Tag: Shreyas Iyer

  • ಕಿಂಗ್‌ ಕೊಹ್ಲಿ ದಾಖಲೆಯ ಶತಕದಾಟ – ಆಫ್ರಿಕಾಗೆ 327 ರನ್‌ ಗುರಿ ನೀಡಿದ ಭಾರತ

    ಕಿಂಗ್‌ ಕೊಹ್ಲಿ ದಾಖಲೆಯ ಶತಕದಾಟ – ಆಫ್ರಿಕಾಗೆ 327 ರನ್‌ ಗುರಿ ನೀಡಿದ ಭಾರತ

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ವಿಶ್ವಕಪ್‌ 2023 ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ದಾಖಲೆಯ ಶತಕದಾಟದ ನೆರವಿನೊಂದಿಗೆ ದ.ಆಫ್ರಿಕಾಗೆ ಭಾರತ 327 ರನ್‌ಗಳ ಗುರಿ ನೀಡಿದೆ.

    ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಜೊತೆಗೆ ಏಕದಿನ ವಿಶ್ವಕಪ್‌ನಲ್ಲಿ ಕ್ರಿಕೆಟ್‌ (World Cup 2023) ದೇವರು ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಇಂತಹ ಸ್ಮರಣೀಯ ಕ್ಷಣಗಳಿಗೆ ಇಂದಿನ ಪಂದ್ಯ ಸಾಕ್ಷಿಯಾಯಿತು. ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 326 ರನ್‌ಗಳಿಸಿತು. ಇದನ್ನೂ ಓದಿ: Virat Kohli – ಬರ್ತ್ಡೇಯಂದೇ ಸೆಂಚುರಿ ಬಾರಿಸಿದ 7ನೇ ಆಟಗಾರ..!

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಉತ್ತಮ ಇನ್ನಿಂಗ್ಸ್‌ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನಡೆಸಿದ ರೋಹಿತ್‌ ಶರ್ಮಾ 24 ಬಾಲ್‌ಗಳಿಗೆ 40 ರನ್‌ ಗಳಿಸಿ (6 ಫೋರ್‌, 2 ಸಿಕ್ಸರ್‌) ಗಳಿಸಿ ಅರ್ಧಶತಕ ವಂಚಿತರಾದರು. ಆದರೂ ತಂಡಕ್ಕೆ ಉತ್ತಮ ಆರಂಭಕ್ಕೆ ನೆರವಾದರು.

    ನಂತರ ಭರವಸೆ ಮೂಡಿಸಿದ್ದ ಗಿಲ್‌ ಮತ್ತು ಕಿಂಗ್‌ ಕೊಹ್ಲಿ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್‌ 22 ರನ್‌ ಗಳಿಸಿ ಕ್ಲೀನ್‌ ಬೌಲ್ಡ್‌ ಆಗಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ ಮತ್ತು ಶ್ರೇಯಸ್‌ ಐಯ್ಯರ್‌ ಜೋಡಿ ಉತ್ತಮ ಪ್ರದರ್ಶನ ನೀಡಿತು. ಈ ಜೋಡಿ 158 ಬಾಲ್‌ಗೆ 134 ರನ್‌ ದಾಖಲಿಸಿತು. ಆ ಮೂಲಕ ಆಫ್ರಿಕಾಗೆ ಸವಾಲಿನ ಮೊತ್ತದ ಗುರಿ ನೀಡಲು ನೆರವಾಯಿತು.

    ಬೌಂಡರಿ, ಸಿಕ್ಸರ್‌ಗಳ ಮೂಲಕ ಆಫ್ರಿಕಾ ಬೌಲರ್‌ಗಳನ್ನು ದಂಡಿಸಿದ ಐಯ್ಯರ್‌ ವೇಗವಾಗಿ ಅರ್ಧಶತಕ ಪೂರೈಸಿದರು. 87 ಬಾಲ್‌ಗೆ 77 ರನ್‌ಗಳಿಸಿ (7 ಫೋರ್‌, 2 ಸಿಕ್ಸರ್‌) ತಂಡಕ್ಕೆ ರನ್‌ ಏರುವಲ್ಲಿ ಪಾತ್ರ ವಹಿಸಿದರು. ಇದನ್ನೂ ಓದಿ: Virat Kohli Centuries: ಕ್ರಿಕೆಟ್‌ ದೇವರಿಗೆ ಸರಿಸಮನಾಗಿ ನಿಂತ ಕಿಂಗ್‌ ಕೊಹ್ಲಿ..!

    ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಈ ವೇಳೆ ಕೊಹ್ಲಿ ಜವಾಬ್ದಾರಿಯುತ ಆಟದ ಮೂಲಕ ಶತಕ ಸಿಡಿಸಿದರು. ಕೊಹ್ಲಿ 121 ಬಾಲ್‌ಗಳಿಗೆ 101 ರನ್‌ (10 ಫೋರ್‌) ಗಳಿಸಿ ಗಮನ ಸೆಳೆದರು. ಈ ಗ್ಯಾಪ್‌ನಲ್ಲಿ ಕೆ.ಎಲ್‌.ರಾಹುಲ್‌ ಕೇವಲ 8 ರನ್‌ಗೆ ಔಟಾಗಿ ಪೆವಿಲಿಯನ್‌ ಸೇರಿದರು. ಸೂರ್ಯಕುಮಾರ್‌ ಯಾದವ್‌ (22) ರನ್‌ಗಳಿಸಿ ಕ್ಯಾಚ್‌ ನೀಡಿ ನಿರ್ಗಮಿಸಿದರು.

    ಈ ವೇಳೆ ಕೊಹ್ಲಿಗೆ ಜೊತೆಗೆ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 15 ಬಾಲ್‌ಗಳಿಗೆ ಔಟಾಗದೇ 29 ರನ್‌ ಸಿಡಿಸಿದರು. ಅದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದರು. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ – ದಾಖಲೆಗಳ ಸರದಾರನ ಪಟ್ಟಿ ಇಲ್ಲಿದೆ

    ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ ಮಹಾರಾಜರು, ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್‌ ಪಡೆದರು.

