನಯದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರ ಪಾಲ್ಗೊಳ್ಳುವಿಕೆಯಲ್ಲಿ ಮೂಡಿ ಬರುತ್ತಿರುವ ಈ ನೂತನ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯದಲ್ಲೇ ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.
ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಬೃಂದಾ. ವಿಭಿನ್ನಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಎಸ್ ನಾರಾಯಣ್ ಅವರು ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನವಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ,ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಂತು ಅವರ ನೃತ್ಯ ನಿರ್ದೇಶನವಿರುವ “ಪ್ರೊಡಕ್ಷನ್ ನಂ 1” ಚಿತ್ರದ ಪಿ.ಆರ್.ಓ ಆಗಿ ಸುಧೀಂದ್ರ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಷ್ಣುಪ್ರಿಯ (Vishnupriya) 1990ರ ಕಾಲದಲ್ಲಿ ನಡೆದಂಥ ಮಾಸ್ ಲವ್ ಸ್ಟೋರಿ. ಕನ್ನಡದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ಯುವನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ ಲವರ್ ಬಾಯ್ ವಿಷ್ಣು ಆಗಿ ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ಅಲ್ಲದೆ ಪ್ರಿಯಾ ಪಾತ್ರದಲ್ಲಿ ಮಲಯಾಳಂನ ಪ್ರಿಯಾ ವಾರಿಯರ್ ನಟಿಸಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಂಥ ಒಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ ನಿರ್ದೇಶಕ ವಿ.ಕೆ. ಪ್ರಕಾಶ್ ಅವರು ನಿರೂಪಿಸಿದ್ದಾರೆ. ವಿಷ್ಣುಪ್ರಿಯ ಸಿನಿಮಾದ ಮೊದಲ ಪ್ರೇಮ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ಶರಣ್ ಹಾಗೂ ನಟಿ ರುಕ್ಮಿಣಿ ವಸಂತ್ ಸೇರಿ ನಾಗೇಂದ್ರ ಪ್ರಸಾದ್ ರಚನೆಯ ಚಿಗುರು ಚಿಗುರು ಸಮಯ ಹಾಡನ್ನು ಲಾಂಚ್ ಮಾಡಿದರು. ನಿರ್ಮಾಪಕರಾದ ರಮೇಶ್ ರೆಡ್ಡಿ, ಚೇತನ್ ಕುಮಾರ್ , ಸೂರಪ್ಪಬಾಬು, ಅಲ್ಲದೆ ನಿರ್ದೇಶಕರಾದ ಗುರು ದೇಶಪಾಂಡೆ, ದಯಾಳ್ ಪದ್ಮನಾಬನ್, ಭರ್ಜರಿ ಚೇತನ್, ಸತ್ಯಪ್ರಕಾಶ್, ಮಹೇಶ್ ಕುಮಾರ್, ನಟ ವಿಕ್ರಂ ರವಿಚಂದ್ರನ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನಟ ಶರಣ್ ಮಾತನಾಡುತ್ತ ಕೆಲವು ಹಾಡುಗಳು ಥಟ್ ಅಂತ ಮೆದುಳಿಗೇ ನಾಟುತ್ತವೆ. ಅಂಥಾ ಹಾಡನ್ನು ನಾನಿಲ್ಲಿ ನೋಡಿದೆ. ಇದೊಂದು ಫೀಲ್ ಗುಡ್ ಸಿನಿಮಾ. ನಿರ್ದೇಶಕರು ಪ್ರತಿ ಫ್ರೇಮ್ ನಲ್ಲೂ ಕಾಣಿಸ್ತಾರೆ. ಟೈಟಲ್ ನಲ್ಲೇ ವಿಷ್ಣು ಸರ್ ಇದ್ದಾರೆ. 2024ನ್ನು ಸ್ಟಾರ್ಟ್ ಮಾಡಲು ಅದ್ಭುತವಾದ ಸಾಂಗ್ ಸಿಕ್ಕಿದೆ ಎಂದರು.
