Tag: Shreyas Iyer

  • IPL 2024: ಕಳೆದ 6 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್!

    IPL 2024: ಕಳೆದ 6 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್!

    – ಸಾಧಕರ ಎಲೈಟ್‌ ಲಿಸ್ಟ್‌ ಸೇರಿದ ಕೆಕೆಆರ್‌
    – ಆರ್‌ಸಿಬಿ ಹೊಗಳಿದ ಆಂಡ್ರೆ ರಸ್ಸೆಲ್‌

    ಅಹಮದಾಬಾದ್‌: ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್‌ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 6 ವರ್ಷಗಳಲ್ಲಿ ನಡೆದ ಐಪಿಎಲ್‌ ಆವೃತ್ತಿಗಳಲ್ಲಿ ಐಪಿಎಲ್‌ ಕ್ವಾಲಿಫೈರ್‌-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

    2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 17ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಕೆಕೆಆರ್‌ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ರಾಜಸ್ಥಾನ್‌ಗೆ ಇಂದು ರಾಯಲ್‌ ಚಾಲೆಂಜ್‌ – ಮೋದಿ ಅಂಗಳದಲ್ಲಿ ಬೆಂಗಳೂರು ಬಾಯ್ಸ್‌ ಕೈಹಿಡಿಯುತ್ತಾ ಗೆಲುವು?

    ದಿಗ್ಗಜ ತಂಡಗಳ ಎಲೈಟ್‌ ಪಟ್ಟಿ ಸೇರಿದ ಕೆಕೆಆರ್‌:
    17ನೇ ಆವೃತ್ತಿಯಲ್ಲಿ ನಾಲ್ಕನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಹೆಚ್ಚು ಬಾರಿ ಐಪಿಎಲ್‌ ಫೈನಲ್‌ ಪ್ರವೇಶಿಸಿದ ತಂಡಗಳ ಎಲೈಟ್‌ ಪಟ್ಟಿ ಸೇರಿದೆ. ಈ ಪಟ್ಟಿಯಲ್ಲಿ ಸಿಎಸ್‌ಕೆ ಅಗ್ರಸ್ಥಾನದಲ್ಲಿದೆ. ಸಿಎಸ್‌ಕೆ 10 ಬಾರಿ ಫೈನಲ್‌ ಪ್ರವೇಶಿಸಿದ್ದರೆ ಮುಂಬೈ 6 ಬಾರಿ, ಕೋಲ್ಕತ್ತಾ ನೈಟ್‌ರೈಡರ್ಸ್‌ 4 ಬಾರಿ ಹಾಗೂ ಆರ್‌ಸಿಬಿ 3 ಬಾರಿ ಫೈನಲ್‌ ಪ್ರವೇಶಿಸಿದ ತಂಡಗಳಾಗಿವೆ. ಇದನ್ನೂ ಓದಿ: ಆರ್‌ಸಿಬಿಗಾಗಿ ಬಿಡ್‌ ಮಾಡಿದಾಗ, ನನ್ನಿಂದ ಉತ್ತಮ ಆಯ್ಕೆ ಸಾಧ್ಯವಿಲ್ಲವೆಂದು ನನ್ನ ಆಂತರಿಕ ಪ್ರವೃತ್ತಿ ಹೇಳ್ತಿತ್ತು: ಮಲ್ಯ

    ಆರ್‌ಸಿಬಿ ಹೊಗಳಿದ ರಸ್ಸೆಲ್‌:
    ಇನ್ನೂ ಕೆಕೆಆರ್‌ ಗೆಲುವಿನ ನಂತರ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಆಲ್‌ರೌಂಡರ್‌ ಆಂಡ್ರೆ ರಸ್ಸೆಲ್‌, ಪ್ಲೇ ಆಫ್‌ ಪ್ರವೇಶಿಸಿರುವ ಆರ್‌ಸಿಬಿ ತಂಡವನ್ನ ಹೊಗಳಿದ್ದಾರೆ. ಆರ್‌ಸಿಬಿ ಉತ್ತಮ ಕ್ರಿಕೆಟ್‌ ಆಡುತ್ತಿದೆ. ಅವರ ಆಟದಲ್ಲಿ ವೇಗವನ್ನು ಕಂಡುಕೊಂಡಿದೆ. ನಾವು ಫೈನಲ್‌ನಲ್ಲಿ ಯಾವುದೇ ತಂಡವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ನುಡಿದಿದ್ದಾರೆ.

    ಸೋಮವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ತಂಡವು 159 ರನ್‌ ಬಾರಿಸಿತ್ತು. ಗೆಲ್ಲಲು 160 ರನ್‌ಗಳ ಗುರಿ ಪಡೆದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆಯುವ ಮೂಲಕ ಜಯಗಳಿಸಿತು.‌ ಇಲ್ಲಿಯವರೆಗೆ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್‌ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

  • ಆ 2 ರನ್‌ ಗೆಲುವು ತಂದುಕೊಡ್ತಿತ್ತು; ಆರ್‌ಸಿಬಿ ವಿರೋಚಿತ ಸೋಲಿಗೆ ಇದೇ ಕಾರಣ ಅಂದ್ರು ಫ್ಯಾನ್ಸ್‌!

    ಆ 2 ರನ್‌ ಗೆಲುವು ತಂದುಕೊಡ್ತಿತ್ತು; ಆರ್‌ಸಿಬಿ ವಿರೋಚಿತ ಸೋಲಿಗೆ ಇದೇ ಕಾರಣ ಅಂದ್ರು ಫ್ಯಾನ್ಸ್‌!

    – ನಿಯಮದ ಪ್ರಕಾರ ಕೊಹ್ಲಿ ಔಟ್ – ಅಂಪೈರ್‌ ಪರ ಬ್ಯಾಟ್‌ ಬೀಸಿದ ಡುಪ್ಲೆಸಿಸ್‌
    – ಅಂಪೈರ್‌ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

    ಕೋಲ್ಕತ್ತಾ: ಈಡನ್‌ ಗಾರ್ಡನ್‌ ಮೈದಾನದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಆರ್‌ಸಿಬಿ (RCB) ಕಂಡ ವಿರೋಚಿತ ಸೋಲು ಅಭಿಮಾನಿಗಳ (RCB Fans) ವಲಯದಲ್ಲಿ ಇನ್ನೂ ಬಿಸಿ-ಬಿಸಿ ಚರ್ಚೆಯಾಗುತ್ತಲೇ ಇದೆ. ಆ 2 ರನ್‌ ಇದ್ದಿದ್ದರೇ ಆರ್‌ಸಿಬಿ, ಗೆದ್ದೇ ಗೆಲ್ಲುತ್ತಿತ್ತು, ಪ್ಲೇ ಆಫ್‌ ಕನಸು ಜೀವಂತವಾಗಿರುತ್ತಿತ್ತು ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ವೀಡಿಯೋ ಸಾಕ್ಷಿಯೊಂದನ್ನೂ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