  • World Cup 2023: ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಕ್ರಿಕೆಟ್‌ ದೇವರು

    World Cup 2023: ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಕ್ರಿಕೆಟ್‌ ದೇವರು

    ಮುಂಬೈ: 2023ರ ಏಕದಿನ ವಿಶ್ವಕಪ್‌ (World Cup 2023) ಕ್ರಿಕೆಟ್‌ ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಂತೆ ಅಜೇಯ ಓಟ ಮುಂದುವರಿಸಿರುವ ಟೀಂ ಇಂಡಿಯಾ (Team India) ಪ್ರಸಕ್ತ ವರ್ಷದಲ್ಲಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 357 ರನ್‌ ಬಾರಿಸಿದ ಭಾರತ ಎದುರಾಳಿ ಲಂಕಾ ತಂಡವನ್ನು ಕೇವಲ 55 ರನ್‌ಗಳಿಗೆ ಕಟ್ಟಿಹಾಕಿ 302 ರನ್‌ಗಳ ದಾಖಲೆಯ ಜಯ ಸಾಧಿಸಿತು.

     

    View this post on Instagram

     

    A post shared by Team India (@indiancricketteam)

    ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ ಬಳಿಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರಿಗೆ ಫಿಲ್ಡಿಂಗ್‍ಗಾಗಿ ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ಪದಕ ಪಡೆದರು. ಇದೇ ವೇಳೆ ರವೀಂದ್ರ ಜಡೇಜಾ ಅವರ ಫೀಲ್ಡಿಂಗ್‌ ಪ್ರಯತ್ನಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ ದಿಲೀಪ್ ʻಸೈಲೆಂಟ್ ಸ್ನೈಪರ್ʼಎಂಬ ಬಿರುದನ್ನೂ ನೀಡಿದರು.

    ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಕೊಟ್ಟ ಲೆಜೆಂಡ್‌: ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಉತ್ತೇಜನ ನೀಡಲು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಹೊಸ ಕಾನ್ಸೆಪ್ಟ್‌ ಮಾಡಿರುವ ತಂಡ ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಆಟಗಾರರಿಗೆ ಪದಕಗಳನ್ನು ನೀಡಿ ಹುರಿದುಂಬಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರಿಗೆ ಉತ್ತಮ ಫೀಲ್ಡಿಂಗ್‌ ಪ್ರದರ್ಶನಕ್ಕಾಗಿ ಡ್ರೆಸ್ಸಿಂಗ್‌ ರೂಮ್‌ ಚುಟುಕು ಸಮಾರಂಭದಲ್ಲಿ ಚಿನ್ನದ ಪದಕ ನೀಡಲಾಗಿತ್ತು. ಈ ಬಾರಿ ಶ್ರೇಯಸ್‌ ಅಯ್ಯರ್‌ ಅವರಿಗೆ ಉತ್ತಮ ಫೀಲ್ಡಿಂಗ್‌ಗಾಗಿ ಗೋಲ್ಡ್‌ ಮೆಡಲ್‌ ನೀಡಲಾಯಿತು.

    ವಿಶೇಷವೆಂದರೆ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲು ಟೀಂ ಇಂಡಿಯಾ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರನ್ನು ಆಹ್ವಾನಿಸಿತ್ತು. ಭಾರತೀಯ ಕ್ರಿಕೆಟ್‌ ಲೋಕದ ಲೆಜೆಂಡ್‌ ಎಂದೇ ಗುರುತಿಸಿಕೊಂಡಿರುವ ಸಚಿನ್‌ ತೆಂಡೂಲ್ಕರ್‌ ಅವರು ವರ್ಚುಲ್‌ನಲ್ಲಿ ಪ್ರಶಸ್ತಿಗೆ ಶ್ರೇಯಸ್‌ ಅಯ್ಯರ್‌ ಅವರ ಹೆಸರನ್ನು ಪ್ರಕಟಿಸುವ ಮೂಲಕ ಇತರ ಆಟಗಾರರಿಗೂ ಸರ್ಪ್ರೈಸ್‌ ಕೊಟ್ಟರು. ಇದೇ ವೇಳೆ ಟೀಂ ಇಂಡಿಯಾ ಆಟಗಾರರನ್ನು ಶ್ಲಾಘಿಸಿದ ಸಚಿನ್‌ ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್‌ ವೇಳೆ ಸಹಿ ಹಾಕುತ್ತಿದ್ದ ವಿಚಾರವನ್ನು ಬಹಿರಂಗ ಪಡಿಸಿದರು.

    ಬಳಿಕ ಮಾತನಾಡುತ್ತಾ, ರೋಹಿತ್‌ ಹಿಂದಿನ ದಿನ ನನ್ನನ್ನು ಭೇಟಿಯಾಗಿ ಅತ್ಯುತ್ತಮ ಫೀಲ್ಡರ್‌ ಪದಕ ನೀಡುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಇದು ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್‌ ಟೂರ್ನಿಯನ್ನು ನೆನಪಿಸಿತು, ಅಂದು ಟೂರ್ನಿ ಆರಂಭವಾಗುವುದಕ್ಕೂ ಮುನ್ನ ʻನಾನು ಮಾಡಬಹುದು, ನಾವೂ ಮಾಡಬಹುದುʼ ಎಂಬ ಘೋಷವಾಕ್ಯದೊಂದಿಗೆ ನಮ್ಮಲ್ಲೊಂದು ಚಾರ್ಟ್‌ ಇತ್ತು. ಪ್ರತಿಯೊಬ್ಬರು ಹೋಗುವ ಮುನ್ನ ಆ ಚಾರ್ಟ್‌ಗೆ ಸಹಿ ಹಾಕಬೇಕಿತ್ತು. ಇದು ನಮ್ಮಲ್ಲಿ ಬದ್ಧತೆಯ ಬಗ್ಗೆ ಮತ್ತು ದೇಶಕ್ಕಾಗಿ, ನನ್ನ ತಂಡಕ್ಕಾಗಿ 100% ಶ್ರಮ ಹಾಕುತ್ತೇನೆ ಎಂಬ ಸೂಚಕವಾಗಿತ್ತು. ಅದೇ ರೀತಿ ಈಗಲೂ ಫೀಲ್ಡಿಂಗ್‌ ಪದಕಗಳು ತಂಡದ ಬಗ್ಗೆ ನಿಮಗಿರುವ ಬದ್ಧತೆಯ ಪ್ರತಿಬಿಂಬವಾಗಿದೆ. ನಿಮ್ಮ ಸಹೋದ್ಯೋಗಿಗಾಗಿ, ನಿಮ್ಮ ತಂಡಕ್ಕಾಗಿ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬುದು ನಿಮ್ಮಲ್ಲಿರಬೇಕು. ನಾನು ಇಲ್ಲಿಯವರೆಗೆ ನೀವು ಆಡಿದ ಪಂದ್ಯಗಳನ್ನು ತುಂಬಾ ಇಷ್ಟಪಟ್ಟಿದ್ದೇನೆ. ಇದೇ ಫಾರ್ಮ್‌ ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಫೀಲ್ಡರ್‌ ಆಫ್‌ ದಿ ಮ್ಯಾಚ್‌ ಪದಕ ಪಡೆದಿದ್ದರು. ಚೊಚ್ಚಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಈ ಪದಕ ತನ್ನದಾಗಿಸಿಕೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Ind vs Aus: ಬೆಂಕಿ ಬ್ಯಾಟಿಂಗ್‌, ಮಿಂಚಿನ ಬೌಲಿಂಗ್‌; ಆಸೀಸ್‌ ವಿರುದ್ಧ ಭಾರತಕ್ಕೆ ಸರಣಿ ಜಯ