ನಂತರ ದಯಾಳ್ ಪದ್ಮನಾಭನ್ ಮಾತನಾಡಿ ಮಂಜು ಒಂದು ಸಿನಿಮಾ ಮಾಡುವಾಗ ತುಂಬಾ ಕ್ಲಿಯರ್ ಆಗಿರ್ತಾರೆ. ಅವರಿಲ್ಲಿ ಬರೀ ಪ್ರೊಡ್ಯೂಸರ್ ಆಗಿ ಸಿನಿಮಾ ಮಾಡಿಲ್ಲ. ಒಬ್ಬ ತಂದೆಯಾಗಿ ಜವಾಬ್ದಾರಿ ಇದೆ ಎಂದರು. ಗುರು ದೇಶಪಾಂಡೆ ಮಾತನಾಡಿ ಶ್ರೇಯಸ್ ತುಂಬಾ ಹಾರ್ಡ್ ವರ್ಕ್ ಮಾಡೋಹುಡುಗ ಎಂದರು. ನಿರ್ಮಾಪಕ ಕೆ.ಮಂಜು ಮಾತನಾಡುತ್ತ ಚಿತ್ರರಂಗ ನನಗೆ ಹಣ, ಗೌರವ ಎಲ್ಲವನ್ನೂ ಕೊಟ್ಟಿದೆ. ಒಬ್ಬ ರೈತ ಒಳ್ಳೆ ಬೆಳೆ ಬೆಳೆಯಬೇಕಾದರೆ ಮಳೆಯನ್ನ ನಂಬ್ತಾನೆ, ಆದೇರೀತಿ ನನ್ನ ಮಗನನ್ನು ಚಿತ್ರರಂಗದಲ್ಲಿ ಬೆಳೆಸಲು ನಿರ್ದೇಶಕರನ್ನು ನಂಬಿದ್ದೇನೆ. ಈಗಿನ ಕೆಲ ನಿರ್ದೇಶಕರಿಗೆ ಜವಾಬ್ದಾರಿ ಇಲ್ಲ. ನಿರ್ಮಾಪಕ ದುಡ್ಡನ್ನು ಎಲ್ಲಿಂದ ತಂದು ಹಾಕ್ತಾನೆ ಅಂತ ಅವರು ಅರ್ಥಮಾಡಿಕೊಳ್ಳಬೇಕು. ಚೆನ್ನಾಗಿ ಬರಬೇಕೆಂಬ ಕಾರಣದಿಂದ ಸಿನಿಮಾ ಲೇಟಾಗಿದೆ. ಮುಂಚಿತವಾಗೇ ಯೂಥ್, ಪ್ರೇಮಿಗಳಿಗೆ ನಮ್ಮ ಸಿನಿಮಾನ ತೋರಿಸುತ್ತೇನೆ. ಶಿವರಾತ್ರಿಗೆ ಅಥವಾ ಏಪ್ರಿಲ್ 5ಕ್ಕೆ ರಿಲೀಸ್ ಮಾಡಬೇಕೆನ್ನುವ ಪ್ಲಾನಿದೆ ಎಂದು ಹೇಳಿದರು.
ಗಂಡುಗಲಿ ಕೆ. ಮಂಜು ಅವರ ಬಿಂದಿಯಾ ಪ್ರೊಡಕ್ಷನ್ಸ್ ನಿರ್ಮಾಣದ, ರಾಷ್ಟ್ರಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ. ಮಲೆಯಾಳಂನ ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ.ವಿನೋದ್ ಭಾರತಿ ಅವರ ಛಾಯಾಗ್ರಹಣ, ವಿಕ್ರಂ ಮೋರ್, ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ಸಂಯೊಜನೆ ಈ ಚಿತ್ರಕ್ಕಿದೆ.
ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕ ಶ್ರೇಯಸ್ ಮಂಜು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ , ನಿಹಾಲ್ ರಾಜ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
ಪಡ್ಡೆಹುಲಿ ಚಿತ್ರದ ಮೂಲಕ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದ ಯುವನಟ ಶ್ರೇಯಸ್ ಮಂಜು (Shreyas Manju) ಇದೀಗ ವಿಷ್ಣುಪ್ರಿಯನಾಗಿ (Vishnupriya) ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ತೊಂಬತ್ತರ ದಶಕದಲ್ಲಿ ನಡೆಯುವ ರೆಟ್ರೋ ಪ್ರೇಮಕಥಾನಕ ಈ ಚಿತ್ರದಲ್ಲಿದ್ದು, ನಟ ಶ್ರೇಯಸ್ ಅವರ ಪಾಲಿಗೂ ಇದೊಂದು ಮಹತ್ವದ ಚಿತ್ರವಾಗಿದೆ.
ಜ.27ರಂದು ವಿಷ್ಣುಪ್ರಿಯ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಅದೇ ದಿನ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆ. ಮಲೆಯಾಳಂನ ಗೋಪಿ ಸುಂದರ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಕುತೂಹಲ ಮೂಡಿಸಿವೆ.
ಗಂಡುಗಲಿ ಕೆ. ಮಂಜು ಅವರ ನಿರ್ಮಾಣದ, ರಾಷ್ಟ್ರಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ತೊಂಭತ್ತರ ದಶಕದ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ.
ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಶ್ರೇಯಸ್ ಮಂಜು ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. Vishnupriya ಸಿನಿಮಾದ ರೊಮ್ಯಾಂಟಿಕ್ ಲವ್ ಸ್ಟೋರಿ ಹೇಳಲು ರೆಡಿಯಾಗಿದ್ದಾರೆ.
ರಾತ್ರೋ ರಾತ್ರಿ ಕಣ್ಣು ಹೊಡೆದು ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಸುಂದರಿ ಪ್ರಿಯಾಗೆ ‘ಒರು ಆಡಾರ್ ಲವ್’ ಚಿತ್ರ 20 ಸೆಕೆಂಡ್ ಕಣ್ಣು ಹೊಡೆದು ಫೇಮಸ್ ಆಗಿದ್ದರು. ಅದೆಷ್ಟರ ಮಟ್ಟಿಗೆ ಪ್ರಿಯಾ ಹವಾ ಕ್ರಿಯೆಟ್ ಆಗಿತ್ತು ಅಂದ್ರೆ ಬಾಲಿವುಡ್ ಅಂಗಳದವೆರೆಗೂ ನಟಿಯ ಹೆಸರು ಚಾಲ್ತಿಯಲ್ಲಿತ್ತು. ಅದೆಷ್ಟು ಬೇಗ ಫೇಮಸ್ ಆದ್ರೋ ಅಷ್ಟೇ ಬೇಗ ಪ್ರಿಯಾ ಹವಾ ಕಮ್ಮಿಯಾಯ್ತು. ಆದ್ರೂ ತಲೆ ಕೆಡಿಸಿಕೊಳ್ಳದೇ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಕನ್ನಡದ ಸಿನಿಮಾಗೆ ಮಾಲಿವುಡ್ ನಟಿ ಪ್ರಿಯಾ ಬಣ್ಣ ಹಚ್ಚಿದ್ದಾರೆ. ‘ವಿಷ್ಣುಪ್ರಿಯಾ’ ಸಿನಿಮಾದಲ್ಲಿ ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು (Shreyas Manju) ನಾಯಕಿಯಾಗಿ ನಟಿಸಿದ್ದಾರೆ. ಕಾರಣಾಂತಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಈಗ ಮೇ-ಜೂನ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ಸಿಡ್ನಿ ವರನ ಜೊತೆ ನಟಿ ಸುಕೃತಾ ನಾಗ್ ಮದುವೆ ಫಿಕ್ಸ್
ಮಾಲಿವುಡ್ (Mollywood) ನಿರ್ದೇಶಕ ವಿ.ಕೆ ಪ್ರಕಾಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. Geetha Govindam ಖ್ಯಾತಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ವಿಷ್ಣುಪ್ರಿಯಾ’ ಮೂಲಕ ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ ಹೇಳಲು ಶ್ರೇಯಸ್-ಪ್ರಿಯಾ ರೆಡಿಯಾಗಿದ್ದು, ಈ ಸಿನಿಮಾ ಚಿತ್ರಮಂದಿರಲ್ಲಿ ಮೋಡಿ ಮಾಡುತ್ತಾ ಎಂದು ಕಾದುನೋಡಬೇಕಿದೆ.