    223 ರನ್‌ಗಳ ಬೃಹತ್‌ ಮೊತ್ತ ಚೇಸಿಂಗ್‌ ಆರಂಭಿಸಿದ್ದ ಆರ್‌ಸಿಬಿ ಗೆಲುವಿನ ಹಾದಿಯಲ್ಲಿ ನಡೆಯುತ್ತಿತ್ತು. ಆದ್ರೆ 17ನೇ ಓವರ್‌ನ 5ನೇ ಎಸೆತದಲ್ಲಿ ವರುಣ್‌ ಚಕ್ರವರ್ತಿ ಅವರ ಬೌಲಿಂಗ್‌ಗೆ ಸುಯೇಶ್‌ ಪ್ರಭುದೇಸಾಯಿ (Suyash Prabhudesai) ಸಿಕ್ಸರ್‌ ಬಾರಿಸಿದರು. ಆದ್ರೆ ಆನ್‌ಫೀಲ್ಡ್‌ ಅಂಪೈರ್‌ (umpires) ಯಾವುದೇ ನಿರ್ಧಾರ ಪ್ರಕಟಿಸದೇ 3ನೇ ಅಂಪೈರ್‌ ಮೊರೆ ಹೋದರು. ವೀಡಿಯೋನಲ್ಲಿ ಬಾಲ್‌ ಗ್ರೌಂಡ್‌ಗೆ ತಾಕುವ ಮುನ್ನ ಬೌಂಡರಿ ಲೈನ್‌ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದಾಗ್ಯೂ ಟಿವಿ ಅಂಪೈರ್‌ ಸಿಕ್ಸರ್‌ ಅನ್ನು ಬೌಂಡರಿ ಎಂದು ತೀರ್ಪು ನೀಡಿದರು. ಈ ವೀಡಿಯೋ ಹಂಚಿಕೊಂಡಿರುವ ಆರ್‌ಸಿಬಿ ಅಭಿಮಾನಿಗಳು, 2 ರನ್‌ ಹೆಚ್ಚುವರಿ ಸೇರಿದ್ದರೆ ಆರ್‌ಸಿಬಿ ಗೆದ್ದೇ ಗೆಲ್ಲುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

    ರೂಲ್ಸ್‌ ಪ್ರಕಾರ ಕೊಹ್ಲಿ ಔಟ್:
    ವೇಗದ ಬೌಲರ್‌ ಹರ್ಷಿತ್‌ ರಾಣಾ ಎಸೆದ ಸ್ಲೋ ಫುಲ್‌ ಟಾಸ್‌ ಎಸೆತವನ್ನು ರಕ್ಷಣಾತ್ಮಕ ಆಟವಾಡುವ ಪ್ರಯತ್ನದಲ್ಲಿ ಕೊಹ್ಲಿ ವಿಫಲರಾದರು. ಅಷ್ಟೇ ಅಲ್ಲದೇ ಆನ್‌ಫೀಲ್ಡ್‌ ಅಂಪೈರ್‌ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿಆರ್‌ಎಸ್‌ (DRS) ತೆಗೆದುಕೊಂಡರು. ಕೊಹ್ಲಿ ಕ್ರೀಸ್‌ ಒಳಗೆ ನಿಂತು ಚೆಂಡನ್ನು ಎದುರಿಸಿದ್ದರೆ, ಆಗ ಅದು ಸೊಂಟದ ಮೇಲ್ಭಾಗಕ್ಕೆ ಬಿದ್ದ ಫುಲ್‌ ಟಾಸ್‌ ನೋಬಾಲ್‌ ಆಗಿರುತ್ತಿತ್ತು. ಆದರೆ ಕೊಹ್ಲಿ ಕ್ರೀಸ್‌ನಿಂದ ಮುಂದಿದ್ದರು. ಇದನ್ನೂ ಓದಿ: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    ಅಲ್ಲದೇ ಹಾಕ್‌ ಐನಲ್ಲಿ (ಚೆಂಡು ಬೀಳುವ ಕ್ರಮವನ್ನು ಸ್ಕ್ರೀನ್‌ನಲ್ಲಿ ಅಂದಾಜಿಸುವ ಚಿತ್ರಣ) ಚೆಂಡು ವಿಕೆಟ್‌ ನೇರವಾಗಿ ಇರುವು ಕಂಡುಬಂದಿತು. ಆದ್ದರಿಂದ ಕೊಹ್ಲಿ ಅವರ ಕ್ಯಾಚ್‌ ಅನ್ನು ಔಟ್‌ ಎಂದು ತೀರ್ಪು ನೀಡಲಾಯಿತು. ಬಳಿಕ ಅಂಪೈರ್‌ ತೀರ್ಪಿನ ವಿರುದ್ಧವೂ ಆನ್‌ಫೀಲ್ಡ್‌ನಲ್ಲೇ ಅಸಮಾಧಾನ ಹೊರಹಾಕಿದ ಕೊಹ್ಲಿ, ಅಂಪೈರ್‌ಗಳ ಬಳಿ ತೆರಳಿ ವಾದಕ್ಕೆ ಇಳಿದಿದ್ದರು. ಬಳಿಕ ಡ್ರೆಸಿಂಗ್‌ ರೂಮ್‌ನಲ್ಲೂ ಸಹ ಆಟಗಾರರ ಜೊತೆಗೆ ತಮ್ಮ ವಾದ ಮುಂದುವರಿಸಿದರು.

    ನಾಯಕ ಡುಪ್ಲೆಸಿಸ್‌ ಹೇಳಿದ್ದೇನು?
    ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌, ಆನ್‌ಫೀಲ್ಡ್‌ ಅಂಪೈರ್‌ಗಳ ಪರ ಬ್ಯಾಟ್‌ ಬೀಸಿದರು. ನಿಯಮಗಳ ಪ್ರಕಾರ ವಿರಾಟ್‌ ಕೊಹ್ಲಿ ಔಟ್‌ ಆಗಿದ್ದಾರೆ. ಅಂಪೈರ್‌ಗಳು ತೆಗೆದುಕೊಂಡ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಶತಾಯ ಗತಾಯ ನಾವು ಪಂದ್ಯ ಗೆಲ್ಲಲೇ ಬೇಕಿತ್ತು. ಟೂರ್ನಿಯಲ್ಲಿ ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯಲು ಈ ಗೆಲುವು ಅಗತ್ಯವಿತ್ತು. ಆದ್ರೆ ನಾವು ನಮ್ಮ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

  • IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    – ಸೋಲಿನ ಬಳಿಕ ನಾಯಕ ಫಾಫ್‌ ಡು ಪ್ಲೆಸಿಸ್‌ ಹೇಳಿದ್ದೇನು?