    Ind vs Aus: ಬೆಂಕಿ ಬ್ಯಾಟಿಂಗ್‌, ಮಿಂಚಿನ ಬೌಲಿಂಗ್‌; ಆಸೀಸ್‌ ವಿರುದ್ಧ ಭಾರತಕ್ಕೆ ಸರಣಿ ಜಯ

    ಇಂದೋರ್‌: ಶ್ರೇಯಸ್‌ ಅಯ್ಯರ್‌, ಶುಭಮನ್‌ ಗಿಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ ಹಾಗೂ ಪ್ರಸಿದ್ಧ್‌ ಕೃಷ್ಣ ಮಿಂಚಿನ ಬೌಲಿಂಗ್‌ ದಾಳಿ ನೆರವಿನಿಂದ ಭಾರತ‌, ಆಸ್ಟ್ರೇಲಿಯಾ ವಿರುದ್ಧ 99 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನ 2-0 ಅಂತರದಲ್ಲಿ ಗೆದ್ದು ಸರಣಿ ಗೆದ್ದುಕೊಂಡಿದೆ.

    ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 399 ರನ್‌ ಬಾರಿಸಿತ್ತು. 400 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ ಕೆಲಕಾಲ ಮಳೆ ಅಡ್ಡಿಯುಂಟು ಮಾಡಿತ್ತು. ಇದರಿಂದ ಡಕ್ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಆಸ್ಟ್ರೇಲಿಯಾಕ್ಕೆ 33 ಓವರ್‌ಗಳಲ್ಲಿ 317 ರನ್‌ಗಳ ಗುರಿ ನೀಡಲಾಯಿತು. ಇದರಿಂದ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಲು ಮುಂದಾದ ಆಸೀಸ್‌ ಬ್ಯಾಟರ್‌ಗಳು ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ತುತ್ತಾದರು. ಅಂತಿಮವಾಗಿ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡಿತು.

    ಆಸೀಸ್‌ ಪರ ಆರಂಭಿಕನಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌, ಕೊನೆಯಲ್ಲಿ ಸೀನ್‌ ಅಬಾಟ್‌ ಸ್ಪೋಟಕ ಆರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದೆಲ್ಲ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಕಳಪೆ ಪ್ರದರ್ಶನ ನೀಡಿದರು. ಡೇವಿಡ್‌ ವಾರ್ನರ್‌ 53 ರನ್‌ (39 ಎಸೆತ, 7 ಬೌಂಡರಿ, 1 ಸಿಕ್ಸರ್‌) ಗಳಿಸಿದ್ರೆ, ಅಬಾಟ್‌ 36 ಎಸೆತಗಳಲ್ಲಿ 54 ರನ್‌ (5‌ ಸಿಕ್ಸರ್‌, 4 ಬೌಂಡರಿ) ಚಚ್ಚಿದರು.

    ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 55 ಬೌಂಡರಿ, 27 ಸಿಕ್ಸರ್‌ಗಳು ಸಿಡಿದವು. ಟೀಂ ಇಂಡಿಯಾ ಪರ 31 ಬೌಂಡರಿ, 18 ಸಿಕ್ಸರ್‌ಗಳು ದಾಖಲಾದರೆ, ಆಸ್ಟ್ರೇಲಿಯಾ ಪರ 24 ಬೌಂಡರಿ, 9 ಸಿಕ್ಸರ್‌ಗಳು ದಾಖಲಾದವು. ಟೀಂ ಇಂಡಿಯಾ ಪರ ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ ತಲಾ 3 ವಿಕೆಟ್‌ ಕಿತ್ತರೆ, ಪ್ರಸಿದ್ಧ್‌ ಕೃಷ್ಣ 2 ವಿಕೆಟ್‌ ಹಾಗೂ ಮೊಹಮ್ಮದ್‌ ಶಮಿ 1 ವಿಕೆಟ್‌ ಪಡೆದು ತೃಪ್ತಿಪಟ್ಟುಕೊಂಡರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು. ಆರಂಭಿಕ ಋತುರಾಜ್‌ ಗಾಯಕ್ವಾಡ್‌ 12 ಎಸೆತಗಳಲ್ಲಿ 8 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

    ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಬರೋಬ್ಬರಿ 200 ರನ್‌ಗಳ ಜೊತೆಯಾಟ ನೀಡಿದರು. ಆಸೀಸ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ ಈ ಜೋಡಿ 164 ಎಸೆತಗಳಲ್ಲಿ 200 ರನ್‌ಗಳ ಜೊತೆಯಾಟ ನೀಡಿತು. ಶ್ರೇಯಸ್‌ ಅಯ್ಯರ್‌ 90 ಎಸೆತಗಳಲ್ಲಿ 105 ರನ್‌ (11 ಬೌಂಡರಿ, 3 ಸಿಕ್ಸರ್‌) ಬಾರಿಸಿದ್ರೆ. ಶುಭಮನ್‌ ಗಿಲ್‌ 97 ಎಸೆತಗಳಲ್ಲಿ 104 ರನ್‌ (6 ಬೌಂಡರಿ, 4 ಸಿಕ್ಸರ್‌) ಚಚ್ಚಿದರು.

    ನಂತರ ಕ್ರೀಸ್‌ಗಳಿದ ಟೀಂ ಇಂಡಿಯಾ ಬ್ಯಾಟರ್ಸ್‌ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. 136.84 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೆ.ಎಲ್‌ ರಾಹುಲ್‌ 38 ಎಸೆತಗಳಲ್ಲಿ 52 ರನ್‌ (3 ಬೌಂಡರಿ, 3 ಸಿಕ್ಸರ್‌) ಚಚ್ಚಿದರೆ, 172.22 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ 18 ಎಸೆತಗಳಲ್ಲಿ 31 ರನ್‌ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು.

