Tag: Shreyas Iyer

  • IPL Mega Auction | 14 ಕೋಟಿಗೆ ಡೆಲ್ಲಿ ಪಾಲಾದ ರಾಹುಲ್‌ – ಆರ್‌ಸಿಬಿ ಫ್ಯಾನ್ಸ್‌ಗೆ ಭಾರಿ ನಿರಾಸೆ

    IPL Mega Auction | 14 ಕೋಟಿಗೆ ಡೆಲ್ಲಿ ಪಾಲಾದ ರಾಹುಲ್‌ – ಆರ್‌ಸಿಬಿ ಫ್ಯಾನ್ಸ್‌ಗೆ ಭಾರಿ ನಿರಾಸೆ

    2025ರ ಐಪಿಎಲ್‌ ಭಾಗವಾಗಿ ನಡೆದ ಮಗಾ ಹರಾಜಿನಲ್ಲಿ (IPL Mega Auction) ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮಾಜಿ ನಾಯಕ ಕೆ.ಎಲ್‌ ರಾಹುಲ್‌ (KL Rahul) 14 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾಗಿದ್ದಾರೆ.

    ಇದರಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಆದ್ರೆ ರಾಹುಲ್‌ ಅವರನ್ನು ಹೊರದಬ್ಬಿದ ಲಕ್ನೋ (LSG) 27 ಕೋಟಿ ರೂ. ದಾಖಲೆ ಬೆಲೆ ರಿಷಬ್‌ ಪಂತ್‌ (Rishabh Pant) ಅವರನ್ನು ಆರ್‌ಟಿಎಂ ಕಾರ್ಡ್‌ ಅಡಿ ಖರೀದಿಸಿದೆ.

    2025ರ ಮೆಗಾ ಹರಾಜಿಗೆ ಪ್ರಕ್ರಿಯೆ ಶುರುವಾದಾಗಿನಿಂದಲೂ ರಾಹುಲ್‌, ಆರ್‌ಸಿಬಿ ತಂಡದ ಪಾಲಾಗುತ್ತಾರೆ ಎಂಬ ಹೈಪ್‌ ಕ್ರಿಯೇಟ್‌ ಆಗಿತ್ತು. ಇದರಿಂದ ಅಭಿಮಾನಿಗಳು ಹರ್ಷಗೊಂಡಿದ್ದರು. ಆದ್ರೆ ಹರಾಜಿನಲ್ಲಿ 8.75 ಕೋಟಿ ರೂ.ಗಳಿಗೆ ಇಂಗ್ಲೆಂಡ್‌ನ ಲಿಯಾಮ್‌ ಲಿವಿಂಗ್‌ಸ್ಟೋನ್‌ ಖರೀದಿಸಿದ ಆರ್‌ಸಿಬಿ, ರಾಹುಲ್‌ ಅವರಿಗಾಗಿ ಬಿಡ್‌ ಮಾಡಲು ಹಿಂದೇಟು ಹಾಕಿತು.

    ಆರ್‌ಸಿಬಿಯಿಂದಲೇ ವೃತ್ತಿ ಆರಂಭಿಸಿದ್ದ ಕನ್ನಡಿಗ:
    2013ರಿಂದ ಐಪಿಎಲ್‌ ವೃತ್ತಿ ಬದುಕು ಆರಂಭಿಸಿದ ಕೆ.ಎಲ್‌ ರಾಹುಲ್‌ ಮೊದಲು ಸೇರಿದ್ದು ಆರ್‌ಸಿಬಿ ತಂಡವನ್ನೇ. 2013ರಲ್ಲಿ ಆರ್‌ಸಿಬಿ ತಂಡದಲ್ಲಿ ಆಡಿದ್ದ ರಾಹುಲ್‌ 2014 ಮತ್ತು 2015ರಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪಾಲಾಗಿದ್ದರು. ಪುನಃ 2016ರಲ್ಲಿ ಆರ್‌ಸಿಬಿ ತಂಡವನ್ನೇ ಸೇರಿಕೊಂಡಿದ್ದರು. 2017ರಲ್ಲಿ ಆರ್‌ಸಿಬಿಯಲ್ಲೇ ಆಡುವ ಅವಕಾಶವಿದ್ದರೂ ಗಾಯದ ಸಮಸ್ಯೆಯಿಂದ ಹೊರಗುಳಿದ್ದರು.

    ಬಳಿಕ 2018 ರಿಂದ 2021ರ ವರೆಗೆ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದ ಕೆ.ಎಲ್‌ ರಾಹುಲ್‌ 2022ರಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸೇರಿಕೊಂಡರು. ಆಗಷ್ಟೇ ಪದಾರ್ಪಣೆ ಮಾಡಿದ್ದ ಲಕ್ನೋ ತಂಡವನ್ನು ತನ್ನ ನಾಯಕತ್ವದಲ್ಲಿ ಸತತ 2 ಬಾರಿ ಪ್ಲೇ ಆಫ್‌ ಪ್ರವೇಶಿಸುವಂತೆ ಮಾಡಿದ್ದರು.