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 1 ರನ್‌ ವಿರೋಚಿತ ಸೋಲಿಗೆ ತುತ್ತಾಯಿತು. ಆದ್ರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 20 ರನ್‌ ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿದ್ದೇ ಸೋಲಿಗೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೇ ಇಂದಿನ ಸೋಲಿಗೆ ಕಾರಣಗಳೇನು ಎಂಬುದನ್ನು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಕೆಕೆಆರ್‌ಗೆ 20 ರನ್‌ ಎಕ್ಸ್‌ಟ್ರಾ ಲಾಭವಾಯ್ತಾ?
    ಹೌದು. ಆರಂಭದಲ್ಲಿ ರನ್‌ ಚಚ್ಚಿಸಿಕೊಂಡರೂ ಬಳಿಕ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದ ಆರ್‌ಸಿಬಿ ಬೌಲರ್‌ಗಳು ಬಳಿಕ ವೈಡ್‌, ನೋಬಾಲ್‌, ಲೆಗ್‌ ಬೈಸ್‌ಗಳ ಮೂಲಕ ರನ್‌ ಬಿಟ್ಟುಕೊಟ್ಟರು. ಬೈಸ್‌, ಲೆಗ್‌ಬೈಸ್‌, ನೋಬಾಲ್‌ ಹಾಗೂ ವೈಡ್‌ ಮೂಲಕ ಕ್ರಮವಾಗಿ 4,7,2,7 ರನ್‌ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಕೆಕೆಆರ್‌ 220 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಇದನ್ನೂ ಓದಿ: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    2 ಓವರ್‌ನಲ್ಲಿ 38 ರನ್‌ ಕೊಟ್ಟ ಯಶ್‌ ದಯಾಳ್‌:
    200 ರನ್‌ಗಳ ಒಳಗೆ ಕೆಕೆಆರ್‌ ತಂಡವನ್ನು ಕಟ್ಟಿಹಾಕುವ ಪ್ರಯತ್ನದಲ್ಲಿದ್ದ ಆರ್‌ಸಿಬಿಗೆ ಯಶ್‌ ದಯಾಳ್‌ ದುಬಾರಿಯಾದರು. 16 ಓವರ್‌ ಮುಕ್ತಾಯಕ್ಕೆ ಕೆಕೆಆರ್‌‌ 5 ವಿಕೆಟ್‌ಗೆ 155 ರನ್‌ ಗಳಿಸಿತ್ತು. ಆದ್ರೆ 17ನೇ ಓವರ್‌ನಲ್ಲೇ ಯಶ್‌ ದಯಾಳ್‌, 2 ವೈಡ್‌, ನೋಬಾಲ್‌, ಬೈಸ್‌ ಮಾತ್ರವಲ್ಲದೇ ಸಿಕ್ಸರ್-ಬೌಂಡರಿ ಚಚ್ಚಿಸಿಕೊಂಡು 22 ರನ್‌ ಬಿಟ್ಟುಕೊಟ್ಟರು. ಅಲ್ಲದೇ 19ನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಸಿಕ್ಸರ್‌-ಬೌಂಡರಿ, ವೈಡ್‌ ಮೂಲಕ 20 ರನ್‌ ಬಿಟ್ಟುಕೊಟ್ಟರು. ಬಳಿಕ ಕೊನೇ ಓವರ್‌ನಲ್ಲೇ ಯಶ್‌ ದಯಾಳ್‌ ಮತ್ತೆ 16 ರನ್‌ ಚಚ್ಚಿಸಿಕೊಂಡರು. ಇದು ಆರ್‌ಸಿಬಿ ತಂಡಕ್ಕೆ ದುಬಾರಿಯಾಯಿತು. ಇದನ್ನೂ ಓದಿ: ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    2023ರ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದ ಯಶ್‌ ದಯಾಳ್‌ ಇದೇ ರೀತಿ ತಂಡದ ಸೋಲಿಗೆ ಕಾರಣವಾಗಿದ್ದರು. ಕೊನೇ ಓವರ್‌ನಲ್ಲಿ 29 ರನ್‌ ಬೇಕಿದ್ದಾಗ ರಿಂಕು ಸಿಂಗ್‌ ಅವರಿಂದ ಸತತ 5 ಸಿಕ್ಸರ್‌ ಚಚ್ಚಿಸಿಕೊಂಡಿದ್ದರು. ಇದನ್ನೂ ಓದಿ: ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್‌ ರೋಚಕ ಜಯ

    ಅಬ್ಬರಿಸದ ಡಿಕೆ, ಕೈಕೊಟ್ಟ ಗ್ರೀನ್:‌
    ಹಿಂದಿನ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 35 ಎಸೆತಗಳಲ್ಲಿ ಸ್ಫೋಟಕ 85 ರನ್‌ ಚಚ್ಚಿದ್ದ ದಿನೇಶ್‌ ಕಾರ್ತಿಕ್‌ ಕೆಕೆಆರ್‌ ಪರ ಅಬ್ಬರಿಸುವಲ್ಲಿ ವಿಫಲರಾದರು. 18 ಎಸೆತಗಳಲ್ಲಿ 25 ರನ್‌ ಗಳಿಸಿ ಔಟಾದರು. ಅಲ್ಲದೇ ದುಬಾರಿ ಬೆಲೆಗೆ ಆರ್‌ಸಿಬಿ ತಂಡಕ್ಕೆ ಬಿಕರಿಯಾದ ಕ್ಯಾಮರೂನ್‌ ಗ್ರೀನ್‌ ಕೇವಲ 6 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದು ತಂಡದ ಸೋಲಿಗೆ ಕಾರಣವಾಯಿತು.

    ಪಂದ್ಯದ ಸೋಲಿನ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್, ನಾವು ಗೆಲುವಿನ ಹಾದಿಗೆ ಮರಳಲು ಹತಾಶರಾಗಿದ್ದೇವೆ. ನಮಗೆ ನಂಬಲಸಾಧ್ಯವಾದ ಅಭಿಮಾನಿ ಬಳಗವಿದೆ. ಪ್ರತಿ ಪಂದ್ಯದಲ್ಲೂ ಗೆದ್ದರೂ ಸೋತರೂ ‌ʻಆರ್‌ಸಿಬಿ, ಆರ್‌ಸಿಬಿ ಘೋಷಣೆ ಮೊಳಗುತ್ತಲೇ ಇರುತ್ತದೆ. ಆದರೀಗ ನಮ್ಮ ಅಭಿಮಾನಿಗಳು ಹೆಮ್ಮೆಪಡುವಂತೆ ಮಾಡುದರಲ್ಲೂ ನಾವು ವಿಫಲರಾಗಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.

    ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು.

    ಕೊನೇ ಓವರ್‌ ಥ್ರಿಲ್ಲರ್‌:
    223 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಗೆಲುವಿಗೆ ಕೊನೇ ಓವರ್‌ನಲ್ಲಿ 21 ರನ್‌ ಅಗತ್ಯವಿತ್ತು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿದ್ದರು. ಈ ವೇಳೆ ಕ್ರೀಸ್‌ನಲ್ಲಿದ್ದ ಕರ್ಣ್‌ ಶರ್ಮಾ (Karn Sharma) ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ್ರು. 2ನೇ ಎಸೆತದಲ್ಲಿ ರನ್‌ ಗಳಿಸುವಲ್ಲಿ ವಿಫಲರಾದರೂ 3-4ನೇ ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟಿದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಡಗೌಟ್‌ನಲ್ಲಿದ್ದ ಆಟಗಾರರು ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಹೃದಯ ಬಡಿತ ಹೆಚ್ಚಾಗಿತ್ತು. ಮೈ ರೋಮಾಂಚನಗೊಳಿಸುವಂತಿತ್ತು. ಆದ್ರೆ ಕೊನೇ 2 ಎಸೆತಗಳಲ್ಲಿ ಮೂರು ರನ್‌ಗಳ ಬೇಕಿದ್ದಾಗಲೇ ಕರ್ಣ್‌ ಶರ್ಮಾ 1 ರನ್‌ ಕದಿಯಲು ಯತ್ನಿಸಿ ಸ್ಟಾರ್ಕ್‌ಗೆ (Mitchell Starc) ಕ್ಯಾಚ್‌ ನೀಡಿ ಔಟಾದರು. ಕೊನೇ ಎಸೆತದಲ್ಲಿ ಸ್ಟ್ರೈಕ್‌ ಮಾಡಿದ ಲಾಕಿ ಫರ್ಗೂಸನ್‌ 2 ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದರಿಂದ ಆರ್‌ಸಿಬಿ 1 ರನ್‌ನಿಂದ ವಿರೋಚಿತ ಸೋಲಿಗೆ ತುತ್ತಾಯಿತು.

  • ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್‌ ರೋಚಕ ಜಯ

    ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್‌ ರೋಚಕ ಜಯ

    – ಬೆಂಗಳೂರಿಗೆ ಸತತ 6ನೇ ಸೋಲು

    ಕೋಲ್ಕತ್ತಾ: ಕೊನೇ ಓವರ್‌ನಲ್ಲಿ ಮೂರು ಸಿಕ್ಸರ್‌ ಸಿಡಿಸಿದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕೆಕೆಆರ್‌ (KKR) ವಿರುದ್ಧ 1 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.