    ಸೂರ್ಯ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ: ಕೊನೆಯಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ ಟಿ20 ಶೈಲಿಯಲ್ಲೇ ಬ್ಯಾಟಿಂಗ್‌ ಮಾಡುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದರು. ಮೊದಲ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದ ಸೂರ್ಯ ಇಂದು 37 ಎಸೆತಗಳಲ್ಲಿ 72 ರನ್‌ (6 ಸಿಕ್ಸರ್‌, 6 ಬೌಂಡರಿ) ಬಾರಿಸುವ ಮೂಲಕ ಟೀಂ ಇಂಡಿಯಾ 400 ರನ್‌ಗಳ ಗುರಿ ನೀಡಲು ಸಾಧ್ಯವಾಯಿತು. ರವೀಂದ್ರ ಜಡೇಜಾ 9 ಎಸೆತಗಳಲ್ಲಿ 13 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಆಸೀಸ್‌ ಪರ ಕ್ಯಾಮರೂನ್‌ ಗ್ರೀನ್‌ 2 ವಿಕೆಟ್‌ ಕಿತ್ತರೆ, ಜೋಶ್‌ ಹ್ಯಾಜಲ್‌ವುಡ್‌, ಸೇನ್‌ ಅಬ್ಬಾಟ್‌, ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Ind vs Aus ಪಂದ್ಯಕ್ಕೆ ಮಳೆ ಅಡ್ಡಿ; ಓವರ್‌ ಕಡಿತಗೊಳಿಸಲು ನಿರ್ಧಾರ – ಆಸೀಸ್‌ಗೆ ಒಲಿಯುತ್ತಾ ಲಕ್‌?

    Ind vs Aus ಪಂದ್ಯಕ್ಕೆ ಮಳೆ ಅಡ್ಡಿ; ಓವರ್‌ ಕಡಿತಗೊಳಿಸಲು ನಿರ್ಧಾರ – ಆಸೀಸ್‌ಗೆ ಒಲಿಯುತ್ತಾ ಲಕ್‌?

    ಇಂದೋರ್‌: ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಇದರಿಂದ ಓವರ್‌ ಕಡಿತಗೊಳಿಸಿ ಪಂದ್ಯ ಮುಂದುವರಿಸಲು ನಿರ್ಧರಿಸಲಾಗಿದೆ.

    ಮೊದಲು ಬ್ಯಾಟಿಂಗ್‌ ಮಾಡಿರುವ ಟೀಂ ಇಂಡಿಯಾ 50 ಓವರ್‌ಗಳಲ್ಲಿ 399 ರನ್‌ ಗಳಿಸಿದ್ದು, ಎದುರಾಳಿ ಆಸ್ಟ್ರೇಲಿಯಾಕ್ಕೆ 400 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ಶ್ರೇಯಸ್‌, ಗಿಲ್‌ ದ್ವಿಶತಕ ಜೊತೆಯಾಟ, ಸೂರ್ಯನ ಆರ್ಭಟ – ಆಸೀಸ್‌ಗೆ ದಾಖಲೆಯ 400 ರನ್‌ಗಳ ಗುರಿ

    ಚೇಸಿಂಗ್‌ ಆರಂಭಿಸಿರುವ ಆಸ್ಟ್ರೇಲಿಯಾ 2ನೇ ಓವರ್‌ನಲ್ಲೇ ಕೇವಲ 9 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದ್ರೆ ಡೇವಿಡ್‌ ವಾರ್ನರ್‌ ಹಾಗೂ ಮಾರ್ನಸ್‌ ಲಾಬುಶೇನ್‌ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸಿದ್ದರು. ಆಸೀಸ್‌ 9 ಓವರ್‌ಗಳಲ್ಲಿ 56 ರನ್‌ ಗಳಿಸಿ ಆಡುತ್ತಿದ್ದಂತೆ ಮಳೆ ಅಡ್ಡಿಯುಂಟು ಮಾಡಿತು.‌

    ಸುಮಾರು 20 ನಿಮಿಷಗಳಿಂದ ಮಳೆ ಅಡ್ಡಿಯುಂಟು ಮಾಡಿದೆ. ಹಾಗಾಗಿ ಓವರ್‌ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಟೀಂ ಇಂಡಿಯಾ ಬ್ಯಾಟಿಂಗ್‌ ವೇಳೆಯು ಮಳೆ ಅಡಚಣೆಯುಂಟುಮಾಡಿತ್ತು. ಇದನ್ನೂ ಓದಿ: Asian Games Women’s Cricket: ಬಾಂಗ್ಲಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೇಯಸ್‌, ಗಿಲ್‌ ದ್ವಿಶತಕ ಜೊತೆಯಾಟ, ಸೂರ್ಯನ ಆರ್ಭಟ – ಆಸೀಸ್‌ಗೆ ದಾಖಲೆಯ 400 ರನ್‌ಗಳ ಗುರಿ

    ಶ್ರೇಯಸ್‌, ಗಿಲ್‌ ದ್ವಿಶತಕ ಜೊತೆಯಾಟ, ಸೂರ್ಯನ ಆರ್ಭಟ – ಆಸೀಸ್‌ಗೆ ದಾಖಲೆಯ 400 ರನ್‌ಗಳ ಗುರಿ

    ಇಂದೋರ್‌: ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ (Team India) 5 ವಿಕೆಟ್‌ ನಷ್ಟಕ್ಕೆ 399 ರನ್‌ ಸಿಡಿಸಿದ್ದು, ಆಸ್ಟ್ರೇಲಿಯಾಗೆ (Australia) 400 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ.

    ಶ್ರೇಯರ್‌ ಅಯ್ಯರ್‌ (Shreyas Iyer) ಹಾಗೂ ಶುಭಮನ್‌ ಗಿಲ್‌ (Shubman Gill) ದ್ವಿಶತಕದ ಜೊತೆಯಾಟ, ಸೂರ್ಯಕುಮಾರ್‌ ಯಾದವ್‌ ಹಾಗೂ ಕೆ.ಎಲ್‌ ರಾಹುಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ 399‌ ರನ್‌ ಬಾರಿಸಿದೆ. ಸಿಕ್ಸರ್‌ ಬೌಂಡರಿ ಆಟದಲ್ಲಿ ಟೀಂ ಇಂಡಿಯಾ ಪರ 31 ಬೌಂಡರಿ, 18 ಸಿಕ್ಸರ್‌ಗಳು ದಾಖಲಾಗಿವೆ. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸಿಡಿಸಿದ ದಾಖಲೆಯ ರನ್‌ ಕೂಡ ಇದಾಗಿದೆ.