    ಈ ವರೆಗೆ ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿರುವ ಕೆ.ಎಲ್‌ ರಾಹುಲ್‌ 134.61 ಸ್ಟ್ರೈಕ್ ರೇಟ್‌ನಲ್ಲಿ 4,683 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 37 ಅರ್ಧಶತಕ ಸೇರಿವೆ.

    ಇಂದು ಬಿಡ್‌ ಆದ ಪ್ರಮುಖರು:
    * ಹರ್ಷ್‌ದೀಪ್‌ ಸಿಂಗ್‌ – 18 ಕೋಟಿ ರೂ.‌ – ಪಂಜಾಬ್‌ ಕಿಂಗ್ಸ್‌
    * ಕಾಗಿಸೋ ರಬಾಡ – 10.75 ಕೋಟಿ ರೂ. – ಗುಜರಾತ್‌ ಟೈಟಾನ್ಸ್‌
    * ಜೋಸ್‌ ಬಟ್ಲರ್‌ – 15.75 ಕೋಟಿ ರೂ. – ಗುಜರಾತ್‌ ಟೈಟಾನ್ಸ್‌
    * ಮಿಚೆಲ್‌ ಸ್ಟಾರ್ಕ್‌ – 11 ಕೋಟಿ ರೂ. – ಡೆಲ್ಲಿ ಕ್ಯಾಪಿಟಲ್ಸ್‌
    * ಡೇವಿಡ್‌ ಮಿಲ್ಲರ್‌ – 7.50 ಕೋಟಿ ರೂ. – ಲಕ್ನೋ ಸೂಪರ್‌ ಜೈಂಟ್ಸ್‌
    * ಮೊಹಮ್ಮದ್‌ ಸಿರಾಜ್‌ – 12.25 ಕೋಟಿ ರೂ. – ಗುಜರಾಜ್‌ ಟೈಟಾನ್ಸ್‌
    * ಯಜುವೇಂದ್ರ ಚಾಹಲ್‌ – 18 ಕೋಟಿ ರೂ. – ಪಂಜಾಬ್‌ ಕಿಂಗ್ಸ್‌
    * ಲಿಯಾಮ್‌ ಲಿವಿಂಗ್‌ಸ್ಟೋನ್‌ – 8.75 ಕೋಟಿ ರೂ. – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

  • IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್‌ ಅಯ್ಯರ್‌

    IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್‌ ಅಯ್ಯರ್‌

    2025ರ ಐಪಿಎಲ್‌ ಭಾಗವಾಗಿ ನಡೆದ ಮಗಾ ಹರಾಜಿನಲ್ಲಿ (IPL Mega Auction) ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಶ್ರೇಯಸ್‌ ಅಯ್ಯರ್‌ ಬರೋಬ್ಬರಿ 26.75 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ತೀವ್ರ ಪೈಪೋಟಿಯಿಂದ ಕೂಡಿದ್ದ ಬಿಡ್ಡಿಂಗ್‌ನಲ್ಲಿ ಅಯ್ಯರ್‌ ಅವರನ್ನ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ಜಿದ್ದಾ ಜಿದ್ದಿ ನಡೆದಿತ್ತು. ಅಲ್ಲದೇ ಪ್ರೇಕ್ಷರಕ ಎದೆ ಬಡಿತವೂ ಹೆಚ್ಚಾಗಿತ್ತು, ಹರಾಜು ನಡೆಸಿಕೊಡುತ್ತಿದ್ದ ಮಹಿಳೆ ಮಲ್ಲಿಕಾ ಸಾಗರ್‌ ಬಿಡ್‌ ಕೂಗಿ ಕೂಗಿ ಸುಸ್ತಾಗಿದ್ದರು. ಆದ್ರೆ ಪಟ್ಟು ಬಿಡದ ಪಂಜಾಬ್‌ 26.75 ಕೋಟಿ ರೂ.ಗೆ ಅಯ್ಯರ್‌ ಅವರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್‌ ಅಯ್ಯರ್‌

    2024ರ ಐಪಿಎಲ್‌ಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್‌ ಸ್ಟಾರ್ಕ್‌ 24.75 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದನ್ನೂ ಓದಿ: 16 ತಿಂಗಳ ಬಳಿಕ ಟೆಸ್ಟ್‌ ಶತಕ ಸಿಡಿಸಿ ಮಿಂಚಿದ ಕೊಹ್ಲಿ – ಡೊನಾಲ್ಡ್‌ ಬ್ರಾಡ್ಮನ್‌ ದಾಖಲೆ ಉಡೀಸ್‌