ರಾಣಾ ಸಿನಿಮಾ ಬಳಿಕ ಶ್ರೇಯಸ್ ಕೆ ಮಂಜು (Shreyas Manju) ಹೊಸ ಸಿನಿಮಾಕ್ಕೆ ದಿಲ್ ದಾರ್ (Dil Dar) ಎಂಬ ಕ್ಯಾಚಿ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಇವತ್ತು ಬೆಂಗಳೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಸಿನಿಮಾಗೆ ಕ್ಲ್ಯಾಪ್ ಮಾಡಿ ಟೈಟಲ್ ಅನಾವರಣ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಟೈಟಲ್ ರಿವೀಲ್ ಮಾಡಿ ಮಾತಾನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಸಿನಿಮಾ ಮಾಡಬೇಕು ಅಂದರೆ ದಿಲ್ ಬೇಕು. ನಟ ಶ್ರೇಯಸ್ ಮಂಜು ಹಾಗೂ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು. ದಿಲ್ ದಾರ್ ನಿರ್ದೇಶಕ ಮಧು ಗೌಡ (Madhu Gowda) ಮಾತನಾಡಿ, ಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ರೆಡಿ ಮಾಡಿದಾಗ ದಿಲ್ ದಾರ್ ಟೈಟಲ್ ಫಿಕ್ಸ್ ಮಾಡಿದಾಗ. ಯಾರು ಇದ್ದಾರೆ ದಿಲ್ ದಾರ್ ಅಂತ ಥಿಂಕ್ ಮಾಡಿದಾಗ ಸಿಕ್ಕಿದ್ದ ಶ್ರೇಯಸ್ ಮಂಜು ನೆನಪಾದರು ಎಂದರು. ಇದನ್ನೂ ಓದಿ: Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು
ಚಿತ್ರದ ನಿರ್ಮಾಪಕ ಸಂತೋಷ್ ಮಾತನಾಡಿ, ನಿರ್ದೇಶಕ ಮಧು ಅವರು ನನ್ನ ಬಳಿ ಕತೆ ಹೇಳಿದಾಗ ತುಂಬಾ ಇಷ್ಟ ಆಯ್ತು. ಅದಕ್ಕೆ ಒಪ್ಪಿಕೊಂಡೆ ಎಂದರು. ಪ್ರಿಯಾಂಕ , ನಾನು ಈ ಹಿಂದೆ ಅದ್ಧೂರಿ ಲವರ್ಸ್ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿನಯಿಸಿದ್ದೇ. ಈಗ ಈ ಸಿನಿಮಾದಲ್ಲಿ ನಟಿಸುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಬೇಕು ಎಂದರು.