    2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸೀಸ್‌ ವಿರುದ್ಧ ಭಾರತ 6 ವಿಕೆಟ್‌ಗೆ 383 ರನ್‌ ಗಳಿಸಿತ್ತು. ಇದು ಈವರೆಗೆ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ದಾಖಲಿಸಿದ್ದ ಅತಿಹೆಚ್ಚು ರನ್‌ ಆಗಿತ್ತು. ಇದೀಗ 10 ವರ್ಷಗಳ ಬಳಿಕ ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 399ರನ್‌ ಬಾರಿಸಿ ದಾಖಲೆ ನಿರ್ಮಿಸಿದೆ.

    ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು. ಆರಂಭಿಕ ಋತುರಾಜ್‌ ಗಾಯಕ್ವಾಡ್‌ 12 ಎಸೆತಗಳಲ್ಲಿ 8 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

    ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಬರೋಬ್ಬರಿ 200 ರನ್‌ಗಳ ಜೊತೆಯಾಟ ನೀಡಿದರು. ಆಸೀಸ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ ಈ ಜೋಡಿ 164 ಎಸೆತಗಳಲ್ಲಿ 200 ರನ್‌ಗಳ ಜೊತೆಯಾಟ ನೀಡಿತು. ಶ್ರೇಯಸ್‌ ಅಯ್ಯರ್‌ 90 ಎಸೆತಗಳಲ್ಲಿ 105 ರನ್‌ (11 ಬೌಂಡರಿ, 3 ಸಿಕ್ಸರ್‌) ಬಾರಿಸಿದ್ರೆ. ಶುಭಮನ್‌ ಗಿಲ್‌ 97 ಎಸೆತಗಳಲ್ಲಿ 104 ರನ್‌ (6 ಬೌಂಡರಿ, 4 ಸಿಕ್ಸರ್‌) ಚಚ್ಚಿದರು.

    ನಂತರ ಕ್ರೀಸ್‌ಗಿಳಿದ ಟೀಂ ಇಂಡಿಯಾ ಬ್ಯಾಟರ್ಸ್‌ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. 136.84 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೆ.ಎಲ್‌ ರಾಹುಲ್‌ 38 ಎಸೆತಗಳಲ್ಲಿ 52 ರನ್‌ (3 ಬೌಂಡರಿ, 3 ಸಿಕ್ಸರ್‌) ಚಚ್ಚಿದರೆ, 172.22 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ 18 ಎಸೆತಗಳಲ್ಲಿ 31 ರನ್‌ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು.

    ಸೂರ್ಯ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ:
    ಕೊನೆಯಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಟಿ20 ಶೈಲಿಯಲ್ಲೇ ಬ್ಯಾಟಿಂಗ್‌ ಮಾಡುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದರು. ಮೊದಲ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದ ಸೂರ್ಯ ಇಂದು 37 ಎಸೆತಗಳಲ್ಲಿ 72 ರನ್‌ (6 ಸಿಕ್ಸರ್‌, 6 ಬೌಂಡರಿ) ಬಾರಿಸುವ ಮೂಲಕ ಟೀಂ ಇಂಡಿಯಾ 400 ರನ್‌ಗಳ ಗುರಿ ನೀಡಲು ಸಾಧ್ಯವಾಯಿತು. ರವೀಂದ್ರ ಜಡೇಜಾ 9 ಎಸೆತಗಳಲ್ಲಿ 13 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಆಸೀಸ್‌ ಪರ ಕ್ಯಾಮರೂನ್‌ ಗ್ರೀನ್‌ 2 ವಿಕೆಟ್‌ ಕಿತ್ತರೆ, ಜೋಶ್‌ ಹ್ಯಾಜಲ್‌ವುಡ್‌, ಸೇನ್‌ ಅಬ್ಬಾಟ್‌, ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಮುಂಬೈ: ಭಾರೀ ಕುತೂಹಲ ಕೆರಳಿಸಿದ್ದ 2023ರ ಆವೃತ್ತಿಯ ಏಷ್ಯಾಕಪ್ (Asia Cup 2023) ಟೂರ್ನಿಯ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ವರೆಗೆ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾ (SriLanka) ದೇಶಗಳು ಜಂಟಿ ಆತಿಥ್ಯ ವಹಿಸಲಿವೆ.

    ಈ ಟೂರ್ನಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಏಷ್ಯಾಕಪ್ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯೇ ಇದ್ದರೂ, ಭಾರತ-ಪಾಕಿಸ್ತಾನದಲ್ಲಿ (Ind vs Pak) ಆಡಲು ಒಪ್ಪಿಗೆ ಸೂಚಿಸದ ಕಾರಣ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾಕಪ್ ಕ್ರಿಕೆಟ್ ಸಮಿತಿ (ACC) ನಿರ್ಧರಿಸಿದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳಲಿದ್ದು, 3 ತಂಡಗಳ 2 ಗುಂಪು ರಚಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ನೇಪಾಳ `A’ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು `B’ ಗುಂಪಿನಲ್ಲಿ ಇರಲಿವೆ. ಎರಡು ಗುಂಪಿನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಲು ಸೂಪರ್ ಫೋರ್ ಪ್ರವೇಶಿಸಲಿವೆ. ರಾಬಿನ್ ರೌಂಡ್ಸ್ ಮಾದರಿಯಲ್ಲಿ ನಡೆಯಲಿರುವ ಸೂಪರ್ ಫೋರ್ ಹಂತದಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ.