    ಈವರೆಗೆ ಐಪಿಎಲ್‌ನಲ್ಲಿ 115 ಪಂದ್ಯಗಳನ್ನಾಡಿರುವ ಶ್ರೇಯಸ್‌ ಅಯ್ಯರ್‌ 3,127 ರನ್‌ ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳು ಸೇರಿವೆ. 2024ರ ಐಪಿಎಲ್‌ನಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲೇ ಕೋಲ್ಕತ್ತಾ ನೈಟ್‌ರೈಡರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

    ಇಂದು ಬಿಡ್‌ ಆದ ಪ್ರಮುಖರು:
    * ಹರ್ಷ್‌ದೀಪ್‌ ಸಿಂಗ್‌ – 18 ಕೋಟಿ ರೂ.‌ – ಪಂಜಾಬ್‌ ಕಿಂಗ್ಸ್‌
    * ಕಾಗಿಸೋ ರಬಾಡ – 10.75 ಕೋಟಿ ರೂ. – ಗುಜರಾತ್‌ ಟೈಟಾನ್ಸ್‌
    * ಜೋಸ್‌ ಬಟ್ಲರ್‌ – 15.75 ಕೋಟಿ ರೂ. – ಗುಜರಾತ್‌ ಟೈಟಾನ್ಸ್‌
    * ಮಿಚೆಲ್‌ ಸ್ಟಾರ್ಕ್‌ – 11 ಕೋಟಿ ರೂ. – ಡೆಲ್ಲಿ ಕ್ಯಾಪಿಟಲ್ಸ್‌
    * ಡೇವಿಡ್‌ ಮಿಲ್ಲರ್‌ – 7.50 ಕೋಟಿ ರೂ. – ಲಕ್ನೋ ಸೂಪರ್‌ ಜೈಂಟ್ಸ್‌

  • ಇಂದು ಐಪಿಎಲ್‌ ಮೆಗಾ ಹರಾಜು – ಪಂತ್‌, ರಾಹುಲ್‌, ಅಯ್ಯರ್‌ಗೆ ಜಾಕ್‌ಪಾಟ್‌?

    ಇಂದು ಐಪಿಎಲ್‌ ಮೆಗಾ ಹರಾಜು – ಪಂತ್‌, ರಾಹುಲ್‌, ಅಯ್ಯರ್‌ಗೆ ಜಾಕ್‌ಪಾಟ್‌?

    ಜೆಡ್ಡಾ: 2025ರ ಐಪಿಎಲ್‌ ಆವೃತ್ತಿಯ ಆಟಗಾರರ ಮೆಗಾ ಹರಾಜು (IPL Mega Auction) ಪ್ರಕ್ರಿಯೆ ಭಾನುವಾರ ಪ್ರಾರಂಭಗೊಳ್ಳಲಿದೆ. ಸೌದಿ ಅರೇಬಿಯಾದ ಜೆಡ್ಡಾ ಮತ್ತು ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಇಂದು (ನ.24) ಮತ್ತು ನಾಳೆ (ನ.25) ಹರಾಜು ಪ್ರಕ್ರಿಯೆ ನಡೆಯಲಿದೆ.

    ಒಂದು ಫ್ರಾಂಚೈಸಿ ಕನಿಷ್ಠ 18 ರಿಂದ 25 ಆಟಗಾರರನ್ನು ಒಳಗೊಳ್ಳಬಹುದಾಗಿದ್ದು, ಒಟ್ಟು 577 ಆಟಗಾರರು ಕಣದಲ್ಲಿದ್ದಾರೆ. 10 ಐಪಿಎಲ್‌ ತಂಡಗಳು ಒಟ್ಟು 641.5 ಕೋಟಿ ರೂ. ಹಣವನ್ನು ಹರಾಜಿನಲ್ಲಿ ವಿನಿಯೋಗಿಸಲಿದೆ. ಸುಮಾರು 204 ಮಂದಿ ಆಟಗಾರರು ಆರಿಸಲ್ಪಡುವ ಸಾಧ್ಯತೆ ಇದೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗಳಾದ ರಿಷಬ್‌ ಪಂತ್‌ (Rishabh Pant), ಕೆ.ಎಲ್‌ ರಾಹುಲ್‌ (KL Rahul) ಮತ್ತು ಶ್ರೇಯಸ್‌ ಅಯ್ಯರ್‌ ಹೆಚ್ಚಿನ ಮೊತ್ತಕ್ಕೆ ಖರೀದಿಸಲ್ಪಡುವ ಆಟಗಾರರ ಪೈಕಿ ಮುಂಚೂಣಿಯಲ್ಲಿ ಇದ್ದಾರೆ. ಇದನ್ನೂ ಓದಿ: IND vs Aus Test| ವಿವಾದಾತ್ಮಕ ತೀರ್ಪಿಗೆ ರಾಹುಲ್‌ ಔಟ್‌