ನಟ ಶ್ರೇಯಸ್ ಮಂಜು ಮಾತನಾಡಿ, ರವಿಚಂದ್ರನ್ ಸರ್ ನನಗೆ ತುಂಬಾ ಕಾನ್ಫಿಡೆನ್ಸ್ ಕೊಟ್ಟಿದ್ದಾರೆ. ನನ್ನ ಚಿತ್ರಕ್ಕೆ ಶುಭಕೋರಲು ಬಂದ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ಡೈರೆಕ್ಟರ್ ಹತ್ತಿರ ಒಂದೊಂದು ಟಿಪ್ಸ್ ತಗೊಂತಿನಿ ಎಂದರು. ನಂತರ ರಾಕಿಂಗ್ ಸ್ಟಾರ್ ಯಶ್ ಅವರು ನನಗೆ ತುಂಬಾ ಸಪೋರ್ಟ್ ಕೊಟ್ಟಿದ್ದಾರೆ. ಈ ಅವಕಾಶವನ್ನು ನನಗೆ ಕೊಟ್ಟಿದ್ದಕ್ಕೆ ನಿರ್ದೇಶಕ ಮಧು ಅವರಿಗೆ ಧನ್ಯವಾದ. ದಿಲ್ ದಾರ್ ಚಿತ್ರ ಕಾಲೇಜ್ ಸ್ಟೋರಿ ಆಗಿದೆ. ನಾಳೆಯಿಂದ ಶೂಟಿಂಗ್ ರಿಹರ್ಸಲ್ ಮಾಡುತ್ತಿದ್ದೇವೆ ಎಂದರು.
ಏಷ್ಯಾನೆಟ್ ಮೂವೀ ಬ್ಯಾನರ್ ನಡಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.
ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕನ್ನಡ ಚಿತ್ರೋದ್ಯಮದ ಚಟುವಟಿಕೆಗಳು ಅನ್ ಲಾಕ್ ಬಳಿಕ ನಿಧಾನಗತಿಯಲ್ಲಿ ಗರಿಗೆದರುತ್ತಿವೆ. ಇಂದು ಬೆಳ್ಳಂಬೆಳಗ್ಗೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಟನೆಯ ರಾಣ ಚಿತ್ರದ ಟೈಟಲ್ ಲಾಂಚ್ ಹಾಗೂ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೇರವೇರಿದೆ.
ರಾಜಾಜಿನಗರದ ವರಸಿದ್ದಿ ಗಣಪತಿ ದೇವಸ್ಥಾನದಲ್ಲಿ ಶುಭ ಮೂಹೂರ್ತದಲ್ಲಿ ಪೂಜೆ ಕೈಂಕರ್ಯಗಳು ನೇರವೇರಿದ್ದು, ವಿಘ್ನವಿನಾಶಕನ ಸನ್ನಿಧಿಯಲ್ಲಿ ಚಿತ್ರ ತಂಡ ಟೈಟಲ್ ಲಾಂಚ್ ಮಾಡಿದೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಮಂಜು, ನಟಿ ಗ್ರೀಷ್ಮಾ ನಾಣಯ್ಯ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಇದನ್ನೂ ಓದಿ: ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ವೈಷ್ಣವಿ ಜೊತೆ ಅರವಿಂದ್ ಮಾತು
ಪೊಗರು ಬಳಿಕ ರಾಣ ಸಿನಿಮಾಗೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದು, ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪೊಗರು ಸಿನಿಮಾ ಬಳಿಕ ಮತ್ತೆ ರಾಣ ಚಿತ್ರದಲ್ಲಿ ಚಂದನ್ ಶೆಟ್ಟಿ ಹಾಗೂ ನಂದಕಿಶೋರ್ ಜೋಡಿ ಮೋಡಿ ಮಾಡಲು ರೆಡಿಯಾಗಿದೆ. ಇನ್ನು ರಾಣ ಚಿತ್ರದ ಮೂಲಕ ನಟ ಶ್ರೇಯಸ್ ಮಂಜು ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ಮಿಂಚಲು ತಯಾರಿ ನಡೆಸಿದ್ದು, ಇದೇ ತಿಂಗಳ ಕೊನೆ ವಾರದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.