    ಕೊನೇ ಓವರ್‌ ಥ್ರಿಲ್ಲರ್‌:
    223 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಗೆಲುವಿಗೆ ಕೊನೇ ಓವರ್‌ನಲ್ಲಿ 21 ರನ್‌ ಅಗತ್ಯವಿತ್ತು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿದ್ದರು. ಈ ವೇಳೆ ಕ್ರೀಸ್‌ನಲ್ಲಿದ್ದ ಕರ್ಣ್‌ ಶರ್ಮಾ (Karn Sharma) ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ್ರು. 2ನೇ ಎಸೆತದಲ್ಲಿ ರನ್‌ ಗಳಿಸುವಲ್ಲಿ ವಿಫಲರಾದರೂ 3-4ನೇ ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟಿದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಡಗೌಟ್‌ನಲ್ಲಿದ್ದ ಆಟಗಾರರು ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಹೃದಯ ಬಡಿತ ಹೆಚ್ಚಾಗಿತ್ತು. ಮೈ ರೋಮಾಂಚನಗೊಳಿಸುವಂತಿತ್ತು. ಆದ್ರೆ ಕೊನೇ 2 ಎಸೆತಗಳಲ್ಲಿ ಮೂರು ರನ್‌ಗಳ ಬೇಕಿದ್ದಾಗಲೇ ಕರ್ಣ್‌ ಶರ್ಮಾ 1 ರನ್‌ ಕದಿಯಲು ಯತ್ನಿಸಿ ಸ್ಟಾರ್ಕ್‌ಗೆ  (Mitchell Starc) ಕ್ಯಾಚ್‌ ನೀಡಿ ಔಟಾದರು. ಕೊನೇ ಎಸೆತದಲ್ಲಿ ಸ್ಟ್ರೈಕ್‌ ಮಾಡಿದ ಲಾಕಿ ಫರ್ಗೂಸನ್‌ 2 ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದರಿಂದ ಆರ್‌ಸಿಬಿ 1 ರನ್‌ನಿಂದ ವಿರೋಚಿತ ಸೋಲಿಗೆ ತುತ್ತಾಯಿತು.

    ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು.

    ಚೇಸಿಂಗ್ ವೇಳೆ ಸ್ಫೋಟಕ ಆರಂಭ ಪಡೆಯಲು ಮುಂದಾಗಿದ್ದ ಆರ್‌ಸಿಬಿ 2.1 ಓವರ್‌ಗಳಿದ್ದಾಗ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. 7 ಎಸೆತಗಳಲ್ಲಿ 18 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ, ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಸಹ ಸುಲಭ ಕ್ಯಾಚ್‌ಗೆ ತುತ್ತಾದರು. ಇದು ಆರ್‌ಸಿಬಿಗೆ ಭಾರೀ ಆಘಾತವುಂಟುಮಾಡಿತ್ತು.

    ವಿಲ್-ಪಾಟಿದಾರ್ ಶತಕದ ಜೊತೆಯಾಟ:
    3.1 ಓವರ್‌ಗಳಲ್ಲಿ 35 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಗೆ ವಿಲ್ ಜಾಕ್ಸ್ (Will Jacks) ಹಾಗೂ ರಜತ್‌ ಪಾಟೀದಾರ್ (Rajat Patidar) ಬಲ ತುಂಬಿದರು. 3ನೇ ವಿಕೆಟ್‌ಗೆ ಈ ಜೋಡಿ 48 ಎಸೆತಗಳಲ್ಲಿ ಭರ್ಜರಿ 102 ರನ್‌ಗಳ ಜೊತೆಯಾಟ ನೀಡಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದ್ರೆ ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌ಗಳು ಕೈಕೊಟ್ಟ ಪರಿಣಾಮ ಆರ್‌ಸಿಬಿ ಸೋಲಿಗೆ ತುತ್ತಾಯಿತು.

    ಆರ್‌ಸಿಬಿ ಪರ ವಿಲ್ ಜಾಕ್ಸ್ 55 ರನ್ (32 ರನ್, 5 ಸಿಕ್ಸರ್, 4 ಬೌಂಡರಿ), ರಜತ್ ಪಾಟೀದಾರ್ 52 ರನ್ (23 ಎಸೆತ, 5 ಸಿಕ್ಸರ್, 3 ಬೌಂಡರಿ), ವಿರಾಟ್ ಕೊಹ್ಲಿ 18 ರನ್, ಫಾಫ್ ಡು ಪ್ಲೆಸಿಸ್ 7 ರನ್, ಕ್ಯಾಮರೂನ್ ಗ್ರೀನ್ 6 ರನ್, ಮಹಿಪಾಲ್ ಲೋಮ್ರೋರ್ 4 ರನ್, ಸುಯೇಶ್‌ ಪ್ರಭುದೇಸಾಯಿ 24 ರನ್‌, ದಿನೇಶ್‌ ಕಾರ್ತಿಕ್‌ 25 ರನ್‌, ಕರ್ಣ್‌ ಶರ್ಮಾ ಸ್ಫೋಟಕ 20 ರನ್‌ (7 ಎಸೆ, 3 ಸಿಕ್ಸರ್‌), ಲಾಕಿ ಫರ್ಗೂಸನ್‌ 1 ರನ್‌ ಗಳಿಸಿದರು.

    ಕೆಕೆಆರ್‌ ಪರ ಆಲ್‌ರೌಂಡರ್‌ ಪ್ರದರ್ಶನ ನೀಡಿದ ಆಂಡ್ರೆ ರಸೆಲ್‌ 3 ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತರೆ, ಹರ್ಷಿತ್‌ ರಾಣಾ ಮತ್ತು ಸುನೀಲ್‌ ನರೇನ್‌ ತಲಾ 2 ವಿಕೆಟ್‌ ಹಾಗೂ ಮಿಚೆಲ್‌ ಸ್ಟಾರ್ಕ್‌ ಮತ್ತು ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಆರಂಭದಿಂದ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಸುನೀಲ್ ನರೇನ್ ಮತ್ತು ಪಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ ಸ್ಫೋಟೊ 56 ರನ್‌ಗಳ ಜೊತೆಯಾಟ ನೀಡಿತ್ತು. ಬಳಿಕ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಕೆಕೆಆರ್ ತಂಡ ಮತ್ತೊಂದೆಡೆ ರನ್ ಕಲೆಹಾಕುತ್ತಾ ಸಾಗಿತು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರಿಂಕು ಸಿಂಗ್ ಜೋಡಿ 40 ರನ್, ರಸ್ಸೆಲ್ ಮತ್ತು ಅಯ್ಯರ್ 42 ರನ್ ಹಾಗೂ ರಸ್ಸೆಲ್ ಮತ್ತು ರಮಣದೀಪ್ ಸಿಂಗ್ ಜೋಡಿ ನೀಡಿದ 43 ರನ್‌ಗಳ ಜೊತೆಯಾಟದಿಂದ ಕೆಕೆಆರ್ ತಂಡ 222 ರನ್‌ಗಳ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.