    ಅದರಲ್ಲಿಯೂ ಮುಖ್ಯವಾಗಿ ರಿಷಬ್‌ ಪಂತ್‌ ಅತ್ಯಧಿಕ ಮೊತ್ತವನ್ನು ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆಯನ್ನು ಐಪಿಎಲ್‌ ಪರಿಣಿತರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಪಂತ್‌ ಪ್ರದರ್ಶನವೂ ಈ ಜನಪ್ರಿಯತೆಗೆ ಕಾರಣವಾಗಿದೆ. ಶತಾಯ ಗತಾಯ ಪಂತ್‌ ಅವರನ್ನ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಕೆ.ಎಲ್‌ ರಾಹುಲ್‌ರನ್ನ ಆರ್‌ಸಿಬಿ (RCB) ಖರೀದಿಸುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: ರಾಹುಲ್‌-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ

    ಅದೃಷ್ಟ ಪರೀಕ್ಷೆಗಿಳಿದ ಕನ್ನಡಿಗರು:
    ಐಪಿಎಲ್‌ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ಪ್ರಸಿದ್ಧ ಕೃಷ್ಣ, ಲುತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್ ಚೇತನ್, ಮನೋಜ್ ಭಾಂಡಗೆ, ಅಭಿಲಾಶ್‌ ಶೆಟ್ಟಿ, ವೈಶಾಖ್ ವಿಜಯ್‌ ಕುಮಾರ್, ಪ್ರವೀಣ್ ದುಬೆ, ಮನ್ವಂತ್‌ ಕುಮಾರ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮಹೋಹರ್, ಬಿ.ಆರ್ ಶರತ್, ಕೃಷ್ಣನ್ ಶ್ರೀಜಿತ್, ವಿದ್ವತ್‌ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್‌ ಹೆಗಡೆ, ಸಮರ್ಥ್ ನಾಗರಾಜ್‌ ಹರಾಜು ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    25 ಕೋಟಿ ರೂ. ಮೈಲಿಗಲ್ಲು
    ಎಲ್ಲಕ್ಕಿಂತ ಹೆಚ್ಚಾಗಿ ಕ್ರೀಡಾಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿರುವುದು ಪಂತ್‌, ಕೆ.ಎಲ್‌ ರಾಹುಲ್‌ 25 ಕೋಟಿ ರೂ. ಮೈಲಿಗಲ್ಲನ್ನು ದಾಟುವರೇ ಎಂಬುದು. ಈವರೆಗೆ ಯಾಬೊಬ್ಬ ಭಾರತೀಯ ಆಟಗಾರನೂ ಈ ಸಾಧನೆಗೆ ಪಾತ್ರವಾಗಿಲ್ಲ. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಪಂತ್‌ 25 ಕೋಟಿ ರೂ. ಪಡೆದ ಮೊದಲ ಭಾರತೀಯ ಆಟಗಾರ ಖ್ಯಾತಿಗೆ ಯಾರು ಪಾತ್ರರಾಗುತ್ತಾರೆ ಪಾತ್ರರಾಗುವರೇ ಎಂಬುದು ಕುತೂಹಲ ಮೂಡಿಸಿದೆ. ಕಳೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಕರಿಯಾಗಿದ್ದರು, ಇದು ಈವರೆಗಿನ ದಾಖಲೆ ಬೆಲೆಯಾಗಿದೆ.

  • IPL Retention | ಕೆಕೆಆರ್‌ನಿಂದ ಸ್ಟಾರ್ಕ್‌, ಶ್ರೇಯಸ್‌ ಔಟ್‌ – ರಿಂಕು ಸಂಭಾವನೆ ಕೋಟಿ ಕೋಟಿ ಏರಿಕೆ!

    IPL Retention | ಕೆಕೆಆರ್‌ನಿಂದ ಸ್ಟಾರ್ಕ್‌, ಶ್ರೇಯಸ್‌ ಔಟ್‌ – ರಿಂಕು ಸಂಭಾವನೆ ಕೋಟಿ ಕೋಟಿ ಏರಿಕೆ!