    ಏಷ್ಯಾಕಪ್‌ನ 4 ಪಂದ್ಯಗಳು ಮಾತ್ರ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆಯಲಿದ್ದು, 9 ಪಂದ್ಯಗಳು ಶ್ರೀಲಂಕಾದ ಪಲ್ಲೆಕೆಲೆ ಹಾಗೂ ಕ್ಯಾಂಡಿನಗರಗಳಲ್ಲಿ ನಡೆಯಲಿದೆ. ಆದ್ರೆ ಪಂದ್ಯಗಳು ನಡೆಯವ ದಿನಾಂಕಗಳನ್ನ ಏಷ್ಯಾಕಪ್ ಕ್ರಿಕೆಟ್ ಸಮಿತಿ ಇನ್ನಷ್ಟೇ ಪ್ರಕಟಿಸಬೇಕಿದೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ:
    ಗಾಯದ ಸಮಸ್ಯೆಯಿಂದಾಗಿ T20 ವಿಶ್ವಕಪ್ (T20 Worldcup), 2023ರ ಐಪಿಎಲ್ ಟೂರ್ನಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟೂರ್ನಿಗಳಲ್ಲಿ ಅವಕಾಶ ಕಳೆದುಕೊಂಡ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಏಕದಿನ ಏಷ್ಯಾಕಪ್ ವೇಳೆಗೆ ಟೀಂ ಇಂಡಿಯಾಕ್ಕೆ ಮರಳುವ ಸಾಧ್ಯತೆಯಿದೆ. ಜೊತೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಹೊರಗುಳಿದ ಶ್ರೇಯಸ್ ಅಯ್ಯರ್ ಸಹ ಟೀಂ ಇಂಡಿಯಾಕ್ಕೆ ಉತ್ತಮ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

  • IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 16 ನೇ ಆವೃತ್ತಿ ಮಾ.31 ರಂದು ಪ್ರಾರಂಭವಾಗಲಿದೆ. ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದ್ದು, ಟೂರ್ನಿಯ ಆರಂಭಕ್ಕೂ ಮುನ್ನ, ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯಲಿರುವ 5 ಆಟಗಾರ ಪಟ್ಟಿ ಇಲ್ಲಿದೆ.

    ಜಸ್ಪ್ರೀತ್ ಬುಮ್ರಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಬುಮ್ರಾ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬರುವ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ರಿಷಬ್ ಪಂತ್: ಕಾರು ಅಪಘಾತದಿಂದ ಪಂತ್, ತೀವ್ರಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

    ಜಾನಿ ಬೈರ್‍ಸ್ಟೋವ್: ಐಪಿಎಲ್ ಅತ್ಯಂತ ಪ್ರಭಾವಶಾಲಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಬೈರ್‍ಸ್ಟೋವ್ (Jonny Bairstow), ಕಾಲು ಮುರಿತದಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಪಂಜಾಬ್ ಕಿಂಗ್ಸ್ ಅವರ ಬದಲಿಗೆ ಮ್ಯಾಟ್ ಶಾರ್ಟ್ ಅವರನ್ನು ಆಯ್ಕೆಮಾಡಿಕೊಂಡಿದೆ.

    KKR

    ಕೈಲ್ ಜೆಮಿಸನ್: ಬೆನ್ನಿನ ಗಾಯದಿಂದ ಶಸ್ತ್ರಚಿಕಿತ್ಸೆಗೊಳಗಾದ ಜೆಮಿಸನ್ (Kyle Jamieson) ನಾಲ್ಕು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಸಿಎಸ್‍ಕೆ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

    ಶ್ರೇಯಸ್ ಅಯ್ಯರ್: ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ (Shreyas Iyer) ಹೊರಗುಳಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‍ನ ಇವರ ಸ್ಥಾನವನ್ನು ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವರನ್ನು ತುಂಬಲಿದ್ದಾರೆ. ಇದನ್ನೂ ಓದಿ: ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

  • ಅಶ್ವಿನ್‌, ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ – ಕ್ಲೀನ್‌ ಸ್ವೀಪ್‌ಗೈದ ಭಾರತ

    ಅಶ್ವಿನ್‌, ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ – ಕ್ಲೀನ್‌ ಸ್ವೀಪ್‌ಗೈದ ಭಾರತ

    ಮೀರ್‌ಪುರ್‌: ಅಶ್ವಿನ್‌(Ashwin) ಮತ್ತು ಶ್ರೇಯಸ್‌ ಅಯ್ಯರ್‌(Shreyas Iyer) ಸಾಹಸದಿಂದ ಬಾಂಗ್ಲಾದೇಶದ(Bangladesh) ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಭಾರತ(India) 3 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್‌ ಗುರಿ ಪಡೆದ ಭಾರತ ಶ್ರೇಯಸ್‌ ಅಯ್ಯರ್‌ ಮತ್ತು ಅಶ್ವಿನ್‌ ಅವರು ಮುರಿಯದ 8ನೇ ವಿಕೆಟಿಗೆ 105 ಎಸೆತಗಳಲ್ಲಿ 71 ರನ್‌ ಜೊತೆಯಾಟವಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮವಾಗಿ ಇಬ್ಬರ ಉತ್ತಮ ಜೊತೆಯಾಟದಿಂದ ಭಾರತ 47 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 145 ರನ್‌ ಹೊಡೆಯಿತು.

    ಮೂರನೇ ದಿನದಾಟಕ್ಕೆ 4 ವಿಕೆಟ್‌ ಕಳೆದುಕೊಂಡು 45 ರನ್‌ಗಳಿಸಿದ್ದ ಭಾರತ 29 ರನ್‌ ಸೇರಿಸಿ ಮೂರು ವಿಕೆಟ್‌ ಕಳೆದುಕೊಂಡಿತು. ಈ ಸಮಯದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಅಶ್ವಿನ್‌ ಜೊತೆಯಾದರು. ಶ್ರೇಯಸ್‌ ಅಯ್ಯರ್‌ 29 ರನ್‌(46 ಎಸೆತ, 4 ಬೌಂಡರಿ) ಹೊಡೆದರೆ ಅಶ್ವಿನ್‌ 42 ರನ್‌(62 ಎಸೆತ, 4 ಬೌಂಡರಿ, 1 ಸಿಕ್ಸರ್‌) ಬಾರಿಸಿದರು.

    ಅಕ್ಷರ್‌ ಪಟೇಲ್‌ 34 ರನ್‌, ಜಯದೇವ್‌ ಉನಾದ್ಕತ್‌ 13, ರಿಷಭ್‌ ಪಂತ್‌ 9 ರನ್‌ ಗಳಿಸಿ ಔಟಾದರು. ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 188 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು.