    ಶ್ರೇಯಸ್ ಅಯ್ಯರ್ 50 ರನ್ (36 ಎಸೆತ, 1 ಸಿಕ್ಸರ್, 7 ಬೌಂಡರಿ), ಪಿಲ್ ಸಾಲ್ಟ್ (Phil Salt) ಸ್ಫೋಟಕ 48 ರನ್ (14 ಎಸೆತ, 3 ಸಿಕ್ಸರ್, 7 ಬೌಂಡರಿ), ಸುನೀಲ್ ನರೇನ್ 10 ರನ್, ರಘುವಂಶಿ 3 ರನ್, ವೆಂಕಟೇಶ್ ಅಯ್ಯರ್ 16 ರನ್, ರಿಂಕು ಸಿಂಗ್ 24 ರನ್, ಆಂಡ್ರೆ ರಸ್ಸೆಲ್ 27 ರನ್, ರಮಣದೀಪ್ ಸಿಂಗ್ 24 ರನ್ ಬಾರಿಸಿದ್ರೆ ವೈಡ್, ನೋಬಾಲ್ ಬೈಸ್‌ನಿಂದಲೇ ಹೆಚ್ಚುವರಿ 20 ರನ್ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ಯಶ್ ದಯಾಳ್ 4 ಓವರ್‌ಗಳಲ್ಲಿ 56 ರನ್ ಬಿಟ್ಟುಕೊಟ್ಟು ಮತ್ತು ಕ್ಯಾಮರೂನ್ ಗ್ರೀನ್ 4 ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟು ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಹಾಗೂ ಕರ್ಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

  • ಜಡೇಜಾ ಜಾದು, ರುತುರಾಜ್‌ ಆಕರ್ಷಕ ಫಿಫ್ಟಿ; ಕೋಲ್ಕತ್ತಾ ವಿರುದ್ಧ ಚೆನ್ನೈಗೆ 7 ವಿಕೆಟ್‌ಗಳ ಜಯ

    ಜಡೇಜಾ ಜಾದು, ರುತುರಾಜ್‌ ಆಕರ್ಷಕ ಫಿಫ್ಟಿ; ಕೋಲ್ಕತ್ತಾ ವಿರುದ್ಧ ಚೆನ್ನೈಗೆ 7 ವಿಕೆಟ್‌ಗಳ ಜಯ

    ಚೆನ್ನೈ: ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಇಂದು (ಸೋಮವಾರ) ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಚೆನ್ನೈ ತಂಡವು ಉತ್ತಮ ಪ್ರದರ್ಶನ ನೀಡಿತು. ಸಿಎಸ್‌ಕೆ ತಂಡ ಕೆಕೆಆರ್‌ ಅನ್ನು 137 ರನ್‌ಗಳಿಗೆ ಕಟ್ಟಿ ಹಾಕಿತ್ತು. ಕೆಕೆಆರ್‌ ನೀಡಿದ 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ 17.4 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿ ಸುಲಭ ಜಯ ದಾಖಲಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಲು ತಿಣುಕಾಡಿತು. ಜಡೇಜಾ, ತುಷಾರ್ ದೇಶಪಾಂಡೆ ಮಾರಕ ಬೌಲಿಂಗ್‌ ದಾಳಿಗೆ ಕೆಕೆಆರ್‌ ಬ್ಯಾಟರ್‌ಗಳು ಮಂಕಾದರು. ಕೋಲ್ಕತ್ತಾ ತಂಡದ ಸುನೀಲ್‌ ನರೈನ್‌ 27, ರಘುವಂಶಿ 24, ನಾಯಕ ಶ್ರೇಯಸ್‌ ಅಯ್ಯರ್‌ 34 ರನ್‌ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

    ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ಸುನಿಲ್‌ ನಾರಾಯಣ, ಆ್ಯಂಡ್ರೆ ರಸೆಲ್‌, ವೆಂಕಟೇಶ್‌ ಅಯ್ಯರ್‌, ಅಂಗಕ್ರಿಷ್‌ ರಘುವಂಶಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. ಚೆನ್ನೈ ಪರ ಜಡೇಜಾ, ದೇಶ್‌ಪಾಂಡೆ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ರೆಹಮಾನ್‌ 2, ಮಹೇಶ್‌ ತೀಕ್ಷಣ್‌ಗೆ 1 ವಿಕೆಟ್‌ ಕಬಳಿಸಿದರು.

    ಕೆಕೆಆರ್‌ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ 17.4 ಓವರ್‌ಗಳಲ್ಲೇ 141 ರನ್‌ ಗಳಿಸಿ ಗೆದ್ದು ಬೀಗಿತು. ತಂಡದ ಪರ ನಾಯಕ ರುತುರಾಜ್‌ ಗಾಯಕ್ವಾಡ್‌ ಜವಾಬ್ದಾರಿಯುತ ಅರ್ಧಶತಕ (67 ರನ್‌, 9 ಫೋರ್‌) ಗಳಿಸಿ ಆಡಿದರು. ರಚಿನ್‌ ರವೀಂದ್ರ 15, ಡೇರಿಲ್ ಮಿಚೆಲ್ 25, ಶಿವಮ್‌ ದುಬೆ 28 ರನ್‌ ಗಳಿಸಿದರು. ಕೊನೆ ಹಂತದಲ್ಲಿ ಬಂದ ಧೋನಿ ಕಂಡು ಅಭಿಮಾನಿಗಳಲ್ಲಿ ಹುರುಪು ಹೆಚ್ಚಿಸಿದರು. ಕೂಲ್‌ ಕ್ಯಾಪ್ಟನ್‌ನಂತೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

  • ತನಗಿಂತ 8 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ನಟಿ ಶ್ರದ್ಧಾ ಕಪೂರ್ ಲವ್ವಿ ಡವ್ವಿ

    ತನಗಿಂತ 8 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ನಟಿ ಶ್ರದ್ಧಾ ಕಪೂರ್ ಲವ್ವಿ ಡವ್ವಿ

    ಟಿ ಶ್ರದ್ಧಾ ಕಪೂರ್ ಪ್ರೇಮ ಪುರಾಣ ಸದ್ಯ ಬಾಲಿವುಡ್‌ನಲ್ಲಿ (Bollywood) ಭಾರೀ ಟಾಕ್‌ ಆಗ್ತಿದೆ. ಟೀಮ್‌ ಇಂಡಿಯಾ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ (Shreyas Iyer) ಜೊತೆ ಶ್ರದ್ಧಾ ಹೆಸರು ಸುದ್ದಿಯಾಗ್ತಿದೆ. ತನಗಿಂತ 8 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ನಟಿ ಶ್ರದ್ಧಾ ಕಪೂರ್ (Shraddha Kapoor) ಸುತ್ತಾಟ ಜೋರಾಗಿದೆ ಎಂದು ಚರ್ಚೆ ಶುರುವಾಗಿದೆ.

    ‘ಆಶಿಕಿ 2’ ನಟಿ ಶ್ರದ್ಧಾ ಹೆಸರು ಈ ಹಿಂದೆ ಹಲವರ ಜೊತೆ ಕೇಳಿ ಬಂದಿತ್ತು. ವರುಣ್‌ ಧವನ್‌, ಆದಿತ್ಯಾ ರಾಯ್‌ ಕಪೂರ್‌, ಇತ್ತೀಚೆಗೆ ರಾಹುಲ್‌ ಎಂಬುವರ ಜೊತೆ ಶ್ರದ್ಧಾ ಡೇಟಿಂಗ್‌ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಟೀಮ್‌ ಇಂಡಿಯಾದ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಜೊತೆ ಕೇಳಿ ಬಂದಿದೆ.

     

    View this post on Instagram

     

    A post shared by Shraddha Kapoor (@shraddhakapoor)

    ಕೆಲ ತಿಂಗಳ ಹಿಂದೆ ಮೊಬೈಲ್ ಫೋನ್‌ವೊಂದರ ಜಾಹೀರಾತು ಶೂಟಿಂಗ್‌ನಲ್ಲಿ ಮೊದಲ ಬಾರಿ ಶ್ರದ್ಧಾ ಹಾಗೂ ಶ್ರೇಯಸ್ ಜೊತೆಯಾಗಿ ನಟಿಸಿದ್ದರು. ಇದೇ ಶೂಟಿಂಗ್‌ನಲ್ಲಾದ ಪರಿಚಯ ಸ್ನೇಹಕ್ಕೆ ದಾರಿ ಮಾಡಿಕೊಟ್ಟಿತ್ತು. ಆದ್ರೀಗ ಇದೇ ಸ್ನೆಹವೇ ಪ್ರೇಮಕ್ಕೆ ತಿರುಗಿದೆ ಎನ್ನಲಾಗಿದೆ.