    ಮುಂಬೈ: 2025ರ ಮೆಗಾ ಹರಾಜಿಗೂ ಮುನ್ನವೇ ಹಾಲಿ ಚಾಂಪಿಯನ್ಸ್‌ ಕೆಕೆಆರ್‌ (KKR) ಸ್ಟಾರ್‌ ಆಟಗಾರರನ್ನ ಹೊರದಬ್ಬಿದೆ. ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಬಿಕರಿಯಾಗಿದ್ದ ಮಿಚೆಲ್‌ ಸ್ಟಾರ್ಕ್‌ (Mitchell starc), ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

    ರಿಂಕು, ರಸ್ಸೆಲ್‌, ರಾಣಾ ಸೇರಿಂದಂತೆ ಆಲ್‌ರೌಂಡರ್‌, ಬೌಲರ್‌ಗಳಿಗೆ ಮಣೆಹಾಕಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರನ್ನು ಉಳಿಸಿಕೊಂಡಿದೆ. ಈ ಪೈಕಿ ಕಳೆದ ಆವೃತ್ತಿಯಲ್ಲಿ 55 ಲಕ್ಷ ರೂ. ಸಂಭಾವನೆ ಪಡೆದಿದ್ದ ರಿಂಕು ಸಿಂಗ್‌ಗೆ 13 ಕೋಟಿ ರೂ. ಕೊಟ್ಟು ಖರೀದಿ ಮಾಡಿರುವುದು ವಿಶೇಷ. ಇದನ್ನೂ ಓದಿ: IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

    ಬಿಸಿಸಿಐ ನಿಮಯದ ಪ್ರಕಾರ ಐವರು ಆಟಗಾರರು ಮತ್ತು ಒಂದು ಆರ್‌ಟಿಎಂ ಬಳಕೆಗೆ ಅವಕಾಶ ನೀಡಿತ್ತು. ಆದ್ರೆ ಕೆಕೆಆರ್‌ 6 ಆಟಗಾರರನ್ನು ಉಳಿಸಿಕೊಂಡಿದ್ದು, ಆರ್‌ಟಿಎಂ ಕಾರ್ಡ್‌ ಬಳಕೆಗೆ ಅವಕಾಶ ಇಲ್ಲದಂತಾಗಿದೆ. ಇದನ್ನೂ ಓದಿ: IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

    ಕೆಕೆಆರ್‌ನಲ್ಲಿ ಯಾರಿಗೆ ಎಷ ಉಳಿಕೆ?
    * ರಿಂಕು ಸಿಂಗ್‌ – 13 ಕೋಟಿ ರೂ.
    * ವರುಣ್‌ ಚಕ್ರವರ್ತಿ – 12 ಕೋಟಿ ರೂ.
    * ಸುನೀಲ್‌ ನರೇನ್‌ – 12 ಕೋಟಿ ರೂ.
    * ಆಂಡ್ರೆ ರಸ್ಸೆಲ್‌ – 12 ಕೋಟಿ ರೂ.
    * ಹರ್ಷಿತ್‌ ರಾಣಾ – 4 ಕೋಟಿ ರೂ.
    * ರಮಣದೀಪ್‌ ಸಿಂಗ್‌ – 4 ಕೋಟಿ ರೂ.

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ.

  • Photos Gallery: ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸಂಭ್ರಮಿಸಿದ ಕ್ಷಣ ಹೀಗಿತ್ತು…

    Photos Gallery: ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸಂಭ್ರಮಿಸಿದ ಕ್ಷಣ ಹೀಗಿತ್ತು…

    17ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕೋಲ್ಕತ್ತಾ ನೈಟ್ ರೈರ‍್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. 2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ 10 ವರ್ಷಗಳ ಬಳಿಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಂಣದಲ್ಲಿ ಸೂಪರ್ ಸಂಡೇ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ ಗೆದ್ದ ಬಳಿಕ ಇಡೀ ಕ್ರೀಡಾಂಗಣದ ತುಂಬ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಕ್ರೀಡಾಳುಗಳು ಕುಣಿದು ಕುಪ್ಪಳಿಸಿದರು. ಟ್ರೋಫಿ ಎತ್ತಿ ಮುದ್ದಾಡಿದರು, ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವುಕರಾದರು. ಈ ಸಂಭ್ರಮದ ಪ್ರತಿಯೊಂದು ಕ್ಷಣವೂ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಅವುಗಳನ್ನು ಕಣ್ತುಂಬಿಕೊಳ್ಳಲು ಮುಂದೆ ನೋಡಿ…

  • ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

    ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

    ಚೆನ್ನೈ: 2024ರ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ಹೀನಾಯ ಸೋಲನುಭವಿಸಿತು. ತಂಡದ ಸೋಲಿನ ದುಃಖ ತಡೆಯಲಾರದೇ ಕಾವ್ಯ ಮಾರನ್‌ ಅವರು ಕಣ್ಣೀರಿಟ್ಟರು.