    ಸಂಕ್ಷಿಪ್ತ ಸ್ಕೋರ್‌
    ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 227
    ಭಾರತ ಮೊದಲ ಇನ್ನಿಂಗ್ಸ್‌ 314
    ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ 231
    ಭಾರತ ಎರಡನೇ ಇನ್ನಿಂಗ್ಸ್‌ 145

    Live Tv
    [brid partner=56869869 player=32851 video=960834 autoplay=true]

  • ಬಾಂಗ್ಲಾದೇಶಕ್ಕೆ ರಿಷಭ್ ಪಂಚ್ – ಭಾರತಕ್ಕೆ 80 ರನ್‌ಗಳ ಅಲ್ಪ ಮುನ್ನಡೆ

    ಬಾಂಗ್ಲಾದೇಶಕ್ಕೆ ರಿಷಭ್ ಪಂಚ್ – ಭಾರತಕ್ಕೆ 80 ರನ್‌ಗಳ ಅಲ್ಪ ಮುನ್ನಡೆ

    ಢಾಕಾ: ರಿಷಭ್ ಪಂತ್ (Rishabh Pant), ಶ್ರೇಯಸ್ ಅಯ್ಯರ್ (Shreyas Iyer) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ 2ನೇ ಟೆಸ್ಟ್‌ನ ಎರಡನೇ ದಿನದ ಅಂತ್ಯಕ್ಕೆ 80 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಬಾಂಗ್ಲಾದೇಶದ (Bangladesh) ವಿರುದ್ಧ ಮೊದಲ ಟೆಸ್ಟ್‌ನಲ್ಲಿ 188 ರನ್‌ಗಳ ಜಯ ಸಾಧಿಸಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ (Team India), 2ನೇ ಟೆಸ್ಟ್‌ನಲ್ಲೂ ಬ್ಯಾಟಿಂಗ್, ಬೌಲಿಂಗ್ ಅಬ್ಬರ ಮುಂದುವರಿಸಿದೆ. 2ನೇ ದಿನದಾಟದಲ್ಲಿ 80 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: 227 ರನ್‍ಗೆ ಬಾಂಗ್ಲಾ ಆಲೌಟ್ – ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದ ಉನಾದ್ಕಟ್

    2ನೇ ಟೆಸ್ಟ್ ಮೊದಲ ದಿನ 73.5 ಓವರ್‌ಗಳಲ್ಲಿ ಭಾರತ 227 ರನ್‌ಗಳಿಗೆ ಬಾಂಗ್ಲಾದೇಶ (Bangladesh) ತಂಡವನ್ನು ಕಟ್ಟಿಹಾಕಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ 8 ಓವರ್‌ಗಳಲ್ಲಿ 19 ರನ್ ಬಾರಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೇ 208 ರನ್‌ಗಳ ಹಿನ್ನಡೆ ಕಾಯ್ದುಕೊಂಡಿತ್ತು.

    ಇಂದು ಮತ್ತೆ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಎರಡನೇ ದಿನದ ಅಂತ್ಯಕ್ಕೆ 56.3 ಓವರ್‌ಗಳಲ್ಲಿ 314 ರನ್ ಗಳಿಸಿತು. ನಂತರ ಕ್ರೀಸ್‌ಗಿಳಿದ ಬಾಂಗ್ಲಾದೇಶ 6 ಓವರ್‌ಗಳಲ್ಲಿ 7 ರನ್‌ಗಳಿಸಿ, 8 ರನ್‌ಗಳ ಹಿನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ರನ್‌ ಓಡಲು ಪಂತ್‌ ನಿರಾಕರಣೆ – ಗುರಾಯಿಸಿದ ಕೊಹ್ಲಿ

    2ನೇ ದಿನದ ಇನ್ನಿಂಗ್ಸ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ (KL Rahul) ಹಾಗೂ ಶುಭಮನ್ ಗಿಲ್ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ರಾಹುಲ್ 45 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದರೆ, ಗಿಲ್ 39 ಎಸೆತಗಳಲ್ಲಿ 20 ರನ್ ಗಳಿಸಿದರು. ನಂತರದಲ್ಲಿ ಚೇತೇಶ್ವರ್ ಪೂಜಾರ (55 ಎಸೆತ) ಹಾಗೂ ವಿರಾಟ್ ಕೊಹ್ಲಿ (Virat Kohli) (73 ಎಸೆತ) ತಲಾ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಈ ವೇಳೆ ಸತತ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ಬರು ಆಟಗಾರರು ಸಿಕ್ಸರ್, ಬೌಂಡರಿ ಬಾರಿಸುವ ಜೊತೆಗೆ ಉತ್ತಮ ಇನ್ನಿಂಗ್ಸ್ ಕಟ್ಟಿದರು.

    104 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ 94 ರನ್ (7 ಬೌಂಡರಿ, 5 ಸಿಕ್ಸರ್) ಚಚ್ಚಿ ಶತಕ ವಂಚಿತರಾದರೆ, 105 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 87 ರನ್ (10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು.

    ನಂತರದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ 4 ರನ್, ಆರ್.ಅಶ್ವಿನ್ 12 ರನ್, ಉಮೇಶ್ ಯಾದವ್ 14 ರನ್, ಮೊಹಮ್ಮದ್ ಸಿರಾಜ್ 7 ರನ್ ಗಳಿಸಿದರೆ, ಜಯದೇವ್ ಉನಾದ್ಕಟ್ 14 ರನ್ ಗಳಿಸಿ ಅಜೇಯರಾಗುಳಿದರು.

    Live Tv
    [brid partner=56869869 player=32851 video=960834 autoplay=true]

  • ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

    ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

    ವೆಲ್ಲಿಂಗ್ಟನ್‌: ಟಾಮ್‌ಲ್ಯಾಥಮ್‌ (Tom Latham) ಭರ್ಜರಿ ಶತಕ ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ (Kane Williamson) ಅರ್ಧಶತಕದ ನೆರವಿನಿಂದ ಕಿವೀಸ್‌ ಪಡೆ ಟೀಂ ಇಂಡಿಯಾ (Team India) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (New Zealand) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತ್ತು. 307 ರನ್‌ ಗುರಿ ಬೆನ್ನತ್ತಿದ ಆತಿಥೇಯ ನ್ಯೂಜಿಲೆಂಡ್ ತಂಡ 47.1 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 309 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕಿವೀಸ್‌ಗೆ ಆರಂಭಿಕ ಆಘಾತ:
    ಕಿವೀಸ್‌ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಡಿವೋನ್‌ ಕಾನ್ವೆ ಮತ್ತು ಫಿನ್ ಅಲೆನ್ ಅತೀ ಬೇಗನೆ ಪೆವಿಲಿಯನ್‌ ಸೇರಿದರು. 7.3 ಓವರ್‌ನಲ್ಲಿ ಮೊದಲ ವಿಕೆಟ್‌ ಜೊತೆಯಾಟಕ್ಕೆ ಕೇವಲ 35 ರನ್‌ ದಾಖಲಿಸಿತ್ತು. ಫಿನ್‌ ಅಲೆನ್‌ 25 ಎಸೆತಗಳಲ್ಲಿ 25 ರನ್‌ ಗಳಿಸಿದ್ರೆ, ಡಿವೋನ್‌ ಕಾನ್ವೆ 42 ಎಸೆತಗಳಲ್ಲಿ 24 ರನ್‌ ಗಳಿಸಿ ಔಟಾದರು.