    ಶೂಟಿಂಗ್‌ನಲ್ಲಿ ಪರಿಚಯವಾಗಿದ್ದ ಇವರಿಬ್ಬರು, ಸೋಷಿಯಲ್‌ ಮೀಡಿಯಾದಲ್ಲಿ ಪರಸ್ಪರ ಫಾಲೋ ಮಾಡ್ತಿದ್ದಾರೆ. ಸದ್ಯ ಬಾಲಿವುಡ್ ಅಂಗಳದಲ್ಲಿ ನಟಿ ಶ್ರದ್ದಾ ಕಪೂರ್ ಹಾಗೂ ಶ್ರೇಯಸ್ ಸಿಕ್ರೇಟ್ ಆಗಿ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಗುಲ್ಲೆದಿದೆ. ರಹಸ್ಯವಾಗಿ ಕೈ ಕೈ ಹಿಡಿದು ಸುತ್ತಾಡ್ತಿದ್ದಾರೆ ಎಂಬ ಸುದ್ದಿಯಿದೆ. ಆದರೆ ಶ್ರೇಯಸ್ ಅಯ್ಯರ್‌ಗೆ ಕೇವಲ 29 ವರ್ಷ, ಶ್ರದ್ಧಾಗೆ 37 ವರ್ಷ ವಯಸ್ಸು. 8 ವರ್ಷದ ದೊಡ್ಡವಳ ಜೊತೆ ಶ್ರೇಯಸ್ ಲವ್ ಬಿದ್ದಿದ್ದಾರೆ. ಈ ವಿಚಾರ ಅದೆಷ್ಟು ನಿಜ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ಅಯ್ಯರ್‌, ಕಿಶನ್‌ ಕಾಂಟ್ರವರ್ಸಿ; ಸೋಶಿಯಲ್‌ ಮೀಡಿಯಾದಲ್ಲೂ ಟ್ರೆಂಡ್‌ – ಬಿಸಿಸಿಐ ಪರ ಪಾಕ್‌ ಮಾಜಿ ಕ್ರಿಕೆಟಿಗ ಬ್ಯಾಟಿಂಗ್‌

    ಅಯ್ಯರ್‌, ಕಿಶನ್‌ ಕಾಂಟ್ರವರ್ಸಿ; ಸೋಶಿಯಲ್‌ ಮೀಡಿಯಾದಲ್ಲೂ ಟ್ರೆಂಡ್‌ – ಬಿಸಿಸಿಐ ಪರ ಪಾಕ್‌ ಮಾಜಿ ಕ್ರಿಕೆಟಿಗ ಬ್ಯಾಟಿಂಗ್‌

    – ಆಟಗಾರರನ್ನ ಶಿಕ್ಷಿಸಲು ಇಂತಹ ಕ್ರಮದ ಅಗತ್ಯವಿದೆ – ಕಮ್ರಾನ್‌ ಅಕ್ಮಲ್‌

    ಇಸ್ಲಾಮಾಬಾದ್‌: ಸದ್ಯ ಕ್ರಿಕೆಟ್‌ ಲೋಕದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ (hreyas Iyer And Ishan Kishan) ಸುದ್ದಿಯಲ್ಲಿದ್ದಾರೆ. ಬಿಸಿಸಿಐ ಇತ್ತೀಚೆಗೆ ಪ್ರಕಟಿಸಿದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಇಶಾನ್‌ ಕಿಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರಿಗೆ ಗೇಟ್‌ಪಾಸ್ ‌ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಗುತ್ತಿಗೆ ಪಟ್ಟಿ ಪ್ರಕಟಿಸಿದ ನಂತರ ಬಿಸಿಸಿಐ ತೆಗೆದುಕೊಂಡ ನಿರ್ಧಾರದ ಬಗ್ಗೆ ಪರ ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.

    ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಬಿಸಿಸಿಐ ಬೆಂಬಲಿಸಿ ಮಾತನಾಡಿದ್ದಾರೆ. ಪಾಕಿಸ್ತಾನದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕ್ರಿಕೆಟ್‌ ಮಂಡಳಿ ಆದೇಶಗಳನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಆಟಗಾರರನ್ನು ಶಿಕ್ಷಿಸಲು ಇಂತಹ ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

    ಇಶಾನ್‌ ಕಿಶನ್‌ ಮತ್ತು ಅಯ್ಯರ್‌ ಅವರನ್ನು ಕೇಂದ್ರ ಒಪ್ಪಂದದಿಂದ ಬಿಸಿಸಿಐ (BCCI) ಕೈಬಿಟ್ಟ ನಿರ್ಧಾರ ಸರಿಯಾಗಿದೆ. ಯಾವೊಬ್ಬ ಆಟಗಾರನೂ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಲು ಕಾರಣವಾದ ಆಟಕ್ಕೆ ಬೆಲೆ ಕೊಡದೇ ಇದ್ದರೆ, ಅದು ಇತರರಿಗೆ ಏನು ಸಂದೇಶ ನೀಡುತ್ತದೆ ಹೇಳಿ? ಮುಂದೆ ಆಗುವ ದೊಡ್ಡ ಹಾನಿಯನ್ನು ತಡೆಯಲು ಬಿಸಿಸಿಐ ಈಗಲೇ ಕ್ರಮ ತೆಗೆದುಕೊಂಡಿದ್ದು ಉತ್ತಮ. ಇಲ್ಲದಿದ್ದರೆ ಭವಿಷ್ಯದ ಆಟಗಾರರೂ ಈ ರೀತಿ ಮಾಡೋದಕ್ಕೆ ಹಿಂದೆ-ಮುಂದೆ ಯೋಚಿಸಲ್ಲ. ದೇಶಕ್ಕಾಗಿ ಆಡುವ ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.

    ರಣಜಿಯಲ್ಲೂ ಅಯ್ಯರ್‌ ಫ್ಲಾಪ್‌ ‌ಪ್ರದರ್ಶನ:
    ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ತಂಡದಿಂದ ಹೊರಗುಳಿದ ಶ್ರೇಯಸ್‌ ಅಯ್ಯರ್‌ ಸದ್ಯ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಯ್ಯರ್‌ ಫ್ಲಾಪ್‌ ಪ್ರದರ್ಶನ ನೀಡಿದ್ದಾರೆ. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಯ್ಯರ್‌ ಕೇವಲ 8 ಎಸೆತಗಳಲ್ಲಿ 3 ರನ್‌ ಗಳಿಸಿ ಔಟಾಗಿದ್ದಾರೆ. ಇದನ್ನೂ ಓದಿ: PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?

    ಬಿಸಿಸಿಐ ಪರ ಕಪಿಲ್‌ ದೇವ್‌ ಬ್ಯಾಟಿಂಗ್:
    ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕೂಡ ಕೇಂದ್ರಗುತ್ತಿಗೆ ವಿಚಾರದಲ್ಲಿ ಬಿಸಿಸಿಐ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೆಲೆಯೂರಿದ ನಂತರ ಆಟಗಾರರು ದೇಶಿ ಕ್ರಿಕೆಟ್‌ನಿಂದ ಹೊರಬರುತ್ತಿರುವುದು ನನಗೆ ಬೇಸರ ತಂದಿದೆ. ಕೆಲವು ಆಟಗಾರರು ನರಳಿದರೆ ನರಳಲಿ, ಆದರೆ ದೇಶಕ್ಕಿಂತ ಯಾವುದೂ ಮುಖ್ಯವಾಗಬಾರದು. ದೇಶಿ ಕ್ರಿಕೆಟ್‌ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಬಿಸಿಸಿಐನ ಈ ಹೆಜ್ಜೆ ಅಗತ್ಯ ಎಂದು ಬಣ್ಣಿಸಿದ್ದಾರೆ.

    ಬಿಸಿಸಿಐ ಕಾಂಟ್ರ್ಯಾಕ್ಟ್ ಕಳೆದುಕೊಂಡ ಅಯ್ಯರ್-ಕಿಶನ್‌:
    ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ಇಶಾನ್ ಕಿಶನ್ ರಣಜಿ ಟ್ರೋಫಿಯಿಂದ ಹೊರಗುಳಿದಿದ್ದಾರೆ ಮತ್ತು ಅವರ ತವರು ತಂಡ ಜಾರ್ಖಂಡ್‌ ಪರ ಆಡಲು ಮನಸು ಮಾಡಲಿಲ್ಲ. ರಣಜಿ ಟ್ರೋಫಿಯಲ್ಲಿ ಆಡುವ ಬದಲು ಇಶಾನ್, ಮಾರ್ಚ್ 22 ರಿಂದ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ತಯಾರಿ ಆರಂಭಿಸಿದ್ದರು. ಇಶಾನ್ ಕಿಶನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಇಶಾನ್ ಕಿಶನ್ ಅವರ ಈ ಧೋರಣೆಯಿಂದಾಗಿ ಕೇಂದ್ರ ಒಪ್ಪಂದದಿಂದ ಅವರನ್ನು ಹೊರ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಜೋಹಾನ್ಸ್‌ಬರ್ಗ್‌: ಅರ್ಷ್‌ದೀಪ್‌ ಸಿಂಗ್‌ (Arshdeep Singh) ಮತ್ತು ಅವೇಶ್​ ಖಾನ್​ ಅವರ ಘಾತಕ ಬೌಲಿಂಗ್​ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ (Shreyas Iyer) ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತ (Team India) 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್‌ ಸಂಡೇ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿ ಜಯ ಸಾಧಿಸಿತು.

    ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್‌ (Sai Sudharsan) ಹಾಗೂ ಶ್ರೇಯಸ್‌ ಅಯ್ಯರ್‌ ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೇಯಸ್‌ ಅಯ್ಯರ್‌ 45 ಎಸೆತಗಳಲ್ಲಿ 52 ರನ್‌ (6 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರೆ, ಸಾಯಿ ಸುದರ್ಶನ್‌ 43 ಎಸೆತಗಳಲ್ಲಿ 55 ರನ್‌ (9 ಬೌಂಡರಿ, 43 ಎಸೆತ) ಬಾರಿಸಿ ಅಜೇಯರಾಗುಳಿದರು. ಇದರಿಂದ ಭಾರತ 16.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 117 ರನ್​ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್​ 19 ಮಂಗಳವಾರ ನಡೆಯಲಿದೆ.

    ದಾಖಲೆ ಬರೆದ ಅರ್ಷ್‌ದೀಪ್‌:
    ವೇಗಿ ಅರ್ಷ್‌ದೀಪ್‌ ಸಿಂಗ್ ಹರಿಣರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್​ ಪಡೆಯುವ ಮೂಲಕ ಭಾರತ ಪರ ಹೊಸ ದಾಖಲೆಯೊಂದನ್ನು ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದ್ರೆ, ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಪಡೆದ ಭಾರತೀಯ ಬೌಲರ್​ಗಳ ಪಟ್ಟಿಯಲ್ಲಿ ಅವರಿಗೆ 4ನೇ ಸ್ಥಾನವನ್ನೂ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಸುನೀಲ್​ ಜೋಶಿ ಮೊದಲಿಗರಾಗಿದ್ದಾರೆ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್​ಗೆ 5 ವಿಕೆಟ್​ ಕಿತ್ತು ಮಿಂಚಿದ್ದರು. ಯಜುವೇಂದ್ರ ಚಾಹಲ್​ (22 ರನ್​ಗೆ 5) ಮತ್ತು ರವೀಂದ್ರ ಜಡೇಜಾ (33 ರನ್​ಗೆ 5) ನಂತರದ ಸ್ಥಾನಗಳಲ್ಲಿದ್ದಾರೆ.

    ಅರ್ಷ-ಆವೇಶ ನಡುವೆ ಹಣಾ-ಹಣಿ:
    ಅರ್ಷ್‌ದೀಪ್‌ ಸಿಂಗ್‌ಗೆ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನೀಡಿದ ಅವೇಶ್​ ಖಾನ್​ ತಮ್ಮ ಆವೇಶಭರಿತ ಬೌಲಿಂಗ್​ ದಾಳಿ ನಡೆಸುವ ಮೂಲಕ 27 ರನ್​ ನೀಡಿ 4 ವಿಕೆಟ್​ ಕಿತ್ತರು. ಕುಲ್ದೀಪ್‌ ಯಾದವ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಉಭಯ ಬೌಲರ್​ಗಳ ಘಾತುಕ ಬೌಲಿಂಗ್​ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್​ ಮಿಲ್ಲರ್​ 2 ರನ್‌, ಹೆನ್ರಿಕ್ ಕ್ಲಾಸೆನ್ 6 ರನ್‌, ನಾಯಕ ಐಡೆನ್​ ಮಾರ್ಕ್ರಮ್ 12 ರನ್‌ ಗಳಿಸಿದ್ರೆ ವಿಯಾನ್ ಮುಲ್ಡರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆಂಡ್ರಿಕ್ಸ್ ಶೂನ್ಯ ಸುತ್ತಿದರು.

    ಫೆಹ್ಲುಕ್ವಾಯೊ ಹೋರಾಟ ವ್ಯರ್ಥ:
    58ರನ್​ಗೆ 7 ವಿಕೆಟ್​ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 100 ರನ್‌ ಗಳಿಸುವುದೂ ಕಷ್ಟವಾಗಿತ್ತು. ಆದ್ರೆ ಬೌಲರ್​ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್​ಗಳ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್​ ಮತ್ತು 3 ಬೌಂಡರಿ ಬಾರಿಸಿ 33 ರನ್​ ಗಳಿಸಿದರು. ಇಂದು ಇದೇ ತಂಡದ ಪರ‌ ಗಳಿಸಿದ ಅಧಿಕ ರನ್‌ ಆಗಿತ್ತು. ಆದ್ರೆ ಭಾರತದ ಎದುರು ಈ ಆಟ ವ್ಯರ್ಥವಾಯಿತು.