    ಚೆಪಕ್‌ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಳಪೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನದಿಂದಾಗಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ ಸೋಲೊಪ್ಪಿಕೊಂಡಿತು.‌ ಇದನ್ನೂ ಓದಿ: ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಯಾವೊಬ್ಬ ಬ್ಯಾಟರ್‌ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಇದನ್ನು ಕಂಡು ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್‌ ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದರು. ಪಂದ್ಯದ ಆರಂಭದಿಂದ ಕೊನೆ ವರೆಗೂ ಅವರ ಮುಖದಲ್ಲಿ ಬೇಸರ ಆವರಿಸಿತ್ತು.

    ಕೊನೆ ಕ್ಷಣದಲ್ಲಿ ಹೈದರಾಬಾದ್‌ ಸೋಲು ಖಚಿತವಾಗುತ್ತಿದ್ದಂತೆ ಕಾವ್ಯ ಮಾರನ್‌ ಅವರ ಮನದಲ್ಲಿದ್ದ ದುಃಖದ ಕಟ್ಟೆಯೊಡೆಯಿತು. ಎಷ್ಟೇ ಪ್ರಯತ್ನಿಸಿದರೂ ಅಳು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ಹರಿಯಿತು. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಂಡ ಸೋತರೂ ರನ್ನರ್‌ ಅಪ್‌ ವರೆಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಚಪ್ಪಾಳೆ ತಟ್ಟುವ ಮೂಲಕ ಆಟಗಾರರನ್ನು ಅಭಿನಂದಿಸಿದರು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

    2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಎಸ್‌ಆರ್‌ಹೆಚ್‌ ವಿರುದ್ಧ ಅದ್ಧೂರಿ ಜಯ ಸಾಧಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇನ್ನೂ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ. ಇದನ್ನೂ ಓದಿ: ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

  • ಅಂದು ಕ್ಯಾಪ್ಟನ್, ಇಂದು ಮೆಂಟರ್‌ ಆಗಿ ಟ್ರೋಫಿ‌ ಗೆದ್ದುಕೊಟ್ಟ ಗಂಭೀರ್‌; ಹಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡ ಬಾದ್‌ ಷಾ

    ಅಂದು ಕ್ಯಾಪ್ಟನ್, ಇಂದು ಮೆಂಟರ್‌ ಆಗಿ ಟ್ರೋಫಿ‌ ಗೆದ್ದುಕೊಟ್ಟ ಗಂಭೀರ್‌; ಹಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡ ಬಾದ್‌ ಷಾ

    ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡವು ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆದ್ರೆ ಕೆಕೆಆರ್‌ ಗೆಲುವಿನ ಹಿಂದೆ ಟೂರ್ನಿಯುದ್ಧಕ್ಕೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರ ಪಾತ್ರ ಅಷ್ಟೇ ಪ್ರಮುಖವಾಗಿದೆ.

    ಹೌದು. ಮೊದಲಿನಿಂದಲೂ ಕೆಕೆಆರ್‌ ತಂಡದೊಂದಿಗೆ (KKR Team) ಅವಿನಾಭಾವ ಸಂಬಂಧ ಹೊಂದಿರುವ ಗೌತಮ್‌ ಗಂಭೀರ್‌ 2022, 2023ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. 2024ರಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿದ ಗಂಭೀರ್‌ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್‌ ತಂಡದ ನಾಯಕನಾಗಿ ಮತ್ತು ಕೋಚ್‌ ಆಗಿ ಕೆಕೆಆರ್‌ ತಂಡಕ್ಕೆ ಮೂರು ಟ್ರೋಫಿ ಗೆದ್ದುಕೊಟ್ಟಿರುವುದು ಮತ್ತೊಂದು ವಿಶೇಷ.

    2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ತಮ್ಮ ನಾಯಕತ್ವದಲ್ಲಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದರು. ಇದೀಗ 10 ವರ್ಷಗಳ ಬಳಿಕ ಕೋಚ್‌ ಆಗಿ ತಂಡವನ್ನು ಮುನ್ನಡೆಸಿದ ಗಂಭೀರ್‌ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದಾರೆ. ಇದನ್ನೂ ಓದಿ: ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಹಣೆಗೆ ಮುತ್ತಿಟ್ಟ ಶಾರುಖ್‌:
    ಕೆಕೆಆರ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಫ್ರಾಂಚೈಸಿ ಮಾಲೀಕರೂ ಆದ ನಟ ಶಾರುಖ್ ಖಾನ್, ಕೆಕೆಆರ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಅವರ ಹಣೆಗೆ ಮುತ್ತಿಟ್ಟು ಅಭಿನಂದನೆ ಸಲ್ಲಿಸಿದ್ದಾರೆ. ಕೆಕೆಆರ್‌ ತಂಡ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ಧುಮುಕಿದ ಬಾದ್‌ ಶಾ, ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಬಳಿಕ ತಂಡದ ಪ್ರತಿಯೊಬ್ಬ ಆಟಗಾರರಿಗೂ ಪ್ರೀತಿಯ ಅಪ್ಪುಗೆ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮತ್ತೆ ತವರಿಗೆ ಮರಳಿ ಚಾಂಪಿಯನ್‌ ಕಿರೀಟ ಗೆದ್ದುಕೊಟ್ಟ ಗೌತಮ್‌ ಗಂಭೀರ್‌ ಅವರ ಗಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡಿದ್ದಾರೆ.

    ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಸಾಧನೆ:
    ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಅವರು ತಮ್ಮದೇ ವಿಶೇಷ ಸಾಧನೆ ಮಾಡಿದ್ದಾರೆ. ತಂಡವೊಂದರ ನಾಯಕನಾಗಿ 2 ಬಾರಿ ಹಾಗೂ ತಂಡವೊಂದರ ಕೋಚ್‌ ಆಗಿ 1 ಬಾರಿ ಐಪಿಎಲ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ನಾಯಕನಾಗಿ 3 ಬಾರಿ ಪ್ಲೇ ಆಫ್‌ ವರೆಗೆ ತಂಡವನ್ನು ಮುನ್ನಡೆಸಿದ್ದರೆ, ಕೋಚ್‌ ಆಗಿಯೂ ಮೂರು ಬಾರಿ ತಂಡವೊಂದನ್ನು ಮುನ್ನಡೆಸಿದ ಕೀರ್ತಿ ಇವರ ಹೆಸರಿಗಿದೆ.

    2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಗೌತಮ್‌ ಗಂಭೀರ್‌ ಅವರ ನೇತೃತ್ವದಲ್ಲಿ ಮೊದಲ ಎರಡೂ ಆವೃತ್ತಿಗಳಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. ಇದನ್ನೂ ಓದಿ:  IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌! 

  • ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್‌ (IPL 2024 Champions) ಪಟ್ಟ ಮುಡಿಗೇರಿಸಿಕೊಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee )ಅಭಿನಂದನೆ ಸಲ್ಲಿಸಿದ್ದಾರೆ.

    ಕೆಕೆಆರ್‌ ತಂಡ ಗೆಲುವು ಸಾಧಿಸುತ್ತಿದ್ದಂತೆ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್‌ ಖಾತೆ ಮೂಲಕ ವಿಜೇತ ತಂಡಕ್ಕೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ. ಐಪಿಎಲ್‌ನ ಈ ಋತುವಿನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದಕ್ಕಾಗಿ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಫ್ರಾಂಚೈಸಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಇಂತಹ ಮೋಡಿಮಾಡುವ ಗೆಲುವು ಸಿಗಲೆಂದು ಹಾರೈಸುತ್ತೇನೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಶುಭ ಹಾರೈಸಿದ್ದಾರೆ.

    10 ವರ್ಷಗಳ ಬಳಿಕ ಐಪಿಎಲ್‌ ಕಿರೀಟ:
    17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ (Gautam Gambhir) ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ.

    ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಲ್ಪ ಮೊತ್ತ ಗುರಿ ಪಡೆದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲೇ 114 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

  • ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

    ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

    ಚೆನ್ನೈ: ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಕೇವಲ 113 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಗೆಲುವಿಗೆ 114 ರನ್‌ಗಳ ಗುರಿ ನೀಡಿದೆ.

    ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಫೀಲ್ಡಿಂಗ್ ‌ಮಾಡುವ ಅವಕಾಶವನ್ನು ಕೆಕೆಆರ್‌ಗೆ ಬಿಟ್ಟುಕೊಟ್ಟಿತ್ತು.

    ಕ್ವಾಲಿಫೈಯರ್‌ 1ನಲ್ಲಿ ಕೋಲ್ಕತ್ತಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಹೈದರಾಬಾದ್‌ ತಂಡವಿಂದು ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದ್ರೆ ಮೊದಲ ಓವರ್‌ನಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

    ಸ್ಫೋಟಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) 2 ರನ್‌ಗಳಿಗೆ ಔಟಾದರೆ ಟ್ರಾವಿಸ್‌ ಹೆಡ್‌ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ರಾಹುಲ್‌ ತ್ರಿಪಾಠಿ, ಏಡನ್‌ ಮಾರ್ಕ್ರಮ್‌, ನಿತೀಶ್‌ ಕುಮಾರ್‌ ಸೇರಿದಂತೆ ಇತರ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು.

    ಅಭಿಷೇಕ್‌ ಕೇವಲ 2 ರನ್‌ ಗಳಿಸಿದ್ರೆ, ತ್ರಿಪಾಠಿ 9 ರನ್‌, ಮಾರ್ಕ್ರಮ್‌ 20 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 13 ರನ್‌, ಹೆನ್ರಿಚ್‌ ಕ್ಲಾಸೆನ್‌ 16 ರನ್‌, ಶಹಬಾಜ್‌ ಅಹ್ಮದ್‌ 8 ರನ್‌, ಅಬ್ದುಲ್‌ ಸಮದ್‌, ಜಯದೇವ್‌ ಉನದ್ಕಟ್‌ ತಲಾ 4 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರೆ ಪ್ಯಾಟ್‌ ಕಮ್ಮಿನ್ಸ್‌ (Pat Cummins) 19 ಎಸೆತಗಳಲ್ಲಿ 24 ರನ್‌ಗಳಿಸಿ ಔಟಾದರು. ಅಂತಿಮವಾಗಿ ಹೈದರಾಬಾದ್‌ ತಂಡ 113 ರನ್‌ಗಳಿಗೆ ಆಲೌಟ್‌ ಆಯಿತು.

    ಕೆಕೆಆರ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಂಡ್ರೆ ರಸ್ಸೆಲ್‌ 3 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಹರ್ಷಿತ್‌ ರಾಣಾ, ತಲಾ 2 ವಿಕೆಟ್‌, ವರುಣ್‌ ಚಕ್ರವರ್ತಿ, ವೈಭವ್‌ ಅರೋರಾ, ಸುನೀಲ್‌ ನರೇನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • IPL 2024 Final: ಟಾಸ್‌ ಗೆದ್ದ ಸನ್‌ ರೈಸರ್ಸ್‌ ಬ್ಯಾಟಿಂಗ್‌ ಆಯ್ಕೆ!

    IPL 2024 Final: ಟಾಸ್‌ ಗೆದ್ದ ಸನ್‌ ರೈಸರ್ಸ್‌ ಬ್ಯಾಟಿಂಗ್‌ ಆಯ್ಕೆ!

    ಚೆನೈ: 2024ರ ಐಪಿಎಲ್‌ ಆವೃತ್ತಿಯು ಮುಕ್ತಾಯ ಹಂತಕ್ಕೆ ಬಂದಿದೆ. ಇಲ್ಲಿನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ವಿರುದ್ಧ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ.

    2016ರಲ್ಲಿ ಡೇವಿಡ್‌ ವಾರ್ನರ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ 3ನೇ ಬಾರಿಗೆ ಐಪಿಎಲ್‌ ಫೈನಲ್‌ (IPL 2024 Final) ಪ್ರವೇಶಿಸಿದೆ. ಇನ್ನೂ 2012 ಮತ್ತು 2014ರ ಐಪಿಎಲ್‌ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 4ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಇಂದಿನ ಗೆಲುವು ಯಾರ ಕೈ ಹಿಡಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಉಭಯ ತಂಡಗಳ ಪ್ಲೇಯಿಂಗ್ XI:
    ಕೋಲ್ಕತಾ ನೈಟ್‌ ರೈಡರ್ಸ್‌:
    ಸುನೀಲ್‌ ನರೇನ್‌, ರೆಹಮಾನುಲ್ಲಾ ಗುರ್ಬಾಝ್ (ವಿಕೆಟ್‌ ಕೀಪರ್‌), ವೆಂಕಟೇಶ್‌ ಅಯ್ಯರ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ರಮಣ್‌ದೀಪ್ ಸಿಂಗ್‌, ಮಿಚೆಲ್ ಸ್ಟಾರ್ಕ್‌, ವೈಭವ್‌ ಅರೋರಾ, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ

    ಸನ್‌ರೈಸರ್ಸ್‌ ಹೈದರಾಬಾದ್‌:
    ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ರಾಹುಲ್‌ ತ್ರಿಪಾಠಿ, ಏಡನ್‌ ಮಾರ್ಕ್ರಮ್‌. ನಿತೀಶ್‌ ಕುಮಾರ್‌ ರೆಡ್ಡಿ, ಹೆನ್ರಿಕ್‌ ಕ್ಲಾಸೆನ್‌ (ವಿಕೆಟ್‌ ಕೀಪರ್‌), ಶಹಬಾಜ್‌ ಅಹ್ಮದ್‌, ಪ್ಯಾಟ್‌ ಕಮ್ಮಿನ್ಸ್‌ (ನಾಯಕ), ಭುವನೇಶ್ವರ್‌ ಕುಮಾರ್‌, ಜಯದೇವ್‌ ಉನದ್ಕಟ್‌, ಟಿ ನಟರಾಜನ್.