ಈ ಹಿಂದೆ ಪಡ್ಡೆಹುಲಿ ಚಿತ್ರದೊಂದಿಗೆ ಮಾಸ್ ಲುಕ್ಕಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದವರು ಶ್ರೇಯಸ್. ಮೊದಲ ಚಿತ್ರದಲ್ಲಿಯೇ ಸ್ಟಾರ್ ಗಿರಿ ದಕ್ಕಿಸಿಕೊಂಡಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯ. ರಾಜ್ಯದ ನಾನಾ ಭಾಗಗಳಲ್ಲಿ ವೇಗವಾಗಿ ಚಿತ್ರೀಕರಣ ನಡೆಸಿಕೊಂಡಿದ್ದ ಚಿತ್ರತಂಡವೀಗ ಕೇರಳದ ಸುಂದರ ತಾಣಗಳಿಗೆ ಶಿಫ್ಟಾಗಿದೆ. ಕಳೆದ ಹತ್ತು ದಿನಗಳಿಂದ ವಿಷ್ಣುಪ್ರಿಯ ಚಿತ್ರದ ಹಾಡುಗಳು ಮತ್ತು ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಹುಬಲಿಯಂಥಾ ಸಿನಿಮಾಗಳ ಚಿತ್ರೀಕರಣ ನಡೆದಿದ್ದ ಸ್ಥಳಗಳಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ನಡೆಯುತ್ತಿರೋದು ನಿಜವಾದ ಆಕರ್ಷಣೆ.
ಕೇರಳದ ಪ್ರಖ್ಯಾತ ಆದಿರಪಳ್ಳಿ ಜಲಪಾತದಲ್ಲಿ ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿಯ ಚಿತ್ರೀಕರಣ ನಡೆದಿತ್ತು. ಇದೀಗ ಅದೇ ಸ್ಥಳದಲ್ಲಿ ವಿಷ್ಣುಪ್ರಿಯ ಚಿತ್ರದ ಹಾಡಿನ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ಇನ್ನುಳಿದಂತೆ ಪುಲಿಮುರುಗನ್ ಮತ್ತು ಮಹೇಶ್ ಬಾಬು ಚಿತ್ರಗಳ ಚಿತ್ರೀಕರಣ ನಡೆದಿದ್ದ ಮಹಾಘನಿ ಅರಣ್ಯ ಪ್ರದೇಶದಲ್ಲಿ ವಿಷ್ಣುಪ್ರಿಯನ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಇದು ಇಡೀ ಚಿತ್ರದ ಪ್ರಧಾನ ಅಂಶಗಳನ್ನು ಒಳಗೊಂಡಿರುವ ಸಾಹಸ ಸನ್ನಿವೇಶ. ಅದನ್ನು ವಿರಳ ಪ್ರದೇಶದಲ್ಲಿಯೇ ಚಿತ್ರೀಕರಿಸಿಕೊಳ್ಳಬೇಕೆಂದು ನಿರ್ದೇಶಕ ವಿ.ಕೆ. ಪ್ರಕಾಶ್ ಯೋಜನೆ ಹಾಕಿಕೊಂಡಿದ್ದರಂತೆ. ಅದರಂತೆಯೇ ಈಗ ಸಾಂಗವಾಗಿ ಚಿತ್ರೀಕರಣ ಮುಂದುವರೆಯುತ್ತಿದೆ.
ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿಯೇ ಆಕ್ಷನ್ ಹೀರೋ ಆಗಿ ಮಿಂಚಿದ್ದವರು ಶ್ರೇಯಸ್. ಆ ಮೊದಲ ಚಿತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡಿದ್ದ ರೀತಿ, ಅದರಲ್ಲಿ ಎನರ್ಜೆಟಿಕ್ ಆಗಿ ನಟಿಸಿದ್ದ ಅವರಿಗಿಲ್ಲಿ ಮತ್ತಷ್ಟು ಮಾಸ್ ಸನ್ನಿವೇಶಗಳಿರೋ ಪವರ್ ಫುಲ್ ಕಥೆಯೇ ಸಿಕ್ಕಿದೆ. ಇಲ್ಲಿ ಕಣ್ಣೇಟಿನ ಹುಡುಗಿ ಪ್ರಿಯಾ ವಾರಿಯರ್ ಶ್ರೇಯಸ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನೊಂದು ದಿನದ ಚಿತ್ರೀಕರಣ ಸಮಾಪ್ತಿಯಾದರೆ ವಿಷ್ಣುಪ್ರಿಯಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ತಕ್ಕಣವೇ ಉಳಿಕೆ ಕೆಲಸ ಕಾರ್ಯಗಳೂ ಆರಂಭವಾಗಲಿವೆ. ಈ ತಿಂಗಳ ಅಂತ್ಯದೊಳಗೆ ಪೋಸ್ಟರ್ ಬಿಡುಗಡೆಗೊಳಿಸಿ ಜನವರಿ ಮೊದಲ ಭಾಗದಲ್ಲಿಯೇ ಆಡಿಯೋ ಮತ್ತು ಟೀಸರ್ ಲಾಂಚ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಜನಪ್ರಿಯ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಪಾದಾರ್ಪಣೆ ಮಾಡುತ್ತಿರುವ ಚಿತ್ರ `ಪಡ್ಡೆ ಹುಲಿ’ ಅನೇಕ ವಿಶೇಷತೆಗಳನ್ನು ತುಂಬಿಕೊಂಡು ಈ ವಾರ ಬಿಡುಗಡೆ ಆಗುತ್ತಿದೆ.
‘ಪಡ್ಡೆ ಹುಲಿ’ ಚಿತ್ರದ ನಿರ್ಮಾಪಕ ಎಂ.ರಮೇಶ್ ರೆಡ್ಡಿ (ನಂಗ್ಲಿ). ತೇಜಸ್ವಿನಿ ಎಂಟರ್‍ಪ್ರೈಸಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಗುರು ದೇಶಪಾಂಡೆ. ಶ್ರೇಯಸ್ ಪ್ರಥಮ ಹೆಜ್ಜೆಗೆ ಡಾ.ವಿಷ್ಣುವರ್ಧನ ಅವರ ನೆರಳು ಇದೆ. ಚಿತ್ರವನ್ನು ಚಿತ್ರದುರ್ಗದ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಅವರನ್ನು ನೆನಪಿಸುವ ಹಾಗೆ ಕಥೆ ಮಾಡಲಾಗಿದೆ. ನಿಶ್ವಿಕ ನಾಯ್ಡು ಚಿತ್ರದ ಕಥಾ ನಾಯಕಿ. ವಿ ರವಿಚಂದ್ರನ್ ನಾಯಕ ಶ್ರೇಯಸ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ಮಧುಸೂಧನ್, ರಂಜಿತ್, ಚಿಕ್ಕಣ್ಣ, ಧರ್ಮಣ್ಣ ಹಾಗೂ ಇತರರು ಇದ್ದಾರೆ.
ಪಡ್ಡೆ ಹುಲಿ ಚಿತ್ರದ ಪ್ರಮುಖ ಅಂಶಗಳೆಂದರೆ ಹಳೆಯ ಹಾಡುಗಳನ್ನು ಮರುಸಂಯೋಜನೆ ಮಾಡಲಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರದಲ್ಲಿ ಬಸವಣ್ಣ ಅವರ ಕಳಬೇಡ…ಕೊಲಬೇಡ…ಹುಸಿಯ ನುಡಿಯಲೂ ಬೇಡ…, ಬಿ.ಆರ್.ಲಕ್ಷ್ಮಣ್ ರಾವ್ ಅವರ `ಹೇಳಿ ಹೋಗು ಕಾರಣ…, ಜಿ ಪಿ ರಾಜರತ್ನಂ ಅವರ `ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ…, ಡಿವಿಜಿ ಅವರ `ಬದುಕು ಜಟಕಾ ಬಂಡಿ…ವಿಧಿ ಅದರ ಸಾಹೇಬ…, ಕೆ.ಎಸ್.ನರಸಿಂಹ ಸ್ವಾಮಿ ಅವರ `ನಿನ್ನ ಪ್ರೇಮದ ಪರಿಯ ನಾನಾರಿಯೆ ಕನಕಾಂಗಿ ಹಾಡುಗಳನ್ನು ಮರು ಸಂಯೋಜನೆ ಮಾಡಿ ಹಾಡಿಸಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಐದು ಹಾಡುಗಳಿಗೆ ಅಜನಿಷ್ ಲೋಕನಾಥ್ ಸ್ವರ ಸಂಯೋಜನೆ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಸಹ ಇದೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಹಾಗೂ ವಿನೋದ್ ಸಾಹಸ, ಮದನ್ ಹರಿಣಿ, ವಿ.ಮುರಳಿ, ಕಲೈ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ.
ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಸಿನಿಮಾ ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಹೊಸ ಹುಡುಗನ ಚಿತ್ರವೊಂದನ್ನು ಈ ಪರಿಯಾಗಿ ಅದ್ಧೂರಿತನದೊಂದಿಗೆ ರೂಪಿಸಿರೋ ಪರಿ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಸಿನಿಮಾ ರಂಗದಲ್ಲಿಯೇ ಪಡ್ಡೆಹುಲಿ ನಾಯಕ ಶ್ರೇಯಸ್ ಮೊದಲ ಸಿನಿಮಾಗಾಗಿ ರೆಡಿಯಾಗಿರೋ ರೀತಿಯ ಬಗ್ಗೆ ಬೆರಗು ಹರಡಿಕೊಂಡಿದೆ. ಹಾಗಿದ್ದ ಮೇಲೆ ಯಾರೇ ಹೊಸಬರು ಸಿನಿಮಾ ಮಾಡಿದರೂ ಅದನ್ನು ಗಮನಿಸುತ್ತಾ ಬೆನ್ತಟ್ಟುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಬಗ್ಗೆ ಮಾತಾಡದಿರಲು ಸಾಧ್ಯವೇ?
ಪಡ್ಡೆಹುಲಿಯಾಗಿ ಮಿಂಚಲು ಸಜ್ಜಾಗಿರೋ ಶ್ರೇಯಸ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡಿ ಹೊಗಳಿದ್ದಾರೆ. ನಾಯಕನಾಗಬೇಕನ್ನೋ ಕನಸು ಮಾಮೂಲು. ಒಂದಷ್ಟು ಮಂದಿ ನಾಯಕರಾಗಿ ಅಡಿಯಿರಿಸುತ್ತಾರೆ. ಆದರೆ ಅದಕ್ಕೊಂದು ಪೂರ್ವ ತಯಾರಿ, ಕಠಿಣ ಪರಿಶ್ರಮ ಬೇಕೇ ಬೇಕೆಂಬುದು ಅನೇಕರಿಗೆ ಗೊತ್ತಿರೋದಿಲ್ಲ. ಆದರೆ ಶ್ರೇಯಸ್ ಮೊದಲ ಸಿನಿಮಾಗೆ ಹೇಗೆಲ್ಲ ತಯಾರಾಗಬೇಕೆಂಬುದಕ್ಕೆ ಮಾದರಿಯಂತಿದ್ದಾರೆಂದು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ವಿಷ್ಣು ಅಭಿಮಾನಿಗಳ ಜೊತೆಗೆ ದರ್ಶನ್ ಅಭಿಮಾನಿಗಳೂ ಕೂಡಾ ಪಡ್ಡೆಹುಲಿ ಚಿತ್ರದತ್ತ ಚಿತ್ತ ನೆಟ್ಟಿದ್ದಾರೆ. ಇದರಿಂದಾಗಿಯೇ ಪಡ್ಡೆಹುಲಿಯ ಗೆಲುವು ಮತ್ತಷ್ಟು ನಿಚ್ಚಳವಾದಂತಾಗಿದೆ.