  • ಇಂದು ಭಾರತ V/s ಆಸೀಸ್‌ 4ನೇ ಟಿ20 – ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು

    ಇಂದು ಭಾರತ V/s ಆಸೀಸ್‌ 4ನೇ ಟಿ20 – ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು

    ರಾಯ್ಪುರ: ಆಸ್ಟ್ರೇಲಿಯಾ (Australia) ವಿರುದ್ಧ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ (Team India) ಯುವ ಪಡೆ, ಶುಕ್ರವಾರ (ಇಂದು) 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ರಾಯ್ಪುರ ಕ್ರಿಕೆಟ್‌ ಮೈದಾನದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    5 ಪಂದ್ಯದ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತ, ಕೊನೆಯ ಪಂದ್ಯದವರೆಗೂ ಕಾಯದೆ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ಆಸೀಸ್ ಸರಣಿ ಸಮಬಲದ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. ಇದನ್ನೂ ಓದಿ: ಬೌಲರ್‌ಗಳಿಗೆ ಶಾಕ್‌ ಕೊಟ್ಟ ಐಸಿಸಿ – ನಿಗದಿತ ಸಮಯದಲ್ಲಿ ಓವರ್‌ ಆರಂಭಿಸದಿದ್ದರೆ ಬೀಳುತ್ತೆ ದಂಡ

    ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ 3ನೇ ಟಿ20 ಪಂದ್ಯವನ್ನು ಪಂದ್ಯವನ್ನು ಮ್ಯಾಕ್ಸ್‌ವೆಲ್‌ ಅವರ ಸಾಹಸದ ಮುಂದೆ ಕೈಚೆಲ್ಲಿತ್ತು. ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲರ್‌ಗಳ (Bowlers) ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆಸೀಸ್‌ ವಿರುದ್ಧ ಕ್ರಮವಾಗಿ 209, 191 ಹಾಗೂ 225 ರನ್ ಬಿಟ್ಟುಕೊಟ್ಟಿತು. ಆದ್ದರಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ನಲ್ಲೂ ಬಲ ಬೇಕಿದೆ.

    ಪ್ರಸಿದ್ ಕೃಷ್ಣ ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿದ ಬಳಿಕ ದುಬಾರಿಯಾಗುತ್ತಿದ್ದು, ಇತರರಿಂದಲೂ ಆಸೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶ್ರೇಯಸ್ ಅಯ್ಯರ್, ದೀಪಕ್ ಚಹಾರ್‌ 4ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ತಿಲಕ್‌ ವರ್ಮಾ ಅವರ ಜಾಗಕ್ಕೆ ಶ್ರೇಯಸ್‌ ಹಾಗೂ ಪ್ರಸಿದ್ಧ್‌ ಕೃಷ್ಣ ಬದಲಿಗೆ ದೀಪಕ್‌ ಚಹಾರ್‌ ಅವರನ್ನ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.

    ಅಲ್ಲದೇ ಆಸೀಸ್‌ನ ಡೇಂಜರಸ್‌ ಬ್ಯಾಟ್ಸ್‌ಮ್ಯಾನ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌, ಸ್ಟೀವ್‌ ಸ್ಮಿತ್, ಆಡಂ ಝಂಪಾ ಸೇರಿ ಪ್ರಮುಖ ಆಟಗಾರರು ತವರಿಗೆ ಮರಳಿದ್ದು, ಯುವ ಪಡೆ ಮೇಲೆ ಸರಣಿ ಉಳಿಸಿಕೊಳ್ಳುವ ಜವಾಬ್ದಾರಿಯಿದೆ. ಇದನ್ನೂ ಓದಿ: ಮೂರು ಮಾದರಿಗೆ ಮೂವರು ನಾಯಕರು – ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಪಟ್ಟಿ ರಿಲೀಸ್‌

    3 ಪಂದ್ಯಗಳ ಸಂಕ್ಷಿಪ್ತ ಸ್ಕೋರ್‌
    ಮೊದಲ ಟಿ20: ಭಾರತ – 209/8, ಆಸ್ಟ್ರೇಲಿಯಾ – 208/3
    2ನೇ ಟಿ20: ಭಾರತ – 235/4, ಆಸ್ಟ್ರೇಲಿಯಾ – 191/9
    3ನೇ ಟಿ20: ಭಾರತ – 222/3, ಆಸ್ಟ್ರೇಲಿಯಾ – 225/5

  • ‌World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ‌World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ಮುಂಬೈ: ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮ್ಮದ್‌ ಶಮಿ (Mohammed Shami) 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಮಿ 32.2 ಓವರ್‌ನಲ್ಲಿ ಕೇನ್‌ ವಿಲಿಯಮ್ಸನ್‌ (Kane Williamson) ಅವರನ್ನು ಔಟ್‌ ಮಾಡುವ ಮೂಲಕ ಈ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು.

    ಕೇವಲ 17 ಇನ್ನಿಂಗ್ಸ್‌ಗಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಆಸ್ಟ್ರೇಲಿಯಾದ ಮೆಚೆಲ್‌ ಸ್ಟಾರ್ಕ್‌ 19 ಇನ್ನಿಂಗ್ಸ್‌ಗಲ್ಲಿ 50 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು.

    ಅದಕ್ಕಿಂತಲೂ ಮುಖ್ಯವಾಗಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ (World Cup History) ಅತಿಹೆಚ್ಚು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ 3 ಬಾರಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ 18 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದಿದ್ದರು.

    ಇದಕ್ಕೂ ಮುನ್ನ ಧರ್ಮಶಾಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ (New Zealand) ವಿರುದ್ಧದ ಪಂದ್ಯದಲ್ಲಿ 54 ರನ್‌ ಕೊಟ್ಟು 5 ವಿಕೆಟ್‌ ಕಿತ್ತಿದ್ದರು. ಇಂದು ಕಿವೀಸ್‌ ವಿರುದ್ಧ 5 ವಿಕೆಟ್‌ ಕಿತ್ತು ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರವೀಂದ್ರ ಜಡೇಜಾ 33 ರನ್‌ ಬಿಟ್ಟುಕೊಟ್ಟು, ಶಾಹೀನ್‌ ಶಾ ಅಫ್ರಿದಿ ಆಸ್ಟ್ರೇಲಿಯಾ ವಿರುದ್ಧ 54 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದಿದ್ದು ಇದೇ ಟೂರ್ನಿಯಲ್ಲಿ ಎಂಬಿದನ್ನು ಮರೆಯುವಂತಿಲ್ಲ. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಭಾರತ ಎಂಟ್ರಿ

    ಈ ಸಾಧನೆಯೊಂದಿಗೆ ಮೊಹಮ್ಮದ್‌ ಶಮಿ ವಿಶ್ವಕಪ್ ಪಂದ್ಯಾವಳಿಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌ಗಳ ಎಲೈಟ್‌ ಪಟ್ಟಿ ಸೇರಿದ್ದು, ಟಾಪ್‌-10 ಪಟ್ಟಿಯಲ್ಲಿ 6ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗ್ಲೇನ್‌ ಮೆಕ್‌ಗ್ರಾತ್‌ 71 ವಿಕೆಟ್, ಮುತ್ತಯ್ಯ ಮುರಳೀಧರನ್ 68 ವಿಕೆಟ್, ಮಿಚೆಲ್ ಸ್ಟಾರ್ಕ್ 59 ವಿಕೆಟ್, ಲಸಿತ್ ಮಾಲಿಂಗ 56 ವಿಕೆಟ್, ವಾಸಿಂ ಅಕ್ರಮ್ 55 ವಿಕೆಟ್ ಪಡೆದಿದು ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿದ್ದರೆ 54 ವಿಕೆಟ್‌ ಪಡೆದ ಶಮಿ ವಿಶ್ವದ ಟಾಪ್‌ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಕೇವಲ 17 ಪಂದ್ಯ 17 ಇನ್ನಿಂಗ್ಸ್‌ಗಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಇದನ್ನೂ ಓದಿ: ವಿಶ್ವದಾಖಲೆಯ ಶತಕ ಸಿಡಿಸಿದ ಕೊಹ್ಲಿಗೆ ಪಾಕ್‌ ಕ್ರಿಕೆಟಿಗನಿಂದ ʻಚಕ್ರವರ್ತಿʼ ಬಿರುದು – ಅಭಿನಂದನೆಗಳ ಮಹಾಪೂರ