    ಈ ವೇಳೆ ನಾಯಕ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ಆಸರೆಯಾದರು. ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿ ಜವಾಬ್ದಾರಿಯುತ ಅರ್ಧ ಶತಕ ಸಿಡಿಸಿದ್ರು. ಅವರೊಂದಿಗೆ ಜೊತೆಯಾದ ಟಾಮ್ ಲ್ಯಾಥಮ್ ಭರ್ಜರಿ ಬ್ಯಾಟಿಂಗ್‌ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ದಾಳಿಯನ್ನ ಧೂಳಿಪಟ ಮಾಡಿ, ಕಿವೀಸ್‌ ಪಡೆಗೆ ಗೆಲುವು ತಂದುಕೊಟ್ಟರು.

    ಶತಕ ವಂಚಿತ ನಾಯಕ, ಲ್ಯಾಥಮ್‌ ಬ್ಯಾಟಿಂಗ್‌ ಮಿಂಚಿಂಗ್‌:
    2ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆಯವರೆಗೂ ಹೋರಾಡಿದ ಕೇನ್‌ ವಿಲಿಯಮ್ಸನ್‌ ಕೊನೆಗೂ ಶತಕ ವಂಚಿತರಾದರು. 98 ಎಸೆತಗಳಲ್ಲಿ 94 ರನ್‌ (7 ಬೌಂಡರಿ, 1 ಸಿಕ್ಸರ್)‌ ಸಿಡಿಸಿ ಜಯದ ಹಾದಿಗೆ ತಲುಪಿಸಿದ್ರು. ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಟಾಮ್‌ಲ್ಯಾಥಮ್‌ 104 ಎಸೆತಗಳಲ್ಲಿ 145 ಎನ್‌ ಪೇರಿಸಿ, ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಬರೋಬ್ಬರಿ 19 ಬೌಂಡರಿ, 5 ಸಿಕ್ಸರ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಪರಿಣಾಮ ಕಿವೀಸ್‌ ಪಡೆ 7 ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

    ಟೀಂ ಇಂಡಿಯಾ ಪರ ಉಮ್ರಾನ್‌ ಮಲಿಕ್‌ 2 ವಿಕೆಟ್‌ ಪಡೆದರೆ, ಶಾರ್ದೂಲ್‌ ಠಾಕೂರ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಸವಾಲಿನ ಗುರಿ ನೀಡಿತ್ತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟಕ್ಕೆ 23.1 ಓವರ್‌ಗಳಲ್ಲಿ 124 ರನ್ ಗಳಿಸಿದರು.

    ಶಿಖರ್‌, ಗಿಲ್‌, ಅಯ್ಯರ್‌ ಹೋರಾಟ ವ್ಯರ್ಥ:
    ಶಿಖರ್‌ ಧವನ್‌ (ShikharDhawan) 77 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 72 ರನ್‌ ಸಿಡಿಸಿದರೆ, ಗಿಲ್‌ 65 ಎಸೆತಗಳಲ್ಲಿ 50 ರನ್‌(1 ಬೌಂಡರಿ, 3 ಸಿಕ್ಸರ್)‌ ಗಳಿಸಿ, ಲಾಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗಿಳಿದ ರಿಷಭ್‌ ಪಂತ್‌ 23 ಎಸೆತಗಳಲ್ಲಿ ಕೇವಲ 15 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇನ್ನೂ ಈ ಪಂದ್ಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಟಿ20 ಸ್ಪೆಷಲಿಸ್ಟ್‌ ಸೂರ್ಯಕುಮಾರ್ ಯಾದವ್ (Suryakumar Yadav) ಕೇವಲ 4 ರನ್ ಬಾರಿಸಿ ಲಾಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದರು. ಶಾರ್ದುಲ್‌ ಠಾಕುರ್‌ 1 ರನ್‌ ಗಳಿಸಿದರು.

    ಶ್ರೇಯಸ್‌ ಭರ್ಜರಿ ಬ್ಯಾಟಿಂಗ್‌:
    ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಮಿಂಚಿನ ದಾಳಿ ನಡೆಸಿದ ಶ್ರೇಯಸ್‌ ಅಯ್ಯರ್‌ (Shreyas Iyer) ಕಿವೀಸ್‌ ಪಡೆಯ ಬೌಲರ್‌ಗಳನ್ನು ಬೆಂಡೆತ್ತಿದರು. ಈ ವೇಳೆ ಸಂಜು ಸ್ಯಾಮ್ಸನ್‌ ಸಹ ಜೊತೆಯಾಗಿ, 94 ರನ್‌ಗಳ ಜೊತೆಯಾಟ ನೀಡಿದರು. ಶ್ರೇಯಸ್‌ 76 ಎಸೆತಗಳಲ್ಲಿ 80 ರನ್‌ (4 ಬೌಂಡರಿ, 4 ಸಿಕ್ಸರ್)‌ ಚಚ್ಚಿದರೆ, ಸ್ಯಾಮ್ಸನ್‌ 36 ರನ್‌ಗಳಿಸಿದರು. ತಂಡದ ಮೊತ್ತ 254 ರನ್‌ಗಳಾಗಿದ್ದಾಗ 36 ರನ್ ಗಳಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಸಿಕ್ಸ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಔಟಾದರು.

    ಕೊನೆಯಲ್ಲಿ ವಾಷಿಂಗ್ಟನ್‌ ಅಬ್ಬರ:
    ಕೊನೆಯಲ್ಲಿ ಕಣಕ್ಕಿಳಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಸಿಕ್ಸ್‌, ಬೌಂಡರಿ ಸಿಡಿಸಿದ್ರು. ಕೇವಲ 16 ಎಸೆತಗಳಲ್ಲಿ 37 ರನ್‌ (3 ಸಿಕ್ಸರ್‌, 3 ಬೌಂಡರಿ) ಚಚ್ಚಿದರು. ಕೊನೆಗೆ ಭಾರತ 7 ವಿಕೆಟ್ ನಷ್ಟಕ್ಕೆ 306 ರನ್ ಕಲೆಹಾಕಿತು.

    ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಆಡಮ್ ಮಿಲ್ನೆ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Live Tv
    [brid partner=56869869 player=32851 video=960834 autoplay